Editorial: ರೆಪೊ ದರದಲ್ಲಿ ಯಥಾಸ್ಥಿತಿ: ಆರ್‌ಬಿಐ ಜಾಣ್ಮೆಯ ನಡೆ


Team Udayavani, Apr 6, 2024, 12:34 PM IST

7-rbi

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಸಕ್ತ ಆರ್ಥಿಕ ಸಾಲಿನ ಮೊದಲ ಹಣ ಕಾಸು ನೀತಿಯನ್ನು ಶುಕ್ರವಾರ ಪ್ರಕಟಿಸಿದ್ದು, ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಸತತ ಏಳನೇ ಬಾರಿಗೆ ಆರ್‌ಬಿಐ ರೆಪೊ ದರವನ್ನು ಶೇ. 6.5ರಲ್ಲಿಯೇ ಮುಂದುವರಿಸುವ ಮೂಲಕ ಎಚ್ಚರಿಕೆಯ ನಡೆಯನ್ನು ಇರಿಸಿದೆ. 2023ರ ಫೆಬ್ರವರಿಯಲ್ಲಿ ಆರ್‌ ಬಿಐ ರೆಪೊ ದರದಲ್ಲಿ ಬದಲಾವಣೆ ಮಾಡಿತ್ತು.

ಚಿಲ್ಲರೆ ಹಣದುಬ್ಬರವನ್ನು ಶೇ. 4ರ ಗಡಿಯಲ್ಲಿರಿಸುವ ಗುರಿಯನ್ನು ಆರ್‌ ಬಿಐ ಹಾಕಿಕೊಂಡಿದ್ದು ಫೆಬ್ರವರಿಯಲ್ಲಿ ಆಹಾರ ವಸ್ತುಗಳ ಬೆಲೆಯಲ್ಲಿನ ಹೆಚ್ಚಳದಿಂದಾಗಿ ಹಣದುಬ್ಬರ ದರ ಶೇ. 5.1ರಷ್ಟಾಗಿತ್ತು. ಇನ್ನು ಜೂನ್‌ವರೆಗೆ ದೇಶದೆಲ್ಲೆಡೆ ತಾಪಮಾನ ಅಧಿಕವಾಗಿರುವುದರಿಂದ ತರಕಾರಿ ಸಹಿತ ಆಹಾರ ಪದಾರ್ಥಗಳ ಬೆಲೆ ಏರುಗತಿಯಲ್ಲಿರುವ ಸಾಧ್ಯತೆಗಳು ದಟ್ಟವಾಗಿರುವುದು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಆರ್‌ಬಿಐನ ಹಣ ಕಾಸು ನೀತಿ ಪರಾಮರ್ಶೆ ಸಮಿತಿ(ಎಂಪಿಸಿ) ಈ ನಿರ್ಧಾರವನ್ನು ಕೈಗೊಂಡಿದೆ. ತನ್ಮೂಲಕ ದೇಶದ ಆರ್ಥಿಕ ಪ್ರಗತಿ ಮತ್ತು ಸ್ಥಿರತೆಗೆ ಹೆಚ್ಚಿನ ಒತ್ತನ್ನು ನೀಡಿದೆ.

ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಪ್ರಗತಿ ಪಥದಲ್ಲಿ ಮುನ್ನಡೆದಿದೆಯಾದರೂ ಸದ್ಯದ ಸ್ಥಿತಿಯಲ್ಲಿ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಿದಲ್ಲಿ ಆರ್ಥಿಕ ಪ್ರಗತಿಯ ನಾಗಾಲೋಟಕ್ಕೆ ತಡೆಯಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂಬ ತೀರ್ಮಾನಕ್ಕೆ ಎಂಪಿಸಿ ಬಂದಿದೆ. ಆರ್ಥಿಕ ತಜ್ಞರು ಮತ್ತು ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆ ಕೂಡ ಇದೇ ಆಗಿತ್ತು.

ಆರ್‌ಬಿಐ ಗವರ್ನರ್‌ ಈ ನಿರ್ಧಾರ ಪ್ರಕಟಿಸಿದ ಬಳಿಕ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದ್ದು, ರೂಪಾಯಿ ಮೌಲ್ಯವೂ ಏರಿಕೆಯಾಗಿದೆ. ದೇಶದ ಆರ್ಥಿಕ ವ್ಯವಸ್ಥೆ, ಪ್ರಗತಿ, ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುತ್ತಿರುವ ಚೇತರಿಕೆಯ ವಾತಾವರಣ, ಹಣದುಬ್ಬರ ನಿಯಂತ್ರಣದಲ್ಲಿರುವುದು ಸಹಿತ ಎಲ್ಲ ಸಕಾರಾತ್ಮಕ ಬೆಳವಣಿಗೆಗಳ ಕಾರಣದಿಂದಾಗಿ ಆರ್‌ಬಿಐ ಈ ಬಾರಿಯಾದರೂ ರೆಪೊ ದರದಲ್ಲಿ ಒಂದಿಷ್ಟು ಇಳಿಕೆ ಮಾಡುವ ಮೂಲಕ ಸಾಲಗಾರರಿಗೆ ಅದರಲ್ಲೂ ಮುಖ್ಯವಾಗಿ ಗೃಹ ಸಾಲಗಾರರ ನೆರವಿಗೆ ಬಂದೀತು ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ. ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದಾಗಿ ಸಾಲದ ಕಂತು ಮತ್ತು ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಾಗದು.

ಏತನ್ಮಧ್ಯೆ ಎಂಪಿಸಿ ಹಾಲಿ ಸಭೆಯಲ್ಲಿ ದೇಶೀಯ ಮತ್ತು ಜಾಗತಿಕ ಆರ್ಥಿಕ ಪರಿ ಸ್ಥಿತಿ ಕುರಿತಂತೆಯೂ ಚರ್ಚೆ ನಡೆಸಿದ್ದು, ಆ ಬಳಿಕವೇ ಈ ಎಚ್ಚರಿಕೆಯ ಮತ್ತು ಚಾಣಾಕ್ಷ ನಡೆಯನ್ನು ಇರಿಸಿದೆ. ಇದೇ ವೇಳೆ ಆರ್‌ಬಿಐ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, ಡಿಜಿಟಲ್‌ ವ್ಯವಹಾರಕ್ಕೆ ಇನ್ನಷ್ಟು ಉತ್ತೇಜನ ನೀಡಲು ಮುಂದಾಗಿದೆ.

ಚಿಲ್ಲರೆ ನೇರ ಹೂಡಿಕೆದಾರರಿಗೆ ಹೊಸ ಮೊಬೈಲ್‌ ಆ್ಯಪ್‌, ನಗದು ಠೇವಣಿಗಾಗಿ ಯುಪಿಐ ಬಳಕೆ ಮತ್ತಿತರ ಯೋಜನೆಗಳನ್ನು ಪ್ರಕಟಿಸಿದೆ. ಒಟ್ಟಿನಲ್ಲಿ ಆರ್‌ಬಿಐ ದೇಶ ಮತ್ತು ಜಾಗತಿಕ ಆರ್ಥಿಕ ದಿಗ್ಗಜ ರಾಷ್ಟ್ರಗಳ ಹಣಕಾಸು ವ್ಯವಸ್ಥೆ, ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸಿ ಯಾವುದೇ ದಿಢೀರ್‌ ಲಾಭದಾಯಕವಾದ ನಿರ್ಧಾರಕ್ಕೆ ಶರಣಾಗದೆ ದೇಶದ ಆರ್ಥಿಕ ಭವಿಷ್ಯವನ್ನು ಗಮನದಲ್ಲಿರಿಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಮುಂಗಾರು ಋತುವಿನಲ್ಲಿನ ವಿದ್ಯಮಾನಗಳನ್ನು ಅವಲೋಕಿಸಿ ಆಗಸ್ಟ್‌ ವೇಳೆಗಷ್ಟೇ ರೆಪೊ ದರದಲ್ಲಿ ಬದಲಾವಣೆಯನ್ನು ಮಾಡಲು ಚಿಂತನೆ ನಡೆಸಿರುವುದು ಸುಸ್ಪಷ್ಟ.

Ad

ಟಾಪ್ ನ್ಯೂಸ್

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

BJP Karnataka: We are not bigger than the party….: Kumar Bangarappa

BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

10-

Madikeri: ಹಸು, ಎಮ್ಮೆಗಳ ಕಳ್ಳತನ : ನಾಲ್ವರು ಆರೋಪಿಗಳ ಬಂಧನ

Mangaluru: ಮಳಿಗೆಯಿಂದ 3.30 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Mangaluru: ಮಳಿಗೆಯಿಂದ 3.30 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

13 IAS officers including D.Kannada CEO transferred

IAS Transfer: ದ.ಕನ್ನಡ ಜಿಲ್ಲಾ ಸಿಇಒ ಸೇರಿ 13 ಐಎಎಸ್‌ ಅಧಿಕಾರಿಗಳ ವರ್ಗಾವಣೆ

9-train

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಪ್ರಯತ್ನ; ಸೋಮಣ್ಣ ನೇತೃತ್ವದ ಸಭೆಯಲ್ಲಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water

Editorial: ಜಲಗಣತಿ ದೇಶದ ನೀರಾವರಿ ಸಮಸ್ಯೆಗೆ ಪರಿಹಾರ ಸೂಚಿಸಲಿ

9

Editorial: ಗ್ರಾಮೀಣ ಸರಕಾರಿ ಸಾರಿಗೆ ವ್ಯವಸ್ಥೆ ಶೀಘ್ರ ಸುಧಾರಣೆಯಾಗಲಿ

1

ನಗರ ಭಾಗದಲ್ಲಿ ಎಸ್‌ಟಿಪಿಗಳ ಅನುಷ್ಠಾನಕ್ಕೆ ನಿರ್ದೇಶನ ಅಗತ್ಯ

heart attack

ಯುವ ಹೃದಯಗಳಿಗೆ ಆಘಾತ ಪ್ರಾಮಾಣಿಕ ಅಧ್ಯಯನ ನಡೆಯಲಿ

China

ಭಾರತದ ಪ್ರಗತಿಯ ನಾಗಾಲೋಟ ತಡೆಯಲು ಚೀನದಿಂದ ಷಡ್ಯಂತ್ರ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

hun-Arrest

ರಸ್ತೆಯಲ್ಲಿ ವ್ಹೀಲಿಂಗ್‌, ಲಾಂಗ್‌ ಹಿಡಿದು ರೀಲ್ಸ್‌: ಯುವಕ ಬಂಧನ

BJP Karnataka: We are not bigger than the party….: Kumar Bangarappa

BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

22

Mangaluru: ಕೆಲಸಕ್ಕೆ ಹೋದವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.