ಪುಸ್ತಕ ವಿಮರ್ಶೆ :  ‘ಇಜಯಾ’ಎಂಬ ಹೊಸ ಧ್ವನಿ


ಶ್ರೀರಾಜ್ ವಕ್ವಾಡಿ, May 9, 2021, 4:09 PM IST

9-3-1

ಹೊಸ ತಲೆಮಾರಿನ ಕಥೆಗಾರ್ತಿಯರ ಸಾಲಿನಲ್ಲಿ ತಮ್ಮ ವಿಶಿಷ್ಟ ಶೈಲಿಯ ಮೂಲಕ ಭಿನ್ನವಾಗಿ ನಿಲ್ಲುವ ಪೂರ್ಣಿಮಾ ಮಳಗಿಮನಿ ತಮ್ಮ ಇಂಗ್ಲಿಷ್ ಕಥಾ ಸಂಕಲನ ‘ಎನಿವನ್ ಬಟ್ ದಿ ಸ್ಪೌಸ್’ ನಂತರ ಈಗ ‘ಇಜಯಾ’ಎಂಬ ಕಾದಂಬರಿಯೊಂದಿಗೆ ಓದುಗರ ಮುಂದೆ ನಿಂತಿದ್ದಾರೆ. ವಸ್ತುವಿನ ನಿರ್ವಹಣೆ, ತಂತ್ರ, ವಿನ್ಯಾಸ   ಮತ್ತು ನಿರೂಪಣಾ ಶೈಲಿಗಳ ಕಾರಣದಿಂದ ಗಮನ ಸೆಳೆಯುವ ಅಂಶಗಳನ್ನು ಹೊಂದಿದ ಕಾದಂಬರಿಯಿದು.

ಕಥಾನಾಯಕಿ ಇಜಯಾಳಿಗೆ ಆ ಹೆಸರನ್ನಿಡುವಾಗ ಅವಳು ಎಲ್ಲರಿಗಿಂತ ಭಿನ್ನಳಾಗಿರಬೇಕೆಂಬುದು ಅವಳ ತಂದೆಯ ಕನಸಾಗಿತ್ತು. ತ್ಯಾಗ ಅನ್ನುವ ಅರ್ಥವನ್ನು ಹೊಂದಿದ ಈ ಪದವನ್ನು ಕೇಳಿ ‘ಅವರ ಹೆಸರಲ್ಲಿ ‘ವಿ’ಮಿಸ್ ಆಗಿದೆಯೇ ‘ಎಂದು ಹಲವರು ಕೇಳುತ್ತಾರೆ. ತಂದೆಯ ಕನಸಿನಂತೆ ಭಿನ್ನಳಾಗಿ ಬೆಳೆಯುವ ಎಲ್ಲಾ ಗುಣಗಳೂ ಇಜಯಾಳಲ್ಲಿದ್ದವು. ಆದರೆ ಅದಕ್ಕೆ ಜಗತ್ತು ಕೊಡುವ ಅವಕಾಶಗಳೆಷ್ಟು ಎಂದು ನಾವು ಪ್ರಶ್ನಿಸುವಂತೆ ಮಾಡುತ್ತದೆ ಈ ಕಾದಂಬರಿ.

ಓದಿ : ನೀವು ಉಳಿಯುತ್ತಿರೋ ಇಲ್ಲವೋ ನಾನಂತೂ ಉಳಿಯಬೇಕು: ಸಚಿವ ಉಮೇಶ್ ಕತ್ತಿ

ಇಜಯಾ ಕೆಲಸ ಮಾಡುತ್ತಿರುವ ಬ್ಯಾಂಕಿನ ಕೆಲಸ ಕಾರ್ಯಗಳ ವಿವರಣೆಗಳು, ವೆಂಕಟ್ ಅನ್ನುವ ಅವಳ ಸಹೋದ್ಯೋಗಿಯ ಅನಿರೀಕ್ಷಿತ ಸಾವು ಮತ್ತು ತದನಂತರ ಬ್ಯಾಂಕಿನ ಚಪರಾಸಿ ಬಸಪ್ಪನ ಮೇಲೆ ಆ ಸಾವು ಬೀರುವ ವಿಚಿತ್ರ ಪರಿಣಾಮಗಳೊಂದಿಗೆ ಆರಂಭವಾಗುವ ಕಾದಂಬರಿ ಮುಂದೆ ಪೂರ್ತಿಯಾಗಿ ಬೇರೆಯೇ ದಾರಿಯನ್ನು ಹಿಡಿಯುತ್ತದೆ. ಅಲ್ಲಿಂದಾಚೆ ಇರುವುದು ಉದ್ಯೋಗಸ್ಥ ಹೆಣ್ಣು ಮಗಳಾಗಿ ಕುಟುಂಬದ ಜವಾಬ್ದಾರಿಯನ್ನೂ ಹೊತ್ತು ಎರಡು ದೋಣಿಗಳ ನಡುವೆ   ಸಮರ್ಥವಾಗಿ ಬದುಕನ್ನು ತೂಗಿಸಿಕೊಂಡು ಹೋಗುತ್ತಿರುವ ಇಜಯಾಳ ಕೌಟುಂಬಿಕ ಜೀವನದ ಚಿತ್ರ. ಬಾಲ್ಯದಿಂದಲೂ ಲೇಖಕಿಯಾಗುವ ಕನಸನ್ನು ಹೊತ್ತ ಇಜಯಾಳನ್ನು ಎಂದೆಂದೂ ಬೆಂಬಲಿಸುವ ಮನೋಭಾವದ ಪತಿ ಸುಧೀರ ಅವಳ ಪಾಲಿಗೆ ಇದ್ದಾನಾದರೂ ಪುರುಷ ಪ್ರಧಾನ ಸಮಾಜವು ಹೆಣ್ಣಿಗೆ ವಿಧಿಸಿದ ಕಟ್ಟುಪಾಡುಗಳ ಪ್ರಶ್ನೆ ಬಂದಾಗ ಅವಳಿಗೆ ಸ್ವಾತಂತ್ರ್ಯವನ್ನು ನಿಷೇಧಿಸುತ್ತಲೇ ಇರುತ್ತಾನೆ. ಮನೆಯಲ್ಲಿ  ಅವಳನ್ನು ಆವರಿಸಿಕೊಂಡಿರುವ ಜವಾಬ್ದಾರಿಗಳು ಅವಳಿಗೆ ಸ್ವಲ್ಪವೂ ಸಮಯ ನೀಡಲಾರವು. ಮದುವೆಗೆ ಮೊದಲು ತಂದೆಯ ಆಶ್ರಯದಲ್ಲಿದ್ದಾಗಲೂ ಅವಳ ಸ್ಥಿತಿ ಭಿನ್ನವಾಗಿರುವುದಿಲ್ಲ.

ಒಮ್ಮೆ ಸಾಂಸಾರಿಕ ಜವಾಬ್ದಾರಿಗಳನ್ನು ಬದಿಗಿಟ್ಟು ಗೋವಾಕ್ಕೆ ಸಂತೋಷ ಯಾನವನ್ನು ಕೈಗೊಂಡ ಗಂಡ-ಹೆಂಡತಿಯರಿಗೆ ಅಲ್ಲಿನ ಹೋಟೆಲಿನಲ್ಲಿ ಮಸಾಜ್ ಮಾಡಿಸುವ ನೆಪದಲ್ಲಿ ಪರಿಚಯವಾಗುವ, ಸ್ವತಃ ಹಿಂದೊಮ್ಮೆ ಲೇಖಕನಾಗಿ ಒಂದು ಕಾದಂಬರಿಯನ್ನೂ ಬರೆದಿದ್ದ ಮಂಜ ಎಂಬವನ ಪರಿಚಯವಾಗುವ ಮೂಲಕ ಕಾದಂಬರಿ ಹೊಸ ತಿರುವನ್ನು ತೆಗೆದುಕೊಳ್ಳುತ್ತದೆ. ಮಂಜ ಕೂಡಾ ಲೇಖಕನಾಗುವ ಕನಸು ಕಂಡು ಸೋತವನೆಂದು ತಿಳಿದಾಗ ಇಜಯಾಗೆ ಅವನ ಬಗ್ಗೆ ಸಹಾನುಭೂತಿ ಹುಟ್ಟಿಕೊಳ್ಳುತ್ತದೆ. ಇಲ್ಲಿಂದ ಮುಂದೆ ಅವಳು ಕೈಗೊಳ್ಳುವ ಸಾಹಸಕಾರ್ಯಗಳಿಗೆ ಮಂಜನೇ ಪ್ರೇರಣೆಯಾಗುತ್ತ ಹೋಗುತ್ತಾನೆ. ಗಂಡ ಎಷ್ಟು ಬೇಡವೆಂದು ಹೇಳಿದರೂ ಕೇಳದೆ ತುಂಬಾ ಅಪಾಯಕಾರಿಯೆನ್ನಿಸಿದ ರಾಫ್ಟಿಂಗಿಗೆ ಹೋಗಿ ಅಪಘಾತದಲ್ಲಿ ಸಿಕ್ಕಿ ಹಾಕಿಕೊಂಡು ಮಂಜನ ಜತೆಗೆ ಒಂದು ನಿರ್ಜನ ದ್ವೀಪದಲ್ಲಿ ಹನ್ನೊಂದು ತಿಂಗಳುಗಳ ಕಾಲ ತೀರಾ ಅಸಹಾಯಕಳಾಗಿ ಮನೆ, ಗಂಡ,ಮಕ್ಕಳನ್ನು ಸೇರಲು ಹಂಬಲಿಸುತ್ತ ಅತೀವ ಕಷ್ಟದಲ್ಲಿ ಕಳೆಯುತ್ತಾಳೆ. ಕೊನೆಗೆ ಮಂಜ   ಅವಳನ್ನು ಉದ್ದೇಶಪೂರ್ವಕವಾಗಿ ಅಲ್ಲಿಗೆ ಕರೆದುಕೊಂಡು ಬಂದನೆಂದೂ ಅವಳು ತನ್ನ ಲೇಖಕಿಯಾಗುವ ಕನಸನ್ನು ನನಸಾಗಿಸಲು ಏಕಾಂತವನ್ನು ಮತ್ತು ಸ್ವಾತಂತ್ರ್ಯವನ್ನು ಒದಗಿಸಿ ಕೊಡುವುದೇ ಅವನ ಉದ್ದೇಶವಾಗಿತ್ತೆಂದೂ ಗೊತ್ತಾಗುತ್ತದೆ. ಆದರೆ ಮನೆಯ ನೆನಪಿನಲ್ಲಿ ಏನೂ ಮಾಡಲಾಗದೆ ಅವಳು ಹುಚ್ಚಿಯಂತಾಗುತ್ತಾಳೆ. ಹೇಗೋ ಒದ್ದಾಡಿ ಅಲ್ಲಿಂದ ಬಿಡಿಸಿಕೊಂಡು ತನ್ನ ಮನೆಗೆ ಬರುತ್ತಾಳೆ. ಅವಳಿಲ್ಲದ ಸ್ಥಿತಿಯಲ್ಲೂ ಎಲ್ಲರೂ ಸುಖವಾಗಿದ್ದಾರೆಂದು ತಿಳಿದು ಯಾರು ಯಾರಿಗೂ ಅನಿವಾರ್ಯವಲ್ಲ ಎಂಬ ಅರಿವು ಮೂಡಿದಾಗ ಬಸಪ್ಪನ ಪರಿಸ್ಥಿತಿ ಅವಳಿಗೆ ನೆನಪಾಗುತ್ತದೆ. ಅವಳಿಗೆ ಆಘಾತವಾಗುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಓದಿ : ಮಾಲ್ಡೀವ್ ಬಾರ್ ನಲ್ಲಿ ಡೇವಿಡ್ ವಾರ್ನರ್ -ಮೈಕಲ್ ಸ್ಲೇಟರ್ ಹೊಡೆದಾಟ! ವಾರ್ನರ್ ಹೇಳಿದ್ದೇನು?

ಇಜಯಾ ದ್ವೀಪದಲ್ಲಿ ಕಳೆಯುವ ಕಾದಂಬರಿಯ ಭಾಗವು ಕನಸಿನಲ್ಲೆಂಬಂತೆ ಚಿತ್ರಿತವಾಗಿದೆ. ಮಂಜ ಇಜಯಾಳ ಮನಸ್ಸಿನೊಳಗೆ ಹುದುಗಿದ ಕನಸುಗಳನ್ನು ನನಸು ಮಾಡಿಕೊಳ್ಳಲೇ ಬೇಕೆಂಬ ಛಲದ ಮತ್ತು ಸ್ವಾತಂತ್ರ್ಯದ ಬಯಕೆಯ ಪ್ರತೀಕವಾಗಿದ್ದಾನೆ. ದ್ವೀಪದಲ್ಲಿ ನಡೆದುದೆಲ್ಲವೂ ಇಜಯಾಳ ಮನಸ್ಸಿನಲ್ಲಿದ್ದ ಸ್ವಾತಂತ್ರ್ಯದ ಬಯಕೆ ಮತ್ತು ಕೌಟುಂಬಿಕ ಜವಾಬ್ದಾರಿಯ ಪ್ರಜ್ಞೆಗಳ ನಡುವಣ ಸಂಘರ್ಷ. ಇದರಲ್ಲಿ ಕೌಟುಂಬಿಕ.  ಸಂಬಂಧಗಳೇ  ಗೆದ್ದು ಅವಳು ಮರಳಿ ಬರುತ್ತಾಳೆ. ಅಲ್ಲೂ ತನ್ನ ನಿರೀಕ್ಷೆಗಳು   ಹುಸಿಯಾದಾಗ ಅವಳು ಕಂಗೆಟ್ಟು ಕುಳಿತುಕೊಳ್ಳುತ್ತಾಳೆ. ಕೊನೆಯಲ್ಲಿ ಗೋವಾದ ದ್ವೀಪದಲ್ಲಿ ಅರ್ಧ ಬರೆದಿಟ್ಟ ಕಾದಂಬರಿ ಕೈಸೇರಿದಾಗ ಅವಳು ತನ್ನ ಕಡುಕಷ್ಟದ ಅನುಭವಗಳನ್ನೂ ಸೇರಿಸಿಕೊಂಡು ಒಂದು ಒಳ್ಳೆಯ ಕೃತಿ ರಚಿಸಿಯಾಳೇನೋ ಎಂಬ ಆಶಾವಾದವನ್ನು ಕಾದಂಬರಿ   ಮೂಡಿಸುತ್ತದೆ.

ಇಂದು ಸ್ತ್ರೀವಾದ-ಸ್ತ್ರೀಪರ ಧ್ವನಿ ಹಾಗೂ ಹೋರಾಟಗಳು ಎಷ್ಟೇ ನಡೆದರೂ  ಒಬ್ಬ  ಸಾಮಾನ್ಯ ಹೆಣ್ಣಿನ ಒಳಮನಸ್ಸು ಅದಕ್ಕಿನ್ನೂ ಸಿದ್ಧವಾಗಿಲ್ಲ , ಈ ಪುರುಷಾಧಿಕಾರದ ಸಮಾಜದಲ್ಲಿ ಹೆಣ್ಣಿನ ಪಾತ್ರವು ಸಂಘರ್ಷ ಮತ್ತು ಸೋಲುಗಳಿಂದ ಇನ್ನೂ ಮುಕ್ತವಾಗಿಲ್ಲ ಎಂಬ ಸತ್ಯವು ಅವಳ ಪಾಲಿನ ದುರಂತವೆಂಬ ಧ್ವನಿ ಆಶಾವಾದದ ಧ್ವನಿಯನ್ನು ಮೀರಿಸುತ್ತದೆಯೇನೋ ಅನ್ನಿಸುತ್ತದೆ.

ಇಜಯಾ ಕೌಟುಂಬಿಕ ಜೀವನದಲ್ಲಿ ಗಂಡನ ಪ್ರಾಮಾಣಿಕ ಪ್ರೀತಿಯ ಹೊರತಾಗಿಯೂ ಕಷ್ಟಗಳನ್ನು ಅನುಭವಿಸುತ್ತಾಳೆ. ಉದ್ಯೊಗಸ್ಥ ಹೆಣ್ಣಾಗಿ ಮನೆಗೆಲಸ,ಅಡುಗೆ ಮತ್ತು ಇತರ ಅನೇಕ ಜವಾಬ್ದಾರಿಗಳನ್ನು ಯಾವುದೇ ಗೊಣಗಾಟವಿಲ್ಲದೆ ಸ್ವೀಕರಿಸಿ ಚಕಚಕನೆ ನಿರ್ವಹಿಸುವ ಚುರುಕು ಹೆಣ್ಣು ಅವಳು. ಆದರೆ ಅವಳ ಒಳಮನಸ್ಸು ಮಾತ್ರ ಸದಾ ಕೊರಗುತ್ತಿರುತ್ತದೆ. ಇಂದಿನ ಮಧ್ಯಮವರ್ಗದ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ನಿಲ್ಲುವ ಇಜಯಾಳ  ಪಾತ್ರ ಚಿತ್ರಣ ಹೃದಯಸ್ಪರ್ಶಿಯಾಗಿರುವುದರೊಂದಿಗೆ ಹೆಣ್ಣುಮಕ್ಕಳ ಸ್ಥಿತಿ ಎಂದು ಬದಲಾಗುವುದೋ ಎಂಬ ಆತಂಕವನ್ನೂ ಹುಟ್ಟಿಸುತ್ತದೆ. ಕೇಶವ ಮಳಗಿ ಮತ್ತು ವಾಸುದೇವ ನಾಡಿಗ್ ಅವರುಗಳ ಮುನ್ನುಡಿಗಳು ಹೆಣ್ಣಿನ ಸ್ಥಿತಿಯ ಬಗ್ಗೆ ಎಷ್ಟೇ ಆಳವಾಗಿ ವಿಮರ್ಶೆ ಮಾಡಿದರೂ ಇಂಥ ಕಾದಂಬರಿಗಳು  ಸೂಕ್ಷ್ಮ ಮನಸ್ಸಿನ ಮಹಿಳಾ ಓದುಗರಲ್ಲಿ ಹುಟ್ಟಿಸಬಹುದಾದ ತಳಮಳ ಬೇರೆಯೇ ರೀತಿಯದು ಅನ್ನಿಸುತ್ತದೆ.

ಕಾದಂಬರಿಯ ಭಾಷೆ ಮತ್ತು ನಿರೂಪಣಾಶೈಲಿ ಆಕರ್ಷಣೀಯವಾಗಿದೆ. ದ್ವೀಪದ ಚಿತ್ರಣದ ಸನ್ನಿವೇಶದಲ್ಲಿ ಕೆಲವೆಡೆ  ಇಂಗ್ಲಿಷ್ ಕಾದಂಬರಿಗಳ ಅನುಕರಣೆಯಿದ್ದಂತೆ ಕಾಣಿಸುತ್ತದೆ. ಅಲ್ಲಲ್ಲಿ ಬಳಸಲಾದ ಉಪಮೆ-ರೂಪಕಗಳ ವೈಭವವು ಭಾಷೆಗೆ ಕಾವ್ಯಾತ್ಮಕ ಸೊಬಗನ್ನಿತ್ತಿದೆ. ಮುದ್ರಣ ದೋಷವಿಲ್ಲದಿರುವುದು ಕಾದಂಬರಿಯ ಇನ್ನೊಂದು ಧನಾತ್ಮಕ ಅಂಶ.

ಡಾ.ಪಾರ್ವತಿ ಜಿ. ಐತಾಳ್

ಹಿರಿಯ ಸಾಹಿತಿಗಳು, ಅನುವಾದಕರು

 

ಪುಸ್ತಕದ ಹೆಸರು  :  ಇಜಯಾ

ಲೇಖಕಿ:  ಪೂರ್ಣಿಮಾ ಮಳಗಿಮನಿ

ಪ್ರಕಾಶಕರು : ಗೋಮಿನಿ ಪ್ರಕಾಶನ

ಪ್ರಕಟಣೆಯ ವರ್ಷ : 2020

ಓದಿ : “ಭೈರಪ್ಪನವರು ತಮ್ಮದೇ ಆದ ಒಂದು ಶೈಲಿಯನ್ನು ಹೊಂದಿದ್ದಾರೆ”

ಟಾಪ್ ನ್ಯೂಸ್

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.