ರೈತರ ಆತ್ಮಹತ್ಯೆ ಇಳಿಕೆ; ಇನ್ನೂ ಮುಗಿದಿಲ್ಲ ಅನ್ನದಾತನ ಸಮಸ್ಯೆ


Team Udayavani, Jan 10, 2020, 6:01 AM IST

37

ಅಸಮತೋಲನ ಮಾರುಕಟ್ಟೆ ಮತ್ತು ಬೆಳೆ ನಷ್ಟ ಮೊದಲಾದ ಸಮಸ್ಯೆಗಳಿಂದಾಗಿ ದೇಶದಲ್ಲಿ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. 2016ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಕೆಯಾಗಿದ್ದು, ಆದರೆ ಕೃಷಿ ಕಾರ್ಮಿಕರ ಸಾವಿನ ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಮಾಡಿದೆ.

ಎನ್‌ಸಿಆರ್‌ಬಿ ಹಂಚಿಕೊಂಡ ಮಾಹಿತಿಯ ಪ್ರಕಾರ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.21ರಷ್ಟು ಇಳಿಕೆಯಾಗಿದ್ದು, 2018ರಲ್ಲಿ ಒಟ್ಟು 10,349 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017ರಲ್ಲಿ 10,655 ಮತ್ತು 2016ರಲ್ಲಿ 11,379 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಿಂಗಳಿಗೆ 948 ಪ್ರಕರಣ
ವರದಿಯ ಪ್ರಕಾರ 2018ರಲ್ಲಿ ತಿಂಗಳಿಗೆ ಸರಾಸರಿ 948ರಂತೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರತಿದಿನ 31 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

5,763 ಬಲಿ
2018ರಲ್ಲಿ ಭೂ ಮಾಲಕರು ಮತ್ತು ಸಾಗುವಳಿದಾರರು ಸೇರಿದಂತೆ ಒಟ್ಟಾರೆ 5,763 ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರ ಅಂಕಿ ಅಂಶಗಳಿಗೆ ಹೋಲಿಸಿದರೆ 2,244ರಷ್ಟು ಪ್ರಕರಣಗಳು ಕಡಿಮೆಯಾಗಿವೆ. 2015ರಲ್ಲಿ 8,007 ಭೂಮಾಲಕರು ಮತ್ತು ಸಾಗುವಳಿದಾರರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಕೃಷಿ ಕಾರ್ಮಿಕರ ಸಾವು ಹೆಚ್ಚಳ
2018ರಲ್ಲಿ 4,586 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿ ಕೊಂಡಿದ್ದು, 2016ಕ್ಕೆ ಹೋಲಿಸಿದ್ದರೆ 532 ಪ್ರಕರಣಗಳು ಕಡಿಮೆಯಾಗಿವೆ. 2015ರಲ್ಲಿ 4,595 ಕೃಷಿಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಜ್ಯಕ್ಕೆ 2ನೇ ಸ್ಥಾನ
2018ರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 10,349 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 5,763 ಮಂದಿ ಬೆಳೆಗಾರರು ಮತ್ತು 4,586 ಮಂದಿ ಕೃಷಿ ಕಾರ್ಮಿಕರು. ಮಹಾರಾಷ್ಟ್ರ ಮತ್ತು ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. ಅಂದರೆ ಈ ರಾಜ್ಯಗಳಲ್ಲಿ ಕ್ರಮವಾಗಿ 3,594 ಮತ್ತು 2,405 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರ, ಪಶ್ಚಿಮ ಬಂಗಾಲ, ಒಡಿಶಾಗಳಲ್ಲಿ ರೈತರು ಆತ್ಮಹತ್ಯೆಯನ್ನೇ ಮಾಡಿಕೊಂಡಿಲ್ಲ. ಸತತ ಮೂರನೇ ವರ್ಷ ಈ ಕ್ಷೇತ್ರದಿಂದ ವರದಿಯಾದ ಆತ್ಮಹತ್ಯೆಗಳ ಸಂಖ್ಯೆ ಕಡಿಮೆ.

ಮಹಾರಾಷ್ಟ್ರ ಪ್ರಥಮ
ರಾಷ್ಟ್ರವ್ಯಾಪ್ತಿಯಾಗಿ ದಾಖಲಾದ 5,763 ರೈತರ ಆತ್ಮಹತ್ಯೆಗಳ ಪೈಕಿ ಸುಮಾರು 2,043 ಪ್ರಕರಣಗಳು ಮಹಾರಾಷ್ಟ್ರದಲ್ಲೇ ದಾಖಲಾಗಿವೆ. ಮಹಿಳೆಯರೂ ಇದ್ದಾರೆ ಒಟ್ಟು 5,763 ಕೃಷಿ ಆತ್ಮಹತ್ಯೆ ಪ್ರಕರಣಗಳಲ್ಲಿ 306 ರೈತ ಮಹಿಳೆ ಯರು ಸೇರಿದ್ದಾರೆ. 5,109 ಕೃಷಿ ಕಾರ್ಮಿಕ ಆತ್ಮಹತ್ಯೆ ಪ್ರಕರಣಗಳಲ್ಲಿ 515 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  2016ರ ವರೆಗೆ ದೇಶದಲ್ಲಿ 3,33, 407 ರೈತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ.

ಏನು ಕಾರಣ?
-ಆತ್ಮಹತ್ಯೆಗಳಿಗೆ ಪ್ರಮುಖ ಕಾರಣವೆಂದರೆ ದಿವಾಳಿತನ, ಋಣಭಾರ, ಕುಟುಂಬದ ಸಮಸ್ಯೆಗಳು. ಕೃಷಿ ಆತ್ಮಹತ್ಯೆಗೆ ಪ್ರಮುಖ ಕಾರಣವೆಂದರೆ ಬೆಳೆ ವೈಫ‌ಲ್ಯ, ಅನಾರೋಗ್ಯ ಮತ್ತು ಮಾದಕ ದ್ರವ್ಯ ಸೇವನೆ /ಮದ್ಯದ ಚಟ.

Ad

ಟಾಪ್ ನ್ಯೂಸ್

Kharge-CM-Siddu

ದಿಲ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಜತೆ ಸಿಎಂ ಸಿದ್ದರಾಮಯ್ಯ  ಮಾತುಕತೆ

ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ

ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ

1-aa-aa-pop

World Population Day: ಜನಸಂಖ್ಯೆ ಹೊರೆ ಅಲ್ಲ ವರವಾಗಿ ಪರಿವರ್ತಿಸೋಣ

xi-Jinping

ಚೀನದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಆಧಿಪತ್ಯ ಅಂತ್ಯ?

ಪ್ಯಾಂಗಾಂಗ್‌ ಸರೋವರ ಬಳಿ “ಹಯಬುಸಾ’ ಸಾಹಸ: ಯೂಟ್ಯೂಬರ್‌ ಬಂಧನ

ಪ್ಯಾಂಗಾಂಗ್‌ ಸರೋವರ ಬಳಿ “ಹಯಬುಸಾ’ ಸಾಹಸ: ಯೂಟ್ಯೂಬರ್‌ ಬಂಧನ

Madan-Gopal

ಪ್ರತಿಭೆಗೆ ಮುಕ್ತ ಅವಕಾಶ, ಸಾಧನೆಯೇ ಮೆರಿಟ್‌: ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌

Eshwar-Khndre

ಮೈಸೂರು, ಬನ್ನೇರುಘಟ್ಟ ಮೃಗಾಲಯದ ಪ್ರವೇಶ ಶುಲ್ಕ ಹೆಚ್ಚಳ: ಸಚಿವ ಈಶ್ವರ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

xi-Jinping

ಚೀನದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಆಧಿಪತ್ಯ ಅಂತ್ಯ?

Madan-Gopal

ಪ್ರತಿಭೆಗೆ ಮುಕ್ತ ಅವಕಾಶ, ಸಾಧನೆಯೇ ಮೆರಿಟ್‌: ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌

Dalailama-New

ಟಿಬೆಟಿಯನ್‌ ಬೌದ್ಧರ ಪರಮೋಚ್ಚ ಧರ್ಮಗುರು ದಲೈಲಾಮಾ ಉತ್ತರಾಧಿಕಾರಿ ಜಟಾಪಟಿ

Guru-Poornima-1

Guru Poornime: ಅಂತಃಶಕ್ತಿ ಸಂವರ್ಧನೆಯ ಪ್ರೇರಕಶಕ್ತಿ ಗುರು

Chathurmasya

Guru Poornime: ಚಾತುರ್ಮಾಸ್ಯದಿಂದ ಆಧ್ಯಾತ್ಮಿಕ ಔನ್ನತ್ಯ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Kharge-CM-Siddu

ದಿಲ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಜತೆ ಸಿಎಂ ಸಿದ್ದರಾಮಯ್ಯ  ಮಾತುಕತೆ

ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ

ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ

Shivalingegowda

Congress Govt: ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ: ಶಿವಲಿಂಗೇಗೌಡ

1-aa-aa-pop

World Population Day: ಜನಸಂಖ್ಯೆ ಹೊರೆ ಅಲ್ಲ ವರವಾಗಿ ಪರಿವರ್ತಿಸೋಣ

xi-Jinping

ಚೀನದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಆಧಿಪತ್ಯ ಅಂತ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.