ಹಿಂದಿ ಸಾಮ್ರಾಜ್ಯವಾದ ಮತ್ತು ಕನ್ನಡದ ವಾಸ್ತವ


Team Udayavani, Nov 6, 2019, 5:51 AM IST

kannada

ಡಾ|| ರಾಜಕುಮಾರ್‌ ಸಿನಿಮಾಗಳು ಎಂತಹವಿದ್ದವೆಂದರೇ ಅವುಗಳ ಮುಂದೆ ಹಿಂದಿ ಸಿನಿಮಾಗಳು ಬಾಲ ಮುದುರಿಕೊಂಡೇ ಇರುತ್ತಿದ್ದವು. ಅವರ ಹಾಡುಗಳನ್ನು ಗದ್ದೆಯಲ್ಲಿ ನಾಟಿಮಾಡುವವರಿಂದ ಹಿಡಿದು ಸಮಾಜದ ಅತ್ಯುನ್ನತ ವರ್ಗದವರೆಗಿನ ಎಲ್ಲರೂ ಹಾಡುತ್ತಿದ್ದರು. ಇಂತಹ ಕನ್ನಡ ಚಳವಳಿಗಳನ್ನು ಪ್ರಾದೇಶಿಕವಾಗಿ ಜನಪ್ರಿಯ ಮಾಧ್ಯಮಗಳ ಮೂಲಕ ಏಣಗಿ ಬಾಳಪ್ಪಾ, ಕೆರೆಮನೆ ಶಂಬು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಶೇಣಿ ಗೋಪಾಲ ಕೃಷ್ಣ ಭಟ್ಟ, ಮತ್ತಿತರ ಕಲಾವಿದರು ನಿರಂತರ ಗಟ್ಟಿಗೊಳಿಸುತ್ತಿದ್ದರು.

ಹೀಗೆಲ್ಲ ಆಗಿಯೇ ಹೋಗಿದೆ. ಅಂದರೆ, ಹಿಂದಿ ಭಾಷೆ ರಾಜ್ಯಾದ್ಯಂತ, ದೇಶಾದ್ಯಂತ ಜನಪ್ರಿಯ ಭಾಷೆಯಾಗಿ ಹೋಗಿರುವುದು ಹೌದು. ಬೆಂಗಳೂರು, ಬೆಳಗಾವಿ, ಮೈಸೂರು, ಹುಬ್ಬಳ್ಳಿ-ಧಾರವಾಡ ಬಿಟ್ಟು ಬಿಡಿ. ಚಿಕ್ಕೋಡಿ, ಹಳಿಯಾಳ, ಕಾರವಾರದಂತಹ ಪಟ್ಟಣಗಳ ಮೆಡಿಕಲ್‌/ ಇಂಜಿನಿಯರಿಂಗ್‌, ತಾಂತ್ರಿಕ, ಪದವಿ ಕಾಲೇಜುಗಳಲ್ಲಿ, ಕರ್ನಾಟಕದ ನೂರಾರು ಪುಟ್ಟ ನಗರಗಳಲ್ಲಿ, ಪಟ್ಟಣಗಳಲ್ಲಿ, ರಸ್ತೆಗಳಲ್ಲಿ ದಟ್ಟವಾಗಿ ಹಿಂದಿ ಭಾಷೆ ಕೇಳಿಬರುತ್ತಿರುವುದು ಸತ್ಯವೇ.

ಬೈಕ್‌ನ ಮೇಲೆ ಗಡ್ಡ ಬಿಟ್ಟು ಕುಳಿತ ಹುಡುಗ ಮತ್ತು ಆತನ ಹಿಂದೆ ಜೀನ್ಸ್‌ ತೊಟ್ಟು ನಿಂತು ಏನೋ ಗುಜು-ಗುಜು ಮಾಡುತ್ತಿರುವ ಹುಡುಗಿ ಮಾತನಾಡುತ್ತಿರುವ ಭಾಷೆ ಹಿಂದಿಯೇ. ಮಾಲ್‌ಗ‌ಳಲ್ಲಿಯಂತೂ ಬಿಡಿ. ಒಟ್ಟಾರೆಯಾಗಿ ಅನಿಸುವುದೆಂದರೆ ಹಿಂದಿ ಭಾಷೆ ಇಂದು ಹೆಚ್ಚು ಕಡಿಮೆ ಕರ್ನಾಟಕದಲ್ಲಿಯೂ ಕೂಡ ಘರ್‌ ಘರ್‌ಕಿ ಕಹಾನಿ. ನಗರೀಕರಣದ, ಜಾಗತೀಕರಣದ, ಆಧುನೀಕರಣದ ಭಾಷೆ. ಸಾರ್ವಜನಿಕವಾಗಿ ಹಿಂದಿ ಮಾತನಾಡುವುದು ಫ್ಯಾಶನೆಬಲ್‌ ಎಂದು ಅದು ಹೇಗೋ ಜನರ ಮನಸ್ಸಿನಲ್ಲಿ ಬಂದುಬಿಟ್ಟಿದೆ.

ಹಿಂದಿ ಭಾಷೆ ಹೀಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವುದಕ್ಕೆ ಕಾರಣಗಳನ್ನು ಹುಡುಕುವ ಹಾಗೂ ಕನ್ನಡ ಈ ನಡುವೆ ಹೇಗೆ ತನ್ನನ್ನು ಪುನಃ ಕಂಡುಕೊಳ್ಳಬಹುದು ಎಂದು ಅರ್ಥೈಸಿಕೊಳ್ಳುವಿಕೆಯ ಭಾಗವಾಗಿ ಒಂದು ಚೂರು ಮುನ್ನುಡಿ ಹಾಕಿಕೊಳ್ಳೋಣ. ಎಲ್ಲ ವಿದ್ವಾಂಸರಿಗೂ ಗೊತ್ತು. ಭಾಷಾ ಕಲಿಕೆ ಆಳದಲ್ಲಿ ಒಂದು ಸಾಮಾಜಿಕ, ಐತಿಹಾಸಿಕ, ಆರ್ಥಿಕ ಪ್ರಕ್ರಿಯೆಯ ಭಾಗ. ಸಮಕಾಲೀನ ರಾಜಕೀಯದೊಂದಿಗೆ ಅದು ಬಿಡಿಸಲಾಗದಂತೆ ತಳಕು ಹಾಕಿಕೊಂಡಿರುತ್ತದೆ. ಭಾಷೆ ಒಂದು ಸಂಸ್ಕೃತಿಯ ಧ್ವನಿ. ಗಮನಿಸಬೇಕು- ಭಾಷಾ ಕಲಿಕೆ, ಅಭಿವೃದ್ಧಿ ಘಟಿಸುವುದು, ಕೇವಲ ಶಾಲೆಗಳ, ಪುಸ್ತಕಗಳ, ಶಿಕ್ಷಕರುಗಳ ಮೂಲಕ ಅಷ್ಟೇ ಅಲ್ಲ, ಸಮಕಾಲೀನ ಸಂಸ್ಕೃತಿಯೊಂದಕ್ಕೆ ತನ್ನನ್ನು ಸುತ್ತ-ಮುತ್ತ ಪಸರಿಸಿಕೊಳ್ಳಲಿಕ್ಕೆ ಹಲವು ಭಾಷಾ ಮಾಧ್ಯಮಗಳು ಇರುತ್ತವೆ. ಉದಾಹರಣೆಗೆ ಧರ್ಮ ರಾಜಕೀಯ, ಮಾರುಕಟ್ಟೆ ಮತ್ತು ಆ ಕಾಲಘಟ್ಟದ ಕಲಾಪ್ರಕಾರಗಳು. ಈಗಂತೂ ತುಂಬ ಜನಪ್ರಿಯ ಮಾಧ್ಯಮಗಳಾದ: ಸಿನಿಮಾಗಳು ಟಿ.ವಿ. ಮತ್ತು ಇಂಟರನೆಟ್‌ ಇವೆ. ಇವುಗಳಲ್ಲಿ ಹೆಚ್ಚಿನ ಅಂಶಗಳು ಯಾವ ಭಾಷೆಯ ಹಿಂದೆ ನಿಲ್ಲುತ್ತವೊ ಆ ಭಾಷೆ ರಾಜಕೀಯ ಶಕ್ತಿ ಪಡೆಯುತ್ತದೆ. ಆ ಭಾಷೆ ಸಮಾಜದಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ. ಕಾರ್ಲ್ ಮಾರ್ಕ್ಸ್ನ ಪ್ರಸಿದ್ಧ ಮಾತೊಂದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಏನೆಂದರೆ “”Ruling ideas of an age are the ideas of the ruling class” ಅಂದರೆ ಸೂಕ್ಷ್ಮವಾಗಿ ಸಮಾಜವನ್ನು ಆಳುವ ವರ್ಗ ಆ ಸಮಾಜದ ಚಿಂತನ ಕ್ರಮವನ್ನು ನಿರ್ಣಯಿಸುತ್ತದೆ. ಹಾಗೆಯೇ ಭಾಷೆಯನ್ನು ನಿರ್ಣಯಿಸುತ್ತದೆ.
ನಮಗೆ ಗೊತ್ತು ಇಂಗ್ಲೀಷರ ಬದಲು ಫ್ರೆಂಚರು ಭಾರತವನ್ನು ಆಕ್ರಮಿಸಿಕೊಂಡಿದ್ದರೆ ಇಂದು ಅದು ಭಾರತದ ಪ್ರಮುಖ ಭಾಷೆಯಾಗಿರುತ್ತಿತ್ತು. ಹಿಂದಿ ಸಿನಿಮಾಗಳು, ಸೀರಿಯಲ್‌ಗ‌ಳು, ರಾಜಕೀಯ ಇಂದಿನ ಸಾಂಸ್ಕೃತಿಕ ವಾತಾವರಣವನ್ನು ಆಳುತ್ತಿವೆ. ಹಿಂದಿ ಪ್ರಸಾರ ಮಾಧ್ಯಮಗಳಿಗೆ ಇರುವ ಆರ್ಥಿಕ, ರಾಜಕೀಯಶಕ್ತಿ ಪ್ರಾದೇಶಿಕ ಮಾಧ್ಯಮಗಳಿಗೆ ಇಲ್ಲ. ಹಿಂದಿ ಸಿನಿಮಾದೊಂದಿಗೆ ಸ್ಪರ್ಧಿಸಲು ಕನ್ನಡ ಸಿನಿಮಾಗಳಿಗೆ ಸಾಧ್ಯವಾಗುತ್ತಿಲ್ಲ.

ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಸತ್ವಯುತವಾಗಿ ನಾವು ಹೇಗೆ ಇಟ್ಟುಕೊಳ್ಳಬಹುದು ಮತ್ತು ಇಟ್ಟುಕೊಳ್ಳಬೇಕು ಎನ್ನುವುದನ್ನು ಈಗ ಗಮನಿಸಬೇಕು. ಹೆಚ್ಚು ಶಕ್ತಿಯುಳ್ಳ ಭಾಷೆಗಳ ಆಕ್ರಮಣದ ನಡುವೆಯೂ ಭಾಷೆಯೊಂದು ಹೇಗೆ ಬದುಕುತ್ತದೆ ಮತ್ತು ಬದುಕಬೇಕು ಎನ್ನುವುದನ್ನು ಈಗ ಗಮನಿಸಿಕೊಳ್ಳಬೇಕು. ಅದು ಸಾಧ್ಯವಾಗುವುದು ಭಾಷೆ ತನ್ನ ಹಿಂದಿರುವ ಸಾಂಸ್ಕೃತಿಕ ಅಂತಃಸತ್ವವನ್ನು ಜೀವಂತವಾಗಿ ತನ್ನೊಡಲೊಳಗೆ ಅದರ ಬೆಂಕಿ ಆರದಂತೆ ಇಟ್ಟುಕೊಂಡಾಗ. ಹಾಗೆ, ಭಾಷೆ ತನ್ನ ಸಾರ್ವತ್ರಿಕ, ಶಾಶ್ವತ ಹೂರಣವನ್ನಿಟ್ಟುಕೊಂಡೇ ತನ್ನದೇ ಆದ ಬಲವಾದ ಒಂದು ಜನಪ್ರಿಯ ಸಂಸ್ಕೃತಿಯೊಂದನ್ನು ಇಟ್ಟುಕೊಂಡಿರುತ್ತದೆ. ಈ ಜನಪ್ರಿಯ ಸಂಸ್ಕೃತಿ ಭಾಷೆಯೊಂದರ ಶ್ರೇಷ್ಠ ಅಂಶಗಳನ್ನು ವ್ಯಾವಹಾರಿಕವಾಗಿ, ರಾಜಕೀಯವಾಗಿ, ಹಾಗೆಯೇ ತನ್ನ ವಿವಿಧ ಜನಪ್ರಿಯ ಮತ್ತು ಸಾರ್ವಕಾಲಿಕ ಕಲಾ ಪ್ರಕಾರಗಳನ್ನು ಭಾಷೆಯಾಗಿಸಿ ಹೇಳಿಕೊಳ್ಳುತ್ತಿರುತ್ತದೆ. ಉದಾಹರಣೆಗೆ ಶ್ರೇಷ್ಠ ರಾಜಕಾರಣಿಗಳು ಭಾಷೆಯೊಂದನ್ನು ಅದರ ಸಂಸ್ಕೃತಿಯ ಐಕಾನ್‌ ಆಗಿ ಹಿಡಿದಿರುತ್ತಾರೆ. ವಿಸ್ತರಿಸುತ್ತಾರೆ. ಅಂತಹ ದಿಗ್ಗಜರು ನಮ್ಮ ದೇಶದ ಎಲ್ಲ ರಾಜ್ಯಗಳಲ್ಲೂ ಇದ್ದರು, ಇದ್ದಾರೆ. ಉದಾಹರಣೆಗೆ ಎನ್‌.ಟಿ. ರಾಮರಾವ್‌, ಎಮ್‌.ಜಿ.ರಾಮಚಂದ್ರನ್‌, ಜಯಲಲಿತಾ, ರಾಮಕೃಷ್ಣ ಹೆಗಡೆ, ಎಸ್‌.ಎಮ್‌. ಕೃಷ್ಣ, ಹೆಚ್‌.ಡಿ. ದೇವೇಗೌಡ, ಬಿಜು ಪಟ್ನಾಯಕ್‌, ಕೆ.ಸಿ.ಚಂದ್ರಶೇಖರ ರಾವ್‌, ಮಮತಾ ಬ್ಯಾನರ್ಜಿ, ಮತ್ತಿತರರು. ಹಾಗೆಯೇ ಸಂಸ್ಕೃತಿಯೊಂದರ ಪ್ರಾತಿನಿಧಿಕರಾಗಿರುವ ವಿವಿಧ ಶ್ರೇಷ್ಠ ಕಲಾವಿದರು, ಸಾಹಿತಿಗಳು ಕಲೆಯ, ಸಾಹಿತ್ಯದ ವಿವಿಧ ಮಾಧ್ಯಮಗಳ ಮೂಲಕ ತಮ್ಮ ಭಾಷೆಯನ್ನು ಜಾಗೃತಗೊಳಿಸುತ್ತಲೇ ಇರುತ್ತಾರೆ. ಉದಾಹರಣೆಗೆ: ಪಂಡಿತ್‌ ಭೀಮಸೇನ ಜೋಷಿ, ಪಂಡಿತ್‌ ಮಲ್ಲಿಕಾರ್ಜುನ ಮನ್ಸೂರ, ಕನ್ನಡ ಸಂಸ್ಕೃತಿಯ ಜೀವಾಳವಾದ ವಚನಗಳಿಗೆ, ದಾಸವಾಣಿಗಳಿಗೆ, ಭಜನೆಗಳಿಗೆ ಜೀವ ತುಂಬಿ ಅವುಗಳನ್ನು ಮನೆಮನೆಗಳಲ್ಲಿಯೂ ಹಾಡುವಂತೆ, ಕೇಳುವಂತೆ ಮಾಡಿಬಿಟ್ಟರು. ಕನ್ನಡದ ಶ್ರೇಷ್ಠ ಬರಹಗಾರರು ತಮ್ಮ ಬರಹಗಳ ಮೂಲಕ ಭಾಷೆಯ ಬೇರುಗಳನ್ನು ಭಾಷೆಯಲ್ಲಿ ಹಿಡಿದಿಟ್ಟುಬಿಟ್ಟರು. ಜನಪದ ಕಲಾವಿದರು ಮಾಡಿದ್ದು ಮತ್ತು ಮಾಡುವುದು ಇದೇ. ಇನ್ನು ಕನ್ನಡ ಸಿನಿಮಾಗಳದ್ದಂತೂ ರೋಚಕ ಕಥೆ. ಪಿ.ಬಿ ಶ್ರೀನಿವಾಸ ಮತ್ತು ಎಸ್‌.ಪಿ ಬಾಲಸುಬ್ರಮಣ್ಯಮ್‌ ಹಾಡಿದ ಕನ್ನಡದ ಹಾಡುಗಳನ್ನು ಕನ್ನಡ ಬರದವರೂ ಹಾಡಿದರು.

ಕನ್ನಡ ಭಾಷಾಭಿವೃದ್ಧಿಗೆ ಡಾ|| ರಾಜಕುಮಾರ್‌ ಅವರ ಕಾಣಿಕೆ ಯಂತೂ ವರ್ಣಿಸಲಸದಳವಾದದ್ದು. ಅವರ ಸಿನಿಮಾಗಳು, ಡೈಲಾಗ್‌ಗಳು, ಹಾಡುಗಳು ಎಂತಹವಿದ್ದವೆಂದರೇ ಅವುಗಳ ಮುಂದೆ ಅಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಹಿಂದಿ ಸಿನಿಮಾಗಳು ಬಾಲ ಮುದುರಿಕೊಂಡೇ ಇರುತ್ತಿದ್ದವು. ಅವರ ಹಾಡುಗಳನ್ನು ಗದ್ದೆಯಲ್ಲಿ ನಾಟಿಮಾಡುವವರಿಂದ ಹಿಡಿದು ಸಮಾಜದ ಅತ್ಯುನ್ನತ ವರ್ಗದವರೆಗಿನ ಎಲ್ಲರೂ ಹಾಡುತ್ತಿದ್ದರು. ಕನ್ನಡ ಭಾಷೆ ಮಾತನಾ ಡುತ್ತಿದ್ದರು. ಇಂತಹ ಕನ್ನಡ ಚಳವಳಿಗಳನ್ನು ಪ್ರಾದೇಶಿಕವಾಗಿ ಜನಪ್ರಿಯವಾದ ಕಲಾಮಾಧ್ಯಮಗಳ ಮೂಲಕ ಕೆರೆಮನೆ ಶಂಬು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಶೇಣಿ ಗೋಪಾಲ ಕೃಷ್ಣ ಭಟ್ಟ, ಏಣಗಿ ಬಾಳಪ್ಪಾ ಮತ್ತಿತರ ಕಲಾವಿದರು ನಿರಂತರ ಗಟ್ಟಿಗೊಳಿಸುತ್ತಿದ್ದರು.

ಆದರೆ ಇಂದು ಆ ಕಾಲ ಮುಗಿದು ಹೋದಂತಿದೆ. ಒಟ್ಟಾರೆಯಾಗಿ ಕನ್ನಡ ಸಂಸ್ಕೃತಿಗೆ ಗೃಹಣ ಹಿಡಿದಂತಿರುವಂತಿದೆ. ಶ್ರೇಷ್ಠವಾದ ಸಿನಿಮಾಗಳು, ಸೀರಿಯಲ್‌ಗ‌ಳು ಕನ್ನಡದಲ್ಲಿ ಇಂದು ಬಹುಶಃ ಹುಟ್ಟಿಕೊಳ್ಳುತ್ತಿಲ್ಲ. ಕನ್ನಡ ಸಾಹಿತ್ಯಕ್ಕೂ ಜನರನ್ನು ಹಿಂದಿನಂತೆ ತಲುಪಲು ಸಾಧ್ಯವಾಗುತ್ತಿಲ್ಲ. ಎದ್ದು ತೋರುವ ಕಾರಣ ದೇಸೀ ಕಲಾಪ್ರಕಾರಗಳಿಗೆ ಹಿಂದಿ ಮಾರುಕಟ್ಟೆಯ ಎದುರು ಸಿನಿಮಾಗಳ/ ಸೀರಿಯಲ್‌ಗ‌ಳ ಎದುರು ನಿಲ್ಲಲು ಸಾಧ್ಯವಾಗ ದಿರುವುದು. ಆದರೆ ಬಹುಶಃ ಅದಕ್ಕಿಂತ ದೊಡ್ಡ ಕಾರಣ ಬೇರೆಯೇ ಇದೆ. ಮೂಲ ಕಾರಣ ಇರುವುದು ಕನ್ನಡ ಸಂಸ್ಕೃತಿಗೆ ವಿಮುಖವಾಗಿ ಹೋಗುತ್ತಿರುವ ಇಡೀ ಜೀವನ ವಿಧಾನ. ಅಂದರೆ, ನಮ್ಮ ಜನ ಹೆಚ್ಚು-ಹೆಚ್ಚಾಗಿ ಹಳ್ಳಿಗಳ ಸಂಸ್ಕೃತಿಯಿಂದ ಹೊರಬಂದು ಸಂಸ್ಕೃತಿಯೇತರವಾಗಿರುವ ನಗರಗಳನ್ನು ಸೇರಿಕೊಳ್ಳುತ್ತಿರುವುದು. ಸೇರಿಕೊಂಡು ತಮ್ಮ ಆಳದ ಭಾಷಾಮೂಲಗಳನ್ನು, ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿರುವುದು.

ಇನ್ನೊಂದೆಡೆ ಸಂಸ್ಕೃತಿಯ ಕೇಂದ್ರಗಳಾದ ಹಳ್ಳಿಗಳು ಖಾಲಿಯಾಗಿ ಹೋಗುತ್ತಿರುವುದು. ನಿಜವಾಗಿಯೂ ಭಾಷೆ ಸತ್ವಭರಿತವಾಗಿರುವುದು ಹಳ್ಳಿಗಳಲ್ಲಿ. ಆದರೆ ಈಗ ಆ ಸಾಂಸ್ಕೃತಿಕ ವ್ಯವಸ್ಥೆಯೇ ನಾಶವಾಗುತ್ತಿದೆ. ನಿಜವಾದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಒಡೆದು ಹೋಗುತ್ತಿದೆ. ಸಹಜವಾಗಿ ಕಲಾಪ್ರಕಾರಗಳು, ಭಾಷಾ ಮಾಧ್ಯಮಗಳು ನಿಜವಾದ ಕನ್ನಡ ಸಂಸ್ಕೃತಿಯ ಬೇರನ್ನು ಹಿಡಿಯಲು ವಿಫ‌ಲವಾಗಿ ಹೋಗಿವೆ. ಕನ್ನಡ ಮಾಧ್ಯಮ ಶಾಲೆಗಳು ಸಂಸ್ಕೃತಿಯನ್ನು ಹಿಡಿದಿಡಲು ಸಫ‌ಲವಾಗದಿದ್ದದ್ದು ಸಮಸ್ಯೆಗೆ ಕಾರಣ.

ಪರಿಣಾಮವೆಂದರೆ ಜನ ಆಳವಾದ ಕನ್ನಡ ಸಂಸ್ಕೃತಿಯನ್ನೇ ಕಳೆದುಕೊಂಡು ನಿಂತಂತಿದೆ. ಅದು ಕೇವಲ ಸಂವಹನದ ಭಾಷೆಯಾಗಿ ಹೋಗಿದೆ. ಪ್ರಸ್ತುತದ ಕ್ರೆçಸಿಸ್‌ಗೆ ಕಾರಣ ಇದು. ಹೀಗೆ ಭಾಷೆ ಮತ್ತು ಸಂಸ್ಕೃತಿ ತಮ್ಮತನವನ್ನು ಕಳೆದುಕೊಂಡಾಗ, ಆತ್ಮ ವಿಶ್ವಾಸವನ್ನು ಕಳೆದುಕೊಂಡಾಗ ಸಹಜವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಹುಟ್ಟಿಕೊಳ್ಳುವುದು ಅನುಕರಣೆ ಅಥವಾ ರೀಮೇಕ್‌ ಸಂಸ್ಕೃತಿ.

ವಿಷಾದವೆಂದರೆ ಸವಾಲನ್ನು ಎದುರಿಸಲು ನಮ್ಮ ಚಲನ ಚಿತ್ರಗಳು, ಸೀರಿಯಲ್‌ಗ‌ಳು ಹಿಂದೆ ಹೋಗಿ ನಮ್ಮ ಸಂಸ್ಕೃತಿಯ ಬೇರುಗಳನ್ನು ಪುನಃ ಹುಡುಕಬೇಕಿತ್ತು. ಆದರೆ ಭಾಷೆಯ ಸಾಂಸ್ಕೃತಿಕ ಆತ್ಮವಿಶ್ವಾಸ ಎಷ್ಟರ ಮಟ್ಟಿಗೆ ಕಳೆದು ಹೋಗಿದೆ ಎಂದರೆ ಕನ್ನಡ ಆ ಸವಾಲನ್ನು ಸ್ವೀಕರಿಸಲೇ ಇಲ್ಲ.

ಬದಲಾಗಿ (ದುರಂತದ ವಿಷಯವೆಂದರೆ) ಜನಪ್ರಿಯತೆಯ ಬೆನ್ನುಹತ್ತಿರುವ ನಮ್ಮ ಮಾಧ್ಯ ಮ ಗಳು ಇಂದು ಬೇರೊಂದು ದಾರಿ ಹಿಡಿದು ಕೀಳು ಅಭಿರುಚಿ ಯನ್ನು ಓಲೈಸುತ್ತಿವೆ. ಇತ್ತೀಚೆಗೆ ಬರುತ್ತಿರುವ ಅಲುಗಾಡಿಸು ಇತ್ಯಾದಿ ಹಾಡುಗಳನ್ನು ಕೇಳಬೇಕು. ಅಲ್ಲದೆ ಜನಪ್ರಿಯ ಸೀರಿಯಲ್‌ಗ‌ಳ ಭಾಷೆಯನ್ನು ಕೇಳಬೇಕು. ಅದು ಕನ್ನಡವೇ ಅಲ್ಲ. ಇವೆಲ್ಲ ಒಂದು ಭಾಷೆ ತನ್ನ ಆತ್ಮ ವಿಶ್ವಾಸವನ್ನು ಕಳೆದುಕೊಂಡ ಸೂಚನೆಗಳು. ಕನ್ನಡದ ಪ್ರಸ್ತುತ ಸ್ಥಿತಿ ಇರುವುದು ಹೀಗೆ.

ಹೀಗೆ ಕನ್ನಡ ಭಾಷೆ ಸಂಕಷ್ಟದಲ್ಲಿದೆ. ಅನುಮಾನವೇ ಇಲ್ಲ. ಹಾಗೆಯೇ ಪರಿಹಾರೋಪಾಯ ಇಲ್ಲವೆಂದೇನೂ ಇಲ್ಲ. ಅದು ಇರುವುದು ನಮ್ಮ ಇಡೀ ಸಂಸ್ಕೃತಿಯ ಪುನರುಜ್ಜೀವನದಲ್ಲಿ. ಇದರಲ್ಲಿ ರಾಜಕೀಯ ನಾಯಕತ್ವದ ಪಾಲು ಕೂಡ ಬಹಳ ದೊಡ್ಡದು. ಕರ್ನಾಟಕದ ರಾಜಕೀಯ ಆರ್ಥಿಕ ನಾಯಕತ್ವ ಮಾರುಕಟ್ಟೆಯ ವಿಚಾರಗಳನ್ನು ಯೋಚಿಸಬೇಕಿದೆ. ಉತ್ತಮ ಕನ್ನಡ ಚಲನಚಿತ್ರಗಳಿಗೆ ಮಾರುಕಟ್ಟೆ ಒದಗಿಸಬೇಕಿದೆ. ಪ್ರಾದೇಶಿಕ ಕನ್ನಡ ಕಲೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಕನ್ನಡ ಸಂಸ್ಕೃತಿಯನ್ನೇ ಬಳಗೊಳಿಸ ಬೇಕಿದೆ. ಕೀಳು ಅಭಿರುಚಿಗೆ ಕಡಿವಾಣ ಹಾಕಬೇಕಿದೆ. ಇವೆಲ್ಲವನ್ನೂ ತ್ವರಿತಗತಿಯಲ್ಲಿ ಹಮ್ಮಿಕೊಳ್ಳಬೇಕಿದೆ. ಒಟ್ಟಾರೆಯಾಗಿ ಒಂದು ಹಂತದಲ್ಲಿ, ಒಂದು ಮಟ್ಟದಲ್ಲಿ ನಮಗೆ ತಮಿಳುನಾಡಿನಲ್ಲಿ ಇದ್ದಂತಹ ಭಾಷಾ ಶಾವಿನಿಸಂನ, ಭಾಷಾ ರಾಜಕೀಯ ನಾಯ ಕತ್ವದ ಅಗತ್ಯತೆ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಇದೆ. ರಾಜಕಾರ ಣಿಗಳು ಸಾಹಿತಿಗಳು ಕಲಾವಿದರು ಸೇರಿದ ಇಡೀ ಸಾಂಸ್ಕೃತಿಕ ಪುನರುತ್ಥಾನದ ಕುರಿತಾದ ಆಧುನಿಕ ಅಂಶಗಳುಳ್ಳ ದೇಸೀ ಚಳವಳಿಯೊಂದನ್ನು ಯೋಜಿಸಲು ಇದು ಸಮಯ.

– ಡಾ. ಆರ್‌.ಜಿ. ಹೆಗಡೆ

ಟಾಪ್ ನ್ಯೂಸ್

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು…

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Heavy Rain: ಗೋವಾದಲ್ಲಿ ಭಾರೀ ಮಳೆ… ಧರೆಗುರುಳಿದ ಮರ, ಭೂಕುಸಿತ, ಅಪಾಯದಂಚಿನಲ್ಲಿ ಮನೆ

Heavy Rain: ಗೋವಾದಲ್ಲಿ ಭಾರೀ ಮಳೆ… ಧರೆಗುರುಳಿದ ಮರ, ಭೂಕುಸಿತ, ಅಪಾಯದಂಚಿನಲ್ಲಿ ಮನೆ

Big Bash Winning Coach Luke Williams Joins RCB Women’s Team as Head Coach

WPL; Royal Challengers Bangalore ಮಹಿಳಾ ತಂಡಕ್ಕೆ ಹೊಸ ಕೋಚ್ ನೇಮಕ

Election: ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ನೂತನ ತಂತ್ರ ರೂಪಿಸಿದ ಗಡ್ಕರಿ

Election: ಲೋಕಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ನೂತನ ತಂತ್ರ ರೂಪಿಸಿದ ಗಡ್ಕರಿ

3-panaji

Panaji: ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು…

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Desi Swara: ದುಬೈ, ಅಬುಧಾಬಿ- ಸೆ. 30, ಅ. 1ರಂದು ಯಕ್ಷಸಂಭ್ರಮ

Desi Swara: ದುಬೈ, ಅಬುಧಾಬಿ- ಸೆ. 30, ಅ. 1ರಂದು ಯಕ್ಷಸಂಭ್ರಮ

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Desi Swara: ದುಬೈ-ರಘುಪತಿ ಭಟ್‌ ಅವರಿಗೆ ಸಮ್ಮಾನ

Desi Swara: ದುಬೈ-ರಘುಪತಿ ಭಟ್‌ ಅವರಿಗೆ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.