ಅರುಣ್ ಕುಮಾರ್, ಶಿರೂರು
ಜವಾಬ್ದಾರಿಯುತ ಅಧಿಕಾರಿಯ ಆಸಕ್ತಿ, ಇಲಾಖೆಯ ಅಭಿವದ್ದಿಯ ಚಿಂತನೆಗಳಿದ್ದರೆ ಸರಕಾರಿ ವ್ಯವಸ್ಥೆ ಯಲ್ಲಿ ಸಾರ್ವಜನಿಕ ಪ್ರಶಂಸನೀಯ ಕಾರ್ಯಗಳು ಸಾಕಾರ ಗೊಳ್ಳುತ್ತವೆ ಎನ್ನುವುದು ವಾಸ್ತವ ಸತ್ಯ.
ಈ ನೆಲೆಯಲ್ಲಿ ಬೈಂದೂರು ವಲಯ ಅರಣ್ಯಾಧಿಕಾರಿ ಮುತುವರ್ಜಿಯಲ್ಲಿ ಇಲಾಖೆಯಿಂದ ನಿರ್ಲಕ್ಷ್ಯಕೊಳಗಾಗಿದ್ದ ಬೈಂದೂರಿನ ಕ್ಷಿತಿಜ ನೇಸರ ಧಾಮ ಹೊಸ ವಿನ್ಯಾಸಗಳಿಂದ ಕಂಗೊಳಿಸುತ್ತಿರುವುದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಹಾಗೂ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಕುಂದಾಪುರ ತಾಲೂಕಿನ ಬೈಂದೂರು ವತ್ತಿನೆಣೆ ಗುಡ್ಡದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಒಂದೆರಡು ಕಿ.ಮೀ ಪಶ್ಚಿಮಕ್ಕೆ ಸಾಗಿದಾಗ ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿ ರುವ ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುವ ಕ್ಷಿತಿಜ ನೇಸರ ಧಾಮ ಸಿಗುತ್ತದೆ.
ಎತ್ತರದ ಗುಡ್ಡ, ದಕ್ಷಿಣದಲ್ಲಿ ನದಿ ಸಾಗರ ಸಂಗಮದ ವಿಹಂಗಮ ನೋಟ, ಕಣ್ಣಳತೆಯ ದೂರದವರೆಗೂ ಕಾಣ ಸಿಗುವ ಸಮುದ್ರದ ಅಗಾಧ ಜಲರಾಶಿ, ಕೃಷಿ ಭೂಮಿ ಒಂದು ಕ್ಷಣ ಕನಸಿನ ಲೋಕದಲ್ಲಿ ತೇಲಿಬಿಡುವಂತೆ ಮಾಡುತ್ತದೆ. ಇಂತಹ ಸುಂದರ ಸ್ಥಳವನ್ನು ಗುರುತಿಸಿದ ಅರಣ್ಯ ಇಲಾಖೆಯ ಅಂದಿನ ಅಧಿಕಾರಿಗಳು 1996ರಲ್ಲಿ ಕ್ಷಿತಿಜ ನೇಸರಧಾಮ ಸ್ಥಾಪಿಸಿ ಸುಂದರ ವಿನ್ಯಾಸದ ಕಾಟೇಜ್‌ಗಳನ್ನು ನಿರ್ಮಿಸಿದ್ದರು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.ಕಾಲಕ್ರಮೇಣ ಇಲಾಖೆಯ ನಿರಾಸಕ್ತಿ, ಮೂಲ ಸೌಕರ್ಯದ ಕೊರತೆಯಿಂದ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿತ್ತು. ಈ ಬಗ್ಗೆ ಪತ್ರಿಕೆ ಹಲವು ಬಾರಿ ಬೆಳಕು ಚೆಲ್ಲಿತ್ತು.

ಕಳೆದೆರಡು ವರ್ಷಗಳಿಂದ ಬೈಂದೂರು ವಲಯ ಅರಣ್ಯಾಧಿಕಾರಿ ಬ್ರಿಜೇಶ ವಿನಯ ಕುಮಾರ ಇಂತಹ ನೈಸರ್ಗಿಕ ಪ್ರವಾಸಿ ತಾಣವನ್ನು ಅಭಿವೃಧಿªಪಡಿಸುವ ಚಿಂತನೆಯಿಂದ ಹೊಸ ಯೋಜನೆ ರೂಪಿಸಿ ಇಲಾಖೆಯ ಮೇಲಾಧಿಕಾರಿಗಳಿಗೆ ಮನದಟ್ಟುಮಾಡಿರುವ ಜೊತೆಗೆ ವತ್ತಿನೆಣೆ ಪರಿಸರದಲ್ಲಿ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ನಡೆಯುವ ಅನೈತಿಕ ಚಟುವಟಿಕೆಗೆ ಕಟ್ಟುನಿಟ್ಟಿನ ಕ್ರಮಕೈಗೊಂಡರು.
ಪ್ರವಾಸಿಗರಿಂದ ದೂರಾಗುತ್ತಿರುವ ಕ್ಷಿತಿಜ ನೇಸರಧಾಮದ ಹೊಸಸುಧಾರಣೆಗಳನ್ನು ತರುವ ಜತೆಗೆ ಜಿಲ್ಲೆಯ ಆಕರ್ಷಣೆಯ ಕೇಂದ್ರವನ್ನಾಗಿಸುವ ಚಿಂತನೆಯಲ್ಲಿ ಯಶಸ್ಸು ಕಂಡಿದ್ದಾರೆ. ಪ್ರಸ್ತುತ ವಿಶೇಷ ವಿನ್ಯಾಸದ ಸ್ವಾಗತಗೋಪುರ,ಸುತ್ತ ತಡೆ ಬೇಲಿ, ಅಂದಾಜು 30 ಲಕ್ಷ ರೂ. ವೆಚ್ಚದ ಐದು ಹೊಸ ವಸತಿ ಗ್ರಹ,ವಿದ್ಯುತ್ ಸೌಲಭ್ಯ, ಸಂಪೂರ್ಣ ಸೌರ ವಿದ್ಯುತ್ ಅಳವಡಿಕೆ, ಕುಡಿಯುವ ನೀರು ಆಕರ್ಷಕ ವಾಕಿಂಗ್ ಪಾಥ್, ಪಾರ್ಕಿಂಗ್, ಹೂಗಿಡಗಳು, ಪೀಠೊಪಕರಣ, ಹೀಗೆ ಹತ್ತುಹಲವು ಬದಲಾವಣೆಗಳೊಂದಿಗೆ ಸುಮಾರು 45 ಲಕ್ಷಕ್ಕೂ ಅಧಿಕ ವೆಚ್ಚದ ಯೋಜನೆ ಅಂತಿಮ ಹಂತದಲ್ಲಿದ್ದು ಸದ್ಯದಲ್ಲಿಯೇ ಉದ್ಘಾಟನೆಗೊಳ್ಳಲಿದೆ.

ನೈಸರ್ಗಿಕ ಸೌಂದರ್ಯದ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಅಗ್ರ
ಸ್ಥಾನದಲ್ಲಿ ಗುರುತಿಸಿಕೊಂಡಿರುವ ಈ ಪ್ರದೇಶದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೇಲ ಧಿಕಾರಿಗಳ ಮಾರ್ಗದರ್ಶನದಂತೆ ಅಭಿವೃದ್ಧಿಪಡಿಸಿದ್ದು ಇದರಿಂದಾಗಿ ಬೈಂದೂರು ಪ್ರವಾಸೋದ್ಯಮದಲ್ಲಿ ಆಕರ್ಷಕ ಕೇಂದ್ರವಾಗಲಿದೆ.ಗ್ರಾಮ ಅರಣ್ಯ ಸಮಿತಿ ನಿರ್ವಹಣೆ ನೋಡಿಕೊಳ್ಳುತ್ತದೆ ಪ್ರವಾಸಿಗರನ್ನು ಸೆಳೆಯುವ ನೆಲೆಯಲ್ಲಿ ಸೂಕ್ತ ಅನುಕೂಲತೆಗಳನ್ನು ಇಲಾಖೆ ಮಾಡಿಕೊಡುತ್ತಿದೆ ಎನ್ನುತ್ತಾರೆ ಬ್ರಿಜೇಶ್ ವಿನಯ ಕುಮಾರ್, ವಲಯ ಅರಣ್ಯಾಧಿಕಾರಿ ಬೈಂದೂರು.