Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಐಶ್ವರ್ಯಾ ಗರ್ಭಿಣಿ; ಹೀರೋಯಿನ್‌ಸ್ಥಗಿತ
  • ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಗರ್ಭಿಣಿಯಾಗಿದ್ದರಿಂದ ಚಿತ್ರದ ನಿರ್ಮಾಣ ಸ್ಥಗಿತಗೊಳಿಸಲಾಗಿದೆ

    • Udayavani | Jun 28, 2011

      ಮುಂಬಯಿ: ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ 'ಹೀರೋಯಿನ್‌'ಚಲನಚಿತ್ರದಲ್ಲಿ ಅಭಿನಯಿಸುವ ಕುರಿತಾಗಿ ವದಂತಿ ಹರಡಿದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರು ಸ್ಪಷ್ಟನೆಯೊಂದನ್ನು ನೀಡಿ ಆಕೆ ಗರ್ಭಿಣಿಯಾಗಿದ್ದರಿಂದ ಚಿತ್ರದ ನಿರ್ಮಾಣ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

      ಚಿತ್ರ ನಿರ್ಮಾಪಕ ಮಧುರ್‌ ಭಂಡಾರ್ಕರ್‌ ಅವರ ಬಹುನಿರೀಕ್ಷಿತ ಹೀರೋಯಿನ್‌ ಚಲನಚಿತ್ರದ ನಿರ್ಮಾಣವನ್ನು ಅನಿರ್ದಿಷ್ಟಾವಧಿ ಸ್ಥಗಿತಗೊಳಿಸಲಾಗಿದೆ ಎಂದು ಚಿತ್ರನಿರ್ಮಾಣ ಸಂಸ್ಥೆ ಯುಟಿವಿ ಮೋಶನ್‌ ಪಿಕ್ಚರ್ಸಿ ಹೇಳಿದೆ.

      ಚಿತ್ರದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ ಮತ್ತು ಐಶ್ವರ್ಯಾ ಈ ಯೋಜನೆಯಲ್ಲಿ ಪಾಲ್ಗೊಂಡಿಲ್ಲ ಎಂದು ಬಲ್ಲಮೂಲವೊಂದು ಹೇಳಿದ್ದರಿಂದ ಅವರು ಈ ಚಿತ್ರದಲ್ಲಿ ಮುಂದುವರಿಯುವರೋ ಎನ್ನುವ ಸಂದೇಹ ವಿಸ್ತಾರವಾಗಿದೆ.

      ವದಂತಿಗಳಿಗೆ ತೆರೆ ಎಳೆಯಲು ನಾವು ಬಯಸಿದ್ದೇವೆ. ಹೀರೋಯಿನ್‌ ಚಿತ್ರದ ಕುರಿತಾಗಿ ಇಲ್ಲ ಸಲ್ಲದ ಕಥೆಗಳು ಹುಟ್ಟಿಕೊಳ್ಳುತ್ತಿವೆ. ಒಂದು ವಿಚಾರವನ್ನು ನಾವು ಸ್ಪಷ್ಟಪಡಿಸುತ್ತೇವೆ. ಈ ಹಂತದಲ್ಲಿ ಐಶ್ವರ್ಯಾ ಅವರ ಆರೋಗ್ಯ ಹೆಚ್ಚು ಮುಖ್ಯವಾಗಿದೆ ಎಂದು ಯುಟಿವಿ ಮೋಶನ್‌ ಪಿಕ್ಚರ್ಸಿ ಹೇಳಿಕೆ ನೀಡಿದೆ.

      ಕಳೆದವಾರ ಬಿಗ್‌ಬಿ ಅಮಿತಾಭ್‌ ಬಚ್ಚನ್‌ ಅವರು ತನ್ನ ಸೊಸೆ ಗರ್ಭಿಣಿಯಾಗಿದ್ದಾರೆ ಎನ್ನುವ ವಿಚಾರವನ್ನು ಸೋಶಿಯಲ್‌ ನೆಟ್‌ವರ್ಕ್‌ ಟ್ವಿàಟರ್‌ನಲ್ಲಿ ಹೇಳಿದ್ದರು.

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus