Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
    • ಮೋಡ ಮುಸುಕಿ, ಚಂದ್ರದರ್ಶನ ವಾಗದ ಭಾರತವಾಸಿಗಳೂ ಗ್ರಹಣ ದೃಶ್ಯವನ್ನು ಇಲ್ಲಿ ನೋಡಿ ತೃಪ್ತಿಪಟ್ಟರು.

      • Udayavani | Jun 20, 2011

        ಗ್ರಹಣ: ಆನ್‌ಲೈನ್‌ ಕವರೇಜ್‌

        ಈ ಸಲದ ಗೂಗಲ್‌ ಡೂಡಲ್‌ನಲ್ಲಿ ಸ್ಪೆಷಲ್‌ ಏನು ಗೊತ್ತೇ? ದೀರ್ಘ‌ ಗ್ರಹಣದ ಡೂಡಲ್‌! ಮಾತ್ರವಲ್ಲ, ಗ್ರಹಣದ ದೃಶ್ಯಾವಳಿಗಳ ಲೈವ್‌ ಕವರೇಜನ್ನೂ ಒದಗಿಸ ಲಾಯಿತು. ಹಲವರು ಗ್ರಹಣವನ್ನು ಕುಳಿತಲ್ಲೇ ಕಂಪ್ಯೂಟರ್‌ನಲ್ಲಿ ವೀಕ್ಷಿಸಿದರು. ಉತ್ತರ ಅಮೆರಿಕದಲ್ಲಿ ಆಗ ಹಗಲು, ಆದ್ದರಿಂದ ಗ್ರಹಣ ಲಭ್ಯವಿರಲಿಲ್ಲ. ದ. ಆಫ್ರಿಕಾ, ದುಬೈ ಮತ್ತು ಕ್ಯಾನರಿ ದ್ವೀಪಗಳಿಂದ ಗ್ರಹಣದ ನೇರ ದೃಶ್ಯಾವಳಿಗಳು ಅಂತರ್ಜಾಲಿಗರಿಗೆ ಲಭ್ಯ ವಾಯಿತು. ಎರಡು ನಿಮಿಷಗಳಿಗೊಮ್ಮೆ ಗ್ರಹಣ ದೃಶ್ಯ ಬದಲಾಗುತ್ತಿತ್ತು. ಮೋಡ ಮುಸುಕಿ, ಚಂದ್ರದರ್ಶನ ವಾಗದ ಭಾರತವಾಸಿಗಳೂ ಗ್ರಹಣ ದೃಶ್ಯವನ್ನು ಇಲ್ಲಿ ನೋಡಿ ತೃಪ್ತಿಪಟ್ಟರು.

        ಗುಟ್ಟು   ರಟ್ಟಾಗಿಸಿ!

        ವಿಕಿಲೀಕ್ಸ್‌ ತಾಣದ ಮೂಲಕ ಹಲವು ದೇಶಗಳ ಗುಟ್ಟುಗಳು ಬಹಿರಂಗವಾಗಿ, ಗುಲ್ಲಾದದ್ದು ಈಗ ಹಳೆಯ ಸುದ್ದಿ. ಕಚೇರಿ, ಆಡಳಿತಗಳ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ಇರುವವರು ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಈಗ ಅನೇಕ ತಾಣಗಳು ಲಭ್ಯವಾಗಿವೆ. ಕೆಲವು ತಾಣಗಳಂತೂ ಮಾಹಿತಿ ಹಂಚಿಕೊಳ್ಳುವವರ ವಿವರಗಳೂ ಗೌಪ್ಯವಾಗಿರುವಂತೆ ಎಚ್ಚರಿಕೆ ತೆಗೆದು ಕೊಳ್ಳುತ್ತವೆ. ಬಾಲ್ಕನ್‌ಲೇಕ್ಸ್‌, ಇಂಡೊಲೀಕ್ಸ್‌ ಅಂತಹ ತಾಣಗಳು. ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯೂ ಗುಟ್ಟು ರಟ್ಟಾಗಿಸಲು ಸೇಫ್ಹೌಸ್‌ ಅನ್ನುವ ತಾಣವನ್ನು ಒದಗಿಸಿದೆ. ಗೌಪ್ಯತೆಯನ್ನು ಕಾಯ್ದುಕೊಳ್ಳುವ ಮಟ್ಟಿಗೆ ಪತ್ರಿಕೆ ಸೀಮಿತ ಆಶ್ವಾಸನೆಯನ್ನಷ್ಟೇ ನೀಡುತ್ತಿದೆ. ಕೋರ್ಟು ಖಟ್ಲೆಯ ಸಂದರ್ಭದಲ್ಲಿ ಮಾಹಿತಿದಾರನ ಮೂಲವನ್ನು ಬಹಿರಂಗ ಪಡಿಸುವ ಅನಿವಾರ್ಯತೆಯನ್ನು ತಾಣದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಓಪನ್‌ಲೀಕ್ಸ್‌ ತಾಣ ಆ ಮಟ್ಟಿಗೆ ಹೆಚ್ಚು ನಂಬಿಕೆಗೆ ಅರ್ಹ. ಆದರೆ ಅದಿನ್ನೂ ಸಂಪೂರ್ಣ ಸಿದ್ಧವಾಗಿಲ್ಲ. ಮಾಹಿತಿದಾರನ ತಾಣ ಯಾವುದೆನ್ನುವುದನ್ನು ಗುಪ್ತವಾಗಿರಿಸಲು ತಂತ್ರಾಂಶ ಗಳೂ ಇವೆ. ಟೋರ್‌ ಎನ್ನುವ ತಂತ್ರಾಂಶ ಅಂತರ್ಜಾಲ ದಲ್ಲಿ ಹರಡಿರುವ ಸ್ವಯಂಸೇವಕರ ಗಣಕಗಳ ಸಹಾಯ ಪಡೆದು, ಮೂಲವನ್ನು ಮರೆಮಾಚುವ ತಂತ್ರವನ್ನು ಬಳಸುತ್ತದೆ.

        ಜನಪ್ರಿಯ ಗುಪ್ತ ಸಂಖ್ಯೆಗಳು

        ಫೋನನ್ನು ಲಾಕ್‌ ಮಾಡಲು ಬಳಸುವ ಗುಪ್ತ ಸಂಖ್ಯೆಗಳ ಪೈಕಿ ಅತ್ಯಧಿಕ ಜನರು ಬಳಸುವ ಸಂಖ್ಯೆಗಳು ಯಾವುವು? 1234, 0000, 2580 (ಫೋನ್‌ ಕೀಪ್ಯಾಡಿನ ಮಧ್ಯದ ಸಾಲಿನ ಕೀಲಿಯಲ್ಲಿರುವ ಅಂಕಿ ಗಳು), 1111 ಮತ್ತು 5555. ಇನ್ನೊಂದು ಜನಪ್ರಿಯ ಸಂಖ್ಯೆಯೆಂದರೆ 5683, ಇವು "ಲವ್‌' ಎನ್ನುವ ಪದವನ್ನು ಟೈಪಿಸಲು ಬೇಕಾದ ಕೀಲಿಗಳಲ್ಲಿರುವ ಅಂಕಿಗಳು. ಉಳಿದ ಸಂಖ್ಯೆಗಳು 0852, 2222, 1212 ಮತ್ತು 1998. ಆ್ಯಪಲ್‌ ಐಫೋನ್‌ನ್ನು ಲಾಕ್‌ ಮಾಡಲು ಬಳಕೆಯಾಗುವ ಸಂಖ್ಯೆಗಳನ್ನು ಡೇನಿಯಲ್‌ ಅನಾಟಲಿ ಎನ್ನುವ ತಂತ್ರಜ್ಞ ತನ್ನ ಭದ್ರತಾ ತಂತ್ರಾಂಶದ ಮೂಲಕ ಕಂಡುಕೊಂಡಾಗ ಈ ವಿಷಯ ತಿಳಿಯಿತು. ನಾಲ್ಕಂಕಿ ಬಳಸಿ 0000-9999ರವರೆಗಿನ ಹತ್ತು ಸಾವಿರ ವಿವಿಧ ಸಂಖ್ಯೆಗಳನ್ನು ಬಳಸುವ ಆಯ್ಕೆ ಯಿದ್ದರೂ, ಜನರು ಸಾಮಾನ್ಯವಾಗಿ ಮೊದಲು ಹೇಳಿದ ಹತ್ತು ಸಂಖ್ಯೆಗಳನ್ನೇ ಬಳಸಿ, ತಮ್ಮ ಸಾಧನದ ಭದ್ರತೆಗೆ ಕುಂದು ತಂದುಕೊಳ್ಳುತ್ತಾರೆ. ಓದುಗರು ಇಂತಹ ಸಂಖ್ಯೆಗಳನ್ನು ಬಳಸದೆ ಇರುವುದು ಕ್ಷೇಮ.

        ಅಗ್ಗದ ಸಾಧನ ಎಲ್ಲಿ ಲಭ್ಯ?

        http://www.shopobot.com/ ಒಂದು ಹೊಸ ರೀತಿಯ ತಾಣ. ಈ ತಾಣ ಅಮೇಜಾನ್‌, ವಾಲ್‌ ಮಾರ್ಟ್‌, ನ್ಯೂಎಗ್‌ ಮುಂತಾದ ಪ್ರಸಿದ್ಧ ತಾಣಗಳಲ್ಲಿ ವಿವಿಧ ಸಾಧನಗಳ ದರಗಳೆಷ್ಟಿವೆ ಎನ್ನುವುದನ್ನು ಪರಿಶೀಲಿಸುತ್ತಿರುತ್ತದೆ. ಇದು ಸ್ವಯಂಚಾಲಿತ ವ್ಯವಸ್ಥೆ. ವಿವಿಧ ಸಾಧನಗಳನ್ನು ವಿವಿಧ ಹೊತ್ತಿನಲ್ಲಿ ವಿವಿಧ ತಾಣಗಳು ಬೇರೆ ಬೇರೆ ಬೆಲೆಯಲ್ಲಿ ಮಾರುತ್ತಿರುತ್ತವೆ. ಶಾಪೋಬೋಟ್‌ ತಾಣಕ್ಕೆ ಭೇಟಿ ನೀಡಿದವರಿಗೆ ಯಾವುದೇ ಸಾಧನ ಅಗ್ಗದಲ್ಲಿ ಮಾರಾಟ ಆಗುತ್ತಿರುವ ಸ್ಟೋರ್‌ ಯಾವುದು ಮತ್ತು ಎಷ್ಟು ಹೊತ್ತಿಗೆ ಬೆಲೆ ಕಡಿಮೆ ಎನ್ನುವುದು ತಿಳಿಯುತ್ತದೆ. ಇದರ ಲಾಭ ವನ್ನು ಗ್ರಾಹಕರು ಪಡೆಯಬಹುದು.

        ಕೂಲಿ: ಬ್ರಾಡ್‌ಬ್ಯಾಂಡ್‌ಗಿಲ್ಲ

        ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ರಸ್ತೆ ದುರಸ್ತಿಯಂತಹ ಕೆಲಸಗಳನ್ನು ಮಾಡಿಸಲು ಅನುಮತಿಯಿದೆ. ಪ್ರತಿ ಹಳ್ಳಿಗೂ ಬ್ರಾಡ್‌ಬ್ಯಾಂಡ್‌ ಸಂಪರ್ಕ ಒದಗಿಸುವ ಯೋಜನೆಗೆ ಕೇಬಲ್‌ ಜಾಲ ನಿರ್ಮಾಣವಾಗಬೇಕಷ್ಟೇ? ಇದನ್ನೂ ಉದ್ಯೋಗ ಖಾತರಿ ಯೋಜನೆಯನುಸಾರ ಮಾಡಿಸಲು ಅನುಮತಿ ಕೊಡಬೇಕೆಂದು ದೂರಸಂಪರ್ಕ ಇಲಾಖೆಯು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿತ್ತು. ಎರಡು ಲಕ್ಷ ಕಿ. ಮೀ. ಉದ್ದಕ್ಕೆ ಕೇಬಲ್‌ ಅಳವಡಿಸಲು ಈ ಯೋಜನೆಯಡಿ ಕೆಲಸದವರು ಲಭ್ಯರಾಗಿದ್ದರೆ ಕೆಲಸ ಚುರುಕಾಗಿ ನಡೆಯಲು ಸಾಧ್ಯ ವಿತ್ತು. ಕೇಬಲ್‌ ಜಾಲಕ್ಕೆ ಬೇಕಾದ ಹೂಡಿಕೆಯೂ ಕಡಿಮೆಯಾಗುತ್ತಿತ್ತು. ಆದರೆ ವಿಶ್ವಬ್ಯಾಂಕ್‌ನ ಉದ್ಯೋಗ ಖಾತರಿ ಯೋಜನೆಯಲ್ಲಿ ಇಂತಹ ಕೆಲಸ ಒಳಗೊಳ್ಳದೆ ತೊಡಕಾಗಿದೆ.

        ಐಬಿಎಂ: ನೂರು

        ಐಬಿಎಂ ಕಂಪೆನಿ ಈಗ ನೂರು ವರ್ಷ ಪೂರೈಸಿದೆ. ಮೊದಲ ಪಿಸಿ, ಎಟಿಎಂ ಸಾಧನಗಳು ಐಬಿಎಂನ ಕೊಡುಗೆ. ಈಗ ತಂತ್ರಾಂಶ, ಯಂತ್ರಾಂಶ ಮತ್ತು ವಿವಿಧ ಸೇವೆಗಳ ಪೂರೈಕೆಯ ಮೂಲಕ ಕಂಪೆನಿ ಚಲಾವಣೆಯಲ್ಲಿದೆ. 1911ರ ಜೂನ್‌ 16ರಂದು ಈ ಕಂಪೆನಿಯ ಸ್ಥಾಪನೆಯಾಯಿತು. ತಂತ್ರಜ್ಞಾನ ದಿಗ್ಗಜರಲ್ಲಿ ಐಬಿಎಂ ಕೂಡ ಒಂದಾಗಿದೆ.

        ತುಷಾರ: ವಾರ್ಷಿಕ  ಚಂದಾ ಗೆಲ್ಲಿ!

        ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ, ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಅಮೆರಿಕದ ಮೇರಿಲ್ಯಾಂಡ್‌ನ‌ಲ್ಲಿರುವ ಶಾಮಲಾ ಬನವತಿ.

        *ಬಿಟ್‌ಟೊರೆಂಟ್‌ ಅಂದರೇನು?
        *ಇತ್ತೀಚೆಗೆ ಇದರ ಬಗ್ಗೆ ಬಂದ ಸುದ್ದಿಯೇನು?
        (ಉತ್ತರವನ್ನು nistantusansaara@gmail.com ಗೆ ಮಿಂಚಂಚೆ ಮಾಡಿ ವಿಷಯ: NS36 ನಮೂದಿಸಿ.)

        ಕಳೆದ ವಾರದ ಬಹುಮಾನಿತ ಉತ್ತರ:
        *ಜೈವಿಕ ಚಹರೆ ಮೂಲಕ ಯಾವುದೇ ವ್ಯವಸ್ಥೆಗೆ  ಲಾಗಿನ್‌ ಆಗಲು ಬಳಸುವ ವಿವಿಧ ಚಹರೆಗಳು ಬೆರಳಚ್ಚು, ಮುಖಮುದ್ರೆ ಮತ್ತು ಕಣ್ಣಿನ ಐರಿಸ್‌.
        *ಇವುಗಳ ಬಳಕೆಯಲ್ಲಿ ಸಮಸ್ಯೆಗಳಿವೆ-  ಅಸ್ಪಷ್ಟ ಬೆರಳಚ್ಚು , ಮುಖದಲ್ಲಿ ಬದಲಾವಣೆ- ಕ್ಯಾಮರದ ಮುಂದಿರುವ ಮುಖದ ಕೋನ. ಸರಿಯುತ್ತರ ಕಳುಹಿಸಿ, ಬಹುಮಾನ ಪಡೆದವರು ಪ್ರತೀಕಾ, ಕಾವು, ಪುತ್ತೂರು. ಅಭಿನಂದನೆಗಳು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus