• ಸಾವಿರಾರು ಜಾನುವಾರು ಬೀದಿಪಾಲು

  ಜಮಖಂಡಿ: ಮಹಾರಾಷ್ಟ್ರದಲ್ಲಿ ಜು.27ರಿಂದ ಆ.18ರ ವರೆಗೆ ಸತತವಾಗಿ ಧಾರಾಕಾರ ಸುರಿದ ಮಳೆಯಿಂದ ತಾಲೂಕಿನ ಕೃಷ್ಣಾನದಿ ನಿರೀಕ್ಷೆಗೂ ಮೀರಿ ಹರಿದ ಪರಿಣಾಮ ಜನ-ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ. ಈಗ ಸಾವಿರಾರು ಜಾನುವಾರುಗಳಿಗೆ ಮೇವು ಕೊರತೆ ಕಂಡು ಬಂದಿದೆ. ಕೃಷ್ಣಾನದಿ ಪ್ರವಾಹದಿಂದ ತಾಲೂಕಿನ…

 • ಜೀವಾ ಉಳ್ಯಾಂಗಿಲ್ ಅನ್ಕೊಂಡಿದ್ವಿ!

  ಮಲ್ಲೇಶ ಆಳಗಿ ಜಮಖಂಡಿ: ಅವತ್ತ ಬುಧವಾರ ರಾತ್ರಿ ಇತ್ರಿ. ನೀರು ಜಾಸ್ತಿ ಬರಬಹುದು, ನೀವು ಮನಿ ಖಾಲಿ ಮಾಡಬೇಕ್ರಿ ಅಂತ ಪಂಚಾಯಿತಿಯವರು ಹೇಳಿದ್ರು. ಒಮ್ಮೀ ನೀರ್‌ ಬಂದಿಲ್ಲ. ಮೇಲಾಗಿ ನಮ್ಮೂರಾಗ್‌ ಮಳಿನೂ ಆಗಿಲ್ಲ. ನೀರೆಲ್ಲಿ ಬರ್ತೈತಿ ಅನ್ಕೊಂಡು ಸುಮ್ನಿದ್ವಿ….

 • 7472 ಕುಟುಂಬಗಳಿಗೆ 7.4 ಕೋಟಿ ಪರಿಹಾರ

  ಜಮಖಂಡಿ: ನೆರೆ ನೆರವು ಸಂದಾಯ ಯೋಜನೆ ಅಡಿಯಲ್ಲಿ ಪ್ರವಾಹದಿಂದ ತೊಂದರೆ ಅನುಭವಿಸಿದ 9744 ಸಂತ್ರಸ್ತ ಕುಟುಂಬಗಳಿಗೆ ತುರ್ತು ಪರಿಹಾರವಾಗಿ 10 ಸಾವಿರ ರೂ.ಗಳಂತೆ ಈಗಾಗಲೇ 7472 ಕುಟುಂಬಗಳಿಗೆ 7.4 ಕೋಟಿ ರೂ.ಗಳನ್ನು ಗುರುವಾರ ಆರ್‌ಟಿಜಿಎಸ್‌ ಮೂಲಕ ಖಾತೆಗೆ ಜಮಾ…

 • ಉಟ್ಟ ಬಟ್ಟೆಯಲ್ಲಿ ಹೊರಗ್‌ ಓಡಿ ಬಂದ್ವಿ

  ಅಮೀನಗಡ: ರಾತ್ರಿ ಮಲಕೊಂಡಾಗ ಏಕಾಏಕಿ ನೀರ ಬಂತ್ರಿ. ಉಟ್ಟ ಬಟ್ಟೆಯಲ್ಲಿ ಎದ್ದು ಹೊರಗ ಬಂದಿವಿ. ಹೊರಗ ಬಂದ ಎತ್ತರದ ಪ್ರದೇಶಕ್ಕ ಹೋಗಿ ಕುಂತೇವ್ರಿ. ಬೆಳಕು ಹರಿಯುವುದು ನೋಡುದ್ರೋಳಗೆ ನಮ್ಮ ಮನಿ ಸರ್ವನಾಶ ಆಗೈತಿರೀ. ಇಡೀ ಊರ ನೀರಿನಲ್ಲಿ ಮುಳಗೈತಿ….

 • ಸಹೋದರರಿಗೆ ಪ್ರತ್ಯೇಕ ಮನೆ

  ಬಾಗಲಕೋಟೆ: ಪ್ರವಾಹದಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ಹಾಗೂ ಶಾಶ್ವತ ಮನೆ ಕಲ್ಪಿಸಲು 5 ಲಕ್ಷ ನೀಡುವ ಯೋಜನೆಯನ್ನು ಒಂದು ಕುಟುಂಬದಲ್ಲಿ ಅಣ್ಣ-ತಮ್ಮಂದಿರು ಇದ್ದರೆ ಅವರನ್ನು ಪ್ರತ್ಯೇಕ ಕುಟುಂಬವೆಂದು ಪರಿಗಣಿಸಬೇಕು. ಆದರೆ, ಪ್ರತ್ಯೇಕ ಪಡಿತರ ಚೀಟಿ ಇದ್ದರೆ ಮಾತ್ರ ಗಣನೆಗೆ…

 • ಮನೆಯಲ್ಲೇ ಈಜಿ ಸಾಮಗ್ರಿ ತಂದೆವು!

  •ಚಂದ್ರಶೇಖರ ಮೋರೆ ಮಲ್ಲಾಪುರ ಪಿಜಿ (ಮಹಾಲಿಂಗಪುರ): ಮನೆ ತುಂಬ ನೀರು ಬಂದಿತ್ತು. ಜೀವ ಉಳಿಸಿಕೊಳ್ಳಲು ಹೊರಗೆ ಓಡಿ ಬಂದೇವು. ಆದರೆ ಎಲ್ಲಿಗೆ ಹೋಗೋದು, ಹೊಟ್ಟೆಗೆ ಏನು ತಿನ್ನೋದು ಎಂದು ವಿಚಾರ ಮಾಡಿ, ಮನೆಯೊಳಗೆ ಹೊಕ್ಕ ನೀರಿನಲ್ಲಿ ಈಜಿ ಒಳಹೋಗಿದ್ದೆ….

 • ಪ್ರಕೃತಿ ವಿಕೋಪ ಪರಿಹಾರಕ್ಕೆ 75 ಕೋಟಿ ಬಿಡುಗಡೆ: ಜಿಲ್ಲಾಧಿಕಾರಿ ರಾಮಚಂದ್ರನ್‌

  ಬಾಗಲಕೋಟೆ: ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ನೀಡಲು ಸರಕಾರದಿಂದ ಈವರೆಗೆ ಒಟ್ಟು 75 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ವಿವಿಧ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ…

 • ಮುದ್ದೆಯಾದ ಪಂಚಮಿ ಉಂಡಿ

  ಬನಹಟ್ಟಿ: ವರ್ಷಕ್ಕಾಗುವಷ್ಟಿದ್ದ ಕಾಳು-ಕಡಿ ಇಟ್ಟಲ್ಲೇ ಮೊಳಕೆಯೊಡೆದಿವೆ. ಪಂಚಮಿ ಹಬ್ಬಕ್ಕಾಗಿ ಕಟ್ಟಿದ ಉಂಡಿಗಳು ಮುದ್ದೆಯಾಗಿವೆ. ಹೆಣ್ಮಕ್ಕಳಿಗೆ ಕೊಬ್ಬರಿ-ಕುಬಸ ಕೊಡಲು ಕಟ್ಟಿದ್ದ ಹೊಸ ಹೊಸ ಬಟ್ಟೆಗಳು ರಾಡಿಯಾಗಿವೆ. ಯಾವ ಮನೆಗೆ ಕಾಲಿಟ್ಟರೂ ಗಬ್ಬೆದ್ದ ವಾಸನೆ ಬರುತ್ತಿದೆ. ಹಲವು ಮನೆಗಳು ಬೀಳುವ ಸ್ಥಿತಿಯಲ್ಲಿವೆ….

 • ಪ್ರವಾಹ ಬಂತು; ಕುಡಿವ ನೀರೇ ಹೋಯ್ತು!

  ಅಮೀನಗಡ: ಪ್ರವಾಹ ಬಂದು ಜಿಲ್ಲೆಯ ಹಲವು ಗ್ರಾಮಗಳ ಜನರು ನೀರಿನಲ್ಲಿ ನಿಂತು ಸಂಕಷ್ಟಪಡುತ್ತಿದ್ದರೆ, ಪ್ರವಾಹ ಬಂದಿದ್ದೇ ಅಮೀನಗಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಹೌದು, ಈ ಬಾರಿಯ ಪ್ರವಾಹ ಪಟ್ಟಣಕ್ಕೆ ತೀವ್ರ ಸಮಸ್ಯೆ ಮಾಡಿದೆ. ಪಟ್ಟಣಕ್ಕೆ…

 • ಪ್ರವಾಹ ಬಂದ್ರೂ ಕಾಲುವೆಗೆ ಹರಿಯಲಿಲ್ಲ ನದಿ ನೀರು!

  ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳು ಉಕ್ಕಿ ಹರಿದಿವೆ. 194 ಗ್ರಾಮಗಳು ಅಕ್ಷರಶಃ ನೀರಲ್ಲಿ ನಿಂತಿವೆ. ಆದರೂ, ಘಟಪ್ರಭಾ ಎಡದಂಡೆ ಕಾಲುವೆಗೆ ಹನಿ ನೀರು ಬಂದಿಲ್ಲ. ಪ್ರವಾಹದ ನೀರನ್ನು ಕಾಲುವೆ, ಕೆರೆಗೆ ಹರಿಸಲು ಅಧಿಕಾರಿಗಳು ಪ್ರಯತ್ನಿಸಲಿಲ್ಲ ಎಂಬ ಆಕ್ರೋಶದ ಮಾತು…

 • ನನ್ನ ಹೊಟ್ಯಾನ ಕಂದನ ಜೀವಾನೂ ಉಳಿಸಿದ್ರು..

  ಗುಳೇದಗುಡ್ಡ: ನಮ್ಮ ಮನಿಮಟಾ ಏನ್‌ ನೀರ್‌ ಬರ್ತೈತಿ. ಗರ್ಭಿಣಿ ಹೆಣ್ಮಕ್ಕಳನ್‌ ಕಟ್ಟಗೊಂಡು ಎಲ್ಲಿಗಿ ಹೋಗೂದಂತ ಅಪ್ಪ ಹೇಳ್ತಿದ್ರು. ಬಾಳ್‌ ನೀರ್‌ ಬಂದ್ರ ನೋಡೋಣಂತ ಮನೆಯಲ್ಲೇ ಇದ್ದೇವು. ಆದ್ರ ಒಮ್ಮೇ ಮನಿಮಟಾ ನೀರು ಬಂತು. ಮನ್ಯಾನ್‌ ಮಂದೆಲ್ಲ ಸಾಮಾನ ಜೋಡಸಾಕ್‌…

 • ಮಳೆಗಾಲ ಬಂದ್ರೆ ಈ ಮಾರ್ಗಗಳು ‘ಡೆಡ್ಲಿ’

  ಗುಳೇದಗುಡ್ಡ: ಗುಳೇದಗುಡ್ಡ-ನಂದಿಕೇಶ್ವರ ಹಾಗೂ ಗುಳೇದಗುಡ್ಡ-ಹುಲ್ಲಿಕೇರಿ ಮಾರ್ಗದ ರಸ್ತೆಗಳು ನಿಸರ್ಗ ಸೌಂದರ್ಯದಿಂದ ಕೂಡಿದ್ದು, ಈ ಮಾರ್ಗದಲ್ಲಿ ಸಂಚರಿಸುವುದೇ ಆನಂದ. ಆದರೆ, ಮಳೆಗಾಲ ಬಂದರೆ ಮಾತ್ರ ಬಲು ಅಪಾಯಕಾರಿ ರಸ್ತೆಯಿದು. ಗುಳೇದಗುಡ್ಡದಿಂದ ಈ ಎರಡೂ ಪ್ರದೇಶಗಳಿಗೆ ತೆರಳಲು ಗುಡ್ಡ ಕಡಿದು ರಸ್ತೆ…

 • ಪ್ರವಾಹ ಪೀಡಿತ ಗ್ರಾಮದ‌ಲ್ಲಿ ಸಾಂಕ್ರಾಮಿಕ ರೋಗ ಭೀತಿ!

  ಬಾದಾಮಿ: ಪ್ರವಾಹ ತಗ್ಗಿದ ಬೆನ್ನಲ್ಲೇ ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಆತಂಕ ಮೂಡಿಸಿದೆ. ಗ್ರಾಮದಲ್ಲಿ ರಸ್ತೆ ಕೆಸರುಮಯ ಆಗಿರುವ ಕಾರಣ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ತಾಲೂಕಿನ ಸುಳ್ಳ, ಹೆಬ್ಬಳ್ಳಿ, ಮಣ್ಣೇರಿ, ಢಾಣಕಶಿರೂರ ಸೇರಿದಂತೆ ಪ್ರವಾಹ ಪೀಡಿತ ಸುಮಾರು…

 • ಜೀವಾ ಉಳಸ್ಗೊಳಾಕ್ ಓಡೋಡಿ ಹೋದೇವ್ರಿ!

  ಬೀರನೂರ (ಬಾಗಲಕೋಟೆ): ನನಗ್‌ ಈಗ ಮೂರಿಪ್ಪತ್ತು (60ಕ್ಕೂ ಹೆಚ್ಚು) ಮ್ಯಾಗ್‌ ವಯಸ್ಸ ಅದಾವ್ರಿ. ನನ್ನ ಜೀವನ್ದಾಗ ಇಂಥಾ ನೀರ್‌ ಎಂದೂ ನೋಡಿಲ್ರಿ. ಎಷ್ಟ ಮಳಿ ಬಂದ್ರೂ, ಹೊಳಿ ದಂಡಿಗಿ ಇರು ಮನಿಗಿ ಮಾತ್ರ ನೀರ್‌ ಬರ್ತಿತ್ರಿ. ಈ ಸಾರಿ…

 • ಪರಿಹಾರ ಕೇಂದ್ರದಿಂದ ಮನೆಯತ್ತ ಸಂತ್ರಸ್ತರು

  ಮಹಾಲಿಂಗಪುರ: ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಪ್ರವಾಹವು ಇಳಿಮುಖವಾಗುತ್ತಿರುವುದರಿಂದ ನಂದಗಾಂವ, ಢವಳೇಶ್ವರ, ಮಾರಾಪುರ, ಮಿರ್ಜಿ, ಮಳಲಿ ಸೇರಿದಂತೆ ನೆರೆ ಸಂತ್ರಸ್ತ ಗ್ರಾಮಗಳ ಜನರು ಪ್ರವಾಹದಿಂದ ಮುಕ್ತವಾಗಿರುವ ಗ್ರಾಮಗಳಲ್ಲಿನ ತಮ್ಮ-ತಮ್ಮ ಮನೆಗಳತ್ತ ಹೋಗುತ್ತಿದ್ದಾರೆ. ಸ್ವಚ್ಛತೆ ಸವಾಲು:…

 • ಆಲಮಟ್ಟಿ ಜಲಾಶಯಕ್ಕೆ ಭಾರೀ ಬಿಗಿ ಭದ್ರತೆ

  ಬಾಗಲಕೋಟೆ: ಭಯೋತ್ಪಾದಕ ಕೃತ್ಯ ನಡೆಯಬಹುದೆಂಬ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಬಿಗಿ ಭದ್ರತೆ ಒದಗಿಸಲಾಗಿದೆ. ದೇಶದ 2ನೇ ಅತಿದೊಡ್ಡ ಜಲಾಶಯ ಎಂಬ ಖ್ಯಾತಿ ಪಡೆದ ಆಲಮಟ್ಟಿ ಜಲಾಶಯದ ಒಟ್ಟು 26 ಕ್ರಸ್ಟ್‌ಗೇಟ್‌ಗಳಲ್ಲಿ 12 ಗೇಟ್‌ಗಳು…

 • ಹಳ್ಳಿಗರ ಬದುಕೇ ಬುಡಮೇಲು

  ಬಾಗಲಕೋಟೆ: ಊರು ಬಿದ್ರು, ಊರಾನ್‌ ದೇವರು ಉಳಿತಾನ್‌ ಎಂಬ ಗಾದೆ ಮಾತು ಹಳ್ಳಗರಲ್ಲಿದೆ. ಆದರೆ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದವರು, ನಮ್ಮನ್ನು ಕಾಪಾಡು ಎಂದು ಕೈ ಮುಗಿದು ಕೇಳಲು ದೇವಸ್ಥಾನಗಳೂ ಉಳಿದಿಲ್ಲ. ಹೌದು, ಇದು ಹಳ್ಳಿಗರ ಬದುಕು ಬುಡಮೇಲು ಮಾಡಿದ…

 • ಪ್ರವಾಹ: ಸಣ್ಣ-ಗುಡಿ ಕೈಗಾರಿಕೆಗಳಿಗೂ ಭಾರಿ ಹಾನಿ

  ಬನಹಟ್ಟಿ: ಪ್ರವಾಹದಿಂದ ಎಲ್ಲ ರೀತಿಯ ಗುಡಿ ಕೈಗಾರಿಕೆಗಳಿಗೆ ದೊಡ್ಡ ಪೆಟ್ಟು ಬಿದ್ದಿದ್ದು, ಅವರಿಗೂ ಸಹ ಸರಕಾರ ಸಹಾಯ ಮಾಡಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಗೆ ಸಂಬಂಧಿಸಿದಂತಹ ಎಲ್ಲ ಪ್ರಕಾರಗಳನ್ನು ಸರ್ವೇ ಮಾಡಿಸಿ ಅವರಿಗೆ ಬದುಕು ಕಟ್ಟಿಕೊಳ್ಳಲು ಸಹಾಯ…

 • ಪ್ರವಾಹ ಪರಿಹಾರ; ಸರ್ಕಾರಕ್ಕೆ ಜಿಪಂ ನಿಯೋಗ

  ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹದಿಂದ ಹಾನಿಗೀಡಾದ ಗ್ರಾಮಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಪಂನ ಎಲ್ಲ ಸದಸ್ಯರು ಒಳಗೊಂಡ ನಿಯೋಗ, ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಒಕ್ಕೋರಲ ಒತ್ತಾಯ ಕೇಳಿ…

 • ಕೊಚ್ಚಿ ಹೋಯ್ತು ರೈತರ ಬದುಕು

  ಬಾಗಲಕೋಟೆ: ಜಿಲ್ಲೆಯ ಇತಿಹಾಸದಲ್ಲೇ ಕಂಡರಿಯದ ಪ್ರವಾಹ ಈ ಬಾರಿ ರೈತರ ಬದುಕು ತನ್ನೊಟ್ಟಿಗೆ ಸೆಳೆದುಕೊಂಡು ಹೋಗಿದೆ. ಎಲ್ಲಿ ನೋಡಿದರಲ್ಲ ನೆಲಸಮಗೊಂಡ ಬೆಳೆಗಳು. ನಾಲ್ಕು ವರ್ಷ ಬರಕ್ಕೆ ನಲುಗಿದ್ದರೆ, ಈ ಬಾರಿ ಪ್ರವಾಹದ ಹೊಡೆತಕ್ಕೆ ರೈತರ ಬದುಕು ಛಿದ್ರವಾಗಿದೆ. ಹೌದು,…

ಹೊಸ ಸೇರ್ಪಡೆ