ಮನೆಯಲ್ಲೇ ರುಚಿರುಚಿ ವೆಜ್‌ ಫ್ರೈಡ್‌ ರೈಸ್‌ ಮಾಡೋ ಸುಲಭ ವಿಧಾನ ಇಲ್ಲಿದೆ…

ಶ್ರೀರಾಮ್ ನಾಯಕ್, Dec 5, 2019, 7:36 PM IST

ಇಂದು ಎಲ್ಲರೂ ಆಹಾರ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್‌ನ‌ಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆದ್ಯತೆಯನ್ನು ನೀಡುತ್ತಿದ್ದಾರೆ. ಚಾಟ್ಸ್‌ ಐಟಮ್‌ಗಳಿರಬಹುದು, ಚೈನೀಸ್‌ ಫ‌ುಡ್‌ಗಳಿರಬಹುದು, ತರೇವಾರಿ ನಾನ್‌ ವೆಜ್‌ ಐಟಮ್‌ಗಳಿರಬಹುದು ಹೀಗೆ ಜನರ ಫ‌ುಡ್‌ ಹ್ಯಾಬಿಟ್‌ ವಿಭಿನ್ನ  ವಿಶಿಷ್ಟ. ಈ ಸಾಲಿಗೆ ಸೇರುವಂತದ್ದು ವೈವಿಧ್ಯಮಯ ರೈಸ್‌ ಐಟಮ್‌ಗಳು. ಜೀರಾ ರೈಸ್‌, ಬಿರಿಯಾನಿ, ಫ್ರೈಡ್‌ ರೈಸ್‌ ಹೀಗೆ ಈ ಪಟ್ಟಿ ಬೆಳೆಯುತ್ತದೆ. ಹೀಗೆ ರೈಸ್‌ ಐಟಮ್‌ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದು ಫ್ರೈಡ್‌ ರೈಸ್‌. ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ ಫ್ರೈಡ್‌ ರೈಸ್‌ ಅನ್ನು ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾದಿಷ್ಟವಾಗಿ ಸವಿಯಿರಿ…

ಬೇಕಾಗುವ ಸಾಮಗ್ರಿಗಳು: ಸೋನಾ ಮಸೂರಿ ಅಕ್ಕಿ 2 ಕಪ್‌ , ಸಣ್ಣಗೆ ಹೆಚ್ಚಿದ ಕ್ಯಾರೆಟ್‌,ಬೀನ್ಸ್‌,ಅಣಬೆ,ಕ್ಯಾಬೇಜ್‌ ಒಟ್ಟಿಗೆ 1 ಕಪ್‌,ಸಣ್ಣಗೆ ಹೆಚ್ಚಿದ ಈರುಳ್ಳಿ 1/2 ಕಪ್‌,ಗ್ರೀನ್‌ ಚಿಲ್ಲಿ ಸಾಸ್‌ 1 ದೊಡ್ಡ ಚಮಚ,ಸೋಯಾ ಸಾಸ್‌ 2 ದೊಡ್ಡ ಚಮಚ,ವಿನೇಗರ್‌ 1/2 ಚಮಚ,ಸಣ್ಣಗೆ ಹೆಚ್ಚಿದ ಈರುಳ್ಳಿ ಹೂವಿನ ಹಸುರು ಭಾಗ 2 3 ಚಮಚ,1ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸು,4 ದೊಡ್ಡ ಚಮಚ ಎಣ್ಣೆ,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ,ಕಾಳು ಮೆಣಸಿನ ಪುಡಿ 1/2 ಚಮಚ,ರುಚಿಗೆ ಉಪ್ಪು.

ಮಾಡುವ ವಿಧಾನ:
2 ಕಪ್‌ ಅಕ್ಕಿಗೆ 4ಕಪ್‌ ನೀರು ಹಾಕಿ ಅನ್ನ ಮಾಡಿ ರೆಡಿ ಇಡಿ.ಆಮೇಲೆ ದೊಡ್ಡ ಕಡಾಯಿಗೆ 4 ದೊಡ್ಡ ಚಮಚ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ , ದೊಣ್ಣೆ ಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ ಆದನಂತರ ದೊಡ್ಡ ಉರಿಯಲ್ಲಿ ಹೆಚ್ಚಿರುವ ಎಲ್ಲಾ ತರಕಾರಿಗಳನ್ನು ಹಾಕಿ 2 ನಿಮಿಷಗಳ ಕಾಲ ಸರಿಯಾಗಿ ಮಗುಚಬೇಕು. ಫ್ರೈ ಆದನಂತರ ಸಣ್ಣಗೆ ಉರಿ ಮಾಡಿ ಸೋಯಾ ಸಾಸ್‌,ಗ್ರೀನ್‌ ಚಿಲ್ಲಿ ಸಾಸ್‌ ,ವಿನೇಗರ್‌ ಹಾಕಬೇಕು. ಆ ಮೇಲೆ ಅನ್ನವನ್ನು ಸೇರಿಸಿ ಸರಿಯಾಗಿ ಮಿಕ್ಸ್‌ ಮಾಡಿ ಈರುಳ್ಳಿ ಹೂವಿನ ಚೂರು ಹಾಕಿರಿ.ನಂತರ ಬೆಂಕಿಯನ್ನು ಆರಿಸಿ ಕಾಳು ಮೆಣಸಿನ ಪುಡಿ,ಕೊತ್ತಂಬರಿ ಸೊಪ್ಪು, ಸೇರಿಸಿ ಬಡಿಸಿ..ಸೋಯಾ ಸಾಸ್‌ನಲ್ಲಿ ಉಪ್ಪಿರುತ್ತದೆ ಸ್ವಲ್ಪ ರುಚಿ ನೋಡಿ ಬೇಕಿದ್ದರೆ ಉಪ್ಪು ಸೇರಿಸಿ .

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ