
‘ರಾಮಸಿತಾರ ಅಚಲಚರೀತೆ…’ ಹೊರಬಂತು Adipurush ಮತ್ತೊಂದು ಹಾಡು
Team Udayavani, Jun 1, 2023, 11:04 AM IST

ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ “ಆದಿಪುರುಷ್’ ಸಿನಿಮಾ ಇದೇ ಜೂ. 16ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಇನ್ನು ಸದ್ಯ “ಆದಿಪುರುಷ್’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಸಿನಿಮಾದ ಎರಡನೇ ಗೀತೆಯನ್ನು ಬಿಡುಗಡೆ ಮಾಡಿದೆ.
ಕೆಲ ದಿನಗಳ ಹಿಂದಷ್ಟೇ “ಆದಿಪುರುಷ್’ ಸಿನಿಮಾದ ಮೊದಲನೇ ಗೀತೆ ಹೊರಬಂದು ಎಲ್ಲಾ ಕಡೆ ವೈರಲ್ ಆಗಿತ್ತು. ಈಗ “ರಾಮಸಿತಾರ ಅಚಲಚರೀತೆ, ಸುಂದರ ಕಾವ್ಯವೇ ಸುಂದರ ಗೀತೆ, ರಾಂ ಸೀತಾರಾಂ, ಸೀತಾರಾಂ ಜಯ ಜಯ ರಾಂ’ ಎಂಬ ಎರಡನೇ ಗೀತೆ ಬಿಡುಗಡೆಗೊಂಡಿದೆ. ಅಜಯ್ -ಅತುಲ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಗೀತೆಗೆ ಮನೋಜ್ ಮುಂತಶೀರ್ ಸಾಹಿತ್ಯವಿದೆ.
ಇನ್ನು ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಆದಿಪುರುಷ್’ ಸಿನಿಮಾವನ್ನು “ಟಿ-ಸೀರಿಸ್’ ಬ್ಯಾನರ್‌ನಲ್ಲಿ ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ವಾಲ್ಮೀಕಿ ರಾಮಾಯಣವನ್ನು ಆಧರಿಸಿ ನಿರ್ಮಾಣವಾಗಿರುವ “ಆದಿಪುರುಷ್’ ಸಿನಿಮಾದಲ್ಲಿ ನಟ ಪ್ರಭಾಷ್ ರಾಮನಾಗಿ, ಕೃತಿ ಸನೂನ್ ಸೀತೆಯಾಗಿ, ಸೈಫ್ ಅಲಿಖಾನ್ ರಾವಣನಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸನ್ನಿಸಿಂಗ್, ದೇವದತ್ತನಾಗೆ, ವತ್ಸಲ್ ಸೇತ್, ಸೋನಾಲ್ ಚೌಹಾಣ್ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಅಂದಹಾಗೆ, “ಆದಿಪುರುಷ್’ ಸಿನಿಮಾವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ 3ಡಿ ಮಾದರಿಯಲ್ಲಿ ತೆರೆಗೆ ಬರುತ್ತಿದ್ದು, ವಿಶ್ವದಾದ್ಯಂತ ಸುಮಾರು 3 ಸಾವಿನ ಸ್ಕ್ರೀನ್‌ಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Egg ಹೊರೆ ಹೆತ್ತವರ ಹೆಗಲಿಗೆ? ಮೊಟ್ಟೆಗೆ ಅಧಿಕ ಬೇಡಿಕೆ, ಸಾಕಾಗದ ಅನುದಾನ

Paddy ಇಳುವರಿ ಕುಸಿತ? ತುಂಗಭದ್ರಾ,ಕಾವೇರಿ ತೀರದಲ್ಲಿ ನೀರಿಲ್ಲದೆ ಭತ್ತ ಬೆಳೆಗೆ ಸಂಕಷ್ಟ

Viral News; ಗುಜರಾತ್ ಕಡಲಿನಲ್ಲಿ ಕಾಣಿಸಿಕೊಂಡ ಸಿಂಹದ ಚಿತ್ರ: ಅಸಲಿಯತ್ತೇನು?

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ