
ಕಚ್ಚೇತೀವು ದ್ವೀಪ ಯಾರಿಗೆ? ಭಾರತ- ಶ್ರೀಲಂಕಾ ನಡುವೆ ಮುಗಿಯದ ವಿವಾದ
Team Udayavani

1974ರಿಂದ 76ರ ವರೆಗೆ ನಡೆದ ಭಾರತ ಪ್ರಧಾನಿ ಇಂದಿರಾ ಗಾಂಧಿ ಮತ್ತು ಶ್ರೀಲಂಕಾ ಪ್ರಧಾನಿ ಸಿರಿಮಾವೋ ಬಂಡಾರನಾಯಕೆ ಅವರ ಮಾತುಕತೆ ವೇಳೆಯಲ್ಲೇ ಈ ದ್ವೀಪದ ವಿವಾದ ಒಂದು ರೀತಿಯಲ್ಲಿ ಇತ್ಯರ್ಥವಾದರೆ, ಮತ್ತೂಂದು ರೀತಿಯಲ್ಲಿ ಉಗಮವಾಯಿತು. ಅಂದರೆ, ಲಂಕಾ ಕಡೆಯಿಂದ ಈ ಒಪ್ಪಂದಕ್ಕೆ ಯಾವುದೇ ಪ್ರತಿರೋಧ ಬರಲಿಲ್ಲ. ಆದರೆ, ಆಗಲೇ ತಮಿಳುನಾಡಿನ ಸರಕಾರ ಮತ್ತು ಮೀನುಗಾರರು ಈ ಒಪ್ಪಂದಕ್ಕೆ ತೀವ್ರ ಆಕ್ಷೇಪವೆತ್ತಿದರು. ಅಲ್ಲದೆ ಆಗ ಈ ದ್ವೀಪವನ್ನೇ ಗುರುತಾಗಿರಿಸಿಕೊಂಡು ಮೆರಿಟೈಮ್ ಬೌಂಡರಿಯನ್ನೂ ಮಾಡಲಾಯಿತು. ಇದಾದ ಮೇಲೆ ಈ ವಿವಾದ ಇನ್ನಷ್ಟು ತೀವ್ರಗೊಂಡಿತು. ಏಕೆಂದರೆ, ಈ ದ್ವೀಪದಾಟಿ ಭಾರತೀಯ ಮೀನುಗಾರರು ಮೀನು ಹಿಡಿಯುವಂತಿಲ್ಲ ಎಂಬ ನಿಯಮ ರೂಪಿಸಲಾಯಿತು. ಅಲ್ಲದೆ, ಭಾರತೀಯ ಮೀನುಗಾರರು ಈ ದ್ವೀಪವನ್ನು ಕೇವಲ ವಿಶ್ರಾಂತಿ ತೆಗೆದುಕೊಳ್ಳಲು, ಮೀನು ಹಿಡಿಯುವ ಬಲೆ ಒಣಗಿಸಿಕೊಳ್ಳಲು ಮಾತ್ರ ಉಪಯೋಗಿಸಿಕೊಳ್ಳಬೇಕು ಮತ್ತು ಸೆಂಟ್ ಆ್ಯಂಟನಿ ಹಬ್ಬದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು. ಇದಾದ ಮೇಲೂ ಅಸಮಾಧಾನದಿಂದ ಇದ್ದರೂ ಭಾರತೀಯ ಮೀನುಗಾರರು ತಂಟೆ ತಕರಾರಿಲ್ಲದೇ ಸುಮ್ಮನಿದ್ದರು. ಆದರೆ ಭಾರತದ ಗಡಿಯೊಳಗೆ ಇದ್ದ ಸಮುದ್ರದಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಯಿತು...
ಟಾಪ್ ನ್ಯೂಸ್
