“ಕೋಟಿಗೊಬ್ಬ’ನ ಜೊತೆ ಆಶಿಕಾ ರಂಗನಾಥ್‌ ಡ್ಯಾನ್ಸ್‌

ಕಲರ್‌ಫ‌ುಲ್‌ ಸೆಟ್‌ - ರಾಜು ಸುಂದರಂ ಸ್ಟೆಪ್‌

Team Udayavani, Jan 14, 2020, 7:03 AM IST

ಸುದೀಪ್‌ ಅಭಿನಯದ “ಕೋಟಿಗೊಬ್ಬ-3′ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರ ಈಗ ಕೊನೆಯ ಹಂತದ ಚಿತ್ರೀಕರಣದಲ್ಲಿ ಬಿಝಿ. ಸದ್ಯ “ಕೋಟಿಗೊಬ್ಬ-3′ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಕಲರ್‌ಫ‌ುಲ್‌ ಸೆಟ್‌ನಲ್ಲಿ ಹಾಡನ್ನು ಚಿತ್ರೀಕರಿಸಲಾಗುತ್ತಿದೆ. ಇದು ಇಂಟ್ರೋಡಕ್ಷನ್‌ ಸಾಂಗ್‌ ಆಗಿದ್ದು, ಈ ಹಾಡಿನಲ್ಲಿ ಕನ್ನಡದ ನಟಿಯೊಬ್ಬಳು ಗೆಸ್ಟ್‌ ಅಪಿಯರೆನ್ಸ್‌ ಮಾಡುತ್ತಿದ್ದಾರೆ. ಅದು ಬೇರಾರು ಅಲ್ಲ, ನಟಿ ಆಶಿಕಾ ರಂಗನಾಥ್‌.

ಹೌದು, ನಟಿ ಆಶಿಕಾ ರಂಗನಾಥ್‌ “ಕೋಟಿಗೊಬ್ಬ-3′ ಚಿತ್ರದ ಹಾಡಿನಲ್ಲಿ ಸ್ಟೆಪ್‌ ಹಾಕುತ್ತಿದ್ದಾರೆ. ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ಕಲರ್‌ಫ‌ುಲ್‌ ಸೆಟ್‌ ಹಾಕಿದ್ದು, ರಾಜು ಸುಂದರಂ ಮಾಸ್ಟರ್‌ ಈ ಹಾಡಿನ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಸೂರಪ್ಪ ಬಾಬು ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಕೋಟಿಗೊಬ್ಬ-3′ ಚಿತ್ರಕ್ಕೆ ಶಿವ ಕಾರ್ತಿಕ್‌ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಅವರ ಸಂಗೀತ ಸಂಯೋಜನೆಯಿದೆ.

ಅಂದಹಾಗೆ, ಈ ಹಾಡಿನೊಂದಿಗೆ ಚಿತ್ರದ ಚಿತ್ರೀಕರಣ ಮುಗಿಯಲಿದೆ. ಹಾಗಾದರೆ ಸಿನಿಮಾ ಬಿಡುಗಡೆ ಯಾವಾಗ ಎಂದು ನೀವು ಕೇಳಬಹುದು. ಆ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಏಕೆಂದರೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಬಾಕಿ ಇವೆ. ಇನ್ನು, ಇಂದು ಸಂಜೆ 6 ಗಂಟೆಗೆ “ಕೋಟಿಗೊಬ್ಬ-3′ ಚಿತ್ರದ ಮೋಶನ್‌ ಪೋಸ್ಟರ್‌ ರಿಲೀಸ್‌ ಆಗಲಿದೆ. ಈ ಮೂಲಕ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರುವ ತಮ್ಮ ಅಭಿಮಾನಿಗಳ ಮುಂದೆ ಸುದೀಪ್‌ “ಕೋಟಿಗೊಬ್ಬ-3′ ಮೋಶನ್‌ ಪೋಸ್ಟರ್‌ನ ವಿಶೇಷ ಗೆಟಪ್‌ನಲ್ಲಿ ದರ್ಶನ ಕೊಡಲಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ