Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
    • ಇಂಟೆಲ್‌ ಕಂಪೆನಿಯು ಕಂಪ್ಯೂಟರ್‌ ಸಂಸ್ಕಾರಕಗಳನ್ನು ತಯಾರಿಸುವ ಅಗ್ರಗಣ್ಯ

      • ಅಶೋಕ್‌ ಕುಮಾರ್‌ ಎ. | Sep 19, 2011

        ಇಂಟೆಲ್‌: ದಕ್ಷ   ಸಂಸ್ಕಾರಕ ರೆಡಿ

        ಇಂಟೆಲ್‌ ಕಂಪೆನಿಯು ಕಂಪ್ಯೂಟರ್‌ ಸಂಸ್ಕಾರಕಗಳನ್ನು ತಯಾರಿಸುವ ಅಗ್ರಗಣ್ಯ
        ಕಂಪೆನಿ.ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ ಸಾಧನಗಳ ಸಂಸ್ಕಾರಕಗಳ ಮಟ್ಟಿಗೆ ಮಾತ್ರ ಇಂಟೆಲ್‌ ತುಸು ಹಿಂದೆ ಬಿದ್ದಿದೆ.

        ಅರ್ಮ್ ಸಂಸ್ಕಾರಕವು ಈ ಸಾಧನಗಳ ಮಟ್ಟಿಗೆ ಇಂಟೆಲ್‌ ಅನ್ನು ಹಿಂದಿಕ್ಕಿದೆ. ಸದ್ಯ ಆಟಂ ಮತ್ತು ಓಕ್‌ ಟೈಲ್‌ ಎನ್ನುವ ಸಂಸ್ಕಾರಕಗಳು ಇಂಟೆಲ್‌ ಮಟ್ಟಿಗೆ ಮಿತ ಶಕ್ತಿ ಬಳಸುವ ಸಂಸ್ಕಾರಕಗಳು. ಈಗ ಅತ್ಯಧಿಕ ಕ್ಷಮತೆಯುಳ್ಳ ಸಂಸ್ಕಾರಕವನ್ನು ಅದು ತಯಾರಿಸಿದೆ.

        ಹೊಸ ಸಂಸ್ಕಾರಕ ಬಳಸುವ ಶಕ್ತಿ ಎಷ್ಟು ಕಡಿಮೆ ಅಂದರೆ, ಅದು ಸೌರಕೋಶದಿಂದ ಉತ್ಪಾದನೆಯಾದ ಶಕ್ತಿಯನ್ನು ಬಳಸಿಯೂ ಕೆಲಸ ಮಾಡಬಲ್ಲುದು. ಒಂದು ಸಣ್ಣ ಪೋಸ್ಟೇಜ್‌ ಸ್ಟ್ಯಾಂಪ್‌ ಗಾತ್ರದ ಸೌರಕೋಶದಿಂದ ಉತ್ಪಾದನೆಯಾದ ಶಕ್ತಿ ಈ ಸಂಸ್ಕಾರಕಕ್ಕೆ ಸಾಕಾಗುತ್ತದೆ.

        ಅಂದ ಹಾಗೆ ಕುತೂಹಲದ ವಿಷಯವೆಂದರೆ, ಲೀನಕ್ಸ್‌ ಆಪರೇಟಿಂಗ್‌ ವ್ಯವಸ್ಥೆ ಇದರಲ್ಲಿ ಬಳಕೆಯಾಗಿದೆ. ಟ್ರಾನ್ಸಿಸ್ಟರುಗಳು ಕೆಲಸ ಮಾಡಲು ಬಳಸುವ ವೊಲ್ಟೆàಜ್‌ನ ಅತಿ ಸಮೀಪದ ವೋಲ್ಟೆàಜ್‌ ಬಳಸುವ ಮೂಲಕ ಸಂಸ್ಕಾರಕದ ಶಕ್ತಿಯ ಅಗತ್ಯವನ್ನು ತಗ್ಗಿಸಲು ಇಂಟೆಲ್‌ ಸಮರ್ಥವಾಯಿತು.

        ದಕ್ಷತೆಯ ಕಾರಣದಿಂದ ಇದು ಮೊಬೈಲ್‌ಗ‌ಳಿಗೆ ಹೇಳಿ ಮಾಡಿಸಿದ ಸಂಸ್ಕಾರಕವಾಗಲಿದೆ. ವಿದ್ಯುತ್‌ ಸಂಪರ್ಕ ಇಲ್ಲದ ಸಾಧನಗಳಲ್ಲಿ ದಕ್ಷ ಸಂಸ್ಕಾರಕ ಬಳಸುವುದು ಬ್ಯಾಟರಿಯ ದೀರ್ಘ‌ ಬಳಕೆಗೆ ಅನುಕೂಲ ಕಲ್ಪಿಸುತ್ತದೆ. ಹೊಸ ಸಂಸ್ಕಾರಕಕ್ಕೆ ಕ್ಲಾರಮೊಂಟ್‌ ಎಂದು ಹೆಸರಿಸಲಾಗಿದೆ.

        ಇವನ್ನು ಬಟಾಟೆ ಅಥವಾ ಲಿಂಬೆರಸದಲ್ಲಿ ಲಭ್ಯವಿರುವ ಶಕ್ತಿಯಿಂದಲೂ ಕೆಲಸ ಮಾಡುವಂತೆ ಮಾಡಲು ಸಾಧ್ಯವೆಂದು ಕಂಪೆನಿಯ ವಕ್ತಾರ ಹೇಳಿಕೊಂಡರು. ಇಂತಹ ಸಂಸ್ಕಾರಕವನ್ನು ಸ್ಥಗಿತಗೊಳಿಸದೆ ಸದಾ ಚಾಲೂ ಆಗಿರಿಸಿದರೂ ತೊಂದರೆಯಾಗದು. ಇದರ ಶಕ್ತಿಯ ಅಗತ್ಯ ಹತ್ತು ಮಿಲಿವ್ಯಾಟ್‌ಗಿಂತ ಕಡಿಮೆಯಾದ ಕಾರಣ, ಇದರಲ್ಲಿ ಶಾಖ ಬಿಡುಗಡೆಯಾಗದು.

        ಶಾಖವನ್ನು ಹೊರಗಿನ ವಾತಾವರಣಕ್ಕೆ ಹೊರದೂಡಲು ಅಗತ್ಯವಾದ ಹೀಟ್‌ ಸಿಂಕ್‌ ಇದರಲ್ಲಿಲ್ಲ. ದಿನಪೂರ್ತಿ ಲ್ಯಾಪ್‌ಟಾಪ್‌ ಬಳಕೆ, ಅಂತರ್ಜಾಲದಿಂದ ಮಾಹಿತಿಯನ್ನು ಆಗಾಗ ಇಳಿಸಿಕೊಳ್ಳುವ ಕೆಲಸ ಮಾತ್ರ ಮಾಡುತ್ತಿದ್ದರೆ, ಹತ್ತು ದಿನ ಕೆಲಸ ಮಾಡಬಹುದು.

        ಆರ್‌ಟಿಐ: ಮೊಬೈಲ್‌ನಿಂದ ಅರ್ಜಿ



        ಮಾಹಿತಿಯ ಹಕ್ಕು ಕಾನೂನು ಮೂಲಕ ಅಗತ್ಯ ಮಾಹಿತಿಗೆ ಅರ್ಜಿಯನ್ನು ಮೊಬೈಲ್‌ ಮೂಲಕ ಸಲ್ಲಿಸು ವುದನ್ನು ಸಾಧ್ಯವಾಗಿಸುವತ್ತ ಕರ್ನಾಟಕ ಸರಕಾರ ಹೆಜ್ಜೆಯಿಕ್ಕಿದೆ. ಖಾಸಗಿ ಸೇವಾದಾತೃಗಳ ಮೂಲಕ ಈ ಸೇವೆ ಜನರಿಗೆ ಲಭ್ಯವಾಗಲಿದೆ. ಮಾಹಿತಿ ಹಕ್ಕಿನ ಪ್ರಕಾರ ಸಲ್ಲಿಸಿದ ಅರ್ಜಿಗೆ ಅನ್ವಯಿಸುವ ಶುಲ್ಕವನ್ನು ಮೊಬೈಲ್‌ ಕರೆಯ ಮೇಲೆ ವಿಧಿಸುವ ಶುಲ್ಕದ ಮೂಲಕ ವಸೂಲಿ ಮಾಡಲಾಗುತ್ತದೆ.

        ಗ್ರಾಹಕ ಸರಕಾರಿ ಕಚೇರಿಗೆ ಹೋಗದೆ ಈ ಸೇವೆಯ ಮೂಲಕ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಟಿಸಿಎಸ್‌ ಕಂಪೆನಿಯ ಸೋದರ ಸಂಸ್ಥೆಯಾದ ಸಿಎಂಸಿಯು ಇದನ್ನು ಅಭಿವೃದ್ಧಿ ಪಡಿಸಲು ಸರಕಾರದಿಂದ ಹಸಿರು ಸಂಕೇತ ಪಡೆದಿದೆ. ಬಿಹಾರದಲ್ಲಿ ಇಂತಹ ಸೇವೆಯು ಲಭ್ಯವಾಗಿ ಇದೀಗಲೇ ನಾಲ್ಕು ವರ್ಷಗಳು ಕಳೆದಿವೆ.

        ಕಂಪೆನಿಯು ನಿರ್ವಹಿಸುವ ಕಾಲ್‌ ಸೆಂಟರಿನ ಮೂಲಕ ಜನರು ಮಾಹಿತಿಗಾಗಿ ಸಲ್ಲಿಸುವ ಬೇಡಿಕೆಯನ್ನು ದಾಖಲಿಸಿಕೊಂಡು ಸಂಬಂಧಿತ ಇಲಾಖೆಗೆ ಅರ್ಜಿ ಸಲ್ಲಿಸಲಾಗುತ್ತದೆ. ಅರ್ಜಿಯ ವಿಲೇವಾರಿ ಬಗ್ಗೆಯೂ ಕಾಲ್‌ ಸೆಂಟರಿನ ಮೂಲಕ ಮಾಹಿತಿ ಪಡೆಯಲು ಸಾಧ್ಯ. 15 ಜನರನ್ನು ಕಾಲ್‌ ಸೆಂಟರಿನ ನಿರ್ವಹಣೆಗೆ ಬಳಸಲು ಕಂಪೆನಿಯು ತೀರ್ಮಾನಿಸಿದೆ. ಜನರು ಅಂತರ್ಜಾಲ ತಾಣದ ಮೂಲಕವೂ ಅರ್ಜಿ ಸಲ್ಲಿಸಬಹುದು.

        ಇದರಲ್ಲಿ ಶುಲ್ಕವನ್ನು ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸುವ ಆಯ್ಕೆಯೂ ಇದೆಯಂತೆ.

        ವಿಂಡೋಸ್‌8: ಮೊಬೈಲ್‌ ನಂಟು



        ಮೈಕ್ರೋಸಾಫ್ಟ್‌ ಕಂಪೆನಿಯು ವಿಂಡೋಸ್‌ 8 ಆಪರೇಟಿಂಗ್‌ ವ್ಯವಸ್ಥೆಯ ಮೂಲಕ ತನ್ನ ಹೊಸ ಆಪರೇಟಿಂಗ್‌ ತಂತ್ರಾಂಶವನ್ನು ಮುಂದಿನ ವರ್ಷ ತಯಾರಿಸಿ, ಒದಗಿಸಲು ಸಿದ್ಧತೆ ನಡೆಸಿದೆ. ಇದನ್ನು ಮಾಮೂಲಿ ಡೆಸ್ಕ್ಟಾಪ್‌ ಕಂಪ್ಯೂಟರುಗಳು, ಲ್ಯಾಪ್‌ಟಾಪ್‌ ಮತ್ತು ನೋಟ್‌ಬುಕ್‌ಗಳಲ್ಲಿ ಮಾತ್ರ ವಲ್ಲದೆ ಟ್ಯಾಬ್ಲೆಟ್‌ ಸಾಧನಗಳಲ್ಲೂ ಬಳಸಲು ಸಾಧ್ಯ.

        ಹಾಗಾಗಿ ಟ್ಯಾಬ್ಲೆಟ್‌ಗಳಿಗೆ ವಿಂಡೋಸ್‌ ವ್ಯವಸ್ಥೆಯಲ್ಲಿ ಬಳಸಬಹುದಾದ ತಂತ್ರಾಂಶಗಳ ತಯಾರಿ ಇದೀಗಲೇ ನಡೆಯಬಹುದು ಎನ್ನುವ ನಿರೀಕ್ಷೆಯಿದೆ. ಆಂಡ್ರಾಯಿಡ್‌, ಐಫೋನ್‌ಗಳಂತೆ ವಿಂಡೋಸ್‌ ಇಂತಹ ಸಾಧನಗಳಲ್ಲಿ ಬಳಕೆಯಾಗುವ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.

        ಅಲ್ಲದೆ ವಿಂಡೋಸ್‌ 8 ಬಿಡುಗಡೆ ಯಾಗಲು ಇನ್ನೂ ಸಮಯ ಹಿಡಿಯ ಬಹುದು ಎನ್ನು ವುದು, ನಿಶ್ಚಿತ ಬಳಕೆದಾರರ ಭರವಸೆ ಇಲ್ಲದಿರುವುದು, ಅಭಿ ವೃದ್ಧಿಕಾರರನ್ನು ಸೆಳೆಯಲು ಪ್ರಮುಖ ಅಡ್ಡಿಗಳಾಗಿವೆ.

        ತುಷಾರ: ವಾರ್ಷಿಕ  ಚಂದಾ ಗೆಲ್ಲಿ!

        ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ, ತುಷಾರ ಮಾಸಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಕರು ಶೋಭಾ ಮೋಹನ್‌, ಬೆಂಗಳೂರು.

        *ಮಣಿಪಾಲ್‌ ಮಾರ್ಟ್‌ ಏನು?

        (ಉತ್ತರವನ್ನು nistantusansaara@gmail.com ಗೆ ಮಿಂಚಂಚೆ ಮಾಡಿ ವಿಷಯ: NS48 ನಮೂದಿಸಿ.)

        ಕಳೆದ ವಾರದ ಬಹುಮಾನಿತ ಉತ್ತರ:

        *ಕನ್ನಡ ಟೈಪಿಸಲು ಕಂಪ್ಯೂಟರಿನಲ್ಲಿ ಬರಹ, ನುಡಿ, ಪದ ಮುಂತಾದ ತಂತ್ರಾಂಶ ವ್ಯವಸ್ಥೆಗಳಿವೆ.ಬಹುಮಾನ ವಿಜೇತರು ಅವಿನಾಶ್‌ ವಿ., ಕಿನ್ನಿಕಂಬಳ.ಅಭಿನಂದನೆಗಳು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus