ಅಶೋಕ್ ಕುಮಾರ್ ಎ. | May 16, 2011
ಗೂಗಲ್ ಕ್ರೋಮ್‌ಬುಕ್
ಗೂಗಲ್ ತನ್ನದೇ ಆದ ಆಪರೇಟಿಂಗ್ ವ್ಯವಸ್ಥೆ ಯನ್ನು ಅಭಿವೃದ್ಧಿ ಪಡಿಸುವ ವಿಷಯ ಹಳೆಯದು. ಈಗದು ಸಿದ್ಧವಾಗಿದೆ. ಅಷ್ಟೇ ಅಲ್ಲ, ಅದನ್ನು ಅಳವಡಿ ಸಿದ, ಲ್ಯಾಪ್‌ಟಾಪ್ ಸಾಧನವನ್ನೂ ಗೂಗಲ್ ಕ್ರೋಮ್‌ಬುಕ್ ಎನ್ನುವ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಏಸರ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ಈ ಲ್ಯಾಪ್‌ಟಾಪ್ ತಯಾರಿಸಿವೆ. ಎರಡು ನಮೂನೆಯ ಕ್ರೋಮ್‌ಬುಕ್‌ಗಳು ಲಭ್ಯ. ಕಡಿಮೆಯೆಂದರೆ 350 ಡಾಲರು ಬೆಲೆ. ಜೂನ್ ಮಧ್ಯಭಾಗ ದಿಂದ ಮಾರುಕಟ್ಟೆ ಯಲ್ಲಿ ಲಭಿಸುವ ನಿರೀಕ್ಷೆಯಿದೆ.
ತ್ರಿಜಿ ಸಜ್ಜಿತ ಕ್ರೋಮ್‌ಬುಕ್ ಕೂಡ ಸಿಗುವ ನಿರೀಕ್ಷೆಯಿದೆ. ಕ್ರೋಮ್‌ಬುಕ್‌ನ ವಿಶೇಷ ವೆಂದರೆ, ಇದನ್ನು ಬಳಕೆ ಮಾಡುವುದು ಬಹು ಸುಲಭ. ಕ್ರೋಮ್‌ಬುಕ್‌ನಲ್ಲಿ ಬ್ರೌಸರ್ ಹೊರತು ಇತರ ಯಾವುದೇ ತಂತ್ರಾಂಶ ಇರದು. ಕ್ರೋಮ್‌ಬುಕ್ ಏಳೆಂಟು ಸೆಕೆಂಡುಗಳಲ್ಲಿ ಬೂಟ್ ಆಗಿ, ಅಂತ ರ್ಜಾಲಕ್ಕೆ ಸಂಪರ್ಕ ಹೊಂದುತ್ತದೆ. ಎಲ್ಲಾ ಕೆಲಸಗಳಿಗೆ ಅಂತರ್ಜಾಲದಲ್ಲಿ ಲಭ್ಯವಿರುವ ತಂತ್ರಾಂಶಗಳನ್ನು ಬಳಸಬಹುದು.
ಕೌಡ್‌ಕಂಪ್ಯೂಂಟಿಂಗ್ ಆಧಾರಿತ ಸಾಧನವಾಗಿರುವುದರಿಂದ ಜನಸಾಮಾನ್ಯರಿಗೂ ಬಳಕೆ ಸುಲಭ. ಯುಎಸ್‌ಬಿ ಸಾಧನಗಳನ್ನು ಸಂಪರ್ಕಿಸಿ ದಾಗ ಕ್ರೋಮ್‌ಬುಕ್ ಅದನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ಕಡತಗಳ ವಿಲೇವಾರಿಗೂ ಸವಲತ್ತಿದೆ. ಮೈಕ್ರೋಸಾಫ್ಟ್ಗೆ ಗೂಗಲ್‌ನ ಸವಾಲಿದು.
ಮೈಕ್ರೋಸಾಫ್ಟ್ ಬಗಲಲ್ಲಿ ಸ್ಕೆ„ಪ್

ಸ್ಕೆ„ಪ್ ಮೂಲಕ ಕರೆಗಳನ್ನು ಮಾಡುವ ಮಿಲಿಯ ಗಟ್ಟಲೆ ಬಳಕೆದಾರರಿದ್ದಾರೆ. ಅಂತರ್ಜಾಲ ಮೂಲಕ ಕಂಪ್ಯೂಟರ್‌ನಿಂದ ಕಂಪ್ಯೂಟರಿಗೆ, ಮೊಬೈಲಿಗೆ ಅಥವಾ ಲ್ಯಾಂಡ್‌ಲೈನಿಗೆ ಕರೆಗಳನ್ನು ಮಾಡುವುದು ಸಾಧ್ಯ. ಮೈಕ್ರೋಸಾಫ್ಟ್ ಇನ್ನು ತನ್ನ ಔಟ್‌ಲುಕ್, ಹಾಟ್‌ಮೈಲ್, ಎಕ್ಸ್‌ಬಾಕ್ಸ್ ಮುಂತಾದವುಗಳ ಜತೆಗೂ ಸ್ಕೆ„ಪ್ ಬಳಕೆಯನ್ನು ಸಾಧ್ಯವಾಗಿಸಬಹುದು. ಸ್ಕೆ„ಪ್‌ನ ಮಿಲಿಯಗಟ್ಟಲೆ ಬಳಕೆದಾರರನ್ನು ಅಸಮಾಧಾನಕ್ಕೀಡು ಮಾಡದೆ, ಅವರಿಗೆ ಸ್ಕೆ„ಪನ್ನು ಹಿಂದಿನಂತೆಯೇ ಬಳಸಲು ಬಿಡುವುದರಲ್ಲಿ ಮೈಕ್ರೊಸಾಫ್ಟಿನ ಯಶಸ್ಸು ಅಡಗಿದೆ ಎಂದು ತಜ್ಞರ ಅನಿಸಿಕೆ. ಇ-ಬೇಯನ್ನೂ ಈಗ ಮೈಕ್ರೋಸಾಫ್ಟ್ ಖರೀದಿಸುವುದರಲ್ಲಿದೆ.
ಗೂಗಲ್ ಕೂಡಾ ಒಂದೊಮ್ಮೆ ಸ್ಕೆ„ಪನ್ನು ಖರೀದಿಸುವ ಉದ್ದೇಶ ಹೊಂದಿತ್ತು. ಕೊನೆಗೆ, ಸ್ಕೆ„ಪ್‌ನ ಕಡತ ವಿನಿಮಯ ಸೇವೆ ಅದಕ್ಕೆ ಅಡ್ಡಿಯಾಯಿತು. ಈ ಸೇವೆಯು ಗೂಗಲ್‌ನ ಕೌÉಡ್ ಕಂಪ್ಯೂಂಟಿಂಗ್ ಮಾದರಿಗೆ ಹೊಂದಿಕೆ ಯಾಗುತ್ತಿರಲಿಲ್ಲ. ಮಾತ್ರವಲ್ಲ, ತನ್ನ ಲಕ್ಷಾಂತರ ಬಳಕೆದಾರರು ಸ್ಕೆ„ಪನ್ನು ಈಗಾಗಲೇ ಬಳಸುತ್ತಿರುವಾಗ, ಅದನ್ನು ಖರೀದಿಸಿ ಸಾಧಿಸುವುದೇನನ್ನು ಎನ್ನುವುದು ಗೂಗಲ್ ಕಂಪೆನಿಯ ಮುಂದಿದ್ದ ಪ್ರಶ್ನೆಯಾಗಿತ್ತು.
ರೊಬೋಟ್: ನಡಿಗೆ ದಾಖಲೆ
ಕಾರ್ನೆಲ್ ರೇಂಜರ್ ಎಂಬ ರೊಬೋಟ್ ನಲುವತ್ತೂವರೆ ಮೈಲು ದೂರವನ್ನು ಕ್ರಮಿಸಿ ದಾಖಲೆ ನಿರ್ಮಿಸಿದೆ. ಸತತ ನಡಿಗೆಯ ಮೂಲಕ ಈ ದೂರ ವನ್ನು ಕ್ರಮಿಸಿದ್ದು ಒಂದು ದಾಖಲೆ. ಈ ಅವಧಿ ಯಲ್ಲಿ ಅದನ್ನು ಯಾರು ಮುಟ್ಟಲೂ ಇಲ್ಲ. ಅದರ ಬ್ಯಾಟರಿ ರಿಚಾರ್ಜ್ ಮಾಡುವ ಅಗತ್ಯವೂ ಬರಲಿಲ್ಲವೆನ್ನುವುದು ಬಹುಮುಖ್ಯ ವಿಷಯ. ಮನುಷ್ಯ ಗಾತ್ರದ ಇದು, ನಾಲ್ಕು ಕಾಲಿನಲ್ಲಿ ನಡೆಯುತ್ತದೆ. ಈ ರೊಬೋಟನ್ನು ಕಾರ್ನೆಲ್ ವಿವಿಯ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ. ಅದಕ್ಕೆ ಈ ದೂರವನ್ನು ಕ್ರಮಿಸಲು ಸುಮಾರು 31 ತಾಸು ಬೇಕಾಯಿತು. ಈ ರೊಬೋಟ್ ತೂಕ 22 ಪೌಂಡ್, ಅದರಲ್ಲಿ ಆರು ಆನ್‌ಬೋರ್ಡ್ ಕಂಪ್ಯೂಟರುಗಳನ್ನು ಬಳಸಲಾಗಿದೆ. ರೊಬೋಟಿನ ದಕ್ಷತೆಗೆ ಮುಖ್ಯ ಕಾರಣ ಅದರ ವಿನ್ಯಾಸ.
ತರಗತಿಯಲ್ಲಿ ಮೌನ: ಚರ್ಚೆ
ತರಗತಿಯಲ್ಲಿ ಪದ್ಯವನ್ನು ವಿವರಿಸಿ, ಅದರ ಬಗ್ಗೆ ಚರ್ಚಿಸಲು ಟ್ವಿಟರ್ ಬಳಸಿದ ಕಾರಣ, ಮಾತಿಲ್ಲದೆ ಪದ್ಯದ ಬಗ್ಗೆ ಚರ್ಚೆ ಸಾಧ್ಯವಾಯಿತು. ಈ ನವೀನ ಪ್ರಯೋಗ ನಡೆದದ್ದು ಅಯೋವಾ ವಿವಿಯ ತರಗತಿಯಲ್ಲಿ. ವಿದ್ಯಾರ್ಥಿಗಳು ಟ್ವಿಟರ್ ಸಂದೇಶಗಳ ಮುಖಾಂತರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡದ್ದರಿಂದ ತರಗತಿಯಲ್ಲಿ ಚರ್ಚೆ ಗದ್ದಲ ವೆಬ್ಬಿಸಲಿಲ್ಲ. ಪ್ರತಿಯೊಬ್ಬರೂ ತಮಗನಿಸಿದ್ದನ್ನು ಹೇಳಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಪ್ರಶ್ನೆ ಗಳನ್ನು ಕೇಳುವುದಕ್ಕೂ ಟ್ವಿಟರನ್ನೇ ಬಳಸಿದ್ದರು. ಟ್ವಿಟರಿ ನಂತಹ ತಾಣಗಳು ಲೈವ್ ಪಟ್ಟಾಂಗ ಅಥವಾ ವಿಚಾರ ವಿನಿಮಯಕ್ಕೆ ಅವಕಾಶ ನೀಡುವ ಕಾರಣ ಇದನ್ನು ಇಷ್ಟಪಡುವ ಶಿಕ್ಷಕರು ಹೆಚ್ಚುತ್ತಿದ್ದಾರೆ.
ಸುಸ್ಪಷ್ಟ ತೆರೆ

ಸ್ಯಾಮ್‌ಸಂಗ್ ಈಗ ತನ್ನ ಮೊಬೈಲ್ ಸಾಧನಗಳಿಗೆ ಸುಸ್ಪಷ್ಟ ತೆರೆಯನ್ನು ಅಭಿವೃದ್ಧಿ ಪಡಿಸಿದೆ. ಅದು 2560x1600 ಪಿಕ್ಸೆಲ್‌ಗಳದ್ದು, ಬಳಸುವ ವಿದ್ಯುತ್ಛಕ್ತಿಯ ಪ್ರಮಾಣ ಬಹಳ ಕಡಿಮೆ. ಶೇ. 40ರಷ್ಟು ಕಡಿಮೆ ಶಕ್ತಿ ಬಳಸುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನುಗಳಲ್ಲಿ ಬಳಸಬಹುದಾದ ಈ ತೆರೆ ಹೈಡೆಫಿನಿಶನ್ ಟಿವಿ ತೆರೆಯಷ್ಟು ಕ್ಷಮತೆ ಹೊಂದಿದೆ.
ತುಷಾರ: ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ, ತುಷಾರ ಮಾಸ ಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಮಾಳದ ಡಾ| ನಿರಂಜನ್ ಚಿಪ್ಳೂಣ್‌ಕರ್, ಉಪಪ್ರಾಂಶುಪಾಲ, ಎನ್‌ಎಂಎಎಂ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ.
(ಉತ್ತರ nistantusansaara@gmail.comಗೆ ಮೈಲ್ ಮಾಡಿ, ವಿಷಯ: NS31 ನಮೂದಿಸಿ.)
* ಕನ್ನಡ ವಿಕಿಪೀಡಿಯಾದಲ್ಲಿ ಎಷ್ಟು ಬರಹ ಗಳಿವೆ? (ನಿಮ್ಮದೇ ಬರಹ ಇದ್ದರೆ ಕೊಂಡಿ ನೀಡಿ.)
ಕಳೆದ ವಾರದ ಸರಿಯುತ್ತರ: * ಕನ್ನಡ ನಿಘಂಟು ಲಭ್ಯವಿರುವ ಎರಡು ಕೊಂಡಿಗಳು:
http://kn.wiktionary.org ಮತ್ತು http://www.baraha.com/kannada/ ಬಹುಮಾನಿತರು ಕೆ. ಎನ್. ಪರಾಂಜಪೆ, ಬೆಂಗಳೂರು. ಅಭಿನಂದನೆಗಳು.