ಅರ್ಜುನ್ ಸರ್ಜಾ ಮಗಳು ಐಶ್ವರ್ಯಾಗೂ ಕೋವಿಡ್-19 ಸೋಂಕು ದೃಢ
Team Udayavani, Jul 20, 2020, 3:59 PM IST
ಬೆಂಗಳೂರು: ನಟ ಧ್ರುವ ಸರ್ಜಾ ದಂಪತಿಗಳಿಗೆ ಕೋವಿಡ್-19 ಸೋಂಕು ದೃಢವಾದ ನಂತರ ಇದೀಗ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ಗೂ ಕೋವಿಡ್ -19 ಸೋಂಕು ತಾಗಿರುವುದು ದೃಢವಾಗಿದೆ.
ಐಶ್ವರ್ಯಾ ತನಗೆ ಕೋವಿಡ್ 19 ಸೋಂಕು ತಾಗಿರುವ ಬಗ್ಗೆ ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ನನಗೆ ಇತ್ತೀಚೆಗೆ ಕೋವಿಡ್ ಸೋಂಕು ತಾಗಿದೆ. ಮನೆಯಲ್ಲಿಯೇ ಉಳಿದುಕೊಂಡು ಚಿಕಿತ್ಸೆ ಮುಂದುವರಿಸಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ. ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಧ್ರುವಾ ಸರ್ಜಾ ಮತ್ತು ಪತ್ನಿ ಪ್ರೇರಣಾ ಅವರಿಗೂ ಕೂಡಾ ಕೋವಿಡ್ -19 ಸೋಂಕು ದೃಢವಾಗಿತ್ತು.