ಬಡೇರಿಯಾ ಬಂಧನ: ಶಹಬ್ಟಾಸ್‌ ಎಸ್‌ಐಟಿ!


Team Udayavani, May 17, 2017, 7:14 PM IST

Gangaram-17-5.jpg

ಐಎಎಸ್‌ ಹುದ್ದೆಯ ಅಧಿಕಾರಿಗಳಾಗಲಿ ಐಪಿಎಸ್‌ ಅಧಿಕಾರಿಗಳಾಗಲಿ ಕಾರ್ಯನಿರ್ವಹಣೆಯ ವಿಚಾರದಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು ರಾಜಕಾರಣಿಗಳ ಆದೇಶವನ್ನು ಯಾಂತ್ರಿಕವಾಗಿ ಪಾಲಿಸುವಂತಾಗಬಾರದು. 

ಕರ್ನಾಟಕದಲ್ಲೀಗ ಎಲ್ಲರೂ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುವ ಪ್ರಸಂಗವೊಂದು ಘಟಿಸಿದೆ. ಗಂಗಾರಾಮ್‌ ಬಡೇರಿಯಾ ಎಂಬ ಹಿರಿಯ ಐಎಎಸ್‌ ಅಧಿಕಾರಿಯನ್ನು ತನಿಖಾತಂಡದ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ. ಕಬ್ಬಿಣದ ಅದಿರು ಗಣಿಗಾರಿಕೆ ಹಗರಣದಲ್ಲಿ ಈ ಅಧಿಕಾರಿ ಭ್ರಷ್ಟಾಚಾರ ನಡೆಸಿರುವರೆಂಬ ಆರೋಪದ ಹಿನ್ನೆಲೆಯಲ್ಲಿ ಆಗಿರುವ ದಸ್ತಗಿರಿ ಇದು. ಬಳ್ಳಾರಿ ಗಣಿಗಾರಿಕೆ ಹಗರಣ ರಾಜಕಾರಣಿ­ಗಳನ್ನು ಹಾಗೂ ಅಧಿಕಾರಿಗಳನ್ನು ಇನ್ನೂ ಕಾಡುತ್ತಲೇ ಇದೆ ಎಂಬುದರ ದ್ಯೋತಕ ಇದು. ಹಿಂದಿನ ಲೋಕಾಯುಕ್ತ ನ್ಯಾ| ಸಂತೋಷ ಹೆಗ್ಡೆ ಅವರು ಸರಕಾರಕ್ಕೆ ಒಪ್ಪಿಸಿದ್ದ ತನಿಖಾ ವರದಿಯನ್ನು ಹಾಸಿಕೊಂಡು ಸರಕಾರ ಗೊರಕೆ ಹೊಡೆಯುತ್ತಿದೆಯಾದರೂ, ನ್ಯಾ| ಹೆಗ್ಡೆಯವರ ಪರಿಶ್ರಮಪೂರ್ಣ ವರದಿಯ ಹಿಂದಿನ ಆಶಯ ವ್ಯರ್ಥವೆನಿಸಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಸಿದ್ದರಾಮಯ್ಯ ಸರಕಾರ ತನ್ನ ನಾಲ್ಕು ವರ್ಷಗಳ ಆಡಳಿತಾವಧಿ­ಯನ್ನು ಪೂರ್ಣಗೊಳಿಸಿರುವ ಸಂಭ್ರಮದಲ್ಲಿರುವಾಗಲೇ ಈ ಬಂಧನ ನಡೆದಿದೆ. ಬಿಜೆಪಿ ತನ್ನ ವಿರುದ್ಧ ‘ದಾಖಲಿಸಿರುವ’ ‘ಚಾರ್ಜ್‌ಶೀಟ್‌’ ಅನ್ನು ಬದಿಗೆ ಸರಿಸಿ ಮುಂದುವರಿಯುವ ಸ್ವಾತಂತ್ರ್ಯ ಸಿದ್ದರಾಮಯ್ಯನವರ ಸರಕಾರಕ್ಕಿದೆಯಾದರೂ ಒಂದು ಮಾತನ್ನಂತೂ ಹೇಳಲೇಬೇಕು. ಕಳೆದ ನಾಲ್ಕು ವರ್ಷಗಳಿಂದ ರಾಜ್ಯಭಾರ ನಡೆಸುತ್ತಿರುವ ಕಾಂಗ್ರೆಸ್‌ ಸರಕಾರ ಭ್ರಷ್ಟಾಚಾರದ ಪಿಡುಗನ್ನು ನಿಭಾಯಿಸುವಲ್ಲಿ ನಿಜಕ್ಕೂ ವಿಫ‌ಲವಾಗಿದೆ. ರಾಷ್ಟ್ರಮಟ್ಟದ ಒಂದಿಲ್ಲೊಂದು ಖಾಸಗಿ ಚಿಂತನಶೀಲರ ತಂಡ ಕರ್ನಾಟಕಕ್ಕೆ ಅತ್ಯಂತ ಭ್ರಷ್ಟರಾಜ್ಯ ಎಂಬ ಹಣೆಪಟ್ಟಿ ನೀಡಿದರೆ ಇದರಲ್ಲಿ ಅಚ್ಚರಿಯೇನೂ ಇಲ್ಲ. ಆದರೆ ಕಳಪೆ ರಾಜ್ಯಭಾರ ವಿಷಯದಲ್ಲಿ ಸಿದ್ಧರಾಮಯ್ಯ ಹಾಗೂ ಅವರ ಸಚಿವರ ಮೇಲಷ್ಟೇ ಗೂಬೆ ಕೂರಿಸುವಂತಿಲ್ಲ. ಸರಕಾರಿ ಸೇವೆಯಲ್ಲಿರುವ ಮಂದಿಯನ್ನು ಭ್ರಷ್ಟರನ್ನಾಗಿಸುವ ‘ಅಭಿಯಾನ’ಕ್ಕೆ ಜನತಾದಳ ಸರಕಾರ ಹಾಗೂ ಬಿಜೆಪಿ ಸರಕಾರಗಳೂ ತಮ್ಮ ತಮ್ಮ ದೇಣಿಗೆಯನ್ನು ನೀಡಿವೆ. ಈ ನಡುವೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಅಸ್ತಿತ್ವಕ್ಕೆ ಬಂದು ಕಾರ್ಯಾಚರಣೆ ನಡೆಸುತ್ತಿರುವ ಎಸ್‌ಐಟಿಗೂ ನಮ್ಮ ಶ್ಲಾಘನೆ ಸಲ್ಲಬೇಕಿದೆ. ಹಿರಿಯ ಸಿಬಿಐ ಅಧಿಕಾರಿಯೊಬ್ಬರನ್ನು ಆರಾಮ­ವಾಗಿ ಪಾರಾಗಲು ಬಿಡದೆ ಅವರನ್ನು ಬಂಧಿಸುವ ಮೂಲಕ ಅದು ತನ್ನ ಕಾರ್ಯಕ್ಷಮತೆಯನ್ನು ಮೆರೆದಿದೆ.

ಹೀಗೆ ಭ್ರಷ್ಟಾಚಾರದ ಕಾರಣಕ್ಕಾಗಿ ಬಂಧನಕ್ಕೊಳಗಾಗಿರುವ ಐಎಎಸ್‌ ಅಧಿಕಾರಿ ಬಡೇರಿಯಾ ಒಬ್ಬರೇ ಎನ್ನುವಂತಿಲ್ಲ. ಈಚಿನ ವರ್ಷಗಳಲ್ಲಿ ಬೆಳಗಾವಿಯಲ್ಲಿ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರನ್ನು, ಅವರ ನಿವೃತ್ತಿಯಾಗಬೇಕಿದ್ದ ದಿನವೇ ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ನಡೆದಿತ್ತು. 2013ರಲ್ಲಿ ಲೋಕಾಯುಕ್ತ ಮಹಿಳಾ ಐಎಎಸ್‌ ಅಧಿಕಾರಿ ಶಮ್ಲಾ ಇಕ್ಬಾಲ್‌ರ ವಿರುದ್ಧ ‘ಕ್ರಿಸ್ತಿ ಫ್ರೆಡ್‌ ಗ್ರಾಮ್‌ ಇಂಡಸ್ಟ್ರಿ ಕೇಸ್‌’ ಎಂದೇ ಕರೆಸಿಕೊಂಡಿರುವ ಪ್ರಕರಣದ ಸಂಬಂಧ ಪ್ರಕರಣವೊಂದನ್ನು ದಾಖಲಿಸಿತು. ಆಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಕೆಯ ವಿರುದ್ಧ ಕ್ರಮ ಜರುಗಿಸುವ ಮೂಲಕ ಕರ್ನಾಟಕ ಪೊಲೀಸರು ಪ್ರಮಾದವೆಸಗಿದ್ದಾರೆಂದು ಅಭಿಪ್ರಾಯಪಟ್ಟ ಕರ್ನಾಟಕ ಉಚ್ಚ ನ್ಯಾಯಾಲಯ, ಇದೇ ಕಾರಣ ಮುಂದೊಡ್ಡಿ ಆಕೆಯನ್ನು 2015ರಲ್ಲಿ ದೋಷಮುಕ್ತಗೊಳಿಸಿತು. ಕರ್ನಾಟಕ ಬ್ಯಾಚಿನ ಇನ್ನೋರ್ವ ಮಹಿಳಾ ಐಎಎಸ್‌ ಅಧಿಕಾರಿ ವೀಣಾ ಶ್ರೀರಾಮ ರಾವ್‌ ಅವರ ವಿರುದ್ಧದ ಕೇಸೊಂದರ ಬಗ್ಗೆ ಸಿಬಿಐ ಈಗ ತನಿಖೆ ನಡೆಸುತ್ತಿದೆ. ಇಸ್ರೋದ ಹಿಂದಿನ ಅಧ್ಯಕ್ಷರು ಮತ್ತಿತರರಿಗೆ ಸಂಬಂಧಿಸಿದ ಪ್ರಕರಣ ಇದು. ಆದರೆ ಎಲ್ಲಕ್ಕಿಂತ ಅಚ್ಚರಿಯ ಪ್ರಕರಣವೆಂದರೆ 2013ರಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಶಮೀಮಾ ಬಾನು ಬಂಧನ ಪ್ರಸಂಗ. 

ಅತ್ಯಂತ ಜನಪ್ರಿಯ ಅಧಿಕಾರಿ ಎನಿಸಿಕೊಂಡ ಈಕೆ ಬಂಧನಕ್ಕೊಳಗಾದ ಸಂದರ್ಭದಲ್ಲಿ ರಾಜ್ಯದ ಐಎಎಸ್‌ ಅಧಿಕಾರಿಗಳ ಸಂಘ ಪ್ರತಿಭಟನೆ ವ್ಯಕ್ತಪಡಿಸಿತ್ತು. ಈಕೆಯದು ಒಂದೇ ಒಂದು ಕುಂದೂ ಇಲ್ಲದ ವೃತ್ತಿ ಜೀವನ ಎಂದು ಅದು ಬಣ್ಣಿಸಿತ್ತು. ಪ್ರಕರಣವನ್ನು ವಿಚಾರಣೆಗೆತ್ತಿಕೊಂಡು ಉಚ್ಚ ನ್ಯಾಯಾಲಯ, ವಿಚಾರಣೆಯ ವೇಳೆ, ಐಎಎಸ್‌ ಅಧಿ­ಕಾರಿಗಳ ಸಂಘದ ನಡವಳಿಕೆ ತಪ್ಪೆಂದು ಅಭಿಪ್ರಾಯ ಪಟ್ಟಿತು. ಬಂಧಿತ ಅಧಿಕಾರಿಯ ವಿಷಯದಲ್ಲಿ ಸಾರ್ವಜನಿಕವಾಗಿ ಏಕತೆ ಪ್ರದರ್ಶಿಸಿದ ಸಂಘದ ವಿವೇಚನಾಶಕ್ತಿಯನ್ನೇ ಕೋರ್ಟು ಪ್ರಶ್ನಿಸಿತ್ತು. ಇದೇ ಅಕ್ರಮ ಗಣಿಗಾರಿಕೆ ಹಗರಣ ನೆರೆಯ ಆಂಧ್ರಪ್ರದೇಶ­ದಲ್ಲೂ ಮಾರ್ದನಿಸಿತ್ತು. ಅಲ್ಲಿ ಇನ್ನೋರ್ವ ಹಿರಿಯ ಐಎಎಸ್‌ ಅಧಿಕಾರಿ, ವೈ. ಶ್ರೀಲಕ್ಷ್ಮೀ ಅವರನ್ನು ಬಂಧಿಸಲಾಗಿತ್ತು. ಹೇಳಲೇಬೇಕಾದ ಮಾತೊಂದಿದೆ – ನಮ್ಮ ಮಾಜಿ ಬಿಜೆಪಿ ಸಚಿವ ಜನಾರ್ದನ ರೆಡ್ಡಿಯವರು ಗಣಿಗಾರಿಕೆ ಪ್ರಕರಣದಲ್ಲಿ ಬಂಧನ­ಕ್ಕೊಳಗಾಗಲು ಕಾರಣ, ಆಂಧ್ರದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ ಮುಂದೆ ಈ ಪ್ರಕರಣವನ್ನು  ಸಿಬಿಐಗೆ ಒಪ್ಪಿಸಿದರು.

ರೆಡ್ಡಿ ಪಾರಾಗಿದ್ದಾರೆ, ಅಧಿಕಾರಿಗಳಲ್ಲ: ಇನ್ನೊಂದು ದೃಷ್ಟಿಯಿಂದ ಪರಿಶೀಲಿಸುವುದಾದರೆ ಹೀಗೂ ಹೇಳಬಹುದು – ಅಕ್ರಮ ಗಣಿಗಾರಿಕೆ ಹಗರಣದ ಬಿಸಿ ತಟ್ಟಿರುವುದು ರಾಜಕಾರಣಿಗಳಲ್ಲ, ಬದಲಿಗೆ ಹಿರಿಯ ಅಧಿಕಾರಿಗಳಿಗೆ. ಈ ಇಡೀ ಪ್ರಕರಣದ ಸೂತ್ರಧಾರ, ಬಳ್ಳಾರಿ ‘ಗಣರಾಜ್ಯದ ಪ್ರಭು’, ಜನಾರ್ದನ ರೆಡ್ಡಿ ಈಗಾಗಲೇ ಈ ಪ್ರಕರಣಗಳ ಪೈಕಿ ಒಂದರಲ್ಲಿ ಬಚಾವಾಗಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ, ಈ ಪ್ರಕರಣಗಳಲ್ಲೊಂದಕ್ಕೆ ಸಂಬಂ­ಧಿಸಿ­ದಂತೆ ಅನುಷ್ಠಾನ ನಿರ್ದೇಶನಾಲಯ ನಡೆಸಿದ ವಿಚಾರಣಾ ಪ್ರಕ್ರಿಯೆಗಳನ್ನು ಉಚ್ಚ ನ್ಯಾಯಾಲಯ ರದ್ದುಪಡಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ರೂಪಿಸಲಾಗಿದ್ದ ವಿಶೇಷ ತನಿಖಾ ತಂಡ ನಡೆಸಿದ ತನಿಖೆ ಇದಾಗಿದ್ದು, ಇದರ ಫ‌ಲಶ್ರುತಿಯೇ ಬಡೇರಿಯಾ ಅವರ ಬಂಧನ. ಈ ಪ್ರಕರಣ ಜಂತಕಲ್‌ ಎಂಟರ್‌ಪ್ರೈಸಸ್‌ಗೆ ಸಂಬಂಧಿಸಿದ್ದು, 2007ರಲ್ಲಿ ನಡೆ­ದಿದೆ­ಯೆನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ್ದಾಗಿದೆ. ವಿಶೇಷ ತನಿಖಾ ತಂಡ, ನಿವೃತ್ತರನ್ನೂ ಒಳಗೊಂಡಂತೆ ಇತರ ಹತ್ತು ಹಿರಿಯ ಅಧಿಕಾರಿಗಳ ವಿರುದ್ಧ ತನಿಖಾ ಕಾರ್ಯದಲ್ಲಿ ನಿರತವಾಗಿದೆ. ಈ ಹತ್ತು ಮಂದಿಯಲ್ಲಿ ಗಣಿ ಹಾಗೂ ಭೂಗರ್ಭ ಶಾಸ್ತ್ರ ನಿರ್ದೇಶನಾಲಯದಲ್ಲಿ ಹಾಗೂ ಮೈಸೂರ್‌ ಮಿನರಲ್ಸ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದವರಿದ್ದಾರೆ. ಈ ತನಿಖೆ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್‌ ಹಾಗೂ ಕುಮಾರಸ್ವಾಮಿಯವರ ಪಾತ್ರದ ಬಗೆಗೂ ಬೆಳಕು ಚೆಲ್ಲುವಂತಾದರೆ ಈ ತನಿಖೆಗೆ ತಾರ್ಕಿಕ ಸ್ಪರ್ಶ ಲಭಿಸಿದಂತಾಗುತ್ತದೆ. ಈ ನಡುವೆ ಇನ್ನೋರ್ವ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎನ್ನುತ್ತಿವೆ ವರದಿಗಳು.

ಈ ನಡುವೆ ಬಡೇರಿಯಾ ಅವರ ಬಂಧನಕ್ಕೆ ಕಾರಣವಾದ ಅಕ್ರಮಗಳು ನಡೆದಿರುವುದು ಹಿಂದಿನ ಕಾಂಗ್ರೆಸ್‌ – ಜೆಡಿಎಸ್‌ ಹಾಗೂ ಜೆಡಿಎಸ್‌ – ಬಿಜೆಪಿ ಮೈತ್ರಿ ಸರಕಾರಗಳು ಅವಧಿಯಲ್ಲಿ ಎಂದು ಸಿದ್ದರಾಮಯ್ಯನವರ ಸರಕಾರದಲ್ಲಿರುವ ಮಂದಿ ಹೇಳ­ಹೊರ­ಟಾರೇನೋ ಹೌದು. ಆದರೆ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ತುತ್ತೂರಿ ಊದಿ ಎಲ್ಲರ ಗಮನ ಸೆಳೆದವರು ಇದೇ ಜನಾರ್ದನ ರೆಡ್ಡಿ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ಜೆಡಿಎಸ್‌ ನಾಯಕರು ಬಳ್ಳಾರಿ ಗಣಿ ಮಾಲಕರಿಂದ 150 ಕೋ. ರೂ. ಲಂಚ ಸ್ವೀಕರಿಸಿ­ದ್ದಾರೆಂದು ಜನಾರ್ದನ ರೆಡ್ಡಿ ಆರೋಪಿಸಿದ್ದರು. ಆಗ ಇದ್ದುದು ಕುಮಾರಸ್ವಾಮಿ ಸರಕಾರ. ಅವರ ಮಾಜಿ ಮಿತ್ರರೀಗ ಬಹುಶಃ ರಾಜಕೀಯ ನೈತಿಕತೆಯ ಬದಲಿಗೆ ರಾಜಕೀಯ ಅಧಿ
ಕಾರಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದಲೇ ಕುಮಾರಸ್ವಾಮಿಯವರ ಅಭೂತಪೂರ್ವ ಸರಕಾರ ಸತ್ಯದ ಅನಾವರಣದಿಂದ ಉಂಟಾಗಬಲ್ಲ ಆಘಾತದ ಛಳಕಿನಿಂದ ಪಾರಾಗಿದೆ ಎನ್ನೋಣವೆ?

ಸಿದ್ದರಾಮಯ್ಯ ಸರಕಾರ ಇದುವರೆಗೂ ತನ್ನ ಹಿರಿಯ ಐಎಎಸ್‌, ಐಪಿಎಸ್‌ ಅಥವಾ ಐಎಫ್ಎಸ್‌  ಅಧಿಕಾರಿಗಳ ವಿರುದ್ಧ ತೂರಿ ಬರುವ ಯಾವ ನೇತ್ಯಾತ್ಮಿಕ ಮಾತಿಗೂ ಕಿವಿಗೊಡುವ ಕಷ್ಟವನ್ನು ತೆಗೆದುಕೊಂಡಿಲ್ಲ. ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ಧ್ವನಿಯೆತ್ತಿದ್ದಕ್ಕಾಗಿ ಮಾಜಿ ಹಿರಿಯ ಐಎಎಸ್‌ ಅಧಿಕಾರಿ ಎಂ.ಎನ್‌. ವಿಜಯಕುಮಾರ್‌ ಅವರನ್ನು ಸರಕಾರ, ಅವರ ನಿವೃತ್ತಿಗೆ ಮೂರೇ ಮೂರು ದಿನಗಳ ಮುಂಚೆಯೇ ಬಲವಂತವಾಗಿ ನಿವೃತ್ತಿಗೊಳಿಸಿತು. ಐಎಎಸ್‌ ಅಧಿಕಾರಿ ಕಪಿಲ್‌ ಮೋಹನ್‌ ಅವರ ಮನೆ ಮೇಲೆ ಲೋಕಾ­ಯುಕ್ತ ಪೊಲೀಸರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂ­ಧಿಸಿದಂತೆ ಯಾವುದೇ ಕ್ರಮ ಜರಗಿಸುವ ಅಗತ್ಯ ಸರಕಾರಕ್ಕೆ ಕಂಡುಬಂದಿಲ್ಲ. ಕೆ. ಶ್ಯಾಮ ಭಟ್‌ ಅವರ ಮೇಲೆ ಕೇಸು ದಾಖಲಾಗಲಿದ್ದರೂ ದೂರು ಹಾಗೂ ಆಪಾದನೆಗಳು ಕೇಳಿ ಬಂದಿದ್ದು, ಅವರನ್ನು ಕೆಪಿಎಸ್‌ಸಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸರಕಾರದ ನೇಮಕಾತಿ ಪ್ರಸ್ತಾವಗಳಿಗೆ ‘ಬೇಡ’ ಎಂದು ಹೇಳಿ ಹೇಳಿ ಸಾಕಾಗಿದೆ ಎಂಬ ಕಾರಣ ನೀಡಿ ರಾಜ್ಯಪಾಲ ವಜೂಭಾಯ್‌ವಾಲಾ ಅವರು ಶ್ಯಾಮ ಭಟ್‌ ನೇಮಕಾತಿಯನ್ನು ಮಂಜೂರು ಮಾಡಿದ್ದರು. 

ಅಧಿಕಾರಿಗಳಿಗೆ ಪಾಠ: ಐಎಎಸ್‌ ಹುದ್ದೆಯ ಅಧಿಕಾರಿ­ಗಳಾಗಲಿ ಐಪಿಎಸ್‌ ಅಧಿಕಾರಿಗಳಾಗಲಿ ಕಾರ್ಯನಿರ್ವಹಣೆಯ ವಿಚಾರದಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು ರಾಜಕಾರಣಿಗಳ ಆದೇಶವನ್ನು ಪಾಲಿಸು­ವಂತಾ­ಗ­ಬಾರದು. ಅಧಿಕಾರರೂಢ ರಾಜಕಾರಣಿಗಳ ಭಾಗೀ­ದಾ­ರ­ರಂತೆ ನಡೆದುಕೊಳ್ಳಕೂಡದು. ಅವರು ನಿರ್ಧಾರಗಳನ್ನು ಸಾರ್ವ­ಜನಿಕರ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕು. ಉನ್ನತ ಅಧಿಕಾರಿಗಳಲ್ಲೊಂದು ವಿಲಕ್ಷಣ ಪ್ರವೃತ್ತಿ ಮನೆ ಮಾಡಿರುತ್ತದೆ. ಅದೆಂದರೆ, ಆಡಳಿತ ವ್ಯವಸ್ಥೆಯಲ್ಲಿ ಎಲ್ಲವೂ ಚೆನ್ನಾಗಿದೆ ಎಂಬ ಧೋರಣೆ. ಕೈ ಕೆಳಗಿನ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡಿ­ದರೆ, ಅದಕ್ಕೆ ಕಿವಿಗೊಡದಿರುವ ಪ್ರವೃತ್ತಿ. 

ಸಿಮೆಂಟ್‌ ಕೋಟಾ ಒದಗಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರು ಸಲ್ಲಿಸಲು ಹೋದ ನಾಗರಿಕನಿಗೆ, ‘ನಿನ್ನನ್ನು ಬಂಧಿಸಿಯೇನು’ ಎಂದು ಐಎಎಸ್‌ ಅಧಿಕಾರಿಯೊಬ್ಬರು ಬೆದರಿಸಿದ ಘಟನೆಯೂ ಈ ಹಿಂದೆ ನಡೆದಿದೆ. ಈ ಅಧಿಕಾರಿ ಮುಂದೆ ಮಾಹಿತಿ ಆಯುಕ್ತರಾಗಿ ನೇಮಕಗೊಂಡರು. ಅದು ಕೋಟಾಗಳ, ‘ಕಂಟ್ರೋಲ್‌’ಗಳ ಹಾಗೂ ಭ್ರಷ್ಟಾಚಾರದ ಕಾಲ. ಇಂದು ಮೊದಲ ಎರಡು ಪಿಡುಗುಗಳು ಮಾಯವಾಗಿವೆ. ಮೂರನೆಯದು ಇನ್ನೂ ತೊಲಗಿಲ್ಲ. ಒಂದಿಲ್ಲೊಂದು ದಿನ ಇದು
ತೊಲಗೀತು ಎಂದು ಕನಸು ಕಂಡಿದ್ದ ಸಿ. ರಾಜಗೋಪಾಲಾಚಾರಿಯವರಂಥ ಆಸೆ ಇನ್ನೂ ಈಡೇರಿಲ್ಲ.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.