ಮಾನವ ಹಕ್ಕುಗಳ ರಕ್ಷಣೆಗೆ ಕಟಿಬದ್ಧ ನಿಲುವು ಅಗತ್ಯ

ಇಂದು ವಿಶ್ವ ಮಾನವ ಹಕ್ಕುಗಳ ದಿನ

Team Udayavani, Dec 10, 2019, 5:47 AM IST

ಇಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರಿಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ, ಬಾಳಬೇಕಿದೆ. ಇನ್ನೋರ್ವರ ಸ್ವಾತಂತ್ರಯವನ್ನು ಗೌರವಿಸಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಲು ಈ ದಿನದ ಸಂದೇಶ ಪೂರಕವಾಗಲಿ ಎಂಬುದೇ ಸದಾಶಯ.

ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸ್ವತಂತ್ರವಾಗಿ ಜೀವಿಸುವ ಹಕ್ಕು ಹೊಂದಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವ ಮತ್ತು ಆದರದಿಂದ ಕಂಡರೆ ಅದೇ ನಾವು ಮಾನವ ಹಕ್ಕುಗಳಿಗೆ ನೀಡುವ ಗೌರವ. ಸಮಾಜದಲ್ಲಿ ದುರ್ಬಲರು, ಶೋಷಿತರನ್ನು ರಕ್ಷಿಸುವಲ್ಲಿ ಮಾನವ ಹಕ್ಕುಗಳು ಅತ್ಯಂತ ಗಮನಾರ್ಹ ಪಾತ್ರ ವಹಿಸಿವೆ.

ಜಗತ್ತಿನಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅದರ ರಕ್ಷಣೆಗಾಗಿ ದಿನನಿತ್ಯ ಹೋರಾಟಗಳು ನಡೆಯುತ್ತಲೇ ಇವೆ. “ಜನರ ಹಕ್ಕುಗಳನ್ನು ನಿರಾಕರಿಸಿದರೆ ಅದು ಅವರ ಮನುಷ್ಯತ್ವವನ್ನು ತಿರಸ್ಕರಿಸಿದಂತೆ’ ಎಂದು ದಕ್ಷಿಣ ಆಫ್ರಿಕಾದ ಗಾಂಧಿ ಎಂದು ಕರೆಸಿಕೊಳ್ಳುವ ನೆಲ್ಸನ್‌ ಮಂಡೇಲಾ ಮಾನವ ಹಕ್ಕುಗಳ ಕುರಿತು ಹೇಳಿದ್ದಾರೆ.

ವಿಶ್ವದಲ್ಲಿ ಮಾನವ ಹಕ್ಕುಗಳ ಜಾರಿ
1948ರ ಜಾಗತಿಕ ಮಹಾಯುದ್ಧದಲ್ಲಿ ಸಂಭವಿಸಿದ ಆಪಾರ ಸಾವುನೋವಿನಿಂದ ಮನನೊಂದು ಜಗತ್ತು ಹಿಂಸೆಯನ್ನು ತ್ಯಜಿಸಬೇಕು ಎಂಬ ನಿಲುವಿಗೆ ಬಂತು. ಈ ವಿಚಾರವಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮಾನವ ಹಕ್ಕುಗಳನ್ನು ಜಾರಿಗೊಳಿಸಲು ಒಮ್ಮತ ಸೂಚಿಸಿದವು. ಇದರ ಪರಿಣಾಮವಾಗಿ 1948ರ ಡಿ. 10ರಂದು ವಿಶ್ವ ಸಂಸ್ಥೆಯಲ್ಲಿ ಮಾನವ ಹಕ್ಕುಗಳನ್ನು ಘೋಷಣೆ ಮಾಡಲಾಯಿತು. ಇದರ ಮುಖ್ಯ ಕಚೇರಿ ಜಿನೆವಾದಲ್ಲಿದೆ. ಅಂದಿನಿಂದ ವಿಶ್ವಾದ್ಯಂತ ವರ್ಣ, ಧರ್ಮ, ಲಿಂಗ, ಭಾಷೆ, ಅಂತಸ್ತು, ಸಾಮಾಜಿಕ, ರಾಷ್ಟ್ರೀಯತೆ ಹಿನ್ನೆಲೆಯಲ್ಲಿ ನಡೆಯುವ ತಾರತಮ್ಯ, ದೌರ್ಜನ್ಯ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಘೋಷಣೆಯಾಗಿ 71 ವರ್ಷಗಳು ಕಳೆದರೂ ಇಂದಿಗೂ ತನ್ನ ಪ್ರಾಮುಖ್ಯವನ್ನು ಉಳಿಸಿಕೊಂಡಿರುವುದು ಗಮನಾರ್ಹ ಸಂಗತಿ.

ವಿಶೇಷ ಸಂದೇಶ
ವಿಶ್ವ ಮಾನವ ಹಕ್ಕುಗಳ ಜಾಗೃತಿ ದಿನವನ್ನು ವಿಶೇಷ ಥೀಮ್‌ನೊಂದಿಗೆ ಆಚರಿಸಲಾಗುತ್ತಿದ್ದು 2019ರ ಆಚರಣೆಯನ್ನು The Year of Indigenous Languages: Promoting and Deepening a Human Rights Culture ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತದೆ.

ಆಯೋಗ‌ದ ಕಾರ್ಯಗಳು
1 ವಿಶ್ವದ 78 ರಾಷ್ಟ್ರಗಳ 40,000 ಜನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದೆ.

2 27 ರಾಷ್ಟ್ರಗಳಿಂದ 10,000 ಜನರಿಗೆ ಗುಲಾಮಗಿರಿ ಯಿಂದ ಮುಕ್ತಿ
3 2,101 ಬಂಧನ ಸ್ಥಳಗಳಿಗೆ ಭೇಟಿ ನೀಡಿದೆ.
4 7,504
ವಿಶ್ವಾದ್ಯಂತ ಮಾನವ ಹಕ್ಕುಗಳ ಪರಿಸ್ಥಿತಿ ತನಿಖೆ ಮತ್ತು ದಾಖಲೆಗಾಗಿ ಸ್ಥಾಪಿಸಲಾದ ಮೇಲ್ವಿಚಾರಣೆ ಮಿಶನ್‌ಗಳು.
5 692 ದಾಖಲಾದ ಹೊಸ ಆರೋಪಗಳು.

1 2016ರಿಂದ 2019ರಲ್ಲಿ ಭಾರತದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ಅಲ್ಪಸಂಖ್ಯಾಕರು ಹಾಗೂ ದಲಿತರ ಮೇಲೆ ಗುಂಪು ಥಳಿತ ಮತ್ತು ದೌರ್ಜನ್ಯದ ಬಗ್ಗೆ ದಾಖಲಾದ ಅಪರಾಧಗಳ ಸಂಖ್ಯೆ -2,008. ಅತೀ ಹೆಚ್ಚು ಉ.ಪ್ರದೇಶ- 869
2 ಭಾರತದಲ್ಲಿ ಒಟ್ಟು 25 ರಾಜ್ಯಗಳಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ರಚಿಸಲಾಗಿದೆ.
3 ಅಸ್ಸಾಂ ಮೊದಲ ರಾಜ್ಯವಾಗಿದೆ (ಜನವರಿ 19, 1996)
4 ಕರ್ನಾಟಕದಲ್ಲಿ ಜೂನ್‌ 25, 2005ರಂದು ರಚನೆಯಾಗಿದೆ.
5 ರಾಜ್ಯದಲ್ಲಿ ಇದುವರೆಗೆ ಏಳು ಜನ ಅಧ್ಯಕ್ಷರು ಕಾರ್ಯನಿರ್ವಹಿಸಿದ್ದಾರೆ. ನ್ಯಾ| ರಂಗನಾಥ್‌ ಮಿಶ್ರಾ ಮೊದಲಿಗರು.

ವಿಶ್ವ ಮಾನವ ಹಕ್ಕುಗಳ ಆಯೋಗಕ್ಕೆ ಧನ ಸಹಾಯ ನೀಡಿದ ಅಗ್ರ 5 ರಾಷ್ಟ್ರಗಳು (ಯುಎಸ್‌ ಡಾಲರ್‌ಗಳಲ್ಲಿ)
ನಾರ್ವೆ  2,21,74,972
ಸ್ವೀಡನ್‌  2,10,89,098
ಯುರೋಪಿಯನ್‌ ಆಯೋಗ 1,94,45,794
ಅಮೆರಿಕ 1,84,27,371
ನೆದರ್‌ಲ್ಯಾಂಡ್‌ 1,13,35,834
ಭಾರತ 1,50,000

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ