Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಅಜ್ಜಿ ಮನೆ ಎಂಬ ಪಿಕ್‌ನಿಕ್‌ ಸ್ಪಾಟ್‌
  • ಅಜ್ಜಿ ಮನೆ ಎಂಬ ಪಿಕ್‌ನಿಕ್‌ ಸ್ಪಾಟ್‌

    • ಎಸ್‌. ಪಿ. ಶರ್ಮ | Mar 26, 2011

      ನಾವೆಲ್ಲ ಚಿಕ್ಕವರಿರುವಾಗ ಇದ್ದದ್ದು ಆಶೆಯಿಂದ ಕಾಯುವ ಎರಡು ರಜೆಗಳು. ಒಂದು ಶೈಕ್ಷಣಿಕ ವರ್ಷದ ಮಧ್ಯೆ, ಸುಮಾರು ಸೆಪ್ಟಂಬರ್‌-ಅಕ್ಟೋಬರ್‌ ತಿಂಗಳಿಗೆ ಬರುವ ಮಧ್ಯಾವಧಿ ರಜೆ, ಇನ್ನೊಂದು ಎಪ್ರಿಲ್‌-ಮೇ ತಿಂಗಳಿನ ದೊಡ್ಡ ರಜೆ, ಅರ್ಥಾತ್‌ ಒಂದು ತರಗತಿಯಿಂದ ಪಾಸೋ ಫೈಲೋ ಆಗಿ ಇನ್ನೊಂದು ಕ್ಲಾಸಿಗೆ ಹೋಗುವ ಮುಂಚಿನ ದೀರ್ಘ‌ ಬೇಸಿಗೆ ರಜೆ. ಅದು ನಮ್ಮ ಪಾಲಿಗೆ "ದೊಡ್ಡ ರಜೆ'.

      "ದೊಡ್ಡ ರಜೆ' ಆರಂಭವಾಗಿ ಒಂದೋ ಎರಡೊ ವಾರಗಳ ಬಳಿಕ ಅಪ್ಪ-ಅಮ್ಮ ನಮ್ಮ ಹಠಕ್ಕೆ ಮಣಿದು  ನಿಗದಿಮಾಡಿದ ಒಂದು ಶುಭ ದಿನ ಬೆಳಗ್ಗೆ ಬೇಗನೆ ಎದ್ದು ಅಜ್ಜನಮನೆಗೆ ಹೋಗುವುದಕ್ಕಾಗಿ ಆಗ ಪಂಜಿಕಲ್ಲು ಗಡಿಯ ತನಕ (ಸುಳ್ಯದ ಸನಿಹ) ಮಾತ್ರ ಬರುತ್ತಿದ್ದ ಬಸ್ಸನ್ನು ಹಿಡಿಯಲು ನಮ್ಮೂರಿನಿಂದ ಬೆಳ್ಳಂಬೆಳಗಿನ "ಫ‌ಸ್ಟ್‌ ಬಸ್‌Õ'ಗೆ ಹೊರಡಬೇಕಿತ್ತು. ಊರಿನ ಗಡಿಯಲ್ಲಿ ನಮಗಾಗಿಯೇ ಎಂಬಂತೆ ಕಾಯುತ್ತ ನಿಂತಿರುವ ಅಯ್ಯಪ್ಪ ಭಜನೆಯ ಟೇಪು ಹಚ್ಚಿದ, ಅಗರಬತ್ತಿಯ ಸುವಾಸನೆ ಬೀರುವ, ಆಗಷ್ಟೇ ತೊಳೆದು ಮಡಿಯಾದ ಬಸ್ಸಿನಲ್ಲಿ ಸೈಡು ಸೀಟಿಗೆ ಹಠ ಮಾಡಿ ಕುಳಿತು ಸುಳ್ಯ- ಜಾಲೂÕರು- ಮುಳ್ಳೇರಿಯ- ಬದಿಯಡ್ಕ ಮಾರ್ಗದ ತಿರುವುಗಳಲ್ಲಿ ಓಲಾಡುತ್ತ  ತೊಳೆಸುವ ಹೊಟ್ಟೆಯನ್ನು ಅಜ್ಜನಮನೆಯ ಆಸೆಯಲ್ಲಿ ನಿಗ್ರಹಿಸಿಕೊಳ್ಳುತ್ತಾ ಸಾಗುತ್ತಿದ್ದೆವು. ಮಧ್ಯಾಹ್ನ ಊಟದ ಹೊತ್ತಿಗೆ ಅಜ್ಜನಮನೆ ಮುಟ್ಟಿದರೆ ರಜೆ ಮುಗಿಯುವ ಹೊತ್ತಿಗೆ ಅಪ್ಪನೋ ಅಣ್ಣನೋ ನಮ್ಮನ್ನು ಮರಳಿ ಮನೆಗೆ ಕರೆದೊಯ್ಯಲು ಬರುವ ತನಕ ಅಲ್ಲೇ ನಮ್ಮ ರಜಾ ಮಜಾ.

      ............................

      ಕಾಲ ಬದಲಾಗುತ್ತ ಹೋಗುತ್ತದೆ. ಮಕ್ಕಳ ವಿಕಸನಕ್ಕೆ ಏನೆಲ್ಲ ಬೇಕು ಎಂಬುದನ್ನು ಹಿರಿಯರು ನಿರ್ಧರಿಸುವ ಮಟ್ಟಿಗೆ ಅಥವಾ ರಜೆಯಲ್ಲಿ ಮನೆಯಲ್ಲಿರುವ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಒಂದು ಕ್ಷಣವೂ ಪುರುಸೊತ್ತಿಲ್ಲದೆ ದುಡಿಯುವ ಅಪ್ಪ-ಅಮ್ಮ ಬೇಸಿಗೆ ರಜೆ ಶಿಬಿರ, ರಜಾ ಮಜಾ ಶಿಬಿರಗಳನ್ನು ಹುಡುಕುವ ಮಟ್ಟಿಗೆ. ನಮ್ಮ ಮಕ್ಕಳು ಸರ್ವ ಪ್ರವೀಣರಾಗಬೇಕೆಂದು ಬಯಸುವವರಾಗಿದ್ದಾರೆ ಇಂದಿನ ಹೆತ್ತವರು. ಕತೆ ಹೇಳುವ, ಮೊಮ್ಮಕ್ಕಳೊಂದಿಗೆ ಹಳ್ಳ-ತೋಡು-ಗುಡ್ಡಗಳನ್ನು ಸುತ್ತಾಡಬಲ್ಲ, ಹಪ್ಪಳ-ಸಂಡಿಗೆ ಒಣಗಿಸುತ್ತಾ ಅದು ಕೆಲಸವೆಂದು ಗೊತ್ತಾಗದಂತೆ ಎಳೆಯರನ್ನು "ಎಂಗೇಜ್‌' ಮಾಡಬಲ್ಲ ಅಜ್ಜ-ಅಜ್ಜಿಯಂದಿರೂ ಇಂದಿಲ್ಲ. ಕಾಲ ಆ ವಿರಾಮವನ್ನು ನೆಮ್ಮದಿಯನ್ನೂ ಸೆಳೆದೊಯ್ದು ಎಡಗೈಯಿಂದ ಹಣ, ಸ್ಥಾನಮಾನ, ವಿಲಾಸವನ್ನು ನೀಡಿದೆಯೆನಿಸುತ್ತದೆ. ಮಕ್ಕಳು ಬದುಕಿನ ಪ್ರತಿಕ್ಷಣದ ಆಗುಹೋಗುಗಳಿಂದಲೂ ಏನನ್ನಾದರೂ ಕಲಿಯುವಂಥ ಗ್ರಹಣ ಶಕ್ತಿಯನ್ನು , ಸೂಕ್ಷ್ಮತೆಯನ್ನು ಹೊಂದಿರುತ್ತಾರೆ. ವಯಸ್ಸಾಗುತ್ತ ಬಂದಂತೆ ಈ ಸೂಕ್ಷ್ಮಗ್ರಹಣ ಶಕ್ತಿ ಮಂದವಾಗುತ್ತ ಹೋಗುತ್ತದೆ. ಒಂದು ತಲೆಮಾರು ಹಿಂದಿನ ಮಕ್ಕಳು ರಜಾ ಕಾಲದಲ್ಲಿ ಏನನ್ನೂ ಕಲಿಯುತ್ತಿರಲಿಲ್ಲ, ಸುಮ್ಮನೇ ಆಟವಾಡಿ ಸಮಯ ಹಾಳುಮಾಡುತ್ತಿದ್ದರು ಎಂದೇನಿಲ್ಲ. ಅವರೂ ಕಲಿಯುತ್ತಿದ್ದರು, ಆದರೆ ಅದು ವಿಶಾಲ ಸಮುದ್ರದಲ್ಲಿ ಮುತ್ತು ಆರಿಸಿದಂತೆ. ಈ ಹೊತ್ತು ಅಂಥ ಕಲಿಕೆಯನ್ನು ಒಟ್ಟಾಗಿಸಿ ಬೇಸಗೆ ರಜೆ ಶಿಬಿರಗಳ ರೂಪದಲ್ಲಿ ಮಕ್ಕಳಿಗೆ ಉಣಬಡಿಸಲಾಗುತ್ತಿದೆ. ಈ ದೃಷ್ಟಿಯಿಂದ ನೋಡಿದರೆ ಬೇಸಗೆ ರಜೆ ಶಿಬಿರಗಳು ಸ್ವಾಗತಾರ್ಹವೇ. ಆದರೆ, ಶಾಲೆಯಲ್ಲಿ ಮಕ್ಕಳು ಅನುಭವಿಸುವ ಒತ್ತಡ, ಸ್ಪರ್ಧೆ, ಮಾನಸಿಕ ಕಿರಿಕಿರಿಗಳು, ಒತ್ತಾಯದ ಕಲಿಕೆ ಈ ಶಿಬಿರಗಳಲ್ಲೂ ಮುಂದುವರಿದರೆ ಅವು ಶಿಕ್ಷೆಯಷ್ಟೇ ಆಗಬಹುದು. ಬೇಸಗೆ ರಜಾ ಶಿಬಿರಗಳಿಗೆ ಎಳೆಯರನ್ನು ಕಳುಹಿಸುವ ಪಾಲಕರೂ, ಇಂಥ ಶಿಬಿರಗಳನ್ನು ಆಯೋಜಿಸುವವರೂ ಈ ವಿಚಾರದ ಬಗೆಗೆ ನಿಗಾ ವಹಿಸುವುದು ಒಳಿತು. ಖುಷಿಯ ಕಲಿಕೆ, ಸಂತಸದ ಜೀವನಾನುಭವದ ಜೊತೆಗೆ ಒಂದಿಷ್ಟು ಕೌಶಲ್ಯಗಳನ್ನು ನೀಡುವ ರಜಾ ಶಿಬಿರಗಳನ್ನು ಯಾರು ಬೇಡವೆನ್ನುತ್ತಾರೆ? ಈ ಅಂಶಗಳ ಜೊತೆಗೆ ರಜಾ ಶಿಬಿರಗಳು ಆಯೋಜಕರ ಪಾಲಿಗೆ ಸಂಪಾದನೆಯ ಮಾರ್ಗವಾಗುತ್ತಿರುವುದರ ಬಗೆಗೂ ಹೆತ್ತವರು ಚಿಂತಿಸಬೇಕಿದೆ.

      ರಜಾ ಮಜಾ ಶಿಬಿರಗಳಲ್ಲಿ ತಮ್ಮ ಮಕ್ಕಳು ಎಲ್ಲವನ್ನೂ ಮೈಗೂಡಿಸಿಕೊಳ್ಳಬೇಕೆಂದು ಹಂಬಲಿಸುವ - ಭ್ರಮಿಸುವ ಹೆತ್ತವರಿದ್ದಾರೆ. ಇಂತಹ ಭ್ರಮೆ ಆಯೋಜಕರಿಗೂ ಇದ್ದುಬಿಟ್ಟರೆ ಶಿಬಿರದ ಉದ್ದೇಶವೇ ವ್ಯರ್ಥವಾಗುತ್ತದೆ. ರಜಾ ಶಿಬಿರಗಳು ಯಾವುದೇ ಕಲೆ, ಕೌಶಲ್ಯದ ಪರಿಚಯವನ್ನಷ್ಟೇ ಮಕ್ಕಳಿಗೆ ಮಾಡಿಕೊಡಬಲ್ಲವು. ಅಭಿನಯವೋ, ಚಿತ್ರ ರಚನೆಯೋ, ಸಂಗೀತವೋ, ಈಜೋ - ಒಂದೆರಡು ತಿಂಗಳ ಅವಧಿಯಲ್ಲಿ ಈ ಯಾವುದೇ ಒಂದರ ಎಷ್ಟಂಶವನ್ನು ಹೇಳಿಕೊಡಬಹುದು ಹೇಳಿ? ಹೀಗಾಗಿ ಬೇಸಗೆ ಶಿಬಿರ
      ಮಕ್ಕಳ ಆಸಕ್ತಿ ಯಾವುದರಲ್ಲಿದೆ ಎಂದು ತಿಳಿಯುವ, ವಿವಿಧ ಕಲೆ, ಕ್ಷೇತ್ರಗಳ ಪರಿಚಯವನ್ನು ಮಾಡಿಕೊಡುವ ಪ್ರಾಥಮಿಕ ತರಗತಿಗಳಾದಾವು ಅಷ್ಟೆ . ಮತ್ತವು ಹಾಗೆಯೇ ಆಗಿರಬೇಕು ಕೂಡ.
      ಏಕೆಂದರೆ, ಶಿಬಿರವೊಂದಕ್ಕೆ ಹತ್ತು ಹಲವು ಆಸಕ್ತಿಯ ಮಕ್ಕಳು ಬಂದಿರು ತ್ತಾರೆ. ಈಜಿನಲ್ಲಿ ಆಸಕ್ತಿಯಿರುವ
      ಮಗುವಿಗೆ ಪೈಂಟಿಂಗ್‌ ಬೇಡ ಅನ್ನಿಸಬಹುದು. ಎಲ್ಲ ಮಕ್ಕಳೂ ಅಭಿನಯದಲ್ಲಿ ಆಸಕ್ತಿ ಕುದುರಿಸಿಕೊಳ್ಳ ಲಿಕ್ಕಿಲ್ಲ. ಹೀಗಾಗಿ ಶಿಬಿರಗಳಲ್ಲಿ ಎಲ್ಲರಿಗೂ ಎಲ್ಲವನ್ನೂ ಹೇಳಿಕೊಡುವ ಪ್ರಯತ್ನ ಒಳ್ಳೆಯದಲ್ಲ. ಅವು ಮಕ್ಕಳಿಗೆ ವಿವಿಧ ಕ್ಷೇತ್ರ, ಕಲೆ, ಕೌಶಲಗಳನ್ನು ಪರಿಚಯಿಸಿಕೊಡುವ ಕೆಲಸ ಮಾಡಿದರೆ, ಅಂಥ ಮಕ್ಕಳು ಮುಂದೆ ಆಯಾಯ ಕ್ಷೇತ್ರಗಳಲ್ಲಿ ಕಲಿಕೆಯನ್ನು ಮುಂದುವರಿಸಿದರೆ ಆಗ ಇಂಥ ಶಿಬಿರಗಳ ಉದ್ದೇಶ ಸಾರ್ಥಕವಾಗುತ್ತದೆ. ತೀರ ಪುಟ್ಟ ಮಕ್ಕಳನ್ನು ರಜಾ ಶಿಬಿರಗಳಿಗೆ ಕಳುಹಿಸುವುದು ಬೇಡ ಎನಿಸುತ್ತದೆ.
      ಮೂರು ವರ್ಷ ತುಂಬಿದ ಮಕ್ಕಳನ್ನು ನರ್ಸರಿ, ಕ್ರಶ್‌ಗೆ ಕಳುಹಿಸುವುದು ಇಂದಿನ ಅಗತ್ಯ. ಅಪ್ಪ-ಅಮ್ಮ ಇಬ್ಬರೂ ಅವಿಶ್ರಾಂತವಾಗಿ ಸಂಪಾದಿಸುವ, ಅಜ್ಜಿ ಅಜ್ಜಿ ಅಥವಾ ಮಗುವನ್ನು ಮನೆಯಲ್ಲೇ ಇರಗೂಡಲು ನೋಡಿಕೊಳ್ಳುವ ಯಾರೂ ಇಲ್ಲದ ಈ ಕಾಲದಲ್ಲಿ ಪುಟಾಣಿಗಳನ್ನು ನರ್ಸರಿ ಅಥವಾ ಕ್ರಶ್‌ಗೆ ಕಳುಹಿಸುವುದನ್ನು "ಸಲ್ಲದು' ಎನ್ನುವ ಹಾಗಿಲ್ಲವಲ್ಲ ! ಈ ಮಕ್ಕಳನ್ನು ಬೇಸಗೆ ರಜಾ ಶಿಬಿರಕ್ಕೂ ಕಳುಹಿಸಿದರೆ ಅದು ತಪ್ಪಾದೀತು. ಎಳೆಯ ಮಕ್ಕಳಿಗೆ ರಜಾ ಶಿಬಿರಗಳಲ್ಲಿ ಕಲಿಸುವ ಯಾವುದೋ ಕಲೆ, ಕೌಶಲಗಳನ್ನು ಆ ರೂಪದಲ್ಲಿ ಗ್ರಹಿಸುವ ಸಾಮರ್ಥ್ಯ ಇರಲಿಕ್ಕಿಲ್ಲ. ಮೂರರಿಂದ ಆರೇಳು ವರ್ಷಗಳವರೆಗೆ ಮಕ್ಕಳು ಗ್ರಹಿಸುವ, ಕಲಿಯುವ ವಿಧಾನ, ಸ್ವರೂಪಗಳೇ ಬೇರೆ. ಹೀಗಾಗಿ ಇಷ್ಟು ಎಳೆಯ ಪುಟಾಣಿಗಳಿಗೆ ರಜೆಯನ್ನು ರಜೆಯಾಗಿಯೇ ಇರಗೊಟ್ಟು ಮನೆಯಲ್ಲಿ ಅಪ್ಪ-ಅಮ್ಮನೊಡನೆ, ಅಜ್ಜ-ಅಜ್ಜಿಯ ಜೊತೆಗೆ ಕಾಲ ಕಳೆಯುವಂತೆ ಮಾಡುವುದು ಕ್ಷೇಮ. ನಮಗದು "ಕಾಲಹರಣ'ವೆಂದು ಕಾಣಬಹುದು. ಆದರೆ ಆ ಎಳೆಯ ವಯಸ್ಸಿನಲ್ಲಿ ಪ್ರತಿ ಮಗುವೂ ತನ್ನ ಪಂಚೇಂದ್ರಿಯಗಳಿಂದ ಸಾಕಷ್ಟನ್ನು ಪಡೆದುಕೊಳ್ಳುತ್ತದೆ. ರಜಾ ಶಿಬಿರಗಳು ಸ್ವಲ್ಪ ದೊಡ್ಡ ಮಕ್ಕಳಿಗಿರಲಿ.

      *

      ನಿಮ್ಮ ಮಗು ಈಗಾಗಲೇ ಯಾವುದಾದರೊಂದು ಬೇಸಗೆ ರಜಾ ಶಿಬಿರದಲ್ಲಿ ಸೇರಿಕೊಂಡಿರಬಹುದು. ಎಲ್ಲವನ್ನೂ ಹೇಳಿಕೊಡಲಾಗುತ್ತದೆ ಎಂದು ಬೇಸಗೆ ರಜಾ ಶಿಬಿರಗಳೂ ಬ್ಯಾನರ್‌ ಹಾಕಿಸಿಕೊಳ್ಳುವ ದಿನಗಳಿವು. ಒಂದೂವರೆ ತಿಂಗಳಿನ ಶಿಬಿರದಲ್ಲಿ ಮಕ್ಕಳನ್ನು ಸರ್ವ ಪ್ರವೀಣ ರನ್ನಾಗಿಸುತ್ತೇವೆ ಎಂದು ಘೋಷಿಸಿಕೊಳ್ಳುವ ಕಾಲ ಇದು. ಹಾಗೇನೂ ಆಗಬೇಕಾಗಿಲ್ಲ. ಆಗುವುದೂ ಇಲ್ಲ. ಸಂಗೀತದ ಗಂಧ ಗಾಳಿಯೇ ಇಲ್ಲದ ಮನೆಯಿಂದ ಶಿಬಿರಕ್ಕೆ ಹೋದ ಮಗು ಹಾಡಿಗೆ ತಲೆದೂಗಿದರೆ, "ಸರಿಗಮ'ದ ಆಸಕ್ತಿ ಹತ್ತಿಸಿಕೊಂಡು ಸಂಗೀತವನ್ನು ಮುಂದಕ್ಕೂ ಕಲಿತರೆ, ನಾಟಕವೆಂದರೇನೆಂದು ಅರಿಯದ ಬಾಲೆ ಅಭಿನಯದ ಹುಚ್ಚು ಹತ್ತಿಸಿ ಕೊಂಡರೆ, ನೀರು ಕಂಡರೆ ಹೆದರುವ ಮಗು ಈಜಿನಲ್ಲಿ ಆಸಕ್ತಿ ಬೆಳೆಸಿ ಕೊಂಡರೆ, ಇವೆಲ್ಲವೂ ಮುಂದುವರಿದು ಮಕ್ಕಳು ಸುಸಂಸ್ಕೃತರು, ಸುಮನಸ್ಕರಾಗಿ ಬೆಳೆದರೆ ಅಷ್ಟೇ ಸಾಕು.

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
    • ಈ ವಿಭಾಗದಲ್ಲಿಯೂ ಇದೆ
    • Copyright @ 2009-2010 Udayavani.All rights reserved.
    • Designed & Hosted By 4cplus