ಹಾಡಲ್ಲಿ ‘ಕಾಶಿ’ ದರ್ಶನ; ಝೈದ್‌ ಖಾನ್‌ ನಟನೆಯ ‘ಬನಾರಸ್‌’ ಚಿತ್ರದ ಸಾಂಗ್ ರಿಲೀಸ್

Team Udayavani, Jul 2, 2022, 2:46 PM IST

ಹಾಡಲ್ಲಿ ‘ಕಾಶಿ’ ದರ್ಶನ; ಝೈದ್‌ ಖಾನ್‌ ನಟನೆಯ ‘ಬನಾರಸ್‌’ ಚಿತ್ರದ ಸಾಂಗ್ ರಿಲೀಸ್

ಝೈದ್‌ ಖಾನ್‌ ಅಭಿನಯದ ಚೊಚ್ಚಲ ಚಿತ್ರ “ಬನಾರಸ್‌’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

ಸದ್ಯ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ “ಬನಾರಸ್‌’ ಚಿತ್ರದ “ಮಾಯಗಂಗೆ ಮಾಯಗಂಗೆ ಮೌನಿಯಾದಳೇ…’ ಎಂಬ ಮೊದಲ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ. ಡಾ. ವಿ ನಾಗೇಂದ್ರ ಪ್ರಸಾದ್‌ ಬರೆದಿರುವ ಈ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದು, ಅರ್ಮಾನ್‌ ಮಲ್ಲಿಕ್‌ ಗೀತೆಗೆ ಧ್ವನಿಯಾಗಿದ್ದಾರೆ. ನಿರ್ಮಾಪಕಿ ಶೈಲಜಾ ನಾಗ್‌ “ಬನಾರಸ್‌’ ಚಿತ್ರದ ಈ ಮೊದಲ ಗೀತೆಯನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

“ಬನಾರಸ್‌’ ಚಿತ್ರದ ಮೊದಲ ಗೀತೆಯ ಬಗ್ಗೆ ಮಾತನಾಡಿದ ನಿರ್ದೇಶಕ ಜಯತೀರ್ಥ, “ಇಡೀ ಸಿನಿಮಾದ ಕಥೆ ಕಾಶಿಯಲ್ಲಿ ನಡೆಯುತ್ತದೆ. ಕಾಶಿ ಅಂದ್ರೆ ವೈರಾಗ್ಯ ಸೂಚಕ. ಅಂಥ ಜಾಗದಲ್ಲಿ ಅರಳುವ ಪ್ರೇಮದ ಸನ್ನಿವೇಶವನ್ನು ಗೀತೆಯ ಮೂಲಕ ಚಿತ್ರದಲ್ಲಿ ಹೇಳಬೇಕಿತ್ತು. ಅದನ್ನು ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್‌, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಗೀತೆಯಲ್ಲಿ ತುಂಬ ಚೆನ್ನಾಗಿ ಕಟ್ಟಿಕೊಟ್ಟಿ ದ್ದಾರೆ. ಅದ್ವೆ„ತ ಗುರುಮೂರ್ತಿ ಈ ಗೀತೆಯ ದೃಶ್ಯವನ್ನು ಅದ್ಭುತವಾಗಿ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಝೈದ್‌ ಖಾನ್‌, ಸೋನಾಲ್‌ ಮತ್ತು ಸುಜಯ್‌ ಶಾಸ್ತ್ರೀ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಕೊರಿಯೋಗ್ರಫಿ ಇಲ್ಲದೆ ಸಹಜವಾಗಿ ಈ ಗೀತೆಯನ್ನು ಕಾಶಿಯಲ್ಲಿ ಸೆರೆಹಿಡಿದಿದ್ದೇವೆ’ ಎಂದು ಹಾಡು ಮೂಡಿಬಂದ ಹಿನ್ನೆಲೆ ವಿವರಿಸಿದರು.

ಹಾಡಿನ ಬಗ್ಗೆ ಮಾತನಾಡಿದ ನಾಯಕ ನಟ ಝೈದ್‌ ಖಾನ್‌, “ಸಿನಿಮಾದ ಹಾಡು ತುಂಬಾ ಚೆನ್ನಾಗಿ ಬಂದಿದ್ದು, ನೋಡುಗರಿಗೆ ಹೊಸ ಅನುಭವ ಕೊಡಲಿದೆ. ಇಡೀ ತಂಡದ ಪ್ರಯತ್ನದಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಹಾಡು ಎಲ್ಲರಿಗೂ ಇಷ್ಟವಾಗುವಂತಿದ್ದು, ಅಂತೆಯೇ ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬೈಬಲ್ ಹಿಂದಿದೆ ರೋಚಕ ಕಥೆ…ಪವಾಡ ಪುರುಷ ಶ್ರೀ ಅಜಾತ ನಾಗಲಿಂಗ ಸ್ವಾಮೀಜಿ

ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್‌, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಚಿತ್ರದ ಹಾಡಿನ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಾಯಕಿ ಸೋನಾಲ್‌ ಮಾಂತೆರೋ, ನಟ ಸುಜಯ್‌ ಶಾಸ್ತ್ರೀ, ನಿರ್ಮಾಪಕ ತಿಲಕ್‌ ರಾಜ್‌ ಬಲ್ಲಾಳ್‌ ಸಿನಿಮಾ ಸಾಗಿಬಂದ ಬಗ್ಗೆ ಮಾತನಾಡಿದರು.

ನಟರಾದ ವಿನೋದ್‌ ಪ್ರಭಾಕರ್‌, ಅಭಿಷೇಕ್‌ ಅಂಬರೀಶ್‌, ಯಶಸ್‌ ಸೂರ್ಯ, ಲಹರಿ ವೇಲು, ಚಂದ್ರು, ನಿರ್ಮಾಪಕ ಸಂತೋಷ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು “ಬನಾರಸ್‌’ ಚಿತ್ರದ ಮೊದಲ ಹಾಡು ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಟಾಪ್ ನ್ಯೂಸ್

Video: ಹೊಸ ಅನುಭವ: ಸೋರುತ್ತಿರುವ ವಿಮಾನದಲ್ಲೇ ಪ್ರಯಾಣಿಕರ ಪಯಣ…

Video: ಹೊಸ ಅನುಭವ: ಸೋರುತ್ತಿರುವ ವಿಮಾನದಲ್ಲೇ ಪ್ರಯಾಣಿಕರ ಪಯಣ…

7-brahmakamala

Brahma Kamala: ಆರೋಗ್ಯ ಸಂಜೀವಿನಿ… ಬ್ರಹ್ಮಕಮಲದ ಆಧ್ಯಾತ್ಮಿಕ ಹಿನ್ನಲೆ ಏನು?

ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ

ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ

Love: ಗೆಳೆಯನನ್ನು ವಿವಾಹವಾಗಲು ಪಾಕ್‌ ಗೆ ತೆರಳಿದ್ದ ಅಂಜು 5 ತಿಂಗಳ ಬಳಿಕ ಭಾರತಕ್ಕೆ ವಾಪಸ್

Love: ಗೆಳೆಯನನ್ನು ವಿವಾಹವಾಗಲು ಪಾಕ್‌ ಗೆ ತೆರಳಿದ್ದ ಅಂಜು 5 ತಿಂಗಳ ಬಳಿಕ ಭಾರತಕ್ಕೆ ವಾಪಸ್

ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದ: ಸಿಎಂ ಸಿದ್ದರಾಮಯ್ಯ

Karnataka; ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದ: ಸಿದ್ದರಾಮಯ್ಯ

m b patil

Vijayapura; ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಸಚಿವ ಎಂ.ಬಿ.ಪಾಟೀಲ

Surat ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ನಾಪತ್ತೆಯಾಗಿದ್ದ 7 ಕಾರ್ಮಿಕರ ಶವ ಪತ್ತೆ

Surat: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ: ಸುಟ್ಟು ಕರಕಲಾದ 7 ಕಾರ್ಮಿಕರ ಶವ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

the judgement movie is in post production

Sandalwood; ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾದ ‘ದಿ ಜಡ್ಜ್ ಮೆಂಟ್‌’

Bangalore: ಚಿತ್ರೀಕರಣದ ವೇಳೆ ಅವಘಡ: ನಟ ಮಂಡ್ಯ ರಮೇಶ್‌ಗೆ ತೀವ್ರಗಾಯ

Bangalore: ಚಿತ್ರೀಕರಣದ ವೇಳೆ ಅವಘಡ; ನಟ ಮಂಡ್ಯ ರಮೇಶ್‌ಗೆ ತೀವ್ರಗಾಯ

Sandalwood; ಬರ್ತ್ ಡೇ ಆಚರಿಸಿಕೊಂಡ ರಮ್ಯಾ; ಅಭಿಮಾನಿಗಳಿಂದ ಶುಭ ಹಾರೈಕೆ

Sandalwood; ಬರ್ತ್ ಡೇ ಆಚರಿಸಿಕೊಂಡ ರಮ್ಯಾ; ಅಭಿಮಾನಿಗಳಿಂದ ಶುಭ ಹಾರೈಕೆ

“ನನ್ನ ಮಾತು ಕೇಳಿ ಬಂದ್ರೆ ನೀನು ಇವತ್ತಿಗೂ ರಾಣಿಯೇ..” ಮದುವೆ ಬಗ್ಗೆ ಮೌನ ಮುರಿದ ವರ್ತೂರು

“ನನ್ನ ಮಾತು ಕೇಳಿ ಬಂದ್ರೆ ನೀನು ಇವತ್ತಿಗೂ ರಾಣಿಯೇ..” ಮದುವೆ ಬಗ್ಗೆ ಮೌನ ಮುರಿದ ವರ್ತೂರು

Sandalwood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ ಪೂಜಾ ಗಾಂಧಿ

Sandalwood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ ಪೂಜಾ ಗಾಂಧಿ

MUST WATCH

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

udayavani youtube

ಗುರುಕಿರಣ್ ರಿಗೆ ಬೆಂಗಳೂರು ಕಂಬಳದ ಮೇಲಿನ ಆಸಕ್ತಿಯ ಹಿಂದಿದೆ ಅದೊಂದು ಕಾರಣ

ಹೊಸ ಸೇರ್ಪಡೆ

the judgement movie is in post production

Sandalwood; ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾದ ‘ದಿ ಜಡ್ಜ್ ಮೆಂಟ್‌’

Video: ಹೊಸ ಅನುಭವ: ಸೋರುತ್ತಿರುವ ವಿಮಾನದಲ್ಲೇ ಪ್ರಯಾಣಿಕರ ಪಯಣ…

Video: ಹೊಸ ಅನುಭವ: ಸೋರುತ್ತಿರುವ ವಿಮಾನದಲ್ಲೇ ಪ್ರಯಾಣಿಕರ ಪಯಣ…

7-brahmakamala

Brahma Kamala: ಆರೋಗ್ಯ ಸಂಜೀವಿನಿ… ಬ್ರಹ್ಮಕಮಲದ ಆಧ್ಯಾತ್ಮಿಕ ಹಿನ್ನಲೆ ಏನು?

ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ

ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ

Mysore; ಬ್ರೂಣ ಹತ್ಯೆಯ ವಿಚಾರವಾಗಿ ಸಿಎಂ ಗಂಭೀರ ಕ್ರಮಕ್ಕೆ ಮುಂದಾಗಿದ್ದಾರೆ: ಮಹದೇವಪ್ಪ

Mysore; ಭ್ರೂಣ ಹತ್ಯೆಯ ವಿಚಾರವಾಗಿ ಸಿಎಂ ಗಂಭೀರ ಕ್ರಮಕ್ಕೆ ಮುಂದಾಗಿದ್ದಾರೆ: ಮಹದೇವಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.