• ಮೇಷ

  ಕಾರ್ಯಕ್ಷೇತ್ರದಲ್ಲಿ ದುಡಿಮೆಯ ಮೌಲ್ಯಕ್ಕೆ ತಕ್ಕ ಪ್ರತಿಫ‌ಲ ಇದ್ದೇ ಇರುತ್ತದೆ. ಕೌಟುಂಬಿಕವಾಗಿ ಅಪಾರ ನಿರೀಕ್ಷೆಯಿಟ್ಟುಕೊಂಡ ನಿಮಗೆ ನಿರಾಶೆ ಯಾದೀತು. ಆರೋಗ್ಯ ಭಾಗ್ಯ ಮರುಚೈತನ್ಯವನ್ನು ಪಡೆದರೂ ಕಾಳಜಿ ಅತೀ ಅಗತ್ಯವಿರುತ್ತದೆ. ಅವಿವಾಹಿತರಿಗೆ ಒಂಟಿತನದ ಅನುಭವ ಮಾಂಗಲ್ಯ ಭಾಗ್ಯಕ್ಕೆ ಪ್ರೇರಣೆ ನೀಡಲಿದೆ. ವ್ಯಾಪಾರ, ವ್ಯವಹಾರದಲ್ಲಿ ವ್ಯಾಪಾರೀ ಬುದ್ಧಿ ಜಾಗೃತವಾಗಿ, ವಿವಿಧ ರೀತಿಯ ಧನಸಂಗ್ರಹಕ್ಕೆ ಅನುಕೂಲವಾಗಲಿದೆ. ನಿರುದ್ಯೋಗಿಗಳು ತಾತ್ಕಾಲಿಕ ವ್ಯವಸ್ಥೆಯಲ್ಲಿ ಸಮಾಧಾನ ಪಡಬೇಕಾದೀತು. ಶುಭವಾರ: ಬುಧ, ಗುರು, ಶನಿವಾರ.

 • ವೃಷಭ

  ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ತೋರಿಬಂದು ಮುನ್ನಡೆ ಸಾಧಿಸಿದರೂ ಬೇಜವಾಬ್ದಾರಿ ಉತ್ತಮವಲ್ಲ. ಅನಿರೀಕ್ಷಿತ ರೂಪದಲ್ಲಿ ಅವಿವಾಹಿತ ಕನ್ಯೆಯರಿಗೆ ವಿವಾಹಾದಿ ಮಂಗಲಕಾರ್ಯಗಳಿಗೆ ಸಮಯವು ಪೂರಕವಾದೀತು. ವೃತ್ತಿರಂಗದಲ್ಲಿ ನಾನಾ ರೀತಿಯಲ್ಲಿ ಅನಾವಶ್ಯಕವಾಗಿ ಗಾಸಿಪ್‌ಗ್ಳು ಮುನ್ನಡೆಗೆ ಭಾದಕವಾಗಲಿದೆ. ವಿದ್ಯಾರ್ಥಿಗಳಿಗೆ ಸತತ ಪ್ರಯತ್ನದ ಹಾಗೂ ನಿರಂತರ ಅಭ್ಯಾಸವೇ ಫ‌ಲಪ್ರದವಾದೀತು. ಸಾಂಸಾರಿಕವಾಗಿ ಸಮಸ್ಯೆಗಳು ಒಂದೊಂದಾಗಿ ಉಪಶಮನವಾಗಲಿವೆ. ಶುಭವಾರ: ಮಂಗಳ, ಬುಧ, ಗುರುವಾರ.

 • ಮಿಥುನ

  ಕುಟುಂಬ ಸುಖ ಉತ್ತಮವಿದ್ದರೂ ವಾಸ್ತವ ಬದುಕಿನ ಅನೇಕ ವಿಚಾರಗಳು ನಿಮ್ಮ ಮೇಲೆ ಪರಿಣಾಮ ಬೀರಲಿವೆ. ಒಮ್ಮೊಮ್ಮೆ ಯಾರನ್ನೂ ನಂಬದಂತಹ ಪರಿಸ್ಥಿತಿಯು ಕಂಡುಬಂದೀತು. ಅವಿವಾಹಿತರ ಮನಸ್ಸು ವೈವಾಹಿಕ ಸಂಬಂಧಗಳಿಗೆ ಸ್ಪಂದಿಸಲಿದೆ. ಆರ್ಥಿಕವಾಗಿ ಚೇತರಿಕೆಯು ತೋರಿಬಂದರೂ ವ್ಯಾವಹಾರಿಕವಾಗಿ ಹೆಚ್ಚಿನ ಹೂಡಿಕೆಗೆ ಸಕಾಲವಲ್ಲ. ಕಷ್ಟನಷ್ಟಗಳಾದಾವು. ಜಾಗ್ರತೆ ಇರಲಿ. ದೇಹಾರೋಗ್ಯವು ಆಗಾಗ ಏರುಪೇರಾದೀತು. ಮುಖ್ಯವಾಗಿ ವಾಹನ ಸಂಚಾರ, ಚಾಲನೆಯಲ್ಲಿ ಜಾಗ್ರತೆ ವಹಿಸಬೇಕು. ಶುಭವಾರ: ಬುಧ, ಶುಕ್ರ, ಭಾನುವಾರ.

 • ಕಟಕ

  ಗುರುಚಾರವು ಸದ್ಯ ಅನುಕೂಲವಾಗಿರುವುದರಿಂದ ವಿಶ್ವಾಸ ಹಾಗೂ ಪ್ರಯತ್ನಬಲದಿಂದ ಮುಂದುವರಿದಲ್ಲಿ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ತೋರಿ ಬಂದೀತು. ಸಾಮಾಜಿಕವಾಗಿ ನಿಮ್ಮ ಪ್ರತಿಭೆಗೆ ಸ್ಥಾನಮಾನ, ಗೌರವಗಳು ಲಭಿಸಲಿವೆ. ಹಾಗೇ ಗೃಹಸುಖ ವರ್ಧಿಸಿ, ಆಭರಣಾದಿಗಳ ಲಾಭ, ಗೃಹೋಪಕರಣಗಳ ಖರೀದಿಯಿಂದ ಸಂತಸವಾಗಲಿದೆ. ಅವಿವಾಹಿತರ ಪ್ರಯತ್ನಬಲಕ್ಕೆ ಆಗಾಗ ಅಡೆತಡೆ ಗಳಿದ್ದರೂ ಅನಿರೀಕ್ಷಿತ ರೀತಿಯಲ್ಲಿ ವೈವಾಹಿಕ ಸಂಬಂಧಗಳು ಕೂಡಿಬರುತ್ತವೆ. ಶುಭವಾರ: ಸೋಮ, ಬುಧ, ಶುಕ್ರವಾರ.

 • ಸಿಂಹ

  ಕಾರ್ಯರಂಗದಲ್ಲಿ ಆಯ್ಕೆ ಅವಕಾಶಗಳು ಒಟ್ಟಾಗಿ ಒದಗಿಬಂದಾವು. ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಯು ಸುಧಾರಿಸಲಿದೆ. ಸ್ವಾಭಿಮಾನ ಕೂಡಾ ನಿಮಗೆ ಪೂರಕವಾಗಲಿದೆ. ಹಣಕಾಸಿನ ವಿಚಾರದಲ್ಲಿ ನೀವು ಎಷ್ಟು ಜಾಗ್ರತೆ ವಹಿಸಿದರೂ ಸಾಲದಾದೀತು. ಹಳೆಯ ಸಂಬಂಧಗಳೆಲ್ಲ ಪುನಃ ಸುತ್ತಿಕೊಂಡು ಕಿರಿಕಿರಿ ಯೆನಿಸಲಿದೆ. ವ್ಯಾಪಾರ, ವ್ಯವಹಾರಗಳು ಹಿನ್ನಡೆಯನ್ನು ಅನುಭವಿಸಿ, ಆತಂಕಗೊಂಡಾವು. ಕಾಳಜಿ ವಹಿಸಿರಿ. ವಿದ್ಯಾರ್ಥಿಗಳಿಗೆ ಕರ್ತವ್ಯ ಮುಖ್ಯವೆನಿಸೀತು. ಶುಭವಾರ: ಸೋಮ, ಗುರು, ಭಾನುವಾರ.

 • ಕನ್ಯಾ

  ಕಾರ್ಯಕ್ಷೇತ್ರದಲ್ಲಿ ಹೊಂದಾಣಿಕೆಯೇ ಮುಖ್ಯವಾಗಿ ಸರಿಯಾದ ನಿರ್ಧಾರವೆನಿಸಲಿದೆ. ಅನಾವಶ್ಯಕವಾಗಿ ಒಣಜಗಳ, ಮುಜುಗರದ ಸನ್ನಿವೇಶ ವನ್ನು ಅನುಭವಿಸುವಂತಾದೀತು. ಜಾಗ್ರತೆ ಇರಲಿ. ಕೌಟುಂಬಿಕವಾಗಿ ಹೆಚ್ಚಿನ ಉತ್ಸಾಹ ಮುನ್ನಡೆಗೆ ಸಾಧ್ಯವಾಗುತ್ತದೆ. ಆಗಾಗ ಕರ್ತವ್ಯಪ್ರಜ್ಞೆ ನಿಮ್ಮನ್ನು ಜಾಗ್ರತ ಗೊಳಿಸಲಿದೆ. ಸರಿಯಾದ ಮಾರ್ಗದರ್ಶನ ನಿಮಗೆ ದಾರಿದೀಪವಾದೀತು. ವಿವಾದಗಳಲ್ಲಿ ಸಿಕ್ಕಿಕೊಳ್ಳದಂತೆ ದೂರವಿದ್ದಷ್ಟು ಉತ್ತಮ. ಅವಿವಾಹಿತರಿಗೆ ಕಂಕಣಬಲದಲ್ಲಿ ಅಡೆತಡೆ ತೋರಿಬಂದು ನಿರಾಶೆಯಾದೀತು. ಶುಭವಾರ: ಗುರು, ಶುಕ್ರ, ಶನಿವಾರ.

 • ತುಲಾ

  ಆಧ್ಯಾತ್ಮದೆಡೆಗೆ ನೀವು ಆಕರ್ಷಿತರಾಗಲಿದ್ದೀರಿ. ವೃತ್ತಿರಂಗದಲ್ಲಿ ಸದ್ಯದಲ್ಲೇ ನಿಮ್ಮ ಕೌಶಲ್ಯವನ್ನು ಒರೆಗೆ ಹಚ್ಚಿ ಮುನ್ನಡೆಗೆ ಸಾಗುವ ಅವಕಾಶಗಳು ಒದಗಿಬಂದಾವು. ಸದುಪಯೋಗಿಸಿಕೊಳ್ಳಿರಿ. ಅರ್ಚಕ, ಪುರೋಹಿತ ವರ್ಗದವರಿಗೆ ವಿವಿಧ ರೀತಿಯಲ್ಲಿ ಧನಸಂಗ್ರಹವಾಗಲಿದೆ. ಕುಜನಿಂದ ಆಗಾಗ ಧರ್ಮಕಾರ್ಯಗಳಿಗೆ ಅಡಚಣೆ, ಶತ್ರುಗಳ ಉಪಟಳ, ಅವಮಾನ ಪ್ರಸಂಗ, ಗೃಹಕಾರ್ಯಗಳ ಚಿಂತೆ ಅನಾರೋಗ್ಯಕ್ಕೆ ಕಾರಣವಾದೀತು. ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಅನುಕೂಲ ರೀತಿಯಲ್ಲಿ ಸಾಧಕವಾದಾವು. ಶುಭವಾರ: ಗುರು, ಶನಿ, ಭಾನುವಾರ.

 • ವೃಶ್ಚಿಕ

  ವೃತ್ತಿರಂಗದಲ್ಲಿರಲಿ ಯಾ ಸಾಂಸಾರಿಕವಾಗಿ ಯಾವುದೇ ವಿವಾದಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಆಗಾಗ ಪ್ರತಿಕೂಲತೆಯ ಮನೋಭಾವದಿಂದ ಮನಸ್ಸು ಬಹುತೇಕ ದಿಕ್ಕೆಟ್ಟು ಚಿಗರೆಯಂತೆ ಓಡುವುದಿದೆ. ಸಂಯಮವಿರಲಿ. ಅಭಿಪ್ರಾಯದ ವ್ಯತ್ಯಾಸದಿಂದಾಗಿ ಗೆಳೆಯರು ದೂರವಾದಾರು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇದ್ದರೂ ಅನಿರೀಕ್ಷಿತ ಖರ್ಚು-ವೆಚ್ಚಗಳಿಂದ ಹಣಕಾಸಿನ ಪರಿಸ್ಥಿತಿ ಏರುಪೇರಾಗದಂತೆ ಜಾಗ್ರತೆ ಇರಲಿ. ಶುಭವಾರ: ಮಂಗಳ, ಬುಧ, ಗುರುವಾರ.

 • ಧನು

  ಜವಾಬ್ದಾರಿಯಿಂದ ದುಡಿಯುವ ನಿಮಗೆ ತಡವಾಗಿಯಾದರೂ ಪ್ರತಿಫ‌ಲ ಲಭಿಸುವುದರಲ್ಲಿ ಸಂದೇಹವಿಲ್ಲ. ಹಂತ ಹಂತವಾಗಿ ಸಮಸ್ಯೆಗಳು, ವಾದ, ವಿವಾದಗಳು ತನ್ನಿಂತಾನೇ ಮರೆಯಾಗಲಿವೆ. ಆರೋಗ್ಯದ ವಿಚಾರದಲ್ಲಿ ನಿಮಗೆ ಹೆಚ್ಚಿನ ವಿಶ್ವಾಸ ವರ್ಧಿಸಲಿದೆ. ಆಭರಣಾದಿಗಳ ಲಾಭ, ಹಿಂದಿನ ಘಟನೆಯನ್ನು ಮರೆತುಬಿಟ್ಟು , ಭವಿಷ್ಯತ್ತಿನ ಬಗೆಗೆ ತೀರ್ಮಾನಿಸಿಕೊಂಡು ಮುಂದಿನ ಹೆಜ್ಜೆಯನ್ನು ಇಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಾಮಾಣಿಕ ಅಭ್ಯಾಸಬಲವೇ ಎಲ್ಲ ರೀತಿಯಲ್ಲಿ ಸಾಧಕವಾದೀತು. ಶುಭವಾರ: ಗುರು, ಶುಕ್ರ, ಶನಿವಾರ.

 • ಮಕರ

  ಕಾರ್ಯಕ್ಷೇತ್ರದಲ್ಲಿ ಸುಪ್ತ ಬಯಕೆಗಳು ಸದ್ಯದಲ್ಲೇ ಹಂತ ಹಂತವಾಗಿ ಈಡೇರಲಿವೆ. ಸಾರ್ವಜನಿಕವಾಗಿ ನಾಗರಿಕ ಸೌಲಭ್ಯಗಳು ನಿಮಗೆ ಒದಗಿಬಂದಾವು. ವೃತ್ತಿರಂಗದಲ್ಲಿ ನಿರ್ಭಯ ವಾತಾವರಣ ಉತ್ಸಾಹಕ್ಕೆ ಕಾರಣ ವಾಗಲಿದೆ. ಏರುತ್ತಿರುವ ಜೀವನ ವೆಚ್ಚವು ಆರ್ಥಿಕವಾಗಿ ಆತಂಕಕ್ಕೆ ಕಾರಣವಾದರೂ ಧನಾಗಮನ ಇದ್ದು ಸುಧಾರಿಸಿಕೊಂಡು ಹೋಗಲಿದೆ. ಹಾಗೇ ತಳಪಾಯ ಭದ್ರವಾಗಲಿದೆ. ರಾಜಕೀಯ ವರ್ಗದವರಿಗೆ ಸಾಮರ್ಥ್ಯ ಮರೆಸಲು ಸಕಾಲವಾದೀತು. ಶುಭವಾರ: ಗುರು, ಶುಕ್ರ, ಶನಿವಾರ.

 • ಕುಂಭ

  ನಿಮ್ಮ ಜೀವನ ನಿಧಾನವಾಗಿ ಪ್ರಗತಿ ಪಥದಲ್ಲಿದೆ. ಚಿಂತೆ ಬೇಡ. ದೃಢ ಸಂಕಲ್ಪದಿಂದ ಮುಂದುವರಿದಲ್ಲಿ ಯಶಸ್ಸು ನಿಶ್ಚಿತ. ವೃತ್ತಿರಂಗದಲ್ಲಿ ಉತ್ಸಾಹ, ಹೊಸತನವನ್ನು ರೂಢಿಸಿಕೊಳ್ಳಿರಿ. ಆಭರಣಾದಿಗಳ ಲಾಭ, ಕಾರ್ಯಸಾಧನೆಗೆ ಸಾಧಕವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ದುಡುಕದಿರಿ. ಹೊಸ ಹೂಡಿಕೆ, ವಿಸ್ತರಣೆಗೆ ಸದ್ಯದ ಪರಿಸ್ಥಿತಿ ಉತ್ತಮವಲ್ಲ. ಸಾಂಸಾರಿಕವಾಗಿ ಖರ್ಚುವೆಚ್ಚಗಳನ್ನು ನಿಭಾಯಿಸಲು ಹೆಣಗಬೇಕಾದೀತು. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದಲ್ಲಿ ಉತ್ತಮ ಫ‌ಲಿತಾಂಶ ತಂದುಕೊಡಲಿದೆ. ಶುಭವಾರ: ಸೋಮ, ಗುರು, ಭಾನುವಾರ.

 • ಮೀನ

  ಕಾರ್ಯಕ್ಷೇತ್ರದಲ್ಲಿ ನೀವು ಕೈಗೊಳ್ಳುವ ನಿರ್ಧಾರದ ಪ್ರಭಾವ ಮುಂದಿನ ಬೆಳವಣಿಗೆಗೆ ಸಹಾಯಕವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭದಾಯಕ ಆದಾಯ, ಗೌರವ ಎರಡನ್ನೂ ನೀಡಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚು- ವೆಚ್ಚಗಳಿದ್ದರೂ ಅದೇ ರೀತಿಯ ಧನಾಗಮನದಿಂದ ಹೆಚ್ಚಿನ ತಾಪತ್ರಯವಿರದು. ಸಾಮಾಜಿಕವಾಗಿ ಯಶಸ್ಸು ಕೀರ್ತಿ ನಿಮ್ಮನ್ನು ಅರಸಿಕೊಂಡು ಬರಲಿದೆ. ಶುಭಕಾರ್ಯನಿಮಿತ್ತ ಸಂಚಾರ ಭಾಗ್ಯ ತಂದೀತು. ವಿದ್ಯಾರ್ಥಿಗಳು ತಮ್ಮ ಪ್ರಯತ್ನ ಬಲದಿಂದ ಹೆಚ್ಚಿನ ಯಶಸ್ಸನ್ನು ಪಡೆಯಲಿದ್ದಾರೆ. ಶುಭವಾರ: ಬುಧ, ಶುಕ್ರ, ಭಾನುವಾರ.

ಹೊಸ ಸೇರ್ಪಡೆ