ಇತಿಹಾಸ ಕಲಿಸಿದ ಪಾಠವನ್ನು ಮರೆಯುತ್ತಿರುವ ಕಾಂಗ್ರೆಸ್‌


Team Udayavani, Mar 12, 2020, 6:45 AM IST

RAJANITI

ಜಗನ್‌ ಹಾಗೂ ಜ್ಯೋತಿರಾದಿತ್ಯರ ಪ್ರಕರಣಗಳಿಗೆ ಒಂದೆರಡು ಸಾಮ್ಯತೆಗಳಿವೆ. ಹೇಗೆಂದರೆ, ಇವರಿಬ್ಬರೂ ಕಾಂಗ್ರೆಸ್‌ಗಾಗಿ ದುಡಿದ ದೊಡ್ಡ ನಾಯಕರ ಮಕ್ಕಳು. ತಮ್ಮ ತಂದೆಯ ಸಾವಿನ ನಂತರ ಮುಖ್ಯಮಂತ್ರಿ ಹುದ್ದೆಗಾಗಿ ಹಂಬಲಿಸಿದವರು. ಅದರ ಪರಿಣಾಮವಾಗಿಯೇ, ಪಕ್ಷದ ಹೈಕಮಾಂಡ್‌ನಿಂದ ಅಪಮಾನವನ್ನು ಬಹುಮಾನವನ್ನಾಗಿ ಪಡೆದವರು.

ಅವತ್ತು ಸೆ. 2, 2009. ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿ ವೈ.ಎಸ್‌. ರಾಜಶೇಖರ ರೆಡ್ಡಿ ಹೆಲಿಕಾಪ್ಟರ್‌ ಅಪಘಾತವೊಂದರಲ್ಲಿ ಅಸುನೀಗಿದ ವಾರ್ತೆ ಇಡೀ ಆಂಧ್ರವೆಂಬ ಆಂಧ್ರಕ್ಕೆ ಬರಸಿಡಿಲಿನಂತೆ ಬಂದು ಅಪ್ಪಳಿಸಿದ ದಿನ ಅದು. ಏಕೆಂದರೆ, ಅಂದಿನ ಅವಿಭಜಿತ ಆಂಧ್ರಪ್ರದೇಶದಲ್ಲಿ ದಶಕಗಳ ಕಾಲ ಟಿಡಿಪಿ ಆಡಳಿತದ ಅಡಿ ಧೂಳಿಪಟವಾಗಿದ್ದ ಕಾಂಗ್ರೆಸ್ಸನ್ನು ಬೇರುಮಟ್ಟದಿಂದ ಪುನರ್‌ ಸಂಘಟನೆ ಮಾಡಿ ಅಧಿಕಾರಕ್ಕೆ ತಂದ ಆ ನಾಯಕನ ಸಾವು ಆಂಧ್ರಪ್ರದೇಶದ ಜನತೆಗೆ ಸಾಕಷ್ಟು ನೋವು ತಂದಿತ್ತು. ಅಪಾರ ಜನಪ್ರಿಯತೆಯನ್ನು ಹೊಂದಿದ್ದ ನಾಯಕ ವೈ.ಎಸ್‌. ರಾಜಶೇಖರ್‌ ರೆಡ್ಡಿ ಅವರ ಸಾವು ಕಾಂಗ್ರೆಸ್‌ ಹೈಕಮಾಂಡ್‌ಗೂ ತುಂಬಲಾರದ ನಷ್ಟವೆನಿಸಿತ್ತು.

ಕೆಲವು ದಿನಗಳು ಕಳೆದವು. ವೈ.ಎಸ್‌. ರಾಜಶೇಖರ್‌ ರೆಡ್ಡಿ ಅಗಲಿಕೆಯ ನೋವು ನಿಧಾನವಾಗಿ ಶಮನವಾಯಿತು. ಅದೊಂದು ದಿನ, ಅವರ ಪುತ್ರ ಜಗನ್ಮೋಹನ ರೆಡ್ಡಿ, ತನ್ನ ತಂದೆಯ ಆಪ್ತರಾಗಿದ್ದ ಹತ್ತಾರು ಶಾಸಕರನ್ನು ಬೆನ್ನಿಗಿಟ್ಟಿಕೊಂಡು ಕಾಂಗ್ರೆಸ್‌ ಹೈಕಮಾಂಡ್‌ ಕದ ತಟ್ಟಿ, ತಮ್ಮ ತಂದೆಯ ಸಾವಿನ ನಂತರ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮನ್ನು ಕೂರಿಸಬೇಕೆಂಬ ಬೇಡಿಕೆಯನ್ನು ಹೈಕಮಾಂಡ್‌ ಮುಂದಿಟ್ಟರು. ಹಾಗಂತ, ಜಗನ್ಮೋಹನ ರೆಡ್ಡಿ ಎಂಬ ಸ್ಪುರದ್ರೂಪಿ ಯುವಕ, ಸಾಮಾನ್ಯವಾಗಿ ರಾಜಕೀಯ ನೇತಾರರ ಮಕ್ಕಳಂತೆ ಕ್ಲಬ್ಬು, ಮೋಜು – ಮಸ್ತಿಯಲ್ಲೇ ಇದ್ದವರೇನಲ್ಲ. 2004ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್‌ ಪರವಾಗಿ ಪ್ರಚಾರ ನಡೆಸಿದ್ದರು. ತಂದೆಯ ಸಾವು ಸಂಭವಿಸುವಷ್ಟರಲ್ಲಿ ಆಗಲೇ ಅವರು ಕಡಪ ಜಿಲ್ಲೆಯ ಸಂಸತ್‌ ಸದಸ್ಯರಾಗಿದ್ದರು. ಮೇಲಾಗಿ, ತಂದೆಯ ಗರಡಿಯಲ್ಲೇ ಬೆಳೆದಿದ್ದರಿಂದ ರಾಜಕೀಯ ಅವರಿಗೂ ಗೊತ್ತಿತ್ತು. ಇಷ್ಟೆಲ್ಲಾ ಹಿನ್ನೆಲೆಯಿದ್ದರೂ, ಅಂದಿನ ಕಾಂಗ್ರೆಸ್‌ ಹೈಕಮಾಂಡ್‌ ಕುರ್ಚಿಯಲ್ಲಿದ್ದ ಅಧ್ಯಕ್ಷೆ ಸೋನಿಯಾ ಗಾಂಧಿಗೆ, ಅವರ ಪುತ್ರ ರಾಹುಲ್‌ ಗಾಂಧಿಗೆ, ಜಗನ್ಮೋಹನ್‌ ರೆಡ್ಡಿಯವರ ಬೇಡಿಕೆ ಇಷ್ಟವಾಗಲಿಲ್ಲ. ಬೇರೇನೋ ಲೆಕ್ಕಾಚಾರದಲ್ಲಿ ಸಾಧ್ಯವಿಲ್ಲ ಎಂದು ಕೈ ಚೆಲ್ಲಿಬಿಟ್ಟರು.

ಇದರಿಂದ, ಹೈಕಮಾಂಡ್‌ ಮೇಲೆ ಮುನಿಸಿಕೊಂಡ ಜಗನ್‌, ಅದೇ ಬೇಸರದಲ್ಲಿ ತಮ್ಮೂರಿಗೆ ಹಿಂದಿರುಗಿದರು. ಹೈಕಮಾಂಡ್‌ ನಿರ್ಧಾರವನ್ನು ಜನಕ್ಕೆ ಮುಟ್ಟಿಸಿ ಅವರ ಆಶೀರ್ವಾದ ಪಡೆಯುವ ಉದ್ದೇಶದಿಂದ “ಓದಾರ್ಪು ಯಾತ್ರೆ’ ಮೂಲಕ ಆಂಧ್ರದ ಉದ್ದಗಲಕ್ಕೂ ಸಂಚರಿಸಿದರು. ಯಾತ್ರೆ ನಿಲ್ಲಿಸುವಂತೆ ಹೈಕಮಾಂಡ್‌ ನೀಡಿದ್ದ ಸೂಚನೆಯನ್ನು ಧಿಕ್ಕರಿಸಿದ್ದರಿಂದ ಪಕ್ಷದಿಂದ ಆಚೆ ಬರಬೇಕಾಯಿತು. ಹಾಗೆ ಹೊರಬಂದ ಜಗನ್‌, ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿಯನ್ನು ಕಟ್ಟಿ, ತಮ್ಮ ಚಟುವಟಿಕೆ ಮುಂದುವರಿಸಿದರು. ಇದನ್ನು ಸಹಿಸದ ಕಾಂಗ್ರೆಸ್‌, ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ಅವರ ವಿರುದ್ಧ ಸಿಬಿಐಯನ್ನು ಛೂ ಬಿಟ್ಟಿತು. ಆ ಕಾರಣದಿಂದಾಗಿ, ಜಗನ್‌ ಕೆಲ ದಿನಗಳ ಕಾಲ ಜೈಲುವಾಸವನ್ನೂ ಅನುಭವಿಸಬೇಕಾಯಿತು. ಇಷ್ಟೆಲ್ಲಾ ಅಪಮಾನಗಳ ಹೊರತಾಗಿಯೂ ಕಾಂಗ್ರೆಸ್ಸಿಗೆ ಸಡ್ಡು ಹೊಡೆದು ಹೋರಾಡಿದ ಜಗನ್‌, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಆಂಧ್ರದಲ್ಲಿ ಅಧಿಕಾರಕ್ಕೆ ತರುವಲ್ಲಿ ಸಫಲರಾದರು. ಇದು ಜಗನ್‌ ಕಲಿಸಿದ ಪಾಠ.

1982ರಲ್ಲೂ ಇಂಥದ್ದೇ ಒಂದು ಪಾಠವನ್ನು ಕಾಂಗ್ರೆಸ್‌ ಕಲಿತಿತ್ತು. ಆಗ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಜೀವ್‌ ಗಾಂಧಿ, ಆಂಧ್ರಕ್ಕೆ ಬಂದಿದ್ದಾಗ ಆಗ ಅಲ್ಲಿ ಮುಖ್ಯಮಂತ್ರಿಯಾಗಿದ್ದ ಬುಡಕಟ್ಟು ಮೂಲದ ನಾಯಕ ಅಂಜಯ್ಯ ಅವರನ್ನು ಬಹಿರಂಗವಾಗಿ “ಬಫ‌ೂನ್‌’ ಎಂದು ಬಯ್ದಿದ್ದಕ್ಕೆ ಸಿಡಿದೆದ್ದಿದ್ದ ತೆಲುಗು ಚಿತ್ರರಂಗದ ಧ್ರುವತಾರೆ ಎನ್‌.ಟಿ.ರಾಮರಾವ್‌, “ರಾಜೀವ್‌ ಗಾಂಧಿ ಅಪಮಾನ ಮಾಡಿದ್ದು ಕೇವಲ ಅಂಜಯ್ಯ ಅವರಿಗೆ ಮಾತ್ರವಲ್ಲ, ಇಡೀ ತೆಲುಗು ನಾಡಿನ ಮಕ್ಕಳಿಗೆ’ ಎಂದು ಗುಡುಗಿದ್ದರು. “ಕೇಂದ್ರದಲ್ಲಿ ಸೊಕ್ಕಿನಿಂದ ಮೆರೆಯುತ್ತಿರುವ ಕಾಂಗ್ರೆಸ್ಸಿಗೆ ಬುದ್ಧಿ ಕಲಿಸಲೇಬೇಕು’ ಎಂಬ ಸಂಕಲ್ಪ ತೊಟ್ಟು “ತೆಲುಗು ದೇಶಂ ಪಾರ್ಟಿ’ ಕಟ್ಟಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಅಂಜಯ್ಯ ಅವರಿಗಾದ ಅವಮಾನವನ್ನು ಜನರಿಗೆ ಮುಟ್ಟಿಸಿ ಅವರಲ್ಲಿ ತೆಲುಗು ಅಭಿಮಾನ ಜಾಗೃತಿಗೊಳಿಸಿದರು.

1983ರಲ್ಲಿ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಇಂದಿರಾ ಗಾಂಧಿಯವರಿಗೆ, ಎನ್‌ಟಿಆರ್‌ ಬೆಳೆಯುತ್ತಿರುವ ರಭಸ ನೋಡಿ ಬೆಕ್ಕಸ ಬೆರಗಾದರು. ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲ ಎಂದೂ ಮನದಟ್ಟು ಮಾಡಿಕೊಂಡರು. ಆದರೆ, ಪಕ್ಷದ ಇತಿಹಾಸದ ಬಗ್ಗೆ ಇದ್ದ “ಗರ್ವ’, ಎನ್‌ಟಿಆರ್‌ ಅವರನ್ನು ನಿರ್ಲಕ್ಷಿಸುವಂತೆ ಮಾಡಿತು. ಆದರೆ, ಫ‌ಲಿತಾಂಶ ಮಾತ್ರ ಕಾಂಗ್ರೆಸ್‌ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಆಂಧ್ರಪ್ರದೇಶ ಉದಯವಾದ 1950ನೇ ಇಸವಿಯಿಂದ 1983ರವರೆಗೆ ನಿರಂತರವಾಗಿ ಆ ರಾಜ್ಯವನ್ನು ಆಳುತ್ತಿದ್ದ ಕಾಂಗ್ರೆಸ್‌, 1983ರ ಚುನಾವಣೆಯಲ್ಲಿ ಅದೇ ಮೊದಲ ಬಾರಿಗೆ ಹೀನಾಯವಾಗಿ ಸೋಲು ಕಂಡಿತು. ಒಬ್ಬ ಯುವ ನಾಯಕ, ಕಲಿಸಿದ ಪಾಠ ಅದು.

ಅದಾಗಿ, 37 ವರ್ಷಗಳೇ ಉರುಳಿವೆ. ಆದರೆ, ಕಲಿತ ಪಾಠವನ್ನು ಕಾಂಗ್ರೆಸ್‌ ತನ್ನಲ್ಲಿ ಅಳವಡಿಸಿಕೊಂಡಿಲ್ಲ. ಈಗಲೂ ಅದೇ ಹುಂಬತನ, ಅದೇ ಹೆಚ್ಚುಗಾರಿಕೆ, ಗಾಂಧಿ ಕುಟುಂಬದ ಕೈಯ್ಯಲ್ಲೇ ಪಕ್ಷದ ಚುಕ್ಕಾಣಿ ಇರಬೇಕು ಎನ್ನುವ ಹೆಬ್ಬಯಕೆ, ಯಾರನ್ನಾದರೂ ಬೆಳೆಯಲು ಬಿಟ್ಟರೆ ಅವರು ಗಾಂಧಿ ಕುಟುಂಬದವರನ್ನೇ ಓವರ್‌ ಟೇಕ್‌ ಮಾಡಿಬಿಟ್ಟರೆ ಎಂಬ ಭೀತಿ… ಇತ್ಯಾದಿಗಳಿಂದ ಆ ಪಕ್ಷ ಹೊರಗೆ ಬಂದೇ ಇಲ್ಲ. ಕಲಿತ ಪಾಠವನ್ನು ಜಗನ್‌ ವಿಚಾರದಲ್ಲೂ ಅಳವಡಿಸಿಕೊಳ್ಳಲಿಲ್ಲ.

ಎನ್‌ಟಿಆರ್‌, ಜಗನ್‌ ಇಬ್ಬರೂ ಕಲಿಸಿದ ಪಾಠವನ್ನೇ ಈಗ ಮಧ್ಯಪ್ರದೇಶದಲ್ಲಿ ಜ್ಯೋತಿ ರಾದಿತ್ಯ ಸಿಂಧಿಯಾ ಕಲಿಸಿದ್ದಾರೆ. ಯುವಶಕ್ತಿ ಯನ್ನು ನಿರ್ಲಕ್ಷಿಸಿದರೆ ಯಾವ ಮಟ್ಟದಲ್ಲಿ ಪಕ್ಷ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ತೋರಿಸಿ ಕೊಟ್ಟಿ  ದ್ದಾರೆ. ಇದರಿಂದಲಾದರೂ ಕಾಂಗ್ರೆಸ್‌ ಪಾಠ ಕಲಿಯುತ್ತದೆಯೇ? ಗೊತ್ತಿಲ್ಲ!

ಹಾಗೆ ನೋಡಿದರೆ, ಜಗನ್‌ ಹಾಗೂ ಜ್ಯೋತಿರಾದಿತ್ಯರ ಪ್ರಕರಣಗಳಿಗೆ ಒಂದೆರಡು ಸಾಮ್ಯತೆಗಳಿವೆ. ಹೇಗೆಂದರೆ, ಇವರಿಬ್ಬರೂ ಕಾಂಗ್ರೆಸ್‌ಗಾಗಿ ದುಡಿದ ದೊಡ್ಡ ನಾಯಕರ ಮಕ್ಕಳು. ತಮ್ಮ ತಂದೆಯ ಸಾವಿನ ನಂತರ ಮುಖ್ಯಮಂತ್ರಿ ಹುದ್ದೆಗಾಗಿ ಹಂಬಲಿಸಿದವರು. ಅದರ ಪರಿಣಾಮ, ಹೈಕಮಾಂಡ್‌ನಿಂದ ಅಪಮಾನವನ್ನು ಬಹುಮಾನವನ್ನಾಗಿ ಪಡೆದವರು. ಆ ಅಪಮಾನದ ಹೊರತಾಗಿಯೂ, ಕಾಂಗ್ರೆಸ್ಸಿಗೆ ಮುಟ್ಟಿ ನೋಡಿಕೊಳ್ಳುವಂಥ ಪಾಠ ಕಲಿಸಿದವರು!

ಕಾಂಗ್ರೆಸ್‌ಗೆ ಅಂಟಿಕೊಂಡಿರುವ ಮೇಲೆ ಹೇಳಲಾದ ರೋಗಗಳು ಇಂದು ನೆನ್ನೆಯವಲ್ಲ, ದಶಕಗಳನ್ನು ಹಳೆಯವು. 60ರ ದಶಕದಲ್ಲಿ ತಮಿಳುನಾಡಿನ ಧೀಮಂತ ರಾಜಕಾರಣಿ ಕೆ. ಕಾಮರಾಜ್‌ ಅವರನ್ನು ಮೂಲೆಗುಂಪು ಮಾಡಿದ್ದ ಪಕ್ಷ, ಆನಂತರದ ವರ್ಷಗಳಲ್ಲಿ ಕರ್ನಾಟಕದಲ್ಲಿ ಎಸ್‌. ನಿಜಲಿಂಗಪ್ಪ, ದೇವರಾಜ ಅರಸ್‌ ಅವರನ್ನು, ಮಹಾರಾಷ್ಟ್ರದಲ್ಲಿ ಶರದ್‌ ಪವಾರ್‌ ಅವರನ್ನು, ಅಸ್ಸಾಂನಲ್ಲಿ ಹೇಮಂತ್‌ ಬಿಸ್ವಾಸ್‌ ಅವರನ್ನು ಮೂಲೆಗುಂಪು ಮಾಡಿತ್ತು. ಅದರ ಪರಿಣಾಮವಾಗಿಯೇ, ತಮಿಳುನಾಡು ಹಾಗೂ ಹಿಂದಿ ಪ್ರಾಬಲ್ಯವಿರುವ ಪ್ರಾಂತ್ಯಗಳನ್ನು ಸ್ಥಳೀಯ ಪಕ್ಷಗಳಿಗೆ ಅಥವಾ ಬಿಜೆಪಿಗೆ ಬಿಟ್ಟುಕೊಡುವ ಹಾಗಾಯಿತು. ಅಷ್ಟಾದರೂ ಪಕ್ಷ ಎಚ್ಚೆತ್ತುಕೊಂಡಿಲ್ಲ. ತಪ್ಪು ಲೆಕ್ಕಾಚಾರಗಳು, ಹುಂಬತನದ ನಿರ್ಧಾರಗಳಿಂದ ಆ ಪಕ್ಷ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.

ಈಗ, ಇತ್ತೀಚಿನ ವರ್ಷಗಳ ಜಗನ್‌, ಸಿಂಧಿಯಾ ಪ್ರಕರಣಗಳನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಇವೆರಡೂ ಪ್ರಸಂಗಗಳಲ್ಲಿ ಪಕ್ಷದ ನಾಯಕರು ಸ್ವಲ್ಪ ಸಾವಧಾನವಾಗಿ ವರ್ತಿಸಿದ್ದರೆ, ಕಾಂಗ್ರೆಸ್‌ಗೆ ವ್ಯತಿರಿಕ್ತವಾದ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು ಅಪ್ಪಟ ಸತ್ಯ. ಹಾಗಾ ಗಿಯೇ, ಸಿಂಧಿಯಾ ಅವರನ್ನು ಹೈಕಮಾಂಡ್‌ ತಡೆಯಬಹುದಾಗಿತ್ತು ಎಂಬ ಮಾತುಗಳು ಕಾಂಗ್ರೆಸ್‌ ಪಾಳಯದಲ್ಲೇ ಕೇಳಿಬರುತ್ತಿವೆ.

2018ರ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದಾಗಲೇ, ಚುನಾವಣೆಗೂ ಮೊದಲು ನೀಡಿದ ವಚನದಂತೆ ಜ್ಯೋತಿರಾದಿತ್ಯ ಸಿಂಧಿಯಾರನ್ನೇ ಮುಖ್ಯಮಂತ್ರಿಯಾಗಿ ಘೋಷಿಸಿದ್ದರೆ ಯಾವುದೇ ಅನಾಹುತ ಆಗುತ್ತಿರಲಿಲ್ಲ. ಕನಿಷ್ಠ ಪಕ್ಷ ಸಿಂಧಿಯಾರನ್ನು ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ನ್ನಾಗಿ ನೇಮಿಸಬಹುದಿತ್ತು. ಹಾಗಾಗಿದ್ದರೆ, ಹಿರಿಯ-ಕಿರಿಯರ ಕಾಂಬಿನೇಷನ್‌ನಲ್ಲಿ ಸಂಪುಟವೂ ಚೆನ್ನಾಗಿ ಕಾರ್ಯ ನಿರ್ವಹಿಸುವಂತೆ ಮಾಡಬಹುದಿತ್ತೇನೋ!

ಅಷ್ಟಕ್ಕೂ ಪಕ್ಷದ ಹಿರಿಯ ನಾಯಕರ ಮೇಲಿರುವಷ್ಟು ಪ್ರೀತಿ, ಅಕ್ಕರೆ ಯುವ ನಾಯಕರ ಮೇಲೇಕಿಲ್ಲ? ಹಿರಿಯ ನಾಯಕರು ವಯಸ್ಸಾಗಿ ಮೂಲೆ ಗುಂಪಾದ ಮೇಲೆ ಆಯಾ ರಾಜ್ಯಗಳಲ್ಲಿ ಯುವ ನಾಯಕರೇ ನಾಳೆ ಪಕ್ಷವನ್ನು ಮುನ್ನಡೆಸುವವರು. ಹಾಗಾಗಿ, ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಎಂಬ ಸತ್ಯ ಕಾಂಗ್ರೆಸ್‌ಗೆàಕೆೆ ಅರಿವಾಗುತ್ತಿಲ್ಲ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಅದೇನೇ ಇರಲಿ. ಒಂದಂತೂ ನಿಜ. ಕಾಂಗ್ರೆಸ್‌ನ ಧೋರಣೆಗಳಿಗೆ ಬೇಸತ್ತು ಪಕ್ಷದಿಂದ ಆಚೆ ಬಂದಿದ್ದ ಆಗಿನ ಕಾಲದ ಕಿರಿಯ ನಾಯಕರಲ್ಲಿ ಹಲವಾರು ಮಂದಿ ಉನ್ನತ ಮಟ್ಟಕ್ಕೇರಿದ್ದಾರೆ. ಶ್ಯಾಮ್‌ ಪ್ರಸಾದ್‌ ಮುಖರ್ಜಿ, ಮೊರಾರ್ಜಿ ದೇಸಾಯಿ, ಚೌಧರಿ ಚರಣ್‌ ಸಿಂಗ್‌, ಜಯಪ್ರಕಾಶ್‌ ನಾರಾಯಣ್‌, ಇ.ವಿ. ರಾಮಸ್ವಾಮಿ (ಪೆರಿಯಾರ್‌), ಎಚ್‌.ಡಿ. ದೇವೇಗೌಡ, ಮಹಾರಾಷ್ಟ್ರದ ಶರದ್‌ ಪವಾರ್‌, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ… ಅಂಥವರ ಪಟ್ಟಿ ತುಂಬಾ ದೊಡ್ಡದಿದೆ. ಆ ಪಟ್ಟಿಗೆ ಮುಂದೆ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಸೇರ್ಪಡೆಗೊಳ್ಳಬಹುದು.

ಆದರೆ, ಅದಕ್ಕಿಂತ ಮಿಗಿಲಾಗಿ ಹೇಳುವುದೇನೆಂದರೆ – ಕಾಲ ಬದಲಾಗಿದೆ ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳದೆ, ಯಾರನ್ನೋ ಬೆಳೆಯಲು ಬಿಟ್ಟರೆ ನಮ್ಮನ್ನು ಓವರ್‌ ಟೇಕ್‌ ಮಾಡಿಬಿಡುತ್ತಾರೆ ಎಂಬ ಭೀತಿಯಲ್ಲಿ, ಐಡೆಂಟಿಟಿ ಕ್ರೈಸಿಸ್‌ ನಲ್ಲಿ ಸಿಲುಕಿಕೊಂಡಿರುವ ಆ ಪಕ್ಷದ ನಾಯಕರಿಗೆ ಯಾವಾಗ ಇದೆಲ್ಲವೂ ಅರ್ಥವಾಗುತ್ತದೋ ಏನೋ ಗೊತ್ತಿಲ್ಲ. ಆದರೆ, ಪರಿಸ್ಥಿತಿ ಹೀಗೇ ಮುಂದುವರಿದರೆ, ಇಂದು ಜ್ಯೋತಿರಾದಿತ್ಯ ಸಿಂ ಧಿಯಾರನ್ನು ಕಳೆದುಕೊಂಡಿರುವ ಆ ಪಕ್ಷ, ಮುಂದೊಂದು ದಿನ, ಇದ್ದಿದ್ದನ್ನು ಇದ್ದ ಹಾಗೆ ಹೇಳುವ ನಾಯಕಿ ಎನಿಸಿರುವ ಶರ್ಮಿಷ್ಠೆ ಮುಖರ್ಜಿ (ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಪುತ್ರಿ), ದೀಪೇಂದರ್‌ ಹೂಡಾ (ರೋಹಕ್‌ ಸಂಸದ) ಮುಂತಾದವರನ್ನು ಕಳೆದುಕೊಂಡರೆ ಅಚ್ಚರಿಯಿಲ್ಲ. ಹಾಗಾಗಿ, ಇತಿಹಾಸ ಕಲಿಸಿದ ಪಾಠ ಮರೆತವರಿಗೆ ಸಿಗಬೇಕಾದ ಉಡುಗೊರೆಗಳು ಅದಕ್ಕೆ ಸಿಗುತ್ತಲೇ ಇವೆ.

-ಚೇತನ್‌ ಓ.ಆ ರ್‌.

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.