• ಪೌರತ್ವ ಮಸೂದೆ ಸೌಹಾರ್ದತೆ ಕದಡದಿರಲಿ

  ಮಸೂದೆ ಒಂದು ಧರ್ಮವನ್ನು ಗುರಿಯಾಗಿರಿಸಿಕೊಂಡಿದ್ದು, ಇದು ಸಂವಿಧಾನದಲ್ಲಿ ಉಲ್ಲೇಖೀಸಿರುವ ಜಾತ್ಯತೀತ ಆಶಯಕ್ಕೆ ವಿರುದ್ಧವಾಗಿದೆ. ಮಸೂದೆ ಸಂವಿಧಾನದ 14ನೇ ವಿಧಿಯಲ್ಲಿ ಉಲ್ಲೇಖೀಸಲಾದ ಸಮಾನತೆ ಹಕ್ಕನ್ನು ಉಲ್ಲಂ ಸುತ್ತದೆ ಎಂಬುದು ಪ್ರತಿಪಕ್ಷಗಳ ಟೀಕೆಯಾಗಿದೆ. ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸುಮಾರು 7…

 • ಎಲುಬಿಲ್ಲದ ನಾಲಗೆಯ ಚಾಳಿ

  ಮಹಿಳೆಯರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುವ ರಾಜಕಾರಣಿಗಳಲ್ಲಿ ಸೂಕ್ಷ್ಮತೆಯ ಪ್ರಜ್ಞೆಯೊಂದನ್ನು ಜನಾಭಿಪ್ರಾಯದ ಮೂಲಕ ಮೂಡಿಸುವ ಉದ್ದೇಶದಿಂದ ಪತ್ರಿಕೆ ಈ ಅಭಿಯಾನವನ್ನು ಹಮ್ಮಿಕೊಂಡಿದೆ. ಇದಕ್ಕೆ ಓದುಗರು ಬಹು ಸಂಖ್ಯೆಯಲ್ಲಿ ಪ್ರತಿಸ್ಪಂದಿಸಿದ್ದು, ಆಯ್ದವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಇನ್ನುಳಿದವುಗಳನ್ನು ನಾಳೆ ಪ್ರಕಟಿಸಲಾಗುವುದು. ಜನನಾಯಕನ…

 • ಸರಕಾರ ಸುಭದ್ರವಾಯಿತು, ಸುಸ್ಥಿರ ಆಡಳಿತ ನೀಡಿ

  ನಡೆದದ್ದು ಉಪ ಚುನಾವಣೆಯಾಗಿದ್ದರೂ ಇದಕ್ಕೆ ರಾಷ್ಟ್ರ ಮಟ್ಟದ ಮಹತ್ವವಿತ್ತು. ಯಾವುದೇ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಕಡಿಮೆಯಿಲ್ಲದಂತೆ ತುರುಸಿನಿಂದ ನಡೆದಿತ್ತು ಈ ಚುನಾವಣೆ. ಈ ಚುನಾವಣೆಯ ಫ‌ಲಿತಾಂಶದ ಮೇಲೆ ರಾಜ್ಯದ ರಾಜಕೀಯ ಭವಿಷ್ಯ ನಿಂತಿತ್ತು. ಹೀಗಾಗಿ ಈ ಚುನಾವಣೆಗೆ…

 • ತೆರಿಗೆ ಏರಿಕೆ ಸರಿಯಲ್ಲ ಜಿಎಸ್‌ಟಿ ಹೊರೆಯಾಗುವುದು ಬೇಡ

  ಒಂದು ದೇಶ, ಒಂದು ಮಾರುಕಟ್ಟೆ ಮತ್ತು ಒಂದು ತೆರಿಗೆ ಎಂಬ ಧ್ಯೇಯದೊಂದಿಗೆ ಎರಡೂವರೆ ವರ್ಷದ ಹಿಂದೆ ಜಾರಿಗೆ ತರಲಾಗಿದ್ದ, ದೇಶದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದು ವ್ಯಾಖ್ಯಾನಿಸಲ್ಪಟ್ಟ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ…

 • ಹೈದರಾಬಾದ್‌ ಪ್ರಕರಣ ಸುಧಾರಿಸಲಿ ವ್ಯವಸ್ಥೆ

  ಈ ಎನ್‌ಕೌಂಟರ್‌ ಸ್ಪಷ್ಟ ಸಂದೇಶ ಕಳುಹಿಸಿದೆ ಎನ್ನಬಹುದು. ಹಾಗೆಂದು, ಪೊಲೀಸರು ಪ್ರಶ್ನಾತೀತರೇನೂ ಅಲ್ಲ. ಪ್ರಕರಣದ ಆರಂಭಿಕ ಸಮಯದಲ್ಲಿ ಎಫ್ಐಆರ್‌ ದಾಖಲಿಸಿಕೊಳ್ಳದೇ ಸಂತ್ರಸ್ತೆಯ ಕುಟುಂಬದವರನ್ನು ಅಲೆದಾಡಿಸಿದ್ದೆಲ್ಲ ಸರಿಯೇನು? ದೇಶವನ್ನೇ ಬೆಚ್ಚಿಬೀಳಿಸಿದ್ದ ಹೈದರಾಬಾದ್‌ ಅತ್ಯಾಚಾರ- ಹತ್ಯೆ ಪ್ರಕರಣದ ಆರೋಪಿಗಳೆಲ್ಲ ಎನ್‌ಕೌಂಟರ್‌ನಲ್ಲಿ ಅಂತ್ಯಕಂಡಿದ್ದಾರೆ….

 • ಸರ್ಕಾರ ಭವಿಷ್ಯದ ಮತದಾನ

  ಉಪ ಚುನಾವಣೆ ನಡೆದ 15 ಕ್ಷೇತ್ರಗಳಲ್ಲಿ ಉತ್ತಮ ಮತದಾನ ನಡೆದಿದೆ. ಮತದಾನ ಎಂಬುದು ರಾಜ್ಯ, ರಾಷ್ಟ್ರ ಕಟ್ಟುವ ಪ್ರಕ್ರಿಯೆ. ಇದರಲ್ಲಿ ನಮ್ಮ ಜನತೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಸಮಾಧಾನಕರ ರೀತಿಯಲ್ಲಿ ಪಾಲ್ಗೊಂಡಿದ್ದು ನಮ್ಮಲ್ಲಿ ಇನ್ನೂ ಪ್ರಜಾಪ್ರಭುತ್ವ ಗಟ್ಟಿ ಇದೆ…

 • ವಾಹ್‌ ಕ್ಯಾಪ್ಟನ್‌! ವಿರಾಟ್‌ ಕೊಹ್ಲಿ ಯಶಸ್ಸಿನ ಹಿಂದೆ ಅಪಾರ ಪರಿಶ್ರಮ

  ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ವಿಶ್ವದ ನಂಬರ್‌ 1 ಬ್ಯಾಟ್ಸ್‌ಮನ್‌ ಎಂಬ ಗರಿಮೆಗೆ ಮತ್ತೂಮ್ಮೆ ಪಾತ್ರರಾಗಿದ್ದಾರೆ. ಮೊದಲನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಪಾಕಿಸ್ತಾನದ ವಿರುದ್ಧದ ನಡೆದ ಟೆಸ್ಟ್‌ನಲ್ಲಿ ಹೆಚ್ಚು ಅವಕಾಶ…

 • ನಾಯಕತ್ವಕ್ಕೆ ಸವಾಲಾದ ಉಪಚುನಾವಣೆ

  ರಾಜ್ಯದಲ್ಲಿ ನಡೆಯುತ್ತಿರುವ ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ಮತದಾನಕ್ಕೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಈ ಉಪ ಚುನಾವಣೆ ರಾಜ್ಯ ರಾಜಕಾರಣದ ದೃಷ್ಟಿಯಿಂದ ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ದೇಶದ ಕಾನೂನುಗಳ…

 • ಆರ್ಥಿಕತೆಯ ಚೇತರಿಕೆಗೆ ತುರ್ತು ಕ್ರಮ ಅಗತ್ಯ

  ಬರೀ ತೇಪೆ ಹಾಕುವ ಕೆಲಸಗಳಿಂದ ಆರ್ಥಿಕತೆಯನ್ನು ಮೇಲೆತ್ತಲು ಸಾಧ್ಯವಾಗದು ಎನ್ನುವುದನ್ನು ಸರಕಾರ ನಡೆಸುವವರು ಅರ್ಥ ಮಾಡಿಕೊಳ್ಳಬೇಕು. ಸೆಪ್ಟೆಂಬರ್‌ಗೆ ಮುಕ್ತಾಯವಾದ ತ್ತೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ. 4.5ಕ್ಕೆ ಕುಸಿದಿರುವುದು ಕಳವಳಕಾರಿಯಾಗಿದ್ದರೂ ತೀರಾ ಅನಿರೀಕ್ಷಿತವೇನಲ್ಲ. ಆರ್ಥಿಕ ಹಿಂಜರಿತ…

 • ತೆಲಂಗಾಣ ಅತ್ಯಾಚಾರ ಪ್ರಕರಣ : ಸಮಾಜದ ಘನತೆಗೆ ಕಪ್ಪುಚುಕ್ಕೆ

  ತೆಲಂಗಾಣದಲ್ಲಿ ಪ್ರಿಯಾಂಕ ಎಂಬ ಪಶುವೈದ್ಯೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಸುಟ್ಟು ಕೊಂದಿರುವ ಪೈಶಾಚಿಕ ಘಟನೆ ಮತ್ತೂಮ್ಮೆ ದೇಶದ ಮನಸ್ಸಾಕ್ಷಿಯನ್ನು ಕಲಕಿದೆ. ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ರಾಕ್ಷಸರನ್ನು ಗಲ್ಲಿಗೇರಿಸಿ, ಎನ್‌ಕೌಂಟರ್‌ ಮಾಡಿ ಎಂಬಿತ್ಯಾದಿ ಆಕ್ರೋಶದ‌…

 • “ಪ್ರಜ್ಞಾ’ವಂತಿಕೆಯಿಂದ ಕೂಡಿರಲಿ ಮಾತು

  ವಿವಾದಾತ್ಮಕ ಹೇಳಿಕೆ ನೀಡಿದ ಪ್ರಜ್ಞಾಗೆ ರಕ್ಷಣಾ ಸಮಿತಿಯಿಂದ ಕೊಕ್‌ ಕೊಟ್ಟದ್ದು ಬರೀ ಲಘು ಶಿಕ್ಷೆಯಾಯಿತು. ಇದು ಪುನರಾವರ್ತನೆಯಾಗುವುದನ್ನು ತಡೆಯಲು ಕಠಿನ ನಿರ್ಧಾರ ಕೈಗೊಳ್ಳುವುದು ಅಗತ್ಯ. ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ಮತ್ತೂಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ….

 • ಆಡಳಿತ ಸುಗಮವಾಗಿ ಸಾಗಲಿ

  ಸಮ್ಮಿಶ್ರ ಸರಕಾರವನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಅದರಲ್ಲೂ ತತ್ವ-ಸಿದ್ಧಾಂತಗಳು ಬೇರೆಯಾಗಿರುವ ಪಕ್ಷಗಳನ್ನೊಳಗೊಂಡಿರುವ ಸರಕಾರವನ್ನು ಮುನ್ನಡೆಸುವುದು ಹಗ್ಗದ ಮೇಲಿನ ನಡಿಗೆ ಎನ್ನುವುದಕ್ಕೆ ಕರ್ನಾಟಕದ್ದೇ ಇತ್ತೀಚೆಗಿನ ಉದಾಹರಣೆಯಿದೆ. ಮಹಾರಾಷ್ಟ್ರದಲ್ಲಿ ಬಹುಮತದ ಸರಕಾರವೊಂದು ರಚನೆಯಾಗಿ ಚುನಾವಣೆ ಮುಗಿದ 35 ದಿನಗಳ ನೆಲೆಸಿದ್ದ…

 • ಬೆಲೆ ಏರಿಕೆಯ ಕಾವು, ಆಯಾಮ ಹಲವು

  ಇತ್ತ ರಾಜ್ಯವು ಉಪಚುನಾವಣೆಗಳಿಗೆ ಸಜ್ಜಾಗುತ್ತಿರುವ ಹೊತ್ತಲ್ಲಿ, ಅತ್ತ ಮಹಾರಾಷ್ಟ್ರವು ಸರ್ಕಾರ ರಚನೆಯ ಗದ್ದಲದಲ್ಲಿ ಮುಳುಗಿರುವಾಗಲೇ ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೆ ಏರಿದೆ. ಈರುಳ್ಳಿ ಬೆಲೆಗೂ ಈ ರಾಜ್ಯಗಳಿಗೂ ಅವಿನಾಭಾವ ಸಂಬಂಧ. ಏಕೆಂದರೆ ದೇಶದ 45 ಪ್ರತಿಶತ ಈರುಳ್ಳಿ ಉತ್ಪಾದನೆಯಾಗುವುದು…

 • ಹಳಿಯೇರಲಿ ಆಡಳಿತ ಮತ್ತೆ ಮಹಾ ಬದಲಾವಣೆ

  ಮಹಾರಾಷ್ಟ್ರದ ರಾಜಕೀಯ ಇನ್ನೊಂದು ಅನೂಹ್ಯವಾದ ತಿರುವು ತೆಗೆದುಕೊಂಡಿದೆ. ಸುಪ್ರೀಂ ಕೋರ್ಟ್‌ ಬುಧವಾರವೇ ಬಹುಮತ ಸಾಬೀತುಪಡಿಸಲು ಆದೇಶಿಸಿದ ಬಳಿಕ ಮೂರು ದಿನಗಳ ಹಿಂದೆಯಷ್ಟೇ ರಾತೋರಾತ್ರಿ ನಡೆದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ದೇವೇಂದ್ರ ಫ‌ಡ್ನವೀಸ್‌ ಮತ್ತು ಅಜಿತ್‌…

 • ಆಶಯಗಳಿಗೆ ಧಕ್ಕೆ ಬಾರದಿರಲಿ ಸಂವಿಧಾನ ಧರ್ಮವಾಗಲಿ

  ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಮತ್ತು ದೊಡ್ಡ ಸಂವಿಧಾನವೆಂದೇ ಕರೆಸಿಕೊಂಡಿರುವ ಭಾರತದ ಸಂವಿಧಾನವನ್ನು 1949ರ ನವೆಂಬರ್‌ 26 ರಂದು ಒಪ್ಪಿಕೊಳ್ಳಲಾಯಿತು. ಪ್ರಪಂಚದ ಯಾವುದೇ ದೇಶದ ಸಂವಿಧಾನವನ್ನು ಗಮನಿಸಿದರೂ, ಇಷ್ಟು ವೈವಿಧ್ಯಮಯ, ವಿವೇಕಯುತ ಸಂವಿಧಾನ ಕಂಡುಬರುವುದಿಲ್ಲ. ದೇಶದ ಪ್ರತಿಯೊಬ್ಬನಿಗೂ ಮೂಲಭೂತ…

 • ಮಹಾರಾಷ್ಟ್ರದ ರಾಜಕೀಯ ಸಿದ್ಧಾಂತಗಳಿಗೆ ತಿಲಾಂಜಲಿ

  ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ ಶಾಶ್ವತ ಶತ್ರುಗಳೂ ಇಲ್ಲ ಎನ್ನುವುದು ಹಳೇ ಮಾತು. ಆದರೆ ಈ ಮಾತು ಪದೇ ಪದೆ ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದೀಗ ಮಹಾರಾಷ್ಟ್ರದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳು ಸಹ ಬದಲಾಗುತ್ತಿರುವ…

 • ಟೆಸ್ಟ್‌ ಕ್ರಿಕೆಟ್‌ನ ಮೇಲೆ ನಡೆಯುತ್ತಿರುವ ಪ್ರಯೋಗ ಎಲ್ಲಿಗೆ ಮುಟ್ಟಬಹುದು?

  ಟೆಸ್ಟ್‌ ಕ್ರಿಕೆಟ್‌ ಅವಸಾನದ ಅಂಚಿನಲ್ಲಿರುವುದು ಕಟುಸತ್ಯ. ಅದನ್ನು ಉಳಿಸಿಕೊಳ್ಳಬೇಕೆಂಬ ಅನಿವಾರ್ಯತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಗಿದೆ (ಐಸಿಸಿ). ಹಳೆ ತಲೆಮಾರಿನ ಎಲ್ಲ ಕ್ರಿಕೆಟಿಗರೂ ಟೆಸ್ಟನ್ನು ಪ್ರೀತಿಸುತ್ತಾರೆ. ಹೊಸ ತಲೆಮಾರಿಗೆ ಟಿ20 ಮೇಲೆ ಪ್ರೀತಿ ಜಾಸ್ತಿ. ಇವೆರಡನ್ನೂ ಸಮತೋಲನ ಮಾಡಲು ಐಸಿಸಿ…

 • ಎನ್‌ಆರ್‌ಸಿ ಜಟಿಲ ಪ್ರಕ್ರಿಯೆ

  ದೇಶವ್ಯಾಪಿಯಾಗಿ ರಾಷ್ಟ್ರೀಯ ನಾಗರಿಕತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಜಾರಿಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ. ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ವಿದೇಶಿಯರನ್ನು ಗುರುತಿಸಿ ಹೊರದಬ್ಬುವುದು ಎನ್‌ಆರ್‌ಸಿ ಮುಖ್ಯ ಉದ್ದೇಶ. ಅಕ್ರಮವಾಗಿ ವಾಸವಾಗಿರುವ ವಿದೇಶಿ ಪ್ರಜೆಗಳು ಎಂದರೆ ಬಹುತೇಕ…

 • ಗೋಟಬಯಾ ಅಧ್ಯಕ್ಷ, ಮಹಿಂದಾ ಪ್ರಧಾನಿ ನಾಜೂಕಿನ ನಡೆ ಅಗತ್ಯ

  ನಿರೀಕ್ಷೆಯಂತೆಯೇ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಸೆ ಕುಟುಂಬದ ಸದಸ್ಯ, ಗೋಟಬಯಾ ರಾಜಪಕ್ಸೆ ಜಯಭೇರಿ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ, ಈಗ ತಮ್ಮ ಸಹೋ ದರ ಮಹಿಂದ ರಾಜ ಪಕ್ಸೆಯನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಿ ದ್ದಾರೆ. ಮತ್ತೆ ಶ್ರೀಲಂಕಾ ಮೇಲಿನ ಹಿಡಿತ ರಾಜ ಪಕ್ಸೆ ಕುಟುಂಬಕ್ಕೆ ದಕ್ಕಿದೆ….

 • ಶಾಸಕರ ಮೇಲೆ ಹಲ್ಲೆ ಕಠಿನ ಕ್ರಮ ಅಗತ್ಯ

  ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದಾಗ ವ್ಯಕ್ತಿಯೊಬ್ಬನಿಂದ ಮಾರಣಾಂತಿಕ ಹಲ್ಲೆಗೆ ಒಳಗಾದ ಮಾಜಿ ಸಚಿವ ಹಾಗೂ ಶಾಸಕ ತನ್ವೀರ್‌ ಸೇಠ್ ಪ್ರಕರಣವನ್ನು ಕೇವಲ ಒಂದು “ಕೊಲೆ ಯತ್ನ’ ಪ್ರಕರಣ ಎಂಬಂತೆ ನೋಡಲು ಸಾಧ್ಯವಿಲ್ಲ. ಲಕ್ಷಾಂತರ ಜನರನ್ನು ಪ್ರತಿನಿಧಿಸುವ ಒಬ್ಬ ಶಾಸಕನಿಗೆ ಗನ್‌ಮ್ಯಾನ್‌…

ಹೊಸ ಸೇರ್ಪಡೆ