ಟ್ರೈ ಮಾಡಿ… ಚಪಾತಿ, ನಾನ್ ರೋಟಿ ಜತೆ ರುಚಿರುಚಿ ಬಟರ್ ಚಿಕನ್ ಮಸಾಲಾ ಸವಿಯಿರಿ!

ಶ್ರೀರಾಮ್ ನಾಯಕ್, Jan 9, 2020, 7:46 PM IST

ರಜಾ ಸಮಯ ಬಂತೆಂದರೆ ಸಾಕು ಯಾವ ರೆಸಿಪಿಗಳನ್ನು ಮಾಡಬೇಕು ಎಂಬ ಆಲೋಚನೆ ಬಹುತೇಕ ಎಲ್ಲರ ಮನೆಗಳಲ್ಲಿ ಕೇಳುವ ಮಾತು. ಅದರ ಸಲುವಾಗಿ ನಿಮ್ಮಿಷ್ಟವಾದ ಬಟರ್ ಚಿಕನ್ ಮಸಾಲಾವನ್ನು ಸವಿಯಲು ಹೋಟೆಲ್‌ ಗಳಿಗೆ ಹೋಗುವ ಅಗತ್ಯವಿಲ್ಲ. ಬದಲಿಗೆ ಮನೆಯಲ್ಲಿಯೇ ಸರಳವಾಗಿ ಮಾಡಿ ಕುಟುಂಬದವರೊಂದಿಗೆ ಬಟರ್-ಚಿಕನ್ ಮಸಾಲಾವನ್ನು ಸವಿಯಿರಿ…

ಬೇಕಾಗುವ ಸಾಮಗ್ರಿಗಳು
ಬೋನ್ ಲೆಸ್ ಚಿಕನ್ 1ಕೆ.ಜಿ., ಟೊಮೇಟೋ 3, ಈರುಳ್ಳಿ 4, ದಾಲ್ಚಿನ್ನಿ ಎಲೆ 1, ಲವಂಗ 2, ಬೆಳ್ಳುಳ್ಳಿ ಶುಂಠಿ ಪೇಸ್ಟ್ 2 ದೊಡ್ಡ ಚಮಚ, ಗೇರು ಬೀಜ ಪೇಸ್ಟ್ 2 ದೊಡ್ಡ ಚಮಚ,ಅರಸಿನ ಪುಡಿ ಅರ್ಧ ಚಮಚ, ಕೊತ್ತಂಬರಿ ಪುಡಿ 1ಸಣ್ಣ ಚಮಚ, ಕಸೂರಿ ಮೇತಿ 1 ಸಣ್ಣ ಚಮಚ, ಗರಂ ಮಸಾಲಾ ಪುಡಿ 1 ಸಣ್ಣ ಚಮಚ, ಬೆಣ್ಣೆ 3 ದೊಡ್ಡ ಚಮಚ., ಹಾಲಿನ ಕೆನೆ 2 ದೊ.ಚ., ಕೊತ್ತಂಬರಿ ಸೊಪ್ಪು 1 ದೊ.ಚ., ಮೆಣಸಿನ ಪುಡಿ 2 ದೊ.ಚ., ಹಸಿ ಮೆಣಸು 4 ರಿಂದ 6,ನಿಂಬೆ ಹಣ್ಣಿನ ರಸ ಸ್ವಲ್ಪ,ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
– 2 ಈರುಳ್ಳಿ ಸಿಪ್ಪೆ ತೆಗೆದು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಮುಚ್ಚಿಡಿ.ಅನಂತರ ತೆಗೆದು ಮಿಕ್ಸರ್ ನಲ್ಲಿ ಕಡೆಯಿರಿ. ಟೊಮೇಟೋವನ್ನು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಮುಚ್ಚಿಡಿ. ಅನಂತರ ತೆಗೆದು ಮಿಕ್ಸರ್ ನಲ್ಲಿ ಕಡೆಯಿರಿ.
-1 ದೊಡ್ಡ ಚಮಚ ಬೆಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ ದಾಲ್ಚಿನ್ನಿ ಎಲೆ, ಲವಂಗ ಹಾಕಿ ಅರ್ಧ ನಿಮಿಷ ಫ್ರೈ ಮಾಡಿ, ಹೆಚ್ಚಿದ್ದ ಈರುಳ್ಳಿ ಹಾಕಿ ನಸು ಕೆಂಪು ಬಣ್ಣ ಬರುವ ತನಕ ಹುರಿಯಿರಿ.
– ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ 2 ನಿಮಿಷ ಹುರಿಯಿರಿ. ಮೆಣಸಿನ ಪುಡಿ ಹಾಕಿ 1 ನಿಮಿಷ ಹುರಿದುಕೊಳ್ಳಿ. ಗೇರು ಬೀಜದ ಪೇಸ್ಟ್ ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷ ಹುರಿಯಿರಿ.
– ಟೊಮೇಟೋ ಪೇಸ್ಟ್ , ಈರುಳ್ಳಿ ಪೇಸ್ಟ್, ಕಸೂರಿ ಮೇತಿ , ಕೊತ್ತಂಬರಿ ಪುಡಿ, ಅರಸಿನ ಪುಡಿ, ಗರಂ ಮಸಾಲ ಪುಡಿ, ಹಸಿಮೆಣಸು, ಉಪ್ಪು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿರಿ.
– ಚಿಕನ್ ಪೀಸ್ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿರಿ. ಬೇಕಾದಷ್ಟು ನೀರನ್ನು ಸೇರಿಸಿ ಹದಕ್ಕೆ ತನ್ನಿ. ಚೆನ್ನಾಗಿ ಕುದಿಸಿರಿ. ಉರಿ ಆರಿಸಿ, ಉಳಿದ ಬೆಣ್ಣೆ ಹಾಗೂ ಹಾಲಿನ ಕೆನೆ ಹಾಕಿ ನಂತರ ನಿಂಬೆ ಹಣ್ಣಿನ ರಸವನ್ನು ಸೇರಿಸಿರಿ. ತದನಂತರ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪಿನಿಂದ ಆಲಂಕರಿಸಿರಿ.

ಬಹಳ ಸುಲಭವಾಗಿ ಮಾಡಿಕೊಂಡು ಈ ಬಟರ್ – ಚಿಕನ್ ಮಸಾಲಾ ಮಾಡಿಕೊಂಡು ಚಪಾತಿ, ನಾನ್,ರೋಟಿಯ ಜೊತೆ ಇದನ್ನು ಸವಿಯಿರಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಅನ್ನಭಾಗ್ಯ ಯೋಜನೆ ಜಾರಿಗೆ ಯಾರದೂ ತಕರಾರು ಇಲ್ಲ. ಆದರೆ, ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಗೆ ಹೋಗುತ್ತಿರುವುದು, ಎಪಿಎಲ್‌ ಮಿತಿಯವರೂ ಬಿಪಿಎಲ್‌ ಕಾರ್ಡ್‌...

  • ವಾಸ್ತವವಾಗಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಮೂರು ರಾಜಧಾನಿ ನಿರ್ಮಿಸಲು ಮುಂದಾಗಿರುವುದು ನಿಕಟಪೂರ್ವ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮೇಲಿರುವ...

  • ಕೋಡ್ಲು ರಾಮಕೃಷ್ಣ ನಿರ್ದೇಶನದ "ಉದ್ಭವ' ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ್ದ ಚಿತ್ರ. ಈಗ "ಮತ್ತೆ ಉದ್ಭವ' ಚಿತ್ರ ನಿರ್ದೇಶಿಸುವ ಮೂಲಕ ಒಂದಷ್ಟು ನಿರೀಕ್ಷೆ...

  • ಸಾಧನೆಗೆ ವಯಸ್ಸಿನ ಹಂಗಿಲ್ಲ. ಅಂತೆಯೇ ತಮ್ಮ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದವರ ಪಟ್ಟಿ ಇಲ್ಲಿದೆ. ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎಂಬಂತೆ...

  • ನಾನು ನನ್‌ ಜಾನು... -ಇದು ಚಿತ್ರದ ಹೆಸರು. ಬಹುಶಃ ಈ ಶೀರ್ಷಿಕೆ ಕೇಳಿದರೆ, ಇದೊಂದು ಪಕ್ಕಾ ಲವ್‌ಸ್ಟೋರಿ ಸಿನಿಮಾ ಅಂದೆನಿಸವುದು ಸಹಜ. ಆದರೆ, ಇಲ್ಲಿ ಪ್ರೀತಿಗೆ ಎಷ್ಟು...