ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

ಮುಖಕ್ಕೆ ಅರಶಿನ ಬಳಸುವ ಸರಿಯಾದ ಕ್ರಮ ಯಾವುದು?

ಶ್ವೇತಾ.ಎಂ, Aug 16, 2022, 5:45 PM IST

thumb web ex (1) (1) (1) (1) (1) (1) copy (1)

ಅರಿಶಿನದ ಪ್ರಯೋಜನಗಳು ಪ್ರತಿಯೊಬ್ಬರಿಗೂ ತಿಳಿದಿವೆ. ಆದ್ದರಿಂದಲೇ ಇದನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತದೆ. ವಿಶೇಷವಾಗಿ ಭಾರತೀಯರು ಬಹುತೇಕ ಎಲ್ಲಾ ಶುಭ ಕಾರ್ಯಗಳಲ್ಲಿ, ಅಡುಗೆಗಳಿಗೂ ಅರಿಶಿನವನ್ನು ಬಳಸುತ್ತಾರೆ. ಅರಶಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿರುವುದರಿಂದ ಮುಖದ ಕಾಂತಿ ಹೆಚ್ಚಿಸಲು ಮಹಿಳೆಯರು ಫೇಸ್‌ ಪ್ಯಾಕ್‌ ಆಗಿ ಬಳಸುತ್ತಾರೆ.  ಆದ್ದರಿಂದ ಅರಿಶಿನವು ನಮ್ಮ ದೈನಂದಿನ ಜೀವನಶೈಲಿಯಲ್ಲಿ ವಿಶೇಷ ಸ್ಥಾನ ಹೊಂದಿದೆ.

ಆದರೆ ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಇದನ್ನು ಬಳಸಲು ಸರಿಯಾದ ಮಾರ್ಗ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದ್ದರಿಂದ ಇದುವರೆಗೂ ಅವರು ಅರಿಶಿನ ಬಳಸುವಾಗ ತಪ್ಪುಗಳನ್ನು ಮಾಡುತ್ತಲೇ ಬಂದಿದ್ದಾರೆ. ಇಲ್ಲಿ ಜನರು ತಮ್ಮ ಚರ್ಮಕ್ಕೆ ಅರಿಶಿನವನ್ನು ಬಳಸುವಾಗ ಮಾಡಿರುವ ತಪ್ಪುಗಳು ಯಾವುವು ಎಂದುದನ್ನು ತಿಳಿದುಕೊಳ್ಳೋಣ.

ಬೇರೆ ಪದಾರ್ಥಗಳ ಜೊತೆ ಮಿಶ್ರಣ ಮಾಡಬಾರದು

ಅರಿಶಿನವು ಅದ್ಭುತವಾದ ಮಸಾಲೆ. ಆದರೆ ನೀವು ಅದನ್ನು ಯಾವುದರೊಂದಿಗೆ ಬೆರೆಸುತ್ತಿದ್ದೀರಿ ಎಂಬುದರ ಬಗ್ಗೆ ತಿಳಿದಿರಬೇಕು. ಅರಿಶಿನವನ್ನು ಮತ್ತೊಂದು ಪದಾರ್ಥದೊಂದಿಗೆ ಬೆರೆಸುವುದು ಕೆಟ್ಟ ಅಭ್ಯಾಸ. ಅಂತರ್ಜಾಲವನ್ನು ತಡಕಾಡಿದರೆ ಅದರಲ್ಲಿ ರೋಸ್ ವಾಟರ್, ನಿಂಬೆ ರಸ, ಹಾಲು ಇತ್ಯಾದಿಗಳೊಂದಿಗೆ ಅರಿಶಿನವನ್ನು ಬೆರೆಸಿದ ಫೇಸ್ ಪ್ಯಾಕ್ ಅನ್ನು ತೋರಿಸಲಾಗುತ್ತದೆ.

ಆದರೆ ಹಲವಾರು ವಿಭಿನ್ನ ಪದಾರ್ಥಗಳನ್ನು ಅರಿಶಿನಕ್ಕೆ ಮಿಶ್ರಣ ಮಾಡಿದರೆ, ಅದು ಅರಿಶಿನದೊಂದಿಗೆ ಪ್ರತಿಕ್ರಿಯಿಸುವ ಮೂಲಕ ಚರ್ಮಕ್ಕೆ ಹಾನಿ ಮಾಡಬಹುದು. ಅರಿಶಿನವು ಕರ್ಕ್ಯುಮಿನ್ ಎಂಬ ಸಕ್ರಿಯ ಘಟಕಾಂಶವನ್ನು ಹೊಂದಿದ್ದು, ಇದು ಉರಿಯೂತವನ್ನು ಉಂಟುಮಾಡುತ್ತದೆ. ಆದ್ದರಿಂದ ನೀವು ಅರಿಶಿನವನ್ನು ಫೇಸ್ ಪ್ಯಾಕ್ ಆಗಿ ಬಳಸಲು ಬಯಸಿದರೆ ಅರಿಶಿನ ಮತ್ತು ನೀರನ್ನು ಹೊರತುಪಡಿಸಿ ಬೇರೇನೂ ಬೆರೆಸುವ ಅಗತ್ಯವಿಲ್ಲ.

ಹೆಚ್ಚು ಸಮಯ ಬಿಡಬೇಡಿ

ಅರಿಶಿನವು ಮುಖದ ಮೇಲಿನ ಕಲೆಗಳನ್ನು ತೆಗೆಯುತ್ತದೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದನ್ನು ಮುಖದ ಮೇಲೆ ದೀರ್ಘಕಾಲದವರೆಗೆ ಬಿಟ್ಟರೆ, ಅದು ನಿಮ್ಮ ಮುಖದ ಮೇಲೆ ಕಲೆ ಮೂಡುವಂತೆ ಮಾಡುತ್ತದೆ. ಆದ್ದರಿಂದ ನೀವು ಅರಿಶಿನವನ್ನು ನಿಮ್ಮ ಚರ್ಮದ ಮೇಲೆ ಹೆಚ್ಚು ಹೊತ್ತು ಬಿಡದಂತೆ ನೋಡಿಕೊಳ್ಳಿ. ನಂತರ ಚೆನ್ನಾಗಿ ತೊಳೆಯಿರಿ. ಹಾಗೆಯೇ ಅರಿಶಿನವನ್ನು ಮುಖಕ್ಕೆ ಸರಿಯಾಗಿ ಹಚ್ಚದಿದ್ದರೆ ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸಮ ಮತ್ತು ತೆಳುವಾದ ಪದರವನ್ನು ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಬೇಕು.

ಚೆನ್ನಾಗಿ ಮುಖ ತೊಳೆಯಿರಿ

ಚರ್ಮದ ರಕ್ಷಣೆಯ ವಿಷಯಕ್ಕೆ ಬಂದಾಗ ನಮ್ಮ ಮುಖವನ್ನು ಚೆನ್ನಾಗಿ ತೊಳೆಯುವುದು ಒಂದು ಪ್ರಮುಖ ಅಂಶವಾಗಿದೆ. ಆದರೆ ದೈನಂದಿನ ಜೀವನದ ಒತ್ತಡದಿಂದ, ನಮ್ಮ ಚರ್ಮದ ರಕ್ಷಣೆಯ ದಿನಚರಿಯ ಮುಖ್ಯವಾದ ಅಂಶಗಳನ್ನು ನಾವು ಹೆಚ್ಚಾಗಿ ಕಡೆಗಣಿಸುತ್ತಿದ್ದೇವೆ. ಅವುಗಳಲ್ಲಿ ಒಂದು ನಮ್ಮ ಮುಖಗಳನ್ನು ಸಂಪೂರ್ಣವಾಗಿ ತೊಳೆಯುವುದು. ನೀವು ನಿಮ್ಮ ಚರ್ಮದಿಂದ ಅರಿಶಿನವನ್ನು ತೆಗೆದ ನಂತರ, ಅದನ್ನು ತಣ್ಣನೆಯ ಅಥವಾ ಉಗುರು ಬೆಚ್ಚಗಿನ ಉಷ್ಣಾಂಶದ ನೀರಿನಿಂದ ಚೆನ್ನಾಗಿ ತೊಳೆಯಬೇಕು.

ಫೇಸ್ ವಾಶ್ ಬಳಸಬೇಡಿ

ಬಹಳಷ್ಟು ಜನರು ಮಾಡುವ ತಪ್ಪೆಂದರೆ ಫೇಸ್ ಪ್ಯಾಕ್ ಹಾಕಿದ ನಂತರ, ಮುಖವನ್ನು ಸೋಪಿನಿಂದ ತೊಳೆಯುವುದು. ಅರಿಶಿನ ಪ್ಯಾಕ್ ತೆಗೆದ ನಂತರ, ನಿಮ್ಮ ಚರ್ಮ ಅಥವಾ ಮುಖದ ಮೇಲೆ 24 ರಿಂದ 48 ಗಂಟೆಗಳ ಕಾಲ ಸೋಪ್ ಬಳಸುವುದನ್ನು ತಪ್ಪಿಸಿ. ಹಾಗೆಯೇ ಫೇಸ್ ಪ್ಯಾಕ್ ತೆಗೆದ ನಂತರ ಯಾವುದೇ ಫೇಸ್ ವಾಶ್ ಅನ್ನು ಸಹ ಎಂದಿಗೂ ಬಳಸಬೇಡಿ. ಜನರು ಮಾಡುವ ಸಾಮಾನ್ಯ ತಪ್ಪೆಂದರೆ ಫೇಸ್ ಪ್ಯಾಕ್ ಅನ್ನು ಹಚ್ಚಿದ ನಂತರ ಮುಖವನ್ನು ಸೋಪಿನಿಂದ ತೊಳೆಯುವುದು ಅಥವಾ ಮುಖ ಸ್ವಚ್ಛಗೊಳಿಸುವುದು.

ಈ  ರೀತಿಯ ತಪ್ಪನ್ನು ಮಾಡುವುದರಿಂದ ಫೇಸ್ ಪ್ಯಾಕ್’ನ ಯಾವುದೇ ಪ್ರಯೋಜನಗಳು ಸಿಗುವುದಿಲ್ಲ, ತಕ್ಷಣ ಹೊರಟುಗೋಗುತ್ತದೆ. ಜೊತೆಗೆ ಫೇಸ್ ಪ್ಯಾಕ್ ಅನ್ನು ಹಚ್ಚಿದ ನಂತರ ಮುಂದಿನ 24 ಗಂಟೆಗಳ ಕಾಲ ಯಾವುದೇ ಫೇಸ್ ವಾಶ್ ಅನ್ನು ಬಳಸಬಾರದು ಎಂದು ತಜ್ಞರು ಬಲವಾಗಿ ಶಿಫಾರಸ್ಸು ಮಾಡುತ್ತಾರೆ.

*ಶ್ವೇತಾ ಮುಂಡ್ರುಪ್ಪಾಡಿ

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

web focus 1

ಹವ್ಯಾಸವನ್ನು ಉದ್ಯಮವನ್ನಾಗಿಸಿದ ಸಾಧಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.