ಅಶೋಕ್ ಕುಮಾರ್ ಎ. | Apr 17, 2011
ಅಗ್ಗದ ತರಬೇತುದಾರ
ವ್ಯಾಯಾಮ ಮಾಡಿಸಲು ತರಬೇತುದಾರರನ್ನು ಬಳಸು ವುದು ದುಬಾರಿಯಾಗುತ್ತಿ ದೆಯೇ? ನಿಮ್ಮ ವ್ಯಾಯಾಮಕ್ಕೆ ಸಲಹೆ ಪಡೆಯಲು ಆನ್‌ಲೈನ್ ತರಬೇತಿ ನೀಡುವ http://www.fitorbit.com
ಸೇವೆಯನ್ನು ಬಳಸಬಹುದು. ಈ ತಾಣದಲ್ಲಿ, ಮೊದಲಾಗಿ ವ್ಯಾಯಾಮವನ್ನು ಮಾಡುವ ಮುಖ್ಯ ಉದ್ದೇಶವೇನು, ವ್ಯಕ್ತಿಯ ಆರೋಗ್ಯ ಹೇಗಿದೆ, ಆತನಿಗೆ ಇರುವ ಸಮಸ್ಯೆಗಳೇನು ಎನ್ನುವುದನ್ನೆಲ್ಲಾ ನೋಂದಾವಣೆಯ ವೇಳೆಯೇ ತಿಳಿಸಬೇಕಾಗುತ್ತದೆ. ಇದರ ಆಧಾರದಲ್ಲಿ ತರಬೇತುದಾರನನ್ನು ನೀಡಲಾಗು ತ್ತದೆ. ತಾಣ ಸೂಚಿಸಿದ ಮೂವರಲ್ಲಿ ನಿಮಗಿಷ್ಟವಾದ ತರಬೇತುದಾರನನ್ನು ಆಯ್ದುಕೊಳ್ಳುವುದು ಸಾಧ್ಯ. ತರಬೇತುದಾರನು ನಿಮ್ಮ ಅಗತ್ಯಗಳಿಗೆ ಸೂಕ್ತವಾದ ವ್ಯಾಯಾಮವನ್ನು ಸೂಚಿಸಿ, ಅದನ್ನು ಮಾಡುವ ಕ್ರಮದ ವಿಡಿಯೋಗಳನ್ನು ಆನ್‌ಲೈನಿನಲ್ಲಿ ನೀಡುತ್ತಾನೆ. ಇವನ್ನು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್‌ಗಳಲ್ಲಿಯೂ ನೋಡಿ ಅನುಸರಿಸುವುದು ಸುಲಭ. ಆಹಾರದ ಬಗ್ಗೆಯೂ ಸಲಹೆಗಳು ಸಿಗುತ್ತವೆ. ಇವೆಲ್ಲವೂ ವಾರಕ್ಕೆ ಹತ್ತು ಡಾಲರು ಬೆಲೆಗೆ ಲಭ್ಯ.
ಇಂಟೆಲ್: ಟ್ಯಾಬ್ಲೆಟ್‌ಗೆ ಸಂಸ್ಕಾರಕ
ಈಗ ಕಂಪ್ಯೂಟರ್, ಲ್ಯಾಪ್‌ಟಾಪ್‌ಗ್ಳ ಮಾರಾಟವು ತುಸು ತಗ್ಗಿ ಟ್ಯಾಬ್ಲೆಟ್ ಸಾಧನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂಟೆಲ್ ಕಿರು ಸಾಧನಗಳಿಗೆಂದೇ ಆಟಂ ಎನ್ನುವ ಸಂಸ್ಕಾರಕವನ್ನು ತಯಾರಿಸುತ್ತಿದೆ. ಆಪಲ್ ಮತ್ತು ಆರ್ಮ್ ಪ್ರಾಸೆಸರುಗಳನ್ನು ಕೈಯಲ್ಲಿ ಹಿಡಿದು ಬಳಸುವ ಸಾಧನಗಳಲ್ಲಿ ಬಳಸಲು ಹೆಚ್ಚಿನ ತಯಾರಕರು ಉದ್ಯುಕ್ತರಾಗುತ್ತಿರುವಂತೆ ಇಂಟೆಲ್ ಕಂಪೆನಿಯು ಎಚ್ಚೆತ್ತುಕೊಂಡಿದೆ.
ಅದು ಟ್ಯಾಬ್ಲೆಟ್ ಸಾಧನಗಳಲ್ಲಿ ಬಳಕೆಗೆ ಸೂಕ್ತವಾದ, ಕಡಿಮೆ ವಿದ್ಯುತ್ ಶಕ್ತಿ ಬಳಸುವ ಓಕ್ ಟ್ರೆ„ಲ್ ಎಂಬ ಹೆಸರಿನ ಸಂಸ್ಕಾರಕವನ್ನು ಹೊರತಂದಿದೆ. ಮೈಕ್ರೋಪ್ರೊಸೆಸರುಗಳ ಮಟ್ಟಿಗೆ ಇಂಟೆಲ್ ಅತ್ಯಂತ ಜನಪ್ರಿಯವಾದರೂ, ಕಿರುಸಾಧನಗಳ ಮಟ್ಟಿಗೆ ಅದಕ್ಕೆ ಈ ಖ್ಯಾತಿಯಿಲ್ಲ. ಓಕ್ ಟ್ರೆ„ಲ್ ಸಂಸ್ಕಾರಕವು ಆಂಡ್ರಾಯಿಡ್, ಮಿಟೂ, ವಿಂಡೊಸ್ ಹೀಗೆ ವಿವಿಧ ಆಪರೇಟಿಂಗ್ ವ್ಯವಸ್ಥೆಗಳಿಗೂ ಸೂಕ್ತವಾಗುವ ಹಾಗೆ ಮಾಡಿ, ವಿವಿಧ ಸಾಧನಗಳ ತಯಾರಕರನ್ನು ಬಗಲಲ್ಲಿ ಹಾಕಲೂ ಇಂಟೆಲ್ ಸಿದ್ಧವಾಗಿದೆ. ಚಿಪ್‌ನ್ನು
45 ನ್ಯಾನೋಮೀಟರ್ ತಂತ್ರಜ್ಞಾನದಿಂದ ತಯಾರಿಸಲಾಗಿದೆ.
ಹೊಸ ಕಂಪ್ಯೂಟರ್ ನಿಯಂತ್ರಣ
ಯೋಚನೆಯ ಮೂಲಕ ಕಂಪ್ಯೂಟರ್ ಜತೆ ಸಂವಹನ ಸಾಧ್ಯವಾಗಿಸಿ, ಕಂಪ್ಯೂಟರ್-ಮನುಷ್ಯನ ನಡುವಿನ ಅಂತರವನ್ನಳಿಸುವುದು ಸಂಶೋಧಕರ ಕನಸು. ಕ್ಯಾಲಿಫೋರ್ನಿಯಾ ವಿವಿಯ ನರವಿಜ್ಞಾನ ಸಂಶೋಧನಾಲಯದ ಸಂಶೋಧಕರ ಆಸಕ್ತಿ ಈ ಕಡೆಗೇ ಇದೆ. ಯೋಚನೆಯ ಮೂಲಕ ಕರೆಗಳನ್ನು ಮಾಡು ವುದು, ಈ ನಿಟ್ಟಿನಲ್ಲಿ ಮೊದಲ ಮೆಟ್ಟಿಲು. ನಂಬರುಗಳ ಪಟ್ಟಿಯ ಕಡೆ ದಿಟ್ಟಿಸಿ ಇದನ್ನು ಸಾಧಿಸುವುದು ಒಂದು ಸಾಧ್ಯತೆ. ಮಿದುಳಿನಿಂದ ಹೊರಡುವ ಸಂಕೇತಗಳನ್ನು ಎಲೆಕ್ಟ್ರೋ ಎನ್ಸೆಫಲೋಗ್ರಾಂ ಸಾಧನದ ಮೂಲಕ ಗ್ರಹಿಸಿ, ಇದನ್ನು ಸಾಧಿಸುವ ಆಯ್ಕೆಯೂ ಅವರ ಮುಂದಿದೆ.
ಹಾಗೆಯೇ ವೈಮಾನಿಕ ಪೈಲಟ್‌ಗಳು ಸಾಕಷ್ಟು ಚುರುಕಾಗಿದ್ದಾರೆಯೇ, ಅಲ್ಲ ದಣಿದಿ ದ್ದಾರೆಯೇ ಎನ್ನುವುದನ್ನು ಅರಿಯುವುದು ಅವರ ಸಂಶೋಧನೆಯ ಇನ್ನೊಂದು ಗುರಿ.
ವಾಮನಾಕೃತಿ - ಭಾರೀ ನೆನಪು

ಇಂಟೆಲ್ ಮತ್ತು ಮೈಕ್ರಾನ್ ಕಂಪೆನಿಗಳು ಜಂಟಿಯಾಗಿ, ಐಎಂ ಎಂಬ ಹೆಸರಿನ ಫ್ಲಾಶ್ ಚಿಪ್‌ತಯಾರಿಸುತ್ತಿವೆ. ಇದು ಅಂಚೆಚೀಟಿ ಗಾತ್ರದ್ದಾದರೂ 8 ಜಿಬಿ ಸ್ಮರಣಶಕ್ತಿ ಒದಗಿಸಲು ಶಕ್ತ. ಮುಂದಿನ ಪ್ರಯತ್ನ 16 ಜಿಬಿ, 32 ಜೀಬಿ ಹೀಗೆ... 128 ಜಿಬಿ ಸಾಮರ್ಥ್ಯದ ಫ್ಲಾಶ್ ಸ್ಮರಣಕೋಶಗಳೂ ಬರುವುದು ಹೆಚ್ಚು ತಡ ವಾಗದು. ಇದು ಸಾಧ್ಯವಾಗಲು ಮುಖ್ಯ ಕಾರಣ, 20 ನ್ಯಾನೋ ಮೀಟರ್ ತಂತ್ರಜ್ಞಾನದ ಬಳಕೆಯನ್ನು ಚಿಪ್ ತಯಾರಿಕೆಗೆ ಬಳಸಿದ್ದಾಗಿದೆ. ಸುಧಾರಿತ ತಂತ್ರಜ್ಞಾನವು ಕಡಿಮೆ ಗಾತ್ರದಲ್ಲಿ ಹೆಚ್ಚಿನ ವಿದ್ಯುನ್ಮಾನ ಮಂಡಲಗಳನ್ನು ಹಿಡಿಸಲು ಶಕ್ತವಾಗುತ್ತದೆ. ಈ ಫ್ಲಾಶ್ ಸ್ಮರಣ ಕೋಶಗಳು ದುಬಾರಿ ಆದರೂ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಸಾಧನ ಗಳಿಗೆ ವರದಾನ ವಾಗಲಿವೆ. 20 ನ್ಯಾನೋಮೀಟರ್ ತಂತ್ರಜ್ಞಾನವು 25 ನ್ಯಾನೋ ಮೀಟರ್ ತಂತ್ರಜ್ಞಾನಕ್ಕೆ ಹೋಲಿಸಿದರೆ, ಎರಡು ಪಟ್ಟು ಹೆಚ್ಚು ಸ್ಮರಣ ಸಾಮರ್ಥ್ಯವನ್ನು ಹಿಡಿಸಲು ಸಮರ್ಥವಾಗಿದೆ.
ತುಷಾರ: ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ, ತುಷಾರ ಮಾಸಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ| ಶ್ರೀನಿವಾಸ್ ರಾವ್, ಪ್ರೊಫೆಸರ್, ನಿಟ್ಟೆ.
*ಭಾರತದ ಅತಿ ದೊಡ್ಡ ಐಟಿ ಕಂಪೆನಿ ಯಾವುದು?
*ಲಿನಕ್ಸ್‌ನಲ್ಲಿ ಲಭ್ಯವಿರುವ ಎರಡು ಡೆಸ್ಕ್ಟಾಪ್ ಆಯ್ಕೆಗಳನ್ನು ಹೆಸರಿಸಿ.
(ಉತ್ತರಗಳನ್ನು nistantusansaara@gmail.com ಗೆ ಮಿಂಚಂಚೆ ಮಾಡಿ ವಿಷಯ: NS27 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು: *ಉಬುಂಟು ಲಿನಕ್ಸ್‌ನ ಎಪ್ರಿಲ್ 2011ನ ಆವೃತ್ತಿಯ ಹೆಸರು ನ್ಯಾಟಿ ನರ್ವಾಲ್. *ಫೊಟೋಶಾಪ್, ಜಿಂಪ್, ಇಂಕ್‌ಸ್ಕೇಪ್ ತಂತ್ರಾಂಶಗಳ ಪೈಕಿ ಲಿನಕ್ಸಿನಲ್ಲಿಲ್ಲದ ತಂತ್ರಾಂಶ ಫೊಟೋಶಾಪ್. ಬಹುಮಾನ ಗೆದ್ದವರು ರಾಕೇಶ್ ಕೆ. ಕೆ. ಕುಕ್ಕುಂದೂರು, ಕಾರ್ಕಳ. ಅಭಿನಂದನೆಗಳು.