
ನೀಲಿ ಚಿತ್ರದಲ್ಲಿ ನಟಿಸ್ತೀರಾ? ಸಂದರ್ಶನದಲ್ಲಿ ಕನ್ನಡದ ನಟಿಗೆ ಯೂಟ್ಯೂಬರ್ ಪ್ರಶ್ನೆ
Team Udayavani, Apr 2, 2023, 9:36 AM IST

ಬೆಂಗಳೂರು: ಸೆಲೆಬ್ರಿಟಿಗಳ ಸಂದರ್ಶನಗಳಿಗೆ ಹೆಚ್ಚಿನ ವೀಕ್ಷಣೆ ಬರುತ್ತದೆ. ಸೆಲೆಬ್ರಿಟಿಗಳು ತಮ್ಮ ಸಿನಿಮಾ ಪ್ರಚಾರದ ಅಂಗವಾಗಿ ಸಂದರ್ಶನಗಳನ್ನು ನೀಡುತ್ತಾರೆ. ಇಲ್ಲೊಬ್ಬ ಯೂಟ್ಯೂಬರ್ ನಟಿಯೊಬ್ಬರ ಸಂದರ್ಶನ ಮಾಡುವಾಗ ಕೇಳಿದ ಪ್ರಶ್ನೆಯಿಂದಾಗಿ ಪೇಚಿಗೆ ಸಿಲುಕಿಕೊಂಡಿದ್ದಾನೆ.
ಐದು ಕಥೆಗಳ, ಐದು ಜನ ನಿರ್ದೇಶಕರ ಕನ್ನಡದ ʼಪೆಂಟಗನ್ʼ ಸಿನಿಮಾ ಇದೇ ಏ.7 ರಂದು ರಿಲೀಸ್ ಆಗಿದೆ. ಸಿನಿಮಾದ ಟ್ರೇಲರ್ ಭರವಸೆ ಮೂಡಿಸಿದೆ. ಸಿನಿಮಾದ ʼಕಾಮನಬಿಲ್ಲುʼ ಹಾಡಿನಲ್ಲಿ ನಟಿ ತನಿಷಾ ಕುಪ್ಪಂಡ ಅವರು ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ವೀಕ್ಷಕರ ಗಮನ ಸೆಳೆದಿದೆ.
ನಟಿ ತನಿಷಾ ಸಿನಿಮಾ ಪ್ರಚಾರದ ಅಂಗವಾಗಿ ಯೂಟ್ಯೂಬರ್ ರೊಬ್ಬರಿಗೆ ಸಂದರ್ಶನ ನೀಡಿದ್ದಾರೆ. ಚಿತ್ರದಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾನೆ.
ನೀವು ನ್ಯೂಡ್ ಫಿಲ್ಮ್ ಮಾಡಲು ರೆಡಿ ಇದ್ದೀರಾ ಎಂದು ನಟಿಗೆ ಕೇಳಿದ್ದಾನೆ. ನಾನು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಅದರ ಅರ್ಥ ನಾನು ನ್ಯೂಡ್ ಫಿಲ್ಮ್ ಮಾಡಬೇಕೆಂದಿಲ್ಲ. ಹಾಗೆ ಮಾಡಿದ್ದರೆ ನಾನು ಕನ್ನಡ ಫಿಲ್ಮ್ ನಲ್ಲಿ ಇರಬೇಕಿಲ್ಲ. ನಾನು ಆ ಕ್ಷೇತ್ರಕ್ಕೆ ಹೋಗಬೇಕು. ನೀವು ಏನು ಪ್ರಶ್ನೆ ಕೇಳ್ತಾ ಇದ್ದೀರಾ? ಕಾಮನ್ ಸೆನ್ಸ್ ಇಲ್ವಾ? ಎಂದು ನಟಿ ಯೂಟ್ಯೂಬರ್ ಗೆ ತರಾಟೆ ತೆಗೆದುಕೊಂಡಿದ್ದಾರೆ.
ಇದಾದ ಬಳಿಕ ಹೊರಗಡೆಯೂ ಯೂಟ್ಯೂಬರ್ ಗೆ ಅಕ್ಕ ತಂಗಿ ಇಲ್ವಾ ಎಂದು ಜನ ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಂಗಳ ಗೌರಿ ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳನ್ನು ತನಿಷಾ ಸಂಪಾದಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
