• ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯ

  ರಾಣಿಬೆನ್ನೂರ: ಕೊಪ್ಪಳದ ದೇವರಾಜ ಅರಸ ಮೆಟ್ರಿಕ್‌ ಪೂರ್ವ ಹಾಸ್ಟೇಲ್ನಲ್ಲಿ ಐವರು ವಿದ್ಯಾರ್ಥಿಗಳು ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದು, ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಎಸ್‌.ಸಿ. ಕುಲಕರ್ಣಿಗೆ ಮನವಿ…

 • ನೂತನ‌ ಸಚಿವ ಬೊಮ್ಮಾಯಿ ಮೇಲಿವೆ ಹಲವು ನಿರೀಕ್ಷೆ

  ಹಾವೇರಿ: ರಾಜ್ಯ ಬಿಜೆಪಿ ಸರ್ಕಾರ ಮೊದಲ ಮಂತ್ರಿಮಂಡಲದಲ್ಲಿ ಜಿಲ್ಲೆಯ ಶಾಸಕರೋರ್ವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಜಿಲ್ಲೆಯ ಬಹುದಿನಗಳ ಬೇಡಿಕೆಗಳು ಇವರ ಅವಧಿಯಲ್ಲಾದರೂ ಈಡೇರಬಹುದು ಎಂಬ ಆಸೆ ಚಿಗುರೊಡೆದಿದೆ. ಬಸವರಾಜ ಬೊಮ್ಮಾಯಿಯವರು ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಇರುವುದರಿಂದ…

 • ಬೀದಿಗಿಳಿದು ರೈತರ ಪ್ರತಿಭಟನೆ

  ಹಾವೇರಿ: ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಅತಿವೃಷ್ಠಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ…

 • ಕಾರ್ಮಿಕರ ವೇತನ ವಿಳಂಬವಾದ್ರೆ ಪಿಡಿಒ ಹೊಣೆ

  ಬ್ಯಾಡಗಿ: ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೇ ಕೂಲಿ ಕಾರ್ಮಿಕರ ವೇತನ ನೀಡಲು ವಿಳಂಬವಾದಲ್ಲಿ ಅದಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನೇ ನೇರವಾಗಿ ಹೊಣೆಯನ್ನಾಗಿಸಲಾಗುವುದು ಎಂದು ಸಾಮಾಜಿಕ ಲೆಕ್ಕಪರಿಶೋಧನೆ ತಾಲೂಕು ಸಂಯೋಜಕ ಬಸವರಾಜ ಅಮಾತಿ ಎಚ್ಚರಿಸಿದರು. ತಾಲೂಕಿನ ಗುಂಡೇನಹಳ್ಳಿ ಗ್ರಾಮ ಪಂಚಾಯತ್‌…

 • ವಿದ್ಯಾರ್ಥಿಗಳಲ್ಲಿ ಸಹೋದರತ್ವ ಭಾವ ಬೆಳೆಯಲಿ

  ಹಾವೇರಿ: ವಿದ್ಯಾರ್ಥಿಗಳು ಸಹೋದರತ್ವ ಭಾವನೆ, ಸ್ನೇಹ-ಪ್ರೀತಿ, ಸೇವಾ ಮನೋಭಾವ, ನಾವೆಲ್ಲ ಒಂದೇ ಎಂಬ ಭಾವ ಬೆಳಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್‌.ಎಚ್. ರೇಣುಕಾದೇವಿ ಹೇಳಿದರು. ನಗರದ…

 • ಜಾನುವಾರುಗಳಿಗೀಗ ರೋಗ ಭೀತಿ

  ಹಾವೇರಿ: ಉಕ್ಕಿ ಹರಿದ ಪ್ರವಾಹದಿಂದ ಜನರು ಮನೆ ಕಳೆದುಕೊಂಡು ಸಂಕಷ್ಟಪಡುತ್ತಿದ್ದರೆ, ಜಾನುವಾರುಗಳು ಸಹ ತಮ್ಮ ನೆಲೆ ಕಳೆದುಕೊಂಡು ವಾರಕ್ಕೂ ಹೆಚ್ಚು ಕಾಲ ಗಾಳಿ-ಮಳೆಗೆ ಮೈಯೊಡ್ಡಿ ಈಗ ಸಾಂಕ್ರಾಮಿಕ ರೋಗ ಭೀತಿಯಲ್ಲಿವೆ. ನೆರೆಯಿಂದಾಗಿ ಕೊಟ್ಟಿಗೆಗಳಿಗೆ ನೀರು ನುಗ್ಗಿ ಸಾವಿರಾರು ಜಾನುವಾರುಗಳು…

 • ವೇತನ ವಿಳಂಬವಾದರೆ ಶಾಲೆ ಬಂದ್‌ ಮಾಡುವ ಎಚ್ಚರಿಕೆ

  ಹಿರೇಕೆರೂರ: ಜೂನ್‌ ವೇತನ ಬಟವಡೆಯಾಗಿಲ್ಲ, ಇದರಿಂದ ಶಿಕ್ಷಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಾಲೂಕು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಹ ಶಿಕ್ಷಕರು, ದೈಹಿಕ…

 • ನೆರೆ ಪ್ರದೇಶಕ್ಕೆ ನೋಡಲ್ ಅಧಿಕಾರಿ ಭೇಟಿ

  ಹಾವೇರಿ: ಅತಿವೃಷ್ಠಿ ಹಾಗೂ ನೆರೆಯಿಂದ ಹಾನಿಯಾಗಿರುವ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯ ಕಾರ್ಯರ್ಶಿ ಹಾಗೂ ಅತಿವೃಷ್ಠಿ ಹಾಗೂ ನೆರೆ ಪರಿಹಾರ ಜಿಲ್ಲಾ ನೋಡಲ್ ಅಧಿಕಾರಿ ವಿ.ಮಂಜುಳಾ ಭೇಟಿ…

 • ಕಸ-ರಸ ಪ್ರಯತ್ನಕ್ಕೆ ಮೆಚ್ಚುಗೆ ಮಾತು

  ಬ್ಯಾಡಗಿ: ಪಟ್ಟಣದಲ್ಲಿ ಉತ್ಪತ್ತಿ ಆಗುವ ಕಸವನ್ನು ರಸ ಮಾಡುವ ನಿಟ್ಟಿನಲ್ಲಿ ವಿನೂತನ ಪೈಪ್‌ ಕಾಂಪೋಸ್ಟ್‌ ಪ್ರಯೋಗ ಪ್ರಯತ್ನವೊಂದಕ್ಕೆ ಕೈ ಹಾಕಿರುವ ಸ್ಥಳೀಯ ಪುರಸಭೆ ಅಧಿಕಾರಿಗಳ ನಡೆಗೆ ಸಾರ್ವಜಕನಿರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣವನ್ನು ಸುಂದರ ಹಾಗೂ ಸ್ವಚ್ಛವಾಗಿಡುವ ನಿಟ್ಟಿನಲ್ಲಿ…

 • ನಿಗದಿತ ಸಮಯಕ್ಕೆ ಬಾರದ ಅಧಿಕಾರಿಗಳು

  ರಾಣಿಬೆನ್ನೂರ: ನಿಗದಿತ ಸಮಯಕ್ಕೆ ಅಧಿಕಾರಿಗಳು ಸಭೆ ಬಾರದಿದ್ದರಿಂದ ಆಕ್ರೋಶಗೊಂಡ ತಾಲೂಕು ಪಂಚಾಯತ್‌ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದ ಘಟನೆ ಶುಕ್ರವಾರ ನಡೆಯಿತು. ಇಲ್ಲಿನ ತಾಪಂ ಸಭಾಭವನದಲ್ಲಿ ಶುಕ್ರವಾರ 10.30ಕ್ಕೆ ನಿಗದಿಯಾಗಿದ್ದ ಸಾಮಾನ್ಯ ಸಭೆಗೆ ಕೆಲ ಅಧಿಕಾರಿಗಳ ಗೈರಾಗಿದ್ದರು….

 • ಮಾನವೀಯ ನೆಲೆಯಲ್ಲಿ ಪರಿಹಾರ ದೊರಕಿಸಿ

  ಹಾವೇರಿ: ತಳಪಾಯ ಹಾಕಿ ನಿರ್ಮಾಣ ಮಾಡಿದ ಎಲ್ಲ ಮನೆಗಳು ಪಕ್ಕಾ ಮನೆಗಳಾಗಿವೆ. ಮನೆ ಹಾನಿ ಸಮೀಕ್ಷೆ ಸಂದರ್ಭದಲ್ಲಿ ಪಕ್ಕಾ ಮತ್ತು ಕಚ್ಚಾ, ಭಾಗಶಃಪೂರ್ಣ ಎಂದು ವಿಭಾಗೀಕರಣ ಮಾಡದೇ ಎಲ್ಲ ಮನೆಗಳನ್ನು ಪಕ್ಕಾ ಮನೆ ಎಂದು ಪರಿಗಣಿಸಿ ನೊಂದವರಿಗೆ ಮಾನವೀಯ…

 • ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಅತೀ ಅವಶ್ಯ: ಸಾಂತಗೌಡ್ರ

  ಹಿರೇಕೆರೂರ: ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ವ್ಯಾಸಂಗ ಮಾಡಿ ಶೈಕ್ಷಣಿಕ ಅಭಿವೃದ್ಧಿ ಹೊಂದಿ, ಉನ್ನತ ಸಾಧನೆಗೈದು ದೇಶಕ್ಕೆ ಕೀರ್ತಿ ತರಬೇಕು ಎಂದು ಭಾರತೀಯ ಸೇನೆಯ ಕರ್ನಲ್ ಪುಟ್ಟನಗೌಡ ಸಾಂತಗೌಡ್ರ ಹೇಳಿದರು. ರಟ್ಟೀಹಳ್ಳಿ ತಾಲೂಕಿನ ಸತ್ತಗೀಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ…

 • ಜಿಲ್ಲೆಯಲ್ಲಿಯೇ ರಕ್ತವಿದಳನ ಘಟಕ ಆರಂಭ

  ಹಾವೇರಿ: ಜಿಲ್ಲೆಯಲ್ಲಿಯೇ ರಕ್ತವಿದಳನ ಘಟಕ ಆರಂಭವಾಗಿದ್ದರಿಂದ ರಕ್ತ ಪಡೆಯಲು ಇನ್ನು ಮುಂದೆ ಬೇರೆ ಕಡೆ ಹೋಗುವ ಅಗತ್ಯವಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲೇ ಸುಲಭದಲ್ಲಿ ಈ ಸೌಲಭ್ಯ ದೊರೆಯಲಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು. ಗುರುವಾರ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತವಿದಳನ…

 • ವಾರದೊಳಗಾಗಿ ಪರಿಹಾರ ನೀಡಿ

  ಹಾವೇರಿ: ಪ್ರವಾಹ ಸಂತ್ರಸ್ತರಿಗೆ ವಾರದೊಳಗಾಗಿ ಪರಿಹಾರ ನೀಡಬೇಕು. ರಾಣಿಬೆನ್ನೂರು ತಾಲೂಕನ್ನು ಪ್ರವಾಹ ಪೀಡಿತ ಎಂದು ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ರೈತ ಸಂಘದಿಂದ ಗುರುವಾರ ಇಲ್ಲಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು….

 • ವಾಸ್ತವ ಸಮೀಕ್ಷಾ ವರದಿ ಸಿದ್ಧಪಡಿಸಲು ಸೂಚನೆ

  ಹಾನಗಲ್ಲ: ನೆರೆ ಹಾನಿ ಕುರಿತು ವಿಳಂಬವಿಲ್ಲದೆ ವಾಸ್ತವ ಸಮೀಕ್ಷಾ ವರದಿ ಸಿದ್ಧಪಡಿಸಿ ಕೊಡುವಂತೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ಹಾನಗಲ್ಲ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾಗಳ ಸಭೆಯಲ್ಲಿ ಮಾತನಾಡಿದ ಅವರು,…

 • ಹುಲ್ಲುಗಡ್ಡೆ ಹಿಡಿದು ಜೀವ ಉಳಿಸಿಕೊಂಡ ಪೊಲೀಸ್‌ ಪೇದೆ!

  ಹಾವೇರಿ: ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಪೊಲೀಸನೋರ್ವ ಬೈಕ್‌ ಸಹಿತ ಕೊಚ್ಚಿ ಹೋಗಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕರ್ಜಗಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಯಲ್ಲಪ್ಪ ಕೊರವಿ ಜಲಕಂಟಕದಿಂದ ಪಾರಾಗಿ ಬಂದ ಪೊಲೀಸ್‌ ಪೇದೆ. ಇವರು…

 • ನಾಲ್ಕು ಗಂಟೆಗಳ ಕಾಲ ನದಿಯಲ್ಲಿ ಸಿಲುಕಿದ್ದ ಪೊಲೀಸ್ ಪೇದೆ ರಕ್ಷಣೆ

  ಹಾವೇರಿ: ಇಲ್ಲಿನ ವರದಾ ನದಿಯ ಕರಜಗಿ ಸೇತುವೆ ಬಳಿ ಬೈಕ್ ಸಹಿತ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಪೊಲೀಸ್ ಪೇದೆಯೊಬ್ಬರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಇಂದು ರಕ್ಷಿಸಿದ್ದಾರೆ. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಕರ್ತವ್ಯ ಮುಗಿಸಿಕೊಂಡು…

 • ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 19ರಂದು ಪ್ರತಿಭಟನೆ

  ಹಿರೇಕೆರೂರ: ರೈತರ ಕೃಷಿಸಾಲ ಸಂಪೂರ್ಣ ಮನ್ನಾ ಮಾಡುವುದು, ಬೆಳೆ ವಿಮಾ ಹಣ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಆಗಸ್ಟ್‌ 19 ರಂದು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ…

 • ನೆರೆಯಿಂದ ಕಲಿಕೆಗೆ ತೊಂದರೆಯಾಗದಿರಲಿ

  ಹಾವೇರಿ: ಪ್ರವಾಹದಿಂದ ಮನೆಗಳು ಹಾನಿಯಾಗಿ ವಾಸಿಸಲು ಇನ್ನೂ ಸಿದ್ಧವಾಗದ ಕಾರಣ ಹಾಗೂ ಪರಿಹಾರ ಕೇಂದ್ರಗಳ ಸ್ಥಾಪನೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಪರ್ಯಾಯ ಕ್ರಮವಾಗಿ ಜಿಲ್ಲಾಡಳಿತ ಸಂತ್ರಸ್ತರಿಗೆ ತಾತ್ಕಾಲಿಕ ತಗಡಿನ ಶೆಡ್‌ ನಿರ್ಮಾಣ ಮಾಡಿಕೊಡಲು ಸಿದ್ಧತೆ ನಡೆಸಿದೆ. ಪ್ರವಾಹ ಕಡಿಮೆಯಾದರೂ…

 • ಮುರಿದ ಬದುಕು ಮರು ನಿರ್ಮಾಣ

  ಹಾವೇರಿ: ಇಲ್ಲಿಯ ಜನರು ಸಾಮೂಹಿಕವಾಗಿ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ. ಬಟ್ಟೆ-ಬರೆ, ಪಾತ್ರೆ- ಪಗಡೆ ತೊಳೆದುಕೊಳ್ಳುತ್ತಿದ್ದಾರೆ. ಮನೆಯ ಒಂದಿಷ್ಟು ಕಾಗದ ಪತ್ರ, ಮಕ್ಕಳ ಪುಸ್ತಕ ಸೇರಿದಂತೆ ಕೆಲ ಸಾಮಗ್ರಿಗಳನ್ನು ಬಿಸಿಲಿಗೆ ಹಾಕಿ ಒಣಗಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ತಗಡು, ತಾಡಪತ್ರಿ ತಂದು…

ಹೊಸ ಸೇರ್ಪಡೆ