• ಕಾಸರಗೋಡು: ಮತ್ತೆ 17 ಕೋವಿಡ್ 19 ಪ್ರಕರಣ ದೃಢ

  ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಮತ್ತೆ 17 ಕೋವಿಡ್ 19 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಕೇರಳ ರಾಜ್ಯದಲ್ಲಿ ಒಟ್ಟು 32 ಮಂದಿಗೆ ಕೋವಿಡ್ 19 ವೈರಸ್‌ ಸೋಂಕು ದೃಢೀಕರಿಸಲಾಗಿದೆ. ರಾಜ್ಯದಲ್ಲಿ ಒಟ್ಟು ಕೋವಿಡ್ 19 ವೈರಸ್‌ ಸೋಂಕಿತರ…

 • ಕಾಸರಗೋಡು ಜಿಲ್ಲೆಯ ವಿವಿಧೆಡೆ ಕೋವಿಡ್‌ 19 ಚಿಕಿತ್ಸಾ ಕೇಂದ್ರಗಳು

  ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್‌ 19 ಚಿಕಿತ್ಸಾ ಸೌಲಭ್ಯ ಸಿದ್ಧಪಡಿಸುವ, ರೋಗಿಗಳನ್ನು ಮತ್ತು ನಿಗಾದಲ್ಲಿರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಟ್ಟದಲ್ಲಿ ಸಜ್ಜುಗೊಳಿಸಲಾದ ಕೋವಿಡ್‌ ಕೇರ್‌ ಸೆಂಟರ್‌ಗಳು ಇಂತಿವೆ. ಕಾಂಞಂಗಾಡ್‌ ಜಿಲ್ಲಾ ಆಸ್ಪತ್ರೆ, ಕಾಸರಗೋಡು ಜನರಲ್‌ ಆಸ್ಪತ್ರೆ, ಪನತ್ತಡಿ ತಾಲೂಕು ಸರಕಾರಿ…

 • ಲಾಕ್‌ಡೌನ್‌: ವೀಡಿಯೋ ಕಾಲ್‌ ಮೂಲಕ ನಡೆಯಿತು ವೈಕುಂಠ ಸಮಾರಾಧನೆ!

  ಕಾಸರಗೋಡು: ಕೋವಿಡ್ 19 ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಲ್ಲಿರುವ ಕಾರಣ ವ್ಯಕ್ತಿಯೊಬ್ಬರ ವೈಕುಂಠ ಸಮಾರಾಧನೆಯನ್ನು ವೀಡಿಯೋ ಕಾಲ್‌ ಮೂಲಕ ಮಾಡಿರುವ ಘಟನೆ ನಡೆದಿದೆ. ನೆಟ್ಟಣಿಗೆಯ ಕೈಪಂಗಳದ ಉದಯ ಶಂಕರ ಭಟ್‌ (64) ಅವರ ವೈಕುಂಠ ಸಮಾರಾಧನೆ…

 • ಕಾಸರಗೋಡಿನಲ್ಲಿ ಮತ್ತೆ ಒಬ್ಬರಿಗೆ ಸೋಂಕು

  ಕಾಸರಗೋಡು: ಜಿಲ್ಲೆಯಲ್ಲಿ ಒಬ್ಬರ ಸಹಿತ ರಾಜ್ಯದಲ್ಲಿ ಒಟ್ಟು ಆರು ಮಂದಿಗೆ ಶನಿವಾರ ಕೋವಿಡ್ 19ಸೋಂಕು ದೃಢವಾಗಿದೆ. ತಿರುವನಂತಪುರ ಜಿಲ್ಲೆಯಲ್ಲಿ-2, ಕೊಲ್ಲಂ, ಪಾಲಾ^ಟ್‌, ಮಲಪ್ಪುರಂ, ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಒಬ್ಬರನ್ನು ಸೋಂಕು ಬಾಧಿಸಿದೆ. ಒಟ್ಟು ರಾಜ್ಯದಲ್ಲಿ ಸೋಂಕು ಬಾಧಿತ 165…

 • ಕೇರಳದಲ್ಲಿ 39 ಹೊಸ ಸೋಂಕಿತರು ; ಕಾಸರಗೋಡು ಜಿಲ್ಲೆಯೊಂದರಲ್ಲೇ 34 ಹೊಸ ಪ್ರಕರಣ

  ತಿರುವನಂತಪುರಂ: ರಾಷ್ಟ್ರದಲ್ಲಿಯೇ ಅತೀ ಹೆಚ್ಚಿನ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ರಾಜ್ಯಗಳಲ್ಲಿ ಒಂದಾಗಿರುವ ಕೇರಳದಲ್ಲಿ ಇಂದು ಒಂದೇ ದಿನದಲ್ಲಿ 39 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ 39 ಹೊಸ ಪ್ರಕರಣಗಳಲ್ಲಿ 34 ಪ್ರಕರಣಗಳು ಕಾಸರಗೋಡು ಜಿಲ್ಲೆಯೊಂದರಲ್ಲೇ…

 • ಕೋವಿಡ್‌ 19 ವೈರಸ್‌: ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸ್‌ ಸರ್ಪಗಾವಲು

  ಕಾಸರಗೋಡು: ದೇಶಾದ್ಯಂತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ನಗರ, ಪೇಟೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್‌ ಸರ್ಪಗಾವಲು ಏರ್ಪಡಿಸಲಾಗಿದೆ. ವಿನಾಕಾರಣ ಬೀದಿಗೆ ಬರುವವರಿಗೆ ಲಾಠಿಯ ರುಚಿ ತೋರಿಸ ಲಾಗುತ್ತಿದೆ. ನಗರದ ಹೊಸಬಸ್‌ ನಿಲ್ದಾಣ, ಕರಂದಕ್ಕಾಡ್‌ ಮೊದಲಾದೆಡೆ ಬ್ಯಾರಿಕೇಡ್‌ ಅಳವಡಿಸಿ…

 • ಕಾಸರಗೋಡು ಜಿಲ್ಲೆ; ಮತ್ತೆ ಮೂವರಲ್ಲಿ ಸೋಂಕು

  ಕಾಸರಗೋಡು: ಜಿಲ್ಲೆಯಲ್ಲಿ ಮೂರು ಮಂದಿಯ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ 19 ಮಂದಿಗೆ ಕೋವಿಡ್‌ 19 ಬಾಧೆ ದೃಢವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಕೋವಿಡ್‌ 19 ಬಾಧಿತರ…

 • ಮನೆಯಲ್ಲೇ ಇರಲು ಸಾರ್ವಜನಿಕರಲ್ಲಿ ಅಧಿಕಾರಿಗಳ ಮನವಿ

  ಮಡಿಕೇರಿ: ಮಾರಕ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ಕೊಡಗನ್ನು ಲಾಕ್‌ ಡೌನ್‌ ಮಾಡಿ, ಹಲವು ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ವ್ಯಾಪ್ತಿಯ ಬಹುತೇಕ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಹನ ಹಾಗೂ ಜನ…

 • ಸಮರೋಪಾದಿ ಕಾರ್ಯಾಚರಣೆಗಿಳಿದ ಜಿಲ್ಲಾಡಳಿತ

  ಮಂಜೇಶ್ವರ: ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ವೈರಸ್‌ ರೋಗಬಾಧಿತರ ಸಂಖ್ಯೆ ದಿನೇ ದಿನೇ ದುಪ್ಪಟ್ಟಾಗುವುದರೊಂದಿಗೆ ಎಲ್ಲ ಇಲಾಖೆಗಳು ಹೈ ಅಲರ್ಟ್‌ ಆಗಿ ಕಾರ್ಯ ನಿರ್ವಹಿಸತೊಡಗಿವೆ. ಮಂಗಳ ವಾರದಂದು ಜಿಲ್ಲೆಯಲ್ಲಿ ಲಾಕ್‌ ಡೌನ್‌ ಬಿಗಿಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್‌ ತಂಡವನ್ನು ಆಯೋಜಿಸ ಲಾಗಿದೆ….

 • ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 19 ಮಂದಿಗೆ ಸೋಂಕು ದೃಢ

  ಕಾಸರಗೋಡು: ಮಾರಣಾಂತಿಕ ಕೋವಿಡ್-19 ವೈರಸ್‌ ಸೋಂಕು ದೇಶಾದ್ಯಂತ ವೇಗದಲ್ಲಿ ಹರಡುತ್ತಿರುವಂತೆ ಕೇರಳದಲ್ಲಿ ಮಾ. 31ರ ವರೆಗೆ ಲಾಕ್‌ಡೌನ್‌ ಘೋಷಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 19 ಮಂದಿಯಲ್ಲಿ ಕೋವಿಡ್-19 ದೃಢವಾಗಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಬಾಧಿತರ ಒಟ್ಟು ಸಂಖ್ಯೆ…

 • ಕೋವಿಡ್-19 ನಿಯಂತ್ರಣ: ಜಿಲ್ಲೆಗೆ ಹೆಚ್ಚುವರಿ ಪೊಲೀಸ್‌

  ಕಾಸರಗೋಡು: ಮಾರಣಾಂತಿಕ ಕೋವಿಡ್-19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಪೊಲೀಸ್‌ ಇಲಾಖೆ ಮುಂದಾಗಿದ್ದು, ಇದರಂತೆ ಕಾಸರಗೋಡು ಜಿಲ್ಲೆಗೆ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗುವುದು. ಸರಕಾರದ ಆದೇಶಗಳನ್ನು ಮತ್ತು ನಿಯಂತ್ರಣಗಳನ್ನು ಪಾಲಿಸಲು ಹೆಚ್ಚುವರಿ ಪೊಲೀಸರ…

 • ಲಾಕ್‌ಡೌನ್‌ ಉಲ್ಲಂಘಿಸಿದರೆ ಕಠಿನ ಕ್ರಮ: ಎಸ್‌ಪಿ ಎಚ್ಚರಿಕೆ

  ಮಡಿಕೇರಿ: ಸರಕಾರದ ಆದೇಶದಂತೆ ಕೊಡಗು ಜಿಲ್ಲೆ ಕೂಡ ಮಾ.31ರ ವರೆಗೆ ಲಾಕ್‌ಡೌನ್‌ ಆಗಲಿದ್ದು ನಿಯಮ ಉಲ್ಲಂಘಿಸುವವರ ವಿರುದ್ದ ಪೊಲೀಸ್‌ ಇಲಾಖೆ ಕಠಿನ ಕ್ರಮ ಕೈಗೊಳ್ಳಲಿದೆ ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸುಮನ್‌ ಡಿ. ಪನ್ನೇಕರ್‌ ಎಚ್ಚರಿಕೆ…

 • ಕಾಸರಗೋಡು ಜಿಲ್ಲೆ : ರವಿವಾರ ಒಂದೇ ದಿನ 5 ಪಾಸಿಟಿವ್‌ ಪತ್ತೆ

  ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ ಮತ್ತೆ ಐವರಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 19 ಆಗಿದೆ. ಕೇರಳ ರಾಜ್ಯದಲ್ಲಿ ರವಿವಾರ 15 ಪ್ರಕರಣ ದೃಢವಾಗಿದ್ದು, ರಾಜ್ಯದಲ್ಲಿ ಈ ವರೆಗೆ ಒಟ್ಟು 67…

 • ಮಡಿಕೇರಿ: ಮಾ. 31ರ ವರೆಗೆ ಹಲವು ನಿರ್ಬಂಧ

  ಮಡಿಕೇರಿ: ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತ ವ್ಯಕ್ತಿಯೋರ್ವ ಪತ್ತೆಯಾದ ಕಾರಣ ಮಾ. 31ರ ವರೆಗೆ ಹೆಚ್ಚಿನ ನಿಗಾ ವಹಿಸಲು ಸರಕಾರ ಆದೇಶಿಸಿರುವ ಹಿನ್ನೆಲೆ ಜಿಲ್ಲಾಡಳಿತ ಕೆಲವು ನಿರ್ಬಂಧಗಳನ್ನು ಹೇರಿದ್ದು, ಜನರು ಸ್ವಯಂ ಪ್ರೇರಿತರಾಗಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ…

 • ಸಿರಿಬಾಗಿಲು ಪ್ರತಿಷ್ಠಾನದಿಂದ ಕೋವಿಡ್‌ 19 ಯಕ್ಷ ಜಾಗೃತಿ ಯಕ್ಷಗಾನ ಬಿಡುಗಡೆ

  ವಿದ್ಯಾನಗರ: ಜಗತ್ತಿಗೆ ಸವಾಲಾ ಗಿರುವ ಕೋವಿಡ್‌ 19 ಬಗ್ಗೆ ಜಾಗೃತಿ ಮೂಡಿಸುವ ಕೆಲಸವು ವಿವಿಧ ರೀತಿಯಲ್ಲಿ ನಡೆಯುತ್ತಿದ್ದು ಕಲೆಯ ಮೂಲಕ ಜಾಗೃತಿ ಮೂಡಿಸುವ ಮಹತ್ಕಾರ್ಯದ ಮೂಲಕ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಶ್ಲಾಘನೀಯ….

 • ಸಾಂಕ್ರಾಮಿಕ ರೋಗ ಭೀತಿಯಲ್ಲಿ ಸೀತಾಂಗೋಳಿ

  ವಿದ್ಯಾನಗರ: ನೀರು ಹರಿಯುವ ಚರಂಡಿಯ ತುಂಬ ಕಸಕಡ್ಡಿ, ಹೋಟೇಲುಗಳ ತ್ಯಾಜ್ಯ. ಬೇಸಗೆಯಲ್ಲೂ ಕಟ್ಟಿನಿಂತ ನೀರಿನಲ್ಲಿ ಹುಳುಗಳು ತುಂಬಿ ಪರಿಸರದಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಮಳೆಗಾಲಕ್ಕಾಗುವಾಗ ಈ ಕಸಕಡ್ಡಿಗಳ ರಾಶಿಯಿಂದಾಗಿ ಮಳೆನೀರು ಚರಂಡಿಯಲ್ಲಿ ಸುಸೂತ್ರವಾಗಿ ಹರಿಯಲಾಗದೆ ಉಂಟಾಗಬಹುದಾದ ಸಮಸ್ಯೆ ಜನರ…

 • ಜನತಾ ಕರ್ಫ್ಯೂ: ಕಾಸರಗೋಡು ಜಿಲ್ಲೆ ಸಂಪೂರ್ಣ ಸ್ತಬ್ಧ

  ಕಾಸರಗೋಡು : ವಿಶ್ವಾದ್ಯಂತ ವೇಗವಾಗಿ ಹರಡುತ್ತಿರುವ ಮಹಾಮಾರಿ ಕೋವಿಡ್‌ 19 ವೈರಸ್‌ ನಿಯಂತ್ರಿಸುವ ಸಂಕಲ್ಪದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ “ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ರವಿವಾರ ಕಾಸರಗೋಡು ಜಿಲ್ಲೆ ಸಂಪೂರ್ಣ ಸ್ತಬ್ದವಾಗಿದೆ. ವೈರಸ್‌ ಬಡಿದೋಡಿಸುವ ಮಹತ್ವದ ಸಂಕಲ್ಪಕ್ಕೆ…

 • ಜನತಾ ಕರ್ಫ್ಯೂಗೆ ಕೊಡಗು ಸ್ತಬ್ಧ; ವಿರಾಜಪೇಟೆ ವ್ಯಾಪ್ತಿಯಲ್ಲಿ ಅಭೂತಪೂರ್ವ ಬೆಂಬಲ

  ಗೋಣಿಕೊಪ್ಪ / ಮಡಿಕೇರಿ: ಕೋವಿಡ್‌ 19 ಹರಡುವ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕರೆನೀಡಿದ ಜನತಾ ಕರ್ಫ್ಯೂ ಗೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆಯಿತು. ಬೆಳಗ್ಗೆ 7ರಿಂದ ರಾತ್ರಿ 9ರ ತನಕ ಜನತೆ ತಮ್ಮ ಮನೆಗಳಿಂದ ಹೊರ…

 • ಕಾಸರಗೋಡು: ಮತ್ತೆ 6 ಮಂದಿಗೆ ಸೋಂಕು

  ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ ಮತ್ತೆ ಆರು ಮಂದಿಗೆ ಕೋವಿಡ್‌-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ 14ಕ್ಕೇರಿದೆ. ಕೇರಳದಲ್ಲಿ ಶನಿವಾರ ಒಟ್ಟು 12 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು 52 ಮಂದಿಯನ್ನು ಕೋವಿಡ್‌-19…

 • ಕೋವಿಡ್- 19 ನಿಯಂತ್ರಣಕ್ಕೆ ಕ್ರಮ, ಜನಜೀವನ ಭಾಗಶಃ ಸ್ತಬ್ಧ

  ಕಾಸರಗೋಡು: ಜಿಲ್ಲೆಯಲ್ಲಿ ಒಟ್ಟು ಎಂಟು ಮಂದಿಗೆ ಕೋವಿಡ್- 19 ತಟ್ಟಿರುವ ಹಿನ್ನೆಲೆಯಲ್ಲಿ ಬಿಗು ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಜಿಲ್ಲೆ ಯಲ್ಲಿ ಜನಜೀವನ ಭಾಗಶ: ಸ್ತಬ್ದಗೊಂಡಿದೆ. ಅಂಗಡಿ, ಹೊಟೇಲುಳು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ವರೆಗೆ ಮಾತ್ರವೇ…

ಹೊಸ ಸೇರ್ಪಡೆ