Udayavni Special
 • ಮೇಷ

  ಯುಗಾದಿಯ ಆರಂಭದಿಂದ ಅಷ್ಟಮದ ಗುರು ಚಾರದ ಕಾಲವಾದ ಕಾರಣ ಕುಟುಂಬದ ಸುಖವು ಆತಂಕಕ್ಕೆ ಒಳಗಾಗಲಿದೆ. ಸರಕಾರೀ ನೌಕರರಿಗೆ ಹಿಂಭಡ್ತಿಯೂ ಸ್ಥಾನಪಲ್ಲಟ ಯೋಗ ಒದಗಿಬಂದೀತು. ಸ್ಥಿರಾಸ್ತಿ ಕ್ರಯ, ವಿಕ್ರಯಾದಿಗಳಿಂದ ಲಾಭ ವಿಲ್ಲವಾದರೂ ನಷ್ಟವಾಗದು. ಆರೋಗ್ಯದ ಬಗ್ಗೆ ಮುಖ್ಯವಾಗಿ ಹೃದಯ ಸಂಬಂಧಿ ತೊಂದರೆಗಳು, ಉದರ ಸಂಬಂಧಿ ವ್ಯಾಧಿಗಳು ಆಗಾಗ ಕಂಡುಬರಲಿವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಿಗದೆ ಅಸಮಾಧಾನ ಮೂಡಿ ಬರಲಿದೆ. ಮನೆ ಯಲ್ಲಿ ಹಿರಿಯರ ಮನಸ್ತಾಪದಿಂದಾಗಿ ಒಳಗೊಳಗೆ ಕೊರಗುವ ಕಾಲವಾದೀತು. ಹಿತಶತ್ರುಗಳಿಂದ, ದಾಯಾದಿಗಳಿಂದ ಅಪಮಾನ, ಅವಮಾನವಾದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಿಂದ ತುಸು ಸಂತಸವಾಗಲಿದೆ. ವ್ಯಾಪಾರ, ವ್ಯವಹಾರ ಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯು ಎದುರಾದೀತು. ಆರ್ಥಿಕವಾಗಿ ಪೆಟ್ಟು ಬೀಳಲಿದೆ. ಅಕ್ಟೋಬರ್‌ ತಿಂಗಳ ಅನಂತರ ಉದ್ಯೋಗ ರಂಗದಲ್ಲಿ ಉತ್ತಮ ಫ‌ಲ ಹಾಗೂ ಮುಂಭಡ್ತಿ ಯೋಗವಿದೆ. ಸರಕಾರಿ ನೌಕರವರ್ಗಕ್ಕೆ ಮು°ನಡೆ ತೋರಿ ಬರುವುದು. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಭಾಗ್ಯವಿದೆ. ಸಾಮಾಜಿಕ ರಂಗದಲ್ಲಿ ಕೀರ್ತಿ, ಗೌರವವು ಹೆಚ್ಚಲಿದೆ. ಸೋದರ ವರ್ಗಕ್ಕೆ ನಿಮ್ಮಿಂದ ಸಹಕಾರ ದೊರಕಲಿದೆ. ಈತನ್ಮಧ್ಯೆ ಅಧಿಕಾರ ಪ್ರಾಪ್ತಿಯಾದರೂ ನಿಭಾಯಿಸಲು ಕಷ್ಟವಾದೀತು. ಸಾಹಿತಿ ವರ್ಗಕ್ಕೆ ಆರ್ಥಿಕವಾಗಿ ಲಾಭ ಸಿಗಲಿದೆ. ಧಾರ್ಮಿಕ, ಆಧ್ಯಾತ್ಮಿಕ ಪ್ರವೃತ್ತಿಗಳಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಸಜ್ಜನರ ಸಂಗದಿಂದ ಕಾರ್ಯಸಿದ್ಧಿಗೆ ಅನುಕೂಲವಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಾಸಕ್ತಿ ಅನುಭವಕ್ಕೆ ಬರಲಿದೆ. ಉದ್ಯಮಪತಿಗಳಿಗೆ ಏಳಿಗೆ ಹಾಗೂ ಸರಕಾರದ ಸಹಾಯ ಸಿಗಲಿದೆ. ಕೃಷಿಕರಿಗೆ ಅನುಕೂಲ ರೀತಿಯಲ್ಲಿ ಆರ್ಥಿಕ ಲಾಭದ ಸಂಭವವಿದೆ. ರಾಜಕೀಯ ವ್ಯಕ್ತಿಗಳಿಗೆ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪ್ರಸಿದ್ಧಿ ಸಿಗಲಿದೆ. ಗೃಹಿಣಿಯ ಭೋಗ, ಭಾಗ್ಯ ವಸ್ತುಗಳ ಆಗಮನ ಸಂತಸ ತರಲಿದೆ. ಹೊಟೇಲ್‌, ಆಹಾರ ಧಾನ್ಯಗಳ ವರ್ತಕರಿಗೆ ಅಧಿಕ ಲಾಭ ತಂದೀತು. ಕೋರ್ಟು ಕಚೇರಿಗಳ ವಾದವಿವಾದಗಳಲ್ಲಿ ಅನಿರೀಕ್ಷಿತ ಯಶಸ್ಸು ನಿಮಗೆ ದೊರಕಲಿದೆ. ವಿದ್ಯಾರ್ಥಿಗಳಿಗೆ ವಿದೇಶ ಯಾನದ ಯೋಗ ಕಂಡುಬರಲಿದೆ. ಸಣ್ಣಪುಟ್ಟ ಅನಾರೋಗ್ಯ ತೋರಿಬಂದರೂ ದೈವಾನುಗ್ರಹದಿಂದ ಉಪಶಮನವಾಗಲಿದೆ. ವರ್ಷದ ಕೊನೆಯ ಭಾಗದಲ್ಲಿ ಒಂದೊಂದೇ ವ್ಯವಹಾರಗಳು ಕ್ರಮಬದ್ಧವಾಗಿ ಮುಕ್ತಾಯಗೊಳ್ಳುವ ಅನುಭವವು ಗೋಚರಕ್ಕೆ ಬರಲಿದೆ.

 • ವೃಷಭ

  ಯುಗಾದಿಯ ಆರಂಭದಿಂದಲೇ ಗುರುವಿನ ಅನುಗ್ರಹ ತೋರಿಬಂದು ಆರ್ಥಿಕ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಕಾಣಿಸಬಹುದು ಹಾಗೂ ಅಷ್ಟಮದ ಶನಿಯಿಂದ ಮನೆಯಲ್ಲಿ ಅನಾವಶ್ಯಕವಾಗಿ ಭಿನ್ನಾಭಿಪ್ರಾಯದಿಂದ ಕಲಹಕ್ಕೆ ಕಾರಣವಾದೀತು. ಔದ್ಯೋಗಿಕ ವ್ಯವಹಾರಗಳಲ್ಲಿ ಗಣನೀಯವಾಗಿ ಗಳಿಕೆ ಇರುವುದರಿಂದ ನಾನಾ ರೀತಿಯಲ್ಲಿ ಹೂಡಿಕೆಗಳು ಅಧಿಕ ಲಾಭವನ್ನು ತಂದುಕೊಡಲಿವೆ. ಪತ್ನಿ, ಪುತ್ರಾದಿ ಸ್ವಕೀಯ ಪರಿವಾರದಿಂದ ಪ್ರೀತಿ, ವಿಶ್ವಾಸಗಳು, ಸಹಕಾರಗಳು ನಿಮ್ಮನ್ನು ಸಂತೃಪ್ತಿಗೊಳಿಸಲಿದೆ. ತುಂಬು ವಿಶ್ವಾಸದ ಹಸನಾದ ಬಾಳು ನಿಮ್ಮದಾದೀತು. ನಿಮ್ಮ ಅಭಿವೃದ್ಧಿಗೆ ಶತ್ರುಗಳೇ ತಲೆದೂಗುವಂತಾದೀತು. ಪ್ರಣಯಿಗಳಿಗೆ ಪರಿಣಯ ಸಂಭವ. ಉದ್ಯೋಗಿಗಳಿಗೆ ಕಾರ್ಯದಕ್ಷತೆಯಿಂದ ಯಶಸ್ಸು ಲಭಿಸಲಿದೆ. ಯೋಗ್ಯ ವಯಸ್ಕರಿಗೆ ಯೋಗ್ಯ ಸಂಬಂಧಗಳು ಕೂಡಿ ಬಂದಾವು. ಬ್ಯಾಂಕಿಂಗ್‌, ಶೇರು ಮಾರ್ಕೆಟ್‌, ಫೈನಾನ್ಸ್‌ ಮೊದಲಾದ ಹಣಕಾಸಿನ ವ್ಯವಹಾರದ ವಿಭಾಗದಲ್ಲಿ ಹೆಚ್ಚಿನ ಧನಾಗಮನವಿರುತ್ತದೆ. ರಾಜಕೀಯದಲ್ಲಿ ರಾಜಕಾರಣಿಗಳಿಗೆ ಅಂತಿಮವಾಗಿ ಅಧಿಕಾರದ ಗದ್ದುಗೆಯು ಪ್ರಾಪ್ತವಾದೀತು. ಮುಖ್ಯವಾಗಿ ಕಲಾವಿದರಿಗೆ, ಸಾಹಿತಿಗಳಿಗೆ ಉತ್ತಮ ಕಾಲವಾಗಿ ಗೌರವ ಪ್ರಾಪ್ತಿಯಾಗಲಿದೆ. ಆಗಾಗ ಯಂತ್ರ, ವಾಹನಗಳು, ಇಲೆಕ್ಟ್ರಿಕಲ್‌ ವಸ್ತುಗಳ ರಿಪೇರಿಗಾಗಿ ಅಧಿಕ ಧನವ್ಯಯವಾದೀತು. ಮನೆಯಲ್ಲಿ ಯಾ ಬಂಧುವರ್ಗದಲ್ಲಿ ಶುಭಮಂಗಲ ಕಾರ್ಯಗಳಿಂದ ಸಂಭ್ರಮಿಸುವಂತಾದೀತು. ಅಧಿಕಾರಿ ವರ್ಗದವರಿಗೆ ಉದ್ಯೋಗ ಪರಿವರ್ತನೆಯಿಂದ ಸಂತಸವಾದೀತು. ಅರ್ಚಕ, ಪುರೋಹಿತ ವರ್ಗದವರಿಗೆ ಆರ್ಥಿಕವಾಗಿ ಉನ್ನತಿ ತೋರಿಬರುತ್ತದೆ. ಭೂಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗೆ ಸಕಾಲವಿದು. ಆಗಾಗ ಶನಿಯ ಏರುಪೇರುಗಳು ಆರ್ಥಿಕ ಸ್ಥಿತಿಯಲ್ಲಿ ಪೆಟ್ಟು ಬೀಳಲಿದೆ. ಶತ್ರು ಬಾಧೆ ತೋರಿಬಂದರೂ ಆತ್ಮಬಲದಿಂದ ಎದುರಿಸುವಂತಾದೀತು. ಆಗಾಗ ದಾಯಾದಿಗಳಿಂದ ಅನಾವಶ್ಯಕ ವಾದ-ವಿವಾದಗಳನ್ನು ಎದುರಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶೀ ಯಾನದ ಸೌಲಭ್ಯ ದೊರಕಲಿದೆ. ಚಿನ್ನ, ಬೆಳ್ಳಿ, ನವರತ್ನ ಆಲಂಕಾರಿಕ ವಸ್ತುಗಳ ವ್ಯಾಪಾರಿ ವರ್ಗದವರಿಗೆ ಧನಾಗಮನದಿಂದ ವಿಶ್ರಾಂತಿ ಸಿಗಲಾರದು. ದೇಹಾರೋಗ್ಯ ಉತ್ತಮವಿದ್ದರೂ ಉದಾಸೀನತೆಗೆ ಕಾರಣರಾಗದಿರಿ. ಅನಿರೀಕ್ಷಿತವಾಗಿ ದೂರ ಸಂಚಾರದ ಯೋಗವಿದೆ. ಮುಖ್ಯವಾಗಿ ಪ್ರಯತ್ನಬಲ, ಆತ್ಮವಿಶ್ವಾಸ, ಕ್ರಿಯಾಶೀಲತೆಗಳಿಂದ ಮುನ್ನಡೆಯನ್ನು ಪಡೆಯಲಿದ್ದೀರಿ. ಹಂತಹಂತವಾಗಿ ಸಾಂಸಾರಿಕ ಕ್ಲೇಶವು ಸಮಾಧಾನದಿಂದ ಪರಿಹಾರವಾಗಲಿದೆ.

 • ಮಿಥುನ

  ಈ ಯುಗಾದಿಯ ಆರಂಭದಿಂದಲೇ ಶನಿ, ಗುರುವಿನ ಪ್ರತಿಕೂಲತೆಗಳಿಂದ ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಾರವು. ಕಾರ್ಯಕ್ಷೇತ್ರದಲ್ಲಿ ಅಸ್ಥಿರತೆ, ಭೀತಿ, ವೃತ್ತಿರಂಗದಲ್ಲಿ ಸ್ಥಾನಭ್ರಂಶ ಯೋಗ. ಕೌಟುಂಬಿಕವಾಗಿ ದಾಯಾದಿಗಳ ಕಿರುಕುಳ, ಕಾರ್ಯಕ್ಷೇತ್ರದಲ್ಲಿ ಕೂಡ ಕೆಟ್ಟ ಮಾತು ಕೇಳಿ ಬಂದೀತು. ದುರ್ಜನರ ಸಹವಾಸದಿಂದ ಅವಮಾನ, ಅಪವಾದ ಭೀತಿ ಕಂಡುಬರಲಿದೆ. ಧರ್ಮಬಾಹಿರ ಕೃತ್ಯಗಳಿಗೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಪರಸ್ತ್ರೀಯರ ಬಗ್ಗೆ ಅಗೌರವವಾಗಿ ನಡೆಯದಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದಲೇ ಮುನ್ನಡೆಯುವಂತಾದೀತು. ಆಗಾಗ ದೇಹಾ ಯಾಸದಿಂದ ಶಾರೀರಿಕ ಸ್ಥಿತಿಯು ಕ್ಷೀಣಿಸಲಿದೆ. ವಿವಾಹಿತರು ಹೆಚ್ಚಿನ ಹೊಂದಾಣಿಕೆಯಿಂದಲೇ ಮುಂದುವರಿ ದಲ್ಲಿ ಕಂಕಣಬಲ ಪ್ರಾಪ್ತಿಯಾದೀತು. ಆಗಾಗ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸದಂತೆ ವರ್ತಿಸಿರಿ. ರಾಜಕೀಯ ವರ್ಗದವರಿಗೆ ಕಾರ್ಯಕ್ಷೇತ್ರಗಳಿಂದ ಬರುತ್ತಿರುವ ಒತ್ತಡಗಳು ಮಾನಸಿಕ ಸ್ಥಿತಿಯನ್ನು ಹಾಳುಗೆಡವಲಿದೆ. ದೂರ ಸಂಚಾರಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಒಮ್ಮೊಮ್ಮೆ ಹಿತಮಿತ್ರರೇ ಶತ್ರುಗಳಾಗುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ಸ್ಥಾನಪಲ್ಲಟವಾಗುವ ಸಾಧ್ಯತೆ ಇದೆ. ಆಗಾಗ ಆರ್ಥಿಕ ಸ್ಥಿತಿ ಆತಂಕಕ್ಕೆ ಕಾರಣವಾದೀತು. ಸ್ತ್ರೀಯರಿಗೆ, ಮಕ್ಕಳಿಂದ ಅಸಮಾಧಾನ ಕಂಡುಬರಲಿದೆ. ನಡೆಸುವ ವ್ಯಾಪಾರ, ವ್ಯವಹಾರಗಳು ಉತ್ತಮವಿದ್ದರೂ ವಂಚನೆಗೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಒಂದು ಆಪತ್ತಿನಿಂದ ಹೊರಬರುವಾಗಲೇ ಇನ್ನೊಂದು ಆಪತ್ತು ಕಾಣಿಸಬಹುದು. ಹೊಸ ಕಾರ್ಯಗಳಿಗೆ ಪ್ರಾರಂಭದ ಮೊದಲು ಪುನಃ ಯೋಚಿಸುವ ಅಗತ್ಯವಿರುವುದು. ಮಾತುಗಳಲ್ಲಿ ಸಂಯಮವಿರಲಿ. ಆಗಸ್ಟ್‌ ತಿಂಗಳ ಅನಂತರ ಸಪ್ತಮದ ಶುಭ ಕ್ಷೇತ್ರದ ಗುರುಬಲದಿಂದ ಪರಿಸ್ಥಿತಿಯು ಸುಧಾರಣೆಯಾಗಿ ಚೇತರಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಉತ್ತಮ ಭಡ್ತಿ, ಅನುಕೂಲಕರಳಾದ ಪತ್ನಿ, ಮಕ್ಕಳಿಂದ ಶಾಂತಿ, ಸಮಾಧಾನ ಸಿಗಲಿದೆ. ಗೃಹಾಲಂಕಾರ ವಸ್ತುಗಳ ಖರೀದಿಯಾಗಿ ಮನೆ ಮಂದಿಯೆಲ್ಲಾ ಸಂಭ್ರಮಿಸುವಂತಾದೀತು. ಉದ್ಯೋಗಿಗಳಿಗೆ ವಿದೇಶಯಾನವಿದೆ. ಗೃಹ ನಿರ್ಮಾಣ ಅಥವಾ ಕಟ್ಟಡ ಸಾಮಗ್ರಿಗಳ ಕ್ರಯವಿಕ್ರಯ ಹಾಗೂ ಸ್ಥಿರ ಸೊತ್ತುಗಳ ವ್ಯವಹಾರಗಳಲ್ಲಿ ಆದಾಯವು ವೃದ್ಧಿಸಲಿದೆ. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಪಡೆಯಲಿದ್ದೀರಿ. ಕೋರ್ಟು ಕಚೇರಿ ಅಲೆದಾಟ ಕಡಿಮೆಯಾಗಲಿದೆ. ಒಟ್ಟಿನಲ್ಲಿ ಮಿಶ್ರ ಫ‌ಲದಾಯಕ ಜೀವನ ನಿಮ್ಮದಾದೀತು.

 • ಕಟಕ

  ಈ ವರ್ಷದ ಯುಗಾದಿಯ ಪ್ರಾರಂಭದಿಂದಲೂ ತಮ್ಮ ಗುರುಬಲ, ಶನಿಬಲಗಳ ಲಾಭಸ್ಥಾನದಿಂದ ಹಂತಹಂತವಾಗಿ ಪರಿಸ್ಥಿತಿಯು ಸುಧಾರಿಸಲಿದೆ. ನಿರೀಕ್ಷಿತ ಶುಭಮಂಗಲ ಕಾರ್ಯವು ಫ‌ಲಿಸುವುವು. ಗೃಹ ನಿರ್ಮಾಣದ ಕಾರ್ಯಗಳು ಪೂರ್ಣಗೊಂಡು, ಗೃಹ ಪ್ರವೇಶದಿಂದ ಸಂತಸಗೊಳ್ಳುವಿರಿ. ಅಲ್ಲದೆ ಭೂಖರೀದಿ, ವಾಹನ ಖರೀದಿಗಳಿಗೆ ಇದು ಸಕಾಲವೆನಿಸಲಿದೆ. ಗುರುಹಿರಿಯರ ಅನುಗ್ರಹದಿಂದ ಮಾನಸಿಕವಾಗಿ ಶಾಂತಿ, ಸಮಾಧಾನಗಳು ಅನುಭವಕ್ಕೆ ಬರಲಿವೆ. ಸಾಮಾಜಿಕ ಜೀವನದಲ್ಲಿ ಸ್ಥಾನಮಾನ, ಗೌರವವು ಲಭಿಸಲಿದೆ. ಕ್ರಯವಿಕ್ರಯದಿಂದ ಲಾಭ. ಹಳೇ ಬಾಕಿ ವಸೂಲಿ ಸಮಾಧಾನ ತರಲಿದೆ. ಉದ್ಯೋಗಿಗಳಿಗೆ ಸರಕಾರಿ ಉದ್ಯೋಗ ಪ್ರಾಪ್ತಿಯಾದೀತು. ಸ್ಥಗಿತಗೊಂಡ ಕೆಲಸಕಾರ್ಯಗಳು ನೀವು ಅಚ್ಚರಿ ಪಡುವಂತೆ ಮುಕ್ತಾಯಗೊಳ್ಳಲಿದೆ. ಆದರೂ ಕೆಲವೊಮ್ಮೆ ನಿಮ್ಮ ಅಜಾಗರೂಕತೆ, ಆಲಸ್ಯಗಳಿಂದ, ಅವಸರದಿಂದ ಕಾರ್ಯಸಾಧನೆಗೆ ವಿಳಂಬವಾಗದಂತೆ ಜಾಗ್ರತೆ ವಹಿಸಿರಿ. ವ್ಯಾಪಾರಿ ವರ್ಗಕ್ಕೆ ಆರ್ಥಿಕ ಸ್ಥಿತಿಯು ಹಂತಹಂತವಾಗಿ ಅಭಿವೃದ್ಧಿದಾಯಕವಾದೀತು. ಕೊಡಬೇಕಾದ ಹಣ ನಿಮಗೆ ವಸೂಲಿಯಾಗಲಿದೆ. ಮುಖ್ಯವಾಗಿ ಎಲ್ಲಾ ವಿಚಾರದಲ್ಲಿ ಪ್ರಯತ್ನಬಲ, ಆತ್ಮಸ್ಥೈರ್ಯ, ಕ್ರಿಯಾಶೀಲತೆಗೆ ಒತ್ತು ನೀಡಿದಲ್ಲಿ ನಿಶ್ಚಿತ ರೂಪದಲ್ಲಿ ಕಾರ್ಯಸಾಧನೆಯಾಗಲಿದೆ. ಕುಟುಂಬದ ಹಿರಿಯರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಉದರಪೀಡೆ, ಶೀತ ಕಫಾದಿಗಳಿಂದ ಅನಾರೋಗ್ಯವು ತೋರಿಬಾರದಂತೆ ಕಾಳಜಿ ವಹಿಸಿರಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದಿಂದ ಸಾರ್ಥಕ್ಯವನ್ನು ಪಡೆದಾರು. ಮಾತಿನಿಂದ ವಾದ ವಿವಾದಗಳು ತೋರಿಬಾರದಂತೆ ಜಾಗ್ರತೆ ವಹಿಸಿರಿ. ನೂತನ ವ್ಯಾಪಾರ, ವ್ಯವಹಾರವನ್ನು ಆರಂಭಿಸಲು ಇದು ಉತ್ತಮ ಕಾಲ. ಪಿತೃ ಮೂಲದಿಂದ ಧನ ಪ್ರಾಪ್ತಿಯಾದೀತು. ಮಹಿಳಾ ಉದ್ಯೋಗಿಗಳಿಗೆ ವ್ಯಾಪಾರ, ವ್ಯವಹಾರದಲ್ಲಿ ಮೋಸ ಹೋಗದಂತೆ ಹೆಚ್ಚಿನ ಜಾಗ್ರತೆ ವಹಿಸಿರಿ. ಮಿತ್ರರಿಂದ ಸಹಕಾರ, ಮುನ್ನಡೆಗೆ ಸಾಧಕವಾದೀತು. ನ್ಯಾಯಾಲಯದ ವ್ಯಾಜ್ಯ, ತಕರಾರುಗಳು ಉಪಶಮನವಾಗಲಿವೆ. ಯೋಗ್ಯ ವಯಸ್ಕರಿಗೆ ಕಂಕಣಬಲದ ಪ್ರಾಪ್ತಿಯಾಗಲಿದೆ. ಅಕ್ಟೋಬರ್‌ ತಿಂಗಳ ಅನಂತರ ಗುರುಬಲ ಕ್ಷೀಣವಾಗಿ ಆರೋಗ್ಯದಲ್ಲಿ, ಉದ್ಯೋಗ, ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಸರಕಾರೀ ಇಲಾಖೆಯಿಂದ ನಷ್ಟ ಸಂಭವವಿದೆ. ಯಾವ ಕಾರ್ಯಕ್ಕೆ ಕೈ ಹಾಕಿದರೂ ತಪ್ಪು ಎಂಬ ಮನೋಭಾವದಿಂದ ಚಿಂತೆಗೊಳಗಾಗಿರುವ ಕಾಲವಿದು. ಜಾಗ್ರತೆ ವಹಿಸಿರಿ. ಕುಲದೇವತಾ ಪ್ರಾರ್ಥನೆ ಇರಲಿ.

 • ಸಿಂಹ

  ಈ ಯುಗಾದಿಯ ಪ್ರಾರಂಭದಿಂದಲೇ ಪಂಚಮ ಶನಿ, ಗುರುಬಲವಿಲ್ಲದೇ ತೊಂದರೆಗೊಳಗಾದ ನಿಮಗೆ ಅಕ್ಟೋಬರ್‌ ತನಕ ಆಗಾಗ ಮಾನಸಿಕವಾಗಿ ಕ್ಲೇಶಗಳು ತೋರಿಬಂದಾವು. ಸರಕಾರೀ ಅಧಿಕಾರಿಗಳಿಂದ ಕಿರಿಕಿರಿಗಳು ಕಂಡುಬರಲಿವೆ. ಭೂಸಂಬಂಧದ ವ್ಯವಹಾರಗಳಲ್ಲಿ ವಿಶೇಷ ನಷ್ಟವಾದೀತು. ಶಾರೀರಿಕವಾಗಿ ಆಗಾಗ ಆರೋಗ್ಯ ಭಾಗ್ಯದಲ್ಲಿ ಏರುಪೇರು ಕಾಣಿಸಬಹುದು. ರಾಜಕೀಯ ವ್ಯವಹಾರಗಳಲ್ಲಿ ಸ್ಥಾನಮಾನವನ್ನು ಕಳಚಿಕೊಳ್ಳುವ ಸಂದರ್ಭ ಬಂದೀತು. ಅನಾವಶ್ಯಕ ವಾದವಿವಾದಗಳಿಂದ ತಕರಾರುಗಳು ಕಂಡುಬಂದಾವು. ವೃತ್ತಿರಂಗದಲ್ಲಿ ನೌಕರ ವರ್ಗದವರಿಗೆ ವರಿಷ್ಠರಿಂದ ಕಿರುಕುಳ ಕಂಡುಬಂದೀತು. ವ್ಯಾಪಾರ, ವ್ಯವಹಾರ ಗಳಲ್ಲಿ ಇತರರಿಂದ ಮೋಸ ಹೋಗದಂತೆ ಕಾಳಜಿ ವಹಿಸಿರಿ. ಮಹಿಳಾ ಉದ್ಯಮದವರಿಗೆ ಆರ್ಥಿಕವಾಗಿ ಕಷ್ಟನಷ್ಟಗಳು ಬಂದಾವು. ವಾಹನ ಚಾಲನೆ ಹಾಗೂ ಸಂಚಾರದಲ್ಲಿ ಜಾಗ್ರತೆ ವಹಿಸುವುದು. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದಲ್ಲಿ ಮಧ್ಯಮ ಫ‌ಲವಿದೆ. ಸಾಮಾಜಿಕ ಕ್ಷೇತ್ರದಲ್ಲಿ ಶುತ್ರ-ಪ್ರತಿಸ್ಪರ್ಧಿಗಳಿಂದ ಸಮಸ್ಯೆಗಳು ಕಂಡುಬಂದಾವು. ಧರ್ಮಬಾಹಿರ ಕಾರ್ಯಗಳಿಗೆ ಪ್ರೇರಣೆಯಾಗುವ ಸಂಭವವಿರುತ್ತದೆ. ಕ್ಷುದ್ರಜನರ ವಿರೋಧದಿಂದ ಬೇಸರ ತರಲಿದೆ. ವೃದ್ಧ ಜನರ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುವುದು ಮುಖ್ಯ. ಕುಟುಂಬ ಜನರ ಅಸಹಕಾರದಿಂದ ಅಡಚಣೆಗಳು ಕಂಡುಬಂದಾವು. ಅಕ್ಟೋಬರ್‌ ತಿಂಗಳ ಅನಂತರ ರಾಹುವಿನ ಲಾಭಸ್ಥಾನದಿಂದ, ಪಂಚಮದ ಗುರುಬಲದಿಂದ ಹಿಡಿದ ಕಾರ್ಯಗಳನ್ನು ಸಾಧಿಸುವ ಸಾಮರ್ಥ್ಯ ತಂದು ಕೊಡಲಿದೆ. ವಿವಿಧ ರೂಪದಿಂದ ಧನದಾಯ ವರ್ಧಿಸಲಿದೆ. ಆಗಾಗ ಸಂಚಾರದಿಂದ ಕಾರ್ಯಸಿದ್ಧಿಯಾದೀತು. ಹೆಚ್ಚಿನ ಇಷ್ಟಾರ್ಥಗಳು ಸಿದ್ಧಿಸಲಿವೆ. ಕ್ರೀಡಾಳುಗಳಿಗೆ ಹೆಚ್ಚಿನ ಯಶಸ್ಸು ತಂದುಕೊಡಲಿದೆ. ಕೃಷಿ ಹಾಗೂ ವಾಣಿಜ್ಯ ಪ್ರವೃತ್ತಿಯವರಿಗೆ ಆರ್ಥಿಕವಾಗಿ ಪರಿಸ್ಥಿತಿಯು ಸುಧಾರಿಸುತ್ತಾ ಹೋಗುವುದು. ಆಸ್ತಿಪಾಸ್ತಿಗಳ ಸಂಗ್ರಹ, ಮಂಗಲ ಕಾರ್ಯಗಳ ಪ್ರಸಕ್ತಿ ಸಾಂಸಾರಿಕ ಸುಖದುಃಖ, ಸಂತಸಗಳು ಅನುಭವಕ್ಕೆ ಬರಲಿವೆ. ಅವಿವಾಹಿತರಿಗೆ ಕಂಕಣ ಬಲ ಪ್ರಾಪ್ತಿಯಾದೀತು. ಕೃಷಿ, ಗುಡಿ ಕೈಗಾರಿಕೆ, ಭೂಸಂಬಂಧ ವ್ಯವಹಾರಗಳು ಲಾಭದಾಯಕವಾಗಲಿವೆ. ದಾಂಪತ್ಯದಲ್ಲಿ ಸಂತಾನದ ಕುರುಹು ಕಂಡುಬರಲಿದೆ. ಆಕಸ್ಮಿಕವಾಗಿ ಒದಗುವ ಘಟನೆಗಳಿಂದ ಚಡಪಡಿಸಿದರೂ ಅದೇ ಭಾಗ್ಯೋದಯಕ್ಕೆ ಕಾರಣವಾಗುತ್ತದೆ.

 • ಕನ್ಯಾ

  ಈ ಯುಗಾದಿಯ ಪ್ರಾರಂಭದಿಂದ ಮಿಶ್ರ ಫ‌ಲವಿದ್ದು ಆಗಾಗ ಸಮಸ್ಯೆಗಳನ್ನು ಎದುರಿಸಬೇಕಾದೀತು. ಉತ್ತಮ ವಿವೇಚನಾ ಬುದ್ಧಿ, ಪರೋಪಕಾರ, ತಾಳ್ಮೆ, ಸಮಾಧಾನಗಳಿಂದ ಮುನ್ನಡೆದಲ್ಲಿ ಕ್ರಮಬದ್ಧ ಜೀವನ ನಡೆಸುವ ನಿಮಗೆ ಉತ್ತಮ ಫ‌ಲ ನೀಡಲಿದೆ. ವೃತ್ತಿರಂಗದಲ್ಲಿ ಯಾರದೋ ತಪ್ಪಿಗೆ ಯಾರೋ ಹೊಣೆ ಎಂಬಂತೆ ಆಗುವ ಕಾಲ. ಅನಾವಶ್ಯಕ ವಾದವಿವಾದಗಳಿಂದ ಕಲಹಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಮೂಲಧನ ನಷ್ಟಕ್ಕೆ ಕಾರಣವಾದೀತು. ಆರೋಗ್ಯ ಭಾಗ್ಯದಲ್ಲಿ ಆಗಾಗ ಸಮಸ್ಯೆಗಳು ಕಂಡುಬಂದಾವು. ವ್ಯಾಪಾರಿಗಳಿಗೆ ಸಾಧಾರಣ ಫ‌ಲವಿದ್ದು ಬಟ್ಟೆ ಹಾಗೂ ದಲ್ಲಾಳಿ ವ್ಯಾಪಾರಿಗಳಿಗೆ ಲಾಭವಿದೆ. ಕೃಷಿಕ ವರ್ಗಕ್ಕೆ ನಿರೀಕ್ಷಿತ ರೂಪದಲ್ಲಿ ಫ‌ಲ ಸಿಗಲಾರದು. ಸಾಂಸಾರಿಕವಾಗಿ ಸಮಾಧಾನ ದೊರಕಿದರೂ ಹೊಂದಾಣಿಕೆ ಅಗತ್ಯವಿದೆ. ಭೂ, ವಾಹನಾದಿಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಕಷ್ಟನಷ್ಟಗಳಿಗೆ ಕಾರಣವಾದೀತು. ವಯಸ್ಕರಿಗೆ ಹೊಂದಾಣಿಕೆ ಮನೋಭಾವ ಅತೀ ಅಗತ್ಯವಿದೆ. ಸಾಮಾಜಿಕ ರಂಗದಲ್ಲಿ ನಿಮ್ಮ ಪ್ರತಿಭೆಗೆ ನಿರೀಕ್ಷಿತ ಫ‌ಲ ಸಿಗಲಾರದು. ಸ್ವಸಾಮರ್ಥ್ಯದಲ್ಲಿ ಭರವಸೆಯಿಟ್ಟು ಶಿಸ್ತಿನ ಸಾತ್ವಿಕ ಜೀವನ ನಡೆಸಿದಲ್ಲಿ ನಿಶ್ಚಿತ ಗುರಿ ತಲುಪಲು ಸುಲಭವಾಗಲಿದೆ. ವಿವಿಧ ಮೂಲಗಳಿಂದ ಧನ ಪ್ರಾಪ್ತಿಯಾಗಲಿದೆ. ಮನೆಯಲ್ಲಿ ಕಳ್ಳಕಾಕರ ಬಗ್ಗೆಯೂ ಹೆಚ್ಚಿನ ಗಮನ ಹರಿಸುವುದು ಅಗತ್ಯವಿದೆ. ಧಾರ್ಮಿಕ ಮುಖಂಡರಿಗೆ ಅಪವಾದ ಭೀತಿ ಅನುಭವಿಸುವಂತಾದೀತು. ದೇಹಾರೋಗ್ಯದಲ್ಲಿ ಆಗಾಗ ತಲೆನೋವು, ಮೈ-ಕೈ ನೋವು ಗಂಟುನೋವು, ಉದರ ಸಮಸ್ಯೆಗಳು, ವಿಷಾಹಾರ ಸೇವನೆ ಬಗ್ಗೆ ಅನಾರೋಗ್ಯ ಕಂಡುಬರುವುದು. ಹಿಂದಿನಿಂದಲೂ ವಿಘ್ನ ವಿಡ್ಡೂರಗಳನ್ನು ಎದುರಿಸಿಕೊಂಡು ಬರುತ್ತಿರುವ ನಿಮಗೆ ಈ ಸಲವೂ ಅದೇ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕಾಗುತ್ತದೆ. ಸ್ಥಾನಮಾನಗಳಲ್ಲಿ ಆಗಾಗ ಹಿತ ಶತ್ರುಗಳ ವಂಚನೆ ಮೈಮೇಲೆ ಒಡ್ಡಿ ಬರುವ ಕ್ಷುಲ್ಲಕ ಪ್ರಕರಣಗಳಿಂದ ಸದಾಕಾಲವೂ ಚಿಂತಾಕ್ರಾಂತರಾಗಬೇಕಾದೀತು. ಆದರೂ ಈ ಮಧ್ಯೆ ಉದ್ಯೋಗದಲ್ಲಿ ಪ್ರಗತಿ, ಧನಾಭಿವೃದ್ಧಿಯೂ ಕಂಡುಬರಲಿದೆ. ರಾಜಕೀಯ ವೃತ್ತಿ ನಿರತರಿಗೆ ಸ್ಥಾನ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಪ್ರಯತ್ನಬಲ ಅಗತ್ಯವಿದೆ. ಶ್ರಮಕ್ಕೆ ತಕ್ಕ ಪ್ರತಿಫ‌ಲವಿದೆ. ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ವೃತ್ತಿಕ್ಷೇತ್ರದಲ್ಲಿ ಅಸಮಾಧಾನ ಕಂಡುಬರಲಿದೆ. ಒಟ್ಟಿನಲ್ಲಿ ಸುಖ-ದುಃಖ ಮಿಶ್ರಿತ ಫ‌ಲಗಳ ಅನುಭವವಾದೀತು.

 • ತುಲಾ

  ಈ ಯುಗಾದಿಯ ಪ್ರಾರಂಭದಿಂದಲೇ ಲಾಭಸ್ಥಾನದ ಶನಿ ಭಾಗ್ಯದಾಯಕ ಗುರುವಿನ ದೈವಾನುಗ್ರಹದಿಂದ ಸೋಲಿನಲ್ಲಿಯೂ ಗೆಲುವನ್ನು ಸಾಧಿಸಲಿದ್ದೀರಿ. ಶನಿಯು ಕರ್ಮಫ‌ಲವನ್ನು ಕೊಡುವ ದೇವತೆ. ಆದ್ದರಿಂದ ಶಿಸ್ತು, ಸಂಯಮದಿಂದ ಇದ್ದಲ್ಲಿ, ವೃತ್ತಿರಂಗದಲ್ಲಿರಲಿ, ಸಾಂಸಾರಿಕವಾಗಿರಲಿ, ಮುನ್ನಡೆಯನ್ನು ಸಾಧಿಸಲಿದ್ದೀರಿ. ನೂತನ ದೀರ್ಘ‌ಕಾಲದ ಕಾರ್ಯಗಳಿಗೆ ಋಣಾತ್ಮಕ ಚಿಂತನೆ ತೋರದೆ ದೃಢ ಮನಸ್ಸಿನಿಂದ ಮುನ್ನಡೆಯನ್ನು ಸಾಧಿಸಬೇಕಾಗುತ್ತದೆ. ಭೂಖರೀದಿ, ವಾಹನ ಖರೀದಿಗಳಿಗೆ ಈ ವರ್ಷವು ಅನುಕೂಲವಾಗಲಿದೆ. ಕೋರ್ಟು ಸಂಬಂಧ ವ್ಯವಹಾರಗಳಲ್ಲಿ ಉತ್ತಮ ಯಶಸ್ಸು ಪಡೆಯಲಿದ್ದೀರಿ. ಆರ್ಥಿಕವಾಗಿ ಹೆಚ್ಚಿನ ಧನಾಗಮನವಿದ್ದರೂ ಕೆಲವೊಂದು ಸಂಕಷ್ಟಗಳು ಅನುಭವಕ್ಕೆ ಬರಲಿವೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳಿಗೆ ಅನುಕೂಲವಾಗಲಿದೆ. ರಾಜಕೀಯ ಧುರೀಣರಿಗೆ ತಮ್ಮ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ, ಗೌರವವನ್ನು ಪಡೆಯುವ ಸಾಧ್ಯತೆ ಇದೆ. ಮುಖ್ಯವಾಗಿ ಸ್ವಉದ್ಯೋಗದಲ್ಲಿ ಗಣನೀಯವಾದ ಗಳಿಕೆ, ಲಾಟರಿ ಮೊದಲಾದ ಅದೃಷ್ಟದ ವ್ಯವಹಾರದಲ್ಲಿ ಆಕಸ್ಮಿಕ ಧನ ಲಾಭವಿರುವುದರಿಂದ ಯಾವ ರೀತಿಯ ಖರ್ಚು-ವೆಚ್ಚಗಳಿದ್ದರೂ ಎದುರಿಸಬಹುದಾಗಿದೆ. ಮನೆಯಲ್ಲಿ ಶುಭ ವಿವಾಹಾದಿ ಶುಭ ಸಮಾರಂಭಗಳು, ಚೌಲೋಪನಯನ ಮೊದಲಾದ ಶುಭಕಾರ್ಯಗಳು ನಡೆಯಲಿವೆ. ಅಕ್ಟೋಬರ್‌ ಅನಂತರ ದೈವಬಲ ಕ್ಷೀಣವಾಗಿ ಶಾರೀರಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ದೀರ್ಘ‌ಕಾಲದ ಅಸೌಖ್ಯಗಳು ಗೋಚರಕ್ಕೆ ಬಂದಾವು. ವಾಹನ ಅಪಘಾತದ ಬಗ್ಗೆ ಭೀತಿ ತಂದೀತು. ಕೋರ್ಟು ಕಚೇರಿಗಳ ತಕರಾರುಗಳು ಕಿರಿಕಿರಿ ಎನಿಸಲಿವೆ. ರಾಜಕೀಯ ರಂಗದಲ್ಲಿ ಗುಂಪುಗಾರಿಕೆ ಪರಸ್ಪರ ಘರ್ಷಣೆಯಿಂದ ತಾಪತ್ರಯಗಳು ತೋರಿಬಂದರೂ ಒಗ್ಗಟ್ಟಿನಿಂದ ಮುಂದುವರಿದ್ದಲ್ಲಿ ಕಾರ್ಯ ಜಯವಾದೀತು. ಆಗಾಗ ಮನೋಬಲ ಹಾನಿ, ಮಾನಸಿಕ ಒತ್ತಡ, ವೃತ್ತಿರಂಗದಲ್ಲಿ ವಾದ-ವಿವಾದಗಳು ಗುಟ್ಟಿನಿಂದ ಇಟ್ಟುಕೊಂಡ ವಿಚಾರಗಳು ರಟ್ಟಾದಾವು. ಆತ್ಮೀಯರೊಡನೆ ಮುಖ ಮುರಿಸು ತಪ್ಪದು. ವಿಚಾರದ ನಿರ್ಧಾರಗಳಲ್ಲಿ ಆಗಾಗ ಬದಲಾವಣೆ ಇರುತ್ತದೆ. ಆರ್ಥಿಕವಾಗಿ ಮೋಸ ಹೋಗಿ ಧನನಷ್ಟವೂ ಆದೀತು. ವೈಯಕ್ತಿಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಮನೋಬಲದಲ್ಲಿ ಎದುರಿಸುವಂತಾದೀತು.

 • ವೃಶ್ಚಿಕ

  ಈ ಯುಗಾದಿಯ ಆರಂಭದಿಂದ ಅಕ್ಟೋಬರ್‌ವರೆಗೆ ಗುರುಬಲವಿಲ್ಲದೆ ಶನಿಯ ಚಾರದಿಂದ ರಾಹುವಿನಿಂದ ಎಲ್ಲಾ ವಿಚಾರಗಳಲ್ಲಿ ಕೈ ಕೈ ಹಿಸುಕುವಂತಾದೀತು. ವ್ಯಾಪಾರ, ವ್ಯವಹಾರಗಳಲ್ಲಿ, ಆರ್ಥಿಕವಾಗಿ ಋಣಬಾಧೆಯಿಂದ ಉದ್ವೇಗ ತೋರಿಬಂದು ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳು ವಂತಾದೀತು. ಶನಿಯ ಪ್ರಭಾವ ಇರುವುದರಿಂದ ವಾಹನಾದಿಗಳ ಬಗ್ಗೆ ಜಾಗ್ರತೆ ವಹಿಸಿರಿ. ಯಾವ ರೀತಿಯ ಖರ್ಚು-ವೆಚ್ಚಗಳು ಇದ್ದರೂ ಲೆಕ್ಕಕ್ಕೆ ಸಿಗಲಾರದು. ಮುಖ್ಯವಾಗಿ ಶಿಸ್ತು ಜೀವನ ಅಗತ್ಯವಿದೆ. ಯಾರನ್ನೂ ನಂಬದಿರುವಂಥ ಪರಿಸ್ಥಿತಿಯಿಂದ ಗೊಂದಲವಾದೀತು. ವಾದ, ವಿವಾದಗಳಿಂದ ಅವಮಾನ ಪ್ರಸಂಗಕ್ಕೆ ಕಾರಣರಾಗುವಿರಿ. ಪಾಲು ಬಂಡವಾಳದಲ್ಲಿ ವಂಚನೆಗಳು ತೋರಿಬಂದಾವು. ಮಿತ್ರರು ಶತ್ರುಗಳಾಗಿ, ಶತ್ರುಗಳು ಪರಮ ವೈರಿಗಳಾದಾರು. ಸರಕಾರೀ ನೌಕರರಿಗೆ ವರ್ಗಾವಣೆಯ ಸಾಧ್ಯತೆ ಇದೆ. ಯಾಂತ್ರಿಕ ವೃತ್ತಿಯವರಿಗೆ ಮೇಲಧಿಕಾರಿಗಳಿಂದ ಅನಾವಶ್ಯಕ ಸಮಸ್ಯೆಗಳು ತೋರಿಬಂದಾವು. ರಾಜಕೀಯ ರಂಗದಲ್ಲಿ ಅಪಮಾನ, ಅವಮಾನ ಪ್ರಸಂಗ ಅನಾವಶ್ಯಕ ವೈಷಮ್ಯಕ್ಕೆ ಕಾರಣವಾದೀತು. ಶಾರೀರಿಕವಾಗಿ ಆಗಾಗ ಸಮಸ್ಯೆ ತಂದೀತು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರುತ್ಸಾಹ, ಉದಾಸೀನತೆಯಿಂದ ಹಿನ್ನಡೆ ತೋರಿಬಂದೀತು. ಕೆಲವೊಮ್ಮೆ ನಿರೀಕ್ಷಿತ ಫ‌ಲಿತಾಂಶಗಳು ತೊಂದರೆಯನ್ನು ತರುವ ಸಾಧ್ಯತೆ ಇರುತ್ತದೆ. ಸಾಡೇಸಾತಿ ಶನಿಯ ಪ್ರಭಾವದಿಂದ ಎಲ್ಲಾ ಕೆಲಸಕಾರ್ಯಗಳಲ್ಲಿ ಮಂದಗತಿಯ ಫ‌ಲಿತಾಂಶವಿರುತ್ತದೆ. ಉದರ ಸಂಬಂಧಿ, ನೀರಿನ ಮೂಲಕ ಕೆಲವು ಅನಾರೋಗ್ಯವನ್ನು ಅನುಭವಿಸುವಂತಾದೀತು. ಮುಖ್ಯವಾಗಿ ಪೂರ್ವಯೋಜಿತ ಕೆಲಸಕಾರ್ಯಗಳು ಸತತ ಪ್ರಯತ್ನದಿಂದ ಕೈಗೂಡಲಿವೆ. ಅಕ್ಟೋಬರ್‌ ತಿಂಗಳ ಅನಂತರ ಗುರುಬಲದ ಅನುಗ್ರಹದಿಂದ ಹೊಸ ತರದ ಸೃಷ್ಟಿ, ಚಿಂತನೆಗಳು ನಿರೀಕ್ಷಿತ ಫ‌ಲವನ್ನು ನೀಡಲಿವೆ. ಉದ್ಯೋಗರಂಗದಲ್ಲಿ ಮುನ್ನಡೆ ತೋರಿಬಂದು ನೆಮ್ಮದಿ ತಂದೀತು. ಏಕಾಗ್ರತೆಯಿಂದ ಕೆಲಸ ನಿರ್ಮಿಸಿದ್ದಲ್ಲಿ ನಿಮಗೆ ನಿಶ್ಚಿತ ಫ‌ಲಗಳು ದೊರಕುವುವು. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಯಶಸ್ಸು ನಿಮ್ಮದಾಗಲಿದೆ. ವಿವಿಧ ಮೂಲಗಳಿಂದ ಧನಾಗಮನ ತೋರಿಬರುತ್ತದೆ. ವ್ಯವಹಾರ ಪಾಲುದಾರಿಕೆಯಲ್ಲಿ ಪಾಲುದಾರರಾಗಬಹುದು. ವಿದ್ಯಾರ್ಥಿಗಳು ಕಲಿಕಾ ಮನೋಭಾವದಿಂದ ಮುನ್ನಡೆಯಲಿದ್ದಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಉಂಟಾಗಿ ಶಾಂತಿ, ಸಮಾಧಾನವು ಲಭಿಸಲಿದೆ. ಸಂಯಮ ಕಾಪಾಡಿಕೊಳ್ಳುವುದರಿಂದ ಅನಾವಶ್ಯಕ ತೊಂದರೆಗಳಿಂದ ಮುಕ್ತರಾಗುವಿರಿ.

 • ಧನು

  ಈ ಯುಗಾದಿಯ ಆರಂಭದಿಂದಲೇ ಏಳೂವರೆ ಶನಿ, ಅಷ್ಟಮದ ರಾಹು ಹಾಗೂ ದೈವಾನುಗ್ರಹವಿಲ್ಲದೆ ಹೆಜ್ಜೆಹೆಜ್ಜೆಗೂ ಕ್ಲೇಶವನ್ನು ಅನುಭವಿಸುವಂತಾದೀತು. ಕಾರ್ಯಕ್ಷೇತ್ರದಲ್ಲಿ ಅಪಜಯದ ಭೀತಿ ಮುನ್ನಡೆಯನ್ನು ತಡೆದೀತು. ಸಾಂಸಾರಿಕವಾಗಿ ಹಿರಿಯರ ಮಾತಿಗೆ ತಾಳ್ಮೆಯಿಂದ ಬೆಲೆ ಕೊಟ್ಟಲ್ಲಿ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಆಕಸ್ಮಿಕವಾಗಿ ಒದಗುವ ಅವಘಡ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯವಿದೆ. ಆರ್ಥಿಕವಾಗಿ ಹಳೇ ಬಾಕಿ ವಸೂಲಿಯ ಬಗ್ಗೆ ನಿಷ್ಠುರ ತಂದೀತು. ಭೂವ್ಯವಹಾರದಲ್ಲಿ ವಂಚನೆ, ಘರ್ಷಣೆಯ ಸಾಧ್ಯತೆ ಇದೆ. ಶುಭ-ಶೋಭನಾದಿ ಕೆಲಸ ಕಾರ್ಯಗಳಲ್ಲಿ ಆಗಾಗ ಅಡಚಣೆಗಳು ಕಂಡುಬಂದಾವು. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ವಿಳಂಬದಿಂದ ಧನವ್ಯಯವಾಗಲಿದೆ. ಉದ್ದಿಮೆಗಳಿಗೆ ಕಾರ್ಮಿಕ ವರ್ಗದವರ ಕಿರುಕುಳದಿಂದ, ಮುಷ್ಕರದಿಂದ ಕಷ್ಟನಷ್ಟಗಳು ಒದಗಿಬರಲಿವೆ. ದುಡುಕಿನ ನಿರ್ಧಾರದಿಂದ ಮೋಸ ಹೋಗುವ ಪ್ರಸಂಗ ಬಂದೀತು. ಸತತ ಕಠಿಣ ಪರಿಶ್ರಮ ವಹಿಸುವ ನಿಮಗೆ ಕೆಲವೊಮ್ಮೆ ಅತಂತ್ರ ನಿರ್ಣಯಗಳಿಂದ ಬೇಸರ ತರಲೂಬಹುದು. ಗೋಚರ ಫ‌ಲಗಳಲ್ಲಿ ಗ್ರಹಗಳ ಬದಲಾವಣೆಯಿಂದ ವಿಪರೀತ ನಿರೀಕ್ಷೆ ಇಟ್ಟುಕೊಳ್ಳಲು ಕಷ್ಟವಾಗುತ್ತದೆ. ಅಕ್ಟೋಬರ್‌ ಅನಂತರ ಸ್ವಕ್ಷೇತ್ರಾಧಿಪತಿಯಾದ ಗುರು ರಾಶಿಯಲ್ಲಿ ಸ್ಥಿರವಾಗುವ ಕಾರಣ ದೇವತಾನುಗ್ರಹದ ಬಲದಿಂದ ಕೆಲವೊಂದು ಕಠಿಣ ಕೆಲಸ ಕಾರ್ಯಗಳು ಕೂಡ ಸುಲಲಿತವಾಗಿ ನಡೆಯಲಿವೆ. ಸಂಸಾರದಲ್ಲಿ ಸುಖ, ಸಮೃದ್ಧಿ ತೋರಿಬಂದು ಹೊಸ ಜನರ ಸಂಪರ್ಕದಿಂದ ಕಾರ್ಯಸಾಧನೆಯಾದೀತು. ಆಗಾಗ ಧನಾಗಮನದಿಂದ ಸಂಪತ್ತಿನ ವೃದ್ಧಿ, ವೃತ್ತಿಯಲ್ಲಿ ಕೆಲಸ ಮಾಡುವ ಹುಮ್ಮಸ್ಸು ಜತೆಗೂಡಿ ಕಷ್ಟನಷ್ಟಗಳನ್ನು ನಿವಾರಿಸಿ ಮುನ್ನಡೆಯಲಿದ್ದೀರಿ. ಬಂದ ಅವಕಾಶಗಳನ್ನು ಸದುಪಯೋಗಿಸಿಕೊಂಡು ಹಾಗೇ ವೃದ್ಧಿಸಿಕೊಂಡಲ್ಲಿ ಯಶಸ್ಸು ನಿಶ್ಚಿತ. ವಿದೇಶ ಪ್ರಯಾಣ, ಪತ್ನಿ, ಪುತ್ರಾದಿಗಳಿಂದ ಸುಖ ಲಭಿಸಿ ಸಂತಸ ಕಾಣುವಿರಿ. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದಲ್ಲಿ ಯಶಸ್ಸು ಕಾಣು ವಂತಾದೀತು. ಕಷ್ಟಸುಖಗಳ ಸಮ್ಮಿಶ್ರ ಫ‌ಲವಿದ್ದರೂ ಕ್ರಿಯಾಶೀಲತೆ ಹಾಗೂ ಪ್ರಯತ್ನಶೀಲತೆಯಿಂದ ಕಾರ್ಯಸಾಧನೆಗೆ ಅನುಕೂಲ ವಾಗಲಿದೆ. ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಈ ಮಧ್ಯೆ ಕುಟುಂಬದಲ್ಲಿ ಬಾಕಿ ಉಳಿ ದಿದ್ದ ಶುಭಮಂಗಲ ಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನೆರವೇರುವುದು.

 • ಮಕರ

  ಈ ಯುಗಾದಿಯ ಆರಂಭದಿಂದಲೇ ಏಕಾದಶದ ಉತ್ತಮ ಸ್ಥಾನದಲ್ಲಿ ಸಂಚರಿಸುವುದರಿಂದ ಸಾಂಸಾರಿಕ ಜೀವನದ ಸಾಧನಾ ಸೌಕರ್ಯಗಳು ಹಿಂದಿನಕ್ಕಿಂತಲೂ ಹೆಚ್ಚಿನ ವ್ಯವಸ್ಥೆಯಲ್ಲಿ ತೋರಿಬರುತ್ತದೆ. ಸ್ವಪ್ರಯತ್ನದಿಂದ, ಆತ್ಮವಿಶ್ವಾಸದಿಂದ, ದೃಢ ನಿರ್ಧಾರದಿಂದ ನಡೆದುಕೊಂಡಲ್ಲಿ ನಿರೀಕ್ಷಿತ ಅಭಿವೃದ್ಧಿಯು ದಿನದಿಂದ ದಿನಕ್ಕೆ ಪ್ರವರ್ಧಮಾನಗೊಳ್ಳುತ್ತಾ ಹೋಗಲಿದೆ. ಹಿತಶತ್ರುಗಳಿಂದ, ಕೆಲವೊಮ್ಮೆ ಪರಕೀಯರಿಂದ ಒದಗುವ ವಂಚನೆಗಳಿಂದ ವ್ಯವಹಾರ ಕ್ಷೇತ್ರದಲ್ಲಿ ಆರ್ಥಿಕ ಕಷ್ಟನಷ್ಟಗಳು ಉಂಟಾಗಬಹುದು. ಈ ಮಧ್ಯೆ ಶನಿಯ ಪ್ರತಿಕೂಲತೆಯಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಿದೆ. ವಾಹನಾದಿ ಅಪಘಾತದ ಬಗ್ಗೆ ತೀವ್ರ ಎಚ್ಚರವಿರಲಿ. ರಾಜಕೀಯ, ಸಾಮಾಜಿಕ, ಕ್ಷೇತ್ರದ ವರಿಷ್ಠರಿಗೆ ಅನಿರೀಕ್ಷಿತ ರೂಪದಲ್ಲಿ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಆಡಳಿತ, ಉದ್ಯಮದಲ್ಲಿರುವವರಿಗೆ ಮುಂಭಡ್ತಿ ದೊರಕಲಿದೆ. ಜವಾಬ್ದಾರಿ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಹಿತಶತ್ರುಗಳ ಮತ್ಸರದ ಪ್ರವೃತ್ತಿಯು ಕೆಲವೊಮ್ಮೆ ತೊಂದರೆ ಕೊಟ್ಟರೂ ಎದುರಿಸುವ ಶಕ್ತಿ ನಿಮ್ಮದಾಗಲಿದೆ. ಉನ್ನತ ವ್ಯಾಸಂಗ, ಪ್ರತಿಭಾ ಪರೀಕ್ಷೆಗಳಲ್ಲಿ ತೊಡಗಿರುವವರಿಗೆ ಯಶಸ್ಸು ನಿರೀಕ್ಷಿತವಾಗಿ ಕೈಸೇರಲಿದೆ. ಸ್ಥಿರಾಸ್ತಿ ಮಾರಾಟದಿಂದ ಋಣಬಾಧೆ ನಿವಾರಣೆಯಾಗಲಿದೆ. ಧಾರ್ಮಿಕ ಪ್ರವಚನಕಾರರಿಗೆ, ಸಾಹಿತಿ ಕಲಾವಿದರಿಗೆ ತಮ್ಮ ಕ್ರಿಯಾಶೀಲತೆಯ ಫ‌ಲ ದೊರಕಲಿದೆ. ಮನದನ್ನೆಯ ಆರೋಗ್ಯ ಭಾಗ್ಯದ ಬಗ್ಗೆ ಆಗಾಗ ಯೋಚಿಸುವಂತಾದೀತು. ವೃತ್ತಿರಂಗದಲ್ಲಿ ಕಾಲೋಚಿತ ವರ್ತನೆ ಹಾಗೂ ನಡೆನುಡಿಗಳಿಂದ ನಿಮ್ಮ ಸ್ಥಾನಮಾನಗಳನ್ನು ಭದ್ರಪಡಿಸಿಕೊಳ್ಳಬೇಕಾದೀತು. ಆಗಾಗ ವಿದೇಶ ಯಾನದಿಂದ ಕಾರ್ಯಸಾಫ‌ಲ್ಯವನ್ನು ಪಡೆದರೂ ದೇಹಾರೋಗ್ಯದ ಬಗ್ಗೆ ಗಮನ ಹರಿಸುವಂತಾದೀತು. ಮನೆಯಲ್ಲಿ ಎಲ್ಲಾ ರೀತಿಯ ಶುಭಮಂಗಲ ಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆಯಲಿವೆ. ಮಹಣ್ತೀದ ನಿರ್ಧಾರಗಳಲ್ಲಿ ಮುನ್ನಡೆ ತೋರಿಬರಲಿದೆ. ಪಾಲುದಾರಿಕೆಯಿಂದ ಹೊಸ ವ್ಯವಹಾರ ಆರಂಭವಾದೀತು. ಕೋರ್ಟು ಕಚೇರಿಗಳ ನ್ಯಾಯವಾದಿಗಳಿಗೆ ನಿರೀಕ್ಷಿತ ಲಾಭವಿದೆ. ಹಾಗೇ ಶೇರು, ಫೈನಾನ್ಸ್‌ ವ್ಯವಹಾರದಲ್ಲಿ ಜಾಗ್ರತೆ ವಹಿಸಿರಿ. ಅಕ್ಟೋಬರ್‌ ತಿಂಗಳ ಅನಂತರ ಗುರುಬಲವು ಕ್ಷೀಣವಾದರೂ ಲಾಭಸ್ಥಾನದ ರಾಹುವಿನಿಂದ ಅನಿರೀಕ್ಷಿತ ರೂಪದಿಂದ ನಿಮ್ಮ ಕಾರ್ಯಸಾಧನೆಯಾಗಲಿದೆ. ದೃಢ ಮನೋಭಾವದಿಂದ ಮುಂದುವರಿಯಿರಿ.

 • ಕುಂಭ

  ಈ ಯುಗಾದಿಯ ಆರಂಭದಿಂದಲೇ ಸ್ವಗ್ರಹದ ಶನಿ ಲಾಭಸ್ಥಾನದಲ್ಲಿದ್ದು ಇಷ್ಟಾನಿಷ್ಟ ಲಾಭಲಾಭಾದಿಗಳು ತೋರಿಬಂದು ಆರ್ಥಿಕವಾಗಿ ಉನ್ನತಿ ಕಂಡುಬರಲಿದೆ. ವಾಹನ ಖರೀದಿ, ಭೂಖರೀದಿಗಳಿಗೆ ಅನುಕೂಲವಾಗಲಿದೆ. ವೃತ್ತಿರಂಗದಲ್ಲಿರಲೀ, ಸಾಮಾಜಿಕ ಕ್ಷೇತ್ರದಲ್ಲಿರಲೀ ಅನಗತ್ಯ ವಾದ-ವಿವಾದಗಳಿಗೆ ಕಾರಣರಾಗದೆ ಮುನ್ನಡೆಯುವುದು ಅತೀ ಅಗತ್ಯವಿದೆ. ಕೌಟುಂಬಿಕ ಸಮಸ್ಯೆಗಳು ಆಗಾಗ ಕಲಹಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಇಷ್ಟರೊಡನೆ ನಿಷ್ಠುರರಾಗಿ ಮಾನಸಿಕವಾಗಿ ಅಂತರ್ಮುಖೀಯಾಗಿ ಕಾಲಕ್ಷೇಪ ಮಾಡುವ ಕಾಲವಾದೀತು. ಆರೋಗ್ಯದ ಬಗ್ಗೆ ಹಳೇ ಕಾಯಿಲೆಗಳು ಮರುಕಳಿಸಬಹುದು. ಕಾಳಜಿ ವಹಿಸಿದಷ್ಟು ಉತ್ತಮ. ವಿದ್ಯಾರ್ಥಿಗಳು ಕೊಂಚ ಹಿನ್ನಡೆಯನ್ನು ಅನುಭವಿಸಲಿದ್ದಾರೆ. ನೆರೆಹೊರೆಯವರಿಂದ ಅವಮಾನದ ಪ್ರಸಂಗ ಎದುರಾದೀತು. ಉದ್ಯೋಗ ಕ್ಷೇತ್ರದಲ್ಲಿ ಹಾಗೂ ಸ್ವಉದ್ಯೋಗಿಗಳಿಗೆ ಪರಿಶ್ರಮಕ್ಕೆ ತಕ್ಕ ಫ‌ಲವಿರುತ್ತದೆ. ಲೋಹ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ. ಸಾರಿಗೆ, ಸಂಚಾರ ವ್ಯವಹಾರಸ್ಥರಿಗೆ ಉತ್ತಮ ಲಾಭ ತಂದುಕೊಡಲಿದೆ. ಮನಸ್ತಾಪಗಳು ಸಂಧಾನದಿಂದ ಬಗೆಹರಿಯಲ್ಪಡುತ್ತವೆ. ಆಹಾರ, ವಿಚಾರಗಳಲ್ಲಿ ಶಿಸ್ತುಬದ್ಧರಾಗಿದ್ದರೂ ಕೆಲವೊಂದು ಘಟನೆಗಳು ಮನಸ್ಸನ್ನು ನೋಯಿಸಲಿವೆ. ಅಕ್ಟೋಬರ್‌ ಅನಂತರ ಏಕಾದಶದ ಗುರು, ಏಕಾದಶದ ಕೇತು, ಏಕಾದಶದ ಶನಿಗ್ರಹಗಳ ಯುತಿಯಿಂದ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಯೋಗ್ಯ ವಯಸ್ಕರಿಗೆ ನವೋಲ್ಲಾಸ ತರುವ ಸಂವತ್ಸರವಾಗಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬಂದು ಹೊಸ ವ್ಯವಹಾರಗಳನ್ನು ಆರಂಭಿಸಲು ಅನುಕೂಲವಾಗುವುದು. ಸಾಂಸಾರಿಕವಾಗಿ, ಕೌಟುಂಬಿಕವಾಗಿ ಬಾಂಧವ್ಯ ವೃದ್ಧಿಯಾಗುವುದಲ್ಲದೆ, ಅಲ್ಲಸಲ್ಲದ ಆರೋಪಗಳಿಂದ ವಿಮುಕ್ತಿ ಹೊಂದುವಿರಿ. ಕಳೆದ ವರ್ಷ ಪ್ರಾರಂಭಿಸಿದ ಕಾರ್ಯಗಳು ಉತ್ತಮ ಫ‌ಲವನ್ನಿತ್ತು ಅದೃಷ್ಟದ ಬಾಗಿಲು ತೆರೆಯಲಿದೆ. ಸ್ವಂತ ವ್ಯವಹಾರದಲ್ಲಿ ದ್ವಿಗುಣ ಲಾಭವಿದೆ. ಆದರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಷ್ಟೂ ಉತ್ತಮ. ಅವಿವಾಹಿತರ ವಿವಾಹ ಪ್ರಸ್ತಾವಗಳು ವೈವಾಹಿಕ ಭಾಗ್ಯಕ್ಕೆ ಸಾಧಕವಾಗಲಿದೆ. ಮನೆಯವರ ಬೇಡಿಕೆಗಳು ಈಡೇರಲಿವೆ. ಮುಖ್ಯವಾಗಿ ನಿಮ್ಮ ಪ್ರಯತ್ನಬಲ, ದೃಢನಿರ್ಧಾರಗಳು ಎಲ್ಲಾ ವಿಚಾರದಲ್ಲಿ ಪೂರಕವಾಗಿ ಬಹುತೇಕ ಶುಭ ಫ‌ಲಗಳು ಯಶಸ್ಸನ್ನು ನೀಡಲಿವೆ. ಉತ್ತಮ ಹೆಸರು, ಗಳಿಕೆಯ ಅವಕಾಶವು ಒದಗಿ ಬಂದೀತು.

 • ಮೀನ

  ಈ ಯುಗಾದಿಯ ಆರಂಭದಿಂದ ಮನೋಚಾಂಚಲ್ಯದ ಹೆಸರಾದ ನಿಮಗೆ ಉತ್ತಮ ಗುರುಬಲವಿದ್ದು ಶ್ರೀದೇವರ ಅನುಗ್ರಹದಿಂದ ಎಲ್ಲವನ್ನು ಎದುರಿಸುವ ಶಕ್ತಿ ಪಡೆಯಲಿದ್ದೀರಿ. ಆಗಾಗ ಆರ್ಥಿಕ ಸ್ಥಿತಿಯಲ್ಲಿ ತೊಂದರೆಗಳಿದ್ದರೂ, ಅದೇ ರೀತಿಯಲ್ಲಿ ವಿವಿಧ ರೂಪದಲ್ಲಿ ಧನಾಗಮನವಿರುತ್ತದೆ. ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಸ್ಥಿರತೆ, ವ್ಯಾಪಾರ, ವ್ಯವಹಾರದಲ್ಲಿ ಯಶಸ್ಸು, ಸಾಂಸಾರಿಕ ಸಮಸ್ಯೆಗಳ ಪರಿಹಾರ ಕಂಡುಬರುತ್ತದೆ. ಶುಭವಾರ್ತಾ ಶ್ರವಣ ಭಾಗ್ಯದಿಂದ ಸಂತಸ ತಂದೀತು. ಧಾರ್ಮಿಕ ಪ್ರವೃತ್ತಿಯವರಿಗೆ ಇದು ಸಕಾಲ. ರಾಜಕೀಯ ಹೋರಾಟದಲ್ಲಿ ರಾಜಕೀಯ ಮುಖಂಡರಿಗೆ ಮುನ್ನಡೆ. ಲೇವಾದೇವಿ ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಕುಟುಂಬ ವರ್ಗದವರಿಂದ ಸಹಕಾರ, ಸ್ಫೂರ್ತಿ, ಹೊಸ ಚಿಂತನೆಗಳ ಅನುಷ್ಠಾನಕ್ಕೆ ಸಾಧಕವಾದೀತು. ಅನಿರೀಕ್ಷಿತ ಶುಭ ವಾರ್ತೆಗಳ ಭಾಗ್ಯವಿದೆ. ನಿಮಗೆ ಇಷ್ಟವೆನಿಸಿದ ಕೆಲಸಕಾರ್ಯಗಳಲ್ಲಿ ಮುನ್ನಡೆಯುವುದು ಉತ್ತಮ. ಕೆಲವೊಂದು ಸಾಂಸಾರಿಕ ಮನಸ್ತಾಪಗಳು ಬಗೆಹರಿದು ಸಂತಸಗೊಳ್ಳುವಿರಿ. ಈ ವರ್ಷ ಅದೃಷ್ಟದ ಪ್ರಮಾಣ ಜಾಸ್ತಿ ಎನಿಸಲಿದೆ. ಲಾಟರಿ, ಶೇರು ಇತ್ಯಾದಿಗಳ ಬಗ್ಗೆ ಹೆಚ್ಚಿನ ಧನ ವ್ಯಯವಾಗದಂತೆ ಜಾಗ್ರತೆ ವಹಿಸಿರಿ. ಆಹಾರದ ಸೇವನೆಯಿಂದ ಉದರಪೀಡೆ ತಂದೀತು. ಒಮ್ಮೊಮ್ಮೆ ಮಾಡಬಾರದ ಕಾರ್ಯವೆಸಗಿ ತೊಂದರೆಗೊಳಗಾಗುವಿರಿ. ಕೃಷಿ, ತೋಟ, ಬೇಸಾಯಗಾರರಿಗೆ ಉತ್ತಮ ಲಾಭ ಸಿಗಲಿದೆ. ಆರ್ಥಿಕವಾಗಿ ಕೊಟ್ಟುಕೊಳ್ಳುವಿಕೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಉದ್ಯೋಗದಲ್ಲಿ ಬಾಕಿ ಇರುವ ಪದೋನ್ನತಿಯು ಶೀಘ್ರವೇ ದೊರಕಲಿದೆ. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಅನಿರೀಕ್ಷಿತ ಫ‌ಲ ಸಿಗಲಿದೆ. ಪ್ರೇಮಿಗಳ ಪ್ರೇಮ ಪ್ರಸಂಗ ಕಂಕಣಬಲಕ್ಕೆ ಅನುಕೂಲವಾಗಲಿದೆ. ವೃತ್ತಿ, ಉದ್ಯೋಗದಲ್ಲಿ ಸ್ಪರ್ಧೆ, ಬದಲಾವಣೆ ಕಂಡುಬಂದೀತು. ಉದ್ಯೋಗಸ್ಥರಿಗೆ ವಿದೇಶ ಸಂಚಾರದ ಯೋಗವಿದೆ. ಹಿರಿಯರಿಗೆ ಗುರುಹಿರಿಯರ ದರ್ಶನ ಭಾಗ್ಯದಿಂದ ಶಾಂತಿ, ಸಮಾಧಾನ ಸಿಗಲಿದೆ. ಧಾರ್ಮಿಕ ಪ್ರವೃತ್ತಿಯವರಿಗಿದು ಸಕಾಲ. ಅಕ್ಟೋಬರ್‌ ಅನಂತರ ದೈವಬಲ ಕ್ಷೀಣವಾಗಿ ಆಹಾರ, ವಿಹಾರಗಳಲ್ಲಿ ನಿರಾಸಕ್ತಿ, ದಾಯಾದಿಗಳ ಶತ್ರುಪೀಡೆಯಿಂದ ಆತಂಕ ತರಲಿದೆ. ಕೆಲವೊಂದು ದುಡುಕಿನ ನಿರ್ಧಾರದಿಂದ ಕೆಟ್ಟ ಹೆಸರನ್ನು ಪಡೆಯುವ ಸಂದರ್ಭ ಬಂದೀತು. ಅನಗತ್ಯ ವಿಚಾರದಲ್ಲಿ ತೊಂದರೆಗೆ ಸಿಲುಕದಂತೆ ಜಾಗ್ರತೆ ವಹಿಸಿರಿ. ಒಟ್ಟಿನಲ್ಲಿ ಮಿಶ್ರ ಫ‌ಲದಾಯಕ ವರ್ಷವಾದೀತು.

Personalized Reports

Udayavani
Career & Business Horoscope Report @ Rs.2499/- Buy Now!!
Udayavani
Education Horoscope Report @ Rs.999/- Buy Now!!
Udayavani
Gem Recommendation Report @ Rs.499/- Buy Now!!
Udayavani
In-depth Combo Horoscope Report @ Rs.1299/- Buy Now!!
Udayavani
In-depth Horoscope Report @ Rs.999/- Buy Now!!
Udayavani
Jupiter Transit Report @ Rs.1499/- Buy Now!!
Udayavani
Marriage Horoscope Report @ Rs.520/- Buy Now!!
Udayavani
Numerology Report @ Rs.499/- Buy Now!!
Udayavani
Rahu-Ketu Transit Report @ Rs.699/- Buy Now!!
Udayavani
Saturn Transit Report @ Rs.1099/- Buy Now!!
Udayavani
Super Horoscope Report @ Rs.1500/- Buy Now!!
Udayavani
Wealth Horoscope Report @ Rs.350/- Buy Now!!
Udayavani
2020 Yearly Horoscope Report @ Rs.699/- Buy Now!!


ಹೊಸ ಸೇರ್ಪಡೆ

ಭದ್ರಾವತಿ: 54ಕ್ಕೂ ಅಧಿಕ ಮಂದಿಗೆ ಕೋವಿಡ್‌

ಭದ್ರಾವತಿ: 54ಕ್ಕೂ ಅಧಿಕ ಮಂದಿಗೆ ಕೋವಿಡ್‌

ರೈತನೇ ಸರ್ಟಿಫಿಕೇಟ್‌ ಕೊಡುವ ಕಾಲ ಬಂದಿದೆ

ರೈತನೇ ಸರ್ಟಿಫಿಕೇಟ್‌ ಕೊಡುವ ಕಾಲ ಬಂದಿದೆ

ಆಂಬ್ಯುಲೆನ್ಸ್‌ ಕೊರತೆ-ಸೋಂಕಿತ ಸಾವು

ಆಂಬ್ಯುಲೆನ್ಸ್‌ ಕೊರತೆ-ಸೋಂಕಿತ ಸಾವು

ಒಂದು ಸಾವು -80 ಮಂದಿಗೆ ಸೋಂಕು

ಒಂದು ಸಾವು -80 ಮಂದಿಗೆ ಸೋಂಕು

love

ಗಡ್ಡಧಾರಿಯಾಗಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್-2 ಚಿತ್ರದ ಫಸ್ಟ್ ಲುಕ್ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.