
ಮತ್ತೆ ಅದಿತಿ ಪ್ರಭುದೇವ ಸಿನಿಜಾತ್ರೆ ಶುರು: ಫೆಬ್ರವರಿಯಲ್ಲಿ ಅಕೌಂಟ್ ಓಪನ್
Team Udayavani, Jan 23, 2023, 3:42 PM IST

ಕಳೆದ ವರ್ಷ ಬರೋಬ್ಬರಿ ಎಂಟು ಸಿನಿಮಾಗಳ ಮೂಲಕ ವರ್ಷಪೂರ್ತಿ ತೆರೆಮೇಲೆ ಕಾಣಿಸಿಕೊಂಡಿದ್ದ ನಾಯಕಿ ಅದಿತಿ ಪ್ರಭುದೇವ ಈಗ ಹೊಸ ವರ್ಷದಲ್ಲಿ ಮತ್ತೆ ದರ್ಶನ ನೀಡಲು ಸಿದ್ಧರಾಗಿದ್ದಾರೆ.
ಫೆಬ್ರವರಿಯಿಂದ ಅದಿತಿ ಸಿನಿ ಅಕೌಂಟ್ ಓಪನ್ ಆಗಲಿದೆ. ಫೆಬ್ರವರಿಯಲ್ಲಿ ಅದಿತಿ ನಟನೆಯ ಎರಡು ಸಿನಿಮಾಗಳು ತೆರೆಕಾಣುವುದು ಬಹುತೇಕ ಖಚಿತವಾಗಿದೆ. ಆದಿತ್ಯ ನಾಯಕರಾಗಿರುವ “5ಡಿ’ ಹಾಗೂ ಅಕ್ಷಿತ್ ನಟಿಸಿರುವ “ಖೆಯೊಸ್’ ಚಿತ್ರಗಳು ಫೆಬ್ರವರಿಯಲ್ಲಿ ಬಿಡುಗಡೆಯಾಗುತ್ತಿವೆ. “5ಡಿ’ ಫೆ.10ರಂದು ತೆರೆಕಂಡರೆ ಫೆ.17ರಂದು “ಖೆಯೊಸ್’ ರಿಲೀಸ್ ಆಗುತ್ತಿದೆ.
ಇನ್ನು, “ಖೆಯೊಸ್’ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ನಾಯಕರಾಗಿದ್ದಾರೆ. ಶಶಿಕುಮಾರ್ ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದು, ತಂದೆ-ಮಗ ಇಬ್ಬರೂ ಒಟ್ಟಿಗೆ ಅಭಿನಯಿಸಿರುವ ಮೊದಲ ಚಿತ್ರವಿದು. ಡಾ.ಜಿ.ವಿ.ಪ್ರಸಾದ್ “ಖೆಯೊಸ್’ ಚಿತ್ರದ ನಿರ್ದೇಶಕರು. ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದೊಂದು ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಕಥೆ. ಆ್ಯಕ್ಷನ್-ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಮರ್ಡರ್ ಮಿಸ್ಟರಿ ಜಾನರ್ ಎನ್ನಬಹುದು. ಮನಸ್ಸಿನಲ್ಲಾಗುವ ಗೊಂದಲ, ಸಂಕಟ, ಅಸ್ತವ್ಯಸ್ತ ಇವುಗಳಿಗೆ “ಖೆಯೊಸ್’ ಎನ್ನುತ್ತಾರೆ. ಫೆಬ್ರವರಿ 17 ಚಿತ್ರ ತೆರೆಗೆ ಬರಲಿದೆ ಎನ್ನುವುದು ತಂಡದ ಮಾತು.
ಇದನ್ನೂ ಓದಿ:ವಿಧಾನಸೌಧದ ಮುಂಭಾಗದಲ್ಲಿ ಸುಭಾಸ್ ಚಂದ್ರ ಬೋಸ್ ಪ್ರತಿಮೆ ಮರುಸ್ಥಾಪನೆ: ಸಿಎಂ ಬೊಮ್ಮಾಯಿ
ವಿ.ನಾಗೇಂದ್ರ ಪ್ರಸಾದ್ ಹಾಗೂ ಜಿ.ವಿ.ಪ್ರಸಾದ್ ಬರೆದಿರುವ ಮೂರು ಹಾಡುಗಳು ಚಿತ್ರದಲ್ಲಿದ್ದು, ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ದಿಲೀಪ್ ಕುಮಾರ್, ಸಂದೀಪ್ ವಳ್ಳೂರಿ ಛಾಯಾಗ್ರಹಣ ಹಾಗೂ ಮಧು ತುಂಬಿಕೆರೆ, ವೆಂಕಿ ಯುಡಿವಿ ಸಂಕಲನವಿರುವ “ಖೆಯೊಸ್’ ಚಿತ್ರಕ್ಕೆ ಚೇತನ್ ಡಿಸೋಜ , ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
