ಚರಿತ್ರೆ-ವರ್ತಮಾನ-ಭವಿಷ್ಯದ ಕೊಂಡಿ ಹಳೆ ಸಂಸತ್‌ ಭವನ


Team Udayavani, Sep 19, 2023, 6:00 AM IST

ಚರಿತ್ರೆ-ವರ್ತಮಾನ-ಭವಿಷ್ಯದ ಕೊಂಡಿ ಹಳೆ ಸಂಸತ್‌ ಭವನ

ಭಾರತದ ಚರಿತ್ರೆಯಲ್ಲಿ ಹಲವಾರು ಐತಿಹಾಸಿಕ ಘಟನೆ, ಕ್ಷಣಗಳಿಗೆ ಸಾಕ್ಷಿಯಾಗಿದ್ದ ಹಳೆಯ ಸಂಸತ್‌ ಭವನಕ್ಕೆ ಸೋಮವಾರ ವಿದಾಯ ಹೇಳ ಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಅಧಿವೇಶನದ ಆರಂಭದಲ್ಲಿ ಸದನವನ್ನುದ್ದೇಶಿಸಿ ಮಾಡಿದ ಭಾಷಣದ ಸಂದರ್ಭದಲ್ಲೂ ಐತಿಹಾಸಿಕ ಮತ್ತು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿದ್ದ ಹಳೆಯ ಸಂಸತ್‌ ಭವನದ ಬಗೆಗೆ ಭಾವನಾತ್ಮಕವಾಗಿಯೇ ವಿವರಿಸಿದರು.

ಕೇಂದ್ರ ಸರಕಾರ ಕರೆದಿರುವ ವಿಶೇಷ ಸಂಸತ್‌ ಅಧಿವೇಶನದ ಮೊ ದಲ ದಿನವಾದ ಸೋಮವಾರದಂದು ಉಭಯ ಸದನಗಳ ಕಲಾಪಗಳು ಹಳೆ ಸಂಸತ್‌ ಭವನದಲ್ಲಿಯೇ ನಡೆದಿದ್ದು ಮಂಗಳವಾರ ಹೊಸ ಸಂಸತ್‌ ಭವನದಲ್ಲಿ ಕಲಾಪಗಳು ನಡೆಯಲಿವೆ. ತನ್ಮೂಲಕ 96 ವರ್ಷಗಳ ಇತಿಹಾಸವುಳ್ಳ, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯಂತಿದ್ದ ಪ್ರಾಚೀನ ಕಟ್ಟಡ ಇನ್ನು ಇತಿಹಾಸದ ಪುಟ ಸೇರಲಿದೆ.

ಹಳೆ ಸಂಸತ್‌ ಭವನವನ್ನು ರಾಷ್ಟ್ರೀಯ ವಸ್ತು ಸಂಗ್ರಹಾಗಾ ರವ ನ್ನಾಗಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಕಟ್ಟಡದ ದುರಸ್ತಿ ಕಾರ್ಯ ಗಳು ಪೂರ್ಣಗೊಂಡ ಬಳಿಕ ಈ ಕಟ್ಟಡದಲ್ಲಿ ದೇಶದ ಪುರಾತನ ಮತ್ತು ಸೂಕ್ಷ್ಮ ವಸ್ತುಗಳನ್ನು ಸಂರಕ್ಷಿಸಿಡಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಸಂಸ ದೀಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಟ್ಟಡವನ್ನು ಮರು ವಿನ್ಯಾಸ ಮಾಡುವ ಯೋಜನೆಯನ್ನು ಕೂಡ ಸರಕಾರ ಹಾಕಿ ಕೊಂಡಿದೆ.

2021ರಲ್ಲಿಯೇ ಕೇಂದ್ರ ಸರಕಾರ ಹಳೆ ಸಂಸತ್‌ ಕಟ್ಟಡದ ಮೂಲ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಅದನ್ನು ನವೀಕರಿಸುವ ಇರಾದೆಯನ್ನು ವ್ಯಕ್ತಪಡಿಸಿತ್ತಲ್ಲದೆ ಅದನ್ನು ದೇಶದ ಪಾರಂಪರಿಕ ಮತ್ತು ಐತಿಹಾಸಿಕ ಆಸ್ತಿ ಎಂದು ಪರಿಗಣಿಸುವುದಾಗಿ ಭರವಸೆ ನೀಡಿತ್ತು. ಅದರಂತೆ ಇದೀಗ ಈ ಸಂಬಂಧ ಕೇಂದ್ರ ಸರಕಾರ ಅಧಿಕೃತ ಘೋಷಣೆ ಮಾಡಿದ್ದು ಹಳೆ ಸಂಸತ್‌ ಭವನವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಿಡುವುದಾಗಿ ಘೋಷಣೆ ಮಾಡಿದೆ. ಇದೇ ವೇಳೆ ಹಳೆ ಸಂಸತ್‌ ಕಟ್ಟಡವನ್ನು ಅತ್ಯಂತ ವ್ಯವಸ್ಥಿತವಾಗಿ ನವೀಕರಣ ಮಾಡಿ ಸರಕಾರದ ಕೆಲವೊಂದು ಕಾರ್ಯ ಕಲಾಪಗಳಿಗೆ ಈ ಕಟ್ಟಡದಲ್ಲಿ ಅವಕಾಶ ಕಲ್ಪಿಸಿಕೊಡುವುದಾಗಿಯೂ ತಿಳಿಸಿದೆ.

1927ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಕಟ್ಟಡ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೊéàತ್ತರ ಭಾರತದ ಹಲವಾರು ಐತಿ ಹಾಸಿಕ ಘಟನಾವಳಿಗಳು, ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. “ಪ್ರಜಾ ಪ್ರಭುತ್ವದ ದೇಗುಲ’ ಎಂದೇ ಕರೆಯಲ್ಪಡುವ ಸಂಸತ್‌ ಭವನಕ್ಕೆ ಕಾಯಕಲ್ಪ ನೀಡುವ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹವಾದುದಾಗಿದೆ. ನವೀಕೃತ ಕಟ್ಟಡದ ಕೆಲವೊಂದು ಭಾಗವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಸರಕಾರ ಚಿಂತನೆ ನಡೆಸಿದೆ. ಇದು ದೇಶದ ಇನ್ನಿತರ ರಾಷ್ಟ್ರೀಯ ಸ್ಮಾರಕಗಳ ಮಾದರಿಯಲ್ಲಿ ಕೇವಲ ಘೋಷಣೆ, ಮಾನ್ಯತೆಗೆ ಸೀಮಿತವಾಗದೆ ನಿಜಾರ್ಥದಲ್ಲಿ ಹಳೆ ಸಂಸತ್‌ ಕಟ್ಟಡ ದೇಶದ ಪಾರಂ ಪರಿಕ ಮತ್ತು ಐತಿಹಾಸಿಕ ಕಟ್ಟಡವನ್ನಾಗಿ ಸಂರಕ್ಷಿಸಬೇಕಿದೆ. ದೇಶದ ಇತಿ ಹಾಸ, ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಮತ್ತು ಸುವ್ಯವಸ್ಥಿತ ಪ್ರಜಾಪ್ರ ಭುತ್ವ ವ್ಯವಸ್ಥೆ ಎಂದು ಕರೆಯಲ್ಪಡುವ ದೇಶದ ಆಡಳಿತ ನಡೆದು ಬಂದ ಹಾದಿಯ ಚಿತ್ರಣವನ್ನು ಬಿಂಬಿಸುವ ದಾಖಲೆಗಳು, ದೃಶ್ಯಾವಳಿಗಳು, ಹಳೆ ಸಂಸತ್‌ ಕಟ್ಟಡ ಸಾಕ್ಷೀಕರಿಸಿದ ಮಹತ್ವದ ಘಟನಾವಳಿಗಳ ಚಿತ್ರಣ ಮತ್ತಿತರ ವ್ಯವಸ್ಥೆಗಳನ್ನು ಈ ಮ್ಯೂಸಿಯಂನಲ್ಲಿ ಜೋಡಿಸಿದ್ದೇ ಆದಲ್ಲಿ ಇದೊಂದು ಜನಾಕರ್ಷಣೆಯ ಕೇಂದ್ರವಾಗಿ ರೂಪುಗೊಳ್ಳಬಹುದು. ಈ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆ ನಡೆಸಬೇಕಿದೆ.

ಟಾಪ್ ನ್ಯೂಸ್

Heavy rain ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

Heavy rain ಕಾಫಿನಾಡಲ್ಲಿ ಮುಂದುವರಿದ ಗಾಳಿ- ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

Amit Shah 2

Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ

1-qweeqwe

Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

1-weeqwe

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Four IS terrorists arrested at Ahmedabad airport

Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

Editorial; ರೈತರಿಗೆ ಸಕಾಲದಲ್ಲಿ ಹೊಸ ಸಾಲ ಸರಕಾರ ತುರ್ತಾಗಿ ಸ್ಪಂದಿಸಲಿ

Editorial; ರೈತರಿಗೆ ಸಕಾಲದಲ್ಲಿ ಹೊಸ ಸಾಲ ಸರಕಾರ ತುರ್ತಾಗಿ ಸ್ಪಂದಿಸಲಿ

ಪಿಒಕೆ

Editorial; ಪಿಒಕೆ: ಭುಗಿಲೆದ್ದ ಜನಾಕ್ರೋಶ ಇಕ್ಕಟ್ಟಿಗೆ ಸಿಲುಕಿದ ಪಾಕಿಸ್ಥಾನ

1—–ewqeq

Health; ರೋಗಮುಕ್ತ ಸಮಾಜಕ್ಕಾಗಿ ಆರೋಗ್ಯಯುತ ಆಹಾರ ಕ್ರಮ

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Heavy rain ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

Heavy rain ಕಾಫಿನಾಡಲ್ಲಿ ಮುಂದುವರಿದ ಗಾಳಿ- ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

1-aaaaa

Shirva: ಭದ್ರಾವತಿ ಮೂಲದ ವೃದ್ಧೆ ನಾಪತ್ತೆ

Amit Shah 2

Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ

1-qweeqwe

Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.