ಉದಯ ಇಟಗಿ : ಲೇಖಕರು ದಕ್ಷಿಣ ಲಿಬಿಯಾದ ಘಾತ್ ಪಟ್ಟಣದ ಆರ್ಟ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರು. | Mar 12, 2011
ಎಲ್ಲವೂ ಸರಿಯಿರುವಾಗ ಲಿಬಿಯಾದಲ್ಲಿ ಹೀಗೆ ಇದ್ದಕ್ಕಿದ್ದಂತೆ ಧಿಗ್ಗೆಂದು ಹೊತ್ತಿಕೊಂಡ ಕ್ರಾಂತಿಗೆ ಕಾರಣವಾದರೂ ಏನು?
ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವುದಕ್ಕೆ ಎಂಟು ದಿನ ಮುನ್ನವೇ ನಾನು ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿ¨ªೆ. ಅಸಲಿಗೆ ನಾನು ಲಿಬಿಯಾ ಬಿಡುವ ಮುನ್ನ ಅಲ್ಲಿ ಹೀಗೊಂದು ಕ್ರಾಂತಿಯಾಗಬಹುದೆಂದು ಕನಸಿನಲ್ಲೂ ಸಹ ಯೋಚಿಸಿರಲಿಲ್ಲ. ಬಹುಶಃ ಲಿಬಿಯನ್ನರು ಕೂಡ ಅಂದು ಕೊಂಡಿದ್ದರೋ ಇಲ್ಲವೋ. ಏಕೆಂದರೆ ಅಧ್ಯಕ್ಷ ಮುವಮ್ಮರ್ ಗಡ್ಡಾಫಿ ಅಷ್ಟರ ಮಟ್ಟಿಗೆ ಅವರನ್ನು ನೆಮ್ಮದಿಯಿಂದ ಇಟ್ಟಿದ್ದ ಎಂದು ನನ್ನೊಂದಿಗೆ ಕೆಲಸ ಮಾಡುವ ಎಷ್ಟೋ ಲಿಬಿಯನ್ನರು ಹೇಳಿದ್ದರು. ಆದರೆ ಲಿಬಿಯಾದಲ್ಲೂ ದಂಗೆ ಶುರುವಾಗಿದೆ ಎಂದು ಪತ್ರಿಕೆಗಳಲ್ಲಿ ಓದಿದಾಗ, ಬಹುಶಃ ಇದು ಪಕ್ಕದ ರಾಷ್ಟ್ರ ಈಜಿಪ್ಟಿನಲ್ಲಿ ಆಗಷ್ಟೇ ಉಂಟಾದ ಬದಲಾವಣೆಯ ಪರಿಣಾಮವಿರಬೇಕು, ಎರಡು ದಿನ ಕಳೆದ ಮೇಲೆ ಎಲ್ಲ ತಣ್ಣಗಾಗುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಇಂಥವರನ್ನು ಹೇಗೆ ಬಗ್ಗು ಬಡಿಯಬೇಕೆಂದು ಗಡ್ಡಾಫಿಗೆ ಚೆನ್ನಾಗಿ ಗೊತ್ತು ಎಂದುಕೊಂಡಿ¨ªೆ. ಆದರೆ ನೋಡನೋಡುತ್ತಿದ್ದಂತೆಯೇ ಲಿಬಿಯಾದ ಉತ್ತರ ಭಾಗ ಹೊತ್ತಿ ಉರಿಯತೊಡಗಿತು. ಅಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಭಾರತೀಯ ಕುಟುಂಬಗಳು ತಮ್ಮವರು ಹೇಗಿ¨ªಾರೋ ಎಂದು ಇಲ್ಲಿ ಪರಿತಪಿಸುತ್ತಿರಬೇಕಾದರೆ ನನ್ನ ಮನೆಯವರು "ಸದ್ಯ, ನೀನು ಇÇÉೇ ಇದ್ದೀಯಲ್ಲ' ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ದಿನ ಕಳೆದಂತೆ ಆಶ್ಚರ್ಯಕರ ರೀತಿಯಲ್ಲಿ ಅಲ್ಲಿನ ಬೆಳವಣಿಗೆಗಳು ತೀವ್ರತೆಯ ಸ್ವರೂಪ ಪಡೆದುಕೊಂಡು ಲಿಬಿಯಾಕ್ಕೆ ವಿಮಾನ ಹಾರಾಟವೂ ಸ್ಥಗಿತಗೊಂಡಿದ್ದರಿಂದ ನಾನು ಇÇÉೇ ಉಳಿಯಬೇಕಾಯಿತು.
ಈಗ್ಗೆ ನಾಲ್ಕು ವರ್ಷಗಳ ಹಿಂದೆ ನಾನು ಲಿಬಿಯಾಕ್ಕೆ ಬರುವ ಮುನ್ನ "ಅದು ನಿರಂಕುಶವಾದಿ ಮುವಮ್ಮರ್ ಗಡ್ಡಾಫಿಯ ಹಿಡಿತದಲ್ಲಿರುವ ದೇಶ, ಅಲ್ಲಿನ ಸ್ಥಿತಿಗತಿಗಳು ಅಷ್ಟೇನೂ ಚೆನ್ನಾಗಿರಲಿಕ್ಕಿಲ್ಲ. ಅಲ್ಲಿಗ್ಯಾಕ್ರೀ ಹೋಗ್ತೀರಿ?' ಎಂದು ಬಹಳಷ್ಟು ಜನ ಉಪದೇಶ ನೀಡಿದ್ದರು. ಮೇಲಾಗಿ ಅವನೊಬ್ಬ ವಿಕ್ಷಿಪ್ತ ಮನಸ್ಸಿನವ, ಮಹಾನ್ ತಂಟೆಕೋರ, ತರ್ಲೆ, ಹೆಣ್ಣುಬಾಕ ಎಂದೆÇÉಾ ಕೇಳಿ ತಿಳಿದುಕೊಂಡಿ¨ªೆ. ಅಷ್ಟೇ ಅಲ್ಲ, ಅವನು ವಿಶ್ವದ ಬಲಾಡ್ಯ ರಾಷ್ಟ್ರವಾದ ಅಮೆರಿಕನ್ನರಿಗೇ ಸಡ್ಡು ಹೊಡೆದು ನಿಲ್ಲುವಂಥವನು ಎಂದು ಕೂಡ ತಿಳಿದು ಕೊಂಡಿ¨ªೆ. ಆದರೆ ಲಿಬಿಯಾಗೆ ಬಂದ ಮೇಲೆ ತಿಳಿಯಿತು; ಈ ಮೇಲಿನ ಸಂಗತಿಗಳು ಬಹಳಷ್ಟು ಉತೆøàಕ್ಷೆಯಿಂದ ಕೂಡಿದ್ದವೆಂದು. ಅವನು ಅಮೆರಿ ಕನ್ನರ ವಿರೋಧ ಕಟ್ಟಿಕೊಂಡಿದ್ದು ನಿಜ ಹಾಗೂ ಹಾಗೆ ವಿರೋಧ ಕಟ್ಟಿಕೊಂಡು ಎಷ್ಟೆಲ್ಲ ಪಾಡು ಪಡಬೇಕಾಯಿತು ಎನ್ನುವುದೂ ಅಷ್ಟೇ ನಿಜ. ಅವನು ಅದೆಂಥ ಅಮೆರಿಕ ವಿರೋಧಿಯಾಗಿದ್ದನೆಂದರೆ ಅವರನ್ನು ಮಾತ್ರವಲ್ಲದೆ ಅವರ ಮಾತೃಭಾಷೆಯಾದ ಇಂಗ್ಲಿಷನ್ನು ಕೂಡ ದ್ವೇಷಿಸುತ್ತಿದ್ದನಂತೆ. ಹೀಗಾಗಿ ಹಠಾತ್ತಾಗಿ ಇಂಗ್ಲಿಷ್ ಭಾಷೆಯನ್ನೇ ತನ್ನ ದೇಶದ ಜನ ಕಲಿಯಕೂಡದೆಂದು ತಾಕೀತು ಮಾಡಿ, ಅದರ ಮೇಲೆ ಹತ್ತು ವರ್ಷಗಳ ಕಾಲ ನಿಷೇಧ ಹೇರುವುದರ ಮೂಲಕ ಒಂದು ತಲೆಮಾರಿನ ಜನಾಂಗವನ್ನು ಇಂಗ್ಲಿಷ್ ಭಾಷೆಯ ಕಲಿಕೆ ಯಿಂದ ವಂಚಿತಗೊಳಿಸಿದನಂತೆ. ಆದರೆ ಮುಂದೆ ಲಿಬಿಯಾ ಮತ್ತು ಅಮೆರಿಕ ಸಂಬಂಧ ಸರಿಹೋದ ಮೇಲೆ ಇಂಗ್ಲಿಷ್ ಭಾಷೆಯ ಮಹತ್ವವನ್ನು ಅರಿತು ಮತ್ತೆ ಅದನ್ನು ಶಾಲಾ ಕಾಲೇಜುಗಳಲ್ಲಿ ಆರಂಭಿಸಿದನಂತೆ. ಆದರೂ ಅವನು ಈಗಲೂ ಅಮೆರಿಕನ್ನರ ದ್ವೇಷಿ! ಅವನು ಮಾತ್ರವಲ್ಲ, ಅಲ್ಲಿಯ ಬಹಳಷ್ಟು ಜನ ಅಮೆರಿಕನ್ನರ ದ್ವೇಷಿಗಳೇ! ಅವನ ಪ್ರಕಾರ ಅಮೆರಿಕದವರೆಂದರೆ ಸಂಚು ಹೂಡುವವರು, ಕುತಂತ್ರಿಗಳೆಂದೇ ಲೆಕ್ಕಾಚಾರ. ಈಗಲೂ ಸಹ ಈ ದಂಗೆಯ ಹಿಂದೆ ತನ್ನ ದೇಶದ ತೈಲ ಸಂಪನ್ಮೂಲಗಳನ್ನು ದೋಚಲು ಅಮೆರಿಕನ್ನರು ನಡೆಸಿದ ಸಂಚು ಇರಬಹುದೇ ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಿ¨ªಾನೆ.
*
*
ಅಷ್ಟೆಲ್ಲ ಜನ ಲಿಬಿಯಾಕ್ಕೆ ಹೋಗಬೇಡವೆಂದು ಕೇಳಿಕೊಂಡರೂ ನಾನು ಲೆಕ್ಕಿಸದೆ ಏನಾದರಾಗಲಿ, ಒಂದು ಬಾರಿ ಈ ನಿರಂಕುಶ ಪ್ರಭುತ್ವದ ಒಡೆತನದಲ್ಲಿರುವ ದೇಶದಲ್ಲಿ ಜೀವನ ಹೇಗಿರುತ್ತದೆ ನೋಡಿಯೇ ಬಿಡೊಣ ಎಂದುಕೊಂಡು ಒಂದು ತರಹದ ಭಂಡ ಧೈರ್ಯದ ಮೇಲೆ ಲಿಬಿಯಾಕ್ಕೆ ಹೊರಟು ಬಂದಿ¨ªೆ. ಆದರೆ ನಾನಂದುಕೊಂಡಿದ್ದಕ್ಕಿಂತ ಅಲ್ಲಿಯ ಜೀವನ ವಿಭಿನ್ನವಾಗಿತ್ತು. ನಾನು ಮೊತ್ತಮೊದಲ ಬಾರಿಗೆ ರಾಜಧಾನಿ ಟ್ರಿಪೋಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಥಟ್ಟನೆ ನನ್ನ ಗಮನ ಸೆಳೆದಿದ್ದು ಅಲ್ಲಿಯೇ ನೇತುಹಾಕಿದ್ದ ಬೋರ್ಡೊಂದರ ಮೇಲೆ ಬರೆದ ಸಾಲು. ಅದು ಅಲ್ಲಿನ ಕೆಳದರ್ಜೆಯ ಕೆಲಸಗಾರರ ಕುರಿತಾಗಿ ಬರೆದಿತ್ತು. ಅದು ಹೀಗಿತ್ತು: Do not call them porters, they are your fellow workers.ಈ ಸಾಲನ್ನು ಓದಿ ಒಬ್ಬ ಸರ್ವಾಧಿಕಾರಿಯ ನಾಡಿನಲ್ಲಿ ಇಂಥದೊಂದು ಸಮಾನತೆಯ ಸಿದ್ಧಾಂತ ಜಾರಿಯಲ್ಲಿರಲು ಸಾಧ್ಯವೆ? ಎಂದು ನನ್ನಷ್ಟಕ್ಕೆ ನನಗೇ ಆಶ್ಚರ್ಯ ಮತ್ತು ಅನುಮಾನಗಳೆರಡೂ ಒಟ್ಟಿಗೆ ಮೂಡಿದ್ದವು. ನಾನು ಯಾವಾಗ ಲಿಬಿಯನ್ನರೊಟ್ಟಿಗೆ ಕೆಲಸ ಮಾಡತೊಡಗಿದೆನೋ ಆಗ ಅಲ್ಲಿ ಎಲ್ಲರೂ ಸಮಾನರೇ ಎಂಬ ಸತ್ಯದ ಅರಿವಾಗಿತ್ತು. ಒಬ್ಬ ಅಟೆಂಡರ್‌ನಿಂದ ಹಿಡಿದು ಕಾಲೇಜಿನ ಡೀನ್‌ವರೆಗೂ ಎಲ್ಲರೂ ಸರಿಸಮಾನರೇ. ಅಟೆಂಡರ್‌ನಾದವನು ಡೀನ್ ಕುರ್ಚಿಯ ಮೇಲೆ ಕುಳಿತುಕೊಳ್ಳಬಹುದು. ಆತನ ಅಪ್ಪಣೆಯಿಲ್ಲದೆ ಆತನ ಕಂಪ್ಯೂಟರ್‌ನ್ನು ಬಳಸಬಹುದು. ಹಾಗೆಯೇ ಡೀನ್ ಆದವನು ಕುಳಿತಲ್ಲಿಂದಲೇ ಎಲ್ಲ ಕೆಲಸ ತೆಗೆಯಬೇಕು ಎಂದೇನೂ ನಿಯಮವಿಲ್ಲ. ಅಗತ್ಯ ಬಿದ್ದರೆ ಅವನು ಒಬ್ಬ ಗುಮಾಸ್ತನವರೆಗೂ ನಡೆದುಕೊಂಡು ಬಂದು ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ. ಅಸಲಿಗೆ ಇಂಥದೊಂದು ವ್ಯವಸ್ಥೆ ಸೋಕಾಲ್ಡ್ ಪ್ರಜಾರಾಜ್ಯ ಎನಿಸಿಕೊಂಡ ನಮ್ಮ ದೇಶದಲ್ಲಿ ಇರಬೇಕು (ಇಲ್ಲ ಎನ್ನುವುದು ಬೇರೆ ಮಾತು). ಆದರೆ ಸರ್ವಾಧಿಕಾರಿಯ ನಾಡಿನಲ್ಲಿದ್ದುದನ್ನು ಕಂಡು ಆಶ್ಚರ್ಯಪಟ್ಟಿ¨ªೆ. ಅಷ್ಟೇ ಏಕೆ, ನಾನು ಕೆಲಸ ಮಾಡುವ ಜಾಗ ಘಾತ್ ಪ್ರಾಂತ್ಯದ ಕಾರ್ಮಿಕ ಮಂತ್ರಿಯೊಬ್ಬರು ನನ್ನ ಸಹೋದ್ಯೋಗಿ. ಅವರು ತಮ್ಮದೇ ಸ್ವಂತ ಕಾರಿನಲ್ಲಿ, ಯಾವುದೇ ಸೆಕ್ಯೂರಿಟಿ, ಎಸ್ಕಾರ್ಟ್ ಇಲ್ಲದೆ ಕಾಲೇಜಿಗೆ ಬಂದು ಪಾಠ ಮಾಡಿಹೋಗುತ್ತಿದ್ದರು. ಅವರು ಬ್ಯಾಂಕಿಗೆ ಬಂದರೆ ವಿಶೇಷ ರಿಯಾಯಿತಿ ತೋರಿಸುತ್ತಿರಲಿಲ್ಲ. ಎಲ್ಲರಂತೆ ಅವರು ಕೂಡ ಸರದಿಯಲ್ಲಿ ಕಾಯಬೇಕಿತ್ತು. ಬಹುಶಃ ಈ ಹಿನ್ನೆಲೆಯಲ್ಲಿಯೇ ಗಡ್ಡಾಫಿ ಮೊನ್ನೆ "ನಾನು ಯಾವತ್ತೂ ನಿರಂಕುಶವಾದಿಯಂತೆ ನಡೆದುಕೊಂಡಿಲ್ಲ. ಇಲ್ಲಿ ಎಲ್ಲರೂ ಸರಿಸಮಾನರು. ಇದೊಂದು ಸೋಶಿಯಲಿಸ್ಟ್ ಕಂಟ್ರಿ. ನಾನು ಇಲ್ಲಿ ಇರುವುದು ಕೇವಲ ನೆಪ ಮಾತ್ರ. ಪ್ರಜೆಗಳೇ ಅಧಿಕಾರ ನಡೆಸುವವರು. ಅವರ ಕೈಯಲ್ಲಿಯೇ ದೇಶವನ್ನು ಇಟ್ಟಿದ್ದೇನೆ' ಎಂದು ಒತ್ತಿ ಒತ್ತಿ ಹೇಳಿದ್ದು ನಿಜವೆನಿಸುತ್ತದೆ. ಆದರೆ ಅದರ ಮರುಕ್ಷಣವೇ ಇಷ್ಟೆಲ್ಲ ಹೇಳುವಾತ ತನ್ನ ಅಧಿಕಾರ ಗದ್ದುಗೆಯನ್ನು ಏಕೆ ಅಷ್ಟು ಸುಲಭವಾಗಿ ಬೇರೆಯವರಿಗೆ ಬಿಟ್ಟುಕೊಡಲಾರ ಎಂಬ ಅನುಮಾನವೂ ಮೂಡುತ್ತದೆ. ಅಂದರೆ ಈತ ಇತ್ತ ಸಂಪೂರ್ಣ ಸಮಾಜವಾದಿಯೂ ಅಲ್ಲದ ಅತ್ತ ನಿರಂಕುಶವಾದಿಯೂ ಅಲ್ಲದ ಎಡಬಿಡಂಗಿಯಾಗಿ ಕಾಣುತ್ತಾನೆ.
ನೆರೆ ರಾಷ್ಟ್ರಗಳಾದ ಈಜಿಪ್ಟ್ ಮತ್ತು ತುನಿಶಿಯಾಗಳಲ್ಲಿ ಜನ ದಂಗೆ ಎದ್ದಂತೆ ಇಲ್ಲಿಯೂ ದಂಗೆ ಎದ್ದಿ¨ªಾರೆ ಎಂದು ನಾವೆÇÉಾ ದೂರದಲ್ಲಿ ಕುಳಿತುಕೊಂಡು ಯೋಚಿಸುತ್ತೇವೆ. ಆದರೆ ನಾನು ಅಲ್ಲಿ ಮೂರೂವರೆ ವರ್ಷಗಳಿಂದ ಇದ್ದು ಗಮನಿಸಿದ್ದೇನೆಂದರೆ, ದಂಗೆಯೇಳುವಷ್ಟು ಕೆಟ್ಟದಾಗಿ ಲಿಬಿಯಾ ಯಾವತ್ತೂ ಈ ಎರಡು ರಾಷ್ಟ್ರಗಳಂತಿರಲಿಲ್ಲ. ಅದು ಸದಾ ಪ್ರಗತಿಯ ಮುಂಚೂಣಿಯಲ್ಲಿರಲು ಕೆಲಸ ಮಾಡುತ್ತಿತ್ತು. ಏಕೆಂದರೆ ಅಭಿವೃದ್ಧಿಯ ವಿಚಾರದಲ್ಲಿ ಗಡ್ಡಾಫಿಯದು ಎತ್ತಿದ ಕೈ. ಪ್ರತಿಯೊಂದು ಹಳ್ಳಿ ಹಳ್ಳಿಗೂ ಆಸ್ಪತ್ರೆ, ಶಾಲೆ, ಕಾಲೇಜು, ಬ್ಯಾಂಕ್, ಪೋಸ್ಟ್ ಆಫೀಸು, ಒಳ್ಳೆಯ ರಸ್ತೆ ಇನ್ನೂ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿ¨ªಾನೆ. ಅಲ್ಲಿನ ಜನಕ್ಕೆ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಿ¨ªಾನೆ. ಮಾತ್ರವಲ್ಲ, ಅಲ್ಲಿನ ಬಹುತೇಕ ಪ್ರಜೆಗಳು ಸರಕಾರಿ ಕೆಲಸದಲ್ಲಿ¨ªಾರೆ. ದುಬೈ ವಿಮಾನ ನಿಲ್ದಾಣವನ್ನು ಸರಿಗಟ್ಟುವಂತಹ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದನ್ನು ಟ್ರಿಪೋಲಿಯಲ್ಲಿ ಕಟ್ಟಿಸುತ್ತಿ¨ªಾನೆ. ಅಲ್ಲಿನ ವಿದ್ಯಾವಂತ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ದೇಶಗಳಿಗೆ ಸ್ಕಾಲರ್‌ಶಿಪ್ ಕೊಟ್ಟು ಕಳಿಸುತ್ತಿ¨ªಾನೆ. ಹಾಗೆ ಹೋಗುವವರ ಹೆಂಡತಿ ಮತ್ತು ಮಕ್ಕಳಿಗೂ ತಿಂಗಳಿಗೆ ಅಲ್ಲಿನ ಖರ್ಚು ವೆಚ್ಚಕ್ಕಾಗಿ ತಲಾ 3,000 ಡಾಲರ್ ಕೊಡುತ್ತಾನೆ. ಇತ್ತೀಚೆಗೆ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸುವುದರ ಮೂಲಕ ಹಂಚಿದ್ದಾನೆ. ಶೀಘ್ರದಲ್ಲಿಯೇ ಒಂದು ದಿನಾರಿಗೆ (ಅಂದರೆ ಭಾರತದ 36 ರೂ.ಗೆ) 6 ಲೀಟರ್‌ನಷ್ಟು ದೊರೆಯುತ್ತಿದ್ದ ಪೆಟ್ರೋಲನ್ನು 10 ಲೀಟರಿಗೆ ಹೆಚ್ಚಿಸುವವನಿದ್ದ. ಅಲ್ಲಿನ ಜನಕ್ಕೆ ಸಾಲದ ಮೇಲೆ ವಾಸಿಸಲು ಮನೆಗಳನ್ನು ಕಟ್ಟಿಸಿಕೊಡುತ್ತಿ¨ªಾನೆ. ಹಾಗೆ ನೋಡಿದರೆ, ಲಿಬಿಯನ್ನರು ಆ ಸಾಲದ ಐದೋ ಆರೋ ಕಂತುಗಳನ್ನು ಕಟ್ಟಿ ಕೈ ತೊಳೆದುಕೊಳ್ಳುತ್ತಾರೆ. ಮುಂದಿನದನ್ನು ಏಕೆ ಕಟ್ಟಲಿಲ್ಲ ಎಂದು ಕೂಡ ಆತ ಕೇಳುವುದಕ್ಕೆ ಹೋಗುವುದಿಲ್ಲ. ಇನ್ನು, ಇತರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಇರುವಂತೆ ಹೆಣ್ಣುಮಕ್ಕಳು ಹೊರಹೋಗುವಾಗ ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ಕಟ್ಟಳೆಗಳನ್ನೂ ಅವನು ವಿಧಿಸಿಲ್ಲ. ಅವರಿಗೆ ಸರಿಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿ¨ªಾನೆ. ಹಾಗೆ ನೋಡಿದರೆ ಲಿಬಿಯನ್ನರೇ ಶುದ್ಧ ಸೋಂಬೇರಿಗಳು. ಐವರಲ್ಲಿ ಒಬ್ಬ ಮಾತ್ರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೆ. ಇನ್ನುಳಿದವರು ಸದಾ ಕೆಲಸ ಕದಿಯುವವರೇ. ತಕ್ಕ ಮಟ್ಟಿಗೆ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರವಿದೆ.
ದೇಶದ ಭದ್ರತಾ ವ್ಯವಸ್ಥೆಯಲ್ಲೂ ಕೂಡ ಗಡ್ಡಾಫಿ ಅಷ್ಟೇ ಕಟ್ಟುನಿಟ್ಟು. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಬೇಕಾದರೆ ಚೆಕ್ ಪಾಯಿಂಟ್‌ಗಳಲ್ಲಿ ಪೊಲೀಸರು ಟ್ಯಾಕ್ಸಿಯಲ್ಲಿರುವವರ ಗುರುತು ಪತ್ರ ಮುಂತಾದ ವಿವರಗಳನ್ನು ಕೇಳುತ್ತಾರೆ. ಒಮ್ಮೊಮ್ಮೆ ಈ ರೀತಿಯ ವಿಪರೀತ ತಪಾಸಣೆಗೊಳಗಾಗುವುದು ಕಿರಿಕಿರಿ ಎನಿಸುತ್ತದೆ. ಮೊನ್ನೆ ಅಂದರೆ, ನವೆಂಬರ್ ತಿಂಗಳ ಕೊನೆಯ ವಾರ ದಲ್ಲಿ ನಾನಿರುವ ಸ್ಥಳ ಘಾತ್‌ನಲ್ಲಿ ಅಲ್ಜೀರಿಯಾದ ಇಬ್ಬರು ಉಗ್ರರನ್ನು ಕೊಲ್ಲ ಲಾಯಿತು. ಅವರು ಸಹರಾ ಮರುಭೂಮಿಯಲ್ಲಿ ನಡೆದುಕೊಂಡು ಬಂದು ಘಾತ್ ಮೂಲಕ ನುಸುಳಿ ದೊಡ್ಡ ಪಟ್ಟಣಗಳಾದ ಟ್ರಿಪೋಲಿ, ಬೆಂಗಾಜಿಗಳನ್ನು ಸೊ#àಟಿಸಲು ಸಂಚು ಹೂಡಿದ್ದರು. ಆದರೆ ಅದೃಷ್ಟವಶಾತ್ ಸಿಕ್ಕಿಬಿದ್ದು ಕೊಲ್ಲಲ್ಪಟ್ಟರು. ಈ ತರಹದ ಘಟನೆ ಲಿಬಿಯಾದಲ್ಲಿ ನಡೆದದ್ದು 30 ವರ್ಷಗಳ ಬಳಿಕ ಎಂದು ಅಲ್ಲಿಯ ಜನ ಮಾತಾಡಿಕೊಂಡಿದ್ದನ್ನು ಕೇಳಿದರೆ ಗಡ್ಡಾಫಿಯ ಭದ್ರತಾ ಸುವ್ಯವಸ್ಥೆಯ ಬಗ್ಗೆ ಮನದಟ್ಟಾಗುತ್ತದೆ. ಇದಾದ ಅನಂತರ ಗಡ್ಡಾಫಿ ಅಲ್ಲಿಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದ. ಹಾಗಂತ ಅಲ್ಲಿ ಯಾವುದೇ ಕ್ರೈಮ… ನಡೆಯುತ್ತಿರಲಿಲ್ಲ ಎಂದು ಹೇಳಲಾರೆ. ಸಣ್ಣಪುಟ್ಟ ಕಳ್ಳತನ, ದರೋಡೆ, ಸುಲಿಗೆಗಳು ಹೆಚ್ಚಾಗಿ ರಾಜಧಾನಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿದ್ದವು.
*
*
ಲಿಬಿಯನ್ನರು ಗಡ್ಡಾಫಿಯ ಬಗ್ಗೆ ಅತೃಪ್ತಿಯನ್ನಾಗಲಿ, ಅಸಮಾಧಾನ ವನ್ನಾಗಲಿ ವ್ಯಕ್ತಪಡಿಸಿದ್ದನ್ನು ನಾನು ಯಾವತ್ತೂ ಕೇಳಿದ್ದಿಲ್ಲ. ಬದಲಾಗಿ ಅವನನ್ನು ಹಾಡಿ ಹೊಗಳಿದವರೇ ಹೆಚ್ಚು. ಅಥವಾ ಹಾಗೆ ಹಾಡಿ ಹೊಗಳಲೇಬೇಕೆಂಬ ಅಲಿಖೀತ ನಿಯಮವೇನಾದರೂ ಜಾರಿಯಲ್ಲಿತ್ತೇ, ಗೊತ್ತಿಲ್ಲ. ನಾನಿರುವುದು ಲಿಬಿಯಾದ ದಕ್ಷಿಣ ಭಾಗದಲ್ಲಿ. ಆ ಕಡೆಯೆÇÉಾ ಗಡ್ಡಾಫಿಯ ಬೆಂಬಲಿಗರೇ ಹೆಚ್ಚು. ಅಲ್ಲಿ ಯಾವುದೇ ಗಲಾಟೆಗಳು ನಡೆಯುತ್ತಿಲ್ಲ ಎಂದು ನನ್ನ ಭಾರತೀಯ ಸಹೋದ್ಯೋಗಿಗಳು ಹೇಳಿ¨ªಾರೆ. ನಾವಂದುಕೊಂಡಂತೆ ಲಿಬಿಯಾದೆಲ್ಲೆಡೆ ಗಲಭೆಗಳು ಸಂಭವಿಸುತ್ತಿಲ್ಲ. ಬೆಂಗಾಜಿ, ಟ್ರಿಪೊಲಿ ಕಡೆ ಗಲಾಟೆ ಆಗುತ್ತಿವೆ ಎಂದು ಜನ ಮಾತನಾಡಿಕೊಳ್ಳುತ್ತಿ¨ªಾರೆ. ಅವರ ಮಾತಲ್ಲಿ ಇದ್ದ ಆತಂಕವೇನೆಂದರೆ, ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕೆಲಸಗಳು ಈಗ ಸ್ಥಗಿತಗೊಂಡಿವೆ ಎನ್ನುವುದು. ಪೆಟ್ರೋಲ್ ಶೇಖರಣೆ ಸದ್ಯಕ್ಕೆ ನಿಂತಿದೆ. ಅಂತಾರಾಷ್ಟ್ರೀಯ ತೈಲ ಕಂಪೆನಿಗಳು ಬಾಗಿಲು ಮುಚ್ಚಿವೆ. ನನ್ನ ಲಿಬಿಯನ್ ಸಹೋದ್ಯೋಗಿಗಳೊಂದಿಗೆ ಚಾಟ್ ಮಾಡುತ್ತಾ "ನೀವು ದಕ್ಷಿಣದ ಕಡೆ ಯವರು ಏಕೆ ದಂಗೆ ಎದ್ದಿಲ್ಲ?' ಎಂದು ಕೇಳಿದೆ. ಅದಕ್ಕವರು "ಸಕಲ ಸವಲತ್ತುಗಳನ್ನು ಕೊಟ್ಟವನ ವಿರುದ್ಧ ನಾವೇಕೆ ದಂಗೆ ಏಳಬೇಕು? ಹಾಗೆ ಒಂದು ವೇಳೆ ನಾವು ದಂಗೆಯೆದ್ದರೆ ಅದು ಮೂರ್ಖತನವಾಗುತ್ತದೆ, ಹರಾಮಿಕೋರತನವಾಗುತ್ತದೆ' ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿ¨ªಾರೆ. ಗಮನಿಸಬೇಕಾದ ವಿಚಾರವೆಂದರೆ, ಇಡೀ ಈಜಿಪ್ಟಿನ ಜನ ಹೋಸ್ನಿ ಮುಬಾರಕ್‌ನ ವಿರುದ್ಧ ಎದ್ದುನಿಂತಂತೆ ಇಡೀ ಲಿಬಿಯಾದ ಜನ ಗಡ್ಡಾಫಿಯ ವಿರುದ್ಧ ದಂಗೆ ಎದ್ದಿಲ್ಲ ಎನ್ನುವುದು. ಲಿಬಿಯಾ ದಲ್ಲಿ ಮುಂದೇನಾಗಬಹುದು ಎಂದು ಈಗಲೇ ಊಹಿಸುವುದು ಕಷ್ಟಸಾಧ್ಯ. ಏಕೆಂದರೆ ಗಡ್ಡಾಫಿ ಅಷ್ಟು ಸುಲಭ ವಾಗಿ ಅಧಿಕಾರವನ್ನು ಬಿಟ್ಟು ಕೊಡು ವಂತೆ ಕಾಣುತ್ತಿಲ್ಲ. ಅವನು ಈಚೆಗೆ ಲಿಬಿಯನ್ನರನ್ನು ಉದ್ದೇಶಿಸಿ "ನಿಮಗೆ ಇಷ್ಟೆÇÉಾ ಕೊಟ್ಟರೂ ನಿಷ್ಠೆ ಎನ್ನುವುದು ಇಲ್ಲ. ನಾಯಿಗಳೇ ನಿಮಗಿಂತ ಎಷ್ಟೋ ವಾಸಿ' ಎಂದು ಬಯ್ದಿದ್ದನ್ನು ಸ್ಥಳೀಯ ಟಿವಿ ಚಾನಲ್ ಪ್ರಸಾರ ಮಾಡಿದೆಯೆಂದು ಅಲ್ಲಿಯ ನನ್ನ ಮಿತ್ರರು ಹೇಳಿ¨ªಾರೆ. ಇದು ಲಿಬಿಯನ್ನರನ್ನು ಮತ್ತಷ್ಟು ಕೆರಳಿಸಿದೆಯಂತೆ. ಹೀಗಾಗಿ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. ಆದರೆ, ಅಕಸ್ಮಾತ್ ಗಡ್ಡಾಫಿಯೇನಾದರೂ ಅಧಿಕಾರದಿಂದ ಕೆಳಗಿಳಿದರೆ ಅದರ ಬಿಸಿ ನಿರಂಕುಶ ಪ್ರಭುತ್ವದ ಆಳ್ವಿಕೆಯಿರುವ ಮಧ್ಯ ಪ್ರಾಚ್ಯದ ಇನ್ನಿತರ ರಾಷ್ಟ್ರಗಳಿಗೂ ತಟ್ಟುವ ಸಾಧ್ಯತೆಗಳು ಹೆಚ್ಚು ಎಂಬುದಕ್ಕೆ ಆಯಾಯಾ ದೇಶಗಳಲ್ಲಿ ಈಗಾಗಲೇ ಸಣ್ಣಗೆ ಆರಂಭವಾಗಿರುವ ಪ್ರತಿಭಟನೆಗಳೇ ಸಾಕ್ಷಿ.
*
*
ಹಾಗಾದರೆ, ಎಲ್ಲವೂ ಸರಿಯಿರುವಾಗ ಲಿಬಿಯಾದಲ್ಲಿ ಹೀಗೆ ಇದ್ದಕ್ಕಿದ್ದಂತೆ ಧಿಗ್ಗೆಂದು ಹೊತ್ತಿಕೊಂಡ ಕ್ರಾಂತಿಗೆ ಕಾರಣವಾದರೂ ಏನು? ಲಿಬಿಯನ್ನರು ಗಡ್ಡಾಫಿಯಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಿದ್ದರೆ? ನಮ್ಮ ಕಣ್ಣಿಗೆ ಕಾಣದ ಆಂತರಿಕ ರಾಜಕೀಯ ಕಲಹಗಳೇನಾದರೂ ಇದ್ದವೆ? ಗಡ್ಡಾಫಿ ಆಳ್ವಿಕೆ ಸಾಕು ಎಂದು ಜನ ಹೊಸತನವನ್ನು ಬಯಸಿದರೆ? ಜನರು ಅಧಿಕಾರ, ಸಂಪತ್ತಿನ ಆಸೆಯಿಂದಾಗಿ ಪ್ರತಿಭಟನೆಯೆದ್ದರೆ? ಅಲ್ಲಿಯ ಜನಕ್ಕೆ ನಿಜಕ್ಕೂ ಪ್ರಜಾ ತಂತ್ರ ವ್ಯವಸ್ಥೆಯೊಂದು ಬೇಕಾಗಿದೆಯೇ? ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಹತೋಟಿ ಸಾಧಿಸಲು ಅಮೆರಿಕ ಮತ್ತು ಇಟಲಿ ಜಂಟಿಯಾಗಿ ಸಂಚು ನಡೆಸು ತ್ತಿವೆಯೇ? ಇದು ಧಾರ್ಮಿಕ ಮೂಲಭೂತವಾದ ಮತ್ತು ನವ ವಸಾಹತು ಶಾಹಿಗಳು ರಚಿಸಿದ ವ್ಯೂಹವೆ? ಅಥವಾ ಮತ್ಯಾವುದೋ ಕಾಣದ ಕೈಗಳ ಕೈವಾಡವಿದೆಯೇ? ಇವ್ಯಾವೂ ಅಲ್ಲದೆ ಸ್ವಾತಂತ್ರÂಕ್ಕಾಗಿ, ಸ್ವತ್ಛಂದ ಬದುಕಿಗಾಗಿ ತಹತಹಿಸುವ ಯುವ ಜನಾಂಗವೇ? ಈ ಎÇÉಾ ಪ್ರಶ್ನೆ, ಊಹೆಗಳಿಗೆ ಕಾಲವೇ ಉತ್ತರ ನೀಡುತ್ತದೆ. ಅಲ್ಲಿಯವರೆಗೆ ನಾವು ತಾಳ್ಮೆಯಿಂದ ಕಾಯಬೇಕಷ್ಟೇ.