Kannada News

Kannada Newspaper

9 mins ago

ಮಂಗಳೂರು ಲಾಕ್ ಡೌನ್ ಪ್ರಸಂಗ: ರೂಮ್ ಗೆ ಸೂಟ್ ಕೇಸ್ ನಲ್ಲಿ ಗೆಳೆಯನನ್ನು ತಂದು ಸಿಕ್ಕಿಬಿದ್ದ!

17 mins ago

ಮತ್ಸ್ಯ ಪ್ರಿಯರಿಗೆ ಸಿಹಿ ಸುದ್ದಿ ನಾಡದೋಣಿ‌ ಮೀನಗಾರಿಕೆ ಆರಂಭ

30 mins ago

ರಾಜ್ಯದಲ್ಲಿ ದಿನೇ ದಿನೇ ಏರುತ್ತಿದೆ ಸೋಂಕಿತರ ಸಂಖ್ಯೆ: ಇಂದು ಹೊಸ 10 ಕೋವಿಡ್ ಪ್ರಕರಣ ಪತ್ತೆ

53 mins ago

ಲಾಕ್ ಡೌನ್; PPF, ಸುಕನ್ಯಾ ಸಮೃದ್ಧಿ ಯೋಜನೆ ಠೇವಣಿದಾರರಿಗೆ ರಿಲೀಫ್, ಕೇಂದ್ರ ಹೇಳಿದ್ದೇನು?

1 hour ago

ಕೋವಿಡ್ ಯೋಧರಿಗೆ ಉಚಿತ ಪೆಟ್ರೋಲ್: ಅಂತರ ಕಾಪಾಡದೆ ಮುಗಿಬಿದ್ದ ವೈದ್ಯಕೀಯ, ಪೊಲೀಸ್ ಸಿಬ್ಬಂದಿ

2 hours ago

ಗೋಲಗುಮ್ಮಟದಿಂದ ಬಡಿಕಮಾನ್ ವರೆಗೆ ಸಂಪೂರ್ಣ ಸೀಲ್ ಡೌನ್

2 hours ago

ಕೋವಿಡ್ ವೈರಸ್ ಭೀತಿ: ಜಮ್ಮು-ಕಾಶ್ಮೀರದಲ್ಲಿ 65 ಮಂದಿ ಕೈದಿಗಳ ಬಿಡುಗಡೆ, ಹೈಕೋರ್ಟ್ ಗೆ ವರದಿ

3 hours ago

4 ದಶಕದ ಹಿಂದಿನ ಕ್ರಾಂತಿ!ಮುಜಿಬುರ್ ಹತ್ಯಾ ದೋಷಿ ನಿವೃತ್ತ ಸೇನಾ ಕ್ಯಾಪ್ಟನ್ ಗೆ ಮರಣದಂಡನೆ

3 hours ago

ಸೋಂಕು ತಡೆಗೆ ಅವಿರತ ಶ್ರಮ: ಕೊಪ್ಪಳ ಡಿಸಿ ಸುನೀಲ ಕುಮಾರ್ ಕೆಲಸಕ್ಕೆ ಪಕ್ಷಾತೀತ ಪ್ರಶಂಸೆ

4 hours ago

ಕೋವಿಡ್-19 ಆಸ್ಪತ್ರೆಯಾಗಿ ಬದಲಾದ ಸರ್ಕಾರಿ ಜಿಲ್ಲಾಸ್ಪತ್ರೆ, ಗೋಲಗುಮ್ಮಟ ಪ್ರದೇಶ ಸೀಲ್ ಡೌನ್

#Trending Videos

ಲಾಕ್ ಡೌನ್; PPF, ಸುಕನ್ಯಾ ಸಮೃದ್ಧಿ ಯೋಜನೆ ಠೇವಣಿದಾರರಿಗೆ ರಿಲೀಫ್, ಕೇಂದ್ರ ಹೇಳಿದ್ದೇನು?

ಕೋವಿಡ್ ವೈರಸ್ ಭೀತಿ: ಜಮ್ಮು-ಕಾಶ್ಮೀರದಲ್ಲಿ 65 ಮಂದಿ ಕೈದಿಗಳ ಬಿಡುಗಡೆ, ಹೈಕೋರ್ಟ್ ಗೆ ವರದಿ

ಕೋವಿಡ್19: ಭಾರತದಲ್ಲಿ ಸೋಂಕಿತರ ಸಂಖ್ಯೆ 8,356ಕ್ಕೆ ಏರಿಕೆ, 273 ಜನರು ಸಾವು

ಮುಂಬೈ ತಾಜ್ ಮಹಲ್ ಹೊಟೇಲ್ ನ ಆರು ಮಂದಿ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್

ನವಜಾತ ಶಿಶು ಜೀವ ಉಳಿಸಿದ ವೈದ್ಯರು

ದೂರದಿಂದಲೇ ರೋಗಿಯ ಎದೆ ಬಡಿತ ಪ್ರಮಾಣ ದಾಖಲಿಸಲು ಬಂದಿದೆ ಡಿಜಿಟಲ್‌ ಸ್ಟೆತಾಸ್ಕೋಪ್‌

ಮಲೇರಿಯಾ ಔಷಧ ಶೋಧಕ ಪಿ.ಸಿ.ರಾಯ್‌

ಉಗ್ರರ ಮೇಲೆ ಮತ್ತೂಂದು ಸರ್ಜಿಕಲ್‌ ಸ್ಟ್ರೈಕ್

ಲಾಕ್‌ ಡೌನ್‌ ಇಲ್ಲದೇ ಇರುತ್ತಿದ್ದರೆ ಇನ್ನೂ ಹೆಚ್ಚುತ್ತಿತ್ತು ಕೋವಿಡ್ ಸೋಂಕು: ಕೇಂದ್ರ ಸರಕಾರ

ಮಹಾರಾಷ್ಟ್ರದಲ್ಲಿ ತಬ್ಲೀಘಿ ಜಮಾತ್‌ ಸದಸ್ಯ ಆತ್ಮಹತ್ಯೆ

ಕೋವಿಡ್ ವೈರಸ್ ಪತ್ತೆಗೆ ಕ್ಷಯ ರೋಗ ಪರೀಕ್ಷಾ ಯಂತ್ರ

ಪ್ರಧಾನಮಂತ್ರಿ ಕಛೇರಿಯಿಂದ ಕೋವಿಡ್ ನಿಯಂತ್ರಣ ಕ್ರಮಗಳ ಪರಿಶೀಲನೆ

ದಿನ ಪತ್ರಿಕೆಗಳ ನಿಲುಗಡೆಗೆ ಹೈಕೋರ್ಟ್‌ ನಕಾರ ; ಪತ್ರಿಕೆಗಳಿಂದ ಸೋಂಕು ಹರಡುವುದು ಸತ್ಯವಲ್ಲ

ರಸ್ತೆಯಲ್ಲಿ ಬಿದ್ದಿದ್ದ ನೋಟುಗಳನ್ನು ಕಂಡ ಜನ ಪೊಲೀಸರಿಗೆ ಫೋನ್ ಮಾಡಿದರು; ಇಲ್ಲಿದೆ ಕಾರಣ

ಏಪ್ರಿಲ್ 30ರವರೆಗೂ ಲಾಕ್ ಡೌನ್, ಜನರ ನಡವಳಿಕೆ ಮೇಲೆ ಮುಂದಿನ ನಿರ್ಧಾರ: ಸಿಎಂ ಠಾಕ್ರೆ

ಶನಿವಾರ ಒಂದೇ ದಿನ ಭಾರತದಲ್ಲಿ ದಾಖಲೆ ಪ್ರಮಾಣದ 1,035 ಕೋವಿಡ್ 19 ಪ್ರಕರಣ ಪತ್ತೆ

ಲಾಕ್ ಡೌನ್: ಪಶ್ಚಿಮಬಂಗಾಳದ ಮಸೀದಿಯಲ್ಲಿ ನೂರಾರು ಮಂದಿ ನಮಾಜ್, 50 ಜನರ ವಿರುದ್ಧ FIR

Watch; ಕೋವಿಡ್ ಭೀತಿ ನಡುವೆ; Pokಯಲ್ಲಿ ಪಾಕ್ ಕಳ್ಳಾಟ, ಉಗ್ರರ ಅಡಗುತಾಣ ಧ್ವಂಸಗೊಳಿಸಿದ ಸೇನೆ

ಊರಿಗೆ ಹೋಗ್ಬೇಕು ಬಿಡಿ: ರೊಚ್ಚಿಗೆದ್ದ ವಲಸಿಗರಿಂದ ಕೈಗಾಡಿಗಳಿಗೆ ಬೆಂಕಿ; 80 ಮಂದಿ ಬಂಧನ

ಕೋವಿಡ್ 19: ದೆಹಲಿಯಲ್ಲಿ 30 ಹಾಟ್ ಸ್ಪಾಟ್, ಸೋಂಕು ಪೀಡಿತರ ಸಂಖ್ಯೆ 900ಕ್ಕೆ ಏರಿಕೆ

ವೀಡಿಯೊ

ರಾಶಿ ಫಲ

ಶುಕ್ರವಾರ, ಏಪ್ರಿಲ್ 03:  ದೈನಂದಿನ ರಾಶಿ ಭವಿಷ್ಯ  

ಕ್ರೀಡೆ

ಕೋವಿಡ್-19 ಸಮಯದಲ್ಲಿ ಗಾಲ್ಫ್ ಕ್ಯಾಡಿಗಳ ಸಂಕಟ ಕೇಳುವವರಾರು? ಯಾರು ಕ್ಯಾಡಿಗಳು?

ದಿಲ್ಲಿ ಪೊಲೀಸರ ನಿಷ್ಕಲ್ಮಷ ಸೇವೆಗೆ ವಿರಾಟ್ ಕೊಹ್ಲಿ ಶ್ಲಾಘನೆ

“ಭಾರತ ವಿರುದ್ಧದ ತವರಿನ ಸೋಲು ಇನ್ನೂ ಕಾಡುತ್ತಿದೆ’

ಧೋನಿಯನ್ನು ಈಗಲೇ ನಿವೃತ್ತಿಗೆ ಪ್ರೇರೇಪಿಸುವುದು ಒಳಿತಲ್ಲ: ಹುಸೇನ್‌

2020ರ ಅಂತ್ಯದೊಳಗೆ ಏಷ್ಯನ್‌ ಗೇಮ್ಸ್‌ ಕಾಮಗಾರಿ ಪೂರ್ಣ

ಸಿನಿಮಾ

ತುಂಡು ಬಟ್ಟೆಯ ಮೇಲಲ್ಲ ದೇವರ ಮೇಲೆ ವಿಶ್ವಾಸವಿಡಿ ಎಂದು ಮಾಸ್ಕ್ ಗೇಲಿ ಮಾಡಿದ ಯುವಕನಿಗೆ ಸೋಂಕು

ಕೂಲಿ ಚಿತ್ರದ ಕ್ಲೈಮ್ಯಾಕ್ಸ್ ಬದಲು!Big B ಬಚಾವ್,ದುರ್ಯೋಧನ ಪುನೀತ್ ಜೀವನಕ್ಕೆ ಕಪ್ಪು ಚುಕ್ಕೆ

ಸಿಎಂಗೆ ಉಪ್ಪಿ ನೀಡಿದ ಸಲಹೆಗಳು

ತೆಲುಗಿನತ್ತ ಆ ಕರಾಳ ರಾತ್ರಿ

ರೈತರನ್ನು ಉಳಿಸೋಣ

ಜ್ಯೋತಿಷ್ಯ

ಮೇಷ

ಸಂಚಾರದಲ್ಲಿ, ಚಾಲನೆಯಲ್ಲಿ ಖರ್ಚುವೆಚ್ಚಗಳು ಹೆಚ್ಚಲಿವೆ. ಶಾರೀರಿಕ ತೊಂದರೆಯ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ದೈವಾನುಗ್ರಹವಿಲ್ಲದೆ ಎಲ್ಲಾ ಕೆಲಸಗಳನ್ನು ಪ್ರಯತ್ನದಿಂದಲೇ ಮುನ್ನಡೆಸಿರಿ.

ವೃಷಭ

ಅನಿರೀಕ್ಷಿತ ರೀತಿಯಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸಾಂಸಾರಿಕವಾಗಿ ಪತ್ನಿಯಿಂದ ಸ್ಪೂರ್ತಿದಾಯಕ ವಾತಾವರಣ ಮುನ್ನಡೆಗೆ ಪೂರಕವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಕಂಡು ಬಂದೀತು.

ಮಿಥುನ

ಹತ್ತಿರದ ಬಂಧುಗಳಿಂದ, ನೆರೆಹೊರೆಯವರಿಂದ ಅನಾವಶ್ಯಕವಾಗಿ ಕಿರುಕುಳವನ್ನು ಅನುಭವಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲಕ್ಕೆ ತಕ್ಕುದಾದ ಫ‌ಲಿತಾಂಶ ದೊರಕದು, ಆರೋಗ್ಯದಲ್ಲಿ ಜಾಗ್ರತೆ.

ಕಟಕ

ಆಗಾಗ ಅನಾವಶ್ಯಕವಾದ ಅಲೆದಾಟದಿಂದ ಖರ್ಚು ಹೆಚ್ಚಲಿದೆ. ನಿರೀಕ್ಷಿತ ಕೆಲಸ ಕಾರ್ಯಗಳು ನಿಮ್ಮಿಚ್ಚೆಯಂತೆ ನಡೆಯಲಾರದು. ಮುಖ್ಯವಾಗಿ ಸಹವಾಸ ದೋಷದಿಂದ ಧರ್ಮ ಬಾಹಿರ ಪ್ರವೃತ್ತಿ ಹೆಚ್ಚಾದೀತು.

ಸಿಂಹ

ಶುಭಕಾರ್ಯಗಳಿಗೆ ಅಡೆತಡೆಗಳು ಎದುರಾದರೂ ಕೆಲಸ ಕಾರ್ಯಗಳು ನಿಶ್ಚಿತವೆನ್ನಬಹುದು. ಕೆಟ್ಟ ಜನರ ಚಾಡಿ ಮಾತಿನಿಂದ ಮನಸ್ಸಿಗೆ ಬೇಸರವಾದೀತು. ಯುವ ಪ್ರೇಮಿಗಳಿಗೆ ಕಂಕಣ ಭಾಗ್ಯವಿದೆ.

ಕನ್ಯಾ

ಆರೋಗ್ಯದ ಏರುಪೇರಿನಿಂದ ಆಸ್ಪತ್ರೆಯ ದರ್ಶರ್ಶವಾದೀತು. ಆಫಿಸಿನ ಕೆಲಸದ ಒತ್ತಡವು ಸುಖ, ನೆಮ್ಮದಿಯನ್ನು ಹಾಳುಗೈಯಲಿದೆ. ನೂತನ ಹಣ ಹೂಡಿಕೆಯಲ್ಲಿ ಕಷ್ಟವನ್ನು ಅನುಭವಿಸುವಿರಿ.

ತುಲಾ

ಹಿರಿಯರಿಗೆ ದೇಹಾರೋಗ್ಯದ ಬಗ್ಗೆ ಸಮಸ್ಯೆ ಕಂಡು ಬಂದೀತು. ವ್ಯಾಪಾರ ವೈವಾಟಿನಲ್ಲಿ ಚೇತರಿಕೆಯು ಕಂಡು ಬರಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯಕ್ಕಾಗಿ ಅನಿರೀಕ್ಷಿತ ಒದ್ದಾಟ ಕಂಡು ಬಂದೀತು.

ವೃಶ್ಚಿಕ

ನಿರುದ್ಯೋಗಿಗಳಿಗೆ ಉದ್ಯೋಗ ಸಂಬಂಧಿ ತಾತ್ಕಾಲಿಕ ವ್ಯವಸ್ಥೆಯಾಗಲಿದೆ. ಆರ್ಥಿಕ ಅಡಚಣೆಯು ಆಗಾಗ ಕಂಡುಬಂದರೂ ಧನಾದಾಯ ಇದ್ದೇ ಇರುತ್ತದೆ. ಕೋರ್ಟು ಅಲೆದಾಟದಿಂದ ಧನವ್ಯಯ ಇರುವುದು.

ಧನು

ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ಗೊಂದಲದ ಸ್ಥಿತಿಯಿಂದ ಆತಂಕ ತಂದೀತು. ದುಡಿಯುವ ಮಕ್ಕಳಿಂದ ಸಮಸ್ಯೆಗಳು ಕಂಡು ಬಂದೀತು. ಖರ್ಚು ವೆಚ್ಚಗಳು ಆಗಾಗ ಆತಂಕಕ್ಕೆ ಕಾರಣವಾಗಲಿದೆ.

ಮಕರ

ಮಹಿಳಾ ವರ್ಗದವರಿಗೆ ಉದ್ಯೋಗದಲ್ಲಿ ಬದಲಾವಣೆ ಕಂಡು ಬರಲಿದೆ. ಕಟ್ಟಡ ನಿರ್ಮಾಣ ದಂತಹ ಕೆಲಸಗಾರರಿಗೆ ಆರ್ಥಿಕ ಸ್ಥಿತಿಯಿಂದ ಮುಂದೂಡಲಿದೆ. ದೇವತಾ ಕಾರ್ಯಗಳಿಂದ ಸಮಾಧಾನವಾದೀತು

ಕುಂಭ

ವೃತ್ತಿರಂಗದಲ್ಲಿ ಕಾರ್ಯ ಒತ್ತಡ ಅಧಿಕವಾಗಲಿದೆ. ಆಗಾಗ ಭೀತಿಯ ನೆರಳಲ್ಲಿ ಇರಬೇಕಾದೀತು. ಯಂತ್ರ ಜೀವಿಗಳಿಗೆ ಕ್ಷೇಶ ಹೆಚ್ಚಲಿದೆ. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ.

ಮೀನ

ಋಣಾತ್ಮಕ ಚಿಂತನೆಗಳಿಂದ ಮನಸ್ಸೇ ಹಾಳಾದೀತು. ಯಾವುದೇ ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ವಿಳಂಬವಾದೀತು. ಸಾಂಸಾರಿಕವಾಗಿ ಮಕ್ಕಳಿಂದ ಕಿರಿಕಿರಿ ತಪ್ಪಲಾರದು. ತಾಳ್ಮೆ ಸಮಾಧಾನ ಇರಲಿ.

ಮೇಷ

ಸಾಮಾಜಿಕವಾಗಿ ಗುರು, ಧಾರ್ಮಿಕ ವರಿಷ್ಠರ ಭೇಟಿಗೆ ಅವಕಾಶವಿರುತ್ತದೆ. ಆರ್ಥಿಕವಾಗಿ ಸಮಸ್ಯೆಗಳ ಪರಿಹಾರಾರ್ಥ ಯಶಸ್ವಿ ಕಾರ್ಯ ತಂತ್ರಗಳ ಜೋಡಣೆ, ರೂಪಣೆ, ಸಫ‌ಲತೆಯನ್ನು ತಂದುಕೊಡಲಿದೆ. ವಾಹನ, ಯಂತ್ರೋಪಕರಣಗಳಿಂದ ಖರ್ಚು-ವೆಚ್ಚಗಳು ಅಧಿಕರೂಪದಲ್ಲಿ ತೋರಿ ಬಂದಾವು. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಅನುಷ್ಠಾನ ಗೊಳ್ಳಲಿರುವ ಸೂಚನೆಯು ಕಂಡುಬರುತ್ತದೆ. ಹೂಡಿಕೆಗಳಲ್ಲಿ ತುಸು ಚೇತರಿಕೆ ತಂದರೂ ಕಾದುನೋಡುವ ನೀತಿ ಉತ್ತಮ. ಸಾಂಸಾರಿಕವಾಗಿ ಸಣ್ಣಪುಟ್ಟ ಸಮಸ್ಯೆ ಗಳಿದ್ದರೂ ಹೊಂದಾಣಿಕೆ ಮುಖ್ಯ. ಶುಭವಾರ: ಮಂಗಳ, ಗುರು, ಶನಿವಾರ

ವೃಷಭ

ಕುಟುಂಬ ವರ್ಗದವರ ಶುಭಕಾರ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಸಂತಸ ತರಲಿದೆ. ಬಂಧು ಕುಟುಂಬಿಕರ ಮಿಲನದ ಅವಕಾಶದಿಂದ ಇಚ್ಛಿತ ಕೆಲಸ ಕಾರ್ಯಗಳು ನಡೆಯಲಿವೆ. ವಾಣಿಜ್ಯ, ವಿತ್ತಖಾತೆಗೆ ಸಂಬಂಧಪಟ್ಟ ಕಾರ್ಯ ಗಳಲ್ಲಿ ಪ್ರಗತಿ ತೋರಿಬರುತ್ತದೆ. ಹೂಡಿಕೆಗಳಲ್ಲಿ ಚೇತರಿಕೆ, ಉದ್ಯೋಗದಲ್ಲಿ ಇಚ್ಛಿತ ಬದಲಾವಣೆ ಸಂಭವನೀಯವಾದೀತು. ಕೀಳರಿಮೆ, ದೌರ್ಬಲ್ಯಗಳಿಂದ ಚೇತರಿಸಿ ಕೊಳ್ಳುವ ಸೂಚನೆ ಕಂಡುಬಂದೀತು. ವಾಹನ, ಭೂಖರೀದಿ, ಮನೆನಿರ್ಮಾಣ ಕಾರ್ಯ ಹಾಗೂ ಶುಭಮಂಗಲ ಕಾರ್ಯಗಳಿವೆ. ಶುಭವಾರ: ಮಂಗಳ, ಶನಿ, ಭಾನುವಾರ

ಮಿಥುನ

ಕಾರ್ಯಕ್ಷೇತ್ರದಲ್ಲಿ ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯ ಬೇಕಾದ ಪರಿಸ್ಥಿತಿಯು ತೋರಿ ಬರುತ್ತದೆ. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಅಧಿಕಾರಿ ವರ್ಗದವರಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ಒಮ್ಮೊಮ್ಮೆ ಸಹೋದ್ಯೋಗಿಗಳ ವರ್ತನೆಯಿಂದ ಮಾನಸಿಕವಾಗಿ ಉದ್ವೇಗತರಲಿದೆ. ಸಮಾಧಾನದಿಂದ ಮುಂದು ವರಿಯಿರಿ. ಧನಾರ್ಜನೆಯಲ್ಲಿ ಪ್ರಗತಿ ಇದ್ದರೂ ಖರ್ಚುವೆಚ್ಚಗಳು ಅಧಿಕ ರೂಪ ದಲ್ಲಿದ್ದಾವು. ಶುಭವಾರ: ಗುರು, ಶುಕ್ರ, ಭಾನುವಾರ

ಕಟಕ

ಅನ್ಯ ಕಾರ್ಯಗಳ ಒತ್ತಡದಿಂದ ಮಾನಸಿಕ ಅಶಾಂತಿಗೆ ಕಾರಣವಾದೀತು. ಸ್ನೇಹಿತರಲ್ಲಿ ಕಲಹ, ಮನಸ್ತಾಪದ ಪ್ರಸಂಗ ತೋರಿ ಬಂದೀತು. ಆರೋಗ್ಯ ಭಯ ನಿವಾರಣೆಯಾಗಲಿದೆ. ಹಣಕಾಸಿನ ವಿಚಾರಣೆಯಲ್ಲಿ ವಿವಾದಗಳು ಕಂಡು ಬರಲಿದೆ. ಹೊಂದಾಣಿಕೆಯ ಪ್ರಯತ್ನ ಅಗತ್ಯವಿದೆ. ವೃತ್ತಿರಂಗದಲ್ಲಿ ಅಧಿಕಾರಿ ವಲಯದಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹವು ಲಭಿಸಲಿದೆ. ವಿದ್ಯಾರ್ಥಿಗಳು ತಮ್ಮ ಉದಾಸೀನತೆಯನ್ನು ಬಿಟ್ಟು ಪ್ರಯತ್ನಬಲ ಮುಂದುವರಿಸಬೇಕು. ಶುಭವಾರ: ಬುಧ, ಶುಕ್ರ, ಭಾನುವಾರ

ಸಿಂಹ

ಶುಭಕಾರ್ಯಗಳ ಚಿಂತನೆ ಕಾರ್ಯರೂಪಕ್ಕೆ ಬರಲಿದೆ. ಧನಾರ್ಜನೆಯಲ್ಲಿ ಪ್ರಗತಿ, ಭೂ ನಿವೇಶನ, ಗೃಹ ನಿರ್ಮಾಣ ಕಾರ್ಯಗಳಿಗಾಗಿ ಓಡಾಟ ತಂದೀತು. ಧಾರ್ಮಿಕ ಗುರುಗಳ ಭೇಟಿಯ ಅಪೂರ್ವ ಅವಕಾಶಗಳಿಂದ ಮಾನಸಿಕವಾಗಿ ನೆಮ್ಮದಿ ತಂದೀತು. ದೈವಾನುಗ್ರಹವು ಉತ್ತಮವಿದ್ದರೂ ಅನಾವಶ್ಯಕ ಮಾನಸಿಕ ಭ್ರಮೆಗಳು ಕಾಡಲಿವೆ. ದುಂದುವೆಚ್ಚಾದಿಗಳ ಮೇಲೆ ಹತೋಟಿ ಅಗತ್ಯವಿರುತ್ತದೆ. ವಿದ್ಯಾರ್ಥಿಗಳಿಗೆ ಸಹವಾಸದೋಷದಿಂದ ಅನಗತ್ಯವಾದ ಅಪವಾದವು ಕಾಡಲಿದೆ. ಶುಭವಾರ: ಸೋಮ, ಗುರು, ಶನಿವಾರ

ಕನ್ಯಾ

ಆರ್ಥಿಕ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆಯೊಂದರ ಅನುಭವವು ಆಗಲಿದೆ. ಉದ್ಯೋಗ ರಂಗದಲ್ಲಿ ಮೇಲಾಧಿಕಾರಿಗಳ ಬಿಗು ವಾತಾವರಣವು ಅಸಮಾಧಾನಕ್ಕೆ ಕಾರಣವಾದೀತು. ಕೌಟುಂಬಿಕ ವಾದ-ವಿವಾದ, ಕಲಹಗಳು ಹಂತ ಹಂತವಾಗಿ ಉಪಶಮನವಾಗಲಿವೆ. ಹಿತ ಶತ್ರುಗಳಿಂದ ವಿರೋಧಿಗಳಿಗೆ ಆಮಿಷ, ಪ್ರಲೋಭನೆಯಿಂದ ರಾಜಕೀಯ ವರ್ಗದವರಿಗೆ ಆತಂಕ ತಂದೀತು. ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಇನ್ನೊಬ್ಬರ ಬಗ್ಗೆ ಅಸಹನೆಯನ್ನು ಬಿಟ್ಟುಬಿಡಿರಿ. ಶುಭವಾರ: ಬುಧ, ಗುರು, ಶುಕ್ರವಾರ

ತುಲಾ

ತುಸು ನಿಧಾನಗತಿಯಲ್ಲಿ ಸಾಗಲಿರುವ ಕಾರ್ಯ ಯೋಜನೆಯು ಕಿರಿಕಿರಿಯೆನಿಸಿದರೂ ಸಮಾಧಾನ ತರಲಿದೆ. ಸ್ಥಗಿತ ಯೋಜನೆಯೊಂದರ ಅನುಷ್ಠಾನಾರ್ಥ ಕಾರ್ಯಚಟುವಟಿಕೆ ಸಫ‌ಲವಾಗಲಿದೆ. ಗೃಹದಲ್ಲಿ ತುಸು ನೆಮ್ಮದಿ, ಶ್ರೇಯಸ್ಸು ಉಂಟಾಗುವುದು. ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ತೋರಿ ಬಂದರೂ ನಿರೀಕ್ಷಿತ ಫ‌ಲ ಲಭಿಸಲಿದೆ. ಕಾರ್ಯ ಕ್ಷೇತ್ರದಲ್ಲಿ ಮನೋದೃಢತೆ, ದಿಟ್ಟತನದ ಪ್ರವೃತ್ತಿಯಿಂದ ಪ್ರಗತಿಯ ಮುನ್ನಡೆಯನ್ನು ಸಾಧಿಸಲಿದ್ದೀರಿ. ಗುರಿಯತ್ತ ನಡೆಯಲು ದೃಢ ಮನಸ್ಸು ಮಾಡಿರಿ. ಶುಭವಾರ: ಗುರು, ಶುಕ್ರ, ಭಾನುವಾರ

ವೃಶ್ಚಿಕ

ಧನಾರ್ಜನೆಯ ವಿಪುಲ ಅವಕಾಶಗಳು ಸದ್ಯದಲ್ಲೇ ತೋರಿ ಬರಲಿವೆ. ಪೂರ್ವನಿಯೋಜಿತ ಕೆಲಸಕಾರ್ಯಗಳ ಮುನ್ನಡೆಗಾಗಿ ನಡೆಸುವ ಪ್ರಯತ್ನಗಳು ಫ‌ಲ ನೀಡಲಿವೆ. ಬಂಧುಮಿತ್ರರ ಸಹಕಾರ ಇಚ್ಛಿತ ಕಾರ್ಯಗಳಿಗೆ ಅನುಕೂಲವಾದೀತು. ಸಾಮಾಜಿಕ ಕೆಲಸಕಾರ್ಯಗಳಿಗಾಗಿ ಒತ್ತಡ ತೋರಿಬರಲಿದೆ. ತುಸು ಕಲಹ ಪ್ರಸಂಗ ಎದುರಾದರೂ ವೃತ್ತಿರಂಗದಲ್ಲಿ ಕೆಲಸ ಕಾರ್ಯಗಳು ಸರಾಗವಾಗಿ ನಡೆದುಹೋಗಲಿವೆ. ಗೃಹಕೃತ್ಯದಲ್ಲಿ ಅಡಚಣೆಗಳು ಮನಸ್ಸಿನ ನೆಮ್ಮದಿ ಕಡಿಮೆ ಮಾಡೀತು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದಿಂದ ಉತ್ತಮ ಫ‌ಲಿತಾಂಶವಿದೆ. ಶುಭವಾರ: ಗುರು, ಶನಿ, ಭಾನುವಾರ

ಧನು

ಒತ್ತಡದ ನಡುವೆಯೂ ಕಾರ್ಯನಿರ್ವಹಣೆಯಲ್ಲಿ ಸಫ‌ಲತೆ ಇರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ವಿರೋಧಿಗಳಲ್ಲಿ ಹೊಂದಾಣಿಕೆ ಮಾಡಿಕೊಂಡಲ್ಲಿ ಉತ್ತಮ. ಆರ್ಥಿಕವಾಗಿ ಸಾಲ ಮರುಪಾವತಿಯ ಬಗ್ಗೆ ಒತ್ತಡ ತಂದೀತು. ಸಾಂಸಾರಿಕವಾಗಿ ವಿಶ್ರಾಂತಿಯು ಸುಖಾಪೇಕ್ಷೆಯಾದೀತು. ವ್ಯಾಪಾರ, ವ್ಯವಹಾರಗಳಲ್ಲಿ ಸ್ನೇಹಿತರ ಸಹಾಯಹಸ್ತ ನಿಮಗೆ ನೆರವಾಗಲಿದೆ. ಭೂ, ನಿವೇಶನ, ಗೃಹ ನಿರ್ಮಾಣ ಕಾರ್ಯಗಳು, ನೂತನ ವ್ಯಾಪಾರ, ವ್ಯವಹಾರಗಳಿಗೆ ಇದು ಸಕಾಲವಲ್ಲ. ಕಠಿಣ ಪರಿಶ್ರಮ ಹಾಗೂ ಸತತ ಶ್ರಮದಿಂದ ಕಾರ್ಯಸಾಧನೆ ಆದೀತು. ಶುಭವಾರ: ಸೋಮ, ಗುರು, ಶುಕ್ರವಾರ

ಮಕರ

ಅಪೂರ್ವ ಅವಕಾಶವೊಂದು ಎದುರಾಗಲಿರುವ ಸೂಚನೆ ತಂದುಕೊಡಲಿದೆ. ವಿಶಿಷ್ಟ ಕಾರ್ಯವೈಖರಿಯಿಂದ ಆರ್ಥಿಕ ಬಿಕ್ಕಟ್ಟಿ ನಿಂದ ಪಾರಾಗಲಿದ್ದೀರಿ. ಸಾಂಸಾರಿಕ ಸಮಸ್ಯೆಯೊಂದರ ಮೇಲೆ ಹತೋಟಿ ಸಾಧಿಸುವ ಅವಕಾಶ ತಂದೀತು. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲದ ಯೋಗವು ಒದಗಿಬರಲಿದೆ. ಸಾಮಾಜಿಕ ಸೇವಾಕಾರ್ಯಗಳಲ್ಲಿ ನಿಮ್ಮ ಕಾರ್ಯ ಸಾಧನೆ ಗುರುತಿಸಲ್ಪಡುತ್ತದೆ. ಧಾರ್ಮಿಕ ಕಾರ್ಯಾಸಕ್ತಿ ತೋರಿ ಬಂದು ಮಾನಸಿಕ ಶಾಂತಿ, ಸಮಾಧಾನ ತಂದುಕೊಟ್ಟಿàತು. ಶ್ರೀಗುರುವನ್ನು ಆರಾಧಿಸುವುದು ಮುಖ್ಯವಾಗಿದೆ. ಶುಭವಾರ: ಬುಧ, ಗುರು, ಶುಕ್ರವಾರ

ಕುಂಭ

ವೃತ್ತಿರಂಗದಲ್ಲಿ ಇತರರೊಂದಿಗೆ ಹೊಂದಾಣಿಕೆ ಅಗತ್ಯವೆನಿಸಲಿದೆ. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲ ಒದಗಿಬರಲಿದೆ. ದೇಹಾ ರೋಗ್ಯದಲ್ಲಿ ಕೂಡಾ ಸುಧಾರಣೆ ಸಮಾಧಾನ ತರಲಿದೆ. ನಿರೀಕ್ಷೆಯಲ್ಲಿದ್ದ ಅವಕಾಶವೊಂದು ಕೈಗೆ ಬರಲಿದೆ. ಸದುಪಯೋಗಿಸಿ ಕೊಳ್ಳಿರಿ. ಧನಾರ್ಜನೆಯಲ್ಲಿ ವಿವಿಧ ರೀತಿಯ ಸಂಗ್ರಹಯತ್ನದಲ್ಲಿ ಸಫ‌ಲತೆ ತಂದೀತು. ಶತ್ರುಭಯ ನಿವಾರಣೆ, ಉದ್ದೇಶಿತ ಕಾರ್ಯದಲ್ಲಿ ಸಿದ್ಧಿ. ಗೃಹ, ಭೂ, ವಾಹನಾದಿಗಳಿಗಾಗಿ ಧನವ್ಯಯ ವಾಗಲಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಕುಲದೇವತಾ ಸಂದರ್ಶನ ಭಾಗ್ಯ ಒದಗಿಬರಲಿದೆ. ಶುಭವಾರ: ಶಕ್ರು, ಶನಿ, ಭಾನುವಾರ.

ಮೀನ

ಶುಭಮಂಗಲ ಕಾರ್ಯಗಳಿಗಾಗಿ ಪ್ರಯಾಣ ಅನಿವಾರ್ಯ ವಾದೀತು. ವೃತ್ತಿರಂಗದಲ್ಲಿ ಚಿಂತನೆ ಹಾಗೂ ಕಾರ್ಯಗಳಲ್ಲಿ ವಿರೋಧಾಭಾಸ ಕಂಡು ಬಂದೀತು. ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟ ಕಾರ್ಯದಲ್ಲಿ ಪ್ರಗತಿ ಇದೆ. ವ್ಯಾಪಾರಿ ವರ್ಗದವರಿಗೆ ಹಳೆಯ ವಸ್ತು, ಸರಕುಗಳ ವಿಕ್ರಯದ ಅವಕಾಶದಿಂದ ಹೆಚ್ಚಿನ ಲಾಭದಾಯಕ ಆದಾಯವಿರುತ್ತದೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ. ಪ್ರತಿಷ್ಠೆ, ಗೌರವದ ಕಾರಣವಾಗಿ ಕೆಲವೊಂದು ಖರ್ಚು-ವೆಚ್ಚಗಳು ಅನಿವಾರ್ಯವಾಗಿ ಬಂದಾವು. ಶುಭವಾರ: ಸೋಮ, ಶುಕ್ರ, ಶನಿವಾರ

ಮೇಷ

ಯುಗಾದಿಯ ಆರಂಭದಿಂದ ಅಷ್ಟಮದ ಗುರು ಚಾರದ ಕಾಲವಾದ ಕಾರಣ ಕುಟುಂಬದ ಸುಖವು ಆತಂಕಕ್ಕೆ ಒಳಗಾಗಲಿದೆ. ಸರಕಾರೀ ನೌಕರರಿಗೆ ಹಿಂಭಡ್ತಿಯೂ ಸ್ಥಾನಪಲ್ಲಟ ಯೋಗ ಒದಗಿಬಂದೀತು. ಸ್ಥಿರಾಸ್ತಿ ಕ್ರಯ, ವಿಕ್ರಯಾದಿಗಳಿಂದ ಲಾಭ ವಿಲ್ಲವಾದರೂ ನಷ್ಟವಾಗದು. ಆರೋಗ್ಯದ ಬಗ್ಗೆ ಮುಖ್ಯವಾಗಿ ಹೃದಯ ಸಂಬಂಧಿ ತೊಂದರೆಗಳು, ಉದರ ಸಂಬಂಧಿ ವ್ಯಾಧಿಗಳು ಆಗಾಗ ಕಂಡುಬರಲಿವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಿಗದೆ ಅಸಮಾಧಾನ ಮೂಡಿ ಬರಲಿದೆ. ಮನೆ ಯಲ್ಲಿ ಹಿರಿಯರ ಮನಸ್ತಾಪದಿಂದಾಗಿ ಒಳಗೊಳಗೆ ಕೊರಗುವ ಕಾಲವಾದೀತು. ಹಿತಶತ್ರುಗಳಿಂದ, ದಾಯಾದಿಗಳಿಂದ ಅಪಮಾನ, ಅವಮಾನವಾದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಿಂದ ತುಸು ಸಂತಸವಾಗಲಿದೆ. ವ್ಯಾಪಾರ, ವ್ಯವಹಾರ ಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯು ಎದುರಾದೀತು. ಆರ್ಥಿಕವಾಗಿ ಪೆಟ್ಟು ಬೀಳಲಿದೆ. ಅಕ್ಟೋಬರ್‌ ತಿಂಗಳ ಅನಂತರ ಉದ್ಯೋಗ ರಂಗದಲ್ಲಿ ಉತ್ತಮ ಫ‌ಲ ಹಾಗೂ ಮುಂಭಡ್ತಿ ಯೋಗವಿದೆ. ಸರಕಾರಿ ನೌಕರವರ್ಗಕ್ಕೆ ಮು°ನಡೆ ತೋರಿ ಬರುವುದು. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಭಾಗ್ಯವಿದೆ. ಸಾಮಾಜಿಕ ರಂಗದಲ್ಲಿ ಕೀರ್ತಿ, ಗೌರವವು ಹೆಚ್ಚಲಿದೆ. ಸೋದರ ವರ್ಗಕ್ಕೆ ನಿಮ್ಮಿಂದ ಸಹಕಾರ ದೊರಕಲಿದೆ. ಈತನ್ಮಧ್ಯೆ ಅಧಿಕಾರ ಪ್ರಾಪ್ತಿಯಾದರೂ ನಿಭಾಯಿಸಲು ಕಷ್ಟವಾದೀತು. ಸಾಹಿತಿ ವರ್ಗಕ್ಕೆ ಆರ್ಥಿಕವಾಗಿ ಲಾಭ ಸಿಗಲಿದೆ. ಧಾರ್ಮಿಕ, ಆಧ್ಯಾತ್ಮಿಕ ಪ್ರವೃತ್ತಿಗಳಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಸಜ್ಜನರ ಸಂಗದಿಂದ ಕಾರ್ಯಸಿದ್ಧಿಗೆ ಅನುಕೂಲವಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಾಸಕ್ತಿ ಅನುಭವಕ್ಕೆ ಬರಲಿದೆ. ಉದ್ಯಮಪತಿಗಳಿಗೆ ಏಳಿಗೆ ಹಾಗೂ ಸರಕಾರದ ಸಹಾಯ ಸಿಗಲಿದೆ. ಕೃಷಿಕರಿಗೆ ಅನುಕೂಲ ರೀತಿಯಲ್ಲಿ ಆರ್ಥಿಕ ಲಾಭದ ಸಂಭವವಿದೆ. ರಾಜಕೀಯ ವ್ಯಕ್ತಿಗಳಿಗೆ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪ್ರಸಿದ್ಧಿ ಸಿಗಲಿದೆ. ಗೃಹಿಣಿಯ ಭೋಗ, ಭಾಗ್ಯ ವಸ್ತುಗಳ ಆಗಮನ ಸಂತಸ ತರಲಿದೆ. ಹೊಟೇಲ್‌, ಆಹಾರ ಧಾನ್ಯಗಳ ವರ್ತಕರಿಗೆ ಅಧಿಕ ಲಾಭ ತಂದೀತು. ಕೋರ್ಟು ಕಚೇರಿಗಳ ವಾದವಿವಾದಗಳಲ್ಲಿ ಅನಿರೀಕ್ಷಿತ ಯಶಸ್ಸು ನಿಮಗೆ ದೊರಕಲಿದೆ. ವಿದ್ಯಾರ್ಥಿಗಳಿಗೆ ವಿದೇಶ ಯಾನದ ಯೋಗ ಕಂಡುಬರಲಿದೆ. ಸಣ್ಣಪುಟ್ಟ ಅನಾರೋಗ್ಯ ತೋರಿಬಂದರೂ ದೈವಾನುಗ್ರಹದಿಂದ ಉಪಶಮನವಾಗಲಿದೆ. ವರ್ಷದ ಕೊನೆಯ ಭಾಗದಲ್ಲಿ ಒಂದೊಂದೇ ವ್ಯವಹಾರಗಳು ಕ್ರಮಬದ್ಧವಾಗಿ ಮುಕ್ತಾಯಗೊಳ್ಳುವ ಅನುಭವವು ಗೋಚರಕ್ಕೆ ಬರಲಿದೆ.

ವೃಷಭ

ಯುಗಾದಿಯ ಆರಂಭದಿಂದಲೇ ಗುರುವಿನ ಅನುಗ್ರಹ ತೋರಿಬಂದು ಆರ್ಥಿಕ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಕಾಣಿಸಬಹುದು ಹಾಗೂ ಅಷ್ಟಮದ ಶನಿಯಿಂದ ಮನೆಯಲ್ಲಿ ಅನಾವಶ್ಯಕವಾಗಿ ಭಿನ್ನಾಭಿಪ್ರಾಯದಿಂದ ಕಲಹಕ್ಕೆ ಕಾರಣವಾದೀತು. ಔದ್ಯೋಗಿಕ ವ್ಯವಹಾರಗಳಲ್ಲಿ ಗಣನೀಯವಾಗಿ ಗಳಿಕೆ ಇರುವುದರಿಂದ ನಾನಾ ರೀತಿಯಲ್ಲಿ ಹೂಡಿಕೆಗಳು ಅಧಿಕ ಲಾಭವನ್ನು ತಂದುಕೊಡಲಿವೆ. ಪತ್ನಿ, ಪುತ್ರಾದಿ ಸ್ವಕೀಯ ಪರಿವಾರದಿಂದ ಪ್ರೀತಿ, ವಿಶ್ವಾಸಗಳು, ಸಹಕಾರಗಳು ನಿಮ್ಮನ್ನು ಸಂತೃಪ್ತಿಗೊಳಿಸಲಿದೆ. ತುಂಬು ವಿಶ್ವಾಸದ ಹಸನಾದ ಬಾಳು ನಿಮ್ಮದಾದೀತು. ನಿಮ್ಮ ಅಭಿವೃದ್ಧಿಗೆ ಶತ್ರುಗಳೇ ತಲೆದೂಗುವಂತಾದೀತು. ಪ್ರಣಯಿಗಳಿಗೆ ಪರಿಣಯ ಸಂಭವ. ಉದ್ಯೋಗಿಗಳಿಗೆ ಕಾರ್ಯದಕ್ಷತೆಯಿಂದ ಯಶಸ್ಸು ಲಭಿಸಲಿದೆ. ಯೋಗ್ಯ ವಯಸ್ಕರಿಗೆ ಯೋಗ್ಯ ಸಂಬಂಧಗಳು ಕೂಡಿ ಬಂದಾವು. ಬ್ಯಾಂಕಿಂಗ್‌, ಶೇರು ಮಾರ್ಕೆಟ್‌, ಫೈನಾನ್ಸ್‌ ಮೊದಲಾದ ಹಣಕಾಸಿನ ವ್ಯವಹಾರದ ವಿಭಾಗದಲ್ಲಿ ಹೆಚ್ಚಿನ ಧನಾಗಮನವಿರುತ್ತದೆ. ರಾಜಕೀಯದಲ್ಲಿ ರಾಜಕಾರಣಿಗಳಿಗೆ ಅಂತಿಮವಾಗಿ ಅಧಿಕಾರದ ಗದ್ದುಗೆಯು ಪ್ರಾಪ್ತವಾದೀತು. ಮುಖ್ಯವಾಗಿ ಕಲಾವಿದರಿಗೆ, ಸಾಹಿತಿಗಳಿಗೆ ಉತ್ತಮ ಕಾಲವಾಗಿ ಗೌರವ ಪ್ರಾಪ್ತಿಯಾಗಲಿದೆ. ಆಗಾಗ ಯಂತ್ರ, ವಾಹನಗಳು, ಇಲೆಕ್ಟ್ರಿಕಲ್‌ ವಸ್ತುಗಳ ರಿಪೇರಿಗಾಗಿ ಅಧಿಕ ಧನವ್ಯಯವಾದೀತು. ಮನೆಯಲ್ಲಿ ಯಾ ಬಂಧುವರ್ಗದಲ್ಲಿ ಶುಭಮಂಗಲ ಕಾರ್ಯಗಳಿಂದ ಸಂಭ್ರಮಿಸುವಂತಾದೀತು. ಅಧಿಕಾರಿ ವರ್ಗದವರಿಗೆ ಉದ್ಯೋಗ ಪರಿವರ್ತನೆಯಿಂದ ಸಂತಸವಾದೀತು. ಅರ್ಚಕ, ಪುರೋಹಿತ ವರ್ಗದವರಿಗೆ ಆರ್ಥಿಕವಾಗಿ ಉನ್ನತಿ ತೋರಿಬರುತ್ತದೆ. ಭೂಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗೆ ಸಕಾಲವಿದು. ಆಗಾಗ ಶನಿಯ ಏರುಪೇರುಗಳು ಆರ್ಥಿಕ ಸ್ಥಿತಿಯಲ್ಲಿ ಪೆಟ್ಟು ಬೀಳಲಿದೆ. ಶತ್ರು ಬಾಧೆ ತೋರಿಬಂದರೂ ಆತ್ಮಬಲದಿಂದ ಎದುರಿಸುವಂತಾದೀತು. ಆಗಾಗ ದಾಯಾದಿಗಳಿಂದ ಅನಾವಶ್ಯಕ ವಾದ-ವಿವಾದಗಳನ್ನು ಎದುರಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶೀ ಯಾನದ ಸೌಲಭ್ಯ ದೊರಕಲಿದೆ. ಚಿನ್ನ, ಬೆಳ್ಳಿ, ನವರತ್ನ ಆಲಂಕಾರಿಕ ವಸ್ತುಗಳ ವ್ಯಾಪಾರಿ ವರ್ಗದವರಿಗೆ ಧನಾಗಮನದಿಂದ ವಿಶ್ರಾಂತಿ ಸಿಗಲಾರದು. ದೇಹಾರೋಗ್ಯ ಉತ್ತಮವಿದ್ದರೂ ಉದಾಸೀನತೆಗೆ ಕಾರಣರಾಗದಿರಿ. ಅನಿರೀಕ್ಷಿತವಾಗಿ ದೂರ ಸಂಚಾರದ ಯೋಗವಿದೆ. ಮುಖ್ಯವಾಗಿ ಪ್ರಯತ್ನಬಲ, ಆತ್ಮವಿಶ್ವಾಸ, ಕ್ರಿಯಾಶೀಲತೆಗಳಿಂದ ಮುನ್ನಡೆಯನ್ನು ಪಡೆಯಲಿದ್ದೀರಿ. ಹಂತಹಂತವಾಗಿ ಸಾಂಸಾರಿಕ ಕ್ಲೇಶವು ಸಮಾಧಾನದಿಂದ ಪರಿಹಾರವಾಗಲಿದೆ.

ಮಿಥುನ

ಈ ಯುಗಾದಿಯ ಆರಂಭದಿಂದಲೇ ಶನಿ, ಗುರುವಿನ ಪ್ರತಿಕೂಲತೆಗಳಿಂದ ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಾರವು. ಕಾರ್ಯಕ್ಷೇತ್ರದಲ್ಲಿ ಅಸ್ಥಿರತೆ, ಭೀತಿ, ವೃತ್ತಿರಂಗದಲ್ಲಿ ಸ್ಥಾನಭ್ರಂಶ ಯೋಗ. ಕೌಟುಂಬಿಕವಾಗಿ ದಾಯಾದಿಗಳ ಕಿರುಕುಳ, ಕಾರ್ಯಕ್ಷೇತ್ರದಲ್ಲಿ ಕೂಡ ಕೆಟ್ಟ ಮಾತು ಕೇಳಿ ಬಂದೀತು. ದುರ್ಜನರ ಸಹವಾಸದಿಂದ ಅವಮಾನ, ಅಪವಾದ ಭೀತಿ ಕಂಡುಬರಲಿದೆ. ಧರ್ಮಬಾಹಿರ ಕೃತ್ಯಗಳಿಗೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಪರಸ್ತ್ರೀಯರ ಬಗ್ಗೆ ಅಗೌರವವಾಗಿ ನಡೆಯದಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದಲೇ ಮುನ್ನಡೆಯುವಂತಾದೀತು. ಆಗಾಗ ದೇಹಾ ಯಾಸದಿಂದ ಶಾರೀರಿಕ ಸ್ಥಿತಿಯು ಕ್ಷೀಣಿಸಲಿದೆ. ವಿವಾಹಿತರು ಹೆಚ್ಚಿನ ಹೊಂದಾಣಿಕೆಯಿಂದಲೇ ಮುಂದುವರಿ ದಲ್ಲಿ ಕಂಕಣಬಲ ಪ್ರಾಪ್ತಿಯಾದೀತು. ಆಗಾಗ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸದಂತೆ ವರ್ತಿಸಿರಿ. ರಾಜಕೀಯ ವರ್ಗದವರಿಗೆ ಕಾರ್ಯಕ್ಷೇತ್ರಗಳಿಂದ ಬರುತ್ತಿರುವ ಒತ್ತಡಗಳು ಮಾನಸಿಕ ಸ್ಥಿತಿಯನ್ನು ಹಾಳುಗೆಡವಲಿದೆ. ದೂರ ಸಂಚಾರಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಒಮ್ಮೊಮ್ಮೆ ಹಿತಮಿತ್ರರೇ ಶತ್ರುಗಳಾಗುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ಸ್ಥಾನಪಲ್ಲಟವಾಗುವ ಸಾಧ್ಯತೆ ಇದೆ. ಆಗಾಗ ಆರ್ಥಿಕ ಸ್ಥಿತಿ ಆತಂಕಕ್ಕೆ ಕಾರಣವಾದೀತು. ಸ್ತ್ರೀಯರಿಗೆ, ಮಕ್ಕಳಿಂದ ಅಸಮಾಧಾನ ಕಂಡುಬರಲಿದೆ. ನಡೆಸುವ ವ್ಯಾಪಾರ, ವ್ಯವಹಾರಗಳು ಉತ್ತಮವಿದ್ದರೂ ವಂಚನೆಗೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಒಂದು ಆಪತ್ತಿನಿಂದ ಹೊರಬರುವಾಗಲೇ ಇನ್ನೊಂದು ಆಪತ್ತು ಕಾಣಿಸಬಹುದು. ಹೊಸ ಕಾರ್ಯಗಳಿಗೆ ಪ್ರಾರಂಭದ ಮೊದಲು ಪುನಃ ಯೋಚಿಸುವ ಅಗತ್ಯವಿರುವುದು. ಮಾತುಗಳಲ್ಲಿ ಸಂಯಮವಿರಲಿ. ಆಗಸ್ಟ್‌ ತಿಂಗಳ ಅನಂತರ ಸಪ್ತಮದ ಶುಭ ಕ್ಷೇತ್ರದ ಗುರುಬಲದಿಂದ ಪರಿಸ್ಥಿತಿಯು ಸುಧಾರಣೆಯಾಗಿ ಚೇತರಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಉತ್ತಮ ಭಡ್ತಿ, ಅನುಕೂಲಕರಳಾದ ಪತ್ನಿ, ಮಕ್ಕಳಿಂದ ಶಾಂತಿ, ಸಮಾಧಾನ ಸಿಗಲಿದೆ. ಗೃಹಾಲಂಕಾರ ವಸ್ತುಗಳ ಖರೀದಿಯಾಗಿ ಮನೆ ಮಂದಿಯೆಲ್ಲಾ ಸಂಭ್ರಮಿಸುವಂತಾದೀತು. ಉದ್ಯೋಗಿಗಳಿಗೆ ವಿದೇಶಯಾನವಿದೆ. ಗೃಹ ನಿರ್ಮಾಣ ಅಥವಾ ಕಟ್ಟಡ ಸಾಮಗ್ರಿಗಳ ಕ್ರಯವಿಕ್ರಯ ಹಾಗೂ ಸ್ಥಿರ ಸೊತ್ತುಗಳ ವ್ಯವಹಾರಗಳಲ್ಲಿ ಆದಾಯವು ವೃದ್ಧಿಸಲಿದೆ. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಪಡೆಯಲಿದ್ದೀರಿ. ಕೋರ್ಟು ಕಚೇರಿ ಅಲೆದಾಟ ಕಡಿಮೆಯಾಗಲಿದೆ. ಒಟ್ಟಿನಲ್ಲಿ ಮಿಶ್ರ ಫ‌ಲದಾಯಕ ಜೀವನ ನಿಮ್ಮದಾದೀತು.

ಕಟಕ

ಈ ವರ್ಷದ ಯುಗಾದಿಯ ಪ್ರಾರಂಭದಿಂದಲೂ ತಮ್ಮ ಗುರುಬಲ, ಶನಿಬಲಗಳ ಲಾಭಸ್ಥಾನದಿಂದ ಹಂತಹಂತವಾಗಿ ಪರಿಸ್ಥಿತಿಯು ಸುಧಾರಿಸಲಿದೆ. ನಿರೀಕ್ಷಿತ ಶುಭಮಂಗಲ ಕಾರ್ಯವು ಫ‌ಲಿಸುವುವು. ಗೃಹ ನಿರ್ಮಾಣದ ಕಾರ್ಯಗಳು ಪೂರ್ಣಗೊಂಡು, ಗೃಹ ಪ್ರವೇಶದಿಂದ ಸಂತಸಗೊಳ್ಳುವಿರಿ. ಅಲ್ಲದೆ ಭೂಖರೀದಿ, ವಾಹನ ಖರೀದಿಗಳಿಗೆ ಇದು ಸಕಾಲವೆನಿಸಲಿದೆ. ಗುರುಹಿರಿಯರ ಅನುಗ್ರಹದಿಂದ ಮಾನಸಿಕವಾಗಿ ಶಾಂತಿ, ಸಮಾಧಾನಗಳು ಅನುಭವಕ್ಕೆ ಬರಲಿವೆ. ಸಾಮಾಜಿಕ ಜೀವನದಲ್ಲಿ ಸ್ಥಾನಮಾನ, ಗೌರವವು ಲಭಿಸಲಿದೆ. ಕ್ರಯವಿಕ್ರಯದಿಂದ ಲಾಭ. ಹಳೇ ಬಾಕಿ ವಸೂಲಿ ಸಮಾಧಾನ ತರಲಿದೆ. ಉದ್ಯೋಗಿಗಳಿಗೆ ಸರಕಾರಿ ಉದ್ಯೋಗ ಪ್ರಾಪ್ತಿಯಾದೀತು. ಸ್ಥಗಿತಗೊಂಡ ಕೆಲಸಕಾರ್ಯಗಳು ನೀವು ಅಚ್ಚರಿ ಪಡುವಂತೆ ಮುಕ್ತಾಯಗೊಳ್ಳಲಿದೆ. ಆದರೂ ಕೆಲವೊಮ್ಮೆ ನಿಮ್ಮ ಅಜಾಗರೂಕತೆ, ಆಲಸ್ಯಗಳಿಂದ, ಅವಸರದಿಂದ ಕಾರ್ಯಸಾಧನೆಗೆ ವಿಳಂಬವಾಗದಂತೆ ಜಾಗ್ರತೆ ವಹಿಸಿರಿ. ವ್ಯಾಪಾರಿ ವರ್ಗಕ್ಕೆ ಆರ್ಥಿಕ ಸ್ಥಿತಿಯು ಹಂತಹಂತವಾಗಿ ಅಭಿವೃದ್ಧಿದಾಯಕವಾದೀತು. ಕೊಡಬೇಕಾದ ಹಣ ನಿಮಗೆ ವಸೂಲಿಯಾಗಲಿದೆ. ಮುಖ್ಯವಾಗಿ ಎಲ್ಲಾ ವಿಚಾರದಲ್ಲಿ ಪ್ರಯತ್ನಬಲ, ಆತ್ಮಸ್ಥೈರ್ಯ, ಕ್ರಿಯಾಶೀಲತೆಗೆ ಒತ್ತು ನೀಡಿದಲ್ಲಿ ನಿಶ್ಚಿತ ರೂಪದಲ್ಲಿ ಕಾರ್ಯಸಾಧನೆಯಾಗಲಿದೆ. ಕುಟುಂಬದ ಹಿರಿಯರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಉದರಪೀಡೆ, ಶೀತ ಕಫಾದಿಗಳಿಂದ ಅನಾರೋಗ್ಯವು ತೋರಿಬಾರದಂತೆ ಕಾಳಜಿ ವಹಿಸಿರಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದಿಂದ ಸಾರ್ಥಕ್ಯವನ್ನು ಪಡೆದಾರು. ಮಾತಿನಿಂದ ವಾದ ವಿವಾದಗಳು ತೋರಿಬಾರದಂತೆ ಜಾಗ್ರತೆ ವಹಿಸಿರಿ. ನೂತನ ವ್ಯಾಪಾರ, ವ್ಯವಹಾರವನ್ನು ಆರಂಭಿಸಲು ಇದು ಉತ್ತಮ ಕಾಲ. ಪಿತೃ ಮೂಲದಿಂದ ಧನ ಪ್ರಾಪ್ತಿಯಾದೀತು. ಮಹಿಳಾ ಉದ್ಯೋಗಿಗಳಿಗೆ ವ್ಯಾಪಾರ, ವ್ಯವಹಾರದಲ್ಲಿ ಮೋಸ ಹೋಗದಂತೆ ಹೆಚ್ಚಿನ ಜಾಗ್ರತೆ ವಹಿಸಿರಿ. ಮಿತ್ರರಿಂದ ಸಹಕಾರ, ಮುನ್ನಡೆಗೆ ಸಾಧಕವಾದೀತು. ನ್ಯಾಯಾಲಯದ ವ್ಯಾಜ್ಯ, ತಕರಾರುಗಳು ಉಪಶಮನವಾಗಲಿವೆ. ಯೋಗ್ಯ ವಯಸ್ಕರಿಗೆ ಕಂಕಣಬಲದ ಪ್ರಾಪ್ತಿಯಾಗಲಿದೆ. ಅಕ್ಟೋಬರ್‌ ತಿಂಗಳ ಅನಂತರ ಗುರುಬಲ ಕ್ಷೀಣವಾಗಿ ಆರೋಗ್ಯದಲ್ಲಿ, ಉದ್ಯೋಗ, ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಸರಕಾರೀ ಇಲಾಖೆಯಿಂದ ನಷ್ಟ ಸಂಭವವಿದೆ. ಯಾವ ಕಾರ್ಯಕ್ಕೆ ಕೈ ಹಾಕಿದರೂ ತಪ್ಪು ಎಂಬ ಮನೋಭಾವದಿಂದ ಚಿಂತೆಗೊಳಗಾಗಿರುವ ಕಾಲವಿದು. ಜಾಗ್ರತೆ ವಹಿಸಿರಿ. ಕುಲದೇವತಾ ಪ್ರಾರ್ಥನೆ ಇರಲಿ.

ಸಿಂಹ

ಈ ಯುಗಾದಿಯ ಪ್ರಾರಂಭದಿಂದಲೇ ಪಂಚಮ ಶನಿ, ಗುರುಬಲವಿಲ್ಲದೇ ತೊಂದರೆಗೊಳಗಾದ ನಿಮಗೆ ಅಕ್ಟೋಬರ್‌ ತನಕ ಆಗಾಗ ಮಾನಸಿಕವಾಗಿ ಕ್ಲೇಶಗಳು ತೋರಿಬಂದಾವು. ಸರಕಾರೀ ಅಧಿಕಾರಿಗಳಿಂದ ಕಿರಿಕಿರಿಗಳು ಕಂಡುಬರಲಿವೆ. ಭೂಸಂಬಂಧದ ವ್ಯವಹಾರಗಳಲ್ಲಿ ವಿಶೇಷ ನಷ್ಟವಾದೀತು. ಶಾರೀರಿಕವಾಗಿ ಆಗಾಗ ಆರೋಗ್ಯ ಭಾಗ್ಯದಲ್ಲಿ ಏರುಪೇರು ಕಾಣಿಸಬಹುದು. ರಾಜಕೀಯ ವ್ಯವಹಾರಗಳಲ್ಲಿ ಸ್ಥಾನಮಾನವನ್ನು ಕಳಚಿಕೊಳ್ಳುವ ಸಂದರ್ಭ ಬಂದೀತು. ಅನಾವಶ್ಯಕ ವಾದವಿವಾದಗಳಿಂದ ತಕರಾರುಗಳು ಕಂಡುಬಂದಾವು. ವೃತ್ತಿರಂಗದಲ್ಲಿ ನೌಕರ ವರ್ಗದವರಿಗೆ ವರಿಷ್ಠರಿಂದ ಕಿರುಕುಳ ಕಂಡುಬಂದೀತು. ವ್ಯಾಪಾರ, ವ್ಯವಹಾರ ಗಳಲ್ಲಿ ಇತರರಿಂದ ಮೋಸ ಹೋಗದಂತೆ ಕಾಳಜಿ ವಹಿಸಿರಿ. ಮಹಿಳಾ ಉದ್ಯಮದವರಿಗೆ ಆರ್ಥಿಕವಾಗಿ ಕಷ್ಟನಷ್ಟಗಳು ಬಂದಾವು. ವಾಹನ ಚಾಲನೆ ಹಾಗೂ ಸಂಚಾರದಲ್ಲಿ ಜಾಗ್ರತೆ ವಹಿಸುವುದು. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದಲ್ಲಿ ಮಧ್ಯಮ ಫ‌ಲವಿದೆ. ಸಾಮಾಜಿಕ ಕ್ಷೇತ್ರದಲ್ಲಿ ಶುತ್ರ-ಪ್ರತಿಸ್ಪರ್ಧಿಗಳಿಂದ ಸಮಸ್ಯೆಗಳು ಕಂಡುಬಂದಾವು. ಧರ್ಮಬಾಹಿರ ಕಾರ್ಯಗಳಿಗೆ ಪ್ರೇರಣೆಯಾಗುವ ಸಂಭವವಿರುತ್ತದೆ. ಕ್ಷುದ್ರಜನರ ವಿರೋಧದಿಂದ ಬೇಸರ ತರಲಿದೆ. ವೃದ್ಧ ಜನರ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುವುದು ಮುಖ್ಯ. ಕುಟುಂಬ ಜನರ ಅಸಹಕಾರದಿಂದ ಅಡಚಣೆಗಳು ಕಂಡುಬಂದಾವು. ಅಕ್ಟೋಬರ್‌ ತಿಂಗಳ ಅನಂತರ ರಾಹುವಿನ ಲಾಭಸ್ಥಾನದಿಂದ, ಪಂಚಮದ ಗುರುಬಲದಿಂದ ಹಿಡಿದ ಕಾರ್ಯಗಳನ್ನು ಸಾಧಿಸುವ ಸಾಮರ್ಥ್ಯ ತಂದು ಕೊಡಲಿದೆ. ವಿವಿಧ ರೂಪದಿಂದ ಧನದಾಯ ವರ್ಧಿಸಲಿದೆ. ಆಗಾಗ ಸಂಚಾರದಿಂದ ಕಾರ್ಯಸಿದ್ಧಿಯಾದೀತು. ಹೆಚ್ಚಿನ ಇಷ್ಟಾರ್ಥಗಳು ಸಿದ್ಧಿಸಲಿವೆ. ಕ್ರೀಡಾಳುಗಳಿಗೆ ಹೆಚ್ಚಿನ ಯಶಸ್ಸು ತಂದುಕೊಡಲಿದೆ. ಕೃಷಿ ಹಾಗೂ ವಾಣಿಜ್ಯ ಪ್ರವೃತ್ತಿಯವರಿಗೆ ಆರ್ಥಿಕವಾಗಿ ಪರಿಸ್ಥಿತಿಯು ಸುಧಾರಿಸುತ್ತಾ ಹೋಗುವುದು. ಆಸ್ತಿಪಾಸ್ತಿಗಳ ಸಂಗ್ರಹ, ಮಂಗಲ ಕಾರ್ಯಗಳ ಪ್ರಸಕ್ತಿ ಸಾಂಸಾರಿಕ ಸುಖದುಃಖ, ಸಂತಸಗಳು ಅನುಭವಕ್ಕೆ ಬರಲಿವೆ. ಅವಿವಾಹಿತರಿಗೆ ಕಂಕಣ ಬಲ ಪ್ರಾಪ್ತಿಯಾದೀತು. ಕೃಷಿ, ಗುಡಿ ಕೈಗಾರಿಕೆ, ಭೂಸಂಬಂಧ ವ್ಯವಹಾರಗಳು ಲಾಭದಾಯಕವಾಗಲಿವೆ. ದಾಂಪತ್ಯದಲ್ಲಿ ಸಂತಾನದ ಕುರುಹು ಕಂಡುಬರಲಿದೆ. ಆಕಸ್ಮಿಕವಾಗಿ ಒದಗುವ ಘಟನೆಗಳಿಂದ ಚಡಪಡಿಸಿದರೂ ಅದೇ ಭಾಗ್ಯೋದಯಕ್ಕೆ ಕಾರಣವಾಗುತ್ತದೆ.

ಕನ್ಯಾ

ಈ ಯುಗಾದಿಯ ಪ್ರಾರಂಭದಿಂದ ಮಿಶ್ರ ಫ‌ಲವಿದ್ದು ಆಗಾಗ ಸಮಸ್ಯೆಗಳನ್ನು ಎದುರಿಸಬೇಕಾದೀತು. ಉತ್ತಮ ವಿವೇಚನಾ ಬುದ್ಧಿ, ಪರೋಪಕಾರ, ತಾಳ್ಮೆ, ಸಮಾಧಾನಗಳಿಂದ ಮುನ್ನಡೆದಲ್ಲಿ ಕ್ರಮಬದ್ಧ ಜೀವನ ನಡೆಸುವ ನಿಮಗೆ ಉತ್ತಮ ಫ‌ಲ ನೀಡಲಿದೆ. ವೃತ್ತಿರಂಗದಲ್ಲಿ ಯಾರದೋ ತಪ್ಪಿಗೆ ಯಾರೋ ಹೊಣೆ ಎಂಬಂತೆ ಆಗುವ ಕಾಲ. ಅನಾವಶ್ಯಕ ವಾದವಿವಾದಗಳಿಂದ ಕಲಹಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಮೂಲಧನ ನಷ್ಟಕ್ಕೆ ಕಾರಣವಾದೀತು. ಆರೋಗ್ಯ ಭಾಗ್ಯದಲ್ಲಿ ಆಗಾಗ ಸಮಸ್ಯೆಗಳು ಕಂಡುಬಂದಾವು. ವ್ಯಾಪಾರಿಗಳಿಗೆ ಸಾಧಾರಣ ಫ‌ಲವಿದ್ದು ಬಟ್ಟೆ ಹಾಗೂ ದಲ್ಲಾಳಿ ವ್ಯಾಪಾರಿಗಳಿಗೆ ಲಾಭವಿದೆ. ಕೃಷಿಕ ವರ್ಗಕ್ಕೆ ನಿರೀಕ್ಷಿತ ರೂಪದಲ್ಲಿ ಫ‌ಲ ಸಿಗಲಾರದು. ಸಾಂಸಾರಿಕವಾಗಿ ಸಮಾಧಾನ ದೊರಕಿದರೂ ಹೊಂದಾಣಿಕೆ ಅಗತ್ಯವಿದೆ. ಭೂ, ವಾಹನಾದಿಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಕಷ್ಟನಷ್ಟಗಳಿಗೆ ಕಾರಣವಾದೀತು. ವಯಸ್ಕರಿಗೆ ಹೊಂದಾಣಿಕೆ ಮನೋಭಾವ ಅತೀ ಅಗತ್ಯವಿದೆ. ಸಾಮಾಜಿಕ ರಂಗದಲ್ಲಿ ನಿಮ್ಮ ಪ್ರತಿಭೆಗೆ ನಿರೀಕ್ಷಿತ ಫ‌ಲ ಸಿಗಲಾರದು. ಸ್ವಸಾಮರ್ಥ್ಯದಲ್ಲಿ ಭರವಸೆಯಿಟ್ಟು ಶಿಸ್ತಿನ ಸಾತ್ವಿಕ ಜೀವನ ನಡೆಸಿದಲ್ಲಿ ನಿಶ್ಚಿತ ಗುರಿ ತಲುಪಲು ಸುಲಭವಾಗಲಿದೆ. ವಿವಿಧ ಮೂಲಗಳಿಂದ ಧನ ಪ್ರಾಪ್ತಿಯಾಗಲಿದೆ. ಮನೆಯಲ್ಲಿ ಕಳ್ಳಕಾಕರ ಬಗ್ಗೆಯೂ ಹೆಚ್ಚಿನ ಗಮನ ಹರಿಸುವುದು ಅಗತ್ಯವಿದೆ. ಧಾರ್ಮಿಕ ಮುಖಂಡರಿಗೆ ಅಪವಾದ ಭೀತಿ ಅನುಭವಿಸುವಂತಾದೀತು. ದೇಹಾರೋಗ್ಯದಲ್ಲಿ ಆಗಾಗ ತಲೆನೋವು, ಮೈ-ಕೈ ನೋವು ಗಂಟುನೋವು, ಉದರ ಸಮಸ್ಯೆಗಳು, ವಿಷಾಹಾರ ಸೇವನೆ ಬಗ್ಗೆ ಅನಾರೋಗ್ಯ ಕಂಡುಬರುವುದು. ಹಿಂದಿನಿಂದಲೂ ವಿಘ್ನ ವಿಡ್ಡೂರಗಳನ್ನು ಎದುರಿಸಿಕೊಂಡು ಬರುತ್ತಿರುವ ನಿಮಗೆ ಈ ಸಲವೂ ಅದೇ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕಾಗುತ್ತದೆ. ಸ್ಥಾನಮಾನಗಳಲ್ಲಿ ಆಗಾಗ ಹಿತ ಶತ್ರುಗಳ ವಂಚನೆ ಮೈಮೇಲೆ ಒಡ್ಡಿ ಬರುವ ಕ್ಷುಲ್ಲಕ ಪ್ರಕರಣಗಳಿಂದ ಸದಾಕಾಲವೂ ಚಿಂತಾಕ್ರಾಂತರಾಗಬೇಕಾದೀತು. ಆದರೂ ಈ ಮಧ್ಯೆ ಉದ್ಯೋಗದಲ್ಲಿ ಪ್ರಗತಿ, ಧನಾಭಿವೃದ್ಧಿಯೂ ಕಂಡುಬರಲಿದೆ. ರಾಜಕೀಯ ವೃತ್ತಿ ನಿರತರಿಗೆ ಸ್ಥಾನ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಪ್ರಯತ್ನಬಲ ಅಗತ್ಯವಿದೆ. ಶ್ರಮಕ್ಕೆ ತಕ್ಕ ಪ್ರತಿಫ‌ಲವಿದೆ. ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ವೃತ್ತಿಕ್ಷೇತ್ರದಲ್ಲಿ ಅಸಮಾಧಾನ ಕಂಡುಬರಲಿದೆ. ಒಟ್ಟಿನಲ್ಲಿ ಸುಖ-ದುಃಖ ಮಿಶ್ರಿತ ಫ‌ಲಗಳ ಅನುಭವವಾದೀತು.

ತುಲಾ

ಈ ಯುಗಾದಿಯ ಪ್ರಾರಂಭದಿಂದಲೇ ಲಾಭಸ್ಥಾನದ ಶನಿ ಭಾಗ್ಯದಾಯಕ ಗುರುವಿನ ದೈವಾನುಗ್ರಹದಿಂದ ಸೋಲಿನಲ್ಲಿಯೂ ಗೆಲುವನ್ನು ಸಾಧಿಸಲಿದ್ದೀರಿ. ಶನಿಯು ಕರ್ಮಫ‌ಲವನ್ನು ಕೊಡುವ ದೇವತೆ. ಆದ್ದರಿಂದ ಶಿಸ್ತು, ಸಂಯಮದಿಂದ ಇದ್ದಲ್ಲಿ, ವೃತ್ತಿರಂಗದಲ್ಲಿರಲಿ, ಸಾಂಸಾರಿಕವಾಗಿರಲಿ, ಮುನ್ನಡೆಯನ್ನು ಸಾಧಿಸಲಿದ್ದೀರಿ. ನೂತನ ದೀರ್ಘ‌ಕಾಲದ ಕಾರ್ಯಗಳಿಗೆ ಋಣಾತ್ಮಕ ಚಿಂತನೆ ತೋರದೆ ದೃಢ ಮನಸ್ಸಿನಿಂದ ಮುನ್ನಡೆಯನ್ನು ಸಾಧಿಸಬೇಕಾಗುತ್ತದೆ. ಭೂಖರೀದಿ, ವಾಹನ ಖರೀದಿಗಳಿಗೆ ಈ ವರ್ಷವು ಅನುಕೂಲವಾಗಲಿದೆ. ಕೋರ್ಟು ಸಂಬಂಧ ವ್ಯವಹಾರಗಳಲ್ಲಿ ಉತ್ತಮ ಯಶಸ್ಸು ಪಡೆಯಲಿದ್ದೀರಿ. ಆರ್ಥಿಕವಾಗಿ ಹೆಚ್ಚಿನ ಧನಾಗಮನವಿದ್ದರೂ ಕೆಲವೊಂದು ಸಂಕಷ್ಟಗಳು ಅನುಭವಕ್ಕೆ ಬರಲಿವೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳಿಗೆ ಅನುಕೂಲವಾಗಲಿದೆ. ರಾಜಕೀಯ ಧುರೀಣರಿಗೆ ತಮ್ಮ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ, ಗೌರವವನ್ನು ಪಡೆಯುವ ಸಾಧ್ಯತೆ ಇದೆ. ಮುಖ್ಯವಾಗಿ ಸ್ವಉದ್ಯೋಗದಲ್ಲಿ ಗಣನೀಯವಾದ ಗಳಿಕೆ, ಲಾಟರಿ ಮೊದಲಾದ ಅದೃಷ್ಟದ ವ್ಯವಹಾರದಲ್ಲಿ ಆಕಸ್ಮಿಕ ಧನ ಲಾಭವಿರುವುದರಿಂದ ಯಾವ ರೀತಿಯ ಖರ್ಚು-ವೆಚ್ಚಗಳಿದ್ದರೂ ಎದುರಿಸಬಹುದಾಗಿದೆ. ಮನೆಯಲ್ಲಿ ಶುಭ ವಿವಾಹಾದಿ ಶುಭ ಸಮಾರಂಭಗಳು, ಚೌಲೋಪನಯನ ಮೊದಲಾದ ಶುಭಕಾರ್ಯಗಳು ನಡೆಯಲಿವೆ. ಅಕ್ಟೋಬರ್‌ ಅನಂತರ ದೈವಬಲ ಕ್ಷೀಣವಾಗಿ ಶಾರೀರಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ದೀರ್ಘ‌ಕಾಲದ ಅಸೌಖ್ಯಗಳು ಗೋಚರಕ್ಕೆ ಬಂದಾವು. ವಾಹನ ಅಪಘಾತದ ಬಗ್ಗೆ ಭೀತಿ ತಂದೀತು. ಕೋರ್ಟು ಕಚೇರಿಗಳ ತಕರಾರುಗಳು ಕಿರಿಕಿರಿ ಎನಿಸಲಿವೆ. ರಾಜಕೀಯ ರಂಗದಲ್ಲಿ ಗುಂಪುಗಾರಿಕೆ ಪರಸ್ಪರ ಘರ್ಷಣೆಯಿಂದ ತಾಪತ್ರಯಗಳು ತೋರಿಬಂದರೂ ಒಗ್ಗಟ್ಟಿನಿಂದ ಮುಂದುವರಿದ್ದಲ್ಲಿ ಕಾರ್ಯ ಜಯವಾದೀತು. ಆಗಾಗ ಮನೋಬಲ ಹಾನಿ, ಮಾನಸಿಕ ಒತ್ತಡ, ವೃತ್ತಿರಂಗದಲ್ಲಿ ವಾದ-ವಿವಾದಗಳು ಗುಟ್ಟಿನಿಂದ ಇಟ್ಟುಕೊಂಡ ವಿಚಾರಗಳು ರಟ್ಟಾದಾವು. ಆತ್ಮೀಯರೊಡನೆ ಮುಖ ಮುರಿಸು ತಪ್ಪದು. ವಿಚಾರದ ನಿರ್ಧಾರಗಳಲ್ಲಿ ಆಗಾಗ ಬದಲಾವಣೆ ಇರುತ್ತದೆ. ಆರ್ಥಿಕವಾಗಿ ಮೋಸ ಹೋಗಿ ಧನನಷ್ಟವೂ ಆದೀತು. ವೈಯಕ್ತಿಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಮನೋಬಲದಲ್ಲಿ ಎದುರಿಸುವಂತಾದೀತು.

ವೃಶ್ಚಿಕ

ಈ ಯುಗಾದಿಯ ಆರಂಭದಿಂದ ಅಕ್ಟೋಬರ್‌ವರೆಗೆ ಗುರುಬಲವಿಲ್ಲದೆ ಶನಿಯ ಚಾರದಿಂದ ರಾಹುವಿನಿಂದ ಎಲ್ಲಾ ವಿಚಾರಗಳಲ್ಲಿ ಕೈ ಕೈ ಹಿಸುಕುವಂತಾದೀತು. ವ್ಯಾಪಾರ, ವ್ಯವಹಾರಗಳಲ್ಲಿ, ಆರ್ಥಿಕವಾಗಿ ಋಣಬಾಧೆಯಿಂದ ಉದ್ವೇಗ ತೋರಿಬಂದು ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳು ವಂತಾದೀತು. ಶನಿಯ ಪ್ರಭಾವ ಇರುವುದರಿಂದ ವಾಹನಾದಿಗಳ ಬಗ್ಗೆ ಜಾಗ್ರತೆ ವಹಿಸಿರಿ. ಯಾವ ರೀತಿಯ ಖರ್ಚು-ವೆಚ್ಚಗಳು ಇದ್ದರೂ ಲೆಕ್ಕಕ್ಕೆ ಸಿಗಲಾರದು. ಮುಖ್ಯವಾಗಿ ಶಿಸ್ತು ಜೀವನ ಅಗತ್ಯವಿದೆ. ಯಾರನ್ನೂ ನಂಬದಿರುವಂಥ ಪರಿಸ್ಥಿತಿಯಿಂದ ಗೊಂದಲವಾದೀತು. ವಾದ, ವಿವಾದಗಳಿಂದ ಅವಮಾನ ಪ್ರಸಂಗಕ್ಕೆ ಕಾರಣರಾಗುವಿರಿ. ಪಾಲು ಬಂಡವಾಳದಲ್ಲಿ ವಂಚನೆಗಳು ತೋರಿಬಂದಾವು. ಮಿತ್ರರು ಶತ್ರುಗಳಾಗಿ, ಶತ್ರುಗಳು ಪರಮ ವೈರಿಗಳಾದಾರು. ಸರಕಾರೀ ನೌಕರರಿಗೆ ವರ್ಗಾವಣೆಯ ಸಾಧ್ಯತೆ ಇದೆ. ಯಾಂತ್ರಿಕ ವೃತ್ತಿಯವರಿಗೆ ಮೇಲಧಿಕಾರಿಗಳಿಂದ ಅನಾವಶ್ಯಕ ಸಮಸ್ಯೆಗಳು ತೋರಿಬಂದಾವು. ರಾಜಕೀಯ ರಂಗದಲ್ಲಿ ಅಪಮಾನ, ಅವಮಾನ ಪ್ರಸಂಗ ಅನಾವಶ್ಯಕ ವೈಷಮ್ಯಕ್ಕೆ ಕಾರಣವಾದೀತು. ಶಾರೀರಿಕವಾಗಿ ಆಗಾಗ ಸಮಸ್ಯೆ ತಂದೀತು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರುತ್ಸಾಹ, ಉದಾಸೀನತೆಯಿಂದ ಹಿನ್ನಡೆ ತೋರಿಬಂದೀತು. ಕೆಲವೊಮ್ಮೆ ನಿರೀಕ್ಷಿತ ಫ‌ಲಿತಾಂಶಗಳು ತೊಂದರೆಯನ್ನು ತರುವ ಸಾಧ್ಯತೆ ಇರುತ್ತದೆ. ಸಾಡೇಸಾತಿ ಶನಿಯ ಪ್ರಭಾವದಿಂದ ಎಲ್ಲಾ ಕೆಲಸಕಾರ್ಯಗಳಲ್ಲಿ ಮಂದಗತಿಯ ಫ‌ಲಿತಾಂಶವಿರುತ್ತದೆ. ಉದರ ಸಂಬಂಧಿ, ನೀರಿನ ಮೂಲಕ ಕೆಲವು ಅನಾರೋಗ್ಯವನ್ನು ಅನುಭವಿಸುವಂತಾದೀತು. ಮುಖ್ಯವಾಗಿ ಪೂರ್ವಯೋಜಿತ ಕೆಲಸಕಾರ್ಯಗಳು ಸತತ ಪ್ರಯತ್ನದಿಂದ ಕೈಗೂಡಲಿವೆ. ಅಕ್ಟೋಬರ್‌ ತಿಂಗಳ ಅನಂತರ ಗುರುಬಲದ ಅನುಗ್ರಹದಿಂದ ಹೊಸ ತರದ ಸೃಷ್ಟಿ, ಚಿಂತನೆಗಳು ನಿರೀಕ್ಷಿತ ಫ‌ಲವನ್ನು ನೀಡಲಿವೆ. ಉದ್ಯೋಗರಂಗದಲ್ಲಿ ಮುನ್ನಡೆ ತೋರಿಬಂದು ನೆಮ್ಮದಿ ತಂದೀತು. ಏಕಾಗ್ರತೆಯಿಂದ ಕೆಲಸ ನಿರ್ಮಿಸಿದ್ದಲ್ಲಿ ನಿಮಗೆ ನಿಶ್ಚಿತ ಫ‌ಲಗಳು ದೊರಕುವುವು. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಯಶಸ್ಸು ನಿಮ್ಮದಾಗಲಿದೆ. ವಿವಿಧ ಮೂಲಗಳಿಂದ ಧನಾಗಮನ ತೋರಿಬರುತ್ತದೆ. ವ್ಯವಹಾರ ಪಾಲುದಾರಿಕೆಯಲ್ಲಿ ಪಾಲುದಾರರಾಗಬಹುದು. ವಿದ್ಯಾರ್ಥಿಗಳು ಕಲಿಕಾ ಮನೋಭಾವದಿಂದ ಮುನ್ನಡೆಯಲಿದ್ದಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಉಂಟಾಗಿ ಶಾಂತಿ, ಸಮಾಧಾನವು ಲಭಿಸಲಿದೆ. ಸಂಯಮ ಕಾಪಾಡಿಕೊಳ್ಳುವುದರಿಂದ ಅನಾವಶ್ಯಕ ತೊಂದರೆಗಳಿಂದ ಮುಕ್ತರಾಗುವಿರಿ.

ಧನು

ಈ ಯುಗಾದಿಯ ಆರಂಭದಿಂದಲೇ ಏಳೂವರೆ ಶನಿ, ಅಷ್ಟಮದ ರಾಹು ಹಾಗೂ ದೈವಾನುಗ್ರಹವಿಲ್ಲದೆ ಹೆಜ್ಜೆಹೆಜ್ಜೆಗೂ ಕ್ಲೇಶವನ್ನು ಅನುಭವಿಸುವಂತಾದೀತು. ಕಾರ್ಯಕ್ಷೇತ್ರದಲ್ಲಿ ಅಪಜಯದ ಭೀತಿ ಮುನ್ನಡೆಯನ್ನು ತಡೆದೀತು. ಸಾಂಸಾರಿಕವಾಗಿ ಹಿರಿಯರ ಮಾತಿಗೆ ತಾಳ್ಮೆಯಿಂದ ಬೆಲೆ ಕೊಟ್ಟಲ್ಲಿ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಆಕಸ್ಮಿಕವಾಗಿ ಒದಗುವ ಅವಘಡ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯವಿದೆ. ಆರ್ಥಿಕವಾಗಿ ಹಳೇ ಬಾಕಿ ವಸೂಲಿಯ ಬಗ್ಗೆ ನಿಷ್ಠುರ ತಂದೀತು. ಭೂವ್ಯವಹಾರದಲ್ಲಿ ವಂಚನೆ, ಘರ್ಷಣೆಯ ಸಾಧ್ಯತೆ ಇದೆ. ಶುಭ-ಶೋಭನಾದಿ ಕೆಲಸ ಕಾರ್ಯಗಳಲ್ಲಿ ಆಗಾಗ ಅಡಚಣೆಗಳು ಕಂಡುಬಂದಾವು. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ವಿಳಂಬದಿಂದ ಧನವ್ಯಯವಾಗಲಿದೆ. ಉದ್ದಿಮೆಗಳಿಗೆ ಕಾರ್ಮಿಕ ವರ್ಗದವರ ಕಿರುಕುಳದಿಂದ, ಮುಷ್ಕರದಿಂದ ಕಷ್ಟನಷ್ಟಗಳು ಒದಗಿಬರಲಿವೆ. ದುಡುಕಿನ ನಿರ್ಧಾರದಿಂದ ಮೋಸ ಹೋಗುವ ಪ್ರಸಂಗ ಬಂದೀತು. ಸತತ ಕಠಿಣ ಪರಿಶ್ರಮ ವಹಿಸುವ ನಿಮಗೆ ಕೆಲವೊಮ್ಮೆ ಅತಂತ್ರ ನಿರ್ಣಯಗಳಿಂದ ಬೇಸರ ತರಲೂಬಹುದು. ಗೋಚರ ಫ‌ಲಗಳಲ್ಲಿ ಗ್ರಹಗಳ ಬದಲಾವಣೆಯಿಂದ ವಿಪರೀತ ನಿರೀಕ್ಷೆ ಇಟ್ಟುಕೊಳ್ಳಲು ಕಷ್ಟವಾಗುತ್ತದೆ. ಅಕ್ಟೋಬರ್‌ ಅನಂತರ ಸ್ವಕ್ಷೇತ್ರಾಧಿಪತಿಯಾದ ಗುರು ರಾಶಿಯಲ್ಲಿ ಸ್ಥಿರವಾಗುವ ಕಾರಣ ದೇವತಾನುಗ್ರಹದ ಬಲದಿಂದ ಕೆಲವೊಂದು ಕಠಿಣ ಕೆಲಸ ಕಾರ್ಯಗಳು ಕೂಡ ಸುಲಲಿತವಾಗಿ ನಡೆಯಲಿವೆ. ಸಂಸಾರದಲ್ಲಿ ಸುಖ, ಸಮೃದ್ಧಿ ತೋರಿಬಂದು ಹೊಸ ಜನರ ಸಂಪರ್ಕದಿಂದ ಕಾರ್ಯಸಾಧನೆಯಾದೀತು. ಆಗಾಗ ಧನಾಗಮನದಿಂದ ಸಂಪತ್ತಿನ ವೃದ್ಧಿ, ವೃತ್ತಿಯಲ್ಲಿ ಕೆಲಸ ಮಾಡುವ ಹುಮ್ಮಸ್ಸು ಜತೆಗೂಡಿ ಕಷ್ಟನಷ್ಟಗಳನ್ನು ನಿವಾರಿಸಿ ಮುನ್ನಡೆಯಲಿದ್ದೀರಿ. ಬಂದ ಅವಕಾಶಗಳನ್ನು ಸದುಪಯೋಗಿಸಿಕೊಂಡು ಹಾಗೇ ವೃದ್ಧಿಸಿಕೊಂಡಲ್ಲಿ ಯಶಸ್ಸು ನಿಶ್ಚಿತ. ವಿದೇಶ ಪ್ರಯಾಣ, ಪತ್ನಿ, ಪುತ್ರಾದಿಗಳಿಂದ ಸುಖ ಲಭಿಸಿ ಸಂತಸ ಕಾಣುವಿರಿ. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದಲ್ಲಿ ಯಶಸ್ಸು ಕಾಣು ವಂತಾದೀತು. ಕಷ್ಟಸುಖಗಳ ಸಮ್ಮಿಶ್ರ ಫ‌ಲವಿದ್ದರೂ ಕ್ರಿಯಾಶೀಲತೆ ಹಾಗೂ ಪ್ರಯತ್ನಶೀಲತೆಯಿಂದ ಕಾರ್ಯಸಾಧನೆಗೆ ಅನುಕೂಲ ವಾಗಲಿದೆ. ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಈ ಮಧ್ಯೆ ಕುಟುಂಬದಲ್ಲಿ ಬಾಕಿ ಉಳಿ ದಿದ್ದ ಶುಭಮಂಗಲ ಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನೆರವೇರುವುದು.

ಮಕರ

ಈ ಯುಗಾದಿಯ ಆರಂಭದಿಂದಲೇ ಏಕಾದಶದ ಉತ್ತಮ ಸ್ಥಾನದಲ್ಲಿ ಸಂಚರಿಸುವುದರಿಂದ ಸಾಂಸಾರಿಕ ಜೀವನದ ಸಾಧನಾ ಸೌಕರ್ಯಗಳು ಹಿಂದಿನಕ್ಕಿಂತಲೂ ಹೆಚ್ಚಿನ ವ್ಯವಸ್ಥೆಯಲ್ಲಿ ತೋರಿಬರುತ್ತದೆ. ಸ್ವಪ್ರಯತ್ನದಿಂದ, ಆತ್ಮವಿಶ್ವಾಸದಿಂದ, ದೃಢ ನಿರ್ಧಾರದಿಂದ ನಡೆದುಕೊಂಡಲ್ಲಿ ನಿರೀಕ್ಷಿತ ಅಭಿವೃದ್ಧಿಯು ದಿನದಿಂದ ದಿನಕ್ಕೆ ಪ್ರವರ್ಧಮಾನಗೊಳ್ಳುತ್ತಾ ಹೋಗಲಿದೆ. ಹಿತಶತ್ರುಗಳಿಂದ, ಕೆಲವೊಮ್ಮೆ ಪರಕೀಯರಿಂದ ಒದಗುವ ವಂಚನೆಗಳಿಂದ ವ್ಯವಹಾರ ಕ್ಷೇತ್ರದಲ್ಲಿ ಆರ್ಥಿಕ ಕಷ್ಟನಷ್ಟಗಳು ಉಂಟಾಗಬಹುದು. ಈ ಮಧ್ಯೆ ಶನಿಯ ಪ್ರತಿಕೂಲತೆಯಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಿದೆ. ವಾಹನಾದಿ ಅಪಘಾತದ ಬಗ್ಗೆ ತೀವ್ರ ಎಚ್ಚರವಿರಲಿ. ರಾಜಕೀಯ, ಸಾಮಾಜಿಕ, ಕ್ಷೇತ್ರದ ವರಿಷ್ಠರಿಗೆ ಅನಿರೀಕ್ಷಿತ ರೂಪದಲ್ಲಿ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಆಡಳಿತ, ಉದ್ಯಮದಲ್ಲಿರುವವರಿಗೆ ಮುಂಭಡ್ತಿ ದೊರಕಲಿದೆ. ಜವಾಬ್ದಾರಿ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಹಿತಶತ್ರುಗಳ ಮತ್ಸರದ ಪ್ರವೃತ್ತಿಯು ಕೆಲವೊಮ್ಮೆ ತೊಂದರೆ ಕೊಟ್ಟರೂ ಎದುರಿಸುವ ಶಕ್ತಿ ನಿಮ್ಮದಾಗಲಿದೆ. ಉನ್ನತ ವ್ಯಾಸಂಗ, ಪ್ರತಿಭಾ ಪರೀಕ್ಷೆಗಳಲ್ಲಿ ತೊಡಗಿರುವವರಿಗೆ ಯಶಸ್ಸು ನಿರೀಕ್ಷಿತವಾಗಿ ಕೈಸೇರಲಿದೆ. ಸ್ಥಿರಾಸ್ತಿ ಮಾರಾಟದಿಂದ ಋಣಬಾಧೆ ನಿವಾರಣೆಯಾಗಲಿದೆ. ಧಾರ್ಮಿಕ ಪ್ರವಚನಕಾರರಿಗೆ, ಸಾಹಿತಿ ಕಲಾವಿದರಿಗೆ ತಮ್ಮ ಕ್ರಿಯಾಶೀಲತೆಯ ಫ‌ಲ ದೊರಕಲಿದೆ. ಮನದನ್ನೆಯ ಆರೋಗ್ಯ ಭಾಗ್ಯದ ಬಗ್ಗೆ ಆಗಾಗ ಯೋಚಿಸುವಂತಾದೀತು. ವೃತ್ತಿರಂಗದಲ್ಲಿ ಕಾಲೋಚಿತ ವರ್ತನೆ ಹಾಗೂ ನಡೆನುಡಿಗಳಿಂದ ನಿಮ್ಮ ಸ್ಥಾನಮಾನಗಳನ್ನು ಭದ್ರಪಡಿಸಿಕೊಳ್ಳಬೇಕಾದೀತು. ಆಗಾಗ ವಿದೇಶ ಯಾನದಿಂದ ಕಾರ್ಯಸಾಫ‌ಲ್ಯವನ್ನು ಪಡೆದರೂ ದೇಹಾರೋಗ್ಯದ ಬಗ್ಗೆ ಗಮನ ಹರಿಸುವಂತಾದೀತು. ಮನೆಯಲ್ಲಿ ಎಲ್ಲಾ ರೀತಿಯ ಶುಭಮಂಗಲ ಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆಯಲಿವೆ. ಮಹಣ್ತೀದ ನಿರ್ಧಾರಗಳಲ್ಲಿ ಮುನ್ನಡೆ ತೋರಿಬರಲಿದೆ. ಪಾಲುದಾರಿಕೆಯಿಂದ ಹೊಸ ವ್ಯವಹಾರ ಆರಂಭವಾದೀತು. ಕೋರ್ಟು ಕಚೇರಿಗಳ ನ್ಯಾಯವಾದಿಗಳಿಗೆ ನಿರೀಕ್ಷಿತ ಲಾಭವಿದೆ. ಹಾಗೇ ಶೇರು, ಫೈನಾನ್ಸ್‌ ವ್ಯವಹಾರದಲ್ಲಿ ಜಾಗ್ರತೆ ವಹಿಸಿರಿ. ಅಕ್ಟೋಬರ್‌ ತಿಂಗಳ ಅನಂತರ ಗುರುಬಲವು ಕ್ಷೀಣವಾದರೂ ಲಾಭಸ್ಥಾನದ ರಾಹುವಿನಿಂದ ಅನಿರೀಕ್ಷಿತ ರೂಪದಿಂದ ನಿಮ್ಮ ಕಾರ್ಯಸಾಧನೆಯಾಗಲಿದೆ. ದೃಢ ಮನೋಭಾವದಿಂದ ಮುಂದುವರಿಯಿರಿ.

ಕುಂಭ

ಈ ಯುಗಾದಿಯ ಆರಂಭದಿಂದಲೇ ಸ್ವಗ್ರಹದ ಶನಿ ಲಾಭಸ್ಥಾನದಲ್ಲಿದ್ದು ಇಷ್ಟಾನಿಷ್ಟ ಲಾಭಲಾಭಾದಿಗಳು ತೋರಿಬಂದು ಆರ್ಥಿಕವಾಗಿ ಉನ್ನತಿ ಕಂಡುಬರಲಿದೆ. ವಾಹನ ಖರೀದಿ, ಭೂಖರೀದಿಗಳಿಗೆ ಅನುಕೂಲವಾಗಲಿದೆ. ವೃತ್ತಿರಂಗದಲ್ಲಿರಲೀ, ಸಾಮಾಜಿಕ ಕ್ಷೇತ್ರದಲ್ಲಿರಲೀ ಅನಗತ್ಯ ವಾದ-ವಿವಾದಗಳಿಗೆ ಕಾರಣರಾಗದೆ ಮುನ್ನಡೆಯುವುದು ಅತೀ ಅಗತ್ಯವಿದೆ. ಕೌಟುಂಬಿಕ ಸಮಸ್ಯೆಗಳು ಆಗಾಗ ಕಲಹಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಇಷ್ಟರೊಡನೆ ನಿಷ್ಠುರರಾಗಿ ಮಾನಸಿಕವಾಗಿ ಅಂತರ್ಮುಖೀಯಾಗಿ ಕಾಲಕ್ಷೇಪ ಮಾಡುವ ಕಾಲವಾದೀತು. ಆರೋಗ್ಯದ ಬಗ್ಗೆ ಹಳೇ ಕಾಯಿಲೆಗಳು ಮರುಕಳಿಸಬಹುದು. ಕಾಳಜಿ ವಹಿಸಿದಷ್ಟು ಉತ್ತಮ. ವಿದ್ಯಾರ್ಥಿಗಳು ಕೊಂಚ ಹಿನ್ನಡೆಯನ್ನು ಅನುಭವಿಸಲಿದ್ದಾರೆ. ನೆರೆಹೊರೆಯವರಿಂದ ಅವಮಾನದ ಪ್ರಸಂಗ ಎದುರಾದೀತು. ಉದ್ಯೋಗ ಕ್ಷೇತ್ರದಲ್ಲಿ ಹಾಗೂ ಸ್ವಉದ್ಯೋಗಿಗಳಿಗೆ ಪರಿಶ್ರಮಕ್ಕೆ ತಕ್ಕ ಫ‌ಲವಿರುತ್ತದೆ. ಲೋಹ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ. ಸಾರಿಗೆ, ಸಂಚಾರ ವ್ಯವಹಾರಸ್ಥರಿಗೆ ಉತ್ತಮ ಲಾಭ ತಂದುಕೊಡಲಿದೆ. ಮನಸ್ತಾಪಗಳು ಸಂಧಾನದಿಂದ ಬಗೆಹರಿಯಲ್ಪಡುತ್ತವೆ. ಆಹಾರ, ವಿಚಾರಗಳಲ್ಲಿ ಶಿಸ್ತುಬದ್ಧರಾಗಿದ್ದರೂ ಕೆಲವೊಂದು ಘಟನೆಗಳು ಮನಸ್ಸನ್ನು ನೋಯಿಸಲಿವೆ. ಅಕ್ಟೋಬರ್‌ ಅನಂತರ ಏಕಾದಶದ ಗುರು, ಏಕಾದಶದ ಕೇತು, ಏಕಾದಶದ ಶನಿಗ್ರಹಗಳ ಯುತಿಯಿಂದ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಯೋಗ್ಯ ವಯಸ್ಕರಿಗೆ ನವೋಲ್ಲಾಸ ತರುವ ಸಂವತ್ಸರವಾಗಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬಂದು ಹೊಸ ವ್ಯವಹಾರಗಳನ್ನು ಆರಂಭಿಸಲು ಅನುಕೂಲವಾಗುವುದು. ಸಾಂಸಾರಿಕವಾಗಿ, ಕೌಟುಂಬಿಕವಾಗಿ ಬಾಂಧವ್ಯ ವೃದ್ಧಿಯಾಗುವುದಲ್ಲದೆ, ಅಲ್ಲಸಲ್ಲದ ಆರೋಪಗಳಿಂದ ವಿಮುಕ್ತಿ ಹೊಂದುವಿರಿ. ಕಳೆದ ವರ್ಷ ಪ್ರಾರಂಭಿಸಿದ ಕಾರ್ಯಗಳು ಉತ್ತಮ ಫ‌ಲವನ್ನಿತ್ತು ಅದೃಷ್ಟದ ಬಾಗಿಲು ತೆರೆಯಲಿದೆ. ಸ್ವಂತ ವ್ಯವಹಾರದಲ್ಲಿ ದ್ವಿಗುಣ ಲಾಭವಿದೆ. ಆದರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಷ್ಟೂ ಉತ್ತಮ. ಅವಿವಾಹಿತರ ವಿವಾಹ ಪ್ರಸ್ತಾವಗಳು ವೈವಾಹಿಕ ಭಾಗ್ಯಕ್ಕೆ ಸಾಧಕವಾಗಲಿದೆ. ಮನೆಯವರ ಬೇಡಿಕೆಗಳು ಈಡೇರಲಿವೆ. ಮುಖ್ಯವಾಗಿ ನಿಮ್ಮ ಪ್ರಯತ್ನಬಲ, ದೃಢನಿರ್ಧಾರಗಳು ಎಲ್ಲಾ ವಿಚಾರದಲ್ಲಿ ಪೂರಕವಾಗಿ ಬಹುತೇಕ ಶುಭ ಫ‌ಲಗಳು ಯಶಸ್ಸನ್ನು ನೀಡಲಿವೆ. ಉತ್ತಮ ಹೆಸರು, ಗಳಿಕೆಯ ಅವಕಾಶವು ಒದಗಿ ಬಂದೀತು.

ಮೀನ

ಈ ಯುಗಾದಿಯ ಆರಂಭದಿಂದ ಮನೋಚಾಂಚಲ್ಯದ ಹೆಸರಾದ ನಿಮಗೆ ಉತ್ತಮ ಗುರುಬಲವಿದ್ದು ಶ್ರೀದೇವರ ಅನುಗ್ರಹದಿಂದ ಎಲ್ಲವನ್ನು ಎದುರಿಸುವ ಶಕ್ತಿ ಪಡೆಯಲಿದ್ದೀರಿ. ಆಗಾಗ ಆರ್ಥಿಕ ಸ್ಥಿತಿಯಲ್ಲಿ ತೊಂದರೆಗಳಿದ್ದರೂ, ಅದೇ ರೀತಿಯಲ್ಲಿ ವಿವಿಧ ರೂಪದಲ್ಲಿ ಧನಾಗಮನವಿರುತ್ತದೆ. ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಸ್ಥಿರತೆ, ವ್ಯಾಪಾರ, ವ್ಯವಹಾರದಲ್ಲಿ ಯಶಸ್ಸು, ಸಾಂಸಾರಿಕ ಸಮಸ್ಯೆಗಳ ಪರಿಹಾರ ಕಂಡುಬರುತ್ತದೆ. ಶುಭವಾರ್ತಾ ಶ್ರವಣ ಭಾಗ್ಯದಿಂದ ಸಂತಸ ತಂದೀತು. ಧಾರ್ಮಿಕ ಪ್ರವೃತ್ತಿಯವರಿಗೆ ಇದು ಸಕಾಲ. ರಾಜಕೀಯ ಹೋರಾಟದಲ್ಲಿ ರಾಜಕೀಯ ಮುಖಂಡರಿಗೆ ಮುನ್ನಡೆ. ಲೇವಾದೇವಿ ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಕುಟುಂಬ ವರ್ಗದವರಿಂದ ಸಹಕಾರ, ಸ್ಫೂರ್ತಿ, ಹೊಸ ಚಿಂತನೆಗಳ ಅನುಷ್ಠಾನಕ್ಕೆ ಸಾಧಕವಾದೀತು. ಅನಿರೀಕ್ಷಿತ ಶುಭ ವಾರ್ತೆಗಳ ಭಾಗ್ಯವಿದೆ. ನಿಮಗೆ ಇಷ್ಟವೆನಿಸಿದ ಕೆಲಸಕಾರ್ಯಗಳಲ್ಲಿ ಮುನ್ನಡೆಯುವುದು ಉತ್ತಮ. ಕೆಲವೊಂದು ಸಾಂಸಾರಿಕ ಮನಸ್ತಾಪಗಳು ಬಗೆಹರಿದು ಸಂತಸಗೊಳ್ಳುವಿರಿ. ಈ ವರ್ಷ ಅದೃಷ್ಟದ ಪ್ರಮಾಣ ಜಾಸ್ತಿ ಎನಿಸಲಿದೆ. ಲಾಟರಿ, ಶೇರು ಇತ್ಯಾದಿಗಳ ಬಗ್ಗೆ ಹೆಚ್ಚಿನ ಧನ ವ್ಯಯವಾಗದಂತೆ ಜಾಗ್ರತೆ ವಹಿಸಿರಿ. ಆಹಾರದ ಸೇವನೆಯಿಂದ ಉದರಪೀಡೆ ತಂದೀತು. ಒಮ್ಮೊಮ್ಮೆ ಮಾಡಬಾರದ ಕಾರ್ಯವೆಸಗಿ ತೊಂದರೆಗೊಳಗಾಗುವಿರಿ. ಕೃಷಿ, ತೋಟ, ಬೇಸಾಯಗಾರರಿಗೆ ಉತ್ತಮ ಲಾಭ ಸಿಗಲಿದೆ. ಆರ್ಥಿಕವಾಗಿ ಕೊಟ್ಟುಕೊಳ್ಳುವಿಕೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಉದ್ಯೋಗದಲ್ಲಿ ಬಾಕಿ ಇರುವ ಪದೋನ್ನತಿಯು ಶೀಘ್ರವೇ ದೊರಕಲಿದೆ. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಅನಿರೀಕ್ಷಿತ ಫ‌ಲ ಸಿಗಲಿದೆ. ಪ್ರೇಮಿಗಳ ಪ್ರೇಮ ಪ್ರಸಂಗ ಕಂಕಣಬಲಕ್ಕೆ ಅನುಕೂಲವಾಗಲಿದೆ. ವೃತ್ತಿ, ಉದ್ಯೋಗದಲ್ಲಿ ಸ್ಪರ್ಧೆ, ಬದಲಾವಣೆ ಕಂಡುಬಂದೀತು. ಉದ್ಯೋಗಸ್ಥರಿಗೆ ವಿದೇಶ ಸಂಚಾರದ ಯೋಗವಿದೆ. ಹಿರಿಯರಿಗೆ ಗುರುಹಿರಿಯರ ದರ್ಶನ ಭಾಗ್ಯದಿಂದ ಶಾಂತಿ, ಸಮಾಧಾನ ಸಿಗಲಿದೆ. ಧಾರ್ಮಿಕ ಪ್ರವೃತ್ತಿಯವರಿಗಿದು ಸಕಾಲ. ಅಕ್ಟೋಬರ್‌ ಅನಂತರ ದೈವಬಲ ಕ್ಷೀಣವಾಗಿ ಆಹಾರ, ವಿಹಾರಗಳಲ್ಲಿ ನಿರಾಸಕ್ತಿ, ದಾಯಾದಿಗಳ ಶತ್ರುಪೀಡೆಯಿಂದ ಆತಂಕ ತರಲಿದೆ. ಕೆಲವೊಂದು ದುಡುಕಿನ ನಿರ್ಧಾರದಿಂದ ಕೆಟ್ಟ ಹೆಸರನ್ನು ಪಡೆಯುವ ಸಂದರ್ಭ ಬಂದೀತು. ಅನಗತ್ಯ ವಿಚಾರದಲ್ಲಿ ತೊಂದರೆಗೆ ಸಿಲುಕದಂತೆ ಜಾಗ್ರತೆ ವಹಿಸಿರಿ. ಒಟ್ಟಿನಲ್ಲಿ ಮಿಶ್ರ ಫ‌ಲದಾಯಕ ವರ್ಷವಾದೀತು.

ವೆಬ್ ಎಕ್ಸ್‌ಕ್ಲೂಸಿವ್

ಕೂಲಿ ಚಿತ್ರದ ಕ್ಲೈಮ್ಯಾಕ್ಸ್ ಬದಲು!Big B ಬಚಾವ್,ದುರ್ಯೋಧನ ಪುನೀತ್ ಜೀವನಕ್ಕೆ ಕಪ್ಪು ಚುಕ್ಕೆ

ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?

ಕಂಪ್ಯೂಟರ್ ನಲ್ಲಿ ಕಾಪಿ, ಕಟ್, ಪೇಸ್ಟ್ ಆಯ್ಕೆ ಕಂಡುಹಿಡಿದ ಮಾಂತ್ರಿಕ ಲ್ಯಾರಿ ಟೆಸ್ಲರ್

ವೀಕ್ಷಕರನ್ನು ಮೋಡಿ ಮಾಡುವ ಕ್ರಿಕೆಟ್ ನ ಕಂಚಿನ ಕಂಠದ ಕಾಮೆಂಟೇಟರ್

ಗುಟ್ಟಾಗಿ ರಿಯಲ್ ಲೈಫ್ ನಲ್ಲೇ ಗಾರ್ಮೆಂಟ್ ಫ್ಯಾಕ್ಟರಿ ಕೆಲಸ ಮಾಡಿ ಸ್ಟಾರ್ ನಟನಾಗಿ ಮಿಂಚಿದ್ದ!

ಗ್ಯಾಲರಿ

ಕೋವಿಡ್ ವೈರಿಯ ವಿರುದ್ಧ ಯುದ್ಧ ನಿರತ ಆರೋಗ್ಯ ಯೋಧರಿಗೊಂದು ನಮನ

ಈಗ ಮಾಸ್ಕ್ ಒಂದೇ ಮುಖಕೆ ಭೂಷಣ ; ಸೋಂಕಿಗೊಳಗಾಗದಂತೆ ನಮ್ಮನ್ನು ರಕ್ಷಿಸುವ ಸಾಧನ!

Lockdown: ದೇಶದ ಜನಜೀವನ; ಸಹಾಯ ಹಸ್ತ

India Lockdown: ಕರಾವಳಿ ಭಾಗದ ಸ್ಥಿತಿಗತಿಗಳ ವಿಶೇಷ ಗ್ಯಾಲರಿ

Lockdown: ದೇಶದ ಜನಜೀವನ; ವಿಶೇಷ ಗ್ಯಾಲರಿ

ಗ್ಯಾಜೆಟ್/ಟೆಕ್

ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare

ನಿಮ್ಮ ವಾಟ್ಸಾಪ್ ಸಂದೇಶಗಳ ಮೇಲೆ ಸರ್ಕಾರದ ಹದ್ದಿನಕಣ್ಣು ? ಪಿಐಬಿ ಹೇಳಿದ್ದೇನು ?

ಕೋವಿಡ್-19: ಫೇಸ್ ಬುಕ್ ಹೆಲ್ಪ್ ಡೆಸ್ಕ್ ಆರಂಭಿಸಿದ ಭಾರತ ಸರ್ಕಾರ

ಎಲೆಕ್ಟ್ರಿಕ್‌ ಕಾರುಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ 31

ರಾಜ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿದೆ ಸೋಂಕಿತರ ಸಂಖ್ಯೆ: ಇಂದು ಹೊಸ 10 ಕೋವಿಡ್ ಪ್ರಕರಣ ಪತ್ತೆ

ವಿದ್ಯುತ್‌ ಬೇಡಿಕೆ ಕುಗ್ಗಿಸಿದ ಲಾಕ್‌ಡೌನ್‌

ಅಗತ್ಯ ದಾಖಲೆ ಸಲ್ಲಿಸಿದರೆ ಒಂದೇ ದಿನದಲ್ಲಿ ಪಾಸ್‌ ಲಭ್ಯ

ಬೆಂಗಳೂರಿನ ವೈದ್ಯನಿಗೆ ತಗುಲಿತು ಸೋಂಕು

ಎಲ್ಲ ತೃತೀಯ ಲಿಂಗಿಗಳಿಗೂ “ಮೈತ್ರಿ’ ವಿಸ್ತರಿಸಿ: ಹೈಕೋರ್ಟ್‌

ದೇಶ

ಲಾಕ್ ಡೌನ್; PPF, ಸುಕನ್ಯಾ ಸಮೃದ್ಧಿ ಯೋಜನೆ ಠೇವಣಿದಾರರಿಗೆ ರಿಲೀಫ್, ಕೇಂದ್ರ ಹೇಳಿದ್ದೇನು?

ಕೋವಿಡ್ ವೈರಸ್ ಭೀತಿ: ಜಮ್ಮು-ಕಾಶ್ಮೀರದಲ್ಲಿ 65 ಮಂದಿ ಕೈದಿಗಳ ಬಿಡುಗಡೆ, ಹೈಕೋರ್ಟ್ ಗೆ ವರದಿ

ಕೋವಿಡ್19: ಭಾರತದಲ್ಲಿ ಸೋಂಕಿತರ ಸಂಖ್ಯೆ 8,356ಕ್ಕೆ ಏರಿಕೆ, 273 ಜನರು ಸಾವು

ಮುಂಬೈ ತಾಜ್ ಮಹಲ್ ಹೊಟೇಲ್ ನ ಆರು ಮಂದಿ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್

ನವಜಾತ ಶಿಶು ಜೀವ ಉಳಿಸಿದ ವೈದ್ಯರು

ವಿದೇಶ

4 ದಶಕದ ಹಿಂದಿನ ಕ್ರಾಂತಿ!ಮುಜಿಬುರ್ ಹತ್ಯಾ ದೋಷಿ ನಿವೃತ್ತ ಸೇನಾ ಕ್ಯಾಪ್ಟನ್ ಗೆ ಮರಣದಂಡನೆ

ಕೋವಿಡ್-19 ಆರ್ಭಟಕ್ಕೆ ಅಮೆರಿಕಾದಲ್ಲಿ 20 ಸಾವಿರ ಬಲಿ: ಇಟಲಿಯನ್ನು ಮೀರಿಸಿದ ಸಾವಿನ ಪ್ರಮಾಣ

ಆಸ್ಪತ್ರೆಯಲ್ಲೇ ಸಿನಿಮಾ ವೀಕ್ಷಿಸಿದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌

ದಯವಿಟ್ಟು ಮಾಸ್ಕ್ ಧರಿಸುವುದನ್ನು ಮಾತ್ರ ಮರೆಯಬೇಡಿ: ವೈರಾಣು ತಜ್ಞರ ಸಲಹೆ

ಲಾಕ್‌ಡೌನ್‌ ತೆರವಿಗೆ ಆತುರತೆ ಅಪಾಯ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ವಾಣಿಜ್ಯ

ವಿಮಾನ ಹಾರಾಟ ಶುರುವಾದರೂ ಸದ್ಯಕ್ಕೆ ಊಟವಿಲ್ಲ: ಇಂಡಿಗೋ ನಿರ್ಧಾರ

ಭಾರತೀಯ ರೈಲ್ವೇಯ IRCTCಯಿಂದ 8.5 ಲಕ್ಷ ಜನರಿಗೆ ಆಹಾರ ವಿತರಣೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಸರಕು ಸಾಗಾಣೆ ಗುರಿ ತಲುಪುವಲ್ಲಿ ರೈಲ್ವೇಗೆ 2,129 ಕೋಟಿ ರೂ. ನಷ್ಟ

ಕೋವಿಡ್ 19 ಲಾಕ್ ಡೌನ್: ಏ.30ರವರೆಗೆ ಅಂತಾರಾಷ್ಟ್ರೀಯ ವಿಮಾನ ಯಾನ ರದ್ದು: ಇಂಡಿಗೋ

ವೈವಿಧ್ಯ

ಕೋವಿಡ್19 ವೈರಸ್ ಮುನ್ನೆಚ್ಚರಿಕೆಗೆ ರಾಜ್ಯದೆಲ್ಲೆಡೆ ಲಾಕ್ ಡೌನ್ ಮಾಡಬೇಕೆನ್ನುವ ಆಗ್ರಹ

ಕೋವಿಡ್ 19 ಮಣಿಸಲು ಜನತಾ ಕರ್ಫ್ಯೂ: ಸರ್ಕಾರದ ಈ ಆರಂಭಿಕ ಹೆಜ್ಜೆಯ ಬಗ್ಗೆ ಅಭಿಪ್ರಾಯವೇನು?

ಕೋವಿಡ್-19 ತೀವ್ರತೆಯ ದೇಶದ ಜನಸಾಮಾನ್ಯರಲ್ಲಿ ನಿರ್ಲಕ್ಷ್ಯ ಭಾವನೆ ಹೆಚ್ಚಾಗುತ್ತಿದೆಯೇ?

ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆ ಕುರಿತಾಗಿ ನಿಮ್ಮ ಅಭಿಪ್ರಾಯವೇನು

ಕೊರೊನಾ ಭೀತಿಯ ಕಾರಣಕ್ಕೆ ಐಪಿಎಲ್ ಮುಂದೂಡಬೇಕೆ?

ಅನಿವಾಸಿ ಕನ್ನಡಿಗರು

ಕೋವಿಡ್‌ 19: ಸರಕಾರಕ್ಕೆ 40 ಸಾ. ಕೋ. ರೂ. ಕಂದಾಯ ನಷ್ಟ

ಲಾಕ್‌ಡೌನ್‌ನಿಂದ ಜನರಿಗೆ ಸಮಸ್ಯೆ : ಉದ್ಧವ್‌ ಠಾಕ್ರೆ ಕ್ಷಮೆಯಾಚನೆ

ಕೋವಿಡ್ 19 ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆ

ಗ್ರಾಮೀಣ ಪ್ರದೇಶಗಳಲ್ಲಿ ಬಳಸಲು ರೈಲ್ವೇ ಇಲಾಖೆ ಯೋಜನೆ

ಕೋವಿಡ್ 19 ಲಾಕ್ ಕ್‌ಡೌನ್‌: ಕಷ್ಟದಲ್ಲಿ ರೈತಾಪಿ ವರ್ಗ

ಅಲಾಲಾ

ಶೌಚ ಮುಗಿಸುವಷ್ಟರಲ್ಲಿ ದುಬಾರಿ ಕಾರು ಮಾಯ!

ಕೊರೊನ ಸೋಂಕಿನಿಂದ ಅಂತರ ಕಾಯ್ದುಕೊಳ್ಳಲು ಡಿಸ್ಕ್ ಕಟ್ಟಿಕೊಂಡ ಮಹಾಶಯ!

ಯುನಿಕಾರ್ನ್ ನಾಯಿ ಈಗ ನೆಟ್ಟಿಗರ ಫೇವರಿಟ್‌

ಜಿರಾಫೆ ಬಾಯಿ ಸೇರಿದ ಮದುಮಗನ ಮುಂಡಾಸು

2,300 ಅಡಿ ಎತ್ತರದಿಂದ ಜಿಗಿದ ನಾಯಿ ಕಜುವಾ

ನಿಮ್ಮ ಜಿಲ್ಲೆ

ಜನಸಂಚಾರಕ್ಕೆ ಸಂಪೂರ್ಣ ಬ್ರೇಕ್‌

ಯಂತ್ರದಿಂದ ಭತ್ತ ಕೊಯ್ಲು ಪ್ರಾರಂಭ

ಮಂಗಳೂರು ಲಾಕ್ ಡೌನ್ ಪ್ರಸಂಗ: ರೂಮ್ ಗೆ ಸೂಟ್ ಕೇಸ್ ನಲ್ಲಿ ಗೆಳೆಯನನ್ನು ತಂದು ಸಿಕ್ಕಿಬಿದ್ದ!

ರಾಜಸ್ಥಾನಿಗಳ ವರ್ಷದ ಅನ್ನ ಕಿತ್ತ ಕೋವಿಡ್

ಲಾಕ್ ಡೌನ್ ನಡುವೆ ಅಕ್ರಮ ಮದ್ಯ ಮಾರಾಟ, 9 ಸನ್ನದುಗಳ ಅಮಾನತು ಆದೇಶ