
ನಟಿ ಸಂಜನಾ ಗಲ್ರಾನಿಗೆ ಅನಾರೋಗ್ಯ| ಆಸ್ಪತ್ರೆಗೆ ದಾಖಲು
Team Udayavani, Aug 25, 2021, 3:57 PM IST

ಬೆಂಗಳೂರು: ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ನಟಿ ಸಂಜನಾ ಅವರು ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಖಾಸಗಿ ವಾಹಿನಿ ಎದುರು ಈ ವಿಚಾರ ಹಂಚಿಕೊಂಡಿರುವ ಸಂಜನಾ ಅವರ ತಾಯಿ ರೇಷ್ಮಾ ಗಲ್ರಾನಿ, ಸಂಜನಾ ಅವರಿಗೆ ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
ತಮ್ಮ ಫೌಂಡೇಶನ್ ಮುಖಾಂತರ ಅಗತ್ಯವಿರುವವರಿಗೆ ಸ್ವತಃ ಆಹಾರ ಹಂಚುತ್ತಿದ್ದ ಸಂಜನಾ, ಊಟ ಕೊಡಲು ಬರದೇ ಗೈರಾದ ಕುರಿತು ರೇಷ್ಮಾ ಪ್ರತಿಕ್ರಿಯಿಸಿದ್ದಾರೆ. ‘‘ಎಲ್ಲವೂ ಹಣೆಬರಹ, ದೇವರಿದ್ದಾರೆ, ನಾವೇನೂ ತಪ್ಪು ಮಾಡಿಲ್ಲ. ಸಂಜನಾಗೆ ಹುಷಾರಿಲ್ಲ ಹಾಗಾಗಿ ಊಟ ನೀಡಲು ಬಂದಿಲ್ಲ. ಇಲ್ಲವೆಂದಾದರೆ ಸಂಜನಾ ಅವರೇ ಬಂದು ಊಟ ಕೊಡುತ್ತಿದ್ದರು. ಪದೇಪದೆ ಅದೇ ಮಾತು ಕೇಳಿ ಬರ್ತಿದ್ರೆ ಬೇಜಾರಾಗುತ್ತದೆ. ಹಳೆಯ ಘಟನೆಗಳನ್ನು ಮರೆತು ಬದುಕಬೇಕು ಎಂದುಕೊಂಡಿದ್ದಾರೆ. ಗ್ರಹಚಾರಾನೋ ಏನೋ ಗೊತ್ತಿಲ್ಲ, ಮತ್ತೆ ಅದೇ ಬರ್ತಿದೆ’’ ಎಂದು ಭಾವುಕರಾಗಿ ನುಡಿದಿದ್ದಾರೆ.
ಇನ್ನು ಡ್ರಗ್ಸ್ ದಂಧೆಯಲ್ಲಿ ಸಿಲುಕಿಕೊಂಡಿರುವ ನಟಿ ರಾಗಿಣಿ ಹಾಗೂ ಸಂಜನಾ ಅವರ ಎಫ್ ಎಸ್ ಎಲ್ ವರದಿ ಪಾಸಿಟಿವ್ ಬಂದಿದೆ. ಈ ನಟಿಯರು ಮಾದಕ ವಸ್ತು ಸೇವನೆ ಮಾಡಿರುವುದು ದೃಢ ಪಟ್ಟಿದ್ದು, ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
