ಡ್ರೈ ವೆಜಿಟೆಬಲ್‌ ಮಂಚೂರಿಯನ್‌

ಶ್ರೀರಾಮ್ ನಾಯಕ್, Dec 12, 2019, 9:49 PM IST

ಇಂದು ಎಲ್ಲರೂ ಆಹಾರ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್‌ನ‌ಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆಧ್ಯತೆಯನ್ನು ನೀಡುತ್ತಿದ್ದಾರೆ. ಹಾಗಿದ್ದರೆ ಈ ವೀಕೆಂಡ್‌ಗೆ ಮನೆಯಲ್ಲೇ ಕೂತು ಚೈನೀಸ್‌ ಫ‌ುಡ್‌ ತಿನ್ನಬೇಕು ಎಂಬ ಆಸೆ ನಿಮಗಾಗಿದ್ದರೆ ಡ್ರೈ ವೆಜಿಟೆಬಲ್‌ ಮಂಚೂರಿಯನ್‌ ತಯಾರಿಸಿ ನೋಡಿ .ಹಾಗಾದರೆ ಇನ್ನೇಕೆ ತಡ ಸ್ವಾಧಿಷ್ಟಕರವಾಗಿ ಡ್ರೈ ವೆಜಿಟೆಬಲ್‌ ಮಂಚೂರಿಯನ್‌ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾಧಿಷ್ಟವಾಗಿ ಸವಿಯಿರಿ…

ಬೇಕಾಗುವ ಸಾಮಗ್ರಿಗಳು:
ಸಣ್ಣಗೆ ಹೆಚ್ಚಿದ ಕ್ಯಾರೆಟ್‌,ಬೀನ್ಸ್‌,ಕ್ಯಾಬೇಜ್‌,ಕಾಲಿಫ್ಲವರ್‌,ಈರುಳ್ಳಿ ಹೂವು ಒಟ್ಟಿಗೆ 3 ಕಪ್‌,ಕಾನ್‌ಫ್ಲೋರ್‌‌ 2 ದೊ.ಚಮಚ,ಮೈದಾ 2 ದೊ.ಚಮಚ, ಉಪ್ಪು ರುಚಿಗೆ.
ಮಾಡುವ ವಿಧಾನ:
ತರಕಾರಿಗೆ ಉಪ್ಪು ಸೇರಿಸಿ ಬೆರಸಿ ಕಾನ್‌ಫ್ಲೋರ್‌,ಮೈದಾ ಹಾಕಿ ಗಟ್ಟಿಯಾಗಿ ವಡೆ ಹಿಟ್ಟಿನಂತೆ ಕಲಸಿಕೊಳ್ಳಿ.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಲಸಿಟ್ಟ ತರಕಾರಿ ಮಿಶ್ರಣವನ್ನು ದೊಡ್ಡ ನೆಲ್ಲಿಕಾಯಿ ಗಾತ್ರದಲ್ಲಿ ಬಿಸಿ ಎಣ್ಣೆಗೆ ಬಿಡಿ.ಗರಿಗರಿಯಾಗಿ ಕರಿದು ಎಣ್ಣೆ ಬಸಿದು ಎತ್ತಿಡಿ.ಕರಿದ ವಡೆಗಳನ್ನು (ವೆಜ್‌ಬಾಲ್ಸ್‌)ಗೆ ಹಾಕಿ.

ಮಂಚೂರಿಯನ್‌ ಸಾಸ್‌ಗೆ
ಬೇಕಾಗುವ ಸಾಮಾಗ್ರಿಗಳು:
ಬೆಳ್ಳುಳ್ಳಿ 2 ದೊ.ಚಮಚ,ವಿನೆಗರ್‌ 2 ದೊ.ಚಮಚ,ಸಣ್ಣಗೆ ಹೆಚ್ಚಿದ ಈರುಳ್ಳಿ 1 ದೊ.ಚ.,ಸಣ್ಣಗೆ ಹೆಚ್ಚಿದ ಶುಂಠಿ 1ದೊ.ಚ.,ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ 1ಚಮಚ,ಸೋಯಾ ಸಾಸ್‌ 2ದೊ.ಚ.,ಸೂಪ್‌ ಕ್ಯೂಬ್ಸ್ 3,ಎಣ್ಣೆ 2 ದೊ.ಚ.,ರೆಡ್‌ ಚಿಲ್ಲಿ ಸಾಸ್‌ 3 ಚಮಚ,ಟೊಮೆಟೊ ಕೆಚಪ್‌ 2ಚಮಚ, ಕಾನ್‌ಫ್ಲೋರ್‌ 2 ದೊ.ಚ.,ಮತ್ತು ನೀರು 4 ಕಪ್‌,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ.

ಮಾಡುವ ವಿಧಾನ:
ನೀರು ಮತ್ತು ಕಾನ್‌ಫ್ಲೋರ್‌ ಬೆರಸಿಡಿ.- ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಶುಂಠಿ,ಈರುಳ್ಳಿ,ಬೆಳ್ಳುಳ್ಳಿ,ಹಸಿಮೆಣಸಿಕಾಯಿ ಹಾಕಿ ಕೈಯಾಡಿಸಿ ಬಾಡಿದರೆ ಸಾಕು.ತದನಂತರ ಸೋಯಾ ಸಾಸ್‌,ರೆಡ್‌ ಚಿಲ್ಲಿ ಸಾಸ್‌, ಟೊಮೆಟೊ ಕೆಚಪ್‌,ವಿನೇಗರ್‌ ಮಿಕ್ಸ್‌ ಮಾಡಿ.ನೀರು , ಕಾನ್‌ಫ್ಲೋರ್‌ ಮಿಶ್ರಣ ಮತ್ತು ಸೂಪ್‌ ಕ್ಯೂಬ್ಸ್ ಹಾಕಿ ಕುದಿಸಿ.ತದನಂತರ ಫ್ರೈ ಮಾಡಿಟ್ಟ ತರಕಾರಿ ಉಂಡೆ ಹಾಕಿ ಮಿಕ್ಸ್‌ ಮಾಡಿ ನಂತರ ಕೊತ್ತಂಬರಿ ಸೊಪ್ಪಿನ ಚೂರು ಹಾಕಿದರೆ ಡ್ರೈ ವೆಜಿಟೆಬಲ್‌ ಮಂಚೂರಿಯನ್‌ ಸವಿಯಲು ಸಿದ್ಧ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ