Kota Shivarama Karanth; ಅನಂತತೆಗಳ ಆಗರ ಶಿವರಾಮ ಕಾರಂತ


Team Udayavani, Dec 9, 2023, 5:38 AM IST

1-sadsad

ತೀರದ ಮರಳಿನಲ್ಲಿ ಕುಳಿತು ಇಡೀ ಸಮುದ್ರದ ಪರಿಚಯ ಮಾಡಿಕೊಳ್ಳು ವುದು ಸಾಧ್ಯವೇ? ಅಲೆಗಳ ಮೇಲೆ ಅಲೆ ಗಳನ್ನು ಹೊಮ್ಮಿಸುತ್ತ ನೊರೆ ಸುರಿಸುವಂತೆ ದಂಡೆಗೆ ಅಪ್ಪಳಿಸುವ ನೀಲಿ ಸಮುದ್ರವನ್ನು ನೋಡಿಯೇ ಮೈಮರೆ ಯುವವರಿಗೆ ಅದರೊಳಗಿರುವ ಅಪಾರ ಜೀವರಾಶಿಗಳು, ವಸ್ತು ರಾಶಿಗಳು, ಅಸಂಖ್ಯಾತ ವಿಸ್ಮಯ- ವ್ಯಾಪಾರಗಳು ಕಲ್ಪನೆಗೂ ದಕ್ಕದೆ ಹೋಗುವುದು ಸಹಜ. ಅಂತೆಯೇ, ಕೋಟ ಶಿವರಾಮ ಕಾರಂತರ ಬಗೆಗೆ ಯೋಚಿಸಿದಾಗಲೆಲ್ಲ ಅವರ ಸಾಹಸ- ಸಿದ್ಧಿಗಳು ಭೋರ್ಗರೆಯುವ ಸಮುದ್ರದ ಹಾಗೆ ನಮ್ಮ ಕಣ್ಣಿಗೆ ಕಟ್ಟುತ್ತ ವಿಸ್ಮ ಯಗೊಳಿಸುವ ರೀತಿ ಅನೂಹ್ಯವಾದುದು.

ಸಮುದ್ರಕ್ಕೆ ಎರಡು ಮೈಲು ದೂರದ ಲ್ಲಿರುವ ಉಡುಪಿ ಜಿಲ್ಲೆಯ ಕೋಟ ಗ್ರಾಮದಲ್ಲಿ 1902 ಅಕ್ಟೋಬರ್‌ 10ರಂದು ಕೋಟ ಶೇಷ ಕಾರಂತ ಮತ್ತು ಲಕ್ಷ್ಮೀ ಅಮ್ಮನವರ ಮಗನಾಗಿ ಹುಟ್ಟಿ ದಶಕಗಳ ಕಾಲ ಹಸುರು ಮಲೆಗಳ ಮಧ್ಯದಲ್ಲಿರುವ ಪುತ್ತೂರನ್ನು ತಮ್ಮ ಚಟುವಟಿಕೆಗಳ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಕಾರಂತರದು ಅದಮ್ಯ ಚೇತನ, ಅಪರಿಮಿತ ಸಾಧನೆ.

“ಇದ್ದ ಬುದ್ಧಿಯನ್ನು ಬಳಸಿ, ಸಾಧ್ಯವಾದರೆ ಬೆಳೆಸಿ’ ಎಂದು ಹೇಳುತ್ತಿದ್ದ ಕಾರಂತರ ಸಾಹಿತ್ಯ ಸೃಷ್ಟಿ, ವಿಸ್ತಾರ ಹಾಗೂ ವೈವಿಧ್ಯ ಮಯವಾದುದು. “ಕಡಲ ತೀರದ ಭಾರ್ಗವ’, “ಜಂಗಮ ವಿಶ್ವಕೋಶ’ ಎಂದು ಹೆಸರಾದ ಅವರು “ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಬರೆಯದ ವಸ್ತುವಿಲ್ಲ, ಬರೆಯದ ಪ್ರಕಾರವಿಲ್ಲ. ಹಾಗೆಯೇ ಅವರನ್ನು ಯಾರೊಂದಿಗೂ ಹೋಲಿಸು ವುದೂ ಸಾಧ್ಯವಿಲ್ಲ. ಅವರದು ದೈತ್ಯ ಪ್ರತಿಭೆ. ಯಾರೇ ಆಗಲಿ ಅವರ ಸಾಧನೆಯ ಕ್ಷೇತ್ರಗಳ ಮೇಲ್ನೋಟದ ದರ್ಶನ ಮಾತ್ರ ದಿಂದಲೇ ಆಶ್ಚರ್ಯಚಕಿತರಾಗುತ್ತಾರೆ. ಅವರ ಸಾಹಿತ್ಯ ಸಾಧನೆಯ ಹರಿವು ಅಂತ ಹುದು. ಕಾವ್ಯ, ಕಾದಂಬರಿ, ಸಣ್ಣಕತೆ, ನಾಟಕ, ಹರಟೆ, ವಿಶ್ವಕೋಶ, ಶಿಶುಸಾಹಿತ್ಯ, ವ್ಯಂಗ್ಯ, ಪ್ರಬಂಧ, ತಾತ್ವಿಕ ಸಾಹಿತ್ಯ, ಜೀವನ ಚರಿತ್ರೆ, ವಿಡಂಬನೆ, ಕಲಾಸಾಹಿತ್ಯ (ಜಾನ ಪದ, ಯಕ್ಷಗಾನ, ಚಿತ್ರ, ವಾಸ್ತು ಶಿಲ್ಪ, ನೃತ್ಯ…), ಪ್ರವಾಸ, ವಿಚಾರ ಸಾಹಿತ್ಯ, ಪಠ್ಯಪುಸ್ತಕ, ಪತ್ರಿಕೋದ್ಯಮ, ಅನುವಾದ, ಪರಿಸರ ಸಾಹಿತ್ಯ, ಅರ್ಥಕೋಶ, ಅನು ವಾದ, ಸಂಪಾದನೆ… ಇವುಗಳಿಗೆಲ್ಲ ಸಮ ಯವನ್ನು ಹೊಂದಿಸಿಕೊಂಡವರು ಅವರು. ತಮ್ಮ ಜೀವನದಲ್ಲಿ ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆದವರಲ್ಲ. ಸಾಹಿತ್ಯ ಪ್ರಪಂಚದ ಯಾವ ಮಜಲನ್ನೂ ಬಿಡದೆ ಎಲ್ಲ ಪ್ರಕಾರಗಳಲ್ಲಿಯೂ ಬರೆದರು. ಇದ ಕ್ಕೆಲ್ಲ ಅವರಲ್ಲಿ ಹುದುಗಿದ್ದ ಅನ್ವೇಷಕ ಗುಣವೇ ಕಾರಣವಾದುದು.

ಯುವಕರಾಗಿದ್ದಾಗ ಸಮಾಜ ಸುಧಾರ ಣೆಗೆ ಹೊರಟು ವೇಶ್ಯಾವಿವಾಹವನ್ನು ಕೂಡ ಇವರು ಮಾಡಿಸಿದ್ದರು. ಅವರ ಸಾಹಿತ್ಯದಲ್ಲಿ ಪರಿಸರದ ಚಿತ್ರಣ ಹೇರಳ ವಾಗಿ ಕಾಣಿಸುವುದು ಮಾತ್ರವಲ್ಲ; ಅವರಿಗೆ ಪರಿಸರದ ಬಗ್ಗೆ ಅಪಾರ ಕಾಳಜಿಯಿತ್ತು. ನಿಜ ಜೀವನದಲ್ಲೂ ಪರಿಸರದ ಉಳಿವಿ ಗಾಗಿ ಹೋರಾಟ ನಡೆಸಿದ ಅವರು ಕೈಗಾ ಅಣು ವಿದ್ಯುತ್‌ ಸ್ಥಾವರ ಸ್ಥಾಪನೆಯ ವಿರು ದ್ಧದ ಹೋರಾ ಟದ ನಾಯಕತ್ವವನ್ನೂ ವಹಿಸಿದ್ದರು.

“ತರಂಗ’ ಸಾಪ್ತಾಹಿಕದ ಬಾಲವನದಲ್ಲಿ ಕಾರಂತಜ್ಜ ಎಂಬ ಕಾಲಂನಲ್ಲಿ ಮಕ್ಕಳು ಕಳುಹಿಸಿದ ವಿಜ್ಞಾನದ ಪ್ರಶ್ನೆಗಳಿಗೆ ಕಾರಂ ತರು ಸರಳವಾಗಿ ಉತ್ತರಿಸುತ್ತಿದ್ದರು. ಮಕ್ಕಳಲ್ಲಿದ್ದ ಪ್ರತಿಭೆಯನ್ನು ಅರಳಿಸುವ ಉದ್ದೇಶದಿಂದ ಬಾಲವನದಲ್ಲಿ ಅಸಾಂಪ್ರ ದಾಯಿಕ ಶಿಕ್ಷಣ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು ಪುಸ್ತಕಗಳ ಮುದ್ರಣ ಮಾಡುವು ದರೊಂದಿಗೆ ತಮ್ಮ ಕಾದಂಬರಿಗಳಿಗೆ ತಾವೇ ಮುಖಪುಟ ಚಿತ್ರವನ್ನೂ ಬರೆದಿದ್ದರು.

ಪ್ರಕಟಗೊಂಡ ಅವರ ಮೊದಲ ಪುಸ್ತಕ “ರಾಷ್ಟ್ರಗೀತ ಸುಧಾಕರ’ ಒಂದು ಕವನ ಸಂಕಲನ. ಇದು ಇವರ ಏಕೈಕ ಕವನ ಸಂಕಲನವೂ ಹೌದು. ಕಾವ್ಯ ಪ್ರಪಂಚ ವನ್ನು ಬಹುಬೇಗ ಕೈಬಿಟ್ಟ ಕಾರಂತರು, ಕಾದಂಬರಿ ಪ್ರಪಂಚವನ್ನು ಪ್ರವೇಶಿಸಿ ದರು. ಅವರ ವ್ಯಕ್ತಿತ್ವದಂತೆ ಅವರ ಕಾದಂ ಬರಿಯ ಪಾತ್ರಗಳು ವೈವಿಧ್ಯಮಯ. ನಮ್ಮ ಸುತ್ತಲಿನ ಪರಿಸರದ ಪುಟ್ಟಪುಟ್ಟ ವಿವರಗಳನ್ನು, ಮನುಷ್ಯನ ನಡವಳಿಕೆ, ಸ್ವಭಾವಗಳನ್ನು ಸಹಜವೆಂಬಂತೆ ವಿವರ ವಾಗಿ ಚಿತ್ರಿಸುವ ಕಾರಣಕ್ಕೆ ಕಾರಂತರ ಪಾತ್ರಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿ ಯದಂತೆ ಉಳಿಯುತ್ತವೆ.
ಅವರು ವ್ಯಕ್ತಿಪ್ರಜ್ಞೆಯ ಮೂಲಕ ಬದುಕನ್ನು ನೋಡುವುದಿಲ್ಲ. ಮನುಷ್ಯನ ಸಾಮಾಜಿಕ ಸಂಬಂಧಗಳ, ಚಟು ವಟಿಕೆಗಳ ಪ್ರೇರಣೆ ಎಂಬಂತೆ ಒಟ್ಟು ಬದುಕಿನ ವ್ಯಾಪಾರಗಳಲ್ಲಿ ಪ್ರಜ್ಞೆಯನ್ನು ಅರಸುತ್ತಾರೆ. ಹಾಗಾಗಿ ಮನು ಷ್ಯನ ಸಮಸ್ಯೆಗಳು ಕಾರಂತರಿಗೆ ಕೇವಲ ವ್ಯಕ್ತಿ ವಿಶಿಷ್ಟ ಸಮಸ್ಯೆಗಳಾಗಿ ಕಾಣುವುದಿಲ್ಲ. ಮನುಷ್ಯ ಪರಿಸರದ ಕೂಸಾದುದರಿಂದ ಆ ಪರಿಸರವನ್ನು ನಿರ್ದಿಷ್ಟವಾಗಿ ಶೋಧಿ ಸುವ ಅವರು ಸಮಸ್ಯೆಯ ಮೂಲಕ್ಕೇ ಹೋಗುತ್ತಾರೆ.
ಅವರ ಸಾಹಿತ್ಯ ಗುಣಮೌಲ್ಯದ ದೃಷ್ಟಿ ಯಿಂದ ಗಮನಾರ್ಹವಾದವು. ವಿಶಾ ಲವೂ ವೈವಿಧ್ಯಭರಿತವೂ ಆದ ಲೋಕಾ ನುಭವ, ಜೀವನಾನುಭವಗಳು ಅವರ ಕೃತಿಗಳಲ್ಲಿ ಮಡುಗಟ್ಟಿವೆ. ಅದಮ್ಯ ಉತ್ಸಾಹ, ವಿಶಿಷ್ಟ ಪ್ರತಿಭೆ, ದಣಿವರಿಯದ ಹಂಬಲ, ಆದರ್ಶ, ಆಕಾಂಕ್ಷೆಗಳ ಕಾರಂ ತರು ಜೀವನದುದ್ದಕ್ಕೂ ಬರೆದರೂ ಅವ ರಲ್ಲಿ ಸರಕು ಬರಿದಾದದ್ದೇ ಇಲ್ಲ. ಅವರ ಬಹಳಷ್ಟು ಬರೆಹಗಳು ಮನಸ್ಸೆಂಬ ಕಾರ್ಖಾನೆಯಿಂದ ಬಂದವುವಲ್ಲ, ಬದ ಲಾಗಿ ಅನುಭವದಿಂದ ಬಂದವುಗಳು.

ಕಾರಂತರನ್ನು ನಾವು ಸಾಮಾಜಿಕ ಪರಿವರ್ತನೆಯ ಕಥನಕಾರ ಎಂದು ಗುರುತಿಸುತ್ತೇವೆ. ಕಾರಂತರ ಬರೆ ವಣಿಗೆಯ ಕ್ರಮವೂ ಕುತೂಹಲಕಾರಿ. ನಿಧಾನವಾಗಿ, ಬರೆದದ್ದನ್ನೇ ಮತ್ತೆ ಮತ್ತೆ ಬರೆಯುವ ಅಭ್ಯಾಸ ಅವರದಲ್ಲ. ಸೃಜ ನಾತ್ಮಕ ಬರೆವಣಿಗೆಯಂತೂ ಅವರ ದೃಷ್ಟಿ ಯಲ್ಲಿ ಒಂದೇ ಪಟ್ಟಿಗೆ ಕೂತು ಮಾಡು ವಂಥ ಕೆಲಸ. ಒಂದು ಕಥೆಯ ಹೆಸರೋ, ಅದರ ಸ್ಥೂಲ ಚಿತ್ರವೋ ಹೊಳೆದರೆ, ಏಕಾ ಗ್ರಚಿತ್ತದಲ್ಲಿ ಕೂತು ಅದು ಮುಗಿಯು ವವರೆಗೂ ಬೇರಾವ ಕೆಲಸಕ್ಕೂ ಕೈಹಾಕದ ಮನಸ್ಸು ಅವರದು.
ಅವರ ಲೋಕದೃಷ್ಟಿ ನಮ್ಮ ಇಡೀ ಬ್ರಹ್ಮಾಂ ಡವನ್ನೇ ಒಳಗೊಳ್ಳುವಂಥದ್ದು. ಅವರಿಗೆ ಸತ್ಯದ ಅನ್ವೇಷಣೆ ಮುಖ್ಯ. ಹಾಗಾಗಿ ಅವರಿಗೆ ಎಲ್ಲ ಜ್ಞಾನ ಶಾಖೆಗಳ ಬಗೆಗೂ ಒಂದೇ ತೆರನಾದ ಆಸಕ್ತಿ. “ಸಾಹಿತ್ಯ ಹೆಚ್ಚು ಯಕ್ಷಗಾನ ಕಮ್ಮಿ; ಬರೆಹ ಮುಖ್ಯ ಚಿತ್ರಕಲೆ ಅಮುಖ್ಯ’ ಎಂಬ ಆಲೋಚನೆ ಅವರ ದಲ್ಲ. ಈ ಕಾರಣದಿಂದಲೇ ಎಲ್ಲ ಕ್ಷೇತ್ರ ಗಳಲ್ಲೂ ಸಾಧನೆಯನ್ನು ಮಾಡಿದರು.

ಮಕ್ಕಳಲ್ಲಿರುವ ಸುಪ್ತಶಕ್ತಿಯನ್ನು ಹೊರ ತರುವುದೇ ಶಿಕ್ಷಣದ ಗುರಿಯೆಂದು ತಿಳಿದು “ಸಿರಿಗನ್ನಡ ಪಾಠಮಾಲೆಯ ಏಳು ಪುಸ್ತಕಗಳನ್ನು ರಚಿಸಿದರು.ಮುಂದೆ ಮಕ್ಕಳ ಲೋಕಜ್ಞಾನ ಬೆಳೆಸುವ ಉದ್ದೇಶದಿಂದ “ಬಾಲಪ್ರಪಂಚ, ಅದ್ಭುತ ಜಗತ್ತನ್ನು ಹೊರ ತಂದರು. ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ “ವಿಜ್ಞಾನ ಪ್ರಪಂಚವನ್ನು ಕನ್ನಡದಲ್ಲಿ ಸಿದ್ಧಪಡಿಸಿದರು. ಅವರು ಬರೆದಿರುವ ಬಿಡಿ ಲೇಖನಗಳಿಗಂತೂ ಲೆಕ್ಕವಿಲ್ಲ. “ವಸಂತ’ ಪತ್ರಿಕೆಯನ್ನು ಪ್ರಾರಂ ಭಿಸಿದಾಗ ಅದಕ್ಕಾಗಿಯೂ ಬರೆದವರು ಅವರು.

ಕಾರಂತರಿಗೆ ಬದುಕು ಮತ್ತು ಬರೆವಣಿಗೆ ಬೇರೆ ಬೇರೆಯಲ್ಲ. 98 ವರುಷಗಳ ಕಾಲ ಬದುಕಿದ್ದ ಕಾರಂತರು ಅವರ ಜೀವಿತಾ ವಧಿಯಲ್ಲಿ 427 ಪುಸ್ತಕಗಳನ್ನು ಬರೆದರು. ಅವರ 96ನೆಯ ವಯಸ್ಸಿನಲ್ಲೂ ಹಕ್ಕಿಗಳ ಬಗ್ಗೆ ಬರೆದ ಪುಸ್ತಕ ಅವರ ಅದಮ್ಯ ಅಸಕ್ತಿಗೆ ಸಾಕ್ಷಿ. ಪರಿಸರದ ಬಗೆಗೆ ಅದಮ್ಯ ಪ್ರೀತಿಯನ್ನು ಹೊಂದಿದ್ದ ಕಾರಂತರಿಗೆ ಯಕ್ಷಗಾನದ ಆಸಕ್ತಿಯನ್ನು ಮೂಡಿಸಿ ದವರು ಅವರ ಗುರುಗಳಾದ ಮಳಲಿ ಸುಬ್ಬರಾಯರು. ಅವರದೇ ಆದ ಯಕ್ಷ ಗಾನ ತಂಡವನ್ನು ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರ ಪಡಿಸಲು ಮತ್ತು ಪ್ರಯೋಗಗಳನ್ನು ಮಾಡಲು ಕೂಡ ಇದು ಕಾರಣವಾಯಿತು. ತಾವೇ ಸ್ವತಃ ನೃತ್ಯವನ್ನು ಕಲಿತು ಬ್ಯಾಲೆ ಯಲ್ಲೂ ಗಂಭೀರ ಪ್ರಯೋಗ ನಡೆಸಿದರು. ನಿರಂತರ ಪ್ರಯೋಗ ಶೀಲರಾಗಿದ್ದ ಅವರು ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ ಹರಿಜನರ ಬದುಕನ್ನು ಆಧರಿ ಸಿದ ಡೊಮಿಂಗೋ ಚಿತ್ರವನ್ನು ತಾವೇ ಅಭಿನಯಿಸಿ, ಚಿತ್ರೀಕರಿಸಿ ನಿರ್ದೇಶಿಸಿದ್ದು, ಅನಂತರ ಭೂತರಾಜ್ಯ ಎಂಬ ಚಿತ್ರವನ್ನೂ ನಿರ್ದೇಶಿಸಿದರು.

ಹೀಗೆ ಜೀವನದ ಸಹಸ್ರಾರು ಸಮಸ್ಯೆಗಳಿಗೆ ಸದಾ ತೆರೆದ ಮನಸ್ಸಿನೊಡನೆ ಬತ್ತದ ಕುತೂಹಲ ಮತ್ತು ನಿರಂತರ ಸಾಧನೆಯ ಛಲದೊಡನೆ ಎಲ್ಲವನ್ನೂ ಪರೀಕ್ಷಿಸಿದ ಅನಂತರವೇ ಸ್ವೀಕರಿಸುವ ಮನಃಸ್ಥಿತಿಯ ನಿಸರ್ಗದ ಚೆಲುವಿನೊಂದಿಗೆ ಅರ್ಥ ಪೂರ್ಣ ಬದುಕನ್ನು ಬಾಳಿದ ಕಾರಂತರು 1997 ಡಿಸೆಂಬರ್‌ 9ರಂದು ನಿಸರ್ಗದಲ್ಲಿ ಲೀನವಾದರು.

 ಡಾ| ಮೈತ್ರಿ ಭಟ್‌, ವಿಟ್ಲ

ಟಾಪ್ ನ್ಯೂಸ್

1-qwqewqeq

Mandya; ಮತ್ತೆ ನಿಗೂಢ ಶಬ್ಧ!; ಬೆಚ್ಚಿ ಬಿದ್ದ ಜನತೆ

1—ewewqe

13 feet ಉದ್ದದ ಬೃಹತ್ ಕಾಳಿಂಗ ಸರ್ಪ ಸೆರೆ; ಸುರಕ್ಷಿತವಾಗಿ ಕಾಡಿಗೆ

1-asdadasd

Belagavi; ನನಗೆ ಜಾತಿ ಅನ್ನುವುದಿಲ್ಲ, ಮನುಷ್ಯತ್ವವೇ ನನ್ನ ಜಾತಿ: ಲಕ್ಷ್ಮೀ ಹೆಬ್ಬಾಳಕರ್

1-sadasda

Uttarakhand; ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ಬಂಧನ

1-wew-ewqew

Internal differences ; ಬಿಜೆಪಿ ಸೇರಿದ ತಮಿಳುನಾಡಿನ ಕಾಂಗ್ರೆಸ್ ಶಾಸಕಿ

1-wwewqewq

UP; ಗಂಗಾಸ್ನಾನಕ್ಕೆ ತೆರಳುತ್ತಿದ್ದವರ ಮೇಲೆರಗಿದ ಜವರಾಯ: ಬಲಿ ಸಂಖ್ಯೆ 24 ಕ್ಕೆ!

Mr Natwarlal Movie Review: ರೋಚಕ ತಿರುವುಗಳಲ್ಲಿ ನಟ್ವರ್‌ಲಾಲ್‌ ಸಂಚಾರ

Mr Natwarlal Movie Review: ರೋಚಕ ತಿರುವುಗಳಲ್ಲಿ ನಟ್ವರ್‌ಲಾಲ್‌ ಸಂಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kk

IAS ನಿವೃತ್ತಿ, ಕೃಷಿಯಲ್ಲಿ ಪ್ರವೃತ್ತಿ

1-dsdasd

Successfully ಚಂದ್ರನ ಮೇಲಿಳಿದ ಖಾಸಗಿ ಕಂಪೆನಿಯ ಅಂತರಿಕ್ಷ ನೌಕೆ

1-asdasda

U-19 ವಿಶ್ವಕಪ್‌ ಕ್ರಿಕೆಟ್‌: ಭರವಸೆ ಮೂಡಿಸಿದ ಭವಿಷ್ಯದ ತಾರೆಯರು

PM ಸೂರ್ಯ ಘರ್‌ ಉಚಿತ ವಿದ್ಯುತ್‌ ಯೋಜನೆ ಪ್ರಯೋಜನ ಪಡೆಯುವುದು ಹೇಗೆ ?

PM ಸೂರ್ಯ ಘರ್‌ ಉಚಿತ ವಿದ್ಯುತ್‌ ಯೋಜನೆ ಪ್ರಯೋಜನ ಪಡೆಯುವುದು ಹೇಗೆ ?

1eewqewqe

Ambani; ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಸಂಭ್ರಮದಲ್ಲಿ ವಿಶ್ವದ ದಿಗ್ಗಜರು ಭಾಗಿ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

ravi-kumar

State Congress ಸರಕಾರ ಮೋಜು, ಮಸ್ತಿಯಲ್ಲಿ ತೊಡಗಿದೆ: ಎನ್.ರವಿಕುಮಾರ್

1-qwqewqeq

Mandya; ಮತ್ತೆ ನಿಗೂಢ ಶಬ್ಧ!; ಬೆಚ್ಚಿ ಬಿದ್ದ ಜನತೆ

1-adsadasda

Kushtagi; ಭಕ್ತರ ಪರಕಾಷ್ಠೆಯ ಶ್ರೀ ಬುತ್ತಿ ಬಸವೇಶ್ವರ ವೈಭವದ ಮಹಾರಥೋತ್ಸವ

1—ewewqe

13 feet ಉದ್ದದ ಬೃಹತ್ ಕಾಳಿಂಗ ಸರ್ಪ ಸೆರೆ; ಸುರಕ್ಷಿತವಾಗಿ ಕಾಡಿಗೆ

1-sdsdas

Missing; ಶಿರ್ವ: ತಾಯಿ-ಮಗು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.