ಹೆಚ್ಚಾಗುತ್ತಿದೆ ಚಾರ್ಲಿ ಕ್ರೇಜ್‌: ಜೂ.10ರಂದು ಕಿರಣ್ ರಾಜ್ ಚಿತ್ರ ಬಿಡುಗಡೆ


Team Udayavani, Jun 6, 2022, 2:55 PM IST

777-charlie

ಬಹುನಿರೀಕ್ಷಿತ “777 ಚಾರ್ಲಿ’ ಸಿನಿಮಾದ ಬಿಡುಗಡೆಗೆ ಕೌಂಟ್‌ ಡೌನ್‌ ಶುರುವಾಗಿದೆ. ಇದೇ ಜೂ. 10ಕ್ಕೆ “777 ಚಾರ್ಲಿ’ ಅದ್ಧೂರಿಯಾಗಿ ತೆರೆಗೆ ಬರುತ್ತಿದ್ದು, ಸದ್ಯ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಅಂತಿಮ ಹಂತದಲ್ಲಿ ನಿರತವಾಗಿರುವ ಚಿತ್ರತಂಡ, ದೇಶದಾದ್ಯಂತ ಪ್ರಮುಖ ನಗರಗಳಿಗೆ ಭೇಟಿ ನೀಡಿ, ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಇದರ ನಡುವೆಯೇ ಜೂ. 2ರಿಂದ ನಡೆಯುತ್ತಿರುವ “777 ಚಾರ್ಲಿ’ಯ ಪ್ರೀಮಿಯರ್‌ ಶೋಗೆ ಎಲ್ಲೆಡೆಯಿಂದ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ.

ಇದೇ ವೇಳೆ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ “777 ಚಾರ್ಲಿ’ ನಿರ್ದೇಶಕ ಕಿರಣ್‌ ರಾಜ್‌, ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಮತ್ತು ಪ್ರಚಾರದ ಅನುಭವಗಳ ಬಗ್ಗೆ  ಒಂದಷ್ಟು ಮಾತನಾಡಿದ್ದಾರೆ.

“ಕಳೆದ ಒಂದು ತಿಂಗಳಿನಿಂದ ತುಂಬ ವೇಗವಾಗಿ ನಮ್ಮ ಸಿನಿಮಾದ ಪ್ರಮೋಶನ್ಸ್‌ ಕೆಲಸಗಳು ನಡೆಯುತ್ತಿದೆ. ಈಗಾಗಲೇ ರಿಲೀಸ್‌ ಆಗಿರುವ “777 ಚಾರ್ಲಿ’ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಆಡಿಯನ್ಸ್‌ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಸಹಜವಾಗಿಯೇ ಸಿನಿಮಾದ ಮೇಲೆ ಆಡಿಯನ್ಸ್‌ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳಂ ಹೀಗೆ ಎಲ್ಲ ಭಾಷೆಗಳಲ್ಲೂ ಸಿನಿಮಾಕ್ಕೆ ನಮ್ಮ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್‌ ಸಿಗುತ್ತಿದೆ’ ಎನ್ನುತ್ತಾರೆ.

ಇದನ್ನೂ ಓದಿ:ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ಸಲೀಂ ಖಾನ್‌ಗೆ ಬೆದರಿಕೆ ಪತ್ರ

“ಇನ್ನು ಜೂನ್‌ ಮೊದಲ ವಾರದಿಂದ ದೇಶದಾದ್ಯಂತ “777 ಚಾರ್ಲಿ’ ಸ್ಪೆಷಲ್‌ ಪ್ರೀಮಿಯರ್‌ ಶೋ ಶುರುವಾಗಿದೆ. ಈಗಾಗಲೇ ಸುಮಾರು ಐದಾರು ಮಹಾನಗರ ಗಳಲ್ಲಿ ಸ್ಪೆಷಲ್‌ ಪ್ರೀಮಿಯರ್‌ ಶೋ ನಡೆದಿದೆ. ಶೋ ನಡೆದ ಎಲ್ಲ ಕಡೆಗಳಲ್ಲಿ ತುಂಬ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಅದರಲ್ಲೂ ಉತ್ತರ ಭಾರತದಲ್ಲಿ ನಮ್ಮ ಸಿನಿಮಾದ ಪ್ರೀಮಿಯರ್‌ ಶೋ ನೋಡಿದ ಬಳಿಕ ಅಲ್ಲಿನ ವಿತರಕರು ಥಿಯೇಟರ್‌ಗಳ ಸಂಖ್ಯೆ, ಮತ್ತು ಸಿನಿಮಾದ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಚೆನ್ನೈ, ಮುಂಬೈ, ಹೈದರಾಬಾದ್‌, ಬೆಂಗಳೂರು ಹೀಗೆ ದೇಶದ ಎಲ್ಲ ಪ್ರಮುಖ ಮಹಾನಗರಗಳಲ್ಲೂ ಥಿಯೇಟರ್‌ಗಳ ಮುಂದೆ “777 ಚಾರ್ಲಿ’ಯ ದೊಡ್ಡ ದೊಡ್ಡ ಕಟೌಟ್‌ ಗಳು ಕಂಡುಬರುತ್ತಿದೆ. ಪ್ರೀಮಿಯರ್‌ ಶೋ ತುಂಬ ದೊಡ್ಡ ಮಟ್ಟದಲ್ಲಿ ಸಕ್ಸಸ್‌ ಆಗುತ್ತಿದ್ದು, ಸಿನಿಮಾದ ಮೇಲಿನ ನಮ್ಮ ಕಾನ್ಫಿಡೆನ್ಸ್‌ ಇನ್ನಷ್ಟು ಹೆಚ್ಚಾಗಿದೆ’ ಎನ್ನುವುದು ಕಿರಣ್‌ ರಾಜ್‌ ಮಾತು.

“ಈಗಾಗಲೇ ಆನ್‌ಲೈನ್‌ನಲ್ಲೂ “777 ಚಾರ್ಲಿ’ ಅಡ್ವಾನ್ಸ್‌ ಬುಕ್ಕಿಂಗ್‌ ಆರಂಭವಾಗಿದ್ದು, ಆರಂಭದ ದಿನಗಳ ಬಹುತೇಕ ಶೋಗಳ ಟಿಕೆಟ್‌ಗಳು ಸೋಲ್ಡ್‌ ಆಗಿದೆ. ಆಡಿಯನ್ಸ್‌ ಕಡೆಯಿಂದಲೂ “777 ಚಾರ್ಲಿ’ ಭಾರೀ ಬೇಡಿಕೆ ಇರುವುದರಿಂದ ಥಿಯೇಟರ್‌ಗಳು ಮತ್ತು ಶೋಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಾರೆ ಐದು ವರ್ಷಗಳ ನಮ್ಮ ಪ್ರಯತ್ನಕ್ಕೆ, ಪರಿಶ್ರಮಕ್ಕೆ ಈಗ ಪ್ರತಿಫ‌ಲ ಸಿಗುತ್ತಿದೆ. ರಿಲೀಸ್‌ಗೂ ಮೊದಲೇ ಇಷ್ಟೊಂದು ದೊಡ್ಡ ಮಟ್ಟಕ್ಕೆ ರೆಸ್ಪಾನ್ಸ್‌ ಸಿಗುತ್ತಿರುವುದು ನೋಡಿದರೆ, ನಿಜಕ್ಕೂ ಖುಷಿಯಾಗುತ್ತಿದೆ’ ಎನ್ನುತ್ತಾರೆ ಕಿರಣ್‌ ರಾಜ್.

ಟಾಪ್ ನ್ಯೂಸ್

thumbnail web exclusive food

ರುಚಿ, ರುಚಿಯಾದ ಸೋಯಾ ಚಿಲ್ಲಿ…ಸರಳ ವಿಧಾನದ ರೆಸಿಪಿ ನಿಮಗಾಗಿ…

army

ಅಗ್ನಿ ವೀರ್ ನೇಮಕಾತಿ ರ‍್ಯಾಲಿ ಟಾರ್ಗೆಟ್ ; ಇಬ್ಬರು ಜೈಶ್ ಉಗ್ರರ ಹತ್ಯೆ

5g

ನಾಳೆಯಿಂದ ದೇಶದಲ್ಲಿ ‘5G’ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

1-sadsadsad

ಮೊಮ್ಮಗುವನ್ನು ನೋಡಲು ಬಳ್ಳಾರಿಗೆ : ರೆಡ್ಡಿ ಮನವಿಗೆ ಅ.10 ರಂದು ಸುಪ್ರೀಂ ತೀರ್ಪು

ವಂದೇ ಭಾರತ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ವಂದೇ ಭಾರತ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ರಾಹುಲ್ ಹೆಜ್ಜೆ ಜೊತೆಗೆ ಇತಿಹಾಸ ನಿರ್ಮಾಣವಾಗುತ್ತಿದೆ: ಡಿಕೆ ಶಿವಕುಮಾರ್

ರಾಹುಲ್ ಹೆಜ್ಜೆ ಜೊತೆಗೆ ಇತಿಹಾಸ ನಿರ್ಮಾಣವಾಗುತ್ತಿದೆ: ಡಿಕೆ ಶಿವಕುಮಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

banaras

ಲವ್ ಸ್ಟೋರಿ ಜೊತೆ ಟೈಮ್ ಟ್ರಾವೆಲ್: ಝೈದ್‌ ಖಾನ್‌ ನಟನೆಯ ‘ಬನಾರಸ್’

ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ… ತೋತಾಪುರಿ ಸಿಕ್ಕಿದ್ದು ನನ್ನ ಪುಣ್ಯ ಎಂದ ಜಗ್ಗೇಶ್

ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ… ತೋತಾಪುರಿ ಸಿಕ್ಕಿದ್ದು ನನ್ನ ಪುಣ್ಯ ಎಂದ ಜಗ್ಗೇಶ್

ಭಾರತೀಯ ಚಿತ್ರರಂಗದಲ್ಲಿ ಇಂತಹದ್ದನ್ನು ನೀವು ನೋಡಿರಲಿಕ್ಕಿಲ್ಲ; ಕಾಂತಾರ ಬಗ್ಗೆ ರಕ್ಷಿತ್ ಮಾತು

ಭಾರತೀಯ ಚಿತ್ರರಂಗದಲ್ಲಿ ಇಂತಹದ್ದನ್ನು ನೀವು ನೋಡಿರಲಿಕ್ಕಿಲ್ಲ; ಕಾಂತಾರ ಬಗ್ಗೆ ರಕ್ಷಿತ್ ಮಾತು

ಕಣ್ಣು ತೆರೆಸಿದ ‘ಕಾಂತಾರ’: ಕರಾವಳಿ ಸೊಗಡು ಸಪ್ತಮಿ ಬೆರಗು

ಕಣ್ಣು ತೆರೆಸಿದ ‘ಕಾಂತಾರ’: ಕರಾವಳಿ ಸೊಗಡು ಸಪ್ತಮಿ ಬೆರಗು

ಹಾಲಿವುಡ್ ಡೈರೆಕ್ಟರ್ ಜೊತೆ ಕಾಣಿಸಿಕೊಂಡ ಯಶ್; ಏನಿದು ಕಲಾಶ್ನಿಕೋವ್ ಗನ್ ಕಥೆ?

ಹಾಲಿವುಡ್ ಡೈರೆಕ್ಟರ್ ಜೊತೆ ಕಾಣಿಸಿಕೊಂಡ ಯಶ್; ಏನಿದು ಕಲಾಶ್ನಿಕೋವ್ ಗನ್ ಕಥೆ?

MUST WATCH

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

udayavani youtube

ಪಿಎಫ್ ಐ – ಎಸ್ಡಿಪಿಐ ಕಚೇರಿ ಮೇಲೆ ಮತ್ತೆ ಶಿವಮೊಗ್ಗ ಪೊಲೀಸರ ದಾಳಿ

ಹೊಸ ಸೇರ್ಪಡೆ

1-SDSADSD

ಕೋವಿಡ್ ನಂತರ ಬಲಿಷ್ಠ ಭಾರತ ನಿರ್ಮಾಣವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

thumbnail web exclusive food

ರುಚಿ, ರುಚಿಯಾದ ಸೋಯಾ ಚಿಲ್ಲಿ…ಸರಳ ವಿಧಾನದ ರೆಸಿಪಿ ನಿಮಗಾಗಿ…

1-sdasdasd

ಕೊರಟಗೆರೆಯಲ್ಲಿ ಮುನಿಯಪ್ಪ ಬಿಟ್ಟು ಬೇರೆಯವರಿಗೆ ಟಿಕೆಟ್ ಬೇಡ: ಗೋವಿಂದ ರೆಡ್ಡಿ

army

ಅಗ್ನಿ ವೀರ್ ನೇಮಕಾತಿ ರ‍್ಯಾಲಿ ಟಾರ್ಗೆಟ್ ; ಇಬ್ಬರು ಜೈಶ್ ಉಗ್ರರ ಹತ್ಯೆ

5g

ನಾಳೆಯಿಂದ ದೇಶದಲ್ಲಿ ‘5G’ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.