Sandalwood: ಪೂಜಾ ಗಾಂಧಿಗೆ ಕಂಕಣ ಭಾಗ್ಯ

Team Udayavani, Nov 29, 2023, 10:37 AM IST

tdy-3

ಕನ್ನಡ ಚಿತ್ರರಂಗದ ಮಳೆ ಹುಡುಗಿ ಖ್ಯಾತಿಯ ಪೂಜಾ ಗಾಂಧಿ ಹಸೆಮಣೆ ಏರಲು ತಯಾರಾಗಿದ್ದಾರೆ. ಸ್ವತಃ ನಟಿ ಪೂಜಾಗಾಂಧಿ ಅವರೇ ತಾವು ವಿವಾಹವಾಗುತ್ತಿರುವ ವಿಷಯವನ್ನು ಸೋಶಿಯಲ್‌ ಮೀಡಿಯಾಗಳ ಮೂಲಕ ಖಚಿತಪಡಿಸಿದ್ದಾರೆ.

ಅಂದಹಾಗೆ, ಇಂದೇ (ನ. 29) ಪೂಜಾಗಾಂಧಿ ಅವರ ವಿವಾಹ ಸರಳವಾಗಿ ನೆರವೇರುತ್ತಿದ್ದು, ಸದ್ದಿಲ್ಲದೆ ಸಿಂಪಲ್‌ ಆಗಿ ಕುವೆಂಪು ಅವರ ಮಂತ್ರ ಮಾಂಗಲ್ಯದಂತೆ ತಮ್ಮ ಬಹುದಿನದ ಗೆಳೆಯನೊಂದಿಗೆ ಪೂಜಾಗಾಂಧಿ ಕೌಟುಂಬಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಚಿತ್ರರಂಗದ ಮೂಲಗಳ ಪ್ರಕಾರ, ನಟಿ ಪೂಜಾ ಗಾಂಧಿ ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆ ಆಗುತ್ತಿದ್ದಾರೆ. ಪೂಜಾ ಗಾಂಧಿ ಕೆಲ ತಿಂಗಳಿನಿಂದ ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿ ಮಾಲೀಕರಾಗಿರುವ ವಿಜಯ್‌ ಘೋರ್ಪಡೆ ಎಂಬುವವರ ಜೊತೆ ಪ್ರೀತಿಯಲ್ಲಿದ್ದರು ಎನ್ನಲಾಗಿದ್ದು, ಇದೀಗ ಇಬ್ಬರೂ ಕೌಟುಂಬಿಕ ಜೀವನಕ್ಕೆ ಕಾಲಿಡುವುದಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ನಟಿ ಪೂಜಾಗಾಂಧಿ ತಮ್ಮ ಕೈಯ್ನಾರೆ ಕನ್ನಡದಲ್ಲಿಯೇ ಬರೆದು ತಮ್ಮ ಅಭಿಮಾನಿಗಳಿಗೆ ವಿವಾಹವಾಗುತ್ತಿರುವ ವಿಷಯವನ್ನು ತಿಳಿಸಿದ್ದಾರೆ.

“ಆತ್ಮೀಯರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ಚಿತ್ರ ಜೀವನದ ಎಲ್ಲಾ ಬೆಳವಣಿಗೆಗಳಲ್ಲೂ ನೀವು ನನ್ನ ಜೊತೆಗಿದ್ದೀರಿ. ನವೆಂಬರ್‌ 29, 2023ನೇ ತಾರೀಕು ಕುವೆಂಪು ಆಶಯದ ಮಂತ್ರ ಮಾಂಗಲ್ಯದ ಮೂಲಕ ವಿಜಯ್‌ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹರಸಿ,ಆಶೀರ್ವದಿಸಿ’ ಎಂದು ಪೂಜಾ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ಈ ಆಮಂತ್ರಣ ಪತ್ರಿಕೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಬೆಂಗಳೂರಿನ ಯಲಂಹಕದ ಸಮೀಪ ನಟಿ ಪೂಜಾ ಗಾಂಧಿ ಮದುವೆ ಮಂತ್ರ ಮಾಂಗಲ್ಯದಂತೆ ನಡೆಯಲಿದೆ. ಆದರೆ, ಪೂಜಾ ಗಾಂಧಿ ಇನ್ನೂ ಮದುವೆ ಸ್ಥಳವನ್ನು ಬಹಿರಂಗಪಡಿಸಿಲ್ಲ. ಮದುವೆ ದಿನವೇ ಇಂದು ಸರಳ ವಿವಾಹದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಮಳೆ ಹುಡುಗಿ ತಿಳಿಸುವುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್

1-qwqewqeq

Mandya; ಮತ್ತೆ ನಿಗೂಢ ಶಬ್ಧ!; ಬೆಚ್ಚಿ ಬಿದ್ದ ಜನತೆ

1—ewewqe

13 feet ಉದ್ದದ ಬೃಹತ್ ಕಾಳಿಂಗ ಸರ್ಪ ಸೆರೆ; ಸುರಕ್ಷಿತವಾಗಿ ಕಾಡಿಗೆ

1-asdadasd

Belagavi; ನನಗೆ ಜಾತಿ ಅನ್ನುವುದಿಲ್ಲ, ಮನುಷ್ಯತ್ವವೇ ನನ್ನ ಜಾತಿ: ಲಕ್ಷ್ಮೀ ಹೆಬ್ಬಾಳಕರ್

1-sadasda

Uttarakhand; ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ಬಂಧನ

1-wew-ewqew

Internal differences ; ಬಿಜೆಪಿ ಸೇರಿದ ತಮಿಳುನಾಡಿನ ಕಾಂಗ್ರೆಸ್ ಶಾಸಕಿ

1-wwewqewq

UP; ಗಂಗಾಸ್ನಾನಕ್ಕೆ ತೆರಳುತ್ತಿದ್ದವರ ಮೇಲೆರಗಿದ ಜವರಾಯ: ಬಲಿ ಸಂಖ್ಯೆ 24 ಕ್ಕೆ!

Mr Natwarlal Movie Review: ರೋಚಕ ತಿರುವುಗಳಲ್ಲಿ ನಟ್ವರ್‌ಲಾಲ್‌ ಸಂಚಾರ

Mr Natwarlal Movie Review: ರೋಚಕ ತಿರುವುಗಳಲ್ಲಿ ನಟ್ವರ್‌ಲಾಲ್‌ ಸಂಚಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mr Natwarlal Movie Review: ರೋಚಕ ತಿರುವುಗಳಲ್ಲಿ ನಟ್ವರ್‌ಲಾಲ್‌ ಸಂಚಾರ

Mr Natwarlal Movie Review: ರೋಚಕ ತಿರುವುಗಳಲ್ಲಿ ನಟ್ವರ್‌ಲಾಲ್‌ ಸಂಚಾರ

Dhairyam Sarvatra Sadhanam: ಧೈರ್ಯದ ಹಿನ್ನೆಲೆಯಲ್ಲಿ ಹೊಸಬರ ಸಾಧನೆ

Dhairyam Sarvatra Sadhanam: ಧೈರ್ಯದ ಹಿನ್ನೆಲೆಯಲ್ಲಿ ಹೊಸಬರ ಸಾಧನೆ

Movie: ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌ ಸಿನಿಮಾಕ್ಕೆ ನಿರ್ಮಾಪಕಿ ಆಗಲಿದ್ದಾರೆ ತನಿಷಾ

Movie: ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌ ಸಿನಿಮಾಕ್ಕೆ ನಿರ್ಮಾಪಕಿ ಆಗಲಿದ್ದಾರೆ ತನಿಷಾ

Matsyagandha Movie Review: ಸಮಾಜಘಾತುಕರಿಗೆ ಮೀನಿನ ಬಲೆ!

Matsyagandha Movie Review: ಸಮಾಜಘಾತುಕರಿಗೆ ಮೀನಿನ ಬಲೆ!

9

For registration: ಫ್ಯಾಮಿಲಿ ಡ್ರಾಮಾದಲ್ಲಿ ಜಾಲಿರೈಡ್‌

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

1-qwqewqeq

Mandya; ಮತ್ತೆ ನಿಗೂಢ ಶಬ್ಧ!; ಬೆಚ್ಚಿ ಬಿದ್ದ ಜನತೆ

1-adsadasda

Kushtagi; ಭಕ್ತರ ಪರಕಾಷ್ಠೆಯ ಶ್ರೀ ಬುತ್ತಿ ಬಸವೇಶ್ವರ ವೈಭವದ ಮಹಾರಥೋತ್ಸವ

1—ewewqe

13 feet ಉದ್ದದ ಬೃಹತ್ ಕಾಳಿಂಗ ಸರ್ಪ ಸೆರೆ; ಸುರಕ್ಷಿತವಾಗಿ ಕಾಡಿಗೆ

1-sdsdas

Missing; ಶಿರ್ವ: ತಾಯಿ-ಮಗು ನಾಪತ್ತೆ

1-asdadasd

Belagavi; ನನಗೆ ಜಾತಿ ಅನ್ನುವುದಿಲ್ಲ, ಮನುಷ್ಯತ್ವವೇ ನನ್ನ ಜಾತಿ: ಲಕ್ಷ್ಮೀ ಹೆಬ್ಬಾಳಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.