ಐರಾವನ್‌ಗೆ ಅದ್ವಿತಿ ಶೆಟ್ಟಿ ನಾಯಕಿ
ಸಸ್ಪೆನ್ಸ್- ಥ್ರಿಲ್ಲರ್ ಚಿತ್ರದಲ್ಲಿ ಮಿಂಚಿಂಗ್
Team Udayavani, Nov 10, 2020, 1:56 PM IST
ನಟಿ ಅದ್ವಿತಿ ಶೆಟ್ಟಿ ಮತ್ತೂಂದು ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಹೊಸ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಅದ್ವಿತಿ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿರುವ ಹೊಸಚಿತ್ರದ ಹೆಸರು “ಐರಾವನ್’.
ಈ ಚಿತ್ರದಲ್ಲಿ ನಟ ಜಯರಾಮ್ ಕಾರ್ತಿಕ್ (ಜೆ.ಕೆ) ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಜೆ.ಕೆ ಗೆ ಜೋಡಿಯಾಗಿ ಅದ್ವಿತಿ ತೆರೆಮೇಲೆಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದ್ದು, ಇದೇ ನ.9 ರಿಂದ ಚಿತ್ರದ ಚಿತ್ರೀಕರಣ ಕೂಡ ಪ್ರಾರಂಭವಾಗಿದೆ.
ಇನ್ನು “ಐರಾವನ್’ ಚಿತ್ರದಲ್ಲಿ ತಮ್ಮ ಹೊಸ ಪಾತ್ರದ ಬಗ್ಗೆ ಮಾತನಾಡುವ ಅದ್ವಿತಿ ಶೆಟ್ಟಿ, “ಕೆಲ ದಿನಗಳ ಹಿಂದಷ್ಟೇ ಈ ಸಿನಿಮಾದ ಆಫರ್ ನನಗೆ ಬಂದಿತು. ನನ್ನ ನಿಜ ಜೀವನಕ್ಕೆ ಹತ್ತಿರವಿರುವಂಥಕ್ಯಾರೆಕ್ಟರ್ ಇದರಲ್ಲಿ ಸಿಕ್ಕಿದೆ. ಸಿನಿಮಾದ ಸ್ಕ್ರಿಪ್ಟ್ ಮತ್ತುಕ್ಯಾರೆಕ್ಟರ್ ಎರಡೂ ಇಷ್ಟವಾಗಿದ್ದರಿಂದ ಈ ಸಿನಿಮಾ ಮಾಡಲು ಒಪ್ಪಿಕೊಂಡೆ’ ಎನ್ನುತ್ತಾರೆ.
“ನನಗೆ ನಿಜ ಜೀವನದಲ್ಲಿ ಮಕ್ಕಳನ್ನು ಕಂಡರೆ ತುಂಬ ಇಷ್ಟ. ಅಂಥದ್ದೇ ಪಾತ್ರ ಈ ಸಿನಿಮಾದಲ್ಲೂ ಸಿಕ್ಕಿದೆ. ಮಕ್ಕಳನ್ನುಕಂಡರೆ ಇಷ್ಟಪಡುವ ಮುಗ್ಧ ಹುಡುಗಿಯಾಗಿ, ಮಕ್ಕಳಿಗೆ ಸಹಾಯ ಮಾಡುವಂಥ ಪಾತ್ರ ನನ್ನದು. ತುಂಬ ಫ್ರೆಂಡ್ಲಿ ಆಗಿರುವಂಥ, ಅಷ್ಟೇ ಲೈವ್ಲಿ ಆಗಿ ಕಾಣಿಸಿಕೊಳ್ಳುತ್ತೇನೆ. ಜೊತೆಗೆ ಸಿನಿಮಾದಲ್ಲಿ ನನಗಾಗಿ ಎರಡು ಸಾಂಗ್‌ಕೂಡ ಇದೆ. ಜೆ.ಕೆ ಮತ್ತು ವಿವೇಕ್ ಇಬ್ಬರು ಜೊತೆಗೂ ತೆರೆಮೇಲೆ ನನ್ನ ಕಾಂಬಿನೇಷನ್ ಇದೆ’ ಎಂದು ಪಾತ್ರದ ಬಗ್ಗೆ ವಿವರಣೆಕೊಡುತ್ತಾರೆ ಅದ್ವಿತಿ.
ಅಂದಹಾಗೆ, “ಐರಾವನ್’ ಸಸ್ಪೆನ್ಸ್ – ಥ್ರಿಲ್ಲರ್‌ಕಥೆ ಇರುವ ಸಿನಿಮಾವಂತೆ. “ನಿರಂತರ ಪ್ರೊಡಕ್ಷನ್ಸ್’ ಮೂಲಕ ನಿರಂತರ ಗಣೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗಾ ಈ ಚಿತ್ರಕ್ಕೆಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಐರಾವನ್’ ಜೊತೆಗೆ ಇನ್ನೂ ಎರಡು ಹೆಸರಿಡದ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅದ್ವಿತಿ ಶೆಟ್ಟಿ, ಶೀಘ್ರದಲ್ಲಿಯೇ ಈ ಚಿತ್ರ ಅನೌನ್ಸ್ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ