Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಕಾಸು - ಕುಡಿಕೆ
  • ಕಾಕು - 75 : ಗುರುಗುಂಟಿರಾಯರ ಮೆಡಿಕಲ್‌ ಇನ್ಶೂರೆನ್ಸ್‌ - 2
  • ಫೇಸ್‌ಬುಕ್ಕಿನಲ್ಲಿ ತನ್ನ ಊರಿನ ಹಿರಿಮೆಯನ್ನು ಎತ್ತಿ ತೋರಿಸುವ ಫೋಟೋಗಳನ್ನು ಅಪ್‌ಲೋಡ್‌ ಮಾಡುವವರು

    • ಜಯದೇವ ಪ್ರಸಾದ ಮೊಳೆಯಾರ | Apr 24, 2011

      ಧನಿಯ ವಾಂತಿಯ ನಾತ ನೆರೆಮನೆಯ ಬಡವಂಗೆ
      ಉಣದ ಬಡವನ ಹಸಿವು ಗೋಳು ಧನಿಕಿವಿಗೆ
      ವಿನಿಮಯವಿದನ್ಯೋನ್ಯ ವಿಧಿಯ ಮಾರRಟ್ಟೆಯಲಿ
      ಅಣಕಿಗರ ಸಂತೆ ಜಗ - ಮರುಳ ಮುನಿಯ.

      ನಟೇಶ್‌ ವಿಟ್ಲ - ವೃತ್ತಿಯಲ್ಲಿ ವಕೀಲರು. ವಿಟ್ಲದಲ್ಲಿ ವಾಸ, ಬಿ. ಸಿ. ರೋಡಿನಲ್ಲಿ ಕಚೇರಿ ತೆರೆದು ಕುಳಿತಿರುವವರು. ವಿಟ್ಲದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಫೇಸ್‌ಬುಕ್ಕಿನಲ್ಲಿ ತನ್ನ ಊರಿನ ಹಿರಿಮೆಯನ್ನು ಎತ್ತಿ ತೋರಿಸುವ ಫೋಟೋಗಳನ್ನು ಅಪ್‌ಲೋಡ್‌ ಮಾಡುವವರು.

      ಅವರ ಅಂಥ ಫೋಟೋಗಳಿಗಾಗಿ ಕಾಯುತ್ತಾ ಕೂರುವವರಲ್ಲಿ ನಾನೂ ಒಬ್ಬ. ಯಾಕೆಂದರೆ ವಿಟ್ಲ ನನ್ನ ಹುಟ್ಟೂರು. ಅÇÉೇ ಹುಟ್ಟಿ ಬೆಳೆದ ನಾನು ಅಲ್ಲಿ 4ನೇ ತರಗತಿಯವರೆಗೆ ಅಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದೇನೆ. ವಿಟ್ಲ ಪೇಟೆ, ಜನರು ಮತ್ತು ಪರಿಸರದ ಹಲವು ಸ್ಥಳಗಳು ನನ್ನ ಮನಸ್ಸಿನಲ್ಲಿ ಇಂದಿಗೂ ಹಸಿರಾಗಿವೆ ಮತ್ತು ನಟೇಶರ ಭಾವಚಿತ್ರಗಳು ಆ ನೆನಪನ್ನು ತೊಳೆದು ಬೆಳಗಿಸುತ್ತವೆ.

      ನಟೇಶರು ಒಬ್ಬ ಕಾಕು ಓದುಗರೂ ಹೌದು. ಓದಿ ಆಗಾಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ಕಳೆದ ವಾರದ ಹೆಲ್ತ್‌ ಇನ್ಶೂರೆನ್ಸ್‌ ಬಗ್ಗೆ ಬರೆದ ಕಾಕು ಓದಿ ಇದರಲ್ಲಿ ಇನ್ನೂ ಸ್ವಲ್ಪ$ಜಾಸ್ತಿ ಮಾಹಿತಿ ತುರುಕಬೇಕಾಗಿತ್ತು ಎಂಬ ಸಂದೇಶ ಕಳುಹಿಸಿದರು.

      ಹೌದು, ಕಳೆದ ವಾರ ಅರೋಗ್ಯ ವಿಮೆಯ ಪಾಲಿಸಿಯನ್ನು ಆಯ್ದುಕೊಳ್ಳುವಾಗ ಯಾವ ಮಾನದಂಡ ಉಪಯೋಗಿಸ ಬೇಕು ಎಂದಷ್ಟೇ ಬರೆದಿ¨ªೆ. ಆದರೆ ಯಾವ ಯಾವ ವಿಮಾ ಪಾಲಿಸಿಗಳು/ಕಂಪೆನಿಗಳು ಮಾರುಕಟ್ಟೆಯಲ್ಲಿ ಲಭ್ಯ- ಇತ್ಯಾದಿ ಮಾಹಿತಿಗಳನ್ನು ನೀಡಿರಲಿಲ್ಲ.

      ಸರಿ ನೋಡೊಣ, ಇನ್ನೊಮ್ಮೆ ಯಾವಾಗಲಾದರೂ ಕವರ್‌ ಮಾಡೊಣ ಅಂತ ಇ¨ªೆ. ಆದರೆ ಇದೀಗ ನಟೇಶರ ಸಲಹೆಯ ಮೇರೆಗೆ ತುಸು ಹೆಚ್ಚುವರಿ ವಿವರಗಳನ್ನು ಈಗಲೇ ನೀಡುತ್ತಿದ್ದೇನೆ.
      *
      *

      ಆರೋಗ್ಯ ವಿಮೆ ಅಥವಾ ಹೆಲ್ತ್‌ ಇನ್ಶೂರೆನ್ಸ್‌ 3 ವಿವಿಧ ರೀತಿಯ ಕಂಪೆನಿಗಳಿಂದ ಬರುತ್ತವೆ. ಮೊದಲನೆಯದಾಗಿ ಜೀವ ವಿಮಾ ಕಂಪೆನಿಗಳು ನೀಡುವ ಆರೋಗ್ಯ ವಿಮೆಯಾದರೆ ಎರಡನೆಯದು ಜನರಲ್‌ ಇನ್ಶೂರೆನ್ಸ್‌ ಕಂಪೆನಿಗಳು ನೀಡುವ ಆರೋಗ್ಯ ವಿಮೆ; ಮೂರನೆಯದು ಆರೋಗ್ಯ ವಿಮಾ ಕಂಪೆನಿಗಳು ಮಾತ್ರ ನೀಡುವ ಆರೋಗ್ಯ ವಿಮೆ. ಈ ಮೂರು ಕಂಪೆನಿಗಳ ವಿಮಾ ಪಾಲಿಸಿಗಳಲ್ಲಿ ವ್ಯತ್ಯಾಸಗಳಿವೆ.

      1.  ಜೀವ ವಿಮಾ ಕಂಪೆನಿಗಳು (LIC, SBI Life, ICICI Prudential, Bajaj Allianz, Birla Sunlife, Max NewYork, HDFC Standard, Aegon Religare etc) ಅನಾರೋಗ್ಯದ ಸಂದರ್ಭ ದಲ್ಲಿ ದಿನ ಲೆಕ್ಕದಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಪಾಲಿಸಿ ದಾರ ರಿಗೆ ನೀಡುವ ನಮೂನೆಯ ಪಾಲಿಸಿಗಳನ್ನು (Benefit Plan) ನಡೆಸುತ್ತವೆ - ನೈಜ ವೆಚ್ಚ ಹೆಚ್ಚಿರಲಿ, ಕಡಿಮೆಯಿರಲಿ! ಎÇÉಾ ಆಸ್ಪತ್ರೆ ವೆಚ್ಚಗಳನ್ನು ಭರಿಸುವ ನಮೂನೆಯ (Reimbursement Plan) ಪಾಲಿಸಿ ಗಳು ಇವುಗಳ ಬತ್ತಳಿಕೆಯಲ್ಲಿ ವಿರಳ. ಆದರೆ ಇಲ್ಲಿ ಪ್ರೀಮಿಯಂ ಮೊತ್ತ ಜಾಸ್ತಿ ಇರುತ್ತವೆ ಮತ್ತು ಪ್ರತಿ 3-5 ವರ್ಷಗಳಿಗೊಮ್ಮೆ ಅವನ್ನು ಪರಿಷ್ಕರಿಸಲಾಗುತ್ತದೆ.

      2.  ಜನರಲ್‌ ಇನ್ಶೂರೆನ್ಸ್‌ ಕಂಪೆನಿಗಳೇ (New India, National, Oriental, United, Reliance General Insurance, Cholamandalam General Insurance etc) ನಮ್ಮ ದೇಶದ ಮಟ್ಟಿಗೆ ಆರೋಗ್ಯ ವಿಮಾ ಕ್ಷೇತ್ರದಲ್ಲಿ ಮಂಚೂಣಿಯಲ್ಲಿವೆ. ಇವು ಆಸ್ಪತ್ರೆಯ ಎÇÉಾ ವೆಚ್ಚಗಳನ್ನು ಮರುಪಾವತಿ (

      Reimbursement)ಮಾಡುವ ನಮೂನೆಯ ಪಾಲಿಸಿಗಳು. ಜೀವ ವಿಮಾ ಕಂಪೆನಿಗಳಂತೆ ನಿರ್ದಿಷ್ಟ ಮೊತ್ತ ನೀಡುವ ಪಾಲಿಸಿಗಳು ಇಲ್ಲಿಲ್ಲ. ಮರುಪಾವತಿ ವಿಧದಲ್ಲೂ ಎರಡು ನಮೂನೆಯ ಪಾಲಿಸಿಗಳಿವೆ. ಕ್ಯಾಶ್‌ಲೆಸ್‌ ಪಾಲಿಸಿಗಳಲ್ಲಿ ರೋಗಿಯು ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ದುಡ್ಡು ಕೊಡದೆ ಹೊರನಡೆಯಬಹುದು. ಇನ್ನೊಂದು ನಮೂನೆಯ ಪಾಲಿಸಿಯಲ್ಲಿ ಮೊದಲು ದುಡ್ಡು ಕೊಟ್ಟು ಆಮೇಲೆ ಬಿಲ್‌/ರಶೀದಿಗಳೊಂದಿಗೆ ಕ್ಲೇಮ್‌ ಮಾಡಬೇಕು. ಜನರಲ್‌ ಇನ್ಶೂರೆನ್ಸ್‌ ಪಾಲಿಸಿಗಳಲ್ಲಿ ಪ್ರೀಮಿಯಂ ಪ್ರತೀ ವರ್ಷ ಪರಿಷ್ಕರಿಸಲ್ಪಡುತ್ತದಾದರೂ, ಕಡಿಮೆ ಇವೆಯಾದ್ದರಿಂದ ಇವು ವಿಮಾ ಕ್ಷೇತ್ರದಲ್ಲಿ ಜಾಸ್ತಿ ಚಲಾವಣೆಯಲ್ಲಿವೆ. ಜನರಲ್‌ ಇನ್ಶೂರೆನ್ಸ್‌ ಕಂಪೆನಿಗಳಲ್ಲೂ ಸರಕಾರಿ ಕಂಪೆನಿಗಳು  ಗ್ರಾಹಕರ ಸೇವೆ,  ಕ್ಲೇಮ್‌ ಸೆಟಲ್‌ಮೆಂಟ್‌ ಮತ್ತು ಪ್ರೀಮಿಯಂಗಳ ಆಧಾರದಲ್ಲಿ ಖಾಸಗಿ ಕಂಪೆನಿಗಳಿಗಿಂತ ಉತ್ತಮ ಎಂದು ಅನುಭವಿ ಜನರು ವ್ಯತ್ಯಾಸ ಗುರುತಿಸುತ್ತಾರೆ.  

      3.  ಆರೋಗ್ಯ ವಿಮೆಗಾಗಿಯೇ ಹುಟ್ಟಿಕೊಂಡಿರುವಂಥ ಕಂಪೆನಿಗಳು (Max Bupa, Star Health, Apollo Munich) ಈ ಕ್ಷೇತ್ರದಲ್ಲಿ ಪ್ರವೀಣರು. ಇದರಲ್ಲಿ ಮಕ್ಸ್‌ ಬೂಪಾದಲ್ಲಿ ಪಾಲಿಸಿಯನ್ನು ಜೀವನ ಪರ್ಯಂತ ಊರ್ಜಿತಗೊಳಿಸುತ್ತಾ ಹೋಗಬಹುದು ಮತ್ತು ಆಸ್ಪತ್ರೆ ವೆಚ್ಚ ಗಳನ್ನು ಪೂರ್ಣವಾಗಿ ಯಾವುದೇ ಉಪಮಿತಿಯಿಲ್ಲದೆ ಭರಿಸುತ್ತವೆ. ಅಪೊಲೋ ಮ್ಯುನಿಚ್‌ ಕೂಡ ಜೀವನಪರ್ಯಂತ ಊರ್ಜಿತಗೊಳಿಸಬಹು ದಾದಂತಹ ಮತ್ತು ದಿನ ಲೆಕ್ಕದಲ್ಲಿ ನಿರ್ದಿಷ್ಟ ಮೊತ್ತ ನೀಡುವ ಪಾಲಿಸಿ.

      ಹೀಗೆ ಆರೋಗ್ಯ ವಿಮೆಯ ಪಾಲಿಸಿಗಳಲ್ಲಿ ಹಲವು ವಿಧಗಳಿವೆ. ಅವುಗಳ ವಿವರಗಳನ್ನು ಸರಿಯಾಗಿ ಅರಿತುಕೊಂಡೇ ಮುಂದುವರಿಯಬೇಕು. ಆರೋಗ್ಯ ವಿಮೆ ಪಾಲಿಸಿಗಳಲ್ಲಿ ಮತ್ತು ಮೊಬೈಲ್‌ ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್‌ ಎಂದು ಹೇಳುವುದು ಕಷ್ಟ. ಎಲ್ಲವೂ ಅವರವರ ಸಂದರ್ಭ, ಅಗತ್ಯ, ಅನುಕೂಲಗಳನ್ನು ಹೊಂದಿಕೊಂಡಿರುತ್ತದೆ. ಸರಿಯಾಗಿ ಅಧ್ಯಯನ ಮಾಡುವುದಕ್ಕೆ ಪರ್ಯಾಯವಿಲ್ಲ. ಅದಲ್ಲದೆ ಪ್ರತಿ ಪಾಲಿಸಿ/ಕಂಪೆನಿಯ ಬಗ್ಗೆಯೂ ಅನುಭವಸ್ಥರಿಂದ ಕೇಳಿ ತಿಳಿದುಕೊಳ್ಳುವುದು ಉತ್ತಮ. ರೀಮು ಗಟ್ಟಲೆ ಮೈಕ್ರೋಸ್ಕೋಪಿಕ್‌ ಅಕ್ಷರಗಳನ್ನು ಓದಿ ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಒಂದು ಸ್ಕೀಮನ್ನು ಮಾಡಿಸಿಕೊಂಡು ಅನುಭವ ಇರುವವರ ಹತ್ತಿರ ಅದರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ತಿಳಿದುಕೊಳ್ಳುವುದು ಉತ್ತಮ. ಕಳೆದ ವಾರ ತಿಳಿಸಿದಂತೆ ಪ್ರೀಮಿಯಂ, ಆನ್‌ಲೈನ್‌ ಪ್ರೀಮಿಯಂ, ವಿಮಾ ಮೊತ್ತ, ಉಪಮಿತಿಗಳು, ಹೊರತುಗಳು, ಪೂರ್ವಭಾವಿ ಕಾಯಿಲೆ ಗಳು, ವೈಟಿಂಗ್‌ ಪೀರಿಯಡ್‌, ರೀನ್ಯೂ ಮಾಡಲು ಅಂತಿಮ ಪ್ರಾಯ, ಸೆಟ್ಲಮೆಂಟ್‌ ವಿಧಾನ, ನಿರ್ದಿಷ್ಟ ಆಸ್ಪತ್ರೆಗಳ ಪಟ್ಟಿ ಇತ್ಯಾದಿ ವಿಚಾರಗಳನ್ನು ಸರಿಯಾಗಿ ತಿಳಿದುಕೊಂಡು ನಮ್ಮ ನಮ್ಮ ವಾಸ್ತವಕ್ಕೆ ಸೂಕ್ತ ಪಾಲಿಸಿ ಮಾಡಿ  ಕೊಳ್ಳಬೇಕು. ಸರ್ವತ್ರ ಸೂಕ್ತವಾದ ಒಂದು ಬೆಸ್ಟ್‌ ಪಾಲಿಸಿ ಎಂಬುದಿಲ್ಲ. ಹಾಗಿದ್ದಲ್ಲಿ ಇಷ್ಟೊಂದು ಕಂಪೆನಿಗಳು ಹೆಣಗಾಡುವುದಕ್ಕೆ ಅರ್ಥವೇ ಇಲ್ಲ. 

      ಫ್ಯಾಮಿಲಿ ಪ್ರೋಗ್ರಾಮ್‌

      ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಪಾಲಿಸಿ ಮಾಡಿಸಿಕೊಳ್ಳುವ ಬದಲು ಆತನ ಇಡೀ ಕುಟುಂಬಕ್ಕೆ (ಸೌ³ಸ್‌ ಮತ್ತು ಮಕ್ಕಳು) ಅನ್ವಯಿಸುವಂತೆ ಸಿಂಗಲ್‌ ಪ್ರೀಮಿಯಂ ಉಳ್ಳ ಕೌಟುಂಬಿಕ ಪಾಲಿಸಿಯನ್ನು ಮಾಡಿಸಿಕೊಳ್ಳಬಹುದು. ಅದರ ಲಾಭವನ್ನು ಯಾವುದೇ ಸದಸ್ಯ ಎಷ್ಟು ಬಾರಿಯಾದರೂ ಉಪಯೋಗಿಸಿಕೊಳ್ಳಬಹುದು. ದೊಡ್ಡವರಿಗೆ ಹಾಗೂ ಮಕ್ಕಳಿಗೆ ನಿಗದಿತ ವಯಸ್ಸು ಆದ ತತ್‌ಕ್ಷಣ ಅವರಿಗೆ ಕವರ್‌ ಇರುವುದಿಲ್ಲ. ಬಹುತೇಕ ಕಡಿಮೆ ವಯೋಮಾನದ ಕುಟುಂಬಗಳಿಗೆ ಫ್ಯಾಮಿಲಿ ಪ್ರೋಗ್ರಾಮ್‌ ಲಾಭದಾಯಕ ಹಾಗೂ ವಯಸ್ಸು ಜಾಸ್ತಿಯಾದಂತೆÇÉಾ ನಷ್ಟದಾಯಕವಾಗುತ್ತಾ ಹೋಗುತ್ತದೆ ಎಂದು ಲೆಕ್ಕಾಚಾರ ತಿಳಿಸುತ್ತದೆ.

      ಕ್ರಿಟಿಕಲ್‌ ಇಲ್‌ನೆಸ್‌ ಪಾಲಿಸಿ

      ಜೀವ ವಿಮಾ ಪಾಲಿಸಿಗಳಲ್ಲಿ ಕ್ರಿಟಿಕಲ್‌ ಇಲ್‌ನೆಸ್‌ ರೈಡರ್‌ಗಳನ್ನು ಸೇರಿಸಿಕೊಳ್ಳುವ ಪದ್ಧತಿ ಹಲವಾರು ಹೊಸ ಪಾಲಿಸಿಗಳಲ್ಲಿ ಆರಂಭವಾಗಿದೆ. ಕಿಡ್ನಿ ವೈಫ‌ಲ್ಯ, ಸ್ಟ್ರೋಕ್‌, ಕ್ಯಾನ್ಸರ್‌ ಇತ್ಯಾದಿ ಕೆಲವು ಪೂರ್ವನಿಗದಿತ ತೀವ್ರ ಕಾಯಿಲೆಗಳು ಬಂದೊದಗಿದರೆ ಪಾಲಿಸಿ ಮೊತ್ತದ ಪೂರ್ವ ನಿಯೋಜಿತ ಶೇಕಡಾ ಮೊತ್ತ ಪಾಲಿಸಿದಾರರಿಗೆ ಸಿಗುತ್ತದೆ.

      ಈ ಸೌಲಭ್ಯ ಈಗ ಒಂದು ಪ್ರತ್ಯೇಕ ಪಾಲಿಸಿಯ ರೂಪದಲ್ಲಿ ಕೂಡ ಅವತಾರವೆತ್ತಿದೆ. ಕ್ರಿಟಿಕಲ್‌ ಇಲ್‌ನೆಸ್‌ ಪಾಲಿಸಿ ಎಂಬ ನಾಮಾಂಕಿತ ಪಾಲಿಸಿಗಳು ಪ್ರತ್ಯೇಕವಾಗಿ ಸಿಗುತ್ತವೆ. ನಮೂದಿತ ಕಾಯಿಲೆಗಳು ಇವೆ ಎಂದು ದೃಢಪಟ್ಟಲ್ಲಿ ಪಾಲಿಸಿಯ ಸಂಪೂರ್ಣ ಮೊತ್ತ ಕೈಸೇರುವುದು ಮತ್ತು ಆ ಪಾಲಿಸಿ ಅಲ್ಲಿಗೆ ಕೊನೆಗೊಳ್ಳುವುದು. ಇದರಿಂದಾಗಿ ಅಗತ್ಯ ಬಂದಾಗ ಏಕಗಂಟಿನಲ್ಲಿ ದುಡ್ಡು ಕೈ ಸೇರಿದಂತಾಗುತ್ತದೆ. ಕಾಯಿಲೆ ಸಂಬಂಧಿ ಇತರ ಖರ್ಚುವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗಲು ಸಹಾಯವಾಗುತ್ತದೆ. ಈ ಸೌಲಭ್ಯ ಶಾಸ್ತ್ರೀಯವಾದ ಹೆಲ್ತ್‌ ಪಾಲಿಸಿಗಳಿಗೆ ಪೂರಕವಾಗಿ ಸಹಾಯವಾಗಬಲ್ಲದು.  

      ಪಾಲಿಸಿ ಪೋರ್ಟೆಬಿಲಿಟಿ

      ನಾವು ಪಡೆದ ಪಾಲಿಸಿಯ ಪ್ರೀಮಿಯಂ ಅನ್ನು ಹಠಾತ್ತಾಗಿ ಏರಿಸಿದರೆ ಅಥವಾ ಅವರ ಸರ್ವಿಸ್‌ ಅತ್ಯಂತ ಕಳಪೆ ಎಂದು ಕಂಡುಬಂದರೆ ನಮ್ಮನ್ನು ಅತ್ಯಂತ ಕಷ್ಟಕ್ಕೆ ದೂಡಿಬಿಡುತ್ತದೆ. ನುಂಗುವ ಹಾಗೂ ಇಲ್ಲ, ಉಗುಳುವ ಹಾಗೂ ಇಲ್ಲ. ಬೇರೊಂದು ಕಂಪೆನಿಗೆ ಹೋಗೋಣ ಎಂದರೆ ಜಾಸ್ತಿ ವಯಸ್ಸಾದ ಲೆಕ್ಕದಲ್ಲಿ ಹೊಸ ಪಾಲಿಸಿ ದುಬಾರಿ ಮತ್ತು ಸುಲಭವೇನಲ್ಲ. ಅಲ್ಲದೆ ಬೋನಸ್‌, ಪೂರ್ವಭಾವಿ ರೋಗ, ವೈಟಿಂಗ್‌ ಪೀರಿಯಡ್‌ ಎಂದೆÇÉಾ ಬೇರೆ ತೊಂದರೆಗಳು. ಇದರಿಂದಾಗಿ ಒಲ್ಲದ ಮದುವೆಯಂತೆ ಒಮ್ಮೆ ತೆಗೆದುಕೊಂಡ ಪಾಲಿಸಿಯನ್ನು ಹೇಗೋ ಸಂಬಾಳಿಸಿಕೊಂಡು ಮುಂದೆ ಹೋಗುವ ಗ್ರಹಚಾರ ನಮ್ಮೆಲ್ಲರನ್ನು ಸುತ್ತಿತ್ತು. ಆದರೆ ಇರ್ಡಾಭಾಯ್‌ ಕೃಪೆ ಯಿಂದ ಜುಲೈ 1ರಿಂದ ಆರಂಭಗೊಳ್ಳುವಂತೆ ಹೆಲ್ತ್‌ ಪಾಲಿಸಿಗಳು ಮೊಬೈಲ್‌ ನಂಬ್ರಗಳಂತೆ ಪೋಟೇìಬಲ್‌ ಆಗುವುವು. ನಮ್ಮ ಬೋನಸ್‌, ವೈಟಿಂಗ್‌ ಪೀರಿಯಡ್‌, ಪೂರ್ವಭಾವಿ ರೋಗಗಳು ಇತ್ಯಾದಿ ಎÇÉಾ ವಿಚಾರಗಳನ್ನು ಇದ್ದ ಹಾಗೆಯೇ ಇನ್ನೊಂದು ಕಂಪೆನಿಗೆ ವರ್ಗಾಯಿಸಿಕೊಂಡು ಹೊಸ ಪಾಲಿಸಿಗೆ ವಲಸೆ ಹೋಗಬಹುದಾಗಿದೆ. ಇದು ಒಂದು ವೆಲ್‌ಕಮ್‌ ಹೆಜ್ಜೆ. ಇದರಿಂದ ವಿಮಾಕಂಪೆನಿಗಳ ಸೇವೆ ಮತ್ತು ಪ್ರೀಮಿಯಂ ಮೊತ್ತ ಉತ್ತಮವಾಗುವ ನಿರೀಕ್ಷೆಯಿದೆ.

      ಅಟ್ಯಾಚ್‌ಮೆಂಟ್‌ 

      ಅಂತೂ ಇಂತೂ ಒಂದು ವಾರದ ಆಸ್ಪತ್ರೆ ವಾಸ ಅನುಭವಿಸಿ ರಾಯರ ಮಗ ಮನೆಗೆ ಬಂದ¨ªಾಯಿತು.
      ಕಿಡ್ನಿ ಸ್ಟೋನ್‌ ಅಂತೆ. ಅಸಾಧ್ಯ ನೋವು. ಟೆಸ್ಟ್‌, ಆಪರೇಶನ್‌, ಮದ್ದು ಎÇÉಾ ಸೇರಿ ಒಂದೂ ನಲವತ್ತು ಕೈಬಿಟ್ಟಿತ್ತು. ರಾಯರು ಬ್ಯಾಂಕಿಗೆ ಹೋಗಿ ಒಂದು ಎಫ್ಡಿಯನ್ನು ಮುರಿಸಿಕೊಂಡು ಬಂದರು. "ಒಂದು ವಾರ ಪೂರ್ಣ ಬೆಡ್‌ ರೆಸ್ಟ್‌ ಬೇಕು. ಜಾಸ್ತಿ ಎಗjರ್ಟ್‌ ಮಾಡ್ಕೊà ಬೇಡಿ' ಅಂತ ಎಚ್ಚರಿಸಿ ಡಾಕ್ಟರರು ರಾಯರನ್ನೂ ಮಗನನ್ನೂ ಬೀಳ್ಕೊಟ್ಟರು.

      "ಸರಿ ಇನ್ನು ಮನೆಯಲ್ಲಿ ರೆಸ್ಟ್‌ ತೆಗೊಳ್ಳೋದೇ' ಅಂತ ಮನೆಗೆ ಬಂದು ಹಾಸಿಗೆ ಮೇಲೆ ಮಲಗಿಕೊಂಡರೆ ಒಬ್ಬೊಬ್ಬರಾಗಿ ಬಂಧು ಬಳಗದವರು, ನೆಂಟರಿಷ್ಟರು, ನೆರೆಹೊರೆಯವರು ಭೇಟಿಗೆ ಬರ ತೊಡಗಿದರು. ಬಂದವರೆಲ್ಲರೂ ಮಾಮೂಲಿನಂತೆ ಸೆಕೆ, ಬೆವರು, ಉಷ್ಣಾಂಶ ಇತ್ಯಾದಿ ದಿನದ ವೆದರ್‌ ರಿಪೋರ್ಟಿನಿಂದ ಆರಂಭಿಸಿ ಕೊನೆಗೆ ರಾಯರ ಮಗನಿಗೆ ಕಿಡ್ನಿ ಸ್ಟೋನ್‌ ಪ್ರಾಬ್ಲೆಂ ಹೇಗೆ ಉಂಟಾಯಿತು ಎಂಬ ಪ್ರಶ್ನೆ ಎಸೆದು ಸುಮ್ಮನಾಗುತ್ತಾರೆ. ಈಗ ರಾಯರ ಅಸೈನ್‌ಮೆಂಟ್‌ ಶುರು... "ಮೊದಮೊದಲು ಸಣ್ಣ ನೋವು..., ಕಿಬ್ಬೊಟ್ಟೆ ಬದಿ ಯಲ್ಲಿ, ಆಮೇಲೆ ಹೇಗೆ ಅದು ಹೆಚ್ಚಾಗುತ್ತಾ ಹೋಯಿತು ಮತ್ತೆ ಹೇಗೆ ಅದು ಅಸಾಧ್ಯವೆನಿಸಿದಾಗ ಕಾರು ಮಾಡಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಯಾವ ರೀತಿಯ ಟ್ರೀಟೆ¾ಂಟ್‌ ಕೊಟ್ಟರು, ಸ್ಟೋನ್‌ ಎಷ್ಟು ದೊಡ್ಡದಿತ್ತು'... ಇತ್ಯಾದಿ ವಿವರಗಳನ್ನು ಶ್ರೋತೃ ಗಳಿಗೆ ತೃಪ್ತಿಯಾಗುವಂತೆ ಎಳ್ಳಷ್ಟೂ ರಸಭಂಗವಾಗದೆ ವಿವರಿಸ ಬೇಕಿತ್ತು. ಒಂದೆಡೆ ರಾಯರು ತನ್ನ ಭಾಷಣವನ್ನು ಚಾಚೂ ತಪ್ಪದೆ ಒಪ್ಪಿಸುತ್ತಿರುವಾಗ ಅÇÉೇ ಬೆಡ್‌ ಮೇಲೆ ಮಲಗಿದ್ದ ಮಗರಾಯ ಯಾವುದೇ ರೀತಿಯಲ್ಲಿ ರೆಸ್ಟ್‌ ತೆಗೆದುಕೊಳ್ಳಲಾರದೆ ನೋವಿನಿಂದ ಮುಖ ಕಿವುಚುತ್ತಾ ಬಂದವರಿಗೆ ಗೌರವ ಸೂಚಿಸಲಾದರೂ "ಆ...ಊ...' ಅಂತ ತಲೆದೂಗುತ್ತಾ ಪಕ್ಕವಾದ್ಯದಲ್ಲಿ ಸಹಕರಿಸಬೇಕಾಗಿತ್ತು. ಭಾಷಣ ಆರಂಭವಾಗುವಾಗ ಕಿಚನ್‌ ಒಳಗೆ ಹೋಗಿದ್ದ ಸೊಸೆ ಸ್ವಲ್ಪ ಹೊತ್ತಿನಲ್ಲಿ ಒಂದು ತಟ್ಟೆಯಲ್ಲಿ ಬೇಕರಿ ಐಟಮ್ಸ್‌ ಮತ್ತು ಕಾಫಿ/ಟೀ (ಬಂದವರ ಪಸಂದಿಗನು ಸಾರವಾಗಿ) ಮಾಡಿ ತಂದು "ತಗೊಳಿ, ತಗೊಳಿ' ಅಂತ ಸರ್ವ್‌ ಮಾಡುತ್ತಾಳೆ. "ಇದೆಲ್ಲ ಯಾಕೆ ಬೇಕಿತ್ತು? ಛೆ, ಛೆ!' ಅಂತ ನುಡಿಯುತ್ತಾ ಬಂದವರು ಅದನ್ನು ಸ್ವೀಕರಿಸುತ್ತಾರೆ.
      ಕಾಫಿ ತಿಂಡಿ ಬಂದಾಕ್ಷಣ ಆಗಮಿಸಿದ ಬಂಧುಗಳಿಗೆ ಮುಂದಿನ ಭಾಷಣ ಕೇಳಲು ಆಸಕ್ತಿ ಉಳಿದಿರುವುದಿಲ್ಲ. "ಅಂತೂ ನಿಮ್ಗೆ ಇನ್ನು ಮನೆ ಕಟಿÉಕ್ಕೆ ಕಲ್ಲಿಗೆ ಎಲ್ಲಿಗೂ ಹೋಗುದು ಬೇಡ ಮಾರಾಯೆÅà, ನಿಮೆªà ಉಂಟಲ್ಲ ಸ್ವಂತ ಪ್ರೊಡಕ್ಷನ್‌' ಎಂಬ ಅಪ್ಪಟ ಹಳಸಲು ಜೋಕನ್ನು ತಾವೇ ಮೊತ್ತಮೊದಲು ಸಂಶೋಧಿಸಿ ಕಂಡು ಹಿಡಿದವರ ಧಾಟಿಯಲ್ಲಿ ಒದರಿ ತಾವೇ "ಹØ... ಹØ... ಹØ...' ಅಂತ ಜೋರಾಗಿ ನಗುತ್ತಾರೆ. ಬಂದವರೆಲ್ಲರೂ ನಿಷ್ಠೆಯಿಂದ ಹೇಳುವ ಈ ಜೋಕಿಗೆ ರಾಯರ ಮನೆಯಲ್ಲಿ ಸಿಲ್ವರ್‌ ಜಿಬ್ಲಿ ಆಗಿ ನಾರುತ್ತಿದ್ದರೂ ಎಲ್ಲರಿಗೂ ಕಾಟಾಚಾರಕ್ಕಾಗಿ ಒಮ್ಮೆ ಜೋರಾಗಿ ನಗಬೇಕಾಗುತ್ತದೆ. ರಾಯರ ಮಗನಿಗೆ ಇವೆÇÉಾ ಸರ್ಕಸ್‌ಗಳಲ್ಲಿ ಪಾಲ್ಗೊಂಡು ಕಿಬ್ಬೊಟ್ಟೆ ನೋವು ಇನ್ನೂ ಜೋರಾಗುತ್ತದೆ. ಅಷ್ಟರಲ್ಲಿ, ಬಂದವರು "ಸರಿ ಹಾಗಿದ್ರೆ, ಆಲ್‌ ದ ಬೆಸ್ಟ್‌, ಇನ್ನು ನೀವು ರೆಸ್ಟ್‌ ತಗೋಳಿ, ಅಸಡ್ಡೆ ಮಾಡಬೇಡಿ. ಇದಕ್ಕೆ ಫ‌ುಲ್‌ ಬೆಡ್ರೆಸ್ಟ್‌ ಭಾರೀ ಮುಖ್ಯ' ಅಂತ ಪುಕ್ಕಟೆ ಸಲಹೆ ನೀಡಿ ಎರಡೆರಡು ಬಾರಿ ನಮಸ್ಕರಿಸಿ ಜಾಗ ಖಾಲಿ ಮಾಡುತ್ತಾರೆ.

      "ಅಬ್ಬಬ್ಟಾ ಬದುಕಿದೆ, ಇನ್ನಾದರೂ ಸ್ವಲ್ಪ$ರೆಸ್ಟ್‌ ತಗೋಳ್ಳೋಣ' ಅಂತ ರಾಯರ ಮನೆ ಮಂದಿ ಉಸಿರು ಬಿಟ್ಟ ಮರುಕ್ಷಣ ಮನೆಹೊರಗೆ ಮೊಳಗುವ ಸ್ಕೂಟರಿನ ಸದ್ದು ಇನ್ನೊಂದು ದಂಪತಿಯ ಆಗಮನವನ್ನು ಸೂಚಿಸುತ್ತದೆ- ಆರೋಗ್ಯ ವಿಚಾರಿಸಲು! ರಾಯರ ಮುಖ ಗಂಟಿಕ್ಕುತ್ತದೆ, ಮಗನಿಗೆ ಸಿಟ್ಟು ಬರುತ್ತದೆ. ಸೊಸೆ ಇನ್ನು ಹಾಲೆಷ್ಟು ಉಳಿದಿದೆ ಎಂದು ಚೆಕ್‌ ಮಾಡಲು ಕಿಚನ್‌ ಒಳಗೆ ಓಡುತ್ತಾಳೆ.
      ಇಡೀ ಮನೆಯ ವಾತಾವರಣ ಹೇಗೆ ಇದೆ ಎಂದರೆ ಖ್ಯಾತ ಹಾಸ್ಯಗಾರ್ತಿ ಸುಕನ್ಯಾ ಕಳಸ ತನ್ನ ಪತಿಗೆ ಸರ್ಪಸುತ್ತು ಆದ ಸಂದರ್ಭ ದಲ್ಲಿ ಬರೆದ ಹಾಸ್ಯ ಲೇಖನದಲ್ಲಿ ವಿವರಿಸಿದಂತೆ...

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus