ಶಿಕ್ಷಣದ ಹಕ್ಕು ನೀಡಿ ಇಲ್ಲವೇ ಶಿರಚ್ಛೇದಿಸಿ!


Team Udayavani, Jan 5, 2023, 11:10 AM IST

ಶಿಕ್ಷಣದ ಹಕ್ಕು ನೀಡಿ ಇಲ್ಲವೇ ಶಿರಚ್ಛೇದಿಸಿ!

“ನಮಗೆ ಶಿಕ್ಷಣ ಕೊಡಿ ಇಲ್ಲವೇ ನಮ್ಮನ್ನು ಕೊಂದು ಬಿಡಿ’-ಇದು ಸದ್ಯ ಅಫ್ಘಾನಿಸ್ಥಾನದಲ್ಲಿ ಮಹಿಳೆಯರಿಂದ ಕೇಳಿ ಬರುತ್ತಿರುವ ಕೂಗು. ಅಫ್ಘಾನಿಸ್ಥಾನದಲ್ಲಿ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶವನ್ನು ನಿಷೇಧಿಸಿದ ಬೆನ್ನಲ್ಲೇ ದೇಶಾದ್ಯಂತ ಹೆಣ್ಣು ಮಕ್ಕಳು ತಮ್ಮನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಿಳೆಯರಿಗೆ ಶಿಕ್ಷಣಕ್ಕೆ ಅವಕಾಶ ಕೊಡದಿದ್ದರೆ ನಾವು ಸಹ ಶಿಕ್ಷಣವನ್ನು ಪಡೆಯುವುದಿಲ್ಲ ಎಂದು ಅಲ್ಲಿನ ಕೆಲವೊಂದು ವಿ.ವಿ. ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಲಾರಂಭಿಸಿದ್ದಾರೆ. ಪುರುಷ ಪ್ರಾಧ್ಯಾಪಕರು ಕೂಡ ಮಹಿಳೆಯರ ಈ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

ಅಫ್ಘಾನಿಸ್ಥಾನದಲ್ಲಿ 1996ರಿಂದ ಆಡಳಿತ ನಡೆಸುತ್ತಿದ್ದ ತಾಲಿಬಾನ್‌ 2001ರಲ್ಲಿ ಯುಎಸ್‌ ಆಕ್ರಮಣದ ಅನಂತರ ಅಲ್ಲಿಂದ ಹಿಂದೆ ಸರಿದಿತ್ತು. ಎರಡು ದಶಕಗಳ ಬಳಿಕ ಅಮೆರಿಕ ಸಹಿತ ನ್ಯಾಟೋ ಪಡೆಗಳು ಅಲ್ಲಿಂದ ವಾಪಸಾಗುತ್ತಿದ್ದಂತೆಯೇ 2021ರಲ್ಲಿ ತಾಲಿಬಾನಿಗಳು ಮತ್ತೂಮ್ಮೆ ಅಫ್ಘಾನಿಸ್ಥಾನದ ಮೇಲೆ ದಾಳಿ ನಡೆಸಿ ಮತ್ತೆ ಅಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದರು. ಆರಂಭದಲ್ಲಿ ತಾಲಿಬಾನಿ ಸರಕಾರ ಮಹಿಳೆಯರ ಬಗೆಗಿನ ತನ್ನ ಕಠಿನ ನಿಲುವನ್ನು ಸಡಿಲಿಸುವ ಸಂಕೇತ ನೀಡಿತ್ತು. ಅದರಂತೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಸಾರಿತ್ತು. ಆದರೆ ದೇಶದ ಆಡಳಿತದ ಮೇಲೆ ತನ್ನ ಹಿಡಿತ ಬಿಗಿಗೊಳ್ಳುತ್ತಿದ್ದಂತೆಯೇ ಈಗ ತಾಲಿಬಾನಿ ಸರಕಾರ ಮಹಿಳೆಯರಿಗೆ ಬುರ್ಖಾ ಧಾರಣೆ ಕಡ್ಡಾಯ, ಮಹಿಳೆಯರನ್ನು ಶಿಕ್ಷಣದಿಂದ ದೂರವಿರಿಸುವಂತಹ ತನ್ನ ಈ ಹಿಂದಿನ ಸ್ತ್ರೀ ವಿರೋಧಿ ನಿಯಮಗಳನ್ನು ಜಾರಿಗೆ ತರುವ ಮೂಲಕ ಹಳೆಯ ಚಾಳಿಯನ್ನು ಮುಂದುವರಿಸಿದೆ.

 ಸಂಪ್ರದಾಯಕ್ಕೆ ಜೋತುಬಿದ್ದ  ಕುಟುಂಬಗಳು : 

ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಅಫ್ಘಾನಿಸ್ಥಾನದ ಸಾಂಪ್ರದಾಯಿಕ ಕಟ್ಟುಪಾಡುಗಳು ಒಂದು ಕಾರಣ. ಜತೆಗೆ ಕೆಟ್ಟಿರುವ ಆರ್ಥಿಕ ವ್ಯವಸ್ಥೆ, ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಕೊರತೆ, ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಪೂರಕ ವಾತಾವರಣವಿಲ್ಲದೇ ಇರುವುದು, ಅಪ್ರಾಪ್ತ ಹೆಣ್ಣು ಮಕ್ಕಳಿಗೆ ವಿವಾಹ…ಇವೆಲ್ಲ ಹೆಣ್ಣುಮಕ್ಕಳ ಶಿಕ್ಷಣಕ್ಕಿರುವ ತೊಡಕುಗಳು. ಇನ್ನು ಶಿಕ್ಷಕರ ಕೊರತೆ  ಕೂಡ ಇಲ್ಲಿನ ಶಾಲೆಗಳನ್ನು ಕಾಡುತ್ತಿವೆ. 2018ರ ವರದಿಯ ಪ್ರಕಾರ ಶೇ.79 ರಷ್ಟು ಮಾತ್ರ ಅರ್ಹ ಶಿಕ್ಷಕರಿದ್ದರು. ದಕ್ಷಿಣ ಏಷ್ಯಾದ ದೇಶಗಳಿಗೆ ಹೋಲಿಸಿದರೆ ಅಫ್ಘಾನಿಸ್ಥಾನ ಶಿಕ್ಷಣ ಹಾಗೂ ಅಭಿವೃದ್ಧಿಯಲ್ಲಿ ಇಲ್ಲಿನ ಉಳಿದೆಲ್ಲ ದೇಶಗಳಿಗಿಂತ ಹಿಂದುಳಿದಿದೆ.

ವಿಶ್ವದಲ್ಲಿಯೇ ಕಡಿಮೆ ಸಾಕ್ಷರತೆ:

ಪ್ರಪಂಚದಲ್ಲಿಯೇ ಅತೀ ಕಡಿಮೆ ಸಾಕ್ಷರರನ್ನು ಅಫ್ಘಾನಿಸ್ಥಾನ ಹೊಂದಿದೆ. ಆದರೆ ದೇಶದಲ್ಲಿ ತಾಲಿಬಾನೇತರ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಂದರೆ 2001ರ ಅನಂತರ ಅಕ್ಷರಸ್ಥರ ಸಂಖ್ಯೆ ಮೊದಲಿಗಿಂತ ಏರಿಕೆಯನ್ನು ಕಂಡಿತ್ತು. ಕಳೆದ ಒಂದು ದಶಕದಲ್ಲಿ ಹೆಣ್ಣುಮಕ್ಕಳ ಶಿಕ್ಷಣದಲ್ಲಿಯೂ ಕೊಂಚ ಪ್ರಗತಿ ಕಂಡುಬಂದಿತ್ತು ಎಂದು ವಿಶ್ವಸಂಸ್ಥೆಯ ಅಂಕಿಅಂಶಗಳು ಹೇಳುತ್ತವೆ.

2011ರಲ್ಲಿ ಅಫ್ಘಾನಿಸ್ಥಾನದಲ್ಲಿ ಶೇ. 32ರಷ್ಟಿದ್ದ ಹೆಣ್ಣು ಮಕ್ಕಳ ಶಿಕ್ಷಣ 2018ರಲ್ಲಿ ಶೇ. 43ಕ್ಕೆ ಏರಿಕೆ ಕಂಡಿದೆ.  ಇಂದಿಗೂ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಹೋಲಿಸಿದಾಗ ಒಟ್ಟಾರೆಯಾಗಿ ಶೇ. 27ರಷ್ಟು  ಅನಕ್ಷರಸ್ಥರು ಅಫ್ಘಾನಿಸ್ಥಾನದಲ್ಲಿದ್ದಾರೆ.

ಶಿಕ್ಷಣದ ಜತೆಗೆ ಅಫ್ಘಾನಿಸ್ಥಾನ ಎದುರಿಸುತ್ತಿರುವ ಇನ್ನೊಂದು ಸಮಸ್ಯೆ ನಿರುದ್ಯೋಗ. ಇದರಲ್ಲಿ ಯುವಕರ ಸಂಖ್ಯೆಯೇ ಅಧಿಕ.

3.7 ಮಿಲಿಯನ್‌ ಶಿಕ್ಷಣ ವಂಚಿತರು :

ದಕ್ಷಿಣ ಹಾಗೂ ಪಶ್ಚಿಮ ಏಷ್ಯಾದಲ್ಲಿ ಅಫ್ಘಾನಿಸ್ಥಾನ ಹೆಚ್ಚು ಯುವ ಸಮೂಹವನ್ನು ಹೊಂದಿರುವ ದೇಶಗಳಲ್ಲಿ ಒಂದು. ಜತೆಗೆ ಅಷ್ಟೇ ಬಡತನವನ್ನು ಹೊಂದಿರುವ ದೇಶವೂ ಹೌದು. ಅಫ್ಘಾನಿಸ್ಥಾನದಲ್ಲಿ ಸುಮಾರು 30 ವರ್ಷಗಳಿಂದಲೂ

ಶಿಕ್ಷಣ ವ್ಯವಸ್ಥೆ ಏರಿಳಿತದಲ್ಲೇ ಸಾಗುತ್ತಿದೆ.  ಇಲ್ಲಿನ ಅದೆಷ್ಟೋ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಪಡೆಯುವುದು ಕೂಡ ಇಂದಿಗೂ ಕನಸಾಗಿ ಉಳಿದಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣದ ಪರಿಸ್ಥಿತಿಯನ್ನು ಹೇಳತೀರದು. ವಿಶ್ವಸಂಸ್ಥೆಯ ಅಂಕಿ-ಅಂಶದ ಪ್ರಕಾರ ಅಫ್ಘಾನಿಸ್ಥಾನದಲ್ಲಿ ಸುಮಾರು 3.7 ಮಿಲಿಯನ್‌ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅದರಲ್ಲಿ ಶೇ. 60ರಷ್ಟು ಹೆಣ್ಣು ಮಕ್ಕಳು.

ಬೀದಿಗಿಳಿದ ಮಹಿಳೆಯರು :

ಇವೆಲ್ಲದರ ನಡುವೆ ತಮ್ಮ ಹಕ್ಕುಗಳಿಗಾಗಿ, ದೇಶದಲ್ಲಿನ ತಮ್ಮ ಅಸ್ತಿತ್ವಕ್ಕಾಗಿ ಅಲ್ಲಿನ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಧೃತಿಗೆಡದೇ ನಿರಂತರವಾಗಿ ಹೋರಾಡುತ್ತಲೇ ಇದ್ದಾರೆ. ಇದೀಗ ತಾಲಿಬಾನ್‌ ಸರಕಾರ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಪ್ರವೇಶಕ್ಕೆ ನಿರ್ಬಂಧವನ್ನು ಹೇರಿದೆ. ಅಲ್ಲಿನ ಕ್ರೀಡಾಪಟುಗಳು ಇದನ್ನು ತಾಲಿಬಾನ್‌ ಆಡಳಿತದ ದುರಂತ ಎಂದು ಜರೆದಿದ್ದಾರೆ. ತಾಲಿಬಾನ್‌ನ ಈ ಕ್ರಮವನ್ನು ಭಾರತ ಸಹಿತ ಹಲವು ರಾಷ್ಟ್ರಗಳು ಖಂಡಿಸಿವೆ. ಅಫ್ಘಾನಿ ಸ್ಥಾನ ದಲ್ಲಿ ಸಾವಿರಾರು ವಿದ್ಯಾ ರ್ಥಿನಿ ಯರು ಬೀದಿ ಗಿಳಿದು ಪ್ರತಿ ಭಟಿಸುತ್ತಿದ್ದಾರೆ. ಶಿಕ್ಷಣ ದಿಂದ ನಿರ್ಬಂಧಿಸಿ ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಬದಲು ನಮ್ಮನ್ನು ಒಂದೇ ಸಲ ಶಿರಚ್ಛೇದ ಮಾಡಿ ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿ ಕೊಳ್ಳುತ್ತಿ ದ್ದಾರೆ. ಇದರ ಬೆನ್ನಲ್ಲೇ ಅಲ್ಲಿನ ಪುರುಷರು ಅದ ರಲ್ಲೂ ಮುಖ್ಯವಾಗಿ ಯುವಕರು ತಮ್ಮ ತರಗತಿಗಳನ್ನು ಬಹಿಷ್ಕರಿಸಿ ಮಹಿಳೆಯರ ಹಕ್ಕಿಗಾಗಿ ದನಿಗೂಡಿಸಿ ದ್ದಾರೆ. ಇದರ ಹೊರ ತಾಗಿಯೂ “ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದು ಹಾಗೂ ಉದ್ಯೋಗದಲ್ಲಿ ತೊಡಗಿಕೊಳ್ಳುವುದು ಅಫ್ಘಾನಿಸ್ಥಾನದ ಸಂಸ್ಕೃತಿಯಲ್ಲ’ ಎಂದು ತಾಲಿಬಾನ್‌ ಸರಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ವಿಶ್ವಸಂಸ್ಥೆ ಆದಿಯಾಗಿ ಪ್ರಪಂಚದ ಬಹುತೇಕ ರಾಷ್ಟ್ರಗಳು ಅಫ್ಘಾನ್‌ ಮಹಿಳೆಯರ ಪರ ದನಿ ಎತ್ತಿದರೂ ತಾಲಿಬಾನಿಗಳ ಕಿವಿಗೆ ಇವ್ಯಾವೂ ಕೇಳಿಸುತ್ತಿಲ್ಲ.

ಲೆಟ್‌ಹರ್‌ಲರ್ನ್ ಅಭಿಯಾನ :

ಅಫ್ಘಾನಿಸ್ಥಾನದಲ್ಲಿ ಹೆಣ್ಣು ಮಕ್ಕಳಿಗೆ ನಿರ್ಬಂಧಿಸಲಾಗಿರುವ ಶಿಕ್ಷಣ ಹಕ್ಕನ್ನು ಮರಳಿ ನೀಡಬೇಕೆಂದು ಆಗ್ರಹಿಸಿ ಸಾಮಾ ಜಿಕ ಜಾಲತಾಣಗಳಲ್ಲಿ  ಲೆಟ್‌ಹರ್‌ಲರ್ನ್ ಅಭಿಯಾನವನ್ನು ಆರಂಭಿಸ  ಲಾಗಿದೆ. ಈ ಅಭಿಯಾನಕ್ಕೆ ದೇಶ ವಿದೇಶಗಳ ಗಣ್ಯರು, ಕ್ರೀಡಾಪಟುಗಳ ಸಹಿತ ಜನರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಈ ಮೂಲಕ ಅಫ್ಘಾನ್‌ನ ಹೆಣ್ಣು ಮಕ್ಕಳ ಹೋರಾಟಕ್ಕೆ ಭಾರೀ ಬಲ ಲಭಿಸಿದೆ.

ಬೀದಿಗಳಲ್ಲಿ ದೌರ್ಜನ್ಯ : ತಾಲಿಬಾನ್‌ ಸರಕಾರ ರಚಿಸಿದ ಅನಂತರ ತಾಲಿಬಾನ್‌ ಸೈನಿಕರು ದೇಶದ ರಸ್ತೆ, ಬೀದಿಗಳಲ್ಲಿ ಗನ್‌ಗಳಿಂದ ಆಗಾಗ ದಾಳಿ ನಡೆಸುತ್ತಿದ್ದಾರೆ. ಅಲ್ಲದೇ ರಸ್ತೆಗಳಲ್ಲೇ ಮಹಿಳೆಯರು, ಮಕ್ಕಳ ಮೇಲೆ ಗುಂಡು ಹಾರಿಸಿ ಹತ್ಯೆಗೈಯುತ್ತಿದ್ದಾರೆ.

ಅಷ್ಟು ಮಾತ್ರವಲ್ಲದೆ ವಿನಾಕಾರಣ ಥಳಿಸಿ ದೌರ್ಜನ್ಯವೆಸಗುತ್ತಿದ್ದಾರೆ. ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಒಂದಿಷ್ಟು ನಕ್ಕರೆ,

ಜೋರಾಗಿ ಮಾತನಾಡಿದರೂ ಅವರಿಗೆ

ಹೊಡೆದು ಹಿಂಸೆ ನೀಡುವ

ಘಟನೆಗಳು ಸಾಕಷ್ಟು

ವರದಿಯಾಗಿವೆ.

ಭೂಗತ ಶಾಲೆಗಳು! :

ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನಿರ್ಬಂಧಿಸಿದ ಆರಂಭದಲ್ಲಿ ಅಫ್ಘಾನಿಸ್ಥಾನದಲ್ಲಿ ಅಂಡರ್‌ಗ್ರೌಂಡ್‌ಗಳಲ್ಲಿ ಸಣ್ಣ ಸಣ್ಣ ಮನೆಗಳ ಮಾದರಿಯಲ್ಲಿ ಶಾಲೆಗಳು ಆರಂಭಗೊಂಡಿದ್ದವು. ಹೆಣ್ಣುಮಕ್ಕಳು ತಾಲಿಬಾನ್‌ಗಳ ಕಣ್ಣುತಪ್ಪಿಸಿ ಈ ಶಾಲೆಗಳಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದರು. ತಾಲಿಬಾನ್‌ ಸೈನಿಕರು ಕೇಳಿದಾಗ ಹೊಲಿಗೆ ತರಗತಿಗೆ ಹೋಗುತ್ತಿದ್ದೇವೆ ಎಂದು ಹೇಳಿ, ಪುಸ್ತಕಗಳನ್ನು ಬುರ್ಖಾದಲ್ಲಿ ಅಡಗಿಸಿಕೊಂಡು ಈ  ಶಾಲೆಗಳಿಗೆ ಹೋಗುತ್ತಿದ್ದರು.

ಅಫ್ಘಾನಿಸ್ಥಾನದ ಜನಸಂಖ್ಯೆ:

4,11,00,911

(ಜಾಗತಿಕ ಜನಸಂಖ್ಯೆಯ ಶೇ. 0.5)

ಪುರುಷರು:

20.43

ಮಿಲಿಯನ್‌

ಮಹಿಳೆಯರು:

19.4

ಮಿಲಿಯನ್‌

ವರ್ಷ   ಅಕ್ಷರಸ್ಥರ ಪ್ರಮಾಣ (ಶೇ.)

1979       18.16

2011       31.45

2021       37.27

ಹೆಣ್ಣು ಮಕ್ಕಳಿಗೆ ನಿರ್ಬಂಧಗಳ ಸರಮಾಲೆ :

 ಸರಕಾರಿ ಆಡಳಿತದಲ್ಲಿ  ಮಹಿಳೆಯರು ಭಾಗವಹಿಸಕೂಡದು

 ಹೆಣ್ಣು ಮಕ್ಕಳಿಗೆ ಶಾಲಾ ಶಿಕ್ಷಣ ಹಾಗೂ ಉದ್ಯೋಗದಿಂದ ನಿರ್ಬಂಧ

 ಹೆಣ್ಣು ಮಕ್ಕಳು ಹೊರಗಡೆ ಅನಗತ್ಯವಾಗಿ ಓಡಾಡಬಾರದು.

 ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾಧಾರಣೆ ಕಡ್ಡಾಯ.

 ಪುರುಷರೊಂದಿಗೆ ಮಾತ್ರ ದೂರ ಪ್ರಯಾಣ ಮಾಡಬೇಕು.

 ಟಿ.ವಿ. ಕಾರ್ಯಕ್ರಮಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ,

 ಪಾರ್ಕ್‌ಗಳಲ್ಲಿ ಮಹಿಳೆಯರು ಹಾಗೂ ಪುರುಷರು ಜತೆಯಾಗಿ ಓಡಾಡುವಂತಿಲ್ಲ.

-ವಿಧಾತ್ರಿ ಭಟ್‌, ಉಪ್ಪುಂದ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.