
Sindhu Loknath: ನಾನು ನಂದಿನಿ.. ಹೀರೋಯಿನ್ ವರ್ಷನ್ ಹಾಡು ಬರೆದ ʼಡ್ರಾಮಾʼ ಬೆಡಗಿ
Team Udayavani, Sep 18, 2023, 5:43 PM IST

ಬೆಂಗಳೂರು: ತನ್ನ ನಟನೆ ಮೂಲಕವೇ ಸ್ಯಾಂಡಲ್ ವುಡ್ ನಲ್ಲಿ ಅಪಾರ ಸಿನಿಮಂದಿಯ ಪ್ರೇಕ್ಷಕರನ್ನು ರಂಜಿಸಿರುವ ನಟಿ ಸಿಂಧು ಲೋಕನಾಥ್ ಟ್ರೆಂಡಿಂಗ್ ಸೋಶಿಯಲ್ ಮೀಡಿಯಾ ರೀಲ್ಸ್ ಹಾಡಿನ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ಇದು ಸೋಶಿಯಲ್ ಮೀಡಿಯಾ ಜಮಾನ. ಇಲ್ಲೊಂದು ರೀಲ್ಸ್ ವೈರಲ್ ಆದರೆ ಮರುದಿನ ಅದೇ ಟ್ರೆಂಡ್ ಆಗಿರುತ್ತದೆ. ತನ್ನ ವಿಶಿಷ್ಟ ರೀಲ್ಸ್ ಹಾಗೂ ಕ್ರಿಯೇಟಿವ್ ವಿಡಿಯೋಸ್ ಮೂಲಕ ಸುದ್ದಿಯಾಗಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ವಿಕಿಪೇಡಿಯ(ವಿಕಾಸ್) ಇತ್ತೀಚೆಗೆ ಬೆಂಗಳೂರು ಲೈಫ್ ಹೇಗಿರುತ್ತೆ ಅನ್ನೋದನ್ನು ʼನಂದಿನಿʼ ಹಾಡಿನ ಮೂಲಕ ತೋರಿಸಿದ್ದರು.
“ನಾನು ನಂದಿನಿ, ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ ಐಟಿ ಕೆಲಸ ಮಾಡ್ತೀನಿ. ಊಟ ಸರಿ ಇಲ್ಲ ಅಂದ್ರೂನೂ ತಿಂತೀನಿ. ಬಂದಿದ್ ದುಡ್ ಎಲ್ಲಾ ಮನೇಗ್ ಕಳಸ್ತೀನಿ..” ಎನ್ನುವ ಹಾಡನ್ನು ಬರೆದಿರುವ ವಿಕಾಸ್ ಅವರ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದುಕೊಂಡಿದ್ದು, ಭಾರೀ ವೈರಲ್ ಆಗಿದೆ.
ಈ ಹಾಡಿಗೆ ಹೊಸ ನಮೂನೆ ರೀಲ್ಸ್, ಅದೇ ರಾಗಕ್ಕೆ ಹೊಸ ಪದ ಬಳಕೆ.. ಹೀಗೆ ʼನಾನು ನಂದಿನಿ..” ಯದೇ ಮಾತು ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿ ಹರಿದಾಡುತ್ತಿದೆ.
ಇದೀಗ ಈ ವೈರಲ್ ʼನಂದಿನಿʼ ಹಾಡಿಗೆ ನಟಿ ಸಿಂಧು ಲೋಕನಾಥ್ ಅವರು ತಮ್ಮದೇ ಪದ ಬಳಸಿ ಹಾಡು ಬರೆದಿರುವುದು ಸದ್ದು ಮಾಡುತ್ತಿದೆ.
“ನಾನು ನಂದಿನಿ, ಬೆಂಗಳೂರಿಗ್ ಬಂದೀನಿ. ಸಿನಿಮಾ ಮಾಡ್ತೀನಿ ಹೀರೋಯಿನ್ ಆಗ್ತೀನಿ. ಆ್ಯಕ್ಟಿಂಗ್ ಬರಲ್ಲ ಆದ್ರೂ ಅವಾರ್ಡ್ ತಗೋತ್ತಿನಿ. ಬಂದಿದ್ ದುಡ್ಡೆಲ್ಲ ಮಜಾ ಉಡಾಸ್ತಿನಿ. ಬಾರೇ ನಂದಿನಿ ಬೆಂಗಳೂರು ತೋರಿಸ್ತಿನಿ… ಬಾರೇ ನಂದಿನಿ, ಟಾಲಿವುಡ್, ಕಾಲಿವುಡ್ ತೋರಿಸ್ತಿನಿ… “ ಹೀಗೆ ಉದ್ದ ಸಾಲಿನ ನಂದಿನಿ ಹಾಡನ್ನು ಬರೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಿಂಧು ಲೋಕನಾಥ್ ಅವರ ಹೀರೋಯಿನ್ ವರ್ಷನ್ ʼನಂದಿನಿʼ ಹಾಡಿನ ಸಾಲುಗಳು ಸಖತ್ ಗಮನ ಸೆಳೆಯುತ್ತಿದೆ.
ಸ್ಯಾಂಡಲ್ ವುಡ್ ನಲ್ಲಿ ʼಡ್ರಾಮಾʼ, ʼಲೈಫ್ ಇಷ್ಟೇನೆʼ, ʼಲವ್ ಇನ್ ಮಂಡ್ಯʼ, ʼಕೃಷ್ಣ ಟಾಕೀಸ್ʼ, ʼಕಾಣದಂತೆ ಮಾಯವಾದನುʼ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಿಂಧು ನಟಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vinod Prabhakar; ಅ.1ರಂದು ‘ಫೈಟರ್’ ಟ್ರೇಲರ್ ಬಿಡುಗಡೆ

Ronnie; ಸದ್ದು ಮಾಡುತ್ತಿದೆ ಧರ್ಮ ಕೀರ್ತಿರಾಜ್ ರ ‘ರೋನಿ’ ಟ್ರೇಲರ್

Sandalwood; ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ನಿರೂಪ್ ಭಂಡಾರಿ

Sandalwood; ನನ್ನಪಾತ್ರ ತುಂಬಾ ಹೊಸದಾಗಿದೆ: ತೋತಾಪುರಿ 2 ಮೇಲೆ ಧನಂಜಯ್ ನಿರೀಕ್ಷೆ

Baana dariyalli ನೂತನ ಭಾವ ಲಹರಿ; ಗಣೇಶ್-ರುಕ್ಮಿಣಿ- ರೀಷ್ಮಾ ನಟನೆಯ ಸಿನಿಮಾ ರಿಲೀಸ್