Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
    • ಆಪಲ್‌ ಕಂಪೆನಿಯು ತನ್ನ ಮ್ಯಾಕ್‌ಬುಕ್‌ ಏರ್‌ ಎನ್ನುವ ನೋಟ್‌ಬುಕ್‌ ಅನ್ನು ಸುಧಾರಿಸಿ ಬಿಡುಗಡೆ ಮಾಡಿದೆ.

      • ಅಶೋಕ್‌ ಕುಮಾರ್‌ ಎ. | Jul 24, 2011

        ಬ್ರಾಡ್‌ಬ್ಯಾಂಡ್‌: 20,000 ಕೋ.

        ದೇಶದ ಪ್ರತಿ ಪಂಚಾಯತ್‌ ಪ್ರದೇಶದಲ್ಲಿ ಬ್ರಾಡ್‌ಬ್ಯಾಂಡ್‌ ಸಂಪರ್ಕವನ್ನು ಲಭ್ಯವಾಗಿಸುವ ಯೋಜನೆಗೆ ಟೆಲಿಕಾಂ ಇಲಾಖೆಯ ಅನುಮತಿ ದೊರೆತಿದೆ. ಇದಕ್ಕೆ 20 ಸಾವಿರ ಕೋಟಿ ರೂ. ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಆಪ್ಟಿಕ್‌ ಫೈಬರ್‌ ಕೇಬಲ್‌ಗ‌ಳನ್ನು ದೇಶದ ಮೂಲೆ ಮೂಲೆಗೂ ಹಾಕು ವುದರ ಮುಖಾಂತರ ಇದನ್ನು ಸಾಧ್ಯವಾಗಿಸುವ ಯೋಜನೆಯಿದೆ. ಯೋಜನೆಯ ಅನುಷ್ಠಾನದ ಉಸ್ತುವಾರಿಯನ್ನು ನೋಡಿಕೊಳ್ಳಲು ಒಂದು ವಿಶೇಷ ಸಮಿತಿಯ ರಚನೆಯಾಗಲಿದೆ. ಬಿಎಸ್‌ಎನ್‌ಎಲ್‌ ಆರಂಭಿಕ ಅನುಷ್ಠಾನ ಮತ್ತು ಸಮಿತಿ ರಚನೆಯ ಜವಾಬ್ದಾರಿಯನ್ನು ಹೊರುತ್ತದೆ. ಹಳ್ಳಿಯ ಜನರು ಮಾಹಿತಿಯನ್ನು ವಿನಿಮಯ ಮಾಡುವುದಕ್ಕೆ, ಹೊರ ಜಗತ್ತಿನ ಜತೆ ಎಗ್ಗಿಲ್ಲದೆ ವ್ಯವಹರಿಸುವುದಕ್ಕೆ ಈ ಜಾಲ ಅನುವು ಮಾಡಬಹುದು.

        ಗೂಗಲ್‌ ಪ್ಲಸ್‌:ಎರಡು ಕೋಟಿ

        ಮೂರೇ ವಾರಗಳಲ್ಲಿ 20 ದಶಲಕ್ಷ ಜನರನ್ನು ತನ್ನ ಜಾಲಕ್ಕೆ ಸೇರುವಂತೆ ಮಾಡಲು ಗೂಗಲ್‌ ಪ್ಲಸ್‌ ಸಮರ್ಥವಾಗಿದೆ. ಇದು ಸಾಮಾಜಿಕ ಜಾಲತಾಣಗಳ ಮಟ್ಟಿಗೆ ಹೊಸ ದಾಖಲೆ ಎನ್ನಲಡ್ಡಿಯಿಲ್ಲ. ಆದರೆ ಫೇಸ್‌ಬುಕ್‌ನಲ್ಲಿ ಸದ್ಯ ಇರುವ  ಸದಸ್ಯರ ಸಂಖ್ಯೆ 75 ಕೋಟಿ ಎನ್ನುವುದನ್ನು ನೆನಪಿಸಿದರೆ, ಗೂಗಲ್‌ ಪ್ಲಸ್‌ ಬಹುದೂರದಲ್ಲಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಅಲ್ಲದೆ ಫೇಸ್‌ಬುಕ್‌ಗೆ ಪ್ರತಿದಿನ ಅರ್ಧಾಂಶ ಸಂಖ್ಯೆಯ ಅಂದರೆ 30 ಕೋಟಿ ಜನರಾದರೂ ಲಾಗಿನ್‌ ಆಗುತ್ತಾರೆ.

        ತೊಂದರೆಯಲ್ಲಿದ್ದಾಗ ಟ್ವೀಟಿಸಿ

        ತೊಂದರೆಯಲ್ಲಿದ್ದವರು ಸಂದೇಶ ರವಾನಿಸುವ ಮೂಲಕ ನೆರವು ಪಡೆಯುವ ಘಟನೆಗಳು ಇತ್ತೀಚೆಗೆ ಸಾಮಾನ್ಯವಾಗಿವೆ. ಮೊಬೈಲ್‌ ಮೂಲಕ ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‌ಬುಕ್‌ ಮತ್ತು ಇತ್ತೀಚಿನ ಗೂಗಲ್‌ ಪ್ಲಸ್‌ ತಾಣಗಳನ್ನು ಹೆಚ್ಚೆಚ್ಚು ಜನರು ಬಳಸುತ್ತಿರುವುದು ಇದಕ್ಕೆ ಕಾರಣ. ಆದರೆ ಈ ಸಂದೇಶಗಳನ್ನು ಕಿರಿದಾಗಿ, ಉಪಯುಕ್ತ ವಾಗುವಂತೆ ಬರೆಯುವ ಕಲೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಆಗಿರುವ ತೊಂದರೆಯೇನು, ಯಾವ ಜಾಗದಲ್ಲಿ ಎಂದು ಸಂದೇಶಗಳಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಹಾಗೆಯೇ ಸಂದೇಶಗಳನ್ನು ಶೋಧಿಸುವುದು ಸುಲಭವಾಗುವಂತೆ, ಅವುಗಳಲ್ಲಿ  ಪ್ರಮುಖ ಶಬ್ದಗಳನ್ನು ಬಳಸಬಹುದು. ಸಂದೇಶಗಳು ಸಂಬಂಧಿತ ಏಜೆನ್ಸಿಗಳಿಗೆ ಕಳುಹಿಸಲು ಸಾಧ್ಯವಾದರೆ ಇನ್ನೂ ಒಳಿತು. ಇಲ್ಲಿ ಸ್ಮಾರ್ಟ್‌ಫೋನುಗಳ ಜಿಪಿಎಸ್‌-ಸ್ಥಾನ ಪತ್ತೆ ತಂತ್ರಜ್ಞಾನ ಬಹಳ ಪ್ರಯೋಜನಕಾರಿ. 

        ಮ್ಯಾಕ್‌ಬುಕ್‌ ಏರ್‌

        ಆಪಲ್‌ ಕಂಪೆನಿಯು ತನ್ನ ಮ್ಯಾಕ್‌ಬುಕ್‌ ಏರ್‌ ಎನ್ನುವ ನೋಟ್‌ಬುಕ್‌ ಅನ್ನು ಸುಧಾರಿಸಿ ಬಿಡುಗಡೆ ಮಾಡಿದೆ. ಇದೀಗ ಅದು ಹೊಸ ಓಎಸ್‌ ಎಕ್ಸ್‌ 10.7 ಮಿಲಿಯನ್‌ ಜತೆ ಬಂದಿದೆ. 13 ಇಂಚು ಮತ್ತು 11 ಇಂಚು ಹೀಗೆ ಎರಡು ಗಾತ್ರಗಳಲ್ಲಿದು ಲಭ್ಯ. ದೊಡ್ಡದ ರಲ್ಲಿ 4 ಜಿಬಿ ಸ್ಮರಣಶಕ್ತಿ ಇದ್ದರೆ, ಕಿರುಗಾತ್ರದಲ್ಲಿ 2 ಜಿಬಿ ಸ್ಮರಣಕೋಶ ಇದೆ. ಅಲ್ಲದೆ ಕೋರ್‌ ಐ5 ಸಂಸ್ಕಾರಕ ಇದರಲ್ಲಿದೆ. ಮ್ಯಾಕ್‌ಬುಕ್‌-ಪ್ರೊ ನೋಟ್‌ಬುಕ್‌ಗೆ ಇದು ಸ್ಪರ್ಧೆಯೊಡ್ಡುವುದು ಸಾಧ್ಯ. ಥಂಡರ್‌ಬೋಲ್ಟ್ ಎನ್ನುವ ಹೊಸ ನಮೂನೆಯ ಪೋರ್ಟ್‌ ಇದರ ಇನ್ನೊಂದು ವಿಶೇಷತೆ. ಯುಎಸ್‌ಬಿ  ಪೋರ್ಟ್‌ ಗಳಿಗಿಂತ ಇವು ಹೆಚ್ಚು ವೇಗವಾಗಿ ದತ್ತಾಂಶ ವಿನಿಮಯ ಮಾಡಿಕೊಳ್ಳ ಬಲ್ಲುವು. ಇವುಗಳಿಗೆ ಇನ್ನೂ ಸಾಧನಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.

        ಚಂದ್ರ: ಶಕ್ತಿಯ ಮೂಲ?

        ಹೀಲಿಯಂ 3 ಎನ್ನುವ ಧಾತುವನ್ನು ಬಳಸಿ, ಸಂಯೋಗದ ಮೂಲಕ ಶಕ್ತಿ ಉತ್ಪಾದಿಸುವುದು ಸಾಧ್ಯವೆಂದು ವಿಸ್ಕೋನ್ಸಿನ್‌ ವಿವಿಯ ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಧಾತುಗಳ ಸಂಯೋಗದ ಮೂಲಕ ಶಕ್ತಿಯು ಬಿಡುಗಡೆಯಾಗುತ್ತದೆನ್ನುವುದು ಮೊದಲಿನಿಂದಲೂ ಗೊತ್ತಿದೆ. ಸೂರ್ಯ ಮತ್ತು ನಕ್ಷತ್ರಗಳು ಬಿಡುಗಡೆ ಮಾಡುತ್ತಿರುವ ಶಕ್ತಿ ಇದೇ ಪ್ರಕ್ರಿಯೆಯನ್ನವಲಂಬಿಸಿದೆ. ಆದರೆ ಇದರ ನಿಯಂತ್ರಣ ಕಠಿನ. ವಿಜ್ಞಾನಿಗಳು ಮಾದರಿ ಸ್ಥಾವರವನ್ನು ರಚಿಸಿ, ಹೀಲಿಯಂ ಸಂಯೋಗದಿಂದ  ಶಕ್ತಿ ಬಿಡುಗಡೆ ಮಾಡಿ ತೋರಿಸಿದ್ದಾರೇನೋ ಸರಿ, ಆದರೆ ಆ ಹೀಲಿಯಂ ಧಾತು ಭೂಮಿಯ ಮೇಲೆ ಒಟ್ಟಿಗೆ ಇರುವುದೇ ಬರೇ 30 ಕಿ.ಗ್ರಾಂ ಅಂತೆ. ಚಂದ್ರನ ಮೇಲೆ ಇದಕ್ಕಿಂತ ಅದೆಷ್ಟೋ ಹೆಚ್ಚು ಹೀಲಿಯಂ ಇದೆ. ಹೀಲಿಯಂ ವಿಕಿರಣ ಮುಕ್ತ ಶಕ್ತಿ ನೀಡುತ್ತದಂತೆ.  ಭೂಮಿಯಲ್ಲಿ ಅಪೂರ್ವವಾಗಿರುವ ಹೀಲಿಯಂ 3 ಚಂದ್ರನ ಮೇಲೆ ಟನ್‌ಗಟ್ಟಲೆ ಇದೆ. ಅದು ಇರುವ ಸ್ಥಳವೂ ಗೊತ್ತು. ಹಾಗಾಗಿ ಚಂದ್ರನಿಂದ ಹೀಲಿಯಂ3 ರವಾನಿಸಲು ಸಾಧ್ಯವಾದರೆ, ಭೂಮಿಯ ಮೇಲೆ ಅದನ್ನಲವಂಬಿಸಿದ ಸ್ಥಾವರ ಸ್ಥಾಪಿಸಬಹುದು.

        ತುಷಾರ: ವಾರ್ಷಿಕ  ಚಂದಾ ಗೆಲ್ಲಿ!

        ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ, ತುಷಾರ ಮಾಸಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಕರು ಶೋಭಾ ಮೋಹನ್‌, ಬೆಂಗಳೂರು.

        *ಭಾರತದ ಐಟಿ ಕಂಪೆನಿಗಳ ಪೈಕಿ, ಮೂರನೇ ಸ್ಥಾನಕ್ಕೆ ಪೈಪೋಟಿ ಇರುವ ಕಂಪೆನಿಗಳು ಯಾವುವು?
        (ಉತ್ತರ nistantusansaara@gmail.com ಗೆ ಮಿಂಚಂಚೆ ಮಾಡಿ ವಿಷಯ: NS41 ನಮೂದಿಸಿ.)


        ಕಳೆದ ವಾರದ ಬಹುಮಾನಿತ ಉತ್ತರ:
        *ಜುಲೈ 24ಕ್ಕೆ ಆರು ವರ್ಷ ಪೂರೈಸುವ ಜನಪ್ರಿಯ ಕನ್ನಡ ಸಮುದಾಯ ತಾಣ ಸಂಪದ.ನೆಟ್‌.
        *ವಾರ್ಷಿಕೋತ್ಸವ ಸಂದರ್ಭ ನಡೆದ ಇನ್ನೊಂದು ವಿಶೇಷ ಕಾರ್ಯಕ್ರಮ ಸಾರಂಗ ಮೀಡಿಯಾ ವತಿಯಿಂದ ಹಂಸನಾದ ಪುಸ್ತಕ ಬಿಡುಗಡೆ. ಸರಿಯುತ್ತರಗಳು ಬಂದಿಲ್ಲ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus