Udayavani | Sep 11, 2011
ಅಂತರ್ಜಾಲ ಆಧಾರಿತ ಸೇವೆಗಳನ್ನು ಬಳಸುವ ಮೂಲಕ ಸೌಕರ್ಯಗಳ ದಕ್ಷ ಬಳಕೆ ಸಾಧ್ಯ. ಸ್ಮರಣಶಕ್ತಿಯನ್ನು ಡಾಟಾ ಸೆಂಟರುಗಳ ಮೂಲಕ ಲಭ್ಯವಾಗಿಸುವ ಸೇವೆ, ಸರ್ವರ್ ಬಳಕೆ, ತಂತ್ರಾಂಶ ಸೇವೆ ಹೀಗೆ ವೈವಿಧ್ಯಮಯ ಸೇವೆ ಗಳನ್ನು ಒದಗಿಸುವ ಅಂತರ್ಜಾಲ ಆಧಾರಿತ ಕೌÉಡ್ ಸೇವೆಯ ಮೂಲಕ ಬಳಕೆದಾರರು ಇಂತಹ ಮೂಲಸೌಕರ್ಯಗಳನ್ನು ತಾವೇ ನಿರ್ವಹಿಸುವ ತೊಂದರೆ ತಪ್ಪುತ್ತದೆ. ಹೊರಗುತ್ತಿಗೆಯಾಗಿ ಹಲವರಿಗೆ ಸೇವೆ ಒದಗಿಸುವ ಅಂತರ್ಜಾಲ ತಾಣಗಳು ಪರಿಣತ ಸೇವೆ, ಸಮಗ್ರ ನಿರ್ವಹಣೆ ಮತ್ತು ದಕ್ಷ ಸೇವೆ ನೀಡಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಸೇವೆಗಳು ಬಳಕೆದಾರರಿಗೆ ಸ್ಪರ್ಧಾತ್ಮಕ ದರಗಳಲ್ಲೂ ಲಭ್ಯವಾಗು ತ್ತವೆ. ವಿದ್ಯುತ್ಛಕ್ತಿಯ ಮಿತಬಳಕೆಯು ಆಗುವುದರಿಂದ ಇದು ಪರಿಸರಸ್ನೇಹಿಯೂ ಹೌದು.
ಕೌÉಡ್ ಸೇವೆಗಳ ಮೂಲಕ ವಿನೂತನ ಸೇವೆ ಗಳನ್ನು ಒದಗಿಸುವಲ್ಲಿ ಭಾರತೀಯ ಕಂಪೆನಿಗಳು ಆಸಕ್ತಿ ತೋರುತ್ತಿವೆ. ಅಪ್ನಾಟೆಕ್ನಾಲಜಿ ಎನ್ನುವ ಕಂಪೆನಿ ರೈಲ್ವೇ ಹಳಿಗಳ ಸಮೀಪ ಸಂವೇದಕ ಗಳನ್ನು ಸ್ಥಾಪಿಸಿ ಅಪಾಯವಿದ್ದಾಗ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದೇ ರೀತಿ ಹೊಟೇಲ್ ನಿರ್ವಹಣೆ, ಮೊಬೈಲ್ ಸೇವೆಗಳು, ಐಟಿ, ಬ್ಯಾಂಕಿಂಗ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕೌÉಡ್ ಆಧಾರಿತ ಸೇವೆಗಳು ಲಭ್ಯವಾಗುತ್ತಿವೆ. ಸದ್ಯ ಭಾರತದಲ್ಲಿ ಸಾವಿರದ 600 ಕೋ. ರೂ.ಗಳ ವ್ಯವಹಾರ ಈ ರೀತಿಯಲ್ಲಿ ನಡೆಯುತ್ತಿದ್ದು, ಇನ್ನೈದು ವರ್ಷಗಳಲ್ಲಿ ಇದು ಹತ್ತು ಪಟ್ಟು ಏರಬಹುದು ಎಂದು ಅಂದಾಜು.
ಇದೇ ವೇಳೆ ಕಂಪ್ಯೂಟರುಗಳಿಗೆ ಈ ವರ್ಷ ಬೇಡಿಕೆ ಸುಮಾರು ಶೇ.35 ಏರಬಹುದು ಎಂದು ಅಂದಾಜಿಸಲಾಗಿದೆ. ಡೆಸ್ಕ್ಟಾಪ್‌ಗ್ಳಿಗೆ ಬೇಡಿಕೆ ಸುಮಾರು ಶೇ. 16ರಷ್ಟು ಏರಬಹುದು. ಹಾಗೆಯೇ ಮೂರು ದಶಲಕ್ಷ ನೋಟ್‌ಬುಕ್ ಮತ್ತು ನೆಟ್‌ಬುಕ್‌ಗಳಿಗೆ ಬೇಡಿಕೆ ಬರಬಹುದು ಎಂದು ಅಂದಾಜು.
ಝಗತ್ ಗೂಗಲ್ ಬಗಲಿಗೆ

ಗೂಗಲ್ ಹಲವು ಕಂಪೆನಿ ಗಳನ್ನು ಖರೀದಿಸಲು ಒಲವು ತೋರಿಸುತ್ತಿದೆ. ಈ ವರ್ಷವೇ ಇದುವರೆಗೆ ಗೂಗಲ್ 20 ಕಂಪೆನಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಹೊಟೇಲ್‌ಗಳ ಬಗ್ಗೆ ವಿವರ ನೀಡುವ ಝಗತ್ ಎನ್ನುವ ಕಂಪೆನಿಯು ಅದರ ಈ ವಾರದ ಖರೀದಿ. ವಿವಿಧೆಡೆ ಲಭ್ಯವಿರುವ ಹೊಟೇಲುಗಳು, ಅಲ್ಲಿ ದೊರೆಯುವ ಊಟೋಪಚಾರಗಳ ವ್ಯವಸ್ಥೆ ಬಗ್ಗೆ ಈ ಅಂತರ್ಜಾಲ ತಾಣದಲ್ಲಿ ವಿವರಗಳು ಸಿಗುತ್ತವೆ.
ಸೇವೆ ಸ್ವೀಕರಿಸಿದವರು ಒದಗಿಸಿದ ಪ್ರತಿಕ್ರಿಯೆಗಳೂ ಇಲ್ಲಿ ಸಿಗುತ್ತವೆ. 20 ವರ್ಷಕ್ಕೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿರುವ ಝಗತ್ ತಾಣವು ಕಲೆ ಹಾಕಿರುವ ಮಾಹಿತಿಯನ್ನು ಗೂಗಲ್ ನಕ್ಷೆ, ಶೋಧ ಸೇವೆಗಳ ಜತೆ ಸಮ್ಮಿಳನಗೊಳಿಸಿ, ಜನರಿಗೆ ವಿನೂತನ ಅನುಭವ ನೀಡಲು ಗೂಗಲಿಗೆ ಸಾಧ್ಯವಾಗಲಿದೆ. ಇಂತಹ ಮಾಹಿತಿ ನೀಡುವ ಇತರ ತಾಣಗಳಿಗೆ ಗೂಗಲ್- ಝಗತ್ ಜುಗಲ್‌ಬಂದಿ ಸಿಹಿ ಸುದ್ದಿಯಂತೂ ಅಲ್ಲ.
ಫಿಲಿಪ್ಸ್ ಮೊಬೈಲ್
ಫಿಲಿಪ್ಸ್ ಕಂಪೆನಿಯೂ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡಲು ಆರಂಭಿಸಿದೆ. 1,700 ರೂ.ಗಳಿಂದ ತೊಡಗಿ, ಎಂಟು ಸಾವಿರದವರೆಗಿನ ಬೆಲೆಯ ಸೆಟ್‌ಗಳನ್ನದು ಮಾರಾಟ ಮಾಡುತ್ತಿದೆ. ಚೈನೀಸ್ ಕಂಪೆನಿಯೊಂದು ಹಾಂಕಾಂಗ್ ಕಂಪೆನಿಯ ಜತೆ ಸೇರಿ ಫಿಲಿಪ್ಸ್ ಬ್ರಾಂಡ್‌ನ ಮೊಬೈಲ್ ಸೆಟ್ಟುಗಳ ನಿರ್ವಹಣೆ ಮಾಡುತ್ತಿದೆ.
ಪತ್ರಿಕೆಗಳು ಮತ್ತು ಅಂತರ್ಜಾಲ

ಭಾರತದಲ್ಲಿ ಪತ್ರಿಕೆಗಳು ಸದ್ಯ ತಮ್ಮ ಮುದ್ರಿತ ಪ್ರತಿಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಫಲವಾಗಿವೆ. ಭಾಷಾಪತ್ರಿಕೆಗಳ ಪ್ರಸಾರ ಏರುಗತಿ ಯಲ್ಲಿದೆ. ಆದರೆ ವಿಶ್ವದ ಉಳಿದೆಡೆ ಮುದ್ರಿತ ಪತ್ರಿಕೆಗಳ ಪ್ರಸಾರ ಇಳಿಯುತ್ತಿದೆ. ಅಲ್ಲಿ ಪತ್ರಿಕೆಗಳು ತಮ್ಮ ಅಂತರ್ಜಾಲ ಆವೃತ್ತಿಗಳ ಮೂಲಕ ಓದುಗರನ್ನು ಹೆಚ್ಚಿಸಲು ಪ್ರಯತ್ನಿಸಬೇಕಿದೆ. ಡಿಜಿಟಲ್ ಮಾಧ್ಯಮದ ಮೂಲಕವೇ ತಮ್ಮತನ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎನ್ನುವುದು ಅಲ್ಲಿನ ಪತ್ರಿಕೋದ್ಯಮಿಗಳ ಅನಿಸಿಕೆ.
ಅಂತರ್ಜಾಲ ಆವೃತ್ತಿಗಳಲ್ಲಿ ಮುದ್ರಿತ ಪ್ರತಿ ಯನ್ನು ನೀಡಿದರೆ ಸಾಲದು ಎನ್ನುವುದು ಅಲ್ಲಿ ವ್ಯಕ್ತ ವಾಗುತ್ತಿರುವ ಅಂಶ. ಆನ್‌ಲೈನ್ ಆವೃತ್ತಿಯಲ್ಲಿ ಓದುಗರ ಭಾಗವಹಿಸುವಿಕೆಗೂ ಅನುಕೂಲ ಅಗತ್ಯ. ಓದುಗರು ಸುದ್ದಿ ಹಂಚಿಕೊಳ್ಳಲು, ತಮ್ಮ ಚಿತ್ರಗಳನ್ನು ಅಪ್‌ಲೋಡ್ ಮಾಡಲು ಪತ್ರಿಕೆಗಳು ಅವಕಾಶ ನೀಡಿ, ಓದುಗರನ್ನು ತಮ್ಮೆಡೆಗೆ ಸೆಳೆಯುತ್ತಿವೆ. ಓದುಗರು ಭಾಗವಹಿಸಲು ಅನುಕೂಲ ನೀಡುವುದರಿಂದ, ಅವರು ಅಂತರ್ಜಾಲ ತಾಣದಲ್ಲಿ ಕಳೆಯುವ ಸಮಯ ಹೆಚ್ಚುವುದು ಒಂದು ಅನುಕೂಲ. ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ತಾಣಗಳಲ್ಲೂ ಪತ್ರಿಕೆಯ ಪುಟಗಳನ್ನು ರೂಪಿಸುವುದು ಸದ್ಯ ಮಾಮೂಲಿ. ಜಕಾರ್ತಾ ಗ್ಲೋಬ್‌ನಂತಹ ಪತ್ರಿಕೆ ಫೇಸ್‌ಬುಕ್ ಪುಟದ ಮೂಲಕ ಲಕ್ಷಗಟ್ಟಲೆ ಓದುಗರನ್ನು ಆಕರ್ಷಿಸಲು ಸಫಲವಾಗಿವೆ.
ಮುದ್ರಿತ ಪ್ರತಿಯಲ್ಲಿ ಮೂರು ಆಯಾಮಗಳ ಚಿತ್ರಗಳನ್ನು ಪ್ರಕಟಿಸುವುದು ಪತ್ರಿಕೆಗಳಿಗೆ ಈಗ ಲಭ್ಯ ವಾಗಿರುವ ಹೊಸ ತಂತ್ರಜ್ಞಾನ. ಇದರ ಮೂಲಕ ಮುದ್ರಿಸಿದ ಪತ್ರಿಕೆಯ ಜತೆಗೆ ಕನ್ನಡಕವನ್ನೂ ನೀಡಬೇಕಾಗುತ್ತದೆ. ಜರ್ಮನಿ, ಥಾçಲಂಡ್, ಬ್ರೆಜಿಲ್‌ಗಳಲ್ಲಿ ಇಂತಹ ಪ್ರಯೋಗಗಳೀಗಾಗಲೇ ನಡೆದಿವೆ.
ಭಾಷಾಪತ್ರಿಕೆಗಳು ಯುನಿಕೋಡ್ ಮೂಲಕ ಪ್ರಕಟವಾದರೆ ಪತ್ರಿಕೆ ತನ್ನದೇ ಆದ ಫಾಂಟ್ ಹೊಂದುವ ಅಗತ್ಯವಿಲ್ಲ. ಯುನಿಕೋಡ್ ಈಗ ಎಲ್ಲಾ ಆಪರೇಟಿಂಗ್ ವ್ಯವಸ್ಥೆಗಳ ಭಾಗವಾಗಿ ಬಿಟ್ಟಿರು ವುದರಿಂದ ಭಾಷಾ ಪತ್ರಿಕೆಗಳು ಅಂತರ್ಜಾಲದಲ್ಲಿ ಓದುಗರಿಗೆ ಸುಲಭವಾಗಿ ಲಭ್ಯ. ಅಲ್ಲದೆ ಭಾಷಾ ಪತ್ರಿಕೆಗಳ ವರದಿ, ಬರಹಗಳ ಶೋಧನೆಯೂ ಸಾಧ್ಯ. ಆಂಧ್ರದ ಕಂಪೆನಿ ಸಿಲಿಕಾನ್ ಆಂಧ್ರ, ಯುನಿಕೋಡ್ ಒಕ್ಕೂಟದ ಸದಸ್ಯನಾಗಿದೆ.ಅದು ಕ್ಯಾಲಿಫೋರ್ನಿಯಾ ದಲ್ಲಿ ಮೂರು ದಿನಗಳ ವಿಶ್ವ ತೆಲುಗು ಸಮಾವೇಶ ನಡೆಸುತ್ತಿದೆ. ಹಲವು ಯುನಿಕೋಡ್ ಫಾಂಟ್‌ಗಳನ್ನು ಬಿಡುಗಡೆಗೊಳಿಸಿ, ತೆಲುಗು ಬಳಕೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಅದು ಪ್ರಯತ್ನಿಸುತ್ತಿದೆ.
ತುಷಾರ: ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ, ತುಷಾರ ಮಾಸಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ
ಪ್ರಾಯೋಜನೆ ಶೋಭಾ ಮೋಹನ್, ಬೆಂಗಳೂರು.
*ಕನ್ನಡ ಟೈಪಿಸಲು ಕಂಪ್ಯೂಟರಿನಲ್ಲಿ ಯಾವ ವ್ಯವಸ್ಥೆಗಳಿವೆ?
(ಉತ್ತರ nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:
NS47
ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಬ್ರಾಡ್‌ಬ್ಯಾಂಡ್ ಅನಿಸಿಕೊಳ್ಳಲು ದತ್ತಾಂಶ ವೇಗ ಪ್ರತಿ ಸೆಕೆಂಡಿಗೆ ಕನಿಷ್ಠ 256 ಕಿಲೋಬಿಟ್ಸ್ ಇರಬೇಕು. ಬಹುಮಾನ ಗೆದ್ದವರು ವಿಷ್ಣುಮೂರ್ತಿ, ಮಂಗಳೂರು. ಅಭಿನಂದನೆಗಳು.