ಅಗಾಧವಾಗಿ ಬೆಳೆದಿದೆ ಆನ್‌ಲೈನ್‌ ಆಧಾರಿತ ಆಹಾರ ಪೂರೈಕೆ ಸೇವೆ


Team Udayavani, Mar 7, 2020, 7:30 AM IST

ONLINE-FOOD-

ನಮ್ಮ ದೇಶದ ಅಭಿವೃದ್ಧಿಯಲ್ಲಿ ಸೇವಾ ಕ್ಷೇತ್ರದ್ದೇ ಸಿಂಹಪಾಲು. ಜನಸಂಖ್ಯೆಯ ಹೆಚ್ಚಳದ ಜೊತೆಗೆ ಸೇವಾ ಕ್ಷೇತ್ರವೂ ಆಗಾಧವಾಗಿ ಬೆಳೆದಿದೆ. ಹೊಸ ಹೊಸ ಸೇವೆಗಳನ್ನು ಆದಾಯದ ಹೆಚ್ಚಳದೊಂದಿಗೆ ಜನರು ಬಯಸುವುದು ಸಹಜ. ಜೀವನ ಶೈಲಿಯು ಬದಲಾಗಿದೆ. ಮಿಲೇನಿಯಲ್‌ ವರ್ಗವೂ ಬೆಳೆಯುತ್ತಿದೆ. ಸ್ಮಾರ್ಟ್‌ಫೋನ್‌ ಇಲ್ಲದ ಮಂದಿ ಬಹಳ ಕಡಿಮೆ. ಇಂಟರ್‌ನೆಟ್‌ ಸೇವೆಯು ನಮ್ಮ ಅಂಗೈಯೊಳಗಿದೆ. ಹೊಸ ಹೊಸ ತಂತ್ರಜ್ಞಾನದ ಬಳಕೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ನಾವು ಸದಾ ಸಿದ್ಧರು. ಅವಿಭಕ್ತ ಕುಟುಂಬಗಳು ಮಾಯವಾಗಿವೆ.

ವಿಭಕ್ತ ಕುಟುಂಬಗಳೇ ಕುಟುಂಬ ವ್ಯವಸ್ಥೆಯನ್ನು ಪ್ರತಿನಿಧಿಸುವ ಕಾಲ ಇವತ್ತು. ಗಂಡ, ಹೆಂಡತಿಯರಿಬ್ಬರೂ ಹೊರಗೆ ದುಡಿದು ಬರುವ ಕುಟುಂಬಗಳ ಸಂಖ್ಯೆ ಹೆಚ್ಚಾಗತೊಡಗಿದೆ. ದುಡಿದು ಬಂದು ಆಹಾರ ಪದಾರ್ಥಗಳನ್ನು ತಯಾರಿಸಿ ಉಣ್ಣುವಷ್ಟು ವ್ಯವಧಾನವೂ ಇಲ್ಲ. ಎಲ್ಲವೂ ಇಂಟರ್‌ನೆಟ್‌ ವೇಗದಲ್ಲಿ ಮುಗಿದುಹೋಗಬೇಕೆಂದು ಬಯಸುವ ವರ್ಗ ಹೆಚ್ಚಾಗುತ್ತಿದೆ. ಈ ಎಲ್ಲಾ ವೈರುಧ್ಯಗಳ ನಡುವೆ ಹೊಸತೊಂದು ವ್ಯವಹಾರ ನಮ್ಮೆಲ್ಲರ ಗಮನವನ್ನು ಸೆಳೆಯುತ್ತಿದೆ. ಆ ವ್ಯವಹಾರವೇ ಆಹಾರ ವಿತರಣೆಯ ವ್ಯವಹಾರ. ಇದೊಂದು ಹೊಸ ಐಡಿಯಾ. ಅಸ್ತಿತ್ವಕ್ಕೆ ಬಂದು ಸುಮಾರು ಒಂದು ದಶಕವಾಗಿ ದೆ. ತಂತ್ರಜ್ಞಾನ ಆಧಾರಿತ ಆ್ಯಪ್‌ಗ್ಳ ಮೂಲಕ ನಮಗೆ ಬೇಕಾದ ತಿಂಡಿ ತಿನಿಸುಗಳನ್ನು ಹೋಟೆಲಿಗೆ ಹೋಗಿ ತಿನ್ನುವ ಬದಲು ಆ್ಯಪ್‌ ಬಳಸಿ ಬೇಕಾದಾಗ, ಬೇಕೆನಿಸುವ ತಾಣದಿಂದ ಮನೆ ಬಾಗಿಲಿಗೆ ತರಿಸಿ ಮನೆಯವರೊಡನೆ ಜೊತೆಗೂಡಿ ತಿಂದು ಮಜಾ ಮಾಡುವ ಹೊಸ ಪ್ರವೃತ್ತಿಯೊಂದು ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ಇತ್ತೀಚಿನವರೆಗೂ ಮನೆಯಲ್ಲೇ ತಯಾರಿಸಿದ ತಿಂಡಿ ಆರೋಗ್ಯಕರವಾದದ್ದು, ಹೊರಗಿನ ತಿಂಡಿ ಅಷ್ಟಕ್ಕಷ್ಟೇ ಎನ್ನುತ್ತಿದ್ದ ಮಂದಿ ಈ ಹೊಸ ಪ್ರವೃತ್ತಿಗೆ ಮಾರು ಹೋಗುತ್ತಿದ್ದಾರೆ.

ಆಹಾರ ವಿತರಣಾ ಆ್ಯಪ್‌ಗಳು ಇವತ್ತು ಸಣ್ಣ ಸಣ್ಣ ನಗರಗಳಲ್ಲೂ ಬಹಳಷ್ಟು ಸದ್ದು ಮಾಡುತ್ತಿವೆ. ಇಲ್ಲಿ ಎಲ್ಲವೂ ಕ್ಯಾಶ್‌ ರಹಿತ ವ್ಯವಹಾರ. ಈ ಆ್ಯಪ್‌ಗ್ಳು ಮಿಲೇನಿಯಲ್‌ ವರ್ಗದ ಗ್ರಾಹಕರ ಜೇಬಿಗೆ ಕನ್ನ ಹಾಕಿದಂತಿದೆ. ಈ ವರ್ಗಕ್ಕೆ ಈ ಆ್ಯಪೇ ಸರ್ವಸ್ವ. ಈ ಆ್ಯಪ್‌ಗ್ಳೇ ಹಸಿವನ್ನು ತಣಿಸುವ ಸಾಧನವಾಗಿವೆ. ಸ್ಮಾರ್ಟ್‌ಫೋನ್‌ ಮೂಲಕ ನಮಗಿಷ್ಟವಾದ ಹೋಟೆಲಿನ ಮೆನುಕಾರ್ಡ್‌ ಹುಡುಕಿ ನಮಗೆ ಬೇಕಾದ ತಿಂಡಿ ತಿನಿಸುಗಳನ್ನು ಕ್ಷಣ ಮಾತ್ರದಲ್ಲಿ ತರಿಸಿಕೊಳ್ಳಬಹುದಾಗಿದೆ. ಸ್ಥಳೀಯ ಆ್ಯಪ್‌ಗ್ಳಲ್ಲದೆ ಜೊಮಾಟೊ, ಸ್ವಿಗ್ಗಿ ಈ ಮಾರುಕಟ್ಟೆಯನ್ನು ಬಾಚಿಕೊಂಡಿವೆ. ಇನ್ನೇನು ಅಮೇಜಾನ್‌ ಕಂಪೆನಿಯೂ ಸಹ ಆಹಾರ ವಿತರಣಾ ಸೇವೆಯನ್ನು ನೀಡಲು ಈ ಕ್ಷೇತ್ರಕ್ಕೆ ಲಗ್ಗೆ ಇಡುವುದರೊಂದಿಗೆ ಭಾರೀ ಸ್ಪರ್ಧೆ ನೀಡುವ ಮುನ್ಸೂಚನೆಯನ್ನು ನೀಡಿದೆ.

ಮಣಿಪಾಲದ ಜೊಮ್ಯಾಟೊ ಅಧಿಕಾರಿಯೊಬ್ಬರ ಪ್ರಕಾರ ಸುಮಾರು ಎರಡು ವರುಷಗಳ ಹಿಂದೆ ದಿನಂಪ್ರತಿ 300 ರಷ್ಟು ಆರ್ಡರ್‌ಗಳನ್ನು ಸ್ವೀಕರಿಸುತ್ತಿದ್ದ ಈ ಸಂಸ್ಥೆ ಇವತ್ತು ದಿನಂಪ್ರತಿ 3000 ದಷ್ಟು ಆರ್ಡರ್‌ ಗಳನ್ನು ಸ್ವೀಕರಿಸುತ್ತಿದೆ. ಈ ಅಂಕಿ ಅಂಶವು ಈ ವ್ಯವಹಾರದ ಜನಪ್ರಿಯತೆ ಯನ್ನು ಗ್ರಾಹಕರ ಕೊಳ್ಳುವ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ. ದಿನಂಪ್ರತಿ ಡೆಲಿವರಿ ಹುಡುಗರು ಸುಮಾರು ರೂ.1500 ರಷ್ಟು ಸಂಪಾ ದನೆ ಮಾಡುತ್ತಾರೆ. ಇನ್ನು ಕೆಲವು ಡೆಲಿವರಿ ಹುಡುಗರು ತಿಂಗಳಿಗೆ ರೂ.1,50,000 ಗಳಷ್ಟು ದುಡಿಯುತ್ತಿದ್ದಾರೆ. ಇವತ್ತು ಸಣ್ಣ ಸಣ್ಣ ಜನ ಪ್ರಿಯ ಹೆಸರುವಾಸಿ ತಿಂಡಿ ತಯಾರಕರ, ಹೋಟೆಲ್‌ಗ‌ಳ ಆಸುಪಾಸುಗಳಲ್ಲಿ ಆಕರ್ಷಕ ಬಣ್ಣಗಳ ಸಮವಸ್ತ್ರ ಧರಿಸಿರುವ ಯುವ ವರ್ಗವೊಂದು ತಿಂಡಿ ತಿನಸುಗಳನ್ನು ತಮ್ಮ ಗ್ರಾಹಕರಿಗೆ ಶೀಘ್ರದಲ್ಲಿ ತಲುಪಿಸಲು ಕಾತರರಾಗಿ ನಿಂತಿರುವುದು ನಾವು ನೋಡುವ ಸಾಮಾನ್ಯ ದೃಶ್ಯ.

ಇವರ ಕೆಲಸ ಇಂಟರ್‌ನೆಟ್‌ ವೇಗದಲ್ಲಿ ತಮ್ಮ ಗ್ರಾಹಕರಿಗೆ ತಿಂಡಿ ತಿನಸುಗಳನ್ನು ಮನೆಬಾಗಿಲಿಗೆ ತಲುಪಿಸುವುದು. ನಮ್ಮ ತಿನ್ನುವ ಅಭ್ಯಾಸವೂ ಬದಲಾಗಿದೆ. ಪ್ರತಿದಿನ ಮನೆಯಲ್ಲಿ ತಯಾರಿಸಿದ ತಿಂಡಿಯನ್ನು ತಿಂದು ಬೋರ್‌ ಆದಾಗ ಬದಲಾವಣೆಗೋಸ್ಕರ ಈ ಆ್ಯಪ್‌ಗ್ಳಿಗೆ ವಾರಕ್ಕೊಮ್ಮೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಹಗಲು ರಾತ್ರಿ ಎಲ್ಲವೂ ಒಂದೇ. ದೊಡ್ಡ ನಗರಗಳು ಮಲಗುವುದೇ ಇಲ್ಲ. ಹಗಲು ರಾತ್ರಿ ಎನ್ನದೆ ವ್ಯವಹಾರ. ಪಟ್ಟಣಗಳ ಆಧುನಿಕತೆ, ಮೆರುಗಿಗೆ ಮಾರು ಹೋಗಿರುವ ನಮ್ಮ ಹಳ್ಳಿಯ ಜನರು ಉದ್ಯೋಗವನ್ನು ಹರಸುತ್ತಾ ಪಟ್ಟಣವನ್ನೇ ಅಪ್ಪಿಕೊಂಡವರಿದ್ದಾರೆ. ಪಟ್ಟಣದ ಜನಸಂಖ್ಯೆಯ ಹೆಚ್ಚಳದಿಂದಾಗಿ ಈ ವ್ಯವಹಾರಕ್ಕೆ ಉಜ್ವಲ ಭವಿಷ್ಯವಂತೂ ಖಂಡಿತ.

ಲಾಭ ಏನು?
ಅಡುಗೆ ತಯಾರಿಸಲು ಬೇಕಾದ ಸಾಮಾ ನುಗಳನ್ನು ತರುವ, ಜೋಡಿಸುವ ಕೆಲಸವೇ ಇಲ್ಲ. ಅಡುಗೆ ಮನೆಯ ಅಗತ್ಯವೂ ಇಲ್ಲ. ಹಸಿವನ್ನು ತಣಿಸಲು ಮನೆಯಿಂದ ಹೊರಹೋಗಬೇಕಾಗಿಲ್ಲ. ಟ್ರಾಫಿಕ್‌ ಜಾಮ್‌ನ ಕಿರಿಕಿರಿ ಇಲ್ಲ. ಪೆಟ್ರೋಲ್‌ ಉಳಿತಾಯವಾಗುತ್ತದೆ.ಟಿವಿ ಸೀರಿಯಲ್‌ ಮಿಸ್‌ ಮಾಡಿಕೊಳ್ಳುವ ಪ್ರಮೇಯ ಇಲ್ಲ. ಸಮಯವೂ ಉಳಿತಾಯ. ಒಂದೇ ಕ್ಲಿಕ್‌ ನಲ್ಲಿ ನಮ್ಮ ಬೆರಳ ತುದಿಯಲ್ಲಿ ನಮಗೆ ಬೇಕಾದದ್ದನ್ನು ದೇಶಧ್ದೋ, ವಿದೇಶಧ್ದೋ ಎಲ್ಲವನ್ನೂ ಕುಳಿತಲ್ಲೇ ಪಡೆಯುವುದು ಸಾಧ್ಯ. ಇನ್ನು ತಯಾರಕರಿಗೂ ಕಟ್ಟಡ, ಫ‌ರ್ನಿಚರ್‌ಗಾಗಿ ಖರ್ಚು ಮಾಡುವ ಅಗತ್ಯವಿಲ್ಲ. ಹೋಟೆಲ್‌ಗ‌ಳಲ್ಲಿ ಇವತ್ತು ಗ್ರಾಹಕರು ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ ವ್ಯಾಪಾರ ಮಾತ್ರ ಬರೋಬ್ಬರಿ ನಡೆಯುತ್ತದೆ. ಉದ್ಯಮ ಪ್ರಾರಂಭಿಸುವುದೂ ಸುಲಭ. ತಿಂಡಿ ತಿನಸುಗಳನ್ನು ಕಡಿಮೆ ಬೆಲೆಯಲ್ಲೂ ಒದಗಿಸಬಹುದು. ಈ ವಿತರಣಾ ಆ್ಯಪ್‌ ಗಳು ಗ್ರಾಹಕರ ಅನುಕೂಲಕರ ಅಂಗಡಿಗಳಾಗಿ ಕೆಲಸ ಮಾಡುತ್ತಿವೆ. ತಯಾರಕರು ತಯಾರಿಸಿದ ತಿಂಡಿಯನ್ನು ನಾವು ಸ್ಮಾರ್ಟ್‌ ಫೋನ್‌ ಮೂಲಕ ನೋಡಿ ತಿಳಿದು ಮನೆ ಬಾಗಿಲಲ್ಲೇ ಪಡೆದುಕೊಂಡು ಅದರ ರುಚಿಯನ್ನು ಸವಿಯುವ ನಮ್ಮ ಪ್ರವೃತ್ತಿಯು ಮತ್ತಷ್ಟು ಸ್ಮಾರ್ಟ್‌ ಆ್ಯಪ್‌ ವ್ಯವಹಾರ ಉದ್ಯಮಕ್ಕೆ ಹೆದ್ದಾರಿಯಾಗುವುದಂತೂ ಖಂಡಿತ. ಈ ಪ್ರವೃತ್ತಿಯ ಜೊತೆಗೆ ನಮ್ಮ ಜೇಬಿಗೆ ಕತ್ತರಿ ಮೀಳು ವುದಂತೂ ಸತ್ಯ. ಆಯ್ಕೆ ಗ್ರಾಹಕನದ್ದು.

– ಡಾ. ರಾಘವೇಂದ್ರ ರಾವ್‌

ಟಾಪ್ ನ್ಯೂಸ್

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.