ಇನ್ಮುಂದೆ ಬರಲಿದೆ ಗೂಗಲ್ ಪೇಪರ್ ಫೋನ್ : ಇದು ಜಗತ್ತೆ ನಿಬ್ಬೆರಗಾಗಿಸುವ ಹೊಸ ಅವಿಷ್ಕಾರ

ಮಿಥುನ್ ಪಿಜಿ, Dec 2, 2019, 6:00 PM IST

ಸ್ಮಾರ್ಟ್ ಫೋನ್ ತುಂಬಾ ಭಾರವಾಗಿದೆ. ಎಲ್ಲೆಂದರಲ್ಲಿ ಹಿಡಿದು ಓಡಾಡುವುದು ಕಷ್ಟವಾಗುತ್ತಿದೆಯಾ ? ಭಾರದ ಫೋನ್ ಬದಲಿಗೆ ತೆಳು ಗಾತ್ರದ ಫೋನ್ ಇದ್ದರೇ ಎಷ್ಟು ಒಳ್ಳೆಯದು ಅಲ್ಲವೇ ಎಂದು ಯೋಚಿಸುತ್ತಿದ್ದೀರಾ ! ನಿಮ್ಮ ಕಲ್ಪನೆಗೆ ಗೂಗಲ್ ಹೊಸ ರೂಪ ನೀಡುತ್ತಿದೆ. ಕಾಗದದಂತಹ ಮೊಬೈಲ್ ತಯಾರಿಕೆಗೆ ಈಗಾಗಲೇ ಕೆಲಸಗಳು ಆರಂಭವಾಗಿದೆ. ಡಿಜಿಟಲ್ ಲೋಕದಿಂದ ಜನರನ್ನು ಬಿಡುಗಡೆಗೊಳಿಸಲು ಗೂಗಲ್ ಈ ಹೊಸ ಫೋನ್ ಪರಿಚಯಿಸುತ್ತಿದೆ. ಗೂಗಲ್ ನ ಪ್ರಯೋಗಾತ್ಮಕ ವೇದಿಕೆಯಲ್ಲಿ ಈ ಸ್ಮಾರ್ಟ್ ಫೋನ್ ನನ್ನು ಪರಿಚಯಿಸಲು ಸಿದ್ಧತೆ ಆರಂಭವಾಗಿದೆ.

ಸ್ಮಾರ್ಟ್ ಫೋನಿನ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಚಿಕ್ಕಮಕ್ಕಳಿಂದ  ಹಿಡಿದು ನೂರು ವರ್ಷದ ವೃದ್ಧರ ಕೈಯಲ್ಲೂ ಮೊಬೈಲ್ ಬೇಕೇ ಬೇಕು ಎಂಬ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ಪೇಪರ್ ಫೋನ್ ಎಂಬುದು ಮೊಬೈಲ್ ಗೆ ಪರ್ಯಾಯವಾಗಿ ಬಳಸಲ್ಪಡುವ ಒಂದು ಹಾಳೆಯಷ್ಟೇ. ಇದರ ಉದ್ದೇಶವೆಂದರೆ ಜನರನ್ನು ಸಾಧ್ಯವಾದಷ್ಟು ಸ್ಮಾರ್ಟ್ ಫೋನ್ ಗಳಿಂದ ದೂರ ಮಾಡುವುದು. ಒಂದು ತುಂಡು ಪೇಪರ್ ನಂತಿರುವ ಫೋನ್ ಅನ್ನು 8 ಬಾರಿ ಮಡಚುವುದಕ್ಕೆ ಅವಕಾಶ ನೀಡುವಂತಹ ಪೇಪರ್ ಫೋನ್ ತಯಾರಿಯಲ್ಲಿ ಗೂಗಲ್ ನ ಕ್ರಿಯೇಟಿವ್ ಲ್ಯಾಬ್ ತೊಡಗಿದೆ.

ಸ್ವಲ್ಪ ಸಮಯ ನಮ್ಮ ಬಳಿ ಮೊಬೈಲ್ ಫೋನ್ ಇಲ್ಲದಿದ್ದರೆ ನೋ ಕಳೆದುಕೊಂಡಂತೆ ಪರಿತಪಿಸುತ್ತಿರುತ್ತೇವೆ. ಕೆಲವೊಮ್ಮೆ ಮೊಬೈಲ್ ಫೋನ್ ಅನ್ನೇ ಮರೆತು ಎಲ್ಲೋ ಬಿಟ್ಟು ಬಂದಿರುತ್ತೇವೆ. ಇದೇ ಈಗ ಗೂಗಲ್ ಕಲ್ಪನೆಗೆ ಪ್ರಮುಖ ಕಾರಣವಾಗಿದೆ. ಡಿಜಿಟಲ್ ವ್ಯಸನವನ್ನು ದೂರಾಗಿಸುವ ಹಲವು ಪ್ರಯೋಗಗಳಿಗೆ ಸಂಸ್ಥೆ ಎಕ್ಸ್ ಪೆರಿಮೆಂಟ್ ವಿತ್ ಗೂಗಲ್ಮುಖೇನ ವೇದಿಕೆ ಕಲ್ಪಿಸಿದೆ. ಇದರಿಂದ ಹೊರಬಂದಿರುವುದೇ ಪೇಪರ್ ಫೋನ್ ಕಲ್ಪನೆ.

ಪೇಪರ್ ಫೋನ್ ಜೊತೆಗೆ ಗೂಗಲ್ ಇನ್ನೂ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ಅನ್ ಲಾಕ್ ಕ್ಲಾಕ್( ನೀವು ಎಷ್ಟು ಬಾರಿ ಫೋನ್ ನ್ನು ಅಲ್ ಲಾಕ್ ಮಾಡುತ್ತೀರಿ ಎಂಬುದನ್ನು ಇದು ತಿಳಿಸುತ್ತದೆ), ವಿ-ಫ್ಲಿಪ್( ಇದರಲ್ಲಿ ಗುಂಪಿನ ಎಲ್ಲಾ ಸದಸ್ಯರು ಒಟ್ಟಿಗೆ ಫೋನ್ ನ್ನು ಆಫ್ ಮಾಡಲು ಅವಕಾಶವಿರುತ್ತದೆ), ಇತ್ಯಾದಿ ಪ್ರೊಜೆಕ್ಟ್ ಗಳನ್ನು ಮಾಡಲಾಗುತ್ತಿದೆ. ಗೂಗಲ್ ಜೊತೆಗೆ ಇನ್ನೂ ಹಲವು ಸಿಲಿಕಾನ್ ವ್ಯಾಲಿ ಕಂಪೆನಿಗಳು ಈ ನಿಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಪ್ರೊಡಕ್ಟ್ ಗಳ ಬಿಡುಗಡೆಗೆ ತಯಾರಿ ನಡೆಸುತ್ತಿವೆ. ಪ್ರಾಥಮಿಕ ಮಾಹಿತಿ ಪ್ರಕಾರಈ ಫೋನ್ ನಲ್ಲಿನಲ್ಲಿ ಕ್ಯಾಮಾರ, ಕರೆ ಸೌಲಭ್ಯ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಕೇವಲ ಅಕ್ಷರಗಳನ್ನು ಮಾತ್ರ ಡಿಜಿಟಲ್ ರೂಪದಲ್ಲಿ ನೋಡಬಹುದು. ಮುಂದಿನ ವರುಷಗಳಲ್ಲಿ ಎಲ್ಲಾ ಸೌಲಭ್ಯಗಳು ಬರಲಿವೆ ಎಂದು ಸುದ್ದಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಮುಂದಿನ ವರ್ಷಗಳಲ್ಲಿ ಜಗತ್ತೇ ನಿಬ್ಬೆರಗಾಗುವಂತಹ ತಂತ್ರಜ್ಞಾನಗಳು ಅವಿಷ್ಕಾರಗೊಳ್ಳಲಿದೆ. ಇದಕ್ಕೆ ಗೂಗಲ್ ಈಗಾಗಲೇ ಮುನ್ನುಡಿ ಬರೆಯುತ್ತಿದೆ. ಈಗಿರುವ ಸ್ಮಾರ್ಟ್ ಫೋನ್ ಗಳು ಸಾಮಾನ್ಯವಾಗಿ ಸರಾಸರಿ 500 ಗ್ರಾಂ ತೂಕವಂತೂ ಇದ್ದೇ ಇರುತ್ತದೆ. ಇನ್ನು ಪೇಪರ್ ನಂತಿರುವ ಪೋನ್ ಗಳು ಬಂದರಂತೂ ತಂತ್ರಜ್ಞಾನ ಕ್ಷೇತ್ರದಲ್ಲೂ ಕೂಡ ಮಹತ್ತರ ಬದಲಾವಣೆಗಳಾಗುತ್ತವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ