• ಮೇಷ

  ವ್ಯಾಪಾರಿ ವರ್ಗದವರಿಗೆ ನಿರೀಕ್ಷಿತ ಲಾಭ ತರಲಿದೆ. ಉದ್ಯೋಗಿಗಳಿಗೆ ಗಳಿಕೆಯ ಲಾಭ ತೆರಿಗೆಗೆ ವ್ಯಯವಾದೀತು. ಧಾರ್ಮಿಕ ಕಾರ್ಯಗಳು ಗೃಹದಲ್ಲಿ ನಡೆಯಲಿವೆ.

 • ವೃಷಭ

  ವಿದ್ಯಾರ್ಥಿಗಳಿಗೆ ನಿರುತ್ಸಾಹ, ಉದಾಸೀನತೆ ಕಾಡಲಿದೆ. ಧನ ವಿನಿಯೋಗದಿಂದ ಸಂಗ್ರಹ ಮಾಡಿದ ಹಣ ನೀರಿನಂತೆ ಖರ್ಚಾಗಲಿದೆ. ಸಂಚಾರದಲ್ಲಿ ಜಾಗ್ರತೆ ಇರಲಿ.

 • ಮಿಥುನ

  ಕಟ್ಟಡ ಮನೆ ಮಾರಾಟ ಖರೀದಿ ತಂದೀತು. ಕಾರ್ಯ ಪ್ರವೃತ್ತಿಯಿಂದ ಆರೋಗ್ಯಕ್ಕೆ ಕುತ್ತು ತಂದೀತು. ವೃತ್ತಿರಂಗದಲ್ಲಿ ಪುಷ್ಟಿ ನೀಡಲಿದೆ. ದಿನಾಂತ್ಯ ಶುಭವಾರ್ತೆ.

 • ಕಟಕ

  ಯೋಗ್ಯ ವಯಸ್ಕರಿಗೆ ಕಂಕಣಭಾಗ್ಯ ವೊದಗೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲ ಸಿಗಲಿದೆ. ಅಕ್ಕಪಕ್ಕದವರ ಕಿರಿಕಿರಿ ಅಸಮಾಧಾನ ತರಲಿದೆ. ತಾಳ್ಮೆ ಇರಬೇಕು.

 • ಸಿಂಹ

  ಉದ್ಯೋಗದಲ್ಲಿ ಮುಂಭಡ್ತಿ ಇರುತ್ತದೆ. ಎಣಿಕೆಯಂತೆ ನಡೆದು ಮನಸ್ಸು ಹಗುರಾದೀತು. ಸಾಂಸಾರಿಕವಾಗಿ ಮನಸ್ಸು ನೆಮ್ಮದಿ ತರುತ್ತದೆ. ಸಂಚಾರದಲ್ಲಿ ಜಾಗ್ರತೆ.

 • ಕನ್ಯಾ

  ಪ್ರೀತಿ ಪಾತ್ರರ ಕೋಪದಿಂದ ವಿರಹ ತಂದೀತು. ವೃತ್ತಿರಂಗದಲ್ಲಿ ಅನಾವಶ್ಯಕವಾಗಿ ಕಿರಿಕಿರಿ ಇರುತ್ತದೆ. ಆರೋಗ್ಯ ಭಾಗ್ಯ ಆಗಾಗ ಏರುಪೇರಾಗುತ್ತದೆ. ಕಾಳಜಿ ಇರಲಿ.

 • ತುಲಾ

  ಕಲಿತ ವಿದ್ಯೆ ವಿದ್ಯಾರ್ಥಿಗಳಿಗೆ ಫ‌ಲ ನೀಡಲಿದೆ. ಕೆಲಸದಲ್ಲಿ ಶ್ರದ್ಧೆ ಕರ್ತವ್ಯ ನಿಭಾಯಿಸಬೇಕು. ಯೋಗ್ಯ ವಯಸ್ಕರಿಗೆ ಅನುರೂಪ ಸತಿಯೋಗವೊದಗಿ ಬರಲಿವೆ.

 • ವೃಶ್ಚಿಕ

  ಶತ್ರುಗಳು ನಿಮ್ಮ ಬಗ್ಗೆ ತಣ್ಣಗಾದಾರು. ಜಲ ಸಂಬಂಧಿ ವೃತ್ತಿಗಳು ಸಂಪತ್ತಿನ ಸಂಗ್ರಹ ನೀಡಬಹುದು. ದೈಹಿಕ ಆರೋಗ್ಯದ ಬಗ್ಗೆ ಆಗಾಗ ಗಮನ ಹರಿಸಿರಿ.

 • ಧನು

  ಕೋರ್ಟು ವ್ಯವಹಾರಗಳು ಮುನ್ನಡೆಯನ್ನು ತಂದಾವು. ಉದ್ಯೋಗಿಗಳಿಗೆ ಪರದೇಶ ಸಂಚಾರ ಭಾಗ್ಯ ಸಂತಸ ತರಲಿದೆ. ವಿದ್ಯಾರ್ಥಿಗಳು ಪ್ರಯತ್ನಬಲ ಪಡೆದಾರು.

 • ಮಕರ

  ವಿನಾಕಾರಣ ಖರ್ಚುವೆಚ್ಚಗಳು ಅಧಿಕವಾದಾವು. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಪಡೆಯಲಿದ್ದಾರೆ. ವ್ಯಾಪಾರ ವ್ಯವಹಾರಗಳು ಅಭಿವೃದ್ದಿ ತರುತ್ತವೆ.

 • ಕುಂಭ

  ಗುರು, ಶನಿ, ಕೇತುಗಳ ಉತ್ತಮ ಬಲದಿಂದ ಉನ್ನತಿ ತೋರಿ ಬರುತ್ತದೆ. ಆರ್ಥಿಕವಾಗಿ ದೈಹಿಕವಾಗಿ, ಮಾನಸಿಕವಾಗಿ ನೆಮ್ಮದಿಯ ಅನುಭವ.ಸದುಪಯೋಗಿಸಿರಿ.

 • ಮೀನ

  ಉದ್ಯೋಗದಲ್ಲಿ ಮೇಲಧಿಕಾರಿಗಳ ಅಸಮಾಧಾನ ತೋರಿ ಬರುತ್ತದೆ. ಸಾಂಸಾರಿಕವಾಗಿ ನೆಮ್ಮದಿ ತಂದರೂ ಮನಸ್ಸಿಗೆ ಕಿರಿಕಿರಿ ತಪ್ಪದು. ಸಂಚಾರದಲ್ಲಿ ಜಾಗ್ರತವಹಿಸಬೇಕು.

ಹೊಸ ಸೇರ್ಪಡೆ