Udayavni Special

ಪುಣೆಯಲ್ಲಿ ಟಿಕ್‌ ಟಾಕ್‌ ಫಿಲಂ ಫೆಸ್ಟಿವಲ್‌!


Team Udayavani, Aug 11, 2019, 6:30 PM IST

Tik-Tok-726

ಹೊಸದಿಲ್ಲಿ: ನೀವು ಟಿಕ್‌ ಟಾಕ್‌ ನಲ್ಲಿ ಕ್ರಿಯಾಶೀಲರಾಗಿದ್ದೀರಾ? ಹಲವು ಹಾಡುಗಳಿಗೆ, ಡೈಲಾಗ್‌ ಗಳಿಗೆ ಅಭಿನಯ ಮಾಡಿದ್ದೀರಾ? ಟಿಕ್‌ ಟಾಕ್‌ ಜತೆ ದಿನದ ಬಹುತೇಕ ಸಮಯವನ್ನು ವ್ಯಯಿಸುತ್ತಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ಪುಣೆಯಲ್ಲೊಂದು ವೇದಿಕೆ ಸಿದ್ಧವಾಗಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಟಿಕ್‌ ಟಾಕ್‌ ಭಾರೀ ಸದ್ದು ಮಾಡುತ್ತಿದ್ದು, ಹಲವು ಕಲಾವಿದರು ಟಿಕ್‌ ಟಾಕ್‌ ಮೂಲಕ ಬೆಳಕಿಗೆ ಬಂದ ಅದೆಷ್ಟೋ ಉದಾಹರಣೆಗಳಿವೆ. ಇಂತಹ ಪ್ರತಿಭೆಯನ್ನು ಗುರುತಿಸಲು ಪುಣೆಯಲ್ಲಿ ಟಿಕ್‌ ಟಾಕ್‌ ಚಲನಚಿತ್ರ ಹಬ್ಬ ಏರ್ಪಡಿಸಲಾಗಿದೆ. ಇದು ಜಗತ್ತಿನ ಮೊದಲ ಟಿಕ್‌ ಟಾಕ್‌ ಪೆಸ್ಟಿವಲ್‌ ಎಂಬ ಖ್ಯಾತಿಯನ್ನು ಪಡೆದಿದೆ.

ಅಗಸ್ಟ್‌ 20ರವರೆಗೆ ಇದು ನಡೆಯಲಿದ್ದು, ವಿಜೇತರಿಗೆ ಪುರಸ್ಕಾರಗಳ ಜತೆಗೆ ಸರ್ಟಿಫಿಕೆಟ್‌ ಅನ್ನೂ ನೀಡಲಾಗುತ್ತಿದೆ. ಟ್ರೋಫಿಯ ಜತೆಗೆ ಪ್ರಥಮ ಬಹುಮಾನವಾಗಿ 33,333, ದ್ವಿತೀಯ ಬಹುಮಾನವಾಗಿ 22,222 ರೂ., ತೃತೀಯ 5,555 ರೂ. ಹಾಗೂ ಚತುರ್ಥ ತಂಡಕ್ಕೆ 3,333 ರೂ. ನೀಡಲಾಗುತ್ತದೆ.

ಈ ಸ್ಪರ್ಧೆಯನ್ನು 12 ವಿಭಾಗಗಳನ್ನಾಗಿ ಮಾಡಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಬೆಸ್ಟ್‌ ಕಾಮೆಡಿ, ಬೆಸ್ಟ್‌ ಫೀಲಿಂಗ್‌, ಬೆಸ್ಟ್‌ ಕಪಲ್‌, ಬೆಸ್ಟ್‌ ಸೋಶಿಯಲ್‌, ಬೆಸ್ಟ್‌ ಹಾರರ್‌, ಬೆಸ್ಟ್‌ ಡಾನ್ಸ್‌, ಬೆಸ್ಟ್‌ ಮೋಟಿವೇಶನ್‌, ಬೆಸ್ಟ್‌ ಕ್ರಿಯೇಟಿವ್‌ ಎಂದು ವಿಭಾಗಿಸಲಾಗಿದೆ. ಇವುಗಳಲ್ಲಿ ಸಾಮಾಜಿಕ ಜಾಗೃತಿ ಹಾಗೂ ಪರಿಸರ ಸ್ನೇಹಿಯಾದ ವೀಡಿಯೋಗಳಿಗೂ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಸಂಘಟಕ ಪ್ರಕಾಶ್‌ ಯಾದವ್‌ ಹೇಳಿದ್ದಾರೆ.

ಕಾಲೇಜು ಕ್ಯಾಂಪಸ್‌ಗಳು, ಪ್ರವಾಸಿ ತಾಣಗಳಲ್ಲಿ ಯುವಕ – ಯುವತಿಯರು ಟಿಕ್‌ ಟಾಕ್‌ ಮಾಡುತ್ತಿದ್ದಾರೆ. ಅವರ ಪ್ರತಿಭೆಗಳಿಗೆ ವೇದಿಕ ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ. ಈ ಉದ್ದೇಶದಿಂದ ಪುಣೆಯಲ್ಲಿ ಟಿಕ್‌ ಟಾಕ್‌ ಫಿಲಂ ಫೆಸ್ಟಿವಲ್‌ ಏರ್ಪಡಿಸಲಾಗಿದೆ ಎಂದಿದ್ದಾರೆ.

ಒಬ್ಬರಿಗೆ 3 ವೀಡಿಯೋ ಮೂಲಕ ಸ್ಪರ್ಧೆ ಮಾಡುವ ಅವಕಾಶ ಕಲ್ಪಿಸಲಾಗಿದೆ. 5 ಸೆಕೆಂಡ್‌ ಗಿಂತ ಹೆಚ್ಚು, 1 ನಿಮಿಷಗಳ ಒಳಗೆ ವೀಡಿಯೋ ಇರಬೇಕು. ಸ್ಪರ್ಧೆಯ ಮೊದಲೇ ರಿಜಿಸ್ಟ್ರೇಶನ್‌ ಮಾಡಿಸಬೇಕಾಗಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

STUDIO

ಬಂಟ್ವಾಳ: ಸ್ಟುಡಿಯೋಕ್ಕೆ ನುಗ್ಗಿ ದುಷ್ಕರ್ಮಿಗಳಿಂದ ಹಲ್ಲೆ

ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಒಟ್ಟು ಶೇ.70.11ರಷ್ಟು ಮತದಾನ

ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಒಟ್ಟು ಶೇ.70.11ರಷ್ಟು ಮತದಾನ

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ

ಮಂಡ್ಯ ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ

ಕಾಶ್ಮೀರ, ಗಿಲ್ಗಿಟ್, ಬಾಲ್ಟಿಸ್ತಾನವನ್ನು ಪಾಕಿಸ್ಥಾನದ ನಕ್ಷೆಯಿಂದ ಕೈ ಬಿಟ್ಟ ಸೌದಿ ಅರೇಬಿಯಾ

ಕಾಶ್ಮೀರ, ಗಿಲ್ಗಿಟ್, ಬಾಲ್ಟಿಸ್ತಾನವನ್ನು ಪಾಕಿಸ್ಥಾನದ ನಕ್ಷೆಯಿಂದ ಕೈ ಬಿಟ್ಟ ಸೌದಿ ಅರೇಬಿಯಾ

.0.0.

ಮುಂಬೈ vs ಆರ್ ಸಿಬಿ ಬಲಾಢ್ಯರ ಕಾದಾಟ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cinema-tdy-3

ಕ್ರೈಮ್‌ ಥ್ರಿಲ್ಲರ್‌ನಲ್ಲಿ ವಿಜಯ ರಾಘವೇಂದ್ರ

ಎಲ್ಲಾ ಸರಿ ಹೋದ ಮೇಲಷ್ಟೇ ರಾಬರ್ಟ್‌ ರಿಲೀಸ್‌- ದರ್ಶನ್‌

ಎಲ್ಲಾ ಸರಿ ಹೋದ ಮೇಲಷ್ಟೇ ರಾಬರ್ಟ್‌ ರಿಲೀಸ್‌- ದರ್ಶನ್‌

CINEMA-TDY1

ಸಿನಿಮಾ ಬಿಡುಗಡೆ ಕುರಿತು ರವಿಚಂದ್ರನ್‌ ಹೊಸ ಪ್ಲ್ಯಾನ್‌

Drugs

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

cinema-tdy-1

ಆನ ಆದ ಅದಿತಿ : ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

STUDIO

ಬಂಟ್ವಾಳ: ಸ್ಟುಡಿಯೋಕ್ಕೆ ನುಗ್ಗಿ ದುಷ್ಕರ್ಮಿಗಳಿಂದ ಹಲ್ಲೆ

ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಒಟ್ಟು ಶೇ.70.11ರಷ್ಟು ಮತದಾನ

ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಒಟ್ಟು ಶೇ.70.11ರಷ್ಟು ಮತದಾನ

home

ಸಿಟಿಗಳ ಮನೆಗಳಲ್ಲಿ ಹಿತ್ತಲು ಕಾಣುವುದು ದೂರದ ಮಾತು

avalu-tdy-4

ಕೊರಗುವುದೇ ಬದುಕಾಗಬಾರದು…

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.