ಸಂದರ್ಶನ: ಜನ ಕಾಂಗ್ರೆಸ್ಸನ್ನು ಪರ್ಯಾಯವೆಂದು ಭಾವಿಸುತ್ತಿಲ್ಲ

ಕಳೆದ 6 ವರ್ಷಗಳಲ್ಲಿ ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಂಡಿಲ್ಲ

Team Udayavani, Nov 18, 2020, 6:25 AM IST

ಸಂದರ್ಶನ: ಜನ ಕಾಂಗ್ರೆಸ್ಸನ್ನು ಪರ್ಯಾಯವೆಂದು ಭಾವಿಸುತ್ತಿಲ್ಲ

ಕಾಂಗ್ರೆಸ್‌ನ ಸಮಸ್ಯೆ ಏನು ಎನ್ನುವುದು ನಮಗೆ ಗೊತ್ತಿದೆ. ಸಾಂಸ್ಥಿಕವಾಗಿ ಏನು ಸಮಸ್ಯೆಗಳಿವೆ ಎನ್ನುವುದೂ ನಮಗೆ ತಿಳಿದಿದೆ. ನನ್ನ ಪ್ರಕಾರ, ನಮ್ಮ ಬಳಿ ಎಲ್ಲ ಉತ್ತರಗಳೂ ಇವೆ. ಖುದ್ದು ಕಾಂಗ್ರೆಸ್‌ ಪಕ್ಷಕ್ಕೂ ಎಲ್ಲ ಉತ್ತರಗಳು ತಿಳಿದಿವೆ. ಆದರೆ ಆ ಉತ್ತರಗಳನ್ನು ಗುರುತಿಸಲು ಅದು ಮನಸ್ಸು ಮಾಡುತ್ತಿಲ್ಲ. ಆ ಉತ್ತರಗಳನ್ನು ಗುರುತಿಸದಿದ್ದರೆ, ಪಕ್ಷದ ಗ್ರಾಫ್ ಕುಸಿಯುತ್ತಲೇ ಹೋಗುತ್ತದೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರದರ್ಶನ ಕಳಪೆಯಾಗಿದೆ (ಎಡ ಪಕ್ಷಗಳಿಗೆ ಹೋಲಿಸಿದರೂ ಸಹ). ಹಲವು ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲೂ ಪಕ್ಷ ಇದೇ ಸ್ಥಿತಿ ಎದುರಿಸಿದೆ. ಫ‌ಲಿತಾಂಶಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕೇವಲ ಬಿಹಾರಿಗಳಷ್ಟೇ ಅಲ್ಲ, ಉಪಚುನಾವಣೆಗಳು ನಡೆದ ರಾಜ್ಯ ಮತದಾರರೂ ಕೂಡ ಕಾಂಗ್ರೆಸ್‌ ಅನ್ನು ಪರಿಣಾಮಕಾರಿ ಪರ್ಯಾಯ ಎಂದು ಭಾವಿಸುತ್ತಿಲ್ಲ ಎನ್ನುವುದು ಸ್ಪಷ್ಟ. ಆದಾಗ್ಯೂ, ಬಿಹಾರದಲ್ಲಿ ಪರ್ಯಾಯವಾಗಿ ಇದದ್ದು ಆರ್‌ಜೆಡಿ ಅಲ್ಲವೇ? ಇನ್ನು ನಾವು ಗುಜರಾತ್‌ನಲ್ಲಿನ ಎಲ್ಲ ಉಪಚುನಾವಣೆಗಳಲ್ಲೂ ಸೋತೆವು. ಆ ರಾಜ್ಯದಲ್ಲಿ ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸೀಟನ್ನೂ ನಾವು ಗೆದ್ದಿಲ್ಲ. ಉತ್ತರಪ್ರದೇಶದಲ್ಲಿನ ಉಪಚುನಾವಣೆಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಒಟ್ಟು ಮತದಾನದಲ್ಲಿ 2 ಪ್ರತಿಶತಕ್ಕಿಂತಲೂ ಕಡಿಮೆ ಮತ ಪಡೆದಿ ದ್ದಾರೆ. ಹೀಗಾಗಿ, ಸಂದೇಶ ಸ್ಪಷ್ಟವಾಗಿದೆ. ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿಯ ಭಾಗವಾಗಿರುವ ನನ್ನ ಸಹೋದ್ಯೋಗಿಯೊಬ್ಬರು “”ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಬಹುದೆಂಬ ನಿರೀಕ್ಷೆಯಿದೆ” ಎಂದಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಂಡಿಲ್ಲ ಎಂದರೆ, ಈಗ ಅದು ಆತ್ಮಾವಲೋಕನ ಮಾಡಿಕೊಳ್ಳುತ್ತದೆಂಬ ನಿರೀಕ್ಷೆ ಹೇಗಿಟ್ಟುಕೊಳ್ಳಬೇಕು? ಕಾಂಗ್ರೆಸ್‌ನ ಸಮಸ್ಯೆ ಏನು ಎನ್ನುವುದು ನಮಗೆ ಗೊತ್ತಿದೆ. ಸಾಂಸ್ಥಿಕವಾಗಿ ಏನು ಸಮಸ್ಯೆಗಳಿವೆ ಎನ್ನುವುದೂ ನಮಗೆ ತಿಳಿದಿದೆ. ನನ್ನ ಪ್ರಕಾರ, ನಮ್ಮ ಬಳಿ ಎಲ್ಲ ಉತ್ತರಗಳೂ ಇವೆ. ಖುದ್ದು ಕಾಂಗ್ರೆಸ್‌ ಪಕ್ಷಕ್ಕೂ ಎಲ್ಲ ಉತ್ತರಗಳು ತಿಳಿದಿವೆ. ಆದರೆ ಆ ಉತ್ತರಗಳನ್ನು ಗುರುತಿಸಲು ಅದು ಮುಂದಾಗುತ್ತಿಲ್ಲ. ಆ ಉತ್ತರಗಳನ್ನು ಗುರುತಿಸದಿದ್ದರೆ ಪಕ್ಷದ ಗ್ರಾಫ್ ಕುಸಿಯುತ್ತಲೇ ಹೋಗುತ್ತದೆ.

ಕಾಂಗ್ರೆಸ್‌ ನಾಯಕತ್ವಕ್ಕೆ ಉತ್ತರಗಳು ತಿಳಿದಿವೆ ಎಂದರೆ, ಸಮಸ್ಯೆಗಳನ್ನು ಬಗೆಹರಿಸಲು ಅದೇಕೆ ಹಿಂಜರಿಯುತ್ತಿದೆ?
ಹಿಂಜರಿಕೆ ಏಕೆ ಇದೆ ಎಂದರೆ, ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ(ಸಿಡಬುÉ éಸಿ) ಇದೆಯಲ್ಲ, ಅದು ನಾಮನಿರ್ದೇಶಿತ ಸಂಸ್ಥೆ. ಪಕ್ಷವು ಒಂದರ ಅನಂತರ ಒಂದರಂತೆ ಚುನಾವಣೆಗಳಲ್ಲಿ ಕುಸಿಯುತ್ತಾ ಸಾಗುತ್ತಿರುವುದರ ಬಗ್ಗೆ “ನಾಮನಿರ್ದೇಶಿತ ಸದಸ್ಯರು’ ಪ್ರಶ್ನೆ ಮಾಡುತ್ತಾರೆ ಎಂದು ನಿರೀಕ್ಷಿಸುತ್ತೀರಾ? ಸಿಡಬ್ಲೂಸಿಯ ಸಂವಿಧಾನದಲ್ಲೂ ಪ್ರಜಾಪ್ರಭುತ್ವಿàಯ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಬೇಕು, ಅಪ್ಪಿಕೊಳ್ಳಬೇಕು.

ನಿಮ್ಮನ್ನೂ ಒಳಗೊಂಡು ಪಕ್ಷದ 22 ಹಿರಿಯ ನಾಯಕರು ಕಾಂಗ್ರೆಸ್‌ ಅಧ್ಯಕ್ಷರಿಗೆ ಸಲಹೆ ನೀಡಿ ಪತ್ರ ಬರೆದಿದ್ದೀರಿ. ನಾಯಕತ್ವದಿಂದ ಉತ್ತರ ಸಿಕ್ಕಿತೇ?
ಅಲ್ಲಿಂದ ಪ್ರತಿಕ್ರಿಯೆ ಬಂದಿಲ್ಲ ಹಾಗೂ ಮಾತುಕತೆ ನಡೆಸುವ ಪ್ರಯತ್ನವನ್ನೂ ನಾಯಕತ್ವವು ಮಾಡುತ್ತಿಲ್ಲ. ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆಯೂ ಇಲ್ಲದ ಕಾರಣ, ಅವನ್ನು ಸಾರ್ವಜನಿಕವಾಗಿ ಹೇಳುವಂತಾಗಿದೆ.

ಕಾಂಗ್ರೆಸ್‌ಗೆ ಒಂದು ಪ್ರಭಾವಿ ಪರ್ಯಾಯವಾಗಲೂ ಸಾಧ್ಯವಾಗುತ್ತಿಲ್ಲ ಎನ್ನುವುದು ನಿಜಕ್ಕೂ ಕೆಟ್ಟ ಸ್ಥಿತಿಯಲ್ಲವೇ?
ಇದು ತೀರಾ ಕೆಟ್ಟ ಸುದ್ದಿ. ಆದಾಗ್ಯೂ ಬಿಹಾರದಲ್ಲಿ ನಾವು ಎಂದಿಗೂ ಪ್ರಭಾವಿ ಪರ್ಯಾಯ ಆಗಿಯೇ ಇಲ್ಲ ಬಿಡಿ. 25ಕ್ಕೂ ಅಧಿಕ ವರ್ಷಗಳಿಂದ ಉತ್ತರಪ್ರದೇಶದಲ್ಲೂ ಪರ್ಯಾಯವಾಗಿಲ್ಲ. ಇವೆರಡೂ ದೊಡ್ಡ ರಾಜ್ಯಗಳು. ಇನ್ನು ಗುಜರಾತ್‌ನಲ್ಲಿ ಮೂರನೇ ಶಕ್ತಿಯ ಅಭಾವದಲ್ಲಿ ನಾವೇ ಪರ್ಯಾಯವಾಗಿದ್ದೇವಾದರೂ ಆ ರಾಜ್ಯದಲ್ಲೂ ಎಲ್ಲ ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡೆವು, ಪ್ರಸಕ್ತ ಚುನಾವಣೆಯಲ್ಲಿ ಖಾತೆ ತೆರೆಯಲೂ ಸಾಧ್ಯವಾಗಿಲ್ಲ. ಖಂಡಿತವಾಗಿಯೂ ಗುಜರಾತ್‌ನ ಜನರು ನಮ್ಮನ್ನು ಪ್ರಭಾವಿ ಪರ್ಯಾಯ ಎಂದು ಭಾವಿಸುತ್ತಿಲ್ಲ ಎಂದಾಯಿತು. ಇನ್ನು ಮಧ್ಯಪ್ರದೇಶದ 28 ಸ್ಥಾನಗಳ ಉಪಚುನಾವಣೆಯಲ್ಲಿ ಕೇವಲ ನಮ್ಮ ನಾಲ್ಕು ಅಭ್ಯರ್ಥಿಗಳಷ್ಟೇ ಗೆದ್ದಿದ್ದಾರೆ.
ನಾವು ಪರ್ಯಾಯವಾಗಿರುವ ರಾಜ್ಯಗಳಲ್ಲೂ ಜನ ನಾವು ನಿರೀಕ್ಷಿಸಿದಂಥ ರೀತಿಯಲ್ಲಿ ನಮ್ಮ ಮೇಲೆ ನಂಬಿಕೆ ತೋರಿಸಲಿಲ್ಲ. ಹೀಗಾಗಿ, ಆತ್ಮಾವಲೋಕನದ ಸಮಯ ಮುಗಿದುಹೋಗಿದೆ. ನಮ್ಮ ಬಳಿ ಉತ್ತರಗಳಿವೆ. ಕಾಂಗ್ರೆಸ್‌ ಧೈರ್ಯತಾಳಿ, ಅವನ್ನು ಗುರುತಿಸಬೇಕಿದೆ.

ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿಗೆ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಆಯ್ಕೆಗೆ ಪ್ರಜಾಪ್ರಭುತ್ವ ಮಾದರಿ ಚುನಾವಣೆ ನಡೆಸುವುದು ಪಕ್ಷದ ಪ್ರಸಕ್ತ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಎಂದು ಭಾವಿಸುತ್ತೀರಾ?
ಮೊದಲನೆಯದಾಗಿ, ನಮ್ಮ ಪಕ್ಷ ಕುಸಿಯುತ್ತಿದೆ ಎನ್ನುವುದನ್ನು ನಾವೆಲ್ಲ ಗುರುತಿಸಬೇಕಿದೆ. ಈಗಿನ ಅಧ್ಯಕ್ಷೀಯ ಮಾದರಿಯ ಚುನಾವಣೆಗಳಲ್ಲಿ ನಾವು ಉತ್ತರಗಳನ್ನು ಕಂಡುಕೊಂಡು, ಮುಂದಿನ ಹೆಜ್ಜೆಯ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ. ಕಾಂಗ್ರೆಸ್‌ ಮತ್ತೆ ತನ್ನನ್ನು ತಾನೇ ಹುಡುಕಿಕೊಳ್ಳಬೇಕಿದೆ. ನಮ್ಮ ನ್ಯೂನತೆಗಳನ್ನು ನಾವು ಗುರುತಿಸದೇ ಇದ್ದರೆ, ಚುನಾವಣಾ ಪ್ರಕ್ರಿಯೆಗಳಿಂದಲೂ ಫ‌ಲಿತಾಂಶ ಬದಲಿಸಲು ಸಾಧ್ಯವಿಲ್ಲ. ಸಿಡಬುÉ éಸಿಯಲ್ಲಿ ನಾಮನಿರ್ದೇಶನ ಮಾದರಿಯ ಸಂಸ್ಕೃತಿ ಹೋಗಬೇಕು. ಕಾಂಗ್ರೆಸ್‌ನಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ನಮ್ಮಲ್ಲಿ ಕೆಲವರು ಸಲಹೆ ನೀಡಿದೆವು. ಆದರೆ ನಮ್ಮ ಮಾತು ಕೇಳುವ ಬದಲು ನಮ್ಮಿಂದ ಮುಖ ತಿರುಗಿಸಿ ನಿಂತರು.
ಫ‌ಲಿತಾಂಶ ಈಗ ನಮ್ಮ ಕಣ್ಣೆದುರಿಗಿದೆ. ಹಾಗೆಂದು, ನಮ್ಮ ಮಾತು ಕೇಳಿದಾಕ್ಷಣ ಚುನಾವಣ ಫ‌ಲಿತಾಂಶಗಳು ನಾಟಕೀಯವಾಗಿ ಬದಲಾಗಿಬಿಡುತ್ತಿದ್ದವು ಎಂದೇನೂ ಅರ್ಥವಲ್ಲ. ಆದರೆ 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಪುನರ್‌ಶಕ್ತಿ ತುಂಬುವ ಹಾದಿಯಲ್ಲಾದರೂ ಇರುತ್ತಿದ್ದೆವು.

ಈಗಿನ ಚುನಾವಣೆಗಳು ಅಧ್ಯಕ್ಷೀಯ ಮಾದರಿಯಲ್ಲಿವೆ ಎನ್ನುತ್ತಿದ್ದೀರಿ. ವಿವರಿಸಿ ಹೇಳಬಲ್ಲಿರಾ?
ನೋಡಿ ಈಗ ಪ್ರಚಾರ ವೈಖರಿ ಬದಲಾಗಿದೆ. ರಚನಾತ್ಮಕವಾಗಿಯೂ ಸಮಸ್ಯೆ ಇದೆ… ಮುಖ್ಯವಾಹಿನಿ ಮಾಧ್ಯಮಗಳನ್ನು ಆಡಳಿತ ಪಕ್ಷ ನಿಯಂತ್ರಿಸುತ್ತಿದೆ. ಹೀಗಾಗಿ, ಜನರನ್ನು ತಲುಪಲು ಹೊಸ ಮಾರ್ಗಗಳನ್ನು ನಾವು ಅನ್ವೇಷಿಸಬೇಕಿದೆ. ಆ ಮೆಕ್ಯಾನಿಸಂ ಯಾವುದು? ಆ ಬಗ್ಗೆ ಯೋಚಿಸಬೇಕಿದೆ. ನಮ್ಮ ಬಳಿ ಸಾಮಾಜಿಕ ಮಾಧ್ಯಮ ವೇದಿಕೆಗಳಿದ್ದು, ಕಾಂಗ್ರೆಸ್‌ ಅಲ್ಲಿ ಉತ್ತಮವಾಗಿದೆ. ಆದರೆ, ಇದು ಬೇರುಮಟ್ಟದಲ್ಲಿ ಫ‌ಲಿತಾಂಶಗಳನ್ನು ಹುಟ್ಟುಹಾಕುತ್ತಿಲ್ಲ. ಈ ಕಾರಣಕ್ಕಾಗಿಯೇ, ಮೊದಲು ನಾವು ಅನುಭವಿಗಳ ಜತೆ, ಭಾರತದ ರಾಜಕೀಯ ವಾಸ್ತವಗಳನ್ನು ಅರ್ಥಮಾಡಿಕೊಂಡವರ ಜತೆ, ಮಾಧ್ಯಮಗಳಲ್ಲಿ ಏನು ಮತ್ತು ಹೇಗೆ ಮಾತನಾಡಬೇಕು ಎಂದು ಅರಿವಿರುವವರ ಜತೆ, ತಮ್ಮ ಮಾತುಗಳನ್ನು ಜನರ ಬಳಿ ತಲುಪಿಸುವುದು ಹೇಗೆಂದು ತಿಳಿದಿರುವವರ ಜತೆ ಸಂವಾದ ನಡೆಸಬೇಕು. ಜನರೇ ನಮ್ಮ ಬಳಿ ಬರಬೇಕು ಎಂದು ನಾವು ನಿರೀಕ್ಷಿಸಬಾರದು. ನಾವು ಮೊದಲಿನಂಥ ರಾಜಕೀಯ ಶಕ್ತಿಯಾಗಿ ಉಳಿದಿಲ್ಲ. ಈ ಕಾರಣಕ್ಕಾಗಿಯೇ, ಈ ವ್ಯವಹಾರದಲ್ಲಿ ಪರಿಣತರಾಗಿರುವವರನ್ನು ನಾವು ತಲುಪಬೇಕಿದೆ. ಆದರೆ ಹಾಗೆ ಮಾಡಲು ಸಂವಾದ ಮುಖ್ಯ.

ಬಿಹಾರದಲ್ಲಿ ಓವೈಸಿಯವರ ಎಐಎಂಐಎಂ ಪಕ್ಷ ಐದು ಸ್ಥಾನಗಳಲ್ಲಿ ಗೆದ್ದಿದೆ. ಈಗ ಮುಸ್ಲಿಂ ಮತಗಳೂ ಕಾಂಗ್ರೆಸ್‌ನಿಂದ ದೂರವಾಗುತ್ತಿರುವಂತೆ ಕಾಣಿಸುತ್ತಿದೆ.
ಅನ್ಯ ಪಕ್ಷಗಳ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ಸತ್ಯವೇನೆಂದರೆ, ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮುನ್ನ, ನಮ್ಮ ಮಿತ್ರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಬೇಕು. ಆಗ ಯಾರನ್ನು ಕಣಕ್ಕಿಳಿಸಬೇಕು ಎನ್ನುವುದು ತಿಳಿಯುತ್ತದೆ ಮತ್ತು ನಮ್ಮ ಮತಗಳೂ ಒಡೆಯುವುದಿಲ್ಲ.

(ಕೃಪೆ- ದ ಇಂಡಿಯನ್‌ ಎಕ್ಸ್‌ಪ್ರಸ್‌)

ಕಪಿಲ್‌ ಸಿಬಲ್‌, ಕಾಂಗ್ರೆಸ್‌ ಹಿರಿಯ ನಾಯಕ

ಟಾಪ್ ನ್ಯೂಸ್

ಇ.ಡಿ. ಬಲೆಗೆ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫ‌ರ್ನಾಂಡಿಸ್‌

ಇ.ಡಿ. ಬಲೆಗೆ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫ‌ರ್ನಾಂಡಿಸ್‌

1-fs

ಮೂಡಿಗೆರೆ : ಹುಲಿ ದಾಳಿಗೆ ಮತ್ತೊಂದು ಹಸು ಬಲಿ

cm

ಗಾಂಧೀಜಿ ಆಶಯದಂತೆ ಜನರೇ ಕಾಂಗ್ರೆಸ್ ವಿಸರ್ಜನೆ ಮಾಡಲು ಸಿದ್ಧರಾಗಿದ್ದಾರೆ: ಸಿಎಂ

1rqr

ಪ್ರಧಾನಿ ಮೋದಿಯೇ ನನಗೆ ರಾಜೀನಾಮೆ ನೀಡುವುದು ಬೇಡ ಎಂದಿದ್ದರು: ಹೆಚ್ ಡಿಡಿ

1dfs

ಯಂಕ, ನಾಣಿ, ಶೀನ ಮನಬಂದಂತೆ ಮಾತನಾಡುತ್ತಾರೆ : ಯಡಿಯೂರಪ್ಪ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಅಜಾತಶತ್ರುವಿನ  ಅಪರೂಪದ ಸಿನೆಯಾನ

ಕರಾವಳಿ ಮಣ್ಣಿನಲ್ಲಿ ಪೊಟಾಶಿಯಂ ಕೊರತೆ

ಕರಾವಳಿ ಮಣ್ಣಿನಲ್ಲಿ ಪೊಟಾಶಿಯಂ ಕೊರತೆ

Untitled-1

ಎರಡು ವಾರಗಳಲ್ಲಿ ಒಮಿಕ್ರಾನ್‌ ಚಿತ್ರಣ

Prawn-Biryani-750

ಕರಾವಳಿ ಸ್ಪೆಷಲ್; ರುಚಿಕರವಾದ ಸಿಗಡಿ ಬಿರಿಯಾನಿ ಮನೆಯಲ್ಲೇ ಸಿದ್ಧ ಪಡಿಸಿ

17gowrikatte

ವಿಜೃಂಭಿಸಿದ ಗೌರಿಮಾರು ಕಟ್ಟೆ ಉತ್ಸವ

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

ಇ.ಡಿ. ಬಲೆಗೆ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫ‌ರ್ನಾಂಡಿಸ್‌

ಇ.ಡಿ. ಬಲೆಗೆ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫ‌ರ್ನಾಂಡಿಸ್‌

ಯಕ್ಷಗಾನ ಪದ್ಯದೊಂದಿಗೆ‌ ಕವಿಗಳ ಹೆಸರು ಉಳಿಯಬೇಕು : ಸ್ವರ್ಣವಲ್ಲೀ ಶ್ರೀ

ಶಿರಸಿ : ಸ್ವರ್ಣವಲ್ಲಿ ಶ್ರೀಗಳಿಂದ ಮಾಳವಿಕಾ ಪರಿಣಯ ಯಕ್ಷಗಾನ ಕೃತಿ ಬಿಡುಗಡೆ

1-fs

ಮೂಡಿಗೆರೆ : ಹುಲಿ ದಾಳಿಗೆ ಮತ್ತೊಂದು ಹಸು ಬಲಿ

1aa

ತಿಪ್ಪೆ ಗುಂಡಿ‌‌ ಕಸದಲ್ಲೂ ಬಿಜೆಪಿ ದುಡ್ದು ಹೊಡೆಯುತ್ತಿದೆ: ಮಧು ಬಂಗಾರಪ್ಪ

1-d

ಸರಕಾರೀಕರಣದ ವಿರುದ್ದ ಹೋರಾಟ‌ ಮುಂದುವರಿಸಬೇಕು: ಸ್ವರ್ಣವಲ್ಲಿ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.