Udayavni Special

ಮನಸ್ಸುಗಳ ಹೊಂದಾಣಿಕೆಗೆ ಜನ್ಮ ಕುಂಡಲಿಗಳ ಜೋಡಣೆಯೇ ರಾಮಬಾಣ


Team Udayavani, Oct 22, 2016, 8:30 AM IST

365.jpg

ಜೀವನದಲ್ಲಿ ತಂದೆತಾಯಿಯರ ಪ್ರೀತಿ ಬೇರೆ. ಅಣ್ಣ-ತಮ್ಮಂದಿರ ಪ್ರೀತಿ ಬೇರೆ. ಗೆಳೆತನದ ಪ್ರೀತಿ ವಿಶ್ವಾಸ ಬೇರೆ. ಸತಿಪತಿಗಳ ವಿಚಾರದಲ್ಲಿನ ಪ್ರೀತಿಯೇ ಬೇರೆ. ಇಲ್ಲಿಂದಾಚೆಗೆ ಸಲ್ಲುವ ಪ್ರೀತಿಗಳೂ ಬೇರೆ. ಮದುವೆಗಿಂತ ಮುಂಚಿನ ಸಂಬಂಧ ಮದುವೆಯ ನಂತರದ ಸಂಬಂಧ ಜೀವನದಲ್ಲಿ ದಾರಿ ತಪ್ಪಿ ನಡೆಯುವ ಲೈಂಗಿಕ ವಿಚಾರ ಇತ್ಯಾದಿ ಎಲ್ಲವೂ ಬಗೆಬಗೆಯ ವಿಚಾರಗಳಿಂದಾಗಿ ವಿಚಿತ್ರವಾದ ಸಂಗತಿಗಳನ್ನು ಹೊರಚೆಲ್ಲುತ್ತವೆ.. ಕೆಲವರಿಗೆ ಸಲಿಂಗ ಪ್ರೇಮವೇ ಅನನ್ಯ, ಉಭಯ ರೀತಿಯ ಪ್ರೇಮ ವ್ಯವಹಾರಗಳಲ್ಲೂ ತೊಡಗಿಸಿಕೊಂಡವರಿದ್ದಾರೆ.

ಮದುವೆಗಳು ಭದ್ರವಾಗುವುದು ಅಪರೂಪ ಏಕೆ?

ಮದುವೆ ಎನ್ನುವುದು ಮಾನವನ ಜೀವನದಲ್ಲಿ ಉದಯವಾದ ವಿವಿಧ ನಾಗರೀಕತೆಗಳು ಬೆಳೆದಾದ ಮೇಲೆ ಹುಟ್ಟಕೊಂಡ ಒಂದು ಸಂಸ್ಕಾರ. ಒಂದು ಗಂಡು ಜೀವನದ ಸಂದರ್ಭದಲ್ಲಿ ಮಧುರವಾದೊಂದು ಜೀವನವನ್ನು ಪ್ರಾರಂಭೀಸಲು ಮಂಗಳ ಕಾರ್ಯದ ಚೌಕಟ್ಟಿನಲ್ಲಿ ಹೆಣ್ಣುಗಂಡುಗಳನ್ನು ಅಧಿಕೃತವಾಗಿ ಒಗ್ಗೂಡಿಸುವ ವಿಧಾನವಾಗಿದೆ. ಇಲ್ಲಿ ಪ್ರತಿ ಹೆಣ್ಣಿನ-ಗಂಡಿನ ನಕ್ಷತ್ರ ರಾಶಿಗಳ ಹೊಂದಾಣಿಕೆ ಹಾಗೂ ಹೆಣ್ಣು ಗಂಡುಗಳ ಜಾತಕ ಕುಂಡಲಿಯಲ್ಲಿನ ಕಳತ್ರ ಸ್ಥಾನಗಳ ಬಲಾಬಲಗಳ ಮೇಲಿಂದ ಮದುವೆ ಎಂಬ ಬಾಳಿನ ಮಧುರ ಪಲ್ಲವಿಯನ್ನು ಪ್ರಾರಂಭಿಸಬೇಕಾಗುತ್ತದೆ. ಶುಕ್ರ ಹಾಗೂ ಕುಜರು ತಂತಮ್ಮ ಶಕ್ತಿ ಹಾಗೂ ನಾಶಕರ ಶಕ್ತಿಯನ್ನು ಒಬ್ಬರ ಜಾತಕದಲ್ಲಿ ಸಕಾರಾತ್ಮಕವಾಗಿ ಮಿಡಿಸುವಂತಾದರೆ ಮದುವೆಯ ಬಂಧಕ್ಕೆ ಅನನ್ಯತೆಯ ಸಿದ್ಧಿ ದೊರೆಯುತ್ತದೆ. ಆದರೆ ಕಳತ್ರ ಸ್ಥಾನದ ಶಕ್ತಿ ಒದಗುವುದು ಕುಜ ಅಥವಾ ಶುಕ್ರರು ದೋಷಕರಾಗದೆ ಇರುವುದು. ನಕ್ಷತ್ರ ಹಾಗೂ ರಾಶಿಗಳು ಹೆಣ್ಣೂ ಗಂಡಿನ ಸಂಬಂಧವಾಗಿ ಯುಕ್ತವಾಗಿ ಕೂಡಿ ಬರುವುದು ಸುಲಭದ ಮಾತಲ್ಲ. ಕಷ್ಟದ ವಿಚಾರ.

ಹೆಣ್ಣು ಗಂಡಿನ ಆಯ್ಕೆ, ಹೊಂದಾಣಿಕೆಗಳು ಸ್ವರ್ಗ ಭಾಗ್ಯದ ಸಿದ್ಧಿಯೇ?
ಸಾಮಾನ್ಯವಾಗಿ ಹೆಣ್ಣು ಗಂಡಿನ ನಿಶ್ಚಿತಾರ್ಥ ಸ್ವರ್ಗದಲ್ಲಿ ನಿರ್ಣಯಿಸಲ್ಪಟ್ಟಿರುತ್ತದೆ ಎಂದು ರೂಢಿಯಲ್ಲಿ ಕೇಳಿ ಬರುವ ಮಾತಿದೆ. ನಮ್ಮ ಜೀವನದ ಸಂದರ್ಭದಲ್ಲಿ ಈ ಮಾತು ಹೌದು ಎಂಬುದನ್ನು ಯಾರೇ ಆಗಲಿ ಒಪ್ಪಿಕೊಳ್ಳಬೇಕು. ಸಿನಿಮಾ ಜೀವನದ ಆದರ್ಶವಾಗಬಾರದು. ಆದರೂ ಉದಾಹರಣೆಗೆ ಸಿನಿಮಾ ರಂಗದ ವಿಚಾರವನ್ನು ನಾವು ವಿಶ್ಲೇಷಿಸಲೇ ಬೇಕು. ಯಾರು ಯಾರನ್ನೋ ನಾವು ಮದುವೆಯಾಗುವ ವಿಚಾರ ನಾವು ಕೇಳುತ್ತಿರುತ್ತೇವೆ. ಆದರೆ ನಂಬಿದ ವಿಚಾರವೇ ಬೇರಾಗಿ ಒಬ್ಬರು ಇನ್ನೊಬ್ಬರಾರ್ಯರನ್ನೋ ವಿವರಿಸುತ್ತಾರೆ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ತಿಳಿದದ್ದು ಬೇರೆ ಕತೆ ಇರುತ್ತದೆ. ನಿಜವಾದ ಕತೆ ಹೊಸತಿರುವಿಗೆ ಶೀಘ್ರವಾಗಿ ಬದಲಾಗಿ ಹೋಗಿ ತಿಳಿದಿರದ ಎರಡು ಜೀವಗಳು ಸತಿಪತಿಗಳಾಗಿ ಸಪ್ತಪದಿ ಎಣಿಸುತ್ತಾರೆ. 

ಜೇನುಗಣ್ಣಿನ ಹುಡುಗಿ ಐಶ್ವರ್ಯ ರೈ ಅಭಿಷೇಕ್‌ ಬಚ್ಚನ್‌ ನನ್ನು ಮದುವೆಯಾಗಿದ್ದು:
ನಿಜ ಸ್ವರ್ಗದಲ್ಲಿ ನಿಜಕ್ಕೂ ಸತಿಪತಿಗಳಾಗಿ ಇರಬೇಕೆಂದು ನಿರ್ಧಾರವಾಗಿದ್ದು ಐಶ್ವರ್ಯ ಹಾಗೂ ಅಭೀಷೇಕ್‌ರ ಹೆಸರುಗಳಾಗಿದ್ದವು. ಇವರ ವಿಚಾರವನ್ನು ವಿವರವಾಗಿ ವಿಶ್ಲೇಷಿಸಲಾರೆ. ವೈಯುಕ್ತಿಕ ವಿಚಾರಗಳು ಇಲ್ಲಿ ಕಗ್ಗಂಟಾಗಿವೆ. ಅವೇನೇ ಇರಲಿ ಐಶ್ವರ್ಯ ಬಚ್ಚನ್‌ ಕುಟುಂಬದ ಸೊಸೆಯಾದಳು. ಕರ್ನಾಟಕದ ಐಶ್ವರ್ಯಾ ಯಾರು ಅಲಹಾಬಾದ್‌ ಮೂಲದ ಅಭಿಷೇಕ್‌ ಯಾರು? ಎತ್ತಣಿಂದೆತ್ತ ಸಂಬಂಧ ಎಂಬ ಅಲ್ಲಮನ ಮಾತು ಇಲ್ಲಿ ನೆನಪಾಗುತ್ತದೆ. ಯಾರು ಸೋನಿಯಾ? ಯಾರು ರಾಜೀವ್‌ ಗಾಂಧಿ? ಆದರೆ ಸತಿಪತಿಗಳಾದರು. ಸ್ವತಃ ಸೋದರಮಾವನ ಸೋದರತ್ತೆಯ ಮಕ್ಕಳು ಮದುವೆಯಾಗುತ್ತಾರೆ. ಇದೂ ಚೋದ್ಯವೇ. ಅಂತೂ ಸಲ್ಮಾನ್‌ಖಾನ್‌ ಇನ್ನೂ ಒಬ್ಬ ಅಧಿಕೃತ ಅನೇಕ ಹುಡುಗಿಯರು ಮದುವೆಯಾಗಲು ಕಾತುರದಲ್ಲಿರುವ ಬೇಡಿಕೆಯ ನಟ ಸು#ರದ್ರೂಪಿ. ನಮ್ಮ ರಾಹುಲ್‌ ಗಾಂಧಿಯೂ ಕೂಡಾ. ವಿಶ್ವವೇ ಕಾತುರದಲ್ಲಿದೆ. 54 ವಯಸ್ಸಾದಾಗ ಖ್ಯಾತಿ ಪಡೆದ ಅಂತಾರಾಷ್ಟ್ರೀಯ ಮಹತ್ವದ ಬರಹಗಾರ ಸಲ್ಮಾನ್‌ ರಶಿª ತನಗಿಂದ 22 ವರ್ಷ ಕಿರಿಯಳಾದ ಪದ್ಮಾಲಕ್ಷಿ$¾ಯನ್ನು ಮದುವೆಯಾದರು. ವಯೋವೃದ್ಧ ಎನ್‌ ಟಿ ರಾಮರಾವ್‌ ಲಕ್ಷಿ$¾à ಸರಸ್ವತಿಯೆಂಬ ಹೆಣ್ಣುಮಗಳನ್ನು ಆರಾಧಿಸಿದರು. ಇನ್ನಿಷ್ಟು ಹೆಸರುಗಳು ರಾಜ್ಯದ ಅನ್ಯರಾಜ್ಯದ ಹೆಚ್ಚಿನ ಪ್ರಮಾಣದಲ್ಲಿ ಹಾಲಿ ಚಾಲ್ತಿಯಲ್ಲಿನ ರಾಜಕಾರಣಿಗಳು ಕಟ್ಟಿಕೊಂಡವರನ್ನು ಬಿಟ್ಟು ಇನ್ನೆಲ್ಲಿಗೋ ದಾರಿ ಮಾಡಿಕೊಂಡ ಪ್ರಮುಖ ವ್ಯಕ್ತಿಗಳು ಇತ್ಯಾದಿ ಯಾದಿ ಮುಗಿಯುವುದೇ ಇಲ್ಲ. ಮೀನಾಕುಮಾರಿ, ನರ್ಗೀಸ್‌, ರೇಖಾ, ದೀಪಿಕಾ ಕರೀನಾ ಅಜರುದ್ದೀನ್‌, ಫ್ರಾನ್ಸಿನ ಅಧ್ಯಕ್ಷ ಸರ್ಕೋಜಿ, ಸೈಫ್ ಆಲಿ ಖಾನ್‌, ಇಟಲಿಯ ಹಾಲಿ ಅಧ್ಯಕ್ಷ, ಮಾಜಿ ಕ್ರಿಕೆಟ್‌ ಕಫ್ತಾನ ಸೌರವ್‌ ಗಂಗೂಲಿ- ಇವರೆಲ್ಲಾ ನೀಗಿಕೊಂಡ ಬಾಳಸಂಗಾತಿಗಳ ವಿಷಯದಲ್ಲಿನ ತಳಮಳ ಗಮನಾರ್ಹ.

ಭಾರತದಲ್ಲಿ ಬದಲಾಗಿರುವ ಕಾಲಧರ್ಮ
ಸಾವಿರ ಸುಳ್ಳು ಹೇಳಿ ಒಂದು ಲಗ್ನ ಮಾಡು ಎಂಬ ನಾಣ್ನುಡಿ ನಮ್ಮ ಸಮಾಜದಲ್ಲಿತ್ತು. ಇದಕ್ಕೆ ಕಾರಣ ವಾಸ್ತವವಾಗಿ ಜನರ ಕುಂಡಲಿಯನ್ನು ಹೊಂದಾಣಿಕೆ ಮಾಡಿ ನೂರಕ್ಕೆ ನೂರು ಹೆಣ್ಣು ಗಂಡಿಗಳು ಸತಿಪತಿಗಳಾಗುವಂತೆ ಜಾತಕ ಜೋಡಿಸುವುದೆಂದರೆ ನೂರರಲ್ಲಿ ಕೇವಲ 40 ರಿಂದ 45ಮಂದಿಗೆ ಮಾತ್ರ ಮದುವೆ ಯೋಗ. ಸಂಸಾರವನ್ನು ಶಾಂತಿಯುತವಾಗಿ ನಡೆಸಿಕೊಂಡು ಹೋಗುವ ಯೋಗ ಇರುತ್ತಿತ್ತು. ಉಳಿದಂತೆ ನೂರಕ್ಕೆ 55 ರಿಂದ 60 ಶೇಕಡಾ ಮಂದಿಗೆ ಹಿರಿಯರು ದಲ್ಲಾಳಿಗಳು ಇನ್ಯಾರೋ ಸಂಬಂಧಿಸಿದವರು ಸಾವಿರ ಸುಳ್ಳು ಹೇಳಿ ಮದುವೆ ಮಾಡಿಸುತ್ತಿದ್ದರು. ನಂತರ ಅವರ ಹಣೆಬರಹ. ನಾವಂತೂ ಮದುವೆ ಮಾಡಿದ್ದೇವೆ ಎಂದು ಹಿರಿಯರು ಕೈತೊಳೆದುಕೊಳ್ಳುವ ಸ್ಥಿತಿ ತುಂಬಾ ಇತ್ತು.  

ಇಂದು ಕಾಲ ಬದಲಾಗಿದೆ.  ಹೆಣ್ಣು ಗಂಡುಗಳು ಸತಿಪತಿಯರಾದ ಮೇಲೆ ಬಹಳಷ್ಟು ದಾಂಪತ್ಯಗಳು ವಿಚ್ಛೇದನಕ್ಕಾಗಿ ಬಯಸುವ ಸಂಖ್ಯೆ ಜಾಸ್ತಿ ಇದೆ. ಸಾಮಾನ್ಯವಾಗಿ ಜಾತಕ ಕುಂಡಲಿಯಲ್ಲಿ ಬಾಳ ಸಂಗಾತಿಯ ಮನೆಯ ಅಧಿಪತಿ ಅಂದರೆ ಜಾತಕದಲ್ಲಿನ ಏಳನೇ ಮನೆ ಅಧಿಪತಿಯು ಪ್ರತಿಯೊಬ್ಬನ ಜಾತಕದಲ್ಲೂ ಮಾರಕ ಶಕ್ತಿ ಪಡೆದಿರುತ್ತಾನೆ. ಈ ಮಾರಕ ಶಕ್ತಿಯ ಕೃತ ಸ್ವರೂಪಕ್ಕೆ ಸಂಬಂಧಿಸಿದ ಚಾಯೆ ಹೆಚ್ಚು ಬಲ ಪಡೆದಾಗ ದಾಂಪತ್ಯ ಕುಸಿಯುವ ಮಟ್ಟಕ್ಕೆ ಹೋಗುತ್ತದೆ.  ಹಿಂದಿನ ಸಮಾಜ ಹೆಣ್ಣನ್ನು ಅಬಲೆ ಎಂದು ಕರೆಯಿತು ಇಂದು ಅಬಲೆ ಎಂಬ ವಿಚಾರ ನಿಧಾನವಾಗಿ ತನ್ನ ಅರ್ಥವ್ಯಾಪ್ತಿಯನ್ನು ಮೀರಿ ಸ್ವತಂತ್ರವಾಗಿ ತನ್ನನ್ನು ತಾನೇ ರಕ್ಷಿ$ಸಿಕೊಳ್ಳುವ ವಿಚಾರಕ್ಕೆ ಕಾಲಿರಿಸಿದೆ. ಜಾತಕ ಕುಂಡಲಿಯಲ್ಲಿನ ಪ್ರೀತಿ ಪ್ರೇಮದ ಸತಿಪತಿಗಳ ಸಂಬಂಧದ ವಿಚಾರದ ಮಗ್ಗಲುಗಳು ಹೊಸದೊಂದು ಆಯಾಮವನ್ನು ಸೃಷ್ಟಿಸುವುದಕ್ಕೆ ಮುಂದಾಗಿದೆ ಎಂದು ಇದರರ್ಥವಲ್ಲ. ಜಾತಕ ತನ್ನ ಪಾಡಿಗೆ ಯುಕ್ತವಾದ ಹೊಂದಾಣಿಕೆ ಮಾಡಬಲ್ಲುದಾದರೂ ಬದಲಾಗುತ್ತಿರುವ ಸಂಸ್ಕೃತಿಯ ಚೌಕಟ್ಟು ಸಂಸ್ಕಾರದ ಉತ್ತಮ ಕುಟುಂಬದ ವ್ಯವಸ್ಥೆಯ ಬೇರುಗಳನ್ನು  ಕಿತ್ತೆಸೆದಿದೆ. ಜಾತಕ ಸೋತಿಲ್ಲ. ಮನುಷ್ಯ ಸೋತಿದ್ದಾನೆ. 

ಈಗಲೂ ಜಾತಕ ಕುಂಡಲಿಗಳ ಸಂಯೋಜನೆ ಬೇರೆ ಬೇರೆ ಅಂಶಗಳ ನೆಲೆಯಲ್ಲಿ ಸಂಭಸುವಂತಾದರೆ ಮುರಿದು ಬೀಳುತ್ತಿರುವ ಸಂಸಾರದ ಕುಟುಂಬ ವ್ಯವಸ್ಥೆಯನ್ನು ಸರಿಪಡಿಸಬಹುದು. ಸಾವಿರ ಸುಳ್ಳುಗಳನ್ನು ಹೇಳಿ ಮದುವೆ ಮಾಡಬೇಕಿಲ್ಲ. ಮನಸ್ಸುಗಳ ಹೊಂದಾಣಿಕೆ ಮಾಡಲು ಜನ್ಮ ಕುಂಡಲಿಗಳ ಜೋಡಣೆಯೇ ರಾಮಬಾಣ.

ಅನಂತ ಶಾಸ್ತ್ರೀ 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಶ್ವಕಪ್ ಸೋಲಿನ ನೋವಿನಿಂದ ಟೀಂ ಇಂಡಿಯಾ ಇನ್ನೂ ಹೊರಬಂದಿಲ್ಲ: ಭರತ್ ಅರುಣ್

ವಿಶ್ವಕಪ್ ಸೋಲಿನ ನೋವಿನಿಂದ ಟೀಂ ಇಂಡಿಯಾ ಇನ್ನೂ ಹೊರಬಂದಿಲ್ಲ: ಭರತ್ ಅರುಣ್

ಶಾಸಕರ ಫೇಸ್ ಬುಕ್ ಹ್ಯಾಕ್: ಖಾತೆಗೆ ಹಣ ಹಾಕುವಂತೆ ಮನವಿ ಮಾಡಿದ ಕಿಡಿಗೇಡಿಗಳು

ಶಾಸಕರ ಫೇಸ್ ಬುಕ್ ಹ್ಯಾಕ್: ಖಾತೆಗೆ ಹಣ ಹಾಕುವಂತೆ ಮನವಿ ಮಾಡಿದ ಕಿಡಿಗೇಡಿಗಳು

ದುಬೈನಲ್ಲಿ ಐಪಿಎಲ್? ನಾವು ರೆಡಿ ಎಂದ ಯುಎಇ ಕ್ರಿಕೆಟ್ ಬೋರ್ಡ್

ದುಬೈನಲ್ಲಿ ಐಪಿಎಲ್? ನಾವು ರೆಡಿ ಎಂದ ಯುಎಇ ಕ್ರಿಕೆಟ್ ಬೋರ್ಡ್

covid19-hot

ಕೋವಿಡ್ ಕ್ರೌರ್ಯ: ಸ್ಪೇನ್ ಹಿಂದಿಕ್ಕಿ 5ನೇ ಹಾಟ್ ಸ್ಪಾಟ್ ಆದ ಭಾರತ

ಯೋಗ ದಿನ: ಯಾವ ಸ್ಥಳದಲ್ಲಿ ನರೇಂದ್ರ ಮೋದಿ ಭಾಗಿ?

ಯೋಗ ದಿನ: ಯಾವ ಸ್ಥಳದಲ್ಲಿ ನರೇಂದ್ರ ಮೋದಿ ಭಾಗಿ?

ಉಗ್ರವಾದ ವಿಶ್ವಕ್ಕೆ ಹಂಚಿದ್ದೇ ಪಾಕಿಸ್ತಾನ

ಉಗ್ರವಾದ ವಿಶ್ವಕ್ಕೆ ಹಂಚಿದ್ದೇ ಪಾಕಿಸ್ತಾನ

ಶೈಕ್ಷಣಿಕ ವ್ಯವಸ್ಥೆಗೆ ಜಟಿಲ ಸಮಸ್ಯೆಯಾದ ಸೋಂಕಿನ ಭೀತಿ

ಶೈಕ್ಷಣಿಕ ವ್ಯವಸ್ಥೆಗೆ ಜಟಿಲ ಸಮಸ್ಯೆಯಾದ ಸೋಂಕಿನ ಭೀತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ವಾರ ಈ ಎರಡು ರಾಶಿಯ ಅವಿವಾಹಿತರಿಗೆ ಸಂಗಾತಿಯ ಆಯ್ಕೆಗೆ ಹಲವು ರೀತಿಯಲ್ಲಿ ಅವಕಾಶಗಳು ಒದಗಿಬರಲಿದೆ

ಈ ಎರಡು ರಾಶಿಯ ಅವಿವಾಹಿತರಿಗೆ ಸಂಗಾತಿಯ ಆಯ್ಕೆಗೆ ಹಲವು ರೀತಿಯಲ್ಲಿ ಅವಕಾಶಗಳು ಒದಗಿಬರಲಿದೆ

h

ವಾರ ಭವಿಷ್ಯ: ಈ ರಾಶಿಯ ಕಿಟಕಿ ಪ್ರೇಮಿಗಳಿಗೆ ಮದುವೆ ಅನಿವಾರ್ಯವಾಗಲಿದೆ

h

ವಾರ ಭವಿಷ್ಯ: ಈ ವಾರ ಈ ಎರಡು ರಾಶಿಯವರಿಗಿದೆ ಆರ್ಥಿಕ ಅದೃಷ್ಟ

h

ವಾರ ಭವಿಷ್ಯ: ಯಾರಿಗಿದೆ ಈ ವಾರ ಅದೃಷ್ಟ ಬಲ

horoscope

ವಾರ ಭವಿಷ್ಯ: ಈ ರಾಶಿಯವರಿಗೆ ಈ ವಾರ ಹಿತಶತ್ರುಗಳ ಭಾಧೆ ತಪ್ಪದು

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

07-June-01

ಬಸವೇಶ್ವರ ಆಸ್ಪತ್ರೆ ಆಯಾಗಳಿಗೆ ಆಹಾರ ಕಿಟ್‌ ವಿತರಣೆ

ಜೊಲ್ಲೆ ಸಂಸ್ಥೆ ಮರುನಾಮಕರಣ

ಜೊಲ್ಲೆ ಸಂಸ್ಥೆ ಮರುನಾಮಕರಣ

ಬಿತ್ತನೆ ಬೀಜಕ್ಕಾಗಿ ರೈತರಿಂದ ಪ್ರತಿಭಟನೆ-ಘೇರಾವ್‌

ಬಿತ್ತನೆ ಬೀಜಕ್ಕಾಗಿ ರೈತರಿಂದ ಪ್ರತಿಭಟನೆ-ಘೇರಾವ್‌

ವಿಶ್ವಕಪ್ ಸೋಲಿನ ನೋವಿನಿಂದ ಟೀಂ ಇಂಡಿಯಾ ಇನ್ನೂ ಹೊರಬಂದಿಲ್ಲ: ಭರತ್ ಅರುಣ್

ವಿಶ್ವಕಪ್ ಸೋಲಿನ ನೋವಿನಿಂದ ಟೀಂ ಇಂಡಿಯಾ ಇನ್ನೂ ಹೊರಬಂದಿಲ್ಲ: ಭರತ್ ಅರುಣ್

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.